ದುಬೈಯಲ್ಲಿ  ಡಿಂಡಿಮ  ಬಾರಿಸುತ್ತಿರುವ ಕನ್ನಡಿಗರು

Team Udayavani, Jul 1, 2021, 11:20 PM IST

desiswara

ಕನ್ನಡದ ಭಾಷಾ ಬಾಂಧವ್ಯ, ಸಂಸ್ಕೃತಿ ಪ್ರೀತಿ ಸಪ್ತ ಸಾಗರ ದಾಟಿದರೂ ಸುಪ್ತವಾಗಿ ಉಳಿದಿರುತ್ತದೆ ಎಂಬುದಕ್ಕೆ ಕೊಲ್ಲಿ ರಾಷ್ಟ್ರದಲ್ಲಿ ಕರುನಾಡ ಕಂಪನ್ನು ಸೂಸುತ್ತಿರುವ ಕನ್ನಡಿಗರು ಹಾಗೂ ಕನ್ನಡ ಸಂಘಟನೆಗಳು ಸಾಕ್ಷಿಯಾಗಿವೆ. ಈ ಹಾದಿಯಲ್ಲಿ ಕಳೆದ ಹನ್ನೆರಡು ವರ್ಷಗಳಿಗಿಂತಲೂ ಅಧಿಕ ಕಾಲ ಕನ್ನಡಪರ ಚಟುವಟಿಕೆಗಳ ಮೂಲಕ ದುಬೈಯಲ್ಲಿ ಸಕ್ರಿಯವಾಗಿರುವ ಸಂಘನೆಯೇ ಕನ್ನಡಿಗರು ದುಬೈ.

ಕರುನಾಡು ಸ್ವರ್ಗದ ಸೀಮೆ-ಕಾವೇರಿ ಹುಟ್ಟಿನ ನಾಡಿನ ಮಹಿಮೆಯನ್ನು ದೂರದ ಮರಳುಗಾಡಿನಲ್ಲೂ ಪಸರಿಸುತ್ತಾ ನಾಡಿನ ಐಕ್ಯತೆಗೆ ಸಂಸ್ಕೃತಿಯ ಸೌಹಾರ್ದತೆಗಾಗಿ ಸಮಾನ ಮನಸ್ಕ ಪದಾಧಿಕಾರಿಗಳ ಒಗ್ಗೂಡುವಿಕೆಯಿಂದ 2009ರಲ್ಲಿ ಕನ್ನಡಿಗರು ದುಬೈ ಸಂಘಟನೆ ಅಸ್ಥಿತ್ವಕ್ಕೆ ಬಂತು.

ಪ್ರಮುಖವಾಗಿ ಅನಿವಾಸಿ ಕನ್ನಡಿಗರಾದ ವೈದ್ಯರು, ಉದ್ಯಮಿಗಳು, ಸಮಾಜ ಸೇವಕರು, ಸಾಹಿತ್ಯ ಸಂವಾಹಕರು, ಸಂಗೀತ ಆರಾಧಕರು, ಸಾಂಸ್ಕೃತಿಕ ಪ್ರೇಮಿಗಳು, ಗೃಹಿಣಿಯರು ಹೀಗೆ ಬೇರೆ ಬೇರೆ  ರಂಗದವರೆಲ್ಲ ಒಂದುಗೂಡಿ ಕನ್ನಡಿಗರು ದುಬೈ ಸಂಘಟನೆಯ ಮೂಲಕ ವಿವಿಧ ಕಾರ್ಯ ಚಟುವಟಿಕೆಯನ್ನು ನಡೆಸುತ್ತಾ ಬರುತ್ತಿ¨ªಾರೆ.

ವಾರ್ಷಿಕ ಚಟುವಟಿಕೆಗಳು

ಕನ್ನಡ ಸಾಹಿತ್ಯ- ಸಂಗೀತ-  ಸಾಂಸ್ಕೃತಿಕ ವಲಯವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕನ್ನಡಿಗರು ದುಬೈ ಸಂಘಟನೆಯು ಹಲವು ನಿರ್ದಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದೆ. ಸಂಘಟನೆಯ ಆರಂಭದಿಂದಲೇ ಭಾರತೀಯ ಹಬ್ಬ ಹರಿದಿನಗಳಾದ ಸಂಕ್ರಾಂತಿ, ಯುಗಾದಿ ಮೊದಲಾದ ಪ್ರತಿಯೊಂದು ಹಬ್ಬಗಳನ್ನು ಆಚರಿಸಿಕೊಂಡು ಬರುತ್ತಿದೆ. ಹೆಚ್ಚಿನ ಎಲ್ಲ ಕಾರ್ಯಕ್ರಮಕ್ಕೂ ಕನ್ನಡ ನಾಡಿನ ವಿವಿಧ ರಂಗದ ಸಾಧಕರನ್ನು ಆಹ್ವಾನಿಸುವ ಹಾಗೂ ಸತ್ಕರಿಸುವ ಈ ಸಂಘಟನೆಯ ಧ್ಯೇಯೋದ್ದೇಶಗಳು ಕನ್ನಡ ನಾಡಿಗೆ ಸದ್ದಿಲ್ಲದೇ ಕೊಡುಗೆ ನೀಡಿದಂತಾಗಿದೆ. ಮುಖ್ಯವಾಗಿ ಕನ್ನಡ ಪಾಠ ಶಾಲೆಯನ್ನು ನಡೆಸುವ ಮೂಲಕ ದುಬೈಯ ಕರಮಾದಲ್ಲಿ ಕನ್ನಡ ಗ್ರಂಥಾಲಯದ ಜತೆಗೆ ಕನ್ನಡ ಮಕ್ಕಳಿಗೆ ಅನುಗುಣವಾಗಿ ನಡೆಸಿಕೊಂಡಿದ್ದದ್ದು ಮಾದರಿಯಾಗಿದೆ.

ಕರುನಾಡಿನ ಕಲಾವಿದರು ಅಥವಾ ಆಯ್ದ ಅನಿವಾಸಿ ಕಲಾವಿದರಿಂದ ಸಂಗೀತ ಸೌರಭ ಎಂಬ  ನೃತ್ಯ- ಸಂಗೀತ  ಕಾರ್ಯಕ್ರಮ ವರ್ಷಂಪ್ರತಿ ನಡೆಸಲಾಗುತ್ತಿದೆ. ನವೆಂಬರ್‌ ಮಾಸದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಯ ಜತೆಗೆ ಕರ್ನಾಟಕದ ಹೆಮ್ಮೆಯ ಸಾಧಕರನ್ನು ವಿಶೇಷವಾಗಿ ಆಹ್ವಾನಿಸಿ ಕನ್ನಡ ರತ್ನ ಪ್ರಶಸ್ತಿ ಪ್ರದಾನ ಹಾಗೂ ವಿವಿಧ ವಿನೋದಾವಳಿಗಳನ್ನು ಏರ್ಪಡಿಸಲಾಗುತ್ತದೆ.

ಇದಲ್ಲದೆ ಕನ್ನಡ ನಾಡಿನಲ್ಲಿ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕವಾಗಿ ಅಹರ್ನಿಶಿ ಸೇವೆಗೈ ಯುತ್ತಿರುವವರನ್ನು ಗುರುತಿಸಿ ಸಂಘಟನೆಯ ಪದಾಧಿಕಾರಿಗಳು ಸ್ವತಃ ಸಾಧಕರ ಬಳಿಗೆ ತೆರಳಿ ಹುಟ್ಟೂರ ಸಮ್ಮಾನ ನಡೆಸುತ್ತಾರೆ. ರಮ್ಜಾನ್‌ ಮಾಸದಲ್ಲಿ ಸಹಬಾಳ್ವೆ  ಸೌಹಾರ್ದತೆಯ ದ್ಯೋತಕವಾಗಿ ಇಫ್ತಾರ್‌ ಕೂಟ, ರಕ್ತದಾನ ಶಿಬಿರ, ಮನೋರಂಜನಾ ಪ್ರವಾಸ, ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಸಹಾಯ, ಕೋವಿಡ್‌ 19 ಲಾಕ್‌ ಡೌನ್‌ ಕಾಲಘಟ್ಟದಲ್ಲಿ ನೆರವು, ವರ್ಷಂಪ್ರತಿ ಬೇಸಗೆ ಸಂದರ್ಭದಲ್ಲಿ ಫ‌ಯರ್‌ ಕ್ಯಾಂಪ್‌ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಇಲ್ಲಿನ ಕನ್ನಡಿಗರಲ್ಲಿ ಸದಾ ಏಕತೆ ಮೂಡಿಸುತ್ತಿದೆ.

ಸಾರಥಿಗಳು

2009ರಲ್ಲಿ ಅರುಣ್‌ ಮುತ್ತುಗಡೂರ್‌, 2010ರಲ್ಲಿ ಮೂಲಿಮನಿ, 2011ರಲ್ಲಿ ಬಸವರಾಜ್‌ ಸಾಲಿಮಠ, 2012, 13, 15, 18ರಲ್ಲಿ ಸದನ್‌ ದಾಸ್‌, 2014ರಲ್ಲಿ ಮಲ್ಲಿಕಾರ್ಜುನ ಗೌಡ, 2016, 20, 21ರಲ್ಲಿ ಉಮಾ ವಿದ್ಯಾಧರ್‌, 2017ರಲ್ಲಿ ವೀರೇಂದ್ರ ಬಾಬು, 2019ರಲ್ಲಿ  ಮಲ್ಲಿಕಾರ್ಜುನ್‌ ಗೌಡ ಅಧ್ಯಕ್ಷ ಪದವಿಯನ್ನು ಅಲಂಕರಿಸಿಕೊಂಡು ಹಲವು ಯಶಸ್ವಿ ಕಾರ್ಯಗಳ ನೇತೃತ್ವ ವಹಿಸಿದ್ದರು.

ಪ್ರಸ್ತುತ ಸಾಲಿನ ಪದಾಧಿಕಾರಿಗಳು

ಉಮಾ ವಿದ್ಯಾಧರ್‌ (ಅಧ್ಯಕ್ಷರು), ಮಲ್ಲಿಕಾರ್ಜುನ  ಗೌಡ, ಸದನ್‌ ದಾಸ್‌, ವೀರೇಂದ್ರ ಬಾಬು (ಮಾಜಿ ಅಧ್ಯಕ್ಷರು), ಅರುಣ್‌ ಕುಮಾರ್‌, ವಿದ್ಯಾಧರ್‌, ದೀಪಕ್‌ ಸೋಮಶೇಖರ್‌, ವಿನೀತ್‌ ರಾಜ್‌, ವೆಂಕಟರಮಣ ಕಾಮತ್‌, ಶ್ರೀನಿವಾಸ್‌ ಅರಸು (ಸದಸ್ಯರು).

ಕನ್ನಡ ರತ್ನ ಪ್ರಶಸ್ತಿ ಪುರಸ್ಕೃತರು

ಕನ್ನಡಿಗರು ದುಬೈ ವತಿಯಿಂದ ವರ್ಷಂಪ್ರತಿ ಕನ್ನಡ ನಾಡು ನುಡಿಯ ಹಬ್ಬವಾದ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದ್ದು, ಕನ್ನಡ ನಾಡಿನ ಗರಿಷ್ಠ ಸಾಧನೆಗೈದ ವರ್ಷದ ವ್ಯಕ್ತಿಯನ್ನು ಆಹ್ವಾನಿಸಿ ಕನ್ನಡ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಖ್ಯಾತ ರಂಗನಟ ಮಾಸ್ಟರ್‌ ಹಿರಣಯ್ಯ, ಚಲನಚಿತ್ರ ನಟರಾದ ದ್ವಾರಕೀಶ್‌, ರವಿಚಂದ್ರನ್‌, ಸಾಹಿತಿ ನಾಡೋಜ ಡಾ| ಕೆ.ಎಸ್‌. ನಿಸಾರ್‌ ಅಹಮ್ಮದ್‌, ಆಳ್ವಾಸ್‌ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಡಾ| ಮೋಹನ ಆಳ್ವ ಮೂಡಬಿದಿರೆ, ಇನ್ಫೋಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಡಾ| ಸುಧಾಮೂರ್ತಿ, ಕಿರುತೆರೆ ನಟ ಶ್ರೀನಾಥ್‌ ವಶಿಷ್ಠ ಮೊದಲಾದವರು ಕನ್ನಡಿಗರು ದುಬೈಯ ಕನ್ನಡ ರತ್ನ ಪುರಸ್ಕಾರವನ್ನು ಪಡೆದ ಗಣ್ಯರಲ್ಲಿ ಪ್ರಮುಖರಾಗಿ¨ªಾರೆ.

ಬೆಂಗಳೂರು ಗಾಂಧೀ ಪ್ರತಿಷ್ಠಾನದ ಅಧ್ಯಕ್ಷ ಶ್ರೀನಿವಾಸ, ಸಿದ್ಧಗಂಗಾ ಮಠದ  ಶ್ರೀ ಶಿವಕುಮಾರ ಸ್ವಾಮೀಜಿ, ಹಿರಿಯ ಸಾಹಿತಿ ಚನ್ನವೀರ ಕಣವಿ, ಗುರುರಾಜ್‌ ಹೊಸ್ಕೋಟೆ ಮೊದಲಾದವರಿಗೆ ಹುಟ್ಟೂರ ಸಮ್ಮಾನ ನೀಡಿ ಗೌರವಿಸಲಾಗಿದೆ.

ಸಂಗೀತ ಸೌರಭ ಪುರಸ್ಕಾರ

ಸಂಗೀತ ಲೋಕದಲ್ಲಿ ಖ್ಯಾತನಾಮರು, ಕನ್ನಡ ನಾಡಿನ ಸಂಗೀತ ಸಾಧಕರಾದ ಪಂಡಿತ್‌ ಕದ್ರಿ ಗೋಪಾಲ್‌ ನಾಥ್‌, ವಿದುಷಿ ಸಂಗೀತ ಕಟ್ಟಿ,ಅರ್ಜುನ್‌ ಜನ್ಯ, ಎಂ.ಡಿ. ಪಲ್ಲವಿ, ಪ್ರವೀಣ್‌ ಗೋಡಿRಂಡಿ, ಚಿನ್ಮಯ ಅತ್ತೈಸ್‌, ರಮೇಶ್‌ ಮೊದಲಾದವರಿಗೆ ಸಂಗೀತ ಸೌರಭ ಪುರಸ್ಕಾರ ನೀಡಿ ಗೌರವಿಸಲಾಗಿದೆ.

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Ram Ayodhya

Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.