Udayavni Special

ತಾಯ್ನಾಡಲ್ಲಿ ಆಹಾರ ವಿತರಣೆ ಅಭಿಯಾನ


Team Udayavani, Jun 30, 2021, 11:27 PM IST

Distribution of food

ಸಂಯುಕ್ತ ಅರಬ್‌ ಸಂಸ್ಥಾನದ ದುಬೈಯಲ್ಲಿರುವ ಕೊಡಗು ಹಳೆ ವಿದ್ಯಾರ್ಥಿಗಳ ಸಂಘ ಮತ್ತು ಹೆಮ್ಮೆಯ ದುಬೈ ಕನ್ನಡ ಸಂಘದ ವತಿಯಿಂದ ತಾಯ್ನಾಡಲ್ಲಿ ಆಹಾರ ವಿತರಣಾ ಅಭಿಯಾನದ ಅಂಗವಾಗಿ ಎಲ್ಲ ಧರ್ಮಗಳ ಧರ್ಮಗುರುಗಳಿಗೆ ಆಹಾರ ದಿನಸಿ ಕಿಟ್‌ ವಿತರಿಸಲಾಯಿತು.

ಹೆಮ್ಮೆಯ ದುಬೈ ಕನ್ನಡ ಸಂಘವು  ಕಳೆದ ಒಂದುವರೆ ತಿಂಗಳಿಂದ ಸತತವಾಗಿ ಬೆಂಗಳೂರು, ಮೈಸೂರು, ಮಂಗಳೂರು, ಕೊಡಗು  ಮೊದಲಾದ ಕಡೆಗಳಲ್ಲಿ ದಿನಸಿ ಕಿಟ್‌ ಮತ್ತು ಆಹಾರ ಪೊಟ್ಟಣ ವಿತರಿಸುತ್ತಿದೆ. ನಾಪೋಕ್ಲು ಸುತ್ತಮುತ್ತ ಇರುವ ಗ್ರಾಮಗಳ ಮಸೀದಿ ಮೌಲಾನಾಗಳು, ಅಧ್ಯಾಪಕರುಗಳು, ದೇವಸ್ಥಾನದ ಸ್ವಾಮೀಜಿ, ಅರ್ಚಕರು ಮತ್ತು ಚರ್ಚ್‌ನ ಫಾದರ್‌ಗಳ 30 ಕುಟುಂಬಕ್ಕೆ ಒಂದು ತಿಂಗಳಿಗಾಗುವಷ್ಟು ಆಹಾರ ದಿನಸಿ ಕಿಟ್‌ ಅನ್ನು ಕುಂಜಿಲ, ಕೊಳಕೇರಿ, ನಾಪೋಕ್ಲು, ಚೆರಿಯಪರಂಬು, ಎಮ್ಮೆಮಾಡು, ಚೆಟ್ಟಿಮಾನಿ, ಕೊಟ್ಟಮುಡಿ, ನಾಲಡಿ, ಕಕ್ಕಬೆ, ಮರಂದೋಡ ಮೊದಲಾದ ಕಡೆಗಳಲ್ಲಿ  ಮೊಹಮ್ಮದ್‌ ಹಾಜಿ ಕುಂಜಿಲ ಅವರು  ತಲುಪಿಸಿದರು.

ಕಕ್ಕಬೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಆಹಾರ ಕಿಟ್‌ ವಿತರಿಸುವ ಕಾರ್ಯಕ್ಕೆ ಅಧಿಕೃತ ಚಾಲನೆ ನೀಡಿದಾಗ ಕುಂಜಿಲ ಪೈನೆರಿ ಮಸೀದಿ ಧರ್ಮಗುರುಗಳಾದ ಮುಬಶೀರ್‌ ಅಹಸನಿ, ಕಕ್ಕಬೆ ಇಗ್ಗುತಪ್ಪ ದೇವಸ್ಥಾನದ ಅರ್ಚಕರಾದ ಶ್ರೀಕಾಂತ್‌ ಸ್ವಾಮಿ, ಕುಂಜಿಲ ಊರಿನ ಹಿರಿಯ ವಿದ್ವಾಂಸರಾದ ಹುಸೈನ್‌ ಖಾಸಿಮಿ ಪಯಡತ್ತಂಡ, ಯವಕಾಪಾಡಿ ಭಗವತಿ ದೇವಸ್ಥಾನದ ಅರ್ಚಕರಾದ ಪದ್ಮನಾಭ ಸ್ವಾಮಿ, ಇಗ್ಗುತ್ತಪ್ಪ ಭಕ್ತ ಮಂಡಳಿ ಅಧ್ಯಕ್ಷರಾದ ಲವ ಬಾಚಮಂಡ , ಕೊಡಗು ಮುಸ್ಲಿಂ ಜಮಾತ್‌ ಕಾರ್ಯದರ್ಶಿಗಳಾದ ಮೊಹಮ್ಮದ್‌ ಹಾಜಿ ಕುಂಜಿಲ, ಕುಂಜಿಲ ಕಕ್ಕಬೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸಂಪ ಕಲಿಯಂಡ, ಮೆಹಬೂಬ್‌ ಮಾಸ್ಟರ್‌ ಮತ್ತು ಮರಂದೋಡ ದೇವಸ್ಥಾನದ ಅರ್ಚಕರಾದ ಸಂತೋಷ್‌ ಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.

ದುಬೈ ಕನ್ನಡ ಸಂಘವು ತಾಯ್ನಾಡಲ್ಲಿ ಆಹಾರ ವಿತರಣೆ ಅಭಿಯಾನದ ಮೂಲಕ ಕಳೆದ ಒಂದುವರೆ ತಿಂಗಳಿಂದ ಸತತವಾಗಿ ಬೆಂಗಳೂರು, ಮೈಸೂರು, ಮಂಗಳೂರು, ಕೊಡಗು ಮುಂತಾದ ಕಡೆಗಳಲ್ಲಿ ದಿನಸಿ ಕಿಟ್‌ ಮತ್ತು ಆಹಾರ ಪೊಟ್ಟಣ ವಿತರಿಸುತ್ತಿದ್ದು ಟಿವಿ5 ಕನ್ನಡ ಅವರ ಆದಿವಾಸಿಗಳಿಗೆ ಅನ್ನಯಾನ ಅಭಿಯಾನದೊಂದಿಗೂ ಕೈ ಜೋಡಿಸಿದ್ದು, ಬೆಂಗಳೂರಿನ ಉಸಿರು ತಂಡದ ಸಹಾಯದೊಂದಿಗೆ ವಿವಿಧ ಕನ್ನಡ ಸಂಘಟನೆಗಳೊಂದಿಗೆ ಚಾಮರಾಜ ನಗರ ನಾಗರಹೊಳೆ ಅಧಿವಾಸಿಗಳಿಗೆ, ಎಚ್‌.ಡಿ.

ಕೋಟೆ, ಬಾವಲಿ, ಸೀಗೂರು ಹಾಡಿಯ ಬುಡಕಟ್ಟು ಜನಾಂಗದ 1000 ಕುಟುಂಬಗಳಿಗೆ ಒಂದು ತಿಂಗಳಿಗಾಗುವಷ್ಟು ದಿನಸಿ ಕಿಟ್‌ ತಲುಪಿಸಿ¨ªಾರೆ. ಮಡಿಕೇರಿಯಲ್ಲಿ ಕೊಡಗು ರಕ್ಷಣಾ ವೇದಿಕೆಯವರು ನಡೆಸುತ್ತಿದ್ದ ನಮ್ಮವರಿಗಾಗಿ ಆಹಾರ ಅಭಿಯಾನದಲ್ಲೂ ಕೈಜೋಡಿಸಿ ಸಹಾಯ ಮಾಡಿದಲ್ಲದೆ, ಸೋಮವಾರಪೇಟೆ ಕೇಂದ್ರೀಕರಿಸಿ ಎಲ್ಲ ಧರ್ಮದ ಧರ್ಮ ಗುರುಗಳಿಗೆ ಆಹಾರ ರೇಷನ್‌ ಕಿಟ್‌ ನೀಡಲು ಸಹ ಸಿದ್ಧತೆ ನಡೆಯುತ್ತಿದೆ  ಈ ಕಾರ್ಯಕ್ಕೆ ಮುಖ್ಯವಾಗಿ ಉದ್ಯಮಿ ಮೊಹಮ್ಮದ್‌ ಮುಸ್ತಫಾ, ದುಬೈ ಕನ್ನಡ ವೈದ್ಯರು ಮತ್ತು ಅನಿವಾಸಿ ಯುಎಇ  ಕನ್ನಡಿಗರು ಆರ್ಥಿಕವಾಗಿ ಸಹಾಯ ಮಾಡಿದ್ದರು.

ಈ ಕಾರ್ಯದಲ್ಲಿ ಹೆಮ್ಮೆಯ ದುಬೈ ಕನ್ನಡ ಸಂಘದ ಅಧ್ಯಕ್ಷೆ ಮಮತಾ ಮೈಸೂರು, ಸಮಿತಿ ಸದಸ್ಯರಾದ ಸುದೀಪ್‌ ದಾವಣಗೆರೆ, ರಫೀಕಲಿ ಕೊಡಗು, ಸೆಂತಿಲ್‌ ಬೆಂಗಳೂರು, ವಿಷ್ಣುಮೂರ್ತಿ ಮೈಸೂರು, ಮಮತಾ ಶಾರ್ಜಾ, ಪಲ್ಲವಿ ದಾವಣಗೆರೆ, ಹಾದಿಯ ಮಂಡ್ಯ, ಡಾ| ಸವಿತಾ ಮೈಸೂರು, ಅನಿತಾ ಬೆಂಗಳೂರು, ಶಂಕರ್‌ ಬೆಳಗಾವಿ, ಮೊಯಿನುದ್ದೀನ್‌ ಹುಬ್ಬಳ್ಳಿ ಹಾಗೂ ಉಪಸಮಿತಿ ಸದಸ್ಯರು, ದುಬೈ ಕೂರ್ಗ್‌ ಓಲ್ಡ… ಸ್ಟುಡೆಂಟ್ಸ… ಅಸೋಸಿಯೇಷನ್‌ ಪದಾಧಿಕಾರಿಗಳಾದ ಹುಸೈನ್‌ ಸೋಮವಾರಪೇಟೆ, ಅಬ್ದುಲ್ಲಾ  ಕೊಂಡಂಗೇರಿ, ಶಂ ನಾಪೋಕ್ಲು, ರಫೀಕಲಿ ಕುಂಡಂದ ಕುಂಜಿಲ, ಶಾಫಿ ಅಜಾದ್‌ ಕೊಟ್ಟಮುಡಿ, ನೌಶೀರ್‌ ಎಡಪಾಲ ಮೊದಲಾದವರು ಕಾರ್ಯನಿರ್ವಹಿಸುತ್ತಿದ್ದಾರೆ.

ಟಾಪ್ ನ್ಯೂಸ್

fytryrty5

ಮದ್ಯದ ದೊರೆ ವಿಜಯ್​ ಮಲ್ಯ ‘ದಿವಾಳಿ’: ಲಂಡನ್​ ಹೈಕೋರ್ಟ್ ಮಹತ್ವದ ಘೋಷಣೆ

cvcxvgdfgd

ಚಾರ್ಮಾಡಿ ಘಾಟಿನಲ್ಲಿ ಶಾಸಕರ ಬೆಂಬಲಿಗರ ವಾಹನಕ್ಕಿಲ್ಲತಡೆ:ಖಾಕಿ ವಿರುದ್ಧ ಜನಸಾಮಾನ್ಯರ ಆಕ್ರೋಶ

dghtrytr

ಹಿಂದೂ ದೇಗುಲದ ಹಣ ಅನ್ಯಮತೀಯ ಪ್ರಾರ್ಥನಾ ಕೇಂದ್ರಗಳಿಗೆ ತಡೆ, ಸರ್ಕಾರದಿಂದ ಅಧಿಕೃತ ಆದೇಶ

fgdfgdfgd

ಚಿತ್ರರಂಗದಲ್ಲಿ ನಟಿಯರನ್ನು ಕೇವಲ ಬೋಗದ ವಸ್ತುಗಳಂತೆ ನೋಡುತ್ತಾರೆ : ನಟಿ ಮಹಿಕಾ ಶರ್ಮಾ

ತುಂಗಾಭದ್ರಾ ನದಿಗೆ 1.40 ಲಕ್ಷ  ಕ್ಯೂಸೆಕ್ಸ್ ನೀರು ಬಿಡುಗಡೆ: ಜಲಾವೃತಗೊಂಡ ಕಂಪ್ಲಿ ಸೇತುವೆ

ತುಂಗಾಭದ್ರಾ ನದಿಗೆ 1.40 ಲಕ್ಷ  ಕ್ಯೂಸೆಕ್ಸ್ ನೀರು ಬಿಡುಗಡೆ: ಜಲಾವೃತಗೊಂಡ ಕಂಪ್ಲಿ ಸೇತುವೆ

dryryry5

ಬಿಎಸ್‌ವೈ ರಾಜೀನಾಮೆಗೆ ಅತಿಯಾದ ಭ್ರಷ್ಟಾಚಾರ ಕಾರಣ : ಮಾಜಿ ಸಿಎಂ ಸಿದ್ದರಾಮಯ್ಯ

ggyyrty

ನೂತನ ಸಿಎಂ ಬಳಿಕ ಸಂಪುಟ ಪುನಾರಚನೆ ಸಾದ್ಯತೆ ಬಗ್ಗೆ ಸಚಿವ ಶಿವರಾಮ್ ಹೆಬ್ಬಾರ ಹೇಳಿದ್ದೇನು?ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Book Review  by Parvathi G Aithal

ಘಟನೆಗಳ ವಿವರಗಳೊಂದಿಗೆ ಬದುಕನ್ನು ಕಟ್ಟಿಕೊಡುವ ‘ಕಾಲಕೋಶ’

ಚಿತ್ರಮಂದಿರಗಳೂ ಸ್ಥಳೀಯ ಆರ್ಥಿಕತೆಯೂ…

ಚಿತ್ರಮಂದಿರಗಳೂ ಸ್ಥಳೀಯ ಆರ್ಥಿಕತೆಯೂ…

ಉಂಡವನೇ ಬಲ್ಲ ಕುಚ್ಚಲಕ್ಕಿ ಗಂಜಿಯ ರುಚಿ, ಸತ್ವ

ಉಂಡವನೇ ಬಲ್ಲ ಕುಚ್ಚಲಕ್ಕಿ ಗಂಜಿಯ ರುಚಿ, ಸತ್ವ

ಸರಕಾರಿ ಶಾಲೆಗಳಲ್ಲಿ ದಾಖಲೆಯ ದಾಖಲಾತಿ !

ಸರಕಾರಿ ಶಾಲೆಗಳಲ್ಲಿ ದಾಖಲೆಯ ದಾಖಲಾತಿ !

sfdADSFds

ಮಿರಾಕಲ್‌ ಗಾರ್ಡನ್

MUST WATCH

udayavani youtube

ಕೊಟ್ಟಿಗೆಹಾರ ಚೆಕ್ ಪೋಸ್ಟ್ ನಲ್ಲಿ ಘಟನೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ನಿಗೆ ಮಣಿದ ಪೊಲೀಸರು

udayavani youtube

ಜಾನುವಾರುಗಳ ರೋಗಕ್ಕೆ ಸುಲಭ ಚಿಕಿತ್ಸೆ- ‘ನಾಟಿ’ಮದ್ದು ಔಷಧ ಪದ್ಧತಿಯ ಪರಿಚಯ…

udayavani youtube

ಈ ಭ್ರಷ್ಟ ಸರ್ಕಾರವೇ ತೊಲಗಲಿ ಎನ್ನುವುದು ನಮ್ಮ ನಿಲುವು

udayavani youtube

ತಾಯಿಯಿಲ್ಲದ ತಬ್ಬಲಿ ನಾಯಿಮರಿಗಳಿಗೆ ಹಾಲುಣಿಸಿ ಮಾತೃ ವಾತ್ಸಲ್ಯ ತೋರುತ್ತಿರುವ ಹಂದಿ

udayavani youtube

ಯಮಗರ್ಣಿ ಬಳಿ ರಾಷ್ತ್ರೀಯ ಹೆದ್ದಾರಿ ಸಂಚಾರಕ್ಕೆ ಮುಕ್ತ

ಹೊಸ ಸೇರ್ಪಡೆ

ಹಾಕಿ: ವನಿತೆಯರಿಗೆ ಮತ್ತೂಂದು ಆಘಾತ

ಹಾಕಿ: ವನಿತೆಯರಿಗೆ ಮತ್ತೂಂದು ಆಘಾತ

fytryrty5

ಮದ್ಯದ ದೊರೆ ವಿಜಯ್​ ಮಲ್ಯ ‘ದಿವಾಳಿ’: ಲಂಡನ್​ ಹೈಕೋರ್ಟ್ ಮಹತ್ವದ ಘೋಷಣೆ

cvcxvgdfgd

ಚಾರ್ಮಾಡಿ ಘಾಟಿನಲ್ಲಿ ಶಾಸಕರ ಬೆಂಬಲಿಗರ ವಾಹನಕ್ಕಿಲ್ಲತಡೆ:ಖಾಕಿ ವಿರುದ್ಧ ಜನಸಾಮಾನ್ಯರ ಆಕ್ರೋಶ

dghtrytr

ಹಿಂದೂ ದೇಗುಲದ ಹಣ ಅನ್ಯಮತೀಯ ಪ್ರಾರ್ಥನಾ ಕೇಂದ್ರಗಳಿಗೆ ತಡೆ, ಸರ್ಕಾರದಿಂದ ಅಧಿಕೃತ ಆದೇಶ

fgdfgdfgd

ಚಿತ್ರರಂಗದಲ್ಲಿ ನಟಿಯರನ್ನು ಕೇವಲ ಬೋಗದ ವಸ್ತುಗಳಂತೆ ನೋಡುತ್ತಾರೆ : ನಟಿ ಮಹಿಕಾ ಶರ್ಮಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.