Udayavni Special

ಭಕ್ತಿ, ಪೂಜೆ, ಭಜನೆಗಳಿಗೆ ಎಲ್ಲ ದೋಷ ನಿವಾರಣೆ ಶಕ್ತಿ ಇದೆ: ಡಾ| ಪರಮೇಶ್ವರ ಭಟ್‌


Team Udayavani, May 5, 2021, 7:29 PM IST

Devotion, worship, bhajans have all the troubleshooting power

ಕೊರೊನಾ ಸಾಂಕ್ರಾಮಿಕದಿಂದ ಜಗತ್ತಿನಾದ್ಯಂತ ಜನರೆಲ್ಲ ಕಷ್ಟ ಪಡುತ್ತಿದ್ದಾರೆ. ನಮ್ಮೆಲ್ಲರ ಭಕ್ತಿ, ಪೂಜೆ ಮತ್ತು ಭಜನೆಗಳಿಗೆ ಎಲ್ಲ ದೋಷಗಳನ್ನು ಕಡಿಮೆ ಮಾಡುವ ಒಂದು ಶಕ್ತಿ ಇದೆ. ಈ ಹೊಸ ಸಂವತ್ಸರದಲ್ಲಿ ಎಲ್ಲ ರೋಗಗಳು ನಿವಾರಣೆಯಾಗಲಿ, ನಮ್ಮ ಎಲ್ಲ ಕಷ್ಟಗಳನ್ನು ದೂರ ಮಾಡು ಎಂದು ದೇವರಲ್ಲಿ ಪ್ರಾರ್ಥನೆ ಮಾಡೋಣ ಎಂದು ನಿವೃತ್ತ ವಿಜ್ಞಾನಿ ಡಾ| ಪರಮೇಶ್ವರ ಭಟ್‌ ಹೇಳಿದರು.

ಧಾರ್ಮಿಕ ಪೂಜೆ, ಪಂಚಾಂಗ ಶ್ರವಣ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಎ. 17ರಂದು ವರ್ಚುವಲ್‌ನಲ್ಲಿ ನಡೆದ ಕನ್ನಡ ಸಂಘ ಟೊರೊಂಟೊದ ಯುಗಾದಿ ಆಚರಣೆಯಲ್ಲಿ ಅವರು ಹೊಸ ಸಂವತ್ಸರಕ್ಕೆ ಶುಭ ನುಡಿಗಳನ್ನಾಡಿದರು.ಆರಂಭದಲ್ಲಿ ಕನ್ನಡ ಸಂಘದ ಅಧ್ಯಕ್ಷರಾದ ನಾಗೇಂದ್ರ ಕೃಷ್ಣಮೂರ್ತಿ ಅವರು ಎಲ್ಲರನ್ನು ಸ್ವಾಗತಿಸುತ್ತಾ, ಟೊರೊಂಟೋದಲ್ಲಿರುವ ಶೃಂಗೇರಿ ದೇವಸ್ಥಾನದಿಂದ ಪಂಚಾಗ ಶ್ರವಣ ನಡೆಯುತ್ತಿರುವುದು, ಇಂದಿನ ಕಾರ್ಯಕ್ರಮವನ್ನು ವಸಂತಾಗಮನ ಎಂದು ಕರೆದಿರುವುದು, ಒಂದೇ ವೇದಿಕೆಯಲ್ಲಿ ಅನೇಕ ನುರಿತ ಮತ್ತು ಪ್ರತಿಭಾನ್ವಿತ ಸಂಗೀತ ಮತ್ತು ನೃತ್ಯ ಗುರುಗಳಿಂದ ಕಾರ್ಯಕ್ರಮ ನಡೆಯುತ್ತಿರುವುದು ಇಂದಿನ ಕಾರ್ಯಕ್ರಮದ ವೈಶಿಷ್ಟ್ಯವಾಗಿದೆ ಎಂದರು.

ಶೃಂಗೇರಿ ವಿದ್ಯಾ ಪೀಠದ ಪ್ರಧಾನ ಅರ್ಚಕರಾದ ರಾಮಕೃಷ್ಣ ಭಟ್‌ ಅವರು ಪಂಚಾಂಗದ ಮಹತ್ವ, ಪಂಚ ಅಂಗಗಳಾದ ತಿಥಿ, ವಾರ, ನಕ್ಷತ್ರ, ಯೋಗ ಮತ್ತು ಕರಣ ಇವುಗಳ ನಿತ್ಯ ಶ್ರವಣದ ಫ‌ಲಗಳ ಬಗ್ಗೆ ವಿವರಿಸಿದರು. ಬ್ರಹ್ಮ ಅಂದರೆ ಏನು? ಬ್ರಹ್ಮ ವರ್ಷಗಳು ಎಷ್ಟು? ನಾಲ್ಕು ಯುಗಗಳು ಅಂದರೆ ಎಷ್ಟು ವರ್ಷಗಳು ಮೊದಲಾದ ಚತುರ್ಯುಗಗಳ ಕಾಲದ ಪರಿಧಿಯ ಬಗ್ಗೆ ವಿವರಿಸಿದರು. ಪ್ಲವ ಸಂವತ್ಸರದಲ್ಲಿ ಸಂಭವಿಸಬಹುದಾದ ಆಗು ಹೋಗುಗಳು, ಒಳಿತು ಕೆಡುಕುಗಳ ಬಗ್ಗೆಯೂ ತಿಳಿಸುತ್ತಾ ಪಂಚಾಂಗ ಶ್ರವಣವನ್ನು ನಡೆಸಿಕೊಟ್ಟರು.ಕಾರ್ಯಕ್ರಮದಲ್ಲಿ ಶಾರದಾ ಭಟ್‌ ಅವರ ನೇತೃತ್ವದ ಮಕ್ಕಳ ತಂಡದಿಂದ ಬಹಳ ಸುಂದರವಾದ ಭಜನಾವಳಿ ನಡೆಯಿತು.

ಶ್ರೀಧರ ಮಧ್ಯಸ್ಥ ಅವರು ತಬಲಾದಲ್ಲಿ ಸಹಕರಿಸಿದರು. ಪರ್ಣಿಕಾ ಸಂಪತ್ತೂರು ಅವರು ಶೃಂಗಪುರಾಧೀಶ್ವರೀ ಶಾರದೆ ಎಂಬ ಹಾಡಿಗೆ ಬಹಳ ಅಂದವಾಗಿ ಭರತನಾಟ್ಯ ನೃತ್ಯ ಪ್ರದರ್ಶಿಸಿದರು. ವಸುಮತಿ ನಾಗರಾಜನ್‌ ಅವರು ಜಗದೀಶ್ವರಿ ಬ್ರಹ್ಮ ಹೃದಯೇಶ್ವರಿ ಎಂಬ ಹಾಡನ್ನು ಭಕ್ತಿಯಿಂದ ಹಾಡಿದರು.ಅಭಾ ಸ್ಕೂಲ್‌ ಆಫ್ ಆಟ್ಸ್ ನೃತ್ಯ ಶಾಲೆಯ ಪುಟ್ಟ ಮಕ್ಕಳಿಂದ ರಾಮ್‌ ರಾಮ್‌ ಜಯರಾಂ ಎಂಬ ಹಾಡಿಗೆ ಚೆಲುವಾದ ನೃತ್ಯ ಪ್ರದರ್ಶಿಸಲಾಯಿತು. ಮುಂದೆ ಸಂಗೀತ ಗುರುಗಳಾದ ಸಂಧ್ಯಾ ಶ್ರೀವತ್ಸನ್‌ ಅವರು ಕಾದಿರುವೆನು ನಾನು ಶ್ರೀರಾಮ ಕಾಪಾಡು ಎಂಬ ಹಾಡನ್ನು ಬಹು ಸೊಗಸಾಗಿ ಹಾಡಿದರು.

ಲೆರುಷ ನಾಟ್ಯಶಾಲೆಯ ಪುಟ್ಟ ಪುಟ್ಟ ಚಿಣ್ಣರಿಂದ ಸ್ವಾಗತಂ ಕೃಷ್ಣಾ ಹಾಡಿಗೆ ಭರತನಾಟ್ಯ ಪ್ರದರ್ಶನ, ಧ್ಯಾನ ಸಂಗೀತ ಶಾಲೆಯ ವಿದ್ಯಾರ್ಥಿಗಳೊಂದಿಗೆ ಗುರುಗಳಾದ ವಿದ್ಯಾ ನಟರಾಜ್‌ ಅವರಿಂದ ಗಾಯನ, ಮುಂದೆ ಶೋಭಾ ಹೆಗ್ಡೆ ಅವರ ಸಂಯೋಜನೆಯಲ್ಲಿ ಹಲವು ಮಕ್ಕಳು ಯುಗಾದಿ ಅಂದರೆ ಏನು? ಯುಗಾದಿಯ ಆಚರಣೆ ಹೇಗೆ ಎಂಬಿತ್ಯಾದಿ ತಿಳಿವಳಿಕೆ ಕೊಡಬಲ್ಲ ಮಾತು, ನೃತ್ಯಗಳ ಕಾರ್ಯಕ್ರಮ ಪ್ರೇಕ್ಷಕರ ಮನಸೂರೆಗೊಳಿಸಿತು.ಮತ್ತೂಬ್ಬ ಸಂಗೀತ ಶಿಕ್ಷಕಿ ರಸಿಕ ಜೋಗ್‌ ಅವರು ಪ್ರಪ್ರಥಮ ಬಾರಿಗೆ ಕನ್ನಡ ಹಾಡು ಪೂಜಿಸಲೆಂದೇ ಹೂಗಳ ತಂದೆ ಹಾಡಿ ಜನರನ್ನು ಅಚ್ಚರಿಗೊಳಿಸಿದರು. ಅನಂತರ ನೃತ್ಯ ಗುರುಗಳಾದ ಸುಶ್ಮಾ ಶ್ರೀಪಾದ್‌ ಅವರಿಂದ ಅರಳುವ ನಾಳುವ ಬ್ರಹ್ಮ ವಿನಾಯಕ ಕರುಣಾ ಹಾಡಿಗೆ ನೃತ್ಯ ಪ್ರದರ್ಶಿಸಲಾಯಿತು. ತದನಂತರ ಸಂಗೀತ ಗುರುಗಳಾದ ವಿದ್ಯಾ ನಟರಾಜ್‌ ಅವರು ಹರುಕು ಬಟ್ಟೆ ತಿರುಕನಂತೆ ಎಂಬ ಕುವೆಂಪು ಅವರ ಗೀತೆಗೆ ಜೀವ ತುಂಬಿ ಹಾಡಿದರು.

ಮಾಮವತು ಸರಸ್ವತಿ ಹಾಡಿಗೆ ನೃತ್ಯ ಗುರುಗಳಾದ ಸುಶ್ಮಿತಾ ಪಾರ್ಥಸಾರಥಿ ಅವರು ನೃತ್ಯ ಪ್ರದರ್ಶಿಸಿದರು,ಮುಂದೆ, ಈ ಬಾರಿಯ ಯುಗಾದಿ ಹಬ್ಬಕ್ಕೆ ಕನ್ನಡ ಸಂಘದ ಸದಸ್ಯರ ಮನೆಗಳಲ್ಲಿ ಬರೆದ ರಂಗೋಲಿಗಳನ್ನೂ ಪ್ರದರ್ಶಿಸಲಾಯಿತು. ಕಾರ್ಯಕ್ರಮಗಳ ಮಧ್ಯೆ ಕಾರ್ಯಕ್ರಮ ಪ್ರಾಯೋಜಕರ ವಿವರಗಳನ್ನು ತೋರಿಸಲಾಯಿತು.ಅಂತಿಮವಾಗಿ ನೃತ್ಯ ಗುರುಗಳಾದ ಶೋಭಾ ಆನಂದ್‌ ಅವರು ಜಯದೇವನ ಗೀತಾ ಗೋವಿಂದದ ಮಧುಕರ ನಿಖರ ಕರಂಭಿತ ಕೋಗಿಲೆ ಎಂಬ ಗೀತೆಯನ್ನು ಬಹು ಸೊಗಸಾಗಿ ಅಭಿನಯಿಸಿ ತೋರಿಸಿದರು.

ಸಂಗೀತ ಗುರುಗಳಾದ ವಿನಾಯಕ ಹೆಗಡೆ ಅವರು ರಾಷ್ಟಕವಿ ಡಾ| ಜಿ.ಎಸ್‌. ಶಿವರುದ್ರಪ್ಪ ಅವರ ಗೀತೆ ಹೊಸ ವರುಷಕೆ ಹೊಸ ಕೊಡುಗೆಯ ನೀಡು ಬಾ ಹಾಡನ್ನು ಕೇಳುಗರ ಮನಮುಟ್ಟುವಂತೆ ಹಾಡಿದರು.ಕಾರ್ಯಕ್ರಮಗಳ ಮಧ್ಯೆ ರಾಜಶೇಖರ್‌ ಬೀಚನಹಳ್ಳಿ, ವರ್ಷ ಚೇತನ್‌, ನಿವೇದಿತಾ ಪುರಾಣಿಕ್‌, ಶುಭದ ಶಾಂತಗಿರಿ, ಮಾಲಾ ನಂದೀಶ್‌ ಅವರುಗಳು ಸಂಗೀತ ಮತ್ತು ನೃತ್ಯ ಗುರುಗಳ ಪರಿಚಯ ಮಾಡಿದರು. ಕೊನೆಯಲ್ಲಿ ರಾಜಶೇಖರ್‌ ಬೀಚನಹಳ್ಳಿ ಅವರು ವಂದಿಸಿದರು.

ಗನ್ನಿ ಮುರಳಿ ಅವರು ಶೃಂಗೇರಿ ದೇವಸ್ಥಾನದಿಂದ ಕಾರ್ಯಕ್ರಮದ ನೇರ ಪ್ರಸಾರದ ಹೊಣೆ ಹೊತ್ತರೆ, ಚೇತನ್‌ ಭಾರದ್ವಾಜ್‌ ಅವರು ತೆರೆಯ ಮರೆಯಲ್ಲಿ ಕಾರ್ಯಕ್ರಮದ ನೇರ ಪ್ರಸಾರವನ್ನು ಸಾಮಾಜಿಕ ತಾಣಗಳಲ್ಲಿ ಬಹು ಅಚ್ಚುಕಟ್ಟಾಗಿ ನೆರವೇರಿಸಿದರು. ಸುಬ್ರಹ್ಮಣ್ಯ ಶಿಶಿಲ ಅವರು ಕಾರ್ಯಕ್ರಮ ನಿರ್ವಹಣೆ ಮಾಡಿದರು.

ಟೊರೊಂಟೊ

ಟಾಪ್ ನ್ಯೂಸ್

16-14

ಹೆಚ್ಚಾಯ್ತು ಬೇಡಿಕೆ; ಆಗ್ತಿಲ್ಲ ಪೂರೈಕೆ

986

ಅಪರೂಪದ ಮಾವು ಬೆಳೆದ ರೈತ: ಒಂದು ಕೆಜಿ ಹಣ್ಣಿಗೆ ಎಷ್ಟು ಲಕ್ಷ ರೂ. ಗೊತ್ತಾ ?

ಚಿಕ್ಕಬಳ್ಳಾಪುರ ಜಿ.ಪಂ ಉಪ ಕಾರ್ಯದರ್ಶಿಯಾಗಿ ಶಿವಕುಮಾರ್ ನೇಮಕ

ಚಿಕ್ಕಬಳ್ಳಾಪುರ ಜಿ.ಪಂ ಉಪ ಕಾರ್ಯದರ್ಶಿಯಾಗಿ ಶಿವಕುಮಾರ್ ನೇಮಕ

statue

ಕುಡುಕನಿಂದ ಗಾಂಧೀಜಿ ಪ್ರತಿಮೆ ಭಗ್ನ : ಸ್ಥಳಕ್ಕೆ ಡಿಎಸ್‌ಪಿ, ತಹಶೀಲ್ದಾರ್ ಭೇಟಿ, ಪರಿಶೀಲನೆ

730-doctors-died-of-covid-19-in-second-wave-ima-data

ಕೋವಿಡ್ ಎರಡನೇ ಅಲೆಯಿಂದಾಗಿ ದೇಶದಾದ್ಯಂತ 730 ವೈದ್ಯರನ್ನು ಕಳೆದುಕೊಂಡಿದ್ದೇವೆ : ಐಎಂಎ

ಸಾಗರೋತ್ತರ ವ್ಯವಹಾರಗಳ ಮೇಲೆ ಪಟ್ಟಭದ್ರ ಹಿತಾಸಕ್ತಿಗಳ ಹಿಡಿತ ಸಾಧ್ಯತೆ : ರಾಜನಾಥ್ ಸಿಂಗ್

ಸಾಗರೋತ್ತರ ವ್ಯವಹಾರಗಳ ಮೇಲೆ ಪಟ್ಟಭದ್ರ ಹಿತಾಸಕ್ತಿಗಳ ಹಿಡಿತ ಸಾಧ್ಯತೆ : ರಾಜನಾಥ್ ಸಿಂಗ್

289

ಕೋವಿಡ್ : ಕಾಸರಗೋಡು ಜಿಲ್ಲೆಯಲ್ಲಿ ವಾರ್ಡ್ ಮಟ್ಟದಲ್ಲಿ ನಿಯಂತ್ರಣಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

desiswara

ಕನ್ನಡದ ಕಾಯಕ ನಿರಂತರವಾಗಿರಲಿ: ಟಿ.ಎಸ್‌.ನಾಗಾಭರಣ

desiswara article

ಅರಬ್‌ ದೇಶದಲ್ಲಿ ಯಕ್ಷ ತರಂಗ

desiswara

ಮನಸ್ಸನ್ನು ನಿಯಂತ್ರಿಸೋಣ ರೋಗ ಮುಕ್ತರಾಗೋಣ

ಆರೋಗ್ಯಕರ ಜೀವನಕ್ಕೆ ಸುಲಭ ವಿಧಾನ

ಆರೋಗ್ಯಕರ ಜೀವನಕ್ಕೆ ಸುಲಭ ವಿಧಾನ

ಈ ಆಸನಗಳನ್ನು ಮಾಡಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ

ಈ ಆಸನಗಳನ್ನು ಮಾಡಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ

MUST WATCH

udayavani youtube

2 ವರ್ಷ ಯಡಿಯೂರಪ್ಪನವರೇ ಸಿಎಂ ಆಗಿರ್ತಾರೆ, : ಕಟೀಲ್

udayavani youtube

ಡ್ರಗ್ಸ್ ಪ್ರಕರಣದಲ್ಲಿ ನನ್ನನ್ನು 100 % ಟಾರ್ಗೆಟ್ ಮಾಡಲಾಗಿದೆ : ನಟಿ ರಾಗಿಣಿ

udayavani youtube

ಬೋರ್ ವೆಲ್ ಪಂಪ್ ಹೊಡೆದು ದಾಹ ನೀಗಿಸಿಕೊಂಡ ಮರಿ ಆನೆ

udayavani youtube

ಹೈನುಗಾರಿಕೆಯಲ್ಲಿ ಖುಷಿ ಕಂಡ ರಾಜಕಾರಣಿ

udayavani youtube

ಮಾವಿನ ಬೆಳೆಯಲ್ಲಿ ಸಿಹಿಕಂಡ ನಿವೃತ ಅಧ್ಯಾಪಕ

ಹೊಸ ಸೇರ್ಪಡೆ

16-14

ಹೆಚ್ಚಾಯ್ತು ಬೇಡಿಕೆ; ಆಗ್ತಿಲ್ಲ ಪೂರೈಕೆ

16-13

ಬಡವರ ಮರಳು ಜಪ್ತಿಗೆ ಅವಕಾಶ ಕೊಡಲ್ಲ

16-12

ನೈಜ ಫಲಾನುಭವಿಗಳಿಗೆ ಯೋಜನೆ ಲಾಭ ಸಿಗಲಿ

986

ಅಪರೂಪದ ಮಾವು ಬೆಳೆದ ರೈತ: ಒಂದು ಕೆಜಿ ಹಣ್ಣಿಗೆ ಎಷ್ಟು ಲಕ್ಷ ರೂ. ಗೊತ್ತಾ ?

16-11

ಮಾನವೀಯ ಮೌಲ್ಯ ಪುನರುತ್ಥಾನಕ್ಕೆ ಪಾದಯಾತ್ರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.