Udayavni Special

ಹಿತಮಿತವಾಗಿರಲಿ ಆಹಾರ ಸೇವನೆ


Team Udayavani, May 8, 2021, 1:38 PM IST

Food intake

ಮಾನವನ ದೈಹಿಕ, ಮಾನಸಿಕ ಬೆಳವಣಿಗೆಗೆ ಆಹಾರ ಬಹುಮುಖ್ಯ. ಆಯುರ್ವೇದದ ಪ್ರಕಾರ ಆಹಾರ ಎಂಬುದು ಸಂಸ್ಕೃತದ ಪದ “ಆಹರತಿ’ಯ ವಿಕೃತ ರೂಪ. “ಆಹರತಿ’ ಎಂದರೆ ಹತ್ತಿರ ತರುವಿಕೆ ಎಂದರ್ಥ. ಯಾವುದು ಶರೀರ ಮತ್ತು ಪೋಷಣೆಯನ್ನು ಹತ್ತಿರಕ್ಕೆ ತರುತ್ತದೆಯೋ ಅದು ಆಹಾರ. ಸರಿಯಾದ ಪೋಷಣೆಯಾಗಬೇಕಾದರೆ ಆಹಾರವನ್ನು ಹೇಗೆ ಸೇವಿಸಬೇಕು ?ಮೊದಲನೆಯದಾಗಿ ಆಹಾರ ಬಿಸಿಯಾಗಿರಬೇಕು. ಬಿಸಿ ಆಹಾರ ರುಚಿಯನ್ನು ವರ್ಧಿಸುತ್ತದೆ. ಜಠರಾಗ್ನಿಯನ್ನು ಉತ್ತೇಜಿಸುತ್ತದೆ. ವಾತಾನುಲೋಮನ ಮಾಡುತ್ತದೆ ಹಾಗೂ ಕಫ‌ವನ್ನು ಕಡಿಮೆ ಮಾಡುತ್ತದೆ. ಬಿಸಿ ಯಾದ ಆಹಾರ ಸೇವಿಸುವುದರಿಂದ ಬಾಯಿಯಲ್ಲಿ ಲಾಲಾಸ್ರಾವ ಮತ್ತು ಜೀರ್ಣ ಕ್ರಿಯೆಗೆ ಬೇಕಾಗುವ  Enzyme  ಉತ್ಪತ್ತಿಯಾಗುತ್ತದೆ. ಆಹಾರ ಮಾತ್ರ ವಲ್ಲ ಕುಡಿಯುವ ನೀರು ಬಿಸಿಯಾಗಿದ್ದರೆ ಒಳ್ಳೆಯದು.

ತಂಪಾದ ನೀರು ಜೀರ್ಣ ಶಕ್ತಿಯನ್ನು ಕುಗ್ಗಿಸುತ್ತದೆ. ಬಿಸಿ ನೀರು ಜೀರ್ಣಕ್ರಿಯೆಗೆ, ಗಂಟಲಿನ ಆರೋಗ್ಯಕ್ಕೆ, ಮೂತ್ರಾಶಯ ಸ್ವತ್ಛಗೊ ಳ್ಳಲು ಅತ್ಯುತ್ತಮ. ವಾತ ಅಥವಾ ಕಫ‌ ದೋಷವನ್ನು ಕಡಿಮೆ ಮಾಡುತ್ತದೆ. ಚಳಿಗಾಲದಲ್ಲಿ ಪಿಷ್ಟ ಆಹಾರ ಮತ್ತು ಅರಗಿಸಿಕೊಳ್ಳಲು ಕಷ್ಟ ಕರವಾದ ಆಹಾರ ಸೇವನೆಯ ಅನಂತರ ಬಿಸಿ ನೀರನ್ನು ಕುಡಿ ಯು ವುದು ಅತ್ಯು ತ್ತಮ.

ಸೇವಿಸುವ ಆಹಾರ ಸ್ನಿಗ್ಧವಾಗಿರಬೇಕು. ನಿತ್ಯ ಅನ್ನಕ್ಕೆ ತುಪ್ಪ ಹಾಕಿಕೊಂಡು ಸೇವಿಸಬೇಕು. ಇದರಿಂದ ಆಹಾರ ಸುಲಭ ವಾಗಿ ಜೀರ್ಣವಾಗುತ್ತದೆ. ಸರಿಯಾದ ಪ್ರಮಾಣದಲ್ಲಿ ಆಹಾರ ಸೇವನೆ ಅತ್ಯ ಗತ್ಯ. ಪ್ರತಿಯೊಂದು ವ್ಯಕ್ತಿಯೊಬ್ಬ ವ್ಯಕ್ತಿಯ ಆಹಾರ ಸೇವನೆ ಪ್ರಮಾಣ ಬೇರೆ ಬೇರೆಯಾಗಿರುತ್ತದೆ. ಆಹಾರ ಸೇವನೆಯ ಅನಂತರ ಹೊಟ್ಟೆ ಉಬ್ಬಬಾರದು. ಇಂದ್ರಿಯಗಳಿಗೆ ಕಷ್ಟ ವಾ ಗ ಬಾ ರದು, ಎದೆಯಲ್ಲಿ ಉರಿ, ನೋವುಂಟಾಗಬಾರದು ಮತ್ತು ನಿಲ್ಲಲು, ಕುಳಿ ತು ಕೊ ಳ್ಳಲು, ಮಲಗಲು, ನಡೆದಾಡಲು ಕಷ್ಟವಾಗಬಾರದು.

ಮೊದಲು ಸೇವಿಸಿರುವ ಆಹಾರ ಪೂರ್ಣವಾಗಿ ಜೀರ್ಣವಾದ ಅನಂತರವೇ ಮತ್ತೆ ಊಟ ಮಾಡಬೇಕು. ಈ ನಿಯಮವನ್ನು ಪಾಲಿಸದೇ ಇದ್ದರೆ ಹಿಂದೆ ಸೇವಿಸಿದ ಆಹಾರ ಅಜೀರ್ಣವಾಗಿ ಉಳಿದು ಶರೀರದಲ್ಲಿ ಎಲ್ಲ ದೋಷಗಳ ಅಸಮತೋಲನ ಉಂಟು ಮಾಡುತ್ತದೆ.ಆಹಾರ ಸೇವನೆ ಸಮಯ, ಸ್ಥಳ, ಬೇಕಾ ಗುವ ಉಪಕರಣಗಳ ಬಳಕೆಯಲ್ಲಿ ಕ್ರಮವಹಿಸಬೇಕು. ಇಷ್ಟವಿಲ್ಲದ ಸ್ಥಳದಲ್ಲಿ ಕುಳಿತಾಗ ಮನಸ್ಸಿಗೆ ಕಷ್ಟ ಉಂಟಾಗುವುದು.

ಇದ ರಿಂದ ಆಹಾರದಲ್ಲಿ ಅಸಮತೋಲನವಾಗಬಹುದು.ಆಹಾರವನ್ನು ಅತಿ ವೇಗವಾಗಿ ಅಥವಾ ಅತಿ ವಿಳಂಬವಾಗಿ ಸೇವಿಸಬಾರದು. ಅತಿ ವೇಗವಾಗಿ ಆಹಾರ ಸೇವಿಸುವುದರಿಂದ ವಾತ ದೋಷ ಹೆಚ್ಚಾಗಿ ಜೀರ್ಣ ಕ್ರಿಯೆ ಕಷ್ಟವಾಗುವುದು. ಅತಿ ವಿಳಂಬವಾಗಿ ತಿನ್ನುವುದರಿಂದ ಆಹಾರ ಶೀತಗೊಂಡು, ಹಸಿವಾಗುವಿಕೆಯಲ್ಲಿ ಅಸಮತೋಲನ ಉಂಟಾಗುತ್ತದೆ. ಊಟ ಮಾಡುವಾಗ ಮಾತನಾಡುವುದಾಗಲಿ ಅಥವಾ ನಗುವುದಾಗಲಿ ಮಾಡಬಾರದು. ಮನಸ್ಸಿನ ಶ್ರದ್ಧೆಯನ್ನು ಆಹಾರದಲ್ಲಿ ಕೇಂದ್ರೀ ಕೃ ತ ವಾ ಗಿ ರ ಬೇಕು.ಆಹಾರ ಸೇವನೆಯ ವೇಳೆ ಚಿಂತೆ, ಶೋಕ, ಭಟ, ಕ್ರೋಧ, ದುಃಖ, ನೋವು ಇದ್ದರೆ ಅಥವಾ ಜಡ ಜೀವನಶೈಲಿ ಇದ್ದರೆ, ಅತಿಯಾಗಿ ರಾತ್ರಿ ಜಾಗರಣೆ ಮಾಡಿದರೆ ಅಜೀರ್ಣ ಉಂಟಾಗುವುದು. ಇದ ರಿಂದ ಹಲವು ಕಾಯಿಲೆಗಳು ಬರುವ ಸಾಧ್ಯತೆ ಇರು ವುದು. ಸುಮ್ಮನೇ ಸ್ನ್ಯಾಕ್ಸ್‌ ಸೇವಿಸುವುದು, ಅನುಚಿತ ಸಮಯದಲ್ಲಿ ತಿನ್ನುವುದು, ಅತಿಯಾಗಿ ತಿನ್ನುವುದು, ಅತಿ ಕಡಿಮೆ ತಿನ್ನುವುದು, ಮಲಬದ್ಧತೆ ಇದ್ದರೂ ಪದೇಪದೆ ತಿನ್ನುವುದು, ಫಾಸ್ಟ್‌ಫ‌ುಡ್‌, ಜಂಕ್‌ ಫ‌ುಡ್‌, ತಂಗಳು, ಹೆಪ್ಪುಗಟ್ಟಿಸಿದ ಆಹಾರ, ಊಟ ದೊಂದಿಗೆ Chiued Drinks  ಸೇವನೆಯು ಅನುಚಿತ ಆಹಾರ ಸೇವನೆ ಅಭ್ಯಾ ಸ ವಾ ಗಿದೆ. ಇದ ರಿಂದ ಮಧುಮೇಹ, ಹೈಪರ್‌ಟೆನ್ಸನ್‌, ಚರ್ಮರೋಗಗಳು, ಹೃದಯದ ಕಾಯಿಲೆ, ಕೀಲುನೋವು, ಮಲಬದ್ಧತೆ, ಹಾರ್ಮೋನ್‌ಗಳಲ್ಲಿ ವ್ಯತ್ಯಯ ಕಂಡು ಬರುವುದು.

ಈ ರೀತಿಯ ಅನಾರೋಗ್ಯ ತಡೆಗಟ್ಟಲು ಮತ್ತು ಶರೀ ರ ದಲ್ಲಿ ಪೌಷ್ಟಿ ಕಾಂಶ ವೃದ್ಧಿ ಸಿ ಕೊ ಳ್ಳಲು ಆಹಾರ ಸೇವನ ಶೈಲಿಯ ಮೇಲೆ ಗಮನಹರಿಸಬೇಕು. ನಮ್ಮ ಶರೀರಕ್ಕೆ ಏನನ್ನು ತಿನ್ನಿಸುತ್ತೇವೋ, ನಾವು ಅದೇ ಪದಾರ್ಥದ ಗಣಗಳನ್ನು ಅನುಕರಿಸುತ್ತೇವೆ. ಈ ವಿಷಯವಾಗಿ ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಆಹಾರವನ್ನು ಸಾತ್ವಿಕ, ರಾಜಸಿಕ ಮತ್ತು ತಾಮಸಿಕವೆಂದು ಮೂರು ಪ್ರಕಾರವಾಗಿ ಹೇಳಿದ್ದಾನೆ. ಸಾತ್ವಿಕ ಆಹಾರವೆಂದರೆ “ಸದ್ವರ್ತನೆ’ ಧಾರ್ಮಿಕ ಮನೋಭಾವನೆಗೆ ಪ್ರೇರಕ. ಹಾಲು, ಬೆಣ್ಣೆ, ತುಪ್ಪ , ಹಸುರು ತರಿಕಾರಿ ಇತ್ಯಾದಿ. ರಾಜಸಿಕ ಆಹಾರವೆಂದರೆ ಅತಿ ಬಿಸಿ, ಖಾರ, ಉಪ್ಪು ಹೆಚ್ಚಾಗಿರುವುದು.ತಾಮಸಿಕ ಆಹಾರವೆಂದ ರೆ ಜಡತ್ವವನ್ನುಂಟು ಮಾಡುವ ಆಹಾರ ಅಂದರೆ ತಂಗಳು, ಅಶುದ್ಧ ತಿಂಡಿ.ಹಿತಮಿತ ಸಮತೋಲನ ಆಹಾರ ದೇಹದ ರಕ್ಷಣೆ, ಪೋಷಣೆಯನ್ನು ಮಾಡುತ್ತದೆ. ಇದರಿಂದ ದೇಹಕ್ಕೆ ಶಕ್ತಿಯು, ಚರ್ಮಕ್ಕೆ ಕಾಂತಿಯು ಲಭಿಸುತ್ತದೆ. ಆರೋಗ್ಯ ಚೆನ್ನಾಗಿರುತ್ತದೆ.

ಡಾ| ಮೇಘನಾ,ಡಬ್ಲಿನ್‌, ಐರ್ಲೆಂಡ್‌

ಟಾಪ್ ನ್ಯೂಸ್

ದೇಶದಲ್ಲೇ ಮೊದಲ ಬಾರಿಗೆ ಡ್ರೋಣ್‌ನಲ್ಲಿ ಔಷಧ ರವಾನೆ

ದೇಶದಲ್ಲೇ ಮೊದಲ ಬಾರಿಗೆ ಡ್ರೋಣ್‌ನಲ್ಲಿ ಔಷಧ ರವಾನೆ

ಜಮ್ಮು ಕಾಶ್ಮೀರದಲ್ಲಿ ಮತ್ತೆ ರಾಜಕೀಯ ಬೆಳವಣಿಗೆ : ಪುನರ್ವಿಂಗಡಣೆಯೇ ಅಜೆಂಡಾ?

ಜಮ್ಮು ಕಾಶ್ಮೀರದಲ್ಲಿ ಮತ್ತೆ ರಾಜಕೀಯ ಬೆಳವಣಿಗೆ : ಪುನರ್ವಿಂಗಡಣೆಯೇ ಅಜೆಂಡಾ?

ಅಪಘಾತದಲ್ಲಿ ಕರು ಸಾವು : ಮನಕಲುಕುವಂತಿತ್ತು ಹಸುಳೆಯನ್ನು ಕಳೆದುಕೊಂಡ ತಾಯಿ ಹಸುವಿನ ಕಣ್ಣೀರು

ಅಪಘಾತದಲ್ಲಿ ಕರು ಸಾವು : ಮನಕಲುಕುವಂತಿತ್ತು ಹಸುಳೆಯನ್ನು ಕಳೆದುಕೊಂಡ ತಾಯಿ ಹಸುವಿನ ಕಣ್ಣೀರು

Cristiano Ronaldo sets another record, becomes first person to reach 300 million followers mark on Instagram

ಇನ್ ಸ್ಟಾಗ್ರಾಮ್ ನಲ್ಲಿ 300ಮಿಲಿಯನ್ ಫಾಲೋವರ್ಸ್ ದಾಟಿದ ಫುಟ್ ಬಾಲ್ ಸ್ಟಾರ್ ಆಟಗಾರ ರೊನಾಲ್ಡೋ

ಕೋವಿಡ್ ವಿರುದ್ಧ ಹೋರಾಡಲು ಕೈ ಜೋಡಿಸಿ : ರಾಜ್ಯದ ಜನರಲ್ಲಿ ಅಬ್ಬಿಗೆರೆ ಮನವಿ

ಕೋವಿಡ್ ವಿರುದ್ಧ ಹೋರಾಡಲು ಕೈ ಜೋಡಿಸಿ : ರಾಜ್ಯದ ಜನರಲ್ಲಿ ಅಬ್ಬಿಗೆರೆ ಮನವಿ

ದಕ್ಷಿಣ ಕನ್ನಡ : ಅಗತ್ಯ ವಸ್ತು ಖರೀದಿಗೆ ಅವಧಿ ವಿಸ್ತರಣೆ, ನೈಟ್ ಕರ್ಫ್ಯೂ ಮುಂದುವರಿಕೆ

ದಕ್ಷಿಣ ಕನ್ನಡ : ಅಗತ್ಯ ವಸ್ತು ಖರೀದಿಗೆ ಅವಧಿ ವಿಸ್ತರಣೆ, ನೈಟ್ ಕರ್ಫ್ಯೂ ಮುಂದುವರಿಕೆ

incident held at kapu

ಪೊಲಿಪು : ಮೂರು ಮನೆಗಳಿಗೆ ಸಿಡಿಲು ಬಡಿದು ಅಪಾರ ಹಾನಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೋವಿಡ್ ಬಿಕ್ಕಟ್ಟಿನ ನಿವಾರಣೆಯಲ್ಲಿ ಭಾರತದ ಭರವಸೆ-ಸ್ಪುಟ್ನಿಕ್ ವಿ

ಕೋವಿಡ್ ಬಿಕ್ಕಟ್ಟಿನ ನಿವಾರಣೆಯಲ್ಲಿ ಭಾರತದ ಭರವಸೆ-ಸ್ಪುಟ್ನಿಕ್ ವಿ

ಗೂನುಬೆನ್ನು ಸಮಸ್ಯೆ ನಿವಾರಣೆಗೆ ಸರಳ ಆಸನ

ಗೂನುಬೆನ್ನು ಸಮಸ್ಯೆ ನಿವಾರಣೆಗೆ ಸರಳ ಆಸನ

ಜೀವ ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಲಿ

ಜೂ.14 ವಿಶ್ವ ರಕ್ತದಾನಿಗಳ ದಿನ; ಜೀವ ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಲಿ

ಯೋಗದಿಂದ ಬಾಯಿಯ ದುರ್ವಾಸನೆ ದೂರಗೊಳಿಸಿ

ಯೋಗದಿಂದ ಬಾಯಿಯ ದುರ್ವಾಸನೆ ದೂರಗೊಳಿಸಿ

13-7

ಪ್ಯಾಶನ್ ಫ್ರೂಟ್ : ಏನಿದು ಹೊಸ ಬಗೆಯ ಹಣ್ಣು?

MUST WATCH

udayavani youtube

ಬಿಜೆಪಿಯಲ್ಲಿ ಅಲ್ಲೊಂದು ಇಲ್ಲೊಂದು ಗೊಂದಲ ಇದ್ದಿದ್ದು ನಿಜ : ಈಶ್ವರಪ್ಪ

udayavani youtube

HATS OFF : ಇದು ಮಣಿಪಾಲ ಐಟಿ ಕಂಪನಿಯ ಪರಸರ ಕಾಳಜಿ

udayavani youtube

ರಾಯಚೂರು: ಬೂ‍ಟು ಕಾಲಿಂದ ತರಕಾರಿ ಒದ್ದು PSI ದರ್ಪ

udayavani youtube

ವೇದ ಗಂಗಾ ನದಿಯ ಮಧ್ಯಭಾಗದ ಗಿಡದಲ್ಲಿ ಸಿಲುಕಿದ ಯುವಕನ‌ ರಕ್ಷಣೆಗೆ ಪರದಾಟ

udayavani youtube

ಹಾರುವ ಸಿಖ್ ಖ್ಯಾತಿಯ ಮಿಲ್ಖಾ ಸಿಂಗ್ ಇನ್ನಿಲ್ಲ

ಹೊಸ ಸೇರ್ಪಡೆ

20-15

ಮಳೆನಾಡಲ್ಲಿ ಜಲ ನರ್ತನ

20-14

ಜಲಾಶಯಕ್ಕೆ ಬಿಗಿ ಪಹರೆ

20-13

ಎಚ್‌. ವಿಶ್ವನಾಥ್‌ ಪಕ್ಷ ಬಿಡಬಾರದು: ಈಶ್ವರಪ್ಪ

20-12

ಟಿಬಿ ಡ್ಯಾಂ ಒಳ ಹರಿವು ಹೆಚ್ಚಳ

covid news

ಮಂಡ್ಯ ಅನ್‌ಲಾಕ್‌, ಹಾಸನ ಲಾಕ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.