Udayavni Special

ಸೌಂದರ್ಯ ಬರೀ ಕಣ್ಣಿನ ತುತ್ತಲ್ಲ..


Team Udayavani, Jun 10, 2021, 1:21 PM IST

desiswara

ಜೀವನದಲ್ಲಿ ಕೇವಲ ಧನಾತ್ಮಕ ವಿಚಾರದಿಂದ ಒಳ್ಳೆ ವಿಷಯ ಕಲಿಯವುದು ಇಲ್ಲವೇ ಸ್ಫೂರ್ತಿ ಪಡೆಯಬೇಕೆಂದಿಲ್ಲ. ಋಣಾತ್ಮಕ ಘಟನೆ, ವಿಚಾರ ಸಹ ನಮಗೆ ನೀತಿಯಾಗಿ ಬಿಡುತ್ತವೆ. ಮನಃಪಟಲದಲ್ಲಿ ಶಾಶ್ವತ ಪಾಠವಾಗಿ ಬೇರು ಬಿಡುತ್ತವೆ.

ಸೌಂದರ್ಯ ಎಂಬುದು ಬರೀ ಕಣ್ಣಿನ ತುತ್ತಲ್ಲ  ಕಣ್ಣಿಗೂ ಕಣ್ಣಾಗಿ ಒಳಗಿಹುದು ಎಂದು ಬೇಂದ್ರೆಯವರು ಹೇಳಿದ್ದಾರೆ. ಪ್ರತಿ ಮನುಷ್ಯನಲ್ಲಿ ಇದು ಅವ್ಯಕ್ತವಾಗಿ ನೆಲೆಸಿರುತ್ತದೆ. ಯಾವಾಗ ಬೇಕಾದರೂ ಜಾಗೃತಗೊಳ್ಳಬಹುದು.

ಪ್ರತಿದಿನ ಯುನಿವರ್ಸಿಟಿ ತಲುಪಿದಾಗ ಮೊದಲ ದರ್ಶನ ಅವರದ್ದೇ ಸೆಕ್ಯುರಿಟಿ ಗಾರ್ಡ್‌. ನಾವು “ಲೇಡಿ ಬಾಂಡ್‌’ ಎಂದೇ ಕರೆಯುವುದು. ಮಾಡರ್ನ್ ಡ್ರೆಸ್‌, ಗಾಢವಾದ ಲಿಪ್ಸ್‌ಸ್ಟಿಕ್‌, ವಾರಕ್ಕೆ ಎರಡರಿಂದ ಮೂರು ಬಣ್ಣದ  ನೇಲ್‌ಪಾಲಿಶ್‌ ಬದಲಾಯಿಸುತ್ತಾರೆ. ಚಂದದ ನಗು,  ಸಬಾಹ ಅಲ್‌ ಖೈರ ಎನ್ನುತ್ತ ಡಾಕ್ಟರ್‌, ಪ್ರೊಫೆಸರ್‌ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಒಳ್ಳೆಯ ಮನಸಿನ ಸುಂದರ ಮಹಿಳೆ. ಎಲ್ಲರಿಗೂ ಆತ್ಮೀಯರು.

ನಮ್ಮ ಕಾರ್ಯ ಕ್ಷೇತ್ರದ ಹೊರಗೆ ಶ್ರೇಣಿ ವ್ಯವಸ್ಥೆಯ ತಾರತಮ್ಯವಿಲ್ಲ, ಕೆಲಸದ ಸಮಯ ಬಿಟ್ಟು ಹೊರಬಂದಾಗ ಚಹಾ, ಕಾಫಿ ಒಟ್ಟಿಗೆ ಕುಳಿತು ಉಭಯ ಕುಶಲೋಪರಿ, ಹರಟೆಯಲ್ಲಿ ಎಲ್ಲರೂ ಸರಿಸಮಾನರು. ಇದೊಂದು ಮುಖ್ಯ ಕಾರಣ ಈ ದೇಶ ನನಗೆ ಇಷ್ಟವಾಗಲು.

ಕ್ಲಿನಿಕ್‌ನಲ್ಲಿ  ಬಿಟ್ಟ ಮೊಬೈಲ್ , ಲ್ಯಾಪ್‌ಟಾಪ್‌ ಇಲ್ಲವೇ ಕ್ಲಾಸ್‌ ರೂಮ್‌ನೊಳಗೆ ಬಿಟ್ಟ ನೋಟ್‌ಬುಕ್‌ ಅದೇನೇ ಇರಲಿ ವಸ್ತುಗಳನ್ನು ಅವರಿಗೆ ಸರಿಯಾಗಿ ತಂದೊಪ್ಪಿಸುವ, ಅದಿಲ್ಲವಾದರೆ lಟsಠಿ ಚnಛ fಟunಛ ಕೊಠಡಿಯಲ್ಲಿ ತಂದಿರಿಸುತ್ತಾರೆ. ಇವರ ಕಾರ್ಯಕ್ಷಮತೆ ನಮ್ಮೆಲ್ಲರ ಪ್ರಶಂಸಗೆ ಪಾತ್ರವಾಗಿದೆ.

ಅದೊಂದು ದಿನ ಎಂದಿನಂತೆ ಯುನಿವರ್ಸಿಟಿ ತಲುಪಿದಾಗ ಗೇಟಿನಲ್ಲಿ ಮುಖ ಮುಚ್ಚಿ ಕುಳಿತಿದ್ದರು. ಕೇಫ್ ಅಲ್‌ ಹಾಲ್ ? (ಹೇಗಿದ್ದೀರಿ) ಎಂದು ಕೇಳಿ ಹೊರಟೆ. ಮಾರನೇ ದಿನವೂ ಮುಖ ಮುಚ್ಚಿಕೊಂಡೇ ಕುಳಿತಿದ್ದರು. ಏನಾಯಿತು ಇವರಿಗೆ? ಮನದೊಳಗೆ ಪ್ರಶ್ನೆ ಮೂಡಿತು, ಕೇಳಲಿಲ್ಲ. ಮಾರನೇ ದಿನವೂ ಹೀಗೆ ….

ಮನಸು ಸುಮ್ಮನಿರಲಿಲ್ಲ. ಓಶು ಹಾದ? ಖೋಯಸ್‌?  ( ಏನಿದು, ಚೆನ್ನಾಗಿದ್ದೀರಾ?) ಎಂದಾಗ ಕುಲ್ಲು ಕುಲ್ಲು ಮುಶ್ಕಿಲಾ ಎಂದು ಉತ್ತರಿಸುತ್ತ ಮುಖದ ಕವರ್‌ ತೆಗೆದರು. ನನಗೆ ಮಾತೇ ಹೊರಡಲಿಲ್ಲ. ತುಟಿ ಊದಿಕೊಂಡಿತ್ತು, ಕಿನ್ನೆತ್ತರು ಕಟ್ಟಿತ್ತು, ಮೂಗೂ ಊದಿತ್ತು. ಮಾತನಾಡಲೂ ಕಷ್ಟ. ಐಸ್‌ ಕ್ಯೂಬ್‌ ಇಟ್ಟುಕೊಂಡು ಮೆಲ್ಲನೆ ಮಾತನಾಡಿದರು.

ನಾನು ಬೊಟಾಕ್ಸ್‌ ಚಿಕಿತ್ಸೆ ಮಾಡಿಸಿಕೊಂಡಿರುವೆ. ಅದು ತೊಂದರೆಯಾಗಿಬಿಟ್ಟಿತು. ಬಹಳ ನೋವಿದೆ ಎಂದರು. ಏನು ಹೇಳಲು ತೋಚಲಿಲ್ಲ, ಸಹಾಯ ಬೇಕಾದರೆ ತಿಳಿಸಿ ಎಂದು ಹೊರಬಂದೆ.

ಪೌಟಿ ಲಿಪ್ಸ್   ಇದು ಇಂದಿನ ಟ್ರೆಂಡ್‌. ತುಟಿಯ ಆಕಾರ ಬದಲಿಸಲು, ದಪ್ಪ ತುಟಿ ಬೇಕೆಂದರೆ, ಈ ಪೌಟಿ ಲಿಪ್ಸ್ ಟ್ರೆಂಡ್‌ಗೆ ಮೊರೆಹೋಗುತ್ತಾರೆ. ಇದನ್ನು ಪಡೆಯಲು ಎರಡು ಕ್ರಮವಿದೆ. ಒಂದು ಪ್ಲಾಸ್ಟಿಕ್‌ ಸರ್ಜರಿ ಇದು ದುಬಾರಿ. ಒಮ್ಮೆ ಮಾಡಿದರೆ ಮತ್ತೆ ಮೊದಲಿನ ರೂಪ ಮರಳದು. ಎರಡನೆಯದು ಬೊಟಾಕÕ… ಇಂಜೆಕ್ಷನ್‌. ಕಡಿಮೆ ವೆಚ್ಚದಲ್ಲಿ ಲಭ್ಯವಿದೆ. ಆದರೆ  ಇದು ತಾತ್ಕಾಲಿಕ. ಆರು ತಿಂಗಳ ಅವಧಿಯ ಅನಂತರ ಪುನಃ ಉಪಚಾರ ಪಡೆಯಬೇಕು.

ಸರಿಯಾದ ವೈದ್ಯಕೀಯ ವಿಧಾನದ ಜತೆಗೆ ಈ ಎರಡೂ ಕ್ರಮದಲ್ಲಿ ನೈಪುಣ್ಯದ ಅವಶ್ಯಕತೆಯಿದೆ. ಸರಿಯಾದ ಕ್ರಮ ಅನುಸರಿಸದಿದ್ದರೆ ಇದು ಮಾರಕ. ಅವರ ತುಟಿ ಅದೆಷ್ಟು ಊದಿಕೊಂಡಿತೆಂದರೆ ಚಹಾ, ಕಾಫಿ ಕುಡಿಯಲು ಆಗದೆ ತಂಪು ಪಾನೀಯ ಸ್ಟ್ರಾ ಉಪಯೋಗಿಸಿ ಕುಡಿಯುತ್ತಿದ್ದರು. ಸಾಂತ್ವನದ ಜತೆಗೆ ಕೆಲವು ವೈದ್ಯರು ಅವರಿಗೆ ಉಪಚಾರ ಪ್ರಾರಂಭಿಸಿದರು.

ಈ ಘಟನೆ ನಮ್ಮ ಯುನಿವರ್ಸಿಟಿ ಕ್ಯಾಂಪಸ್‌ ಒಳಗೆ ಕಾಳಿYಚ್ಚಿನಂತೆ ಹರಡಿಕೊಂಡಿತು. ನಿಧಾನ ವಾಗಿ ಚೇತರಿಸಿಕೊಂಡರು. ಮತ್ತೆ ಅವರ ಮುಖದಲ್ಲಿ ನಗು ಅರಳಿತು. 15 ದಿನಗಳ ಅನಂತರ ಗೊತ್ತಾದ ಸತ್ಯ ಅವರು ತಾವೇ ಆಟಠಿಟx ಜಿnjಛಿcಠಿಜಿಟn ಮಾಡಿಕೊಂಡಿದ್ದರು.

ಇವರಿಗೆ ವೈದ್ಯಕೀಯ ಪದ್ಧತಿ ಗೊತ್ತಿಲ್ಲ. ನಿರ್ದಿಷ್ಟ  ಬಿಂದುಗಳಲ್ಲಿ ಇಂಜೆಕ್ಷನ್‌ ಕೊಡದಿದ್ದರೆ ಅಡ್ಡ ಪರಿಣಾಮ ಖಚಿತ. ಇವರಿಗೂ ಅದೇ ಆಗಿದ್ದು. ಇವರಿಗೆ ಇದು ಬೇಕಿತ್ತಾ?  ಎಂದು ಮನಸಿನಲ್ಲೇ ಅಂದುಕೊಂಡು ಸುಮ್ಮನಾದೆ.

ಸೌಂದರ್ಯ ಪ್ರಜ್ಞೆ ಇರುವುದು ತಪ್ಪಲ್ಲ ಆದರೆ ಸೌಂದರ್ಯ ವರ್ಧಕ, ಸಾಧನ ನಮ್ಮ ದೇಹ, ಆರೋಗ್ಯಕ್ಕೆ ಮಾರಕವಾಗಬಾರದು. ಸರಿಯಾದ ಸಲಹೆ, ಉಪಚಾರ ಈ  ಕೃತಕ ಅಡವಳಿಗೆ ಹಾನಿಕಾರವಲ್ಲದ  ರೀತಿಯಲ್ಲಿ  ಅನ್ವಯ ಆಗಬೇಕು. ಇದೆಲ್ಲದರ ಒಳಿತು ಕೆಡಕುಗಳನ್ನೂ ನಾವು ಅರಿತಿರಬೇಕು. ಪ್ರಕೃತಿಯ ನಿಯಮದಂತೆ ಮಹಿಳೆಯಾಗಲಿ, ಪುರುಷರಾಗಲಿ ಎಲ್ಲರೂ ಸೌಂದರ್ಯದೆಡೆಗೆ ಆಕರ್ಷಿತರೇ.

2019ರಲ್ಲಿ ಮೂರು ವಾರ ನಾನು ಟರ್ಕಿಯ ರಾಜಧಾನಿ ಇಸ್ತಾಂಬುಲದಲ್ಲಿ ನೆಲೆಸಿದ್ದೆ. ನಗರ ಸುತ್ತುವಾಗ ಪ್ರಾರಂಭದಲ್ಲಿ ಮೂಗು, ತುಟಿಗೆ ಬ್ಯಾಂಡೇಜ್‌ ಮಾಡಿಕೊಂಡ ಯುವಕ ಯುವತಿಯರ ದರ್ಶನವಾಗಿತ್ತು. ಏನೋ ಗಾಯ ಮಾಡಿಕೊಂಡಿರಬಹುದೆಂದು ಅಂದುಕೊಂಡೆ. ಆದರೆ ಮತೆೆ¤ ಅರಿವಾಗಿದ್ದು ಟರ್ಕಿ ಪ್ಲಾಸ್ಟಿಕ್‌ ಸರ್ಜರಿಗೆ ಪ್ರಸಿದ್ಧವಾಗಿದೆ ಎಂದು. ಯುರೋಪ್‌ದೇಶದಲ್ಲಿ ಇದು ಬಹಳ ವೆಚ್ಚದ ವೈದ್ಯಕೀಯ ಉಪಚಾರ. ಹೀಗಾಗಿ ಯುರೋಪ್‌ನಿಂದ  ಮತ್ತು ಅರೆಬಿಕ್‌ ದೇಶಗಳಿಂದ ಜನರು ಟರ್ಕಿಗೆ ಬರುತ್ತಾರೆ. ಇಲ್ಲಿ 7- 15 ದಿನಗಳ ಪ್ಯಾಕೇಜ್‌ ಇರುತ್ತದೆ. ಊಟ ತಿಂಡಿ, ನಿವಾಸದ ಜತೆಗೆ ಸರ್ಜರಿ. ಪ್ರವಾಸಿ ತಾಣ ಸುತ್ತಾಡಿ ತಮ್ಮ ದೇಶಕ್ಕೆ ಮರಳುತ್ತಾರೆ. ಬಿಟ್ಟನೆಂದರೂ ಬಿಡದೀ ಮಾಯೆ ಎನ್ನುವಂತೆ  ಕೃತಕ ಸೌಂದರ್ಯ ವರ್ಧಕಗಳಿಗೆ ಮನುಷ್ಯ ಅರಿವಿಲ್ಲದೇ ಶರಣಾಗುತ್ತಾನೆ.

ಸೆಕ್ಯುರಿಟಿ ಮಹಿಳೆಯ ಈ ಘಟನೆ ಅನಂತರ ಯುನಿವರ್ಸಿಟಿ ವಿದ್ಯಾರ್ಥಿಗಳಲ್ಲಿಯೂ ಕ್ರೇಜ್‌ ಕಡಿಮೆಯಾಗಿದೆ. ತಮ್ಮ ನೈಸರ್ಗಿಕ ಸೌಂದರ್ಯಕ್ಕೆ ತೊಂದರೆ ಆಗಬಹುದು ಎನ್ನುವುದು ಅರಿತಿದ್ದಾರೆ. ಕೊನೆಯಲ್ಲಿ  ಬಿಸಿ ಬಿಸಿ ಚಹಾ, ಕಾಫಿ ಕುಡಿಯುವಂತಾಗಿದೆ. ಆದರೆ    ಮೊದಲಿನ ತುಟಿ ಮರಳಲಿಲ್ಲ. ಈಗ ನಾನು ಬೇರೊಂದು ಯುನಿಟ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ. ಹೀಗಾಗಿ ಪ್ರತಿದಿನ ಇವರ ದರ್ಶನವಾಗದು.

ಜೀವನದಲ್ಲಿ ಕೇವಲ ಧನಾತ್ಮಕ ವಿಚಾರದಿಂದ ಒಳ್ಳೆ ವಿಷಯ ಕಲಿಯವುದು ಇಲ್ಲವೇ ಸ್ಫೂರ್ತಿಯಾಗಬೇಕೆಂದಿಲ್ಲ, ಋಣಾತ್ಮಕ ಘಟನೆ, ವಿಚಾರ ಸಹ ನಮಗೆ ನೀತಿಯಾಗಿ ಬಿಡುತ್ತವೆ. ಮನಃಪಟಲದಲ್ಲಿ ಶಾಶ್ವತ ಪಾಠವಾಗಿ ಬೇರು ಬಿಡುತ್ತವೆ. ಬಾಹ್ಯ ಸೌಂದರ್ಯದ ಆರಾಧಕರು ನಾವೆಲ್ಲ.

ಸೌಂದರ್ಯ ಎಂಬುದು ಬರೀ ಕಣ್ಣಿನ ತುತ್ತಲ್ಲ  ಕಣ್ಣಿಗೂ ಕಣ್ಣಾಗಿ ಒಳಗಿಹುದು ಎಂದು ಬೇಂದ್ರೆಯವರು ಹೇಳಿದ್ದಾರೆ. ಪ್ರತಿ ಮನುಷ್ಯನಲ್ಲಿ ಇದು ಅವ್ಯಕ್ತವಾಗಿ ನೆಲೆಸಿರುತ್ತದೆ. ಯಾವಾಗ ಬೇಕಾದರೂ ಜಾಗೃತಗೊಳ್ಳಬಹುದು.

Beauty lies in the eyes of beholder ಎನ್ನುವ ಪ್ರಸಿದ್ಧ ಉಕ್ತಿಯನ್ನು ಎಲ್ಲರೂ ಕೇಳಿದ್ದೇವೆ. ನಾವು ಬರೆಯುತ್ತೇವೆ, ಉಪದೇಶ ಮಾಡುತ್ತೇವೆ, ಎಲ್ಲಿಯೋ ಕೇಳಿರುತ್ತೇವೆ, ಹೇಳಿರುತ್ತೇವೆ ಅಂತ್ಯದಲ್ಲಿ ಮನ ಬಯಸುವುದು, ಆಕರ್ಷಿತವಾಗುವುದು ಬಾಹ್ಯ ಸೌಂದರ್ಯಕ್ಕೇ. ನನ್ನಂತೆಯೇ ಈ ರೀತಿಯ ಘಟನೆ ಅಲ್ಲದಿದ್ದರೂ ಬಾಹ್ಯ ಸೌಂದರ್ಯವೇ ಮುಖ್ಯ ಎನ್ನುವ ಅನುಭವ ನಿಮಗೂ ಆಗಿರಬಹುದಲ್ಲವೇ?\

ವಾಣಿ ಸಂದೀಪ,   ಸೌದಿ ಅರೇಬಿಯ

 

ಟಾಪ್ ನ್ಯೂಸ್

23msk04 (1)

ಬೀಜ ಮಾತ್ರವಲ್ಲ ಗೊಬ್ಬರವೂ ನಕಲಿ!

Delimitation, peaceful polls important milestones in restoring statehood: Amit Shah after all-party meet on Jammu and Kashmir

ಜಮ್ಮು ಮತ್ತು ಕಾಶ್ಮೀರದ ಸರ್ವತೋಮುಖ ಅಭಿವೃದ್ಧಿಗೆ ಕೇಂದ್ರ ಬದ್ಧ : ಅಮಿತ್ ಶಾ

Committed to restoring statehood: PM Narendra Modi tells J&K leaders after all-party meet

ಜಮ್ಮು ಕಾ‍ಶ್ಮೀರಕ್ಕೆ ಶೀಘ್ರ ರಾಜ್ಯ ಸ್ಥಾನಮಾನ

09

ಕೋವಿಡ್ : ರಾಜ್ಯದಲ್ಲಿಂದು 9768 ಸೋಂಕಿತರು ಗುಣಮುಖ; 3979 ಹೊಸ ಪ್ರಕರಣ ಪತ್ತೆ

ದ್ಗಹಹಗ್ಗಹಗಹನಗಗ್ದಸ

ಆಗುಂಬೆ ಘಾಟಿಯಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧ!

ಜಾರ್ಖಂಡ್: ಎರಡು ತಿಂಗಳಲ್ಲಿ ಪುಂಡಾನೆ ಅಟ್ಟಹಾಸಕ್ಕೆ 16 ಮಂದಿ ಗ್ರಾಮಸ್ಥರು ಬಲಿ

ಜಾರ್ಖಂಡ್: ಎರಡು ತಿಂಗಳಲ್ಲಿ ಪುಂಡಾನೆ ಅಟ್ಟಹಾಸಕ್ಕೆ 16 ಮಂದಿ ಗ್ರಾಮಸ್ಥರು ಬಲಿ

fghjhgfdsasdfghjhgfdsadfghjhgfdfghjhgf

ಶಿರಸಿ : ಅಂದರ್ ಬಾಹರ್ ಆಡುತ್ತಿದ್ದ ಗುಂಪಿನ ಮೇಲೆ ದಾಳಿ : 7 ಜನರ ಬಂಧನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬ್ಯಾಂಕ್‌ ಅಧಿಕಾರಿ ಹುದ್ದೆಗಳ ನೇಮಕಾತಿ

ಬ್ಯಾಂಕ್‌ ಅಧಿಕಾರಿ ಹುದ್ದೆಗಳ ನೇಮಕಾತಿ

ಎಂಬಿಇಡಿ ಜಾರಿಗೆ ಕೇಂದ್ರ ಚಿಂತನೆ : ವಿದ್ಯುತ್‌ ಬಿಲ್‌ಗೆ ಬೀಳಲಿದೆ ಕತ್ತರಿ !

ಎಂಬಿಇಡಿ ಜಾರಿಗೆ ಕೇಂದ್ರ ಚಿಂತನೆ : ವಿದ್ಯುತ್‌ ಬಿಲ್‌ಗೆ ಬೀಳಲಿದೆ ಕತ್ತರಿ !

ಕೋವಿಡ್ ಗೆ ಕುಸಿದ ಆರ್ಥಿಕತೆಗೆ ಚೇತೋಹಾರಿ ಪರಿಹಾರ

ಕೋವಿಡ್ ಗೆ ಕುಸಿದ ಆರ್ಥಿಕತೆಗೆ ಚೇತೋಹಾರಿ ಪರಿಹಾರ

ರಾಮಕೃಷ್ಣರ ಮಾತುಗಳೇ ಯುವಜನತೆಗೆ ದಾರಿದೀಪ…

ರಾಮಕೃಷ್ಣರ ಮಾತುಗಳೇ ಯುವಜನತೆಗೆ ದಾರಿದೀಪ…

ಸ್ವಾಸ್ಥ್ಯಕ್ಕಾಗಿ ಯೋಗ : ಮನ,ದೇಹ, ಆತ್ಮಗಳ ಶುದ್ಧೀಕರಣ ಪ್ರಯತ್ನ

ಸ್ವಾಸ್ಥ್ಯಕ್ಕಾಗಿ ಯೋಗ : ಮನ,ದೇಹ, ಆತ್ಮಗಳ ಶುದ್ಧೀಕರಣ ಪ್ರಯತ್ನ

MUST WATCH

udayavani youtube

ಕೊಮೆ : ಮೀನುಗಾರರಿಂದ ಸಮುದ್ರ ಪೂಜೆ

udayavani youtube

ನಾನು ಸೋತು ಹೋಗಿದ್ದೇನೆ ಸ್ವಾಮಿ; ಜವಳಿ ವ್ಯಾಪಾರಿಯ ನೋವಿನ ಮಾತು

udayavani youtube

ಕಾನೂನು ಎಲ್ಲರಿಗೂ ಒಂದೇ,ಎಷ್ಟೇ ದೊಡ್ಡವನಾದರೂ ಕಾನೂನು ಪಾಲನೆ ಮಾಡಬೇಕು: ಉಡುಪಿ DC ವಾರ್ನಿಂಗ್

udayavani youtube

ನೇಗಿಲು ಹಿಡಿದು ಉಳುಮೆ ಮಾಡಿದ ಶಾಸಕ ರೇಣುಕಾಚಾರ್ಯ

udayavani youtube

ಖಾಸಗಿ TECHIE, ದೇಸಿ ದನ ಸಾಕಣೆಯಲ್ಲಿ ಯಶಸ್ಸು ಕಂಡಿದ್ದು ಹೇಗೆ ?

ಹೊಸ ಸೇರ್ಪಡೆ

23hvr4a

ನಿತ್ಯ ಕನಿಷ್ಟ 10 ಸಾವಿರ ಜನರಿಗೆ ವ್ಯಾಕ್ಸಿನ್‌ ನೀಡಿ

ಯತರ3456543ತಯ

ಡ್ರಗ್ಸ್‌ ಪ್ರಕರಣ: ಟೆಕ್ಕಿ ಸೇರಿ ಐವರ ಬಂಧನ

24-13

ದೇಶದ ಅಭಿವೃದ್ಧಿಯಲ್ಲಿ ಯುವಕರ ಪಾತ್ರವೂ ಮುಖ್ಯ

ಎರತಯುಯತರೆಡಟಡೆರತಯ

ಮೂವರು ಮಕ್ಕಳ ಮೇಲೆ ಮೃಗೀಯ ವರ್ತನೆ

24-12

ಪಾಲಿಕೆ ಪರಿಷ್ಕೃತ ಆಸ್ತಿ ತೆರಿಗೆ ಹಿಂಪಡೆಯಿರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.