ಹರ್ಷಿ ಪುಟ್ಟ ಪಟ್ಟಣದೊಳಗಿನ ಸುಂದರ ಜಗತ್ತು

Team Udayavani, Jul 1, 2021, 11:25 PM IST

desiswara

ಚಾಕಲೇಟ್‌ ಯಾರಿಗಿಷ್ಟವಿಲ್ಲ. ಮಕ್ಕಳು ಮಾತ್ರವಲ್ಲ ದೊಡ್ಡವರೂ ಕೂಡ ಸಿಕ್ಕಿದರೆ ಚಾಕಲೇಟ್‌ ಕ್ಯಾಂಡಿಯನ್ನು ಚಪ್ಪರಿಸುತ್ತಾರೆ. ಚಾಕಲೇಟ್‌ ಎನ್ನುವ ಪದವೇ ನಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡುತ್ತದೆ. ಚಾಕಲೇಟ್‌ ಸವಿ ನಾಲಗೆಯನ್ನು ತಾಕಿ ಹೊಟ್ಟೆಯೊಳಗೆ ಇಳಿಯುವ ಮೊದಲು ಅದೆಷ್ಟೋ ಅತ್ಯದ್ಭುತ ಯೋಚನೆಗಳನ್ನು ನಮ್ಮೊಳಗೆ ಹುಟ್ಟು ಹಾಕಿರುತ್ತವೆ. ಇಂತಹ ಚಾಕಲೇಟ್‌ ಮೆಲ್ಲಲು ಎಷ್ಟು ಚೆನ್ನಾಗಿರುತ್ತದೋ, ಅದನ್ನು ತಯಾರಿಸುವ ವಿಧಾನವೂ ಕೂಡ ನೋಡಲು ಅಷ್ಟೇ ಸೊಗಸಾಗಿರುತ್ತದೆ.

ಬೇಸಗೆ ರಜೆಯಲ್ಲಿ ಮಕ್ಕಳೊಂದಿಗೆ ಎಲ್ಲದಾರೂ ತಿರುಗಾಡಿ ಬರುವುದು ಅಭ್ಯಾಸ. ಹೀಗಾಗಿ ಈ ಬಾರಿ ಹರ್ಷಿ ಚಾಕಲೇಟ್‌ ಫ್ಯಾಕ್ಟರಿಗೆ ಭೇಟಿ ನೀಡುವ ನಿರ್ಣಯವಾಗಿತ್ತು. ಮನೆಯಿಂದ ಸುಮಾರು 1 ಗಂಟೆಯ ಪ್ರಯಾಣ. ಕಾರಿನಲ್ಲಿ ಕುಳಿತು ಮಾತನಾಡುತ್ತ, ರಸ್ತೆಯ ಇಕ್ಕೆಲಗಳ ದೃಶ್ಯವನ್ನು ಸವಿಯುತ್ತ ಹೊರಟ ನಮಗೆ ಒಂದು ಗಂಟೆಯ ದಾರಿ ಸವೆದದ್ದೇ ತಿಳಿಯಲಿಲ್ಲ.

ಕ್ರಿ.ಶ. 1873ರಲ್ಲಿ ಮಿಲ್ಟನ್‌ ಸೂಪರ್‌ ಹರ್ಷಿ ಎಂಬವನು ಫಿಲಿಡೆಲ್ಫಿಯಾದಲ್ಲಿ ಒಂದು ಅಂಗಡಿಯನ್ನು ತೆರೆಯುತ್ತಾನೆ. 6 ವರ್ಷಗಳ ಬಳಿಕ ನ್ಯೂಯಾರ್ಕ್‌ನಲ್ಲಿ ಇನ್ನೊಂದನ್ನು ಪ್ರಾರಂಭಿಸುತ್ತಾನೆ. ಅದೇ ಮುಂದೆ ಲಾನ್ಸೆಸ್ಟರ್‌ ಕ್ಯಾರಾಮೆಲ್‌ ಎಂಬ ಕಂಪೆನಿಯಾಗಿ ಪ್ರಸಿದ್ಧಿ ಪಡೆಯಿತು. ಮತ್ತೂ ಬೆಳೆದ ಈ ಕಂಪೆನಿ ಹರ್ಷಿಸ್‌ ಎಂಬ ಹೆಸರಿನಿಂದ ಜಗತøಸಿದ್ಧವಾಯಿತು. ಪೆನ್ಸಿಲ್ವೇನಿಯಾ ರಾಜ್ಯದಲ್ಲಿ ಹರ್ಷಿ ಎಂಬ ಹೆಸರಿನ ಪಟ್ಟಣವನ್ನೇ ನಿರ್ಮಿಸಿ ಅಲ್ಲಿ ಈ ಬೃಹತ್‌ ಕಂಪನಿಯ ಪ್ರಧಾನ ಕಚೇರಿಯನ್ನೂ ಮಾಡಲಾಯಿತು.

ಫ್ಯಾಕ್ಟರಿ ಹತ್ತಿರವಾಗುತ್ತಿದ್ದಂತೆ ಹಲವಾರು ಗೋಶಾಲೆಗಳು ಕಾಣಿಸುತ್ತವೆ. ಚಾಕಲೇಟ್‌ ತಯಾರಿಗೆ ಬೇಕಾಗಿರುವ ಹಾಲು ಬರುವುದು ಇಲ್ಲಿಂದಲೇ. ಒಂದೆರಡು ಮೈಲು ದೂರದಿಂದಲೇ ರಸ್ತೆಯ ಎರಡೂ ಕಡೆಗಳಲ್ಲಿ ಪಶು ಸಾಕಣೆಯ ಕೇಂದ್ರಗಳಿದ್ದು ಎಷ್ಟೋ ಜನರಿಗೆ ಉದ್ಯೋಗ ಕಲ್ಪಿಸಿವೆ. ಇದನ್ನೆಲ್ಲ ನೋಡುತ್ತ ಮುಂದೆ ಸಾಗುತ್ತಿದ್ದಾಗ ಫ್ಯಾಕ್ಟರಿ ಕಂಡಿತು. ಆರೇಳು ಸಾವಿರ ಕಾರುಗಳು ಪಾರ್ಕಿಂಗ್‌ ಸ್ಥಳದಲ್ಲಿ ನಿಂತಿದ್ದವು. ನಮ್ಮ ಕಾರು ನಿಲ್ಲಿಸಬೇಕಾದರೆ ಜಾಗ ಹುಡುಕುತ್ತಿದ್ದಂತೆ ಯಾರೋ ಒಬ್ಬರು ಹೊರಡುತ್ತಿದ್ದುದನ್ನು ನೋಡಿ ಅಲ್ಲಿ ನಿಲ್ಲಿಸಿದೆವು.

ಪ್ರಧಾನ ಗೇಟ್‌ನಲ್ಲಿ ಸೆಕ್ಯೂರಿಟಿ ಅನುಮತಿ ಪಡೆದು ಫ್ಯಾಕ್ಟರಿ ಕಡೆಗೆ ಐದು ನಿಮಿಷ ನಡೆದ ಮೇಲೆ ಒಳ ಪ್ರವೇಶದ ದ್ವಾರ. ಸಾವಿರಾರು ಮಂದಿ ನಮ್ಮಂತೆಯೇ  ಸಾಲಾಗಿ ನಿಂತಿದ್ದರು. ಮೊದಲು ಫ್ಯಾಕ್ಟರಿಯ ಕಾರ್ಯವಿಧಾನ ನೋಡುವುದು.

ಒಳಗೆ ತಲುಪುತ್ತಿದ್ದಂತೆ ಅಲ್ಲಿ ನಮ್ಮನ್ನು ಕೊಂಡೊಯ್ಯಲು ಆಟೋ ರಿûಾದಂತಹ ವಾಹನ ಸಿದ್ಧವಾಗಿತ್ತು. ಅದರಲ್ಲಿ ಕುಳಿತುಕೊಂಡು ಫ್ಯಾಕ್ಟರಿಯ ಕಾರ್ಯ ವೈಖರಿಯನ್ನು ನೋಡುವ ಅವಕಾಶ ಸಿಕ್ಕಿತು. ಗೈಡ್‌ ಒಬ್ಬಳು ವಿವರಣೆ ಕೊಡುವ ವಿಡಿಯೋ ವಾಹನದÇÉೇ ಇದೆ. ವಿವರಣೆ ಕೇಳುತ್ತ ಚಾಕಲೇಟ್‌ ತಯಾರಿಯನ್ನು ನೋಡುತ್ತಾ ಮುಂದೆ ಹೋಗುತ್ತಿದ್ದಂತೆ ಬೇರೆ ಬೇರೆ ರುಚಿ, ಬಣ್ಣ, ಗಾತ್ರಕ್ಕೆ ಬದಲಾಯಿಸಿ ಪ್ಯಾಕೆಟ್‌ಗಳಾಗಿ ಹೊರಗೆ ಬರುವುದನ್ನು ನೋಡಬಹುದು. ಇವುಗಳನ್ನೆಲ್ಲ ನೋಡಿ ವಾಹನದಿಂದ ಕೆಳಗೆ ಇಳಿಯುವಾಗ ಇನ್ನೊಂದು ಸಲ ನೋಡಿದರೆ ಹೇಗೆ ಎನ್ನುವ ಆಸೆ ಮನದಲ್ಲಿ ಹುಟ್ಟಿಕೊಳ್ಳದೇ ಇರಲಾರದು.

ಚಾಕಲೇಟ್‌ ಫ್ಯಾಕ್ಟರಿಯ ಈ ದರ್ಶನ ಸಂಪೂರ್ಣ ಉಚಿತ! ಪ್ರಯಾಣ ಮುಗಿಸಿ ವಾಹನದಿಂದ ಕೆಳಗೆ ಇಳಿಯುತ್ತಿದ್ದಂತೆ ತಿನ್ನಲು ಒಂದು ಚಾಕಲೇಟು ಸಿಗುವುದು.

ಫ್ಯಾಕ್ಟರಿಯನ್ನು  ನೋಡಿ  ಹೊರಗೆ ಹೊರಡುತ್ತಿದ್ದಂತೆ ಅಲ್ಲಿ ಚಾಕಲೇಟ…, ಕ್ಯಾಂಡಿ ಮೊದಲಾದವುಗಳನ್ನು ಮಾರುವ ಅಂಗಡಿಗಳು ಸಾಲಾಗಿ ಕಾಣ ಸಿಗುತ್ತವೆ. ಈ ತಿನಿಸುಗಳ ಬೆಲೆ ಬಹಳ ದುಬಾರಿ. ಇಲ್ಲಿಯವರೆಗೆ ಕೊಟ್ಟ ಉಚಿತಗಳನ್ನೆಲ್ಲ ಹಿಂಪಡೆಯುವಂತೆ ಇಮ್ಮಡಿ ಲಾಭಕ್ಕೆ ಮಾರುತ್ತಾರೆ. ಫ್ಯಾಕ್ಟರಿ ನೋಡಿದ್ದಕ್ಕೆ ಬಂದವರೆಲ್ಲ ಕೊಳ್ಳುತ್ತಾರೆ. ಅಲ್ಲದೆ ಇಲ್ಲಿಯ ಹಾಗೆ ಬೇರೆ ಬೇರೆ ರೀತಿಯ ಚಾಕಲೇಟ್‌, ಕ್ಯಾಂಡಿಗಳು ಒಂದೇ ಕಡೆ ಸಿಗುವುದು ಕಷ್ಟವಲ್ಲವೇ? ಇಲ್ಲಿ ತಿಂಡಿ, ತಿನಸು, ಊಟ ಕಾಫಿ ಎಲ್ಲ ವ್ಯವಸ್ಥೆಯೂ ಇದೆ. ಕಾರ್‌ ಪಾರ್ಕಿಂಗ್‌ ಏರಿಯಾ ತಲುಪಲು ಉಚಿತ ವಾಹನ ಸೌಲಭ್ಯವನ್ನೂ ಕಲ್ಪಿಸಿ¨ªಾರೆ.

ಹರ್ಷಿ ಪಟ್ಟಣದಲ್ಲಿ ಒಂದು ಥೀಮ್‌ ಪಾರ್ಕ್‌ ಕೂಡ ನಿರ್ಮಿತವಾಗಿದ್ದು, ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲರೂ ಇಷ್ಟ ಪಡುವಂತಹ ರೈvÕ…ಗಳಿವೆ. ಅಮೆರಿಕದಲ್ಲಿ ಈಗ ಮಕ್ಕಳಿಗೆ ಬೇಸಗೆ ರಜೆ. ಅದಕ್ಕೆ ದೂರದೂರಿಂದಲೂ ಮಕ್ಕಳನ್ನು ಕರೆದುಕೊಂಡು ಬರುವುದರಿಂದ ತುಂಬಾ ಜನ ಸೇರುತ್ತಾರೆ. ಇಲ್ಲಿ ರೈvÕ…ಗಳಲ್ಲಿ ಆನಂದಿಸುತ್ತಾರೆ. ಚಾಕಲೇಟ್‌ ಫ್ಯಾಕ್ಟರಿ ನೋಡಲು ಬರುವವರಿಗೆ ಉಳಿದುಕೊಳ್ಳಬೇಕಾದ ಎಲ್ಲ ಸೌಲಭ್ಯಗಳೂ ಇಲ್ಲಿವೆ.

ಚಾಕಲೇಟ್‌ ತಯಾರಿಸಲು ಪ್ರಾರಂಭಿಸಿದ ಫ್ಯಾಕ್ಟರಿಯನ್ನೇ ಒಂದು ಪ್ರೇಕ್ಷಣೀಯ ಸ್ಥಳವನ್ನಾಗಿ ಪರಿವರ್ತಿಸಿದ ಹರ್ಷಿ ಕಂಪೆನಿಯ ಪ್ರಯತ್ನ ಶ್ಲಾಘನೀಯ. ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸುವುದರ ಜತೆಗೆ ಒಂದು ಜಾಗದ ಆರ್ಥಿಕ ಅಭಿವೃದ್ಧಿಗೂ ಇದು ಕಾರಣವಾಗಿದೆ. ಅಂತೂ ಫ್ಯಾಕ್ಟರಿ ನೋಡಿದ ಅನುಭವವನ್ನು ಮೆಲುಕು ಹಾಕುತ್ತಾ ಮನೆಯ ಕಡೆಗೆ ಹೊರಟೆವು.

ಸುಬ್ಬಣ್ಣ ಭಟ್ಬಾಳಿಕೆ,   ಫಿಲಿಡೆಲ್ಫಿಯಾ

ಟಾಪ್ ನ್ಯೂಸ್

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Ram Ayodhya

Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.