ಲೋಹದ ಹಕ್ಕಿಗಳ ಸೇವೆಯಲ್ಲಿ ಸುಧಾರಣೆ

Team Udayavani, Oct 20, 2019, 5:03 AM IST

ದೇಶಿಯ ವಿಮಾನಯಾನ ಸೇವೆಯಲ್ಲಿ ಚೇತರಿಕೆ ಕಾಣುತ್ತಿದೆ. ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಈ ಬಾರಿ ದೇಶಿಯ ವಿಮಾನಯಾನ ಸೇವೆಯಲ್ಲಿ ಶೇ.1.18 ಹೆಚ್ಚಳ ಕಂಡು ಬಂದಿದೆ. ಇನ್ನು ಜೆಟ್‌ ಏರ್‌ವೇಸ್‌ ಸೇವೆಯಿಂದ ಹಿಂದೆ ಸರಿದ ಪರಿಣಾಮ ಈ ವರ್ಷದ ಚಳಿಗಾಲದ ಸೇವೆಯಲ್ಲಿ ವಿಸ್ಟಾರ ಸಂಸ್ಥೆ ತನ್ನ ಬೇಡಿಕೆಯನ್ನು ಹೆಚ್ಚಿಸಿಕೊಂಡಿದೆ.

3.87
2018ರ ಆಗಸ್ಟ್ ಮತ್ತು 2019 ಆಗಸ್ಟ್ ನಲ್ಲಿ ವಿಮಾನ ಸೇವೆಯಲ್ಲಿ ಯಾವುದೇ ಏರಿಳಿತ ಕಂಡು ಬಂದಿಲ್ಲ. ಜುಲೈ ತಿಂಗಳಿಗೆ ಹೋಲಿಸಿದರೆ ಈ ವರ್ಷ ಮತ್ತು ಹಿಂದಿನ ವರ್ಷಕ್ಕಿಂತ ಶೇ 3.87 ರಷ್ಟು ಪ್ರಯಾಣಿಕರು ಹೆಚ್ಚಾಗಿದ್ದರೆ.

1.18
ಸೆಪ್ಟಂಬರ್‌ ತಿಂಗಳಿನಲ್ಲಿ ಒಟ್ಟು ಪ್ರಯಾಣಿಕರ ಸಂಖ್ಯೆಯಲ್ಲಿ ಶೇ.1.18ರಷ್ಟು ವೃದ್ಧಿಯಾಗಿದೆ.

11.79 ಮಿಲಿಯನ್‌
ಕಳೆದ ವರ್ಷ ಇದೇ ಅವಧಿಗೆ 11.35 ಮಿಲಿಯನ್‌ (1,135 ಕೋಟಿ) ಪ್ರಯಾಣಿಕ ರನ್ನು ಭಾರತೀಯ ವಿಮಾನಯಾನ ಸಂಸ್ಥೆ ಕಂಡಿದ್ದರೆ, ಈ ವರ್ಷ 11.79 ಮಿಲಿಯನ್‌ (1,179 ಕೋಟಿ) ಪ್ರಯಾಣಿಕರು ದೇಶಿಯ ವಿಮಾನ ಸೇವೆ ಬಳಸಿದ್ದಾರೆ.

48.2
ಇಂಡಿಗೋ ಪ್ರಸ್ತುತ ದೇಶಿಯ ವಿಮಾನ ಯಾನದ ಶೇ.48.2 ಪಾಲನ್ನು ಹೊಂದಿದ್ದು, ಅಗ್ರಸ್ಥಾನದಲ್ಲಿದೆ. ಸ್ಪೆ „ಸ್‌ಜೆಟ್‌ ಏರ್‌ಲೈನ್ಸ್‌ನ ಪಾಲು ಶೇ.14.7ರಿಂದ 5.5ಕ್ಕೆ ಇಳಿಕೆಯಾಗಿದೆ. ಏರ್‌ಇಂಡಿಯಾ ಶೇ.13, ಗೋಏರ್‌ ಶೇ.11.5, ಏರ್‌ಏಷ್ಯಾ ಶೇ.6.3 ಮತ್ತು ವಿಸ್ಟಾರದ ಪಾಲು ಶೇ.5.8
ರಷ್ಟು ಇದೆ.

ಈ ಚಳಿಗಾಲದಲ್ಲಿ ಸುಧಾರಣೆ
ಈ ವರ್ಷದ ಚಳಿಗಾಲದಲ್ಲಿ ಭಾರತೀಯ ವಿಮಾನಯಾನ ಸಂಸ್ಥೆಗಳು ಹಿಂದಿನ ನಷ್ಟವನ್ನು ಮೀರಿ ಬೆಳೆಯಲಿವೆ ಎಂದು ಅಂದಾಜಿಸಲಾಗುತ್ತಿದೆ. ಜೆಟ್‌ಏರ್‌ ವೇಸ್‌ ತನ್ನ ಸೇವೆ ನಿಲ್ಲಿಸಿದ ಬಳಿಕ ಉಳಿದ ವಿಮಾನಯಾನ ಸಂಸ್ಥೆಗಳು ಆ ಬೇಡಿಕೆಯನ್ನು ಪಡೆದುಕೊಂಡಿವೆ. ಅಕ್ಟೋಬರ್‌ ಬಳಿಕದ ತಿಂಗಳುಗಳನ್ನು ಚಳಿಗಾಲ ಎಂದು ಕರೆಯಲಾಗುತ್ತದೆ.

23,403
ಚಳಿಗಾಲದ ಅವಧಿಯಲ್ಲಿ ಪ್ರತಿ ಒಂದು ವಾರ 103 ವಿಮಾನ ನಿಲ್ದಾಣಗಳಿಗೆ 23,403 ಪ್ರಯಾಣ ಸೇವೆಗ ಳನ್ನು ಭಾರತೀಯ ವಿಮಾನಯಾನ ಸಂಸ್ಥೆ ನೀಡಲಿದೆ.

3,247
ಕಳೆದ ಚಳಿಗಾಲದಲ್ಲಿ ಸೇವೆ ನೀಡುತ್ತಿದ್ದ ಜೆಟ್‌ ಏರ್‌ವೆàಸ್‌ ಒಂದು ವಾರದಲ್ಲಿ 3,247 ವಿಮಾನಗಳನ್ನು ದೇಶದ ಬಹುತೇಕ ಪ್ರಮುಖ ವಿಮಾನ ನಿಲ್ದಾಣಗಳತ್ತ ಕಳುಹಿಸಿಕೊಡಲಾಗುತ್ತಿತ್ತು. ಇತರ ವಿಮಾನಯಾನ ಸಂಸ್ಥೆಗಳು ಇದರ ಅರ್ಧದಷ್ಟಿದ್ದವು.

ವಿಸ್ಟಾರಕ್ಕೆ ಬೇಡಿಕೆ ಹೆಚ್ಚು
ಆಗಸ್ಟ್‌ ಮತ್ತು ಸೆಪ್ಟಂಬರ್‌ ತಿಂಗಳಲ್ಲಿ ಕುಸಿತ ಕಂಡಿದ್ದ ವಿಸ್ಟಾರ ಸಂಸ್ಥೆ ಚಳಿಗಾಲದಲ್ಲಿ ಅತೀ ಹೆಚ್ಚು ಬೇಡಿಕೆ ಯನ್ನು ಹೊಂದಿವೆ. ಮುಂಬರುವ ಚಳಿಗಾಲಕ್ಕೆ ವಿಸ್ಟಾರದ ಬೇಡಿಕೆ ಹೆಚ್ಚಾಗಿದೆ. ಸ್ಪೈಸ್‌ ಜೆಟ್‌, ಏರ್‌ ಏಷ್ಯಾ ಇಂಡಿಯಾ ಬಳಿಕದ ಸ್ಥಾನದಲ್ಲಿವೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ