Udayavni Special

ಜನಸೇವೆಯೊಂದಿಗೆ ಕೊರೊನಾ  ಹರಡುವಿಕೆ ನಿಯಂತ್ರಿಸಿದ ದುಬೈ


Team Udayavani, Jun 5, 2021, 1:22 PM IST

Dubai controlled by the corona spread

ಕೊರೊನಾ ಪ್ರಾರಂಭವಾದ ಸಮಯ. ಚೀನ ದೇಶದ ಅನಂತರ ಅತೀ ಹೆಚ್ಚು ಸೋಂಕು ವೇಗವಾಗಿ ಹರಡುತ್ತಿದ್ದ ಒಂದು ಸ್ಥಳವಾಗಿತ್ತು ದುಬಾೖ ಕಾರಣ ಇಲ್ಲಿ 196 ದೇಶಗಳ ಜನರಿದ್ದಾರೆ, ಈ ದೇಶಗಳಿಂದ ನಿತ್ಯವೂ ಅನೇಕರು ಬಂದುಹೋಗುತ್ತಾರೆ. ಹೆಚ್ಚಾಗಿ ಚೀನಾದವರೇ ಇಲ್ಲಿ ವ್ಯವಹಾರದಲ್ಲಿ ತೊಡಗಿಕೊಂಡಿದ್ದಾರೆ. ಆ ಮೂಲಕ ಅಥವಾ ಇತರ ಮೂಲಗಳಿಂದ ಸೋಂಕು ದುಬೈಯಲ್ಲಿ ನಿರಂತರ ಹೆಚ್ಚಾಗುತ್ತಿತ್ತು.

ಸೋಂಕು ಹರಡಿದ ತತ್‌ಕ್ಷಣ ಇಲ್ಲಿನ ಆಡಳಿತಾಧಿಕಾರಿಗಳು ಲಾಕ್‌ಡೌನ್‌ ಮಾಡಿ ದ್ದಲ್ಲದೆ ಅತಿಯಾಗಿ ಸೋಂಕು ಹರಡಿದ ಪ್ರದೇಶಗಳನ್ನು ಸೀಲ್‌ಡೌನ್‌ ಮಾಡಿದರು. ಲಾಕ್‌ಡೌನ್‌ನಿಂದ ಜನರು ಸಂಕಷ್ಟಕ್ಕೆ ಸಿಲುಕ

ಬಾರದು ಎಂದು ಇಲ್ಲಿ ವಾಸಿಸುವ ಎಲ್ಲರಿಗೂ 100 ಮಿಲಿಯನ್‌ ಮೀಲ್‌ ಎಂಬ ಅಭಿಯಾನ ದೊಂದಿಗೆ ಮೂರು ಹೊತ್ತಿನ ಆಹಾರ ವಿತರಣೆ, ಆಸ್ಪತ್ರೆ ಚಿಕಿತ್ಸೆ ಮೊದಲಾದ ತುರ್ತು ಕಾರ್ಯಗಳನ್ನು ಪ್ರಾರಂಭಿಸಿದರು. ಇದಕ್ಕಾಗಿ ದುಬಾೖ ಹೆಲ್ತ್‌ ಅಥಾರಿಟಿ ಮತ್ತು ದುಬಾೖ ಪೊಲೀಸರಿಗೆ ಜವಾಬ್ದಾರಿ ನೀಡಲಾಯಿತು. ಆಹಾರ ವಿತರಣೆ ಮತ್ತು ಕೋವಿಡ್‌ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸುವ ಕೆಲಸಗಳಿಗೆ ಸ್ವಯಂ ಸೇವಕರ ಅಗತ್ಯವಿತ್ತು. ಆಗ ಹೆಲ್ತ್‌ ಅಥಾರಿಟಿ ಮತ್ತು ದುಬೈ ಪೊಲೀಸರು ಇಲ್ಲಿನ ವಿವಿಧ ಸಂಘ ಸಂಸ್ಥೆಗಳಿಗೆ ಸೇವೆ ಸಲ್ಲಿಸಲು ಅವಕಾಶ ನೀಡಿದರು. ಇವರಿಗೆ ದುಬೈ ಹೆಮ್ಮೆಯ ಯುಎಇ ಕನ್ನಡಿಗರ ಸಂಘವೂ ಸಾಥ್‌ ನೀಡಿತು.

ಇದರಲ್ಲಿ ಭಾಗಿಯಾದ ಪ್ರತಿಯೊಂದು ಸಂಘಸಂಸ್ಥೆಗಳು ದುಬೈ ಸರಕಾರದ ಪ್ರಮುಖರ ಸೂಚನೆ ಮೇರೆಗೆ ಆಹಾರ, ಔಷಧ ವಿತರಿಸಲು, ಕೋವಿಡ್‌ ರೋಗಿಗಳನ್ನು ಆಸ್ಪತ್ರೆ, ಐಸೊಲೇಶನ್‌ ಕೇಂದ್ರಗಳಿಗೆ ಸಾಗಿ

ಸಲು ಮೊದಲಾದ ಕಾರ್ಯಗಳಿಗೆ ಉಪ ತಂಡಗಳನ್ನು ರಚಿಸಿ ಲಾಕ್‌ಡೌನ್‌ ವೇಳೆ ಹೆಚ್ಚಿನವರಿಗೆ ಸಹಾಯ ತಲುಪಿಸುವ ಕಾರ್ಯ ಮಾಡಿತು.  ಹಲವು ಖಾಸಗಿ ಹೊಟೇಲ್‌ಗ‌ಳನ್ನು  ಸರಕಾರ ಉಚಿತ ಕೋವಿಡ್‌ ಐಸೊ ಲೇಶನ್‌ ಸೆಂಟರ್‌ಗಳನ್ನಾಗಿ ಮಾಡಿತ್ತು ಮತ್ತು ಎಲ್ಲ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್‌ ಸೋಂಕಿತರಿಗೆ ಉಚಿತ ಚಿಕಿತ್ಸೆ ಒದಗಿಸ ಲಾಯಿತು. ಸೋಂಕಿತರಿಗೆ ಐಸೊಲೇಶನ್‌ ಮಾಡಲು ಸೂಚಿಸಿದಾಗ ಎಲ್ಲರೂ ಚಾಚೂ  ತಪ್ಪದೆ ಇದ್ದನ್ನು ಪಾಲಿಸಿದ್ದರು.

ಯೋಜನ ಪೂರಕವಾಗಿ ನಡೆದ ನಿಯಂತ್ರಣ ಕ್ರಮ ಮತ್ತು ಲಕ್ಷಾಂತರ ರೂ. ಗಳ ದಂಡಕ್ಕೆ ಹೆದರಿ ಹೆಚ್ಚಿನವರು ಮನೆಯಲ್ಲೇ ಉಳಿದುಕೊಂಡಿದ್ದರಿಂದ ಹಾಗೂ ಲಾಕ್‌ಡೌನ್‌ ಅನಂತರ ಮಾಸ್ಕ್, ಸಾಮಾಜಿಕ ಅಂತರ ಪಾಲನೆ ಮೊದಲ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದರಿಂದ ಇವತ್ತು ದುಬಾೖಯಲ್ಲಿ ಕೋವಿಡ್‌ ಹರಡುವಿಕೆ ಬಹಳ ಕಡಿಮೆಯಾಗಿದೆ.

ದುಬೈ ಹೆಮ್ಮೆಯ ಯುಎಇ ಕನ್ನಡಿಗರು ಸಂಘದ ಪ್ರಮುಖರು, ಉಪ ಸಮಿತಿ ಸದಸ್ಯರು ಸೇರಿ ದಾನಿಗಳ ನೆರವಿನಿಂದ ಸಂಕಷ್ಟದಲ್ಲಿದ್ದ ಕನ್ನಡಿಗರು ಸೇರಿ ಹಲವು ಭಾರತೀಯರು ಮತ್ತು ವಿದೇಶಿಯರಿಗೆ ಸಹಾಯ ಮಾಡಿದರು.  ಕಳೆದ ವರ್ಷ ಸಂಯುಕ್ತ ಅರಬ್‌ ಸಂಸ್ಥಾನದಲ್ಲಿ ಲಾಕ್‌ಡೌನ್‌ ವೇಳೆ 19 ಲಕ್ಷ ರೂ. ಗಳ ಆಹಾರ ಕಿಟ್‌ ವಿತರಿಸಿದ್ದಲ್ಲದೆ ಸಂಕಷ್ಟದಲ್ಲಿದ್ದವರಿಗೆ ತಾಯಿನಾಡು ಮರಳಲು ಉಚಿತ ವಿಮಾನ ಟಿಕೆಟ್‌, ಚಿಕಿತ್ಸೆ ಸೌಲಭ್ಯಗಳನ್ನು ಮಡಲಾಯಿತು. ಈ ವರ್ಷ ಕರ್ನಾಟಕದ ಬೆಂಗಳೂರು ಮೈಸೂರು ಮಂಗಳೂರು ಸೇರಿದಂತೆ ಹಲವು ಭಾಗಗಳಲ್ಲಿ ಬಡವರಿಗೆ ರೇಷನ್‌ ಕಿಟ್‌ ಮತ್ತು ಆಹಾರ ಪೊಟ್ಟಣ ವಿತರಿಸಲಾಯಿತು.

ಒಟ್ಟಿನಲ್ಲಿ ಕಟ್ಟುನಿಟ್ಟಿನ ನಿಯಮದೊಂದಿಗೆ ಜನಸೇವೆಗೆ ಆದ್ಯತೆ ನೀಡಿದ ದುಬೈ ರಾಜಕುಮಾರರಾದ ಶೇಕ್‌ ಖಲೀಫಾ ಬಿನ್‌ ಜಾಯೆದ್‌ ಮತ್ತು ಶೇಕ್‌ ಮೊಹಮ್ಮದ್‌ ಬಿನ್‌ ಮುಕು¤ಮ್‌ ಇವರ ನೇತೃತ್ವದಲ್ಲಿ ಇಲ್ಲಿನ ಜನರಿಗೆ ಅತ್ಯುತ್ತಮ ಆರೋಗ್ಯ ಸೇವೆ, ಸಮಯಕ್ಕೆ ಸರಿಯಾಗಿ ಆಹಾರ ವ್ಯವಸ್ಥೆ ಸೌಲಭ್ಯ ಕಲ್ಪಿಸಿದ್ದು ಮಾತ್ರವಲ್ಲದೆ ದುಬಾರಿ ದಂಡದ ಪರಿಣಾಮವೇ ಕೊರೊನಾ ನಿಯಂತ್ರಣ ಸಾಧ್ಯವಾಯಿತು ಎಂದರೆ ತಪ್ಪಾಗಲಾರದು. ಅಲ್ಲದೇ ಕೋವಿಡ್‌ ವ್ಯಾಕ್ಸಿನ್‌ ಕಂಡುಹಿಡಿದ ಆರಂಭದಲ್ಲೇ ಮೊದಲ ಡೋಸ್‌ ಅನ್ನು ಶೇಕ್‌ ಮೊಹಮ್ಮದ್‌ ತೆಗೆದುಕೊಳ್ಳುವ ಮೂಲಕ ನಾಗರಿಕರಲ್ಲಿ ವ್ಯಾಕ್ಸಿನ್‌ ಪಡೆಯಲು ಧೈರ್ಯ ತುಂಬಿ ಮಾದರಿಯಾದರು.

ಸಿಕ್ಕಿದ್ದರಲ್ಲಿ ತೃಪ್ತಿ ಪಡಬೇಕಾದ ಕಾಲ

ದೇಶದ ಬಹುಪಾಲು ಜನರಿಗೆ ಅನಾರೋಗ್ಯ ಕಾಣಿಸಿಕೊಂಡಾಗ ಎಷ್ಟೇ ಮುಂದುವರಿದ ದೇಶಗಳೂ ಸರಿಯಾದ ವ್ಯವಸ್ಥೆ ಮಾಡುವುದು ಸಾಧ್ಯವಿಲ್ಲ. ಇದಕ್ಕೆ ಸರಕಾರ, ಆರೋಗ್ಯ ವ್ಯವಸ್ಥೆಯ ನಿರ್ಲಕ್ಷ್ಯ ಎಂದು ಹೇಳಲು ಸಾಧ್ಯವಿಲ್ಲ. ಕೋಟ್ಯಂತರ ಜನರಲ್ಲಿ ಎಷ್ಟು ಮಂದಿಗೆ ಏಕಕಾಲಕ್ಕೆ ಎಲ್ಲ ಸೌಲಭ್ಯ ತಲುಪಿಸಲು ಸಾಧ್ಯವಾಗುತ್ತದೆ? ಎಷ್ಟೋ ಬಾರಿ ಅದರಲ್ಲೂ ಮುಖ್ಯವಾಗಿ ಕೋವಿಡ್‌ ಸಂಕಷ್ಟದ ವೇಳೆ  ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸುವಾಗ ಹಲವು ಜನರ ಸಂಕಷ್ಟಕ್ಕೆ ಸ್ಪಂದಿಸಲು ಸಾಧ್ಯವಾಗದೆ ನಿರಾಸೆ ಪಟ್ಟವರಲ್ಲಿ ನಾನೂ ಒಬ್ಬ. ಹೀಗಾಗಿ ಇಂಥ ಸಂದರ್ಭದಲ್ಲಿ ಜನರು ಆರೋಗ್ಯ ಸಂಸ್ಥೆ, ಸರಕಾರದ ಜತೆ ಕೈ ಜೋಡಿಸಿ ನಾಗರಿಕರಾಗಿ ತಮ್ಮ ಜವಾಬ್ದಾರಿಯನ್ನು ಅರಿತು ಹೋರಾಡಬೇಕು. ಸರಕಾರವೂ ಕೂಡ ಈ ವೇಳೆ ಎಲ್ಲ ಕಾಮಗಾರಿಗಳನ್ನು ನಿಲ್ಲಿಸಿ ಬಡವರಿಗೆ ಆಹಾರ, ಚಿಕಿತ್ಸೆ ನೀಡುವ ಕಡೆಗೆ ಹೆಚ್ಚಿನ ಗಮನಕೊಡಬೇಕು. ಮೊದಲಿಗೆ ದೇಶದ ಪ್ರಜೆಗಳಿಗೆ ಹಂಚಲು ಲಸಿಕೆಯ ವ್ಯವಸ್ಥೆ ಮಾಡಬೇಕು.

ಕೊರೊನಾ ಬಂದವರನ್ನು ಒಂಟಿ ಯಾಗಿಸಬೇಡಿ. ಸಾಮಾಜಿಕ ಅಂತರ ಕಾಯ್ದುಕೊಂಡು ವೈದ್ಯರು, ಸರಕಾರ ಸೂಚಿಸುವ ಮುನ್ನೆಚ್ಚರಿಕೆಗಳನ್ನು ಪಾಲಿಸಿ ಕೋವಿಡ್‌ ರೋಗಿಗಳ ಅಥವಾ ಸಾಮಾನ್ಯ ಜನರ ಸೇವೆ ಮಾಡಲು ಎಲ್ಲರೂ ಮುಂದೆ ಬರಬೇಕು. ಈಗಾಗಲೇ ಸಾಕಷ್ಟು ಮಂದಿ ಇದರಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಇದು ಭಾರತದಂಥ ದೇಶದಲ್ಲಿ ಸಾಲುವುದಿಲ್ಲ. ಹೀಗಾಗಿ ಇನ್ನಷ್ಟು ಮಂದಿ ಇದಕ್ಕೆ ಕೈ ಜೋಡಿಸಬೇಕಿದೆ. ಆಗ ಮಾತ್ರ ಕೊರೊನಾವನ್ನು ನಿಯಂತ್ರಿಸುವುದು ಖಂಡಿತ ಸಾಧ್ಯವಿದೆ.

 

ರಫೀಕಲಿ, ಕೊಡಗು, ದುಬೈ

 

 

 

 

ಟಾಪ್ ನ್ಯೂಸ್

mimi chakraborty

ನಕಲಿ ಲಸಿಕೆ ಕೇಂದ್ರದಲ್ಲಿ ಕೋವಿಡ್ ಲಸಿಕೆ ಪಡೆದ ನಟಿ, ಸಂಸದೆ ಮಿಮಿ ಚಕ್ರವರ್ತಿ! ಓರ್ವನ ಬಂಧನ

udupi dc jagadish

ಕಾನೂನು ಎಲ್ಲರಿಗೂ ಒಂದೇ,ಎಷ್ಟೇ ದೊಡ್ಡವನಾದರೂ ಕಾನೂನು ಪಾಲನೆ ಮಾಡಬೇಕು: ಉಡುಪಿ DC ವಾರ್ನಿಂಗ್

ಮುಂದಿನ ಚುನಾವಣೆಯನ್ನು ನಾವೆಲ್ಲಾ ಒಗ್ಗಟ್ಟಾಗಿ ಎದುರಿಸುತ್ತೇವೆ: ಸಚಿವ ಭೈರತಿ ಬಸವರಾಜ್

ಮುಂದಿನ ಚುನಾವಣೆಯನ್ನು ನಾವೆಲ್ಲಾ ಒಗ್ಗಟ್ಟಾಗಿ ಎದುರಿಸುತ್ತೇವೆ: ಸಚಿವ ಭೈರತಿ ಬಸವರಾಜ್

ಸೌಥಂಪ್ಟನ್ ಮೈದಾನದಿಂದ ಇಬ್ಬರು ಪ್ರೇಕ್ಷಕರನ್ನು ಹೊರಹಾಕಿದ ಐಸಿಸಿ

ಸೌಥಂಪ್ಟನ್ ಮೈದಾನದಿಂದ ಇಬ್ಬರು ಪ್ರೇಕ್ಷಕರನ್ನು ಹೊರಹಾಕಿದ ಐಸಿಸಿ

ಮಧ್ಯಪ್ರದೇಶದಲ್ಲಿ ಡೆಲ್ಟಾ ಪ್ಲಸ್ ರೂಪಾಂತರಿ ಸೋಂಕಿತೆ ಸಾವು

ಮಧ್ಯಪ್ರದೇಶದಲ್ಲಿ ಮೊದಲ ಡೆಲ್ಟಾ ಪ್ಲಸ್ ರೂಪಾಂತರಿ ಸೋಂಕಿತೆ ಸಾವು

ಎಚ್ಚರ…ಭಾರತದಲ್ಲಿ ಕಳೆದ 24ಗಂಟೆಯಲ್ಲಿ 54,069 ಕೋವಿಡ್ ಪ್ರಕರಣ ಪತ್ತೆ, 1321 ಮಂದಿ ಸಾವು

ಎಚ್ಚರ…ಭಾರತದಲ್ಲಿ ಕಳೆದ 24ಗಂಟೆಯಲ್ಲಿ 54,069 ಕೋವಿಡ್ ಪ್ರಕರಣ ಪತ್ತೆ, 1321 ಮಂದಿ ಸಾವು

delta-plus

ಮೈಸೂರಿನಲ್ಲಿ ಮತ್ತೆ ಮೂರು ಡೆಲ್ಟಾ ಪ್ಲಸ್ ಪ್ರಕರಣಗಳು ಪತ್ತೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬ್ಯಾಂಕ್‌ ಅಧಿಕಾರಿ ಹುದ್ದೆಗಳ ನೇಮಕಾತಿ

ಬ್ಯಾಂಕ್‌ ಅಧಿಕಾರಿ ಹುದ್ದೆಗಳ ನೇಮಕಾತಿ

ಎಂಬಿಇಡಿ ಜಾರಿಗೆ ಕೇಂದ್ರ ಚಿಂತನೆ : ವಿದ್ಯುತ್‌ ಬಿಲ್‌ಗೆ ಬೀಳಲಿದೆ ಕತ್ತರಿ !

ಎಂಬಿಇಡಿ ಜಾರಿಗೆ ಕೇಂದ್ರ ಚಿಂತನೆ : ವಿದ್ಯುತ್‌ ಬಿಲ್‌ಗೆ ಬೀಳಲಿದೆ ಕತ್ತರಿ !

ಕೋವಿಡ್ ಗೆ ಕುಸಿದ ಆರ್ಥಿಕತೆಗೆ ಚೇತೋಹಾರಿ ಪರಿಹಾರ

ಕೋವಿಡ್ ಗೆ ಕುಸಿದ ಆರ್ಥಿಕತೆಗೆ ಚೇತೋಹಾರಿ ಪರಿಹಾರ

ರಾಮಕೃಷ್ಣರ ಮಾತುಗಳೇ ಯುವಜನತೆಗೆ ದಾರಿದೀಪ…

ರಾಮಕೃಷ್ಣರ ಮಾತುಗಳೇ ಯುವಜನತೆಗೆ ದಾರಿದೀಪ…

ಸ್ವಾಸ್ಥ್ಯಕ್ಕಾಗಿ ಯೋಗ : ಮನ,ದೇಹ, ಆತ್ಮಗಳ ಶುದ್ಧೀಕರಣ ಪ್ರಯತ್ನ

ಸ್ವಾಸ್ಥ್ಯಕ್ಕಾಗಿ ಯೋಗ : ಮನ,ದೇಹ, ಆತ್ಮಗಳ ಶುದ್ಧೀಕರಣ ಪ್ರಯತ್ನ

MUST WATCH

udayavani youtube

ಒಲಿಂಪಿಕ್ಸ್‌ : ವನಿತಾ ಹಾಕಿಗೆ ರಾಣಿ ರಾಮ್‌ಪಾಲ್‌ ನಾಯಕಿ

udayavani youtube

udayavani youtube

ಪಾಕಿಸ್ತಾನ: ಉಗ್ರ ಹಫೀಜ್ ಸಯೀದ್ ನಿವಾಸದ ಬಳಿ ಸ್ಫೋಟ

udayavani youtube

ಜಮ್ಮು-ಕಾಶ್ಮೀರ: ಭಯೋತ್ಪಾದಕರ ಗುಂಡಿನ ದಾಳಿಗೆ ಸಿಐಡಿ ಇನ್ಸ್ ಪೆಕ್ಟರ್ ಸಾವು

udayavani youtube

‘ಸಂಚಾರಿ’ ವಿಜಯ್ ಕುರಿತ ಊಹಾಪೋಹ ಸುದ್ದಿಗಳಿಗೆ ಸ್ಪಷ್ಟನೆ ಕೊಟ್ಟ ಸಹೋದರ ವಿರೂಪಾಕ್ಷ!

ಹೊಸ ಸೇರ್ಪಡೆ

mimi chakraborty

ನಕಲಿ ಲಸಿಕೆ ಕೇಂದ್ರದಲ್ಲಿ ಕೋವಿಡ್ ಲಸಿಕೆ ಪಡೆದ ನಟಿ, ಸಂಸದೆ ಮಿಮಿ ಚಕ್ರವರ್ತಿ! ಓರ್ವನ ಬಂಧನ

aduge

ಮಣಿಪಾಲ: ಅಡುಗೆ ಅನಿಲ ಸಿಲಿಂಡರ್ ಸ್ಫೋಟ; ಅಪಾರ ಹಾನಿ

udupi dc jagadish

ಕಾನೂನು ಎಲ್ಲರಿಗೂ ಒಂದೇ,ಎಷ್ಟೇ ದೊಡ್ಡವನಾದರೂ ಕಾನೂನು ಪಾಲನೆ ಮಾಡಬೇಕು: ಉಡುಪಿ DC ವಾರ್ನಿಂಗ್

ಮುಂದಿನ ಚುನಾವಣೆಯನ್ನು ನಾವೆಲ್ಲಾ ಒಗ್ಗಟ್ಟಾಗಿ ಎದುರಿಸುತ್ತೇವೆ: ಸಚಿವ ಭೈರತಿ ಬಸವರಾಜ್

ಮುಂದಿನ ಚುನಾವಣೆಯನ್ನು ನಾವೆಲ್ಲಾ ಒಗ್ಗಟ್ಟಾಗಿ ಎದುರಿಸುತ್ತೇವೆ: ಸಚಿವ ಭೈರತಿ ಬಸವರಾಜ್

ಸೌಥಂಪ್ಟನ್ ಮೈದಾನದಿಂದ ಇಬ್ಬರು ಪ್ರೇಕ್ಷಕರನ್ನು ಹೊರಹಾಕಿದ ಐಸಿಸಿ

ಸೌಥಂಪ್ಟನ್ ಮೈದಾನದಿಂದ ಇಬ್ಬರು ಪ್ರೇಕ್ಷಕರನ್ನು ಹೊರಹಾಕಿದ ಐಸಿಸಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.