ಇ-ಕಾಮರ್ಸ್‌ ಮೂಲಕ ಉದ್ಯೋಗ ಸೃಷ್ಟಿಗೆ ಕ್ರಮ: ಡಾ| | ಅಶ್ವತ್ಥನಾರಾಯಣ


Team Udayavani, May 17, 2021, 1:00 PM IST

E-commerce

ಇಟಲಿ

ಸಂಸ್ಕೃತಿ, ಆಚಾರ ವಿಚಾರಗಳು, ರೂಢಿ ಸಂಪ್ರದಾಯಗಳನ್ನು ನಾವು ಕರಕುಶಲ ಕಾಯಕದಲ್ಲಿ ಕಾಣುತ್ತೇವೆ. ಇವುಗಳ ಮೂಲಕ ನಮ್ಮ ಇತಿಹಾಸವನ್ನು ತಿಳಿದುಕೊಳ್ಳಬಹುದು. ಇಂತಹ ಸಾಕಷ್ಟು ಕರಕುಶಲ ಕಾಯಕ ಮಾಡುತ್ತಿರುವ ಜನತೆಯ ಜತೆಗೆ ರಾಜ್ಯದಲ್ಲಿ 1 ಕೋಟಿ ಜನರಿಗೆ ಉದ್ಯೋಗವನ್ನು ಕಲ್ಪಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಇ- ಕಾಮರ್ಸ್‌ನ

ಮೂಲಕ ಎಲ್ಲರಿಗೂ ಅನುಕೂಲಕರವಾಗುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿ ಡಾ| ಸಿ.ಎನ್‌. ಅಶ್ವತ್ಥ್ ನಾರಾಯಣ ಹೇಳಿದರು.

ಸುಮಾರು ಎರಡು ತಿಂಗಳ ಬಿಡುವಿನ ಅನಂತರ  ಮೇ 1ರಂದು ವಿಶ್ವ ಕಾರ್ಮಿಕರ ದಿನದ ಪ್ರಯುಕ್ತ ಸಾಗರೋತ್ತರ ಕನ್ನಡಿಗರೊಂದಿಗೆ  “ಕರಕುಶಲ ಕಾಯಕ ಕನ್ನಡ ಮತ್ತು ನಾವು’ 26ನೇ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಸಾಗರೋತ್ತರ ಕನ್ನಡಿಗರು ನಾಡಿನ ಜನರೊಂದಿಗೆ ವಿದೇಶದಲ್ಲಿರುವ ಕನ್ನಡಿಗರನ್ನು ಸಂಪರ್ಕಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಇದು ನಿಜಕ್ಕೂ ಶ್ಲಾಘನೀಯ ಎಂದರು.

ಈ ಸಂದರ್ಭದಲ್ಲಿ  ಉಪಮುಖ್ಯ ಮಂತ್ರಿಗಳ ಮುಂದೆ ಕರ್ನಾಟಕ ಅನಿವಾಸಿ ಭಾರತೀಯ ಸಮಿತಿಗೆ ಉಪಾಧ್ಯಕ್ಷರನ್ನು ನೇಮಿಸುವ ಕುರಿತು, ಕೋವಿಡ್‌ 19ರ ಕರಾಳ ಛಾಯೆಗೆ ಕೆಲಸವನ್ನು ಕಳೆದುಕೊಂಡು ಸ್ವದೇಶಕ್ಕೆ ಆಗಮಿಸುತ್ತಿರುವ ಕನ್ನಡಿಗರಿಗೆ ಉದ್ಯೋಗ ಕಲ್ಪಿಸಲು ಸಹಾಯ ಮಾಡಬೇಕು, ತಮ್ಮ ಪ್ರಾಣವನ್ನು ಲೆಕ್ಕಿಸದೇ ಜನ ಸೇವೆ ಮಾಡುತ್ತಿರುವ ಶುಶ್ರೂಷಕರಿಗೆ ಸಂಬಳದ ಪ್ರಮಾಣ ಹೆಚ್ಚಳ ಮಾಡಲು ಮತ್ತು ಅವರಿಗೆ ಪಿಪಿಟಿ ಕಿಟ್‌ ಗಳನ್ನು ವಿತರಿಸಬೇಕು ಎನ್ನುವ ಬೇಡಿಕೆಯನ್ನು ಮಂಡಿಸಲಾಯಿತು.

ಇದಕ್ಕೆ ಉತ್ತರಿಸಿದ ಅಶ್ವತ್ಥ್ ನಾರಾಯಣ್‌ ಅವರು, ಸಾಗರೋತ್ತರ  ಕನ್ನಡಿಗರ ಈ ವೇದಿಕೆಯು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವುದು ಈಗಾಗಲೇ ಸಾಬೀತಾಗಿದೆ. ಇಂತಹ ವೇದಿಕೆಯಲ್ಲಿ ಕರ್ನಾಟಕದ ಸಾಕಷ್ಟು ಗಣ್ಯರು ಪಾಲ್ಗೊಂಡಿದ್ದರೆ. ವಿಶ್ವದಲ್ಲಿ ಇಂತಹ ಮಹತ್ವದ ಕಾರ್ಯ ನಿರ್ವಹಿಸುತ್ತಿರುವ ಸಾಗರೋತ್ತರ ಕನ್ನಡಿಗರ ಸಾಧನೆ ಮೆಚ್ಚುವಂಥದ್ದು. ಇದರ ಎಲ್ಲ ಸಂಘಟಕರಿಗೆ ಮತ್ತು ಪದಾಧಿಕಾರಿಗಳಿಗೆ ನಾಡಿನ ಜನತೆಯ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿ ಎಲ್ಲರಿಗೂ ಕಾರ್ಮಿಕ ದಿನಾಚರಣೆಯ ಶುಭ ಹಾರೈಸಿದರು.

ಎನ್‌ಆರ್‌ಐ ಫೋರಂಗೆ ಉಪಾಧ್ಯಕ್ಷರ ನೇಮಕಕ್ಕೆ ತತ್‌ಕ್ಷಣ ಮುಖ್ಯಮಂತ್ರಿಯವರೊಂದಿಗೆ ಮಾತನಾಡಿ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ ಅವರು, ವಿದೇಶದಲ್ಲಿ ಕೆಲಸ ಕಳೆದುಕೊಂಡು ಸ್ವದೇಶಕ್ಕೆ ಬಂದವರು ಪೋರ್ಟಲ್‌ನಲ್ಲಿ ಹೆಸರು ನೋಂದಾಯಿಸಲು ಸೂಚಿಸಿದ್ದೇವೆ.

ಕಳೆದ ಬಾರಿ 10 ಸಾವಿರ ಜನ ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ. ಅಂಥವರಿಗೆ ಸಾಕಷ್ಟು ಕಂಪೆನಿಗಳ ಲಿಂಕ್‌ ನೀಡಿ ಅವರಿಗೆ ಕೆಲಸ ನೀಡುವ ವ್ಯವಸ್ಥೆಯನ್ನು ಮಾಡಿದ್ದೇವೆ ಎಂದು ತಿಳಿಸಿದರು.

ಕೋವಿಡ್‌ನ‌ ಮೊದಲನೇ ಅಲೆಯನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದ್ದೆವು. ಆದರೆ ಎರಡನೇ ಅಲೆ ಇಷ್ಟೊಂದು ಅನಾಹುತವನ್ನು ಸೃಷ್ಟಿ ಮಾಡುತ್ತದೆ ಎಂದು ಗೊತ್ತಿರಲಿಲ್ಲ. ಅದರ ನಿರ್ವಹಣೆಯ ಸುರಕ್ಷೆಯ ವ್ಯವಸ್ಥೆಯೂ ನಡೆಯುತ್ತಿದೆ. ಯಾರೂ ಭಯ ಪಡುವ ಅವಶ್ಯಕತೆ ಇಲ್ಲ ಎಂದರು.

ಸಂವಾದ ಕಾರ್ಯಕ್ರಮದಲ್ಲಿ  ಅಧ್ಯಕ್ಷರಾದ ಚಂದ್ರಶೇಖರ ಲಿಂಗದಳ್ಳಿ ಮಾತನಾಡಿ,  ರಾಜ್ಯದಲ್ಲಿ  ಬಾಗಲಕೋಟೆ ಜಿÇÉೆಯ ಬನಹಟ್ಟಿ ಯನ್ನು ಕರ್ನಾಟಕದ ಮ್ಯಾಂಚೆಸ್ಟರ್‌ ಎಂದು ಕರೆಯಲಾಗುತ್ತದೆ. ಅಲ್ಲಿ ಸಾಕಷ್ಟು ಜನ ಕರಕುಶಲಕರ್ಮಿಗಳು, ನೇಕಾರರು ಇ¨ªಾರೆ. ಅವರ ಅಭ್ಯುದಯಕ್ಕೆ ಸರಕಾರ ವಿಶೇಷ ಗಮನ ನೀಡಿ, ಇಲ್ಲಿ ಜವಳಿ ಪಾರ್ಕ್‌  ಮಾಡುವಂತೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಉಪಮುಖ್ಯ ಮಂತ್ರಿಗಳು, ಈ ಕುರಿತು ಸರಕಾರ ತೀರ್ಮಾನಿಸುತ್ತಿದೆ ಎಂದರು.

ವಿದೇಶಕ್ಕೆ ಸಾಕಷ್ಟು ಶುಶ್ರೂಷಕರನ್ನು ಕರೆಸಿಕೊಳ್ಳುವ ವಿಚಾರವಾಗಿ ಮಾತನಾಡಿದ ಹೇಮೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅಶ್ವತ್ಥ್ ನಾರಾಯಣ ಅವರು, ಯಾರು ಕಷ್ಟಪಟ್ಟು ದುಡಿಯಲು ಮತ್ತು ಶ್ರಮವಹಿಸಲು ಸಿದ್ಧರಿದ್ದಾರೋ ಅವರಿಗೆ ಸಹಾಯ ಮಾಡುವುದಾಗಿ ಭರವಸೆ ನೀಡಿದರು.

ಸಂಘದ ಉಪಾಧ್ಯಕ್ಷರಾದ ಗೋಪಾಲ್‌ ಕುಲಕರ್ಣಿ ಮಾತನಾಡಿ, ಕೋವಿಡ್‌ನ‌ ಸಂದರ್ಭದಲ್ಲಿ ಶುಶ್ರೂಷಕರ ಪಾತ್ರ ಬಹಳ ಮಹತ್ವದ್ದಾಗಿದೆ ಮತ್ತು ಅವರಿಗೆ ಇನ್ನೂ ಹೆಚ್ಚಿನ ವೇತನ ನೀಡುವಂತೆ ಕೇಳಿದ್ದ ಪ್ರಶ್ನೆಗೆ ಉಪಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಿದ್ದರು ಎಂದು ತಿಳಿಸಿದರು.

ಅನಂತರ ಜಂಟಿ ಕಾರ್ಯದರ್ಶಿಗಳಾದ ರವಿ ಮಹದೇವ ಅವರು, ಕೋವಿಡ್‌ನ‌ ಎರಡನೇ ಅಲೆಯ ಪರಿಣಾಮವಾಗಿ ಸಾಕಷ್ಟು ಸಾವು ನೋವುಗಳು ಆಗುತ್ತಿವೆ. ಎಲ್ಲ ಕಡೆ ಡಾಕ್ಟರ್‌ ಮತ್ತು ಶುಶ್ರೂಷಕರ ಕೊರತೆ ಸಾಕಷ್ಟಿದೆ. ಅದಕ್ಕಾಗಿ ಕೊನೆಯ ವರ್ಷದ ಶುಶ್ರೂಷಕ ವಿದ್ಯಾರ್ಥಿಗಳನ್ನು ತೊಡಗಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಕೇಳಿಕೊಂಡಾಗ ಎಲ್ಲ ವಿಭಾಗದ ಕೊನೆಯ ವರ್ಷದ ವಿದ್ಯಾರ್ಥಿಗಳನ್ನು ಕೋವಿಡ್‌ ನ ಕಾರ್ಯಕ್ಕಾಗಿ ನೇಮಿಸಿಕೊಳ್ಳಲು ತಯಾರಿ ನಡೆದಿದೆ ಎಂದರು.

ಅನಂತರ ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ಮಾತನಾಡಿ, ಕೋವಿಡ್‌ ಸಂಕಷ್ಟದ ನಡುವೆ ಅತ್ಯುತ್ತಮ ಕಾರ್ಯ ಮಾಡುತ್ತ ಸಾಗುತ್ತಿರುವ  ಸಾಗರೋತ್ತರ ಕನ್ನಡಿಗರಿಗೆ ಅಭಿನಂದನೆಗಳನ್ನು ತಿಳಿಸಿದರು.

ಕೋವಿಡ್‌ ಸಂಖ್ಯೆ ಹೆಚ್ಚಾಗಿದ್ದರೂ ಯಾರೂ ಭಯ ಪಡುವ ಅವಶ್ಯಕತೆ ಬೇಡ. ಸರಕಾರ ಮತ್ತು ನಮ್ಮ ಸಂಘಟನೆಯು ನಿಮ್ಮ ಜತೆಗೆ ಇದೆ. ಕರಕುಶಲ ಕರ್ಮಿ ಮಕ್ಕಳಿಗೆ ಮತ್ತು ಯುವಕರಿಗೆ ಗುರುಕುಲ ಶಿಕ್ಷಣವನ್ನು ಪ್ರಾರಂಭಿಸಿದ್ದು, ಅದರಲ್ಲಿ 400 ಜನ ಶಿಕ್ಷಣ ಪಡೆಯುತ್ತಿ¨ªಾರೆ. ಕಲ್ಲಿನ ಕೆತ್ತನೆಯ ಶಿಲ್ಪಿಗಳ ವಿಗ್ರಹವನ್ನು ಮಾರಾಟ ಮಾಡಲು ಮತ್ತು ಅದರ ಶೋರೂಮ್‌ ಸ್ಥಾಪಿಸಲು ನಿಗಮವು ಅನುಮತಿ ನೀಡಿದೆ. ಆನ್‌ಲೈನ್‌ ಮೂಲಕ ಕರಕುಶಲ ವಸ್ತುಗಳನ್ನು ಖರೀದಿ ಮಾಡಲು ಅನುಕೂಲ ಮಾಡಿದ್ದೇವೆ ಎಂದು ತಿಳಿಸಿದರು.

ಮೇಕ್‌ ಇನ್‌ ಇಂಡಿಯಾ ಯೋಜನೆಗೆ 50 ಯೋಜನೆಗಳನ್ನು ಮಾಡಿದ್ದೇವೆ. 1000 ಮನೆಗಳನ್ನು ನೀಡಿ ಕರಕುಶಲ ಕಾರ್ಮಿಕರಿಗೆ ಕೆಲಸ ಮಾಡಲು ವಸತಿ ವ್ಯವಸ್ಥೆಯನ್ನು ಸಹ ಕಲ್ಪಿಸಿದ್ದೇವೆ ಎಂದು ತಿಳಿಸಿದ ಅವರು,  ಹೊರದೇಶಗಳಲ್ಲಿ ಕೂಡ  ನಿಗಮದ ಶೋರೂಂ ಅನ್ನು ಸ್ಥಾಪಿಸಲು  ಮುಖ್ಯ ಮಂತ್ರಿಗಳೊಂದಿಗೆ ಮಾತುಕತೆ ಮಾಡಿದ್ದೇನೆ. ಸಾವಿರಾರು ರಾಮನ ವಿಗ್ರಹವನ್ನು ಕೂಡ ನಮ್ಮ ಕರಕುಶಲ ಕರ್ಮಿಗಳು ತಯಾರಿಸಿದ್ದಾರೆ. ಅವು ದೇಶಾದ್ಯಂತ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ. ಸಾಗರೋತ್ತರ ಕನ್ನಡಿಗರು ಯಾವುದೇ ಸಲಹೆ ನೀಡಿದರೂ ಅದನ್ನು ಪಡೆದುಕೊಳ್ಳಲು ನಾನು ಸದಾ ಸಿದ್ಧನಿದ್ದೇನೆ ಎಂದು ತಿಳಿಸಿದರು.

ಸಂಘದ ಖಜಾಂಚಿಗಳಾದ ವಿಜಯಪುರದ ಬಸವ ಪಾಟೀಲ ಅವರು ಉತ್ತರ ಕರ್ನಾಟಕದ ರೊಟ್ಟಿ, ಚಟ್ನಿ ಪುಡಿ ಮತ್ತಿತರ ಊಟದ  ವಸ್ತುಗಳನ್ನು ವಿದೇಶದಾದ್ಯಂತ ರಫ್ತು ಮಾಡಲು ಕೇಳಿದ ಪ್ರಶ್ನೆಗೆ ರಾಘವೇಂದ್ರ ಶೆಟ್ಟಿ ಅವರು ವಿಶ್ವದ ಎಲ್ಲ ಕಡೆ ಕರ್ನಾಟಕದ ಕರಕುಶಲ ವಸ್ತುಗಳ ಮತ್ತು ಊಟದ ಸಾಮಗ್ರಿಗಳ ಶೋರೂಮ್‌ ಮಾಡಿ ಅವುಗಳು ಅಲ್ಲಿ ದೊರೆಯುವಂತೆ ಮಾಡುವುದು ನಿಗಮದ ಉದ್ದೇಶವಾಗಿದೆ ಎಂದರು. 350 ಹುಡುಗರು ನಮ್ಮ ಟಾÓR… ಪೋರ್ಸ್‌ನಲ್ಲಿ ಕೋವಿಡ್‌ನಿಂದ ತೊಂದರೆ ಅನುಭವಿಸುತ್ತಿರುವ ಸಾಕಷ್ಟು ಜನರಿಗೆ ಸಹಾಯ ಮಾಡುತ್ತಿರುವುದು ನಮ್ಮ ಹೆಮ್ಮೆ ಎಂದರು.

ನಿಮಾನ್ಸ್‌ನ ಹಿರಿಯ ನಿವೃತ್ತ ಪ್ರಾಧ್ಯಾಪಕರಾದ ಪ್ರೊ| ರಾಮಚಂದ್ರ ಮಾತನಾಡಿ, ಸಾಗರೋತ್ತರ ಕನ್ನಡಿಗರು ಅತ್ಯುತ್ತಮ ಕಾರ್ಯಕ್ರಮಗಳನ್ನು  ನಡೆಸಿಕೊಂಡು ಬರು

ತ್ತಿದ್ದಾರೆ. ಅವರ ಮೂಲಕ ಇನ್ನೂ ಹೆಚ್ಚಿನ ಮಟ್ಟದಲ್ಲಿ ಬೆಳೆಯು ವಂತಾಗಲಿ ಎಂದು ಹಾರೈಸಿದರು. ಕಾರ್ಯ ಕ್ರಮವನ್ನು  ಸಂಘಟನೆಯ ಸಂಘಟನ ಕಾರ್ಯದರ್ಶಿ ಇಟಲಿಯ ಹೇಮೇಗೌಡ ಮಧು ನಡೆಸಿಕೊಟ್ಟರು.  ಸಂಘದ ಅಧ್ಯಕ್ಷರಾದ ಚಂದ್ರಶೇಖರ ಲಿಂಗದಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅತಿಥಿಗಳನ್ನು ವಿಷ್ಣು ಮತ್ತು ಮೋಹನ್‌ ಅವರು ಪರಿಚಯಿಸಿದರು. ಹೀಗೆ ಸುಮಾರು ಮೂರು ಗಂಟೆಗಳ ಕಾಲ ನಡೆದ ಸುದೀರ್ಘ‌ ಕಾರ್ಯಕ್ರಮವು ದೇವೇಂದ್ರ ಒಡೆಯರ್‌ ಅವರ ವಂದನಾರ್ಪಣೆಯೊಂದಿಗೆ ಮುಕ್ತಾಯವಾಯಿತು.

ಟಾಪ್ ನ್ಯೂಸ್

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆKundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Ram Ayodhya

Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆKundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Subramanya ಏನೆಕಲ್ಲು: ಕಾರಿಗೆ ಗೂಡ್ಸ್‌ ಆಟೋ ಢಿಕ್ಕಿ

Subramanya ಏನೆಕಲ್ಲು: ಕಾರಿಗೆ ಗೂಡ್ಸ್‌ ಆಟೋ ಢಿಕ್ಕಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.