ದಿನಕ್ಕೊಂದು ಆಸನ: ಗರುಡಾಸನ

Team Udayavani, Jun 17, 2019, 5:00 AM IST

ಹದ್ದಿನ ಜಾತಿಗೆ ಸೇರಿದ, ಸೂಕ್ಷ್ಮದೃಷ್ಟಿಯ ಪಕ್ಷಿ ಗರುಡ. ನಮ್ಮ ಪುರಾಣಗಳ ಪ್ರಕಾರ ಗರುಡ, ವಿಷ್ಣುವಿನ ವಾಹನ. ಈ ಪಕ್ಷಿಯ ಹೆಸರಿನಲ್ಲಿಯೂ ಒಂದು ಆಸನವಿದೆ.
ಮೊದಲು ನೇರವಾಗಿ, ಎರಡೂ ಕಾಲುಗಳ ಮೇಲೆ ಸಮ ಭಾರ ಹಾಕಿ ನಿಂತುಕೊಳ್ಳಿ
ನಂತರ, ಬಳ್ಳಿ ಮರವನ್ನು ಸುತ್ತುವಂತೆ ಕಾಲುಗಳನ್ನು ಬೆಸೆಯಿರಿ (ಎಡಗಾಲನ್ನು ಬಲಗಾಲಿನ ಮಂಡಿಯ ಮೇಲೆ ತಂದು ಬಲಗಾಲನ್ನು ಸುತ್ತಿಸಿ, ಬಲಪಾದದ ಮೇಲೆ ಎಡಪಾದವನ್ನು ಇಡಲು ಪ್ರಯತ್ನಿಸಬೇಕು)
ಇದೇ ರೀತಿ, ಬಲ ಮೊಣಕೈ ಕೆಳಗೆ ಎಡಮೊಣಕೈಯನ್ನು ತಂದು ಅನಂತರ ಬಲಗೈಯನ್ನು ಸುತ್ತಿಸಿ. ಎರಡೂ ಅಂಗೈಗಳು ಪರಸ್ಪರ ಜೋಡಿಸಬೇಕು. (ನಮಸ್ಕಾರ ಮಾಡುವಂತೆ)
ದೃಷ್ಟಿ ನೇರವಾಗಿರಲಿ. ಈ ಸಮಯದಲ್ಲಿ ದೇಹ ಸ್ವಲ್ಪ ಕೆಳಗೆ ಕುಳಿತ ಸ್ಥಿತಿಯಲ್ಲಿ ಇರಬೇಕು.
ಬಲ ಪಾದವನ್ನು ಚೆನ್ನಾಗಿ ನೆಲಕ್ಕೆ ಒತ್ತಿ. ನಂತರ ನಿಧಾನವಾಗಿ ಕೈಗಳನ್ನು ಬಿಡಿಸಿ. ಕಾಲುಗಳನ್ನೂ ಬಿಡಿಸಿ ಸಮಸ್ಥಿತಿಗೆ ಬನ್ನಿ. ಇದೇ ರೀತಿ ಬಲಗಡೆಯಿಂದಲೂ ಮಾಡಿ.
ಆಸನದ ಲಾಭಗಳು?
ಸೊಂಟ, ತೊಡೆ, ಭುಜಗಳ ಮೇಲೆ, ಬೆನ್ನಿನ ಮೇಲ್ಭಾಗದ ಸ್ನಾಯುಗಳನ್ನು ಬಲಗೊಳಿಸುತ್ತದೆ
ದೇಹದ ಸಮತೋಲನವನ್ನು ಸುಧಾರಿಸುತ್ತದೆ.∙
ಕಾಲಿನ ಮಣಿಗಂಟು ಸಡಿಲವಾಗುತ್ತದೆ
ಮೀನಖಂಡ ಮತ್ತು ತೊಡೆಗಳಲ್ಲಿರುವ ಕೊಬ್ಬಿನಂಶ ಕರಗುವುದು.
ಮಂಡಿನೋವು ಬಾರದಂತೆ ತಡೆಯಲು ಸಹಕಾರಿ
ಪಕ್ಕೆಲುಬು, ರಟ್ಟೆಯಲ್ಲಿನ ಕೊಬ್ಬಿನಂಶ ಕರಗುವುದು.

ಯಾರು ಮಾಡಬಾರದು?
ಇತ್ತೀಚೆಗೆ ಮಂಡಿ, ಮೊಣಕಾಲು ಅಥವಾ ಮೊಣಕೈಗೆ ಪೆಟ್ಟಾಗಿದ್ದರೆ ಈ ಆಸನ ಮಾಡಬಾರದು.


ಈ ವಿಭಾಗದಿಂದ ಇನ್ನಷ್ಟು

  • ಇತ್ತೀಚೆಗೆ ಮಹಿಳೆಯ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಸರಣಿ ಅತ್ಯಾಚಾರಗಳು, ಕಿರುಕುಳಗಳು, ಕಳ್ಳತನ ಮೊದಲಾದ ಸಮಸ್ಯೆಗಳನ್ನು ಮಹಿಳೆಯರು ಎದುರಿಸುತ್ತಿ...

  • ನಾನು ನೀರು ಕುಡಿಯಲು ಗ್ಲಾಸನ್ನು ಎತ್ತಿಕೊಂಡಾಗೆಲ್ಲ ಮಗಳ ಕೊನೆಯ ಕ್ಷಣಗಳು ನೆನಪಾಗುತ್ತವೆ. ಅವಳು ನನ್ನತ್ತ ತಿರುಗಿ, "ಮಮ್ಮಿ ನನಗೆ ಬಾಯಾರಿಕೆ ಆಗ್ತಿದೆ' ಅಂದಳು....

  • ಹೈದರಾಬಾದ್‌ಅತ್ಯಾಚಾರ-ಹತ್ಯೆ ಪ್ರಕರಣದ ಆರೋಪಿಗಳೆಲ್ಲ ಎನ್‌ಕೌಂಟರ್‌ನಲ್ಲಿ ಅಂತ್ಯವಾಗಿದ್ದಾರೆ. ಈ ವಿದ್ಯಮಾನಕ್ಕೆ ದೇಶಾದ್ಯಂತ ಸಂಭ್ರಮಾಚರಣೆಯ ಜತೆ ಜತೆಗೆ,...

  • ತೆಲಂಗಾಣದಲ್ಲಿ ನಡೆದ ಯುವತಿಯ ಅತ್ಯಾಚಾರ-ಹತ್ಯೆ ಪ್ರಕರಣವು ದೇಶವನ್ನು ಬೆಚ್ಚಿ ಬೀಳಿಸಿದೆ. ನಿರ್ಭಯಾ ಪ್ರಕರಣದ ನಂತರ ದೇಶದಲ್ಲಿ ಎಷ್ಟೇ ಕಠಿಣ ಕಾನೂನು ತಂದರೂ...

  • ದೇಶದ ಪ್ರಮುಖ ಮೂರು ಖಾಸಗಿ ಟೆಲಿಕಾಂ ಆಪರೇಟರ್‌ಗಳಾದ ವೊಡಾಫೋನ್‌ ಐಡಿಯಾ ಲಿಮಿಟೆಡ್‌, ಭಾರ್ತಿ ಏರ್‌ಟೆಲ್‌, ರಿಲಯನ್ಸ್‌ ಜಿಯೋ ಇನ್ನು ದುಬಾರಿಯಾಗಲಿದೆ. ಡಿಸೆಂಬರ್‌...

ಹೊಸ ಸೇರ್ಪಡೆ