ಬರ್ಮಿಂಗಮ್‌ನಲ್ಲಿ  ನೆನಪಾದ ಬೊಮ್ಮನಹಳ್ಳಿ !

Team Udayavani, Jul 23, 2021, 9:33 PM IST

desiswara article

ಇಂಗ್ಲೆಂಡ್‌ನ‌ಲ್ಲಿ ಕೋವಿಡ್‌ ಪರಿಸ್ಥಿತಿ ಸುಧಾರಿಸಿ ಪ್ರವಾಸಗಳು ಸುಲಭವಾಗಿವೆ. ಕಳೆದ ವಾರ ಬರ್ಮಿಂಗಮ್‌ಗೆ ಕಾರಿನಲ್ಲಿ ಹೊರಟಿದ್ದೆ. ವಿರಾಮಕ್ಕೆಂದು ಮೋಟರ್ವೇದ ಸರ್ವಿಸಸ್‌ನಲ್ಲಿ ಇಳಿದು ಚಹಾದ ಜೋಡಿಯಾಗಿ ಕ್ರಿÓ³… ಪ್ಯಾಕೆಟ್‌ ಕೊಂಡೆ. ನಮ್ಮಲ್ಲಿ  ಚಿ±Õ… ಎಂದು ಕರೆಯುವ ತೆಳುವಾಗಿ ಹರಿದು ಕರಿದ ಬಟಾಟೆಗೆ ಉಪ್ಪು, ಮೆಣಸಿನಪುಡಿ ಉದುರಿಸಿದ ಗರಿಗರಿಯಾದ ಬಿಲ್ಲೆಗಳಿಗೆ ಇಲ್ಲಿ  ‘crಜಿsಟs’  ಎನ್ನುತ್ತೇವೆ. ಅಚ್ಚರಿಯೆಂದರೆ ನಾನು ಕೊಂಡ ಪ್ಯಾಕೆಟ್‌ನ ಮೇಲೆ ಕರ್ನಾಟಕದ ಹೆಸರು ಮತ್ತು ತುತ್ತೂರಿ ಹಿಡಿದವನ ಚಿತ್ರ ಇತ್ತು! ಅದನ್ನು ನೋಡಿದಾಗ ಮತ್ತು ಅದರ ಮೇಲಿನ ಬರಹ ಓದುತ್ತಿದ್ದಂತೆ ನನ್ನ ಮನಸ್ಸು “ಬೊಮ್ಮನಹಳ್ಳಿಯ ಕಿಂದರಿ ಜೋಗಿ’ಯ ನೆನಪಿಸಿತ್ತು. ಅದನ್ನು ಬರೆದ ಕವಿ ಹುಟ್ಟಿ ಬೆಳೆದದ್ದು ಸಹ್ಯಾದ್ರಿಯ ಮಡಿಲಲ್ಲಿಯ ಕುಪ್ಪಳ್ಳಿ ಎನ್ನುವುದನ್ನು ಮರೆಯುವಂತಿಲ್ಲ.

ಕುತೂಹಲದಿಂದ, ಪ್ಯಾಕೆಟ್‌ನಲ್ಲಿದ್ದ ಕ್ರಿÓ³… ಮತ್ತು ಅದರ ಹೆಸರಿನ ಬಗ್ಗೆ ಸಂಶೋಧನೆ ಮಾಡತೊಡಗಿದೆ. ಇಂಗ್ಲೆಂಡ್‌ನ‌ ಪೂರ್ವಭಾಗದಲ್ಲಿಯ ಲಿಂಕನ್‌ ಶೈರ್‌ನಲ್ಲಿ ಬೆಳೆದ ಬಟಾಟೆಗಳನ್ನು ಉಪಯೋಗಿಸಿ, ಸಹ್ಯಾದ್ರಿಯಲ್ಲಿ ಬೆಳೆದ ತೆಲ್ಲಿಚೇರಿ ಮೆಣಸನ್ನು ಆಮದು ಮಾಡಿ ಪುಡಿ ಮಾಡಿ ಬೆರಸಿ ಅದರ ರುಚಿಯನ್ನು ಹೆಚ್ಚಿಸಲು ಸಮುದ್ರದ ಉಪ್ಪನ್ನು ಬಳಸಿ ಈ ಕ್ರಿÓ³…ಗಳನ್ನು ತಯಾರಿಸಿದ್ದೇವೆ ಎನ್ನುತ್ತಾರೆ ತಯಾರಕರು.

2004ರಲ್ಲಿ ಮೂವರು ಕೃಷಿಕರು ಕೂಡಿ ಆರಂಭಿಸಿದ ಸಂಸ್ಥೆ ಪೈಪರ್ಸ್‌. ಅವರ ಲಾಂಛನವಾದ ಕಹಳೆ (ಚಿತ್ರ ನೋಡಿ) ಆಂಗ್ಲ ಕವಿ ರಾಬರ್ಟ್‌ ಬ್ರೌನಿಂಗ್‌ ರಚಿಸಿದ “ಖಜಛಿ ಕಜಿಛಿಛ ಕಜಿಟಛಿr ಟf ಏಚಞಛಿlಜಿn’ ಎನ್ನುವ ಕವನವೂ ನೆನಪಾಗುತ್ತದೆ. ಪೈಪರ್ಸ್‌ ಕಂಪೆನಿಯ ಧ್ಯೇಯ ಮಂತ್ರ ಕನ್ನಡದ ಇನ್ನೊಬ್ಬ ವರಕವಿಯ ಸಾಲನ್ನು ನೆನಪಿಸಿ “ನಿನ್ನ ಜೀವನ ಸಮರಸ ತುಂಬಿದ ಬಾಳಾಗಿರಲಿ’ ಎಂದು ಕಹಳೆ ಊದುತ್ತಿದೆ. ಜರ್ಮನಿಯ ವೀಸjರ್‌ ನದಿ ದಂಡೆಯ ಮೇಲಿನ ಹ್ಯಾಮಲಿನ್‌ ಊರಿನಲ್ಲಿ ನಡೆದ ಘಟನೆಯಿಂದ ಹುಟ್ಟಿಕೊಂಡ ಅನೇಕ ದಂತ ಕಥೆಗಳÇÉೊಂದನ್ನು ಆಧರಿಸಿ ಬ್ರೌನಿಂಗ್‌ ಬರೆದ ನೀಳYವನ ಅದು. ಜನಪ್ರಿಯ “ಬೊಮ್ಮನ ಹಳ್ಳಿಯ ಕಿಂದರಿ ಜೋಗಿ’ಯ ಮಕ್ಕಳ ಕಥೆಯನ್ನು ಬಹುತೇಕ ಮಂದಿ ಕೇಳಿರಬಹುದು, ಓದಿರಬಹುದು.

13 ಅಥವಾ 14ನೇ ಶತಮಾನದ ಪ್ಲೇಗ್‌ ಪಿಡುಗಿನ ಕಾಲದಲ್ಲಿ ಹುಟ್ಟಿಕೊಂಡ ಕಥೆ ಅದರ ಮೂಲ. ಅದರಲ್ಲಿ  ಕಳೆದು ಹೋದ ಮಕ್ಕಳು ಮತ್ತೂಂದು ಕಡೆ ಟ್ರಾನ್ಸಿಲ್ವೇನಿಯದಲ್ಲಿ ಉದ್ಭವವಾದರು ಎನ್ನುವ ಸೂಚನೆ ಆ ಕವಿತೆಯಲ್ಲಿದ್ದರೂ ಕುವೆಂಪು ಅವರ ಕವನದಲ್ಲಿ ಆ ಉಲ್ಲೇಖವಿಲ್ಲ. ಆದರೆ ರಾಬರ್ಟ್‌ ಬ್ರೌನಿಂಗ್‌ ಸಹ ವಿಲ್ಲಿ ಎಂಬ ಹುಡುಗನಿಗಾಗಿ 1842ರಲ್ಲಿ ಬರೆದ ಕವನದ ಕೊನೆಯಲ್ಲಿ ಈ ಕಥೆಯ ನೀತಿಯನ್ನು ಹೇಳಿದಂತೆ ಕುವೆಂಪು ಅವರೂ  ಕವನದ ಕೊನೆಯ ಸಾಲುಗಳಲ್ಲಿ ಮೂರ್ತಿಯೆಂಬ ಬಾಲಕನಿಗೆ ಹೇಳಿದಂತಿದೆ. ಭಾಷೆಯ ಕೊಟ್ಟರೆ ಮೂರ್ತಿ, ನಾವು ಮೋಸವ ಮಾಡದೆ ಸಲ್ಲಿಸಬೇಕು/ ಆದುದರಿಂದ ಕೇಳು, ಮೂರ್ತಿ ಸತ್ಯವನೆಂದೂ ತ್ಯಜಿಸದೆ ಬಾಳು. ಹ್ಯಾಮ್ಲಿನ್‌ ಊರಲ್ಲಿ ಮಕ್ಕಳು ಕೊನೆಯ ಸಲ ಕಾಣಿಸಿದ ವೀಥಿಯನ್ನು ಈಗ ಹಾಡು ಕುಣಿತವಿಲ್ಲದ ದಾರಿ ಎಂದು ಕರೆಯುತ್ತಾರೆ.

ಸುಮಾರು 600  - 700  ವರ್ಷಗಳ ಹಿಂದಿನ ಘಟನೆಯಾದ ಆ ದಿನವನ್ನು “ರಾಟ್‌ ಕ್ಯಾಚರ್ಸ್‌ ಡೇ’ ಎಂದು ಪ್ರತಿ ವರ್ಷ ಜೂ. 26 ಅಥವಾ  ಜು. 22ರಂದು (ದಾಖಲೆಗಳಲ್ಲಿ ಸ್ವಲ್ಪ ದಿನಾಂಕದ ವ್ಯತ್ಯಾಸವಿರುವುದರಿಂದ) ಆಚರಿಸುತ್ತಾರೆ.

ನಾನು ಮುಂದೆ ಮತ್ತೆ ಹೈವೇ ಸೇರಿ ನನ್ನ ಪ್ರವಾಸ ಮುಂದುವರಿಸುವಾಗ ಮೂರೂ ಲೇನುಗಳಲ್ಲಿ ಒಂದರ ಹಿಂದೆ ಒಂದು ವಿವಿಧ ಬಣ್ಣದ, ಪುಟ್ಟ, ದೊಡ್ಡ, ದೈತ್ಯಾಕಾರದ ವಾಹನಗಳು ಭರದಿಂದ ಸಾಗುವ ರ್ಯಾಟ್‌ ರೇಸ್‌ ಅನ್ನು ನೋಡಿದಾಗ ರಾಷ್ಟ್ರಕವಿಯ ಕವನದ ಸಾಲುಗಳೇ ನೆನಪಿಗೆ ಬಂದವು.. “ಜೋಗಿಯು ಬಾರಿಸೆ ಕಿಂದರಿಯ ಸಣ್ಣಿಲಿ, ದೊಡ್ಡಿಲಿ, ಮೂಗಿಲಿ, ಸುಂಡಿಲಿ..’

ಯಾವ ಕಾಣದ ಕೇಳದ ಜೋಗಿಯ ಕಿಂದರಿ ನಾದದ ಬೆನ್ನು ಹತ್ತಿ ಇವರೆಲ್ಲ ಧಾವಿಸುತ್ತಿ¨ªಾರೆ ಅನಿಸಿತು! ಆ ಕಾಲದ ಪ್ಲೇಗಿನಂತೆ ಈಗಿರುವ ಮಹಾಮಾರಿ ಕೋವಿಡ್‌ ಕಡಿಮೆಯಾದರೆ ಮತ್ತೆ ಊರಿಗೆ ಮರಳುವ ಆಸೆಯನ್ನು ಆ ದಿನ ಹೆಚ್ಚಿಸಿತ್ತು.

ಡಾ| ಶ್ರೀವತ್ಸ ದೇಸಾಯಿ, 

ಡೊಂಕಾಸ್ಟರ್‌

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Ram Ayodhya

Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.