ಯೋಗದಾಗೇ ಎಲ್ಲಾ ಐತೆ

ಪ್ರತಿಯೊಬ್ಬ ಭಾರತೀಯನ ಮನೆಯಲ್ಲಿರಬೇಕು ಪತಂಜಲಿ ಯೋಗ ಸೂತ್ರ

Team Udayavani, Jun 14, 2019, 6:00 AM IST

ಭಾರತೀಯ ಪರಂಪರೆಯಲ್ಲಿ ಉತ್ತುಂಗಸ್ಥಾನ ಪಡೆದಿರುವ ಅಷ್ಟಾಂಗ ಯೋಗಗಳಲ್ಲಿ ಒಂದಾಗಿರುವ ಯೋಗಾಸನಕ್ಕೆ ದಿನವೊಂದು ನಿಗದಿಯಾದ ಬಳಿಕ ದೇಶದ ಉದ್ದಗಲಕ್ಕೂ ಯೋಗಕ್ಕೊಂದು ಯೋಗ ಸಿಕ್ಕಿದೆ. ಇದೇ ಜೂನ್‌ 21ರಂದು ನಡೆಯಲಿರುವ ವಿಶ್ವ ಯೋಗ ದಿನದ ನಿಮಿತ್ತ “ಉದಯವಾಣಿ’ಯಲ್ಲಿ ಇಂದಿನಿಂದ ಒಂದು ವಾರದ‌ ಕಾಲ ಯೋಗೋತ್ಸವ…

ಬೆಳಗೆರೆ ಕೃಷ್ಣಶಾಸ್ತ್ರೀಗಳು ತಮ್ಮ ಗುರು ಮುಕುಂದೂರು ಸ್ವಾಮಿಗಳ ನೆನಪಿನಲ್ಲಿ ಬರೆದ ಒಂದು ಅದ್ಭುತ ಪುಸ್ತಕ “ಯೇಗ್ಧಾಗೆÇÉಾ ಐತೆ’. ಬಹುಶಃ ಅಲ್‌ ಬಿರೂನಿ ಕನ್ನಡ ಕಲಿತಿದ್ದಿದ್ದರೆ ತಮ್ಮ ಅಚ್ಚುಮೆಚ್ಚಿನ ಪುಸ್ತಕದ ಹೆಸರನ್ನು ಹೀಗಿಡುತ್ತಿದ್ದರೇನೋ..

ಅಂದಹಾಗೆ, ಯಾರು ಈ ಅಲ್‌ ಬಿರೂನಿ, ಯಾವುದು ಅವರ ಮೆಚ್ಚಿನ ಪುಸ್ತಕ? ಹತ್ತು- ಹನ್ನೊಂದನೇ ಶತಮಾನದಲ್ಲಿ ಭಾರತದ ಮೇಲೆ ಘಜ್ನಿ ಮೊಹಮ್ಮದನ ದಾಳಿಗಳು ನಡೆಯು ತ್ತವೆ. ಸತತವಾಗಿ ಹದಿನೇಳು ಬಾರಿ ದಂಡೆತ್ತಿ ಬಂದು ಭಾರತದ ಸಂಪತ್ತನ್ನು, ವಿಶೇಷವಾಗಿ ದೇವಸ್ಥಾನಗಳಲ್ಲಿದ್ದ ಅಪಾರ ಧನಕನ ಕಗಳನ್ನು ಲೂಟಿ ಮಾಡಿಕೊಂಡು ಹೋಗು ತ್ತಾನೆ. ವಿಚಿತ್ರವೆಂದರೆ ಈ ದುಷ್ಟನ ಜೊತೆ ಅಲ್‌ ಬಿರೂನಿ ಎನ್ನುವ ಒಬ್ಬ ಮಿತ್ರನೂ ಭಾರತಕ್ಕೆ ಬರುತ್ತಾನೆ. ಇವನೊಬ್ಬ ಮೇಧಾವಿ, ವಿಜ್ಞಾನಿ, ಖಗೋಳ ಶಾಸ್ತ್ರದ, ವೈದ್ಯಕೀಯ ಶಾಸ್ತ್ರದ ವಿದ್ಯಾರ್ಥಿ. ಗಾಂಧಾರ ದೇಶದ ಸಾಹಿ ರಾಜನ ಆಸ್ಥಾನದಲ್ಲಿ ಇವನಿಗೆ ವಿಶೇಷ ಗೌರವ ಕೊಟ್ಟು ಸನ್ಮಾನಿಸುತ್ತಾರೆ. ಅಲ್ಲಿದ್ದ ಕೆಲವು ಗ್ರಂಥಗಳನ್ನು ಅಭ್ಯಾಸ ಮಾಡಿ ಭಾರತದ ಬಗ್ಗೆ, ಸನಾತನ ಧರ್ಮದ ಬಗ್ಗೆ ಸ್ವಲ್ಪ ಮಟ್ಟಿಗೆ ತಿಳಿದುಕೊಂಡಿರುತ್ತಾನೆ.

ಘಜ್ನಿ ಮೊಹಮ್ಮದನ ಜೊತೆ ಕಾಶ್ಮೀರಕ್ಕೆ ಬಂದ ಅಲ್‌ ಬಿರೂನಿ ಮೊದಲು ಹೋಗುವುದೇ ಅಲ್ಲಿಯ ಗ್ರಂಥಾಲಯಗಳಿಗೆ. ಅಲ್ಲಿನ ಅಗಾಧ ರಾಶಿಯ ಜ್ಞಾನ ಭಂಡಾರವನ್ನು ಕಂಡು ದಂಗಾಗಿಬಿಡುತ್ತಾನೆ ಬಿರೂನಿ. ಸಂಸ್ಕೃತ ಕಲಿಯದೇ ಈ ಗ್ರಂಥಗಳನ್ನು ಅರ್ಥ ಮಾಡಿಕೊಳ್ಳಲು ಅಸಾಧ್ಯ ಎಂದರಿತವನು ಕೂಡಲೇ ಕೆಲವು ಪಂಡಿತರ ಸಹಾಯದಿಂದ ಸಂಸ್ಕೃತ ಕಲಿಕೆಯನ್ನು ಪ್ರಾರಂಭಿಸಿಬಿಡುತ್ತಾನೆ. ಅಲ್‌ ಬಿರೂ ನಿಯು ಘಜ್ನಿ ಮೊಹಮ್ಮದನಿಗೆ “ಇಲ್ಲಿನ ಧರ್ಮ ಗ್ರಂಥಗಳನ್ನು ಮಾತ್ರ ಮುಟ್ಟಬೇಡ…’ ಎನ್ನುವ ಕೋರಿಕೆಗೆ, ಘಜ್ನಿಯ ಮನಸ್ಸಿಲ್ಲದ ಸಮ್ಮತಿಯೂ ಸಿಗುತ್ತದೆ.

ಸಾಯವಬಾಲ ಎನ್ನುವ ಕಾಶ್ಮೀರಿ ಬ್ರಾಹ್ಮಣ ಮಿತ್ರನ ಸಹಾಯದಿಂದ ಬಿರೂನಿ ಸಂಸ್ಕೃತದಲ್ಲಿ ಎಂತಹ ಪರಿಣತಿ ಪಡೆಯು ತ್ತಾನೆಂದರೆ, ಕೆಲವೇ ದಿನಗಳಲ್ಲಿ ಸಂಸ್ಕೃತದಲ್ಲಿ ಒಂದು ಪುಸ್ತಕವನ್ನೇ ಬರೆದುಬಿಡುತ್ತಾನೆ!

ಈಗ ಪ್ರಚಲಿತವಾಗುತ್ತಿರುವ INDOLOGY (ಭಾರತಾ ಧ್ಯಯನ)ಯ ಪ್ರಥಮ ಪ್ರವರ್ತಕ ಅಲ್‌ ಬಿರೂನಿ ಎನ್ನಬಹುದು, ಅಷ್ಟು ಸುದೀರ್ಘ‌ ವಾಗಿ ಭಾರತದ ಬಗ್ಗೆ, ಸನಾತನ ಧರ್ಮದ ಬಗ್ಗೆ, ಇಲ್ಲಿಯ ಸಾಂಸ್ಕೃತಿಕತೆಯ ಬಗ್ಗೆ ಹಲವಾರು ಪುಸ್ತಕಗಳನ್ನು ಅರಬಿಕ್‌ ಮತ್ತು ಪರ್ಷಿಯನ್‌ ಭಾಷೆಗೆ ಭಾಷಾಂತರಿಸುತ್ತಾನೆ. ಹಾಗೆ ಭಾಷಾಂತರಿಸಿದ ಅನೇಕ ಪುಸ್ತಕಗಳಲ್ಲಿ ಒಂದು “ಕಿತಾಬ್‌ ಎಲ್‌ ಬತಾಂಜಲ…’. ಇದು ಪತಂಜಲಿಯ ಯೋಗಸೂತ್ರದ ಅವತರಣ!

ಮುಂದಿನ ವರ್ಷಗಳಲ್ಲಿ ಭಾರತವನ್ನು ಕೊಳ್ಳೆಹೊಡೆಯಲು ಬಂದ ಬ್ರಿಟಿಷರಿಗೆ ಅಲ್‌ ಬರೂನಿಯಷ್ಟು ಪಾಂಡಿತ್ಯವಾಗಲೀ, ಹೃದಯವಂತಿಕೆ ಯಾಗಲೀ ಇರಲಿಲ್ಲ. ಅಷ್ಟೊತ್ತಿಗಾಗಲೇ ಯೂರೋ ಪಿನಲ್ಲಿ ಚರ್ಚುಗಳ ರಕ್ತಸಿಕ್ತ ಇತಿಹಾಸ ಶುರುವಾಗಿತ್ತು.

Heliocentric theory, ಅಂದರೆ ಭೂಮಿ ಸೂರ್ಯನ ಸುತ್ತ ಸುತ್ತುತ್ತದೆ ಎಂದಿದ್ದಕ್ಕೇ ಇಟಲಿಯ ಗೆಲಿಲಿಯೋ ಎಂಬ ಖಗೋಳಶಾಸ್ತ್ರಜ್ಞನನ್ನು ಸೆರೆಮನೆಗೆ ತಳ್ಳಲಾಗಿತ್ತು. ಇನ್ನು ಖಗೋಳಶಾಸ್ತ್ರದ ತವರು ಮನೆಯಾದ ಭಾರತದ ಅಪರಿಮಿತ ಜ್ಞಾನಭಂಡಾರವನ್ನು ಸಹಿಸಿಯಾರೆಯೇ? ಇಲ್ಲಿಯ ವೇದ ಆಯುರ್ವೇದಗಳನ್ನು ಅರಗಿಸಿಕೊಳ್ಳುವರೇ? ಇಲ್ಲಿಯ ಯೋಗ ಸೂತ್ರವನ್ನು ಅಳವಡಿಸಿಕೊಳ್ಳುವರೇ.. NEVER.

ಭಾರತದ ಪ್ರಖರತೆ, ಶ್ರೀಮಂತಿಕೆ ಅವರ ಕಣ್ಣು ಕುಕ್ಕುತ್ತಿತ್ತು. ಒಂದೆಡೆ ಇಲ್ಲಿಯ ಸಂಪತ್ತನ್ನು ಲೂಟಿ ಹೊಡೆದು ಬ್ರಿಟನ್‌ ರಾಣಿಯ ಬೊಕ್ಕಸ ತುಂಬುತ್ತಿದ್ದರೆ ಇನ್ನೊಂದೆಡೆ ಇಲ್ಲಿಯ ಸಂಸ್ಕೃತಿ ಮತ್ತು ಪರಂಪರೆಗಳನ್ನು ಸರ್ವನಾಶ ಮಾಡಲು ಒಬ್ಬ ಕಿರಾತಕನನ್ನು ಕಳುಹಿಸಿದರು, ಅವನೇ ಥಾಮಸ್‌ ಮೆಕಾಲೆ…ಪ್ರಬುದ್ಧ ಭಾರತದ ಶಿಕ್ಷಣ ಪದ್ಧತಿಯನ್ನು ಸರ್ವನಾಶ ಮಾಡಿದ ಖೂಳ.

ಭಾರತದ ಅಪಾರ ಜನಸಂಖ್ಯೆಯನ್ನು ಹದ್ದುಬಸ್ತಿನಲ್ಲಿಟ್ಟು ಅವರಿಂದ ತೆರಿಗೆ, ಕಂದಾಯ ವಸೂಲು ಮಾಡಲು ಕೆಲವೇ ಬ್ರಿಟಿಷರ ಕೈಯಲ್ಲಿ ಸಾಧ್ಯವಾಗದ ಕೆಲಸ. ಹಾಗಾಗಿ ಭಾರತೀಯರಿಗೆ ಯೂರೋಪ್‌ ಮಾದರಿಯ ಶಿಕ್ಷಣದ ಮೂಲಕ ಅವರನ್ನು ತಮ್ಮ ಆಡಳಿತಕ್ಕೆ ಬೇಕಾಗುವ ಗುಮಾಸ್ತರು, ಲೆಕ್ಕಿಗರು ಮತ್ತು ಸೈನಿಕರ ಹಿಂಡನ್ನು ತಯಾರಿಸಿ ತಮ್ಮ ಖರ್ಚು ಕಡಿಮೆ ಮಾಡಿಕೊಳ್ಳುವ ಹುನ್ನಾರ ನಡೆಸುತ್ತಾರೆ.

ಇಲ್ಲಿರುವ ದೇವಸ್ಥಾನಗಳ ಆದಾಯ ಆಧಾರಿತ ಉಚಿತವಾಗಿ ನಡೆಯುತ್ತಿದ್ದ ಗುರುಕುಲ ಪದ್ಧತಿಗಳನ್ನು ನಾಶಮಾಡಿ, ಇಂಗ್ಲೀಷ್‌ ಕಲಿಸುವ ಅತ್ಯಂತ ದುಬಾರಿ ವೆಚ್ಚದ ಶಾಲೆಗಳನ್ನು ಪ್ರಾರಂಭಿಸುತ್ತಾರೆ. ಹಣವುಳ್ಳವರು ಮಾತ್ರ ಈ ಶಾಲೆಗೆ ಬಂದು ಇಂಗ್ಲಿಷ್‌ ಕಲಿಯುತ್ತಾರೆ. ಸಾಕ್ಷರತೆ ಕುಸಿದು ಅಧೋಗತಿಗೆ ಇಳಿದು ಹೋಗುತ್ತದೆ. ಮೆಕಾಲೆಯ ಶಿಕ್ಷಣ ಪದ್ದತಿಯಿಂದ ಇಂಗ್ಲೀಷನ್ನು ಸಲೀಸಾಗಿ ಮಾತಾಡುವ ಗುಮಾಸ್ತರು, ಸೈನಿಕರು, ಕೆಳಮಟ್ಟದ ಅಧಿಕಾರಿಗಳು ಹುಟ್ಟಿಕೊಂಡರು. ಬ್ರಿಟಿಷರಿಗೆ ಬೇಕಾಗಿದ್ದೂ ಅದೇ, ಆದರೆ ಅಷ್ಟಕ್ಕೆ ನಿಂತಿದ್ದರೆ ಅಭ್ಯಂತರ ವಿರುತ್ತಿರಲಿಲ್ಲ. ಇಂಗ್ಲೀಷನ್ನು ಬಳಸಿಕೊಂಡು ನಮ್ಮ ಸನಾತನ ಧರ್ಮದ, ಸಂಸ್ಕೃತಿಯ ಅವಹೇಳನ ಮಾಡಲಾಯಿತು. ಇಂಗ್ಲೀಷ್‌ ಬಾರದ ಭಾರತೀಯರಲ್ಲಿ ಕೀಳರಿಮೆಯ ಭಾವನೆ ಯನ್ನು ತುಂಬಲಾಯಿತು.

ಇದರ ಜೊತೆ ಮೆಕ್ಕಾಲಿಸಂ ಅಥವಾ “ಮೆಕ್ಕಾಲೆಯ ಮಕ್ಕಳು’ ಎನ್ನುವ ಸಂತತಿಯೇ ಹುಟ್ಟಿಕೊಂಡು ಬಿಟ್ಟಿತು. ಭಾರತೀಯತೆ, ಸನಾತನ ಧರ್ಮ, ವೇದ, ಆಯುರ್ವೇ ದಗಳು ಇವರಿಗೆ ಟೀಕೆಯ ವಿಷಯ ಗಳಾದವು. ನಮ್ಮಲ್ಲಿದ್ದ ಅಪಾರ ಜ್ಞಾನ ಇವರಿಗೆ ಅಪಹಾಸ್ಯದ ವಿಷಯ ಗಳಾದವು. ಮೆಕ್ಕಾಲೆಯ ಶಿಕ್ಷಣ ಪದ್ಧತಿಯ ಭರಾಟೆಯಿಂದ, ಬ್ರಿಟಿಷರ ಸಂಚಿ ನಿಂದ, ಮಿಷನರಿಗಳ ಕುಯುಕ್ತಿಯಿಂದ ಕಡೆಗಣಿಸಲ್ಪಟ್ಟಿದ್ದ ನಮ್ಮ ಮಹಾನ್‌ ಗ್ರಂಥಗಳಲ್ಲಿ “ಪತಂಜಲಿ ಯೋಗ ಸೂತ್ರ’ವೂ ಒಂದು.

ಬ್ರಿಟಿಷರ ಆಡಳಿತದಲ್ಲಿ ರಾಜ್ಯಭಾರ ನಡೆಸುತ್ತಿದ್ದ ವೈಸರಾಯಿಗಳಲ್ಲಿ ಕೆಲವರು ಮಾತ್ರ ಭಾರತದ ಅಪರಿಮಿತ ವಿದ್ಯಾ ಸಂಪನ್ನತೆಯನ್ನು ಗೌರವಿಸುತ್ತಿದ್ದರು. ಅವರಲ್ಲಿ ಒಬ್ಬರು ವೈಸರಾಯ್‌ ಇರ್ವಿನ್‌. ಇವರ ಆಡಳಿತದ ಸಂದರ್ಭದಲ್ಲಿ ಸ್ವಾತಂತ್ರÂ ಸಂಗ್ರಾಮ ತೀವ್ರತೆಯನ್ನು ಪಡೆದಿತ್ತು. ಒಂದೆಡೆ ಉಪ್ಪಿನ ಸತ್ಯಾಗ್ರಹ, ಸೈಮನ್‌ ಕಮಿಟಿಯ ವಿರೋಧ, ಇನ್ನೊಂದೆಡೆ ವಿಶ್ವಯುದ್ಧದ ಒತ್ತಡ.

ಇದೆಲ್ಲದರ ಮಧ್ಯೆ ದಿನೇ ದಿನೆ ಬಿಗಡಾಯಿಸುತ್ತಿತ್ತು ಇರ್ವಿನ್ನರ ಆರೋಗ್ಯದ ಸ್ಥಿತಿ. ಅವರಿಗೆ ಆಯುರ್ವೇದ ಮತ್ತು ಯೋಗದಲ್ಲಿ ತುಂಬಾ ನಂಬಿಕೆಯಿತ್ತು. ಅವರ ಅದೃಷ್ಟ ಚೆನ್ನಾಗಿತ್ತು. ಅಂದಿನ ಕಾಲದ ಯೋಗದ ಪಿತಾಮಹ ಮತ್ತು ಆಯುರ್ವೇದ ಪಂಡಿತ ಎಂದೇ ಖ್ಯಾತಿ ಪಡೆದಿದ್ದ ಒಬ್ಬ ಮಹಾಪುರುಷರೊಬ್ಬರು ಮೈಸೂರಿಂದ ಶಿಮ್ಲಾಕ್ಕೆ ಬಂದು ಅವರನ್ನು ಸಂಪೂರ್ಣ ಗುಣಮುಖರನ್ನಾಗಿ ಮಾಡಿದರು. ಅವರೇ ಶ್ರೀ ತಿರುಮಲೈ ಕೃಷ್ಣಮಾಚಾರ್ಯರು.

ಚಿತ್ರದುರ್ಗ ಜಿÇÉೆಯ ಮುಚುಕುಂಡಪುರ ಎನ್ನುವ ಚಿಕ್ಕಹಳ್ಳಿಯ ಒಂದು ಐಯ್ಯಂಗಾರ್‌ ಮನೆತನದಲ್ಲಿ ನವೆಂಬರ್‌ 1888ರಲ್ಲಿ ಈ ಮಹಾಪುರುಷರ ಜನ್ಮವಾಗುತ್ತದೆ. ಅಷ್ಟೊತ್ತಿ ಗಾಗಲೇ ಮೆಕ್ಕಾಲೆಯ ಶಿಕ್ಷಣ ಪದ್ಧªತಿ ಯೋಗಾಭ್ಯಾಸವನ್ನು ಅವಹೇಳಿಸಿ, ಕಡೆಗಣಿಸಿ, ಅಪಹಾಸಿÂಸಿ ಸಮಾಜದ ಮುಖ್ಯವಾಹಿ ನಿಯಿಂದ ದೂರವಿಟ್ಟಿರುತ್ತದೆ. ಇವರ ಹುಟ್ಟಿನೊಂದಿಗೇ ಯೋಗಕ್ಕೆ ಪುನರ್ಜನ್ಮ ದೊರೆತಂತಾಗುತ್ತದೆ. ಮೆಕ್ಕಾಲೆಯ ಶಿಕ್ಷಣ ಪದ್ಧªತಿಯನ್ನು ತಿರಸ್ಕರಿಸಿ, ತಮ್ಮದೇ ಆದ ಸಂಶೋಧನೆಯಲ್ಲಿ ತೊಡಗಿ ಆರು ಡಾಕ್ಟರೇಟ್‌ ಡಿಗ್ರಿಗಳನ್ನು ಪಡೆದರೆಂದರೆ ಅದೆಂತಹ ಅಧ್ಯಯನ ಮಾಡಿರಬಹುದು! ಇವರು ತೆರೆಯ ಮರೆಯಲ್ಲಿ ನಡೆಸಿದ ಸಂಶೋಧನೆಗಳು, ಪ್ರಯೋಗಗಳು, ಆಸನಗಳು, ಪ್ರಾಣಾಯಾಮಗಳನ್ನು ಭಾರತಕ್ಕೆ ಮತ್ತು ಇಡೀ ವಿಶ್ವಕ್ಕೆ ಪರಿಚಯಿಸಿದವರು ಇವರ ಶಿಷ್ಯರುಗಳ ಗುಂಪು. ಆ ಗುಂಪಿನಲ್ಲಿದ್ದವರು ಇವರ ಮೈದುನ ಡಾ. ಬಿ.ಕೆ. ಎಸ್‌ ಐಯ್ಯಂಗಾರ್‌ ಮತ್ತು ಅವರ ಮಗ ದೇಶಿಕಾ ಚಾರ್ಯ ಮತ್ತು ಇತರರು. ಇವರಿಂದಾಗಿ “ಐಯ್ಯಂಗಾರ್‌ ಯೋಗ’ ಎನ್ನುವ ಹೊಸ ಅಧ್ಯಾಯವೇ ಶುರುವಾಯಿತು!

ಪ್ರಪಂಚದ ಸುಮಾರು ನಲವತ್ತಕ್ಕೂ ಹೆಚ್ಚು ಭಾಷೆಗಳಿಗೆ ಅನು ವಾದ ಗೊಂಡಿರುವ, ಅಂದಿನ ಸಮಯದÇÉೇ ವಿಶ್ವದೆÇÉೆಡೆ ಖ್ಯಾತಿ ಪಡೆದಿದ್ದ ಈ ಮಹಾನ್‌ ಗ್ರಂಥದ ಬಗ್ಗೆ ನಮಗೆಷ್ಟು ತಿಳಿದಿದೆ?

ಪತಂಜಲಿ ಯೋಗ ಸೂತ್ರದಲ್ಲಿ 196 ಸೂತ್ರಗಳಿವೆ. ಸುಮಾರು 2,400 ವರ್ಷಗಳ ಹಿಂದೆ ಬರೆದಿದ್ದ ಈ ಮಹಾನ್‌ ಕೋಶ, ಕಾಲನ ಮಹಿಮೆಯ ಏಳುಬೀಳುಗಳನ್ನು ಕಂಡು ಇನ್ನೂ ಜೀವಂತವಾಗಿರುವ ಅದ್ಭುತ ಗ್ರಂಥ.
ಪತಂಜಲಿಯ ಯೋಗ ಸೂತ್ರಗಳನ್ನು ನಾಲ್ಕು ಅಧ್ಯಾಯಗಳಲ್ಲಿ ವಿಂಗಡಿಸಲಾಗಿದೆ: 1. ಸಮಾಧಿ ಪಾದ 2. ಸಾಧನ ಪಾದ 3. ವಿಭೂತಿ ಪಾದ 4. ಕೈವಲ್ಯ ಪಾದ ಇದರಲ್ಲಿ ಸಾಧನ ಪಾದ, ಪ್ರಾಯೋಗಿಕ ಯೋಗದ ಮುಖ್ಯ ಅಧ್ಯಾಯ. ಇದರಲ್ಲಿ ಕ್ರಿಯಾ ಯೋಗ ಮತ್ತು ಅಷ್ಟಾಂಗ ಯೋಗಗಳೆಂಬ ಎರಡು ಭಾಗಗಳಿವೆ. ಸರಳವಾಗಿ ಈ ಅಷ್ಟಾಂಗಗಳು, ಎಂಟು ಅಂಗಗಳೆಂದರೆ:

1. ಯಮ (ಐದು ವರ್ಜನೆಗಳು ): ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ ಇವುಗಳನ್ನು ಯಮವೆಂದು ಕರೆಯುತ್ತಾರೆ. ಅಹಿಂಸೆಯೆಂದರೆ ಯಾವುದೇ ಜೀವಿಗೂ ತ್ರಿಕರಣಗಳಿಂದಲೂ ತೊಂದರೆಯನ್ನು ಉಂಟು ಮಾಡದಿರುವುದು. ಸತ್ಯವೆಂದರೆ ಇದ್ದುದನ್ನು ಇದ್ದ ಹಾಗೆಯೇ ತ್ರಿಕರಣಗಳಿಂದಲೂ ಸಾಧಿಸುವುದು. ಅಸ್ತೇಯವೆಂದರೆ ಯಾರಿಂದಲೂ ಏನನ್ನೂ ಕದಿಯದಿರುವುದು. ಬ್ರಹ್ಮಚರ್ಯ ವೆಂದರೆ ಜಿತೇಂದ್ರಿಯತೆ, ಅಪರಿಗ್ರಹವೆಂದರೆ ಯಾರಿಂದಲೂ ಏನನ್ನೂ ನಿರೀಕ್ಷಿಸದಿರುವುದು, ಪಡೆಯದಿರುವುದು.

2. ನಿಯಮ (ಐದು ಅನುಷ್ಠಾನಗಳು): ಶುದ್ಧತೆ, ಸಂತುಷ್ಟಿ, ಸಂಯಮ, ಅಧ್ಯಯನ, ಮತ್ತು ದೇವರಲ್ಲಿ ಶರಣಾಗತಿ.

3. ಯೋಗಾಸನ: ಅಕ್ಷರಶಃ ಅರ್ಥವೆಂದರೆ ಪೀಠ/ಕುಳಿತುಕೊಳ್ಳುವಿಕೆ ಹಾಗೂ ಪತಂಜಲಿ ಸೂತ್ರಗಳಲ್ಲಿ ಧ್ಯಾನಕ್ಕೆ ಕುಳಿತು ಕೊಳ್ಳುವ ಭಂಗಿಗಳಿಗೆ ಈ ಪದವನ್ನು ಉÇÉೇಖೀಸಲಾಗುತ್ತದೆ. ಆಸನವೆಂದರೆ ನಿಯಮಗಳ ಅಭ್ಯಾಸಕ್ಕೆ ಅನುಕೂಲವಾದ ಸ್ಥಿರವೂ ಸುಖವೂ ಆದ ಭಂಗಿ. ಆಸನಗಳಲ್ಲಿ ಸಿದ್ಧಾಸನ, ಪದ್ಮಾಸನ, ಸ್ವಸ್ತಿಕಾಸನ ಮೊದಲಾದ ವೈವಿಧ್ಯವುಂಟು.

4. ಪ್ರಾಣಾಯಾಮ (ಉಸಿರನ್ನು ನಿಯಂತ್ರಿಸುವುದು): ಪ್ರಾಣ, ಉಸಿರು, ಆಯಾಮ, ನಿಯಂತ್ರಣ ಅಥವಾ ನಿಲ್ಲಿಸುವಿಕೆ. ಜೀವ ಶಕ್ತಿಯ ನಿಯಂತ್ರಣವೆಂದೂ ಸಹಾ ಅರ್ಥೈಸಲಾಗುತ್ತದೆ.

5. ಪ್ರತ್ಯಾಹಾರ (ಅಮೂರ್ತವಾಗಿರುವಿಕೆ): ಬಾಹ್ಯ ವಸ್ತುಗಳಿಂದ ಇಂದ್ರಿಯಗಳನ್ನು ದೂರವಿಡುವಿಕೆ

6. ಧಾರಣ(ಏಕಾಗ್ರತೆ): ಗಮನವನ್ನು ಒಂದು ವಸ್ತುವಿನ ಮೇಲೆಯೇ ಕೇಂದ್ರೀಕರಿಸುವುದು.

7. ಧ್ಯಾನ : ಧ್ಯಾನದ ಗುರಿ ಸ್ವಭಾವದತ್ತ ಅತೀವ ಚಿಂತನೆ. ಧ್ಯಾನ, ವ್ಯಕ್ತಿಯ ಮನಸ್ಸಿನ ತರಬೇತಿ ಅಥವಾ ಅರಿವಿನ ಒಂದು ಕ್ರಮವನ್ನು ಉಂಟುಮಾಡುವ ಆಚರಣೆ ಆಗಿದೆ. ಧ್ಯಾನ ಎಂಬ ಪದವು ವಿವಿಧ ವಿಶಾಲ ಆಚರಣೆಗಳನ್ನು ಸೂಚಿಸುತ್ತದೆ. ಅದು ಕೆಲವು ತಂತ್ರಗಳನ್ನು ಒಳಗೊಂಡಿದೆ. ಅವು ವಿಶ್ರಾಂತಿ, ಆಂತರಿಕ ಶಕ್ತಿ ಅಥವಾ ಜೀವ ಶಕ್ತಿ ನಿರ್ಮಿಸುವ ತಂತ್ರಗಳಾಗಿವೆ. ಮತ್ತು ಸಹಾನುಭೂತಿ ಅಭಿವೃದ್ಧಿ, ಪ್ರೀತಿ, ತಾಳ್ಮೆ, ಉದಾರತೆ ಮತ್ತು ಕ್ಷಮೆ ಇವುಗಳೂ ವಿಕಾಸವಾಗುತ್ತವೆ. ಧ್ಯಾನವು ಮನಸ್ಸಿನ ಏಕಾಗ್ರತೆಯಿಂದ ಮಾತ್ರ ಸಾಧ್ಯ.

8. ಸಮಾಧಿ (ಬಿಡುಗಡೆ): ಧ್ಯಾನದ ಗುರಿಯಲ್ಲಿಯೇ ತನ್ನನ್ನು ಮಗ್ನನಾಗಿಸಿಕೊಳ್ಳುವುದು.
ಇಂತಹ ಅದ್ಭುತ ಗ್ರಂಥ ಪ್ರತಿಯೊಬ್ಬ ಭಾರತೀಯನ ಮನೆಯಲ್ಲಿ ಇರಬೇಕು ಎನಿಸುವುದಿಲ್ಲವೇ?

– ವಿಂಗ್‌ ಕಮಾಂಡರ್‌ ಸುದರ್ಶನ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ