ಭೂಶಾಖದಿಂದ ವಿದ್ಯುತ್‌ ಶಕ್ತಿ

ಜಿಯೋ ಥರ್ಮಲ್‌ ಚಟುವಟಿಕೆಗೆ ಮರುಜನ್ಮ ಕೊಡಲು ಮುಂದಾಗಿದೆ ಜಪಾನ್‌

Team Udayavani, Apr 2, 2023, 6:20 AM IST

ಭೂಶಾಖದಿಂದ ವಿದ್ಯುತ್‌ ಶಕ್ತಿ

ಭೌಗೋಳಿಕವಾಗಿ ಬಹುತೇಕ ಬೆಟ್ಟ- ಗುಡ್ಡಗಳಿಂದ ಆವೃತವಾಗಿರುವ ದ್ವೀಪ ರಾಷ್ಟ್ರ ಜಪಾನ್‌. ಕಳೆದ ಕೆಲವು ದಶಕಗಳಿಂದ ಅತೀ ಹೆಚ್ಚು ಸುನಾಮಿ, ಪ್ರವಾಹ, ಭೂಕಂಪ, ಅಣುಬಾಂಬ್‌ ಹಾಗೂ ಜ್ವಾಲಾಮುಖೀಯಂತಹ ವಿಕೋಪಗಳಿಂದ ಬೇಯುತ್ತಿರುವ ದೇಶ. ಇಷ್ಟೆಲ್ಲ ನೋವುಗಳ ನಡುವೆಯೂ ಜಪಾನ್‌ ಪ್ರತೀ ಬಾರಿ ಎದ್ದು ನಿಲ್ಲುವ ಪ್ರಯತ್ನವನ್ನು ಮುಂದುವರಿಸಿಕೊಂಡು ಬಂದಿದೆ. ಎಲ್ಲ ಕ್ಷೇತ್ರದಲ್ಲೂ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿದೆ. ಈಗ ಹಲವಾರು ವರ್ಷಗಳ ಹಿಂದೆ ಸ್ಥಗಿತವಾಗಿದ್ದ ಜಿಯೋ ಥರ್ಮಲ್‌ ಚಟುವಟಿಕೆಗಳಿಗೆ ಮರುಜನ್ಮ ಕೊಡಲು ಮುಂದಾಗಿದೆ. ಆದರೆ ಈ ನಿರ್ಧಾರಕ್ಕೆ ಸ್ಥಳೀಯರಿಂದಲೇ ವಿರೋಧ ವ್ಯಕ್ತವಾಗುತ್ತಿದ್ದು, ಇದು ನುಂಗಲಾರದ ತುತ್ತಿನಂತಾಗಿದೆ.

ಏನಿದು ಜಿಯೋ
ಥರ್ಮಲ್‌ ಎನರ್ಜಿ?
ಜಿಯೋ ಥರ್ಮಲ್‌ ಎನರ್ಜಿ ಎಂದರೆ ಭೂಮಿಯ ಒಡಲಾಳದಲ್ಲಿ ಇರುವ ಅಪಾರವಾದ ಉಷ್ಣದಿಂದ ಪಡೆಯುವ ಶಕ್ತಿ. ಭೂಶಾಖದ ಶಕ್ತಿ ಎಂದೂ ಕರೆಯಲಾಗುತ್ತದೆ. ಭೂಮಿಯು ಗ್ರಹವಾಗಿ ಉಗಮವಾಗುವ ಸಂದರ್ಭ ಮತ್ತು ಅದರ ಗರ್ಭದಲ್ಲಿರುವ ವಿಕಿರಣಶೀಲ ವಸ್ತುಗಳ ನಶಿಸುವಿಕೆಯಿಂದ ಹೊರಹಾಕಲ್ಪಟ್ಟು ಉಷ್ಣಶಕ್ತಿಯು ಸಂಚಯವಾಗಿರುವುದು. ಭೂಮಿಯ ಒಳ ಭಾಗದಲ್ಲಿರುವ ಉಷ್ಣತೆಯಿಂದಾಗಿ ಆಗಾಗ ಒತ್ತಡವು ಹೆಚ್ಚಾಗುತ್ತದೆ. ಇದರಿಂದಾಗಿ ಗಟ್ಟಿಯಾದ ಬಂಡೆಗಳೂ ಕರಗುವಷ್ಟು ಮತ್ತು ಘನವಾದ ಭೂತಿರುಳು ಕೂಡ ನಮ್ಯತೆಯನ್ನು ಹೊಂದುವಷ್ಟು ಪರಿಣಾಮ ಉಂಟಾಗುತ್ತದೆ. ಈ ಅಗಾಧ ಉಷ್ಣವನ್ನು ವಿದ್ಯುತ್‌ ಶಕ್ತಿಯ ಉತ್ಪಾದನೆಯಲ್ಲಿ ಬಳಸುವ ಪ್ರಕ್ರಿಯೆಯೇ ಜಿಯೋ ಥರ್ಮಲ್‌ ಪವರ್‌. ಇತ್ತೀಚೆಗಿನ ದಿನಗಳಲ್ಲಿ ವಿದ್ಯುತ್‌ ಶಕ್ತಿಯ ಉತ್ಪಾದನೆಯಲ್ಲಿ ಈ ಶಕ್ತಿಯನ್ನು ಅತೀ ಮುಖ್ಯ ಆಕರವಾಗಿ ಬಳಸಲಾಗುತ್ತಿದೆ. ಇದೇ ಭೂಗರ್ಭ ಉಷ್ಣ ಶಕ್ತಿಯು ಬಿಸಿ ನೀರಿನ ಬುಗ್ಗೆಗಳಾಗಿಯೂ ಅಲ್ಲಲ್ಲಿ ಕಾಣಿಸುತ್ತದೆ. ಕೆಲವು ಕಡೆ ಜ್ವಾಲಾಮುಖೀಯಾಗಿ ಹೊಮ್ಮುವುದು ಇದರ ಇನ್ನೊಂದು ರೂಪ.

ಬಿಸಿನೀರಿನ ಬುಗ್ಗೆ
ಭೂಮಿಯ ಅತಿಯಾದ ಶಾಖದಿಂದ ಭೂಮಿಯ ಮೇಲ್ಭಾಗದಲ್ಲಿ ಅಲ್ಲಲ್ಲಿ ಬಿಸಿನೀರಿನ ಬುಗ್ಗೆಗಳು ಸಣ್ಣ ಕೊಳದ ರೀತಿಯಲ್ಲಿ ಕಾಣಿಸಿಕೊಳ್ಳುತ್ತವೆ. ಇವು ನೈಸರ್ಗಿಕ ಬುಗ್ಗೆಗಳು. ಭೂಮಿಯ ಹೊರಗಿನ ವಾತಾವರಣಕ್ಕಿಂತಲೂ ಹೆಚ್ಚು ತಾಪಮಾನವನ್ನು ಹೊಂದಿರುತ್ತದೆ. ಹೆಚ್ಚು ಖನಿಜಗಳಿಂದ ಕೂಡಿ, ಉತ್ಪತ್ತಿಯಾಗುವ ಬಿಸಿ ನೀರನ್ನು ಹಿಂದಿನ ಕಾಲದಿಂದಲೂ ಮಾನವರು ಬಿಸಿ ನೀರಿನ ಸ್ನಾನದ ಕೊಳದ ರೀತಿಯಲ್ಲಿ ಬಳಕೆ ಮಾಡುತ್ತಿದ್ದಾರೆ ಹಾಗೂ ಮೆಡಿಕಲ್‌ ಥೆರಪಿಯಲ್ಲಿ ಇದನ್ನು ಬಳಸಲಾಗುತ್ತಿದೆ. ಯಾವ ಪ್ರದೇಶಗಳಲ್ಲಿ ಭೂಮಿಯ ಹೊರಪದರವೂ ಹೆಚ್ಚು ತೆಳುವಾಗಿರುತ್ತವೆಯೋ ಮತ್ತು ಜ್ವಾಲಾಮುಖೀ ಚಟುವಟಿಕೆಗಳು ಹೆಚ್ಚಾಗಿರುವ ಭಾಗಗಳಲ್ಲಿ ಬಿಸಿ ನೀರಿನ ಬುಗ್ಗೆಗಳನ್ನು ಕಾಣಬಹುದು.

ಜಿಯೋ ಥರ್ಮಲ್‌ ಪವರ್‌
ವಿಶ್ವದಲ್ಲಿ 20ಕ್ಕೂ ಅಧಿಕ ದೇಶಗಳು ಜಿಯೋ ಥರ್ಮಲ್‌ ಎನರ್ಜಿಯನ್ನು ವಿದ್ಯುತ್‌ ಶಕ್ತಿ ಉತ್ಪಾದನೆಯಲ್ಲಿ ಬಳಸಿಕೊಳ್ಳುತ್ತಿವೆ. ಈ ಜಿಯೋ ಥರ್ಮಲ್‌ ಪವರ್‌ ಮುಗಿದುಹೋಗದ ಇಂಧನವಾಗಿರುವುದರಿಂದ ಹೆಚ್ಚುತ್ತಿರುವ ವಿದ್ಯುತ್‌ನ ಬೇಡಿಕೆಯನ್ನು ಪೂರೈಸುವಲ್ಲಿ ಇದು ಸಹಕಾರಿ. ಭೂಮಿಯ ಆಳದ ಶಾಖದಿಂದ ವಿದ್ಯುತ್‌ ಉತ್ಪಾದನೆ ಮಾಡುವುದಾದ್ದರಿಂದ ಪರಿಸರದ ಮೇಲೆ ಹಾನಿ ಇಲ್ಲ. 1904ರಲ್ಲಿ ಜಿಯೋ ಥರ್ಮಲ್‌ ಪವರ್‌ನಿಂದ ವಿದ್ಯುತ್‌ ಅನ್ನು ಉತ್ಪಾದಿಸಬಹುದು ಎಂದು ಕಂಡುಕೊಂಡ ಅನಂತರ 1911ರಲ್ಲಿ ಇಟಲಿ ವಿಶ್ವದ ಮೊದಲ ಜಿಯೋ ಥರ್ಮಲ್‌ ಪವರ್‌ ಪ್ಲಾಂಟ್‌ ಸ್ಥಾಪಿಸಿತು. ಹೆಚ್ಚಿನ ದೇಶಗಳು ವಿದ್ಯುತ್‌ ಉತ್ಪಾದನೆಯಲ್ಲಿ ಜಿಯೋ ಥರ್ಮಲ್‌ ಎನರ್ಜಿ ಅಳವಡಿಸಿಕೊಂಡು ದೇಶದ ಪ್ರಗತಿಗೆ ಇಂಬು ನೀಡುತ್ತಿವೆ. ಇಂಟರ್‌ನ್ಯಾಶನಲ್‌ ರಿನಿವೇಬಲ್‌ ಎನರ್ಜಿ ಏಜೆನ್ಸಿ ಹೇಳುವ ಹಾಗೆ ವಿಶ್ವದಲ್ಲಿ 14,438 ಮೆಗಾವ್ಯಾಟ್‌ನಷ್ಟು ಜಿಯೋ ಥರ್ಮಲ್‌ ಎನರ್ಜಿ ಸಂಗ್ರಹವಿದ್ದು, ಇದರಲ್ಲಿ 94,949 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆಯಲ್ಲಿ ಬಳಕೆಯಾಗುತ್ತದೆ. ಅಮೆರಿಕ ಅತೀ ಹೆಚ್ಚು ಜಿಯೋ ಥರ್ಮಲ್‌ ಪವರ್‌ಸ್ಟೇಶನ್‌ಗಳನ್ನು ಹೊಂದಿದ್ದು, ಜಿಯೋ ಥರ್ಮಲ್‌ ಶಕ್ತಿಯಿಂದ ವಿದ್ಯುತ್‌ ಉತ್ಪಾದನೆ ಮಾಡುವ ರಾಷ್ಟ್ರಗಳ ಪೈಕಿ ಮುಂಚೂಣಿಯಲ್ಲಿದೆ.

ಸಂಪನ್ಮೂಲಗಳ ಕೊರತೆ
ಜಪಾನ್‌ನ ಭೂಭಾಗ ಬಹುತೇಕ ಬೆಟ್ಟ-ಗುಡ್ಡಗಳಿಂದ ಕೂಡಿರುವ ದ್ವೀಪ ರಾಷ್ಟ್ರವಾಗಿದೆ. ಜತೆಗೆ ಅತೀ ಹೆಚ್ಚು ಅರಣ್ಯ ಪ್ರದೇಶವನ್ನು ಹೊಂದಿರುವ ದೇಶವೂ ಹೌದು. ದೇಶದ ಪ್ರತಿಯೊಂದು ದ್ವೀಪವನ್ನು ಬೆಟ್ಟಗಳು ಹಾದುಹೋಗಿವೆ. ಅದಲ್ಲದೆ ಜಪಾನ್‌ ಫೆಸಿಫಿಕ್‌ನ “ರಿಂಗ್‌ ಆಫ್‌ ಫೈರ್‌’ ಪ್ರದೇಶದಲ್ಲಿದ್ದು, ಜ್ವಾಲಾಮುಖೀ ಹಾಗೂ ಭೂಕಂಪನದ ಪ್ರದೇಶವಾಗಿದೆ. ಹೀಗಾಗಿ ಜಪಾನ್‌ ಅತೀ ಹೆಚ್ಚು ಭೂಕಂಪ, ಸುನಾಮಿ, ಜ್ವಾಲಾಮುಖೀ ಸ್ಫೋಟದಂತ ಘಟನೆಗಳಿಗೆ ಸಾಕ್ಷಿಯಾಗುತ್ತಲೇ ಇರುತ್ತದೆ. ಅರಣ್ಯ ಹಾಗೂ ಬೆಟ್ಟ-ಗುಡ್ಡಗಳು ಯಥೇತ್ಛವಾಗಿರುವ ಜಪಾನ್‌ಗೆ ನೈಸರ್ಗಿಕ ಸಂಪನ್ಮೂಲಗಳ ತೀವ್ರ ಕೊರತೆಯಿದೆ. ಕಲ್ಲಿದ್ದಲು, ತೈಲ, ಕಬ್ಬಿಣ ಹಾಗೂ ಖನಿಜ ಸಂಪನ್ಮೂಲಗಳ ಅತೀ ಕಡಿಮೆ ಶೇಖರಣೆಯನ್ನು ಈ ದೇಶ ಹೊಂದಿದೆ. ಶೇ. 90ರಷ್ಟು ವಿದ್ಯುತ್‌ ಉತ್ಪಾದನೆಗೆ ಬೇಕಾಗುವ ಸಂಪನ್ಮೂಲಗಳನ್ನು ಜಪಾನ್‌ ಆಮದು ಮಾಡಿಕೊಳ್ಳಬೇಕಾಗುತ್ತದೆ.

ಜಿಯೋ ಥರ್ಮಲ್‌ ಅನುಕೂಲ
ಜಪಾನ್‌ಗೆ ಭೌಗೋಳಿಕವಾಗಿ ಜಿಯೋ ಥರ್ಮಲ್‌ ಎನರ್ಜಿ ಉತ್ಪಾದನೆ ಅನುಕೂಲಕರವಾಗಿದೆ. ಇದಾಗಿಯೂ ದೇಶದ ಶಕ್ತಿ ಉತ್ಪಾದನ ಕ್ಷೇತ್ರದಲ್ಲಿ ಅತೀ ಸಣ್ಣ ಪ್ರಮಾಣದಲ್ಲಿ ಜಿಯೋ ಥರ್ಮಲ್‌ ಪವರ್‌ ಅನ್ನು ಇದು ಬಳಸುತ್ತಿದೆ. ಶೇ. 3ರಷ್ಟು ಮಾತ್ರ ವಿದ್ಯುತ್‌ ಉತ್ಪಾದನೆಯಲ್ಲಿ ಜಿಯೋ ಥರ್ಮಲ್‌ ಎನರ್ಜಿಯನ್ನು ಜಪಾನ್‌ ವಿನಿಯೋಗಿಸಿಕೊಳ್ಳುತ್ತಿದೆ. 1925ರಲ್ಲಿ ಪ್ರಾಯೋಗಿಕವಾಗಿ ಜಪಾನ್‌ ಜಿಯೋ ಥರ್ಮಲ್‌ ಪವರ್‌ ಸ್ಟೇಶನ್‌ಗಳನ್ನು ಆರಂಭಿಸಿತು. ಜಿಯೋ ಥರ್ಮಲ್‌ ಎನರ್ಜಿ ಬಗ್ಗೆ ಅನೇಕ ಅಧ್ಯಯನಗಳನ್ನು ಜಪಾನ್‌ ಮಾಡಿದೆ. ಆದರೆ ಎರಡನೇ ಮಹಾಯುದ್ಧದ ಬಳಿಕ ಅಧ್ಯಯನಗಳ ಸಂಖ್ಯೆಯು ಕಡಿಮೆಯಾಗುತ್ತ ಬಂದಿದೆ. ಜತೆಗೆ 1990 ಅನಂತರ ಜಿಯೋ ಥರ್ಮಲ್‌ನ ಅಭಿವೃದ್ಧಿ ಕಾರ್ಯಗಳು ಜಪಾನ್‌ನಲ್ಲಿ ಸ್ಥಗಿತಗೊಂಡಿದೆ. ಇದಕ್ಕೆ ಕಾರಣ ಅಲ್ಲಿನ ಸ್ಥಳೀಯರ ವಿರೋಧ.

ವಿರೋಧ ಯಾಕೆ?
ಜಿಯೋ ಥರ್ಮಲ್‌ ಎನರ್ಜಿ ಬಳಕೆಗೆ ಅಲ್ಲಿನ ಸ್ಥಳೀಯರು ವಿರೋಧಿಸಲು ಮುಖ್ಯ ಕಾರಣ ಜಪಾನ್‌ನಲ್ಲಿರುವ ಬಿಸಿನೀರಿನ ಬುಗ್ಗೆಗಳು. ಜಪಾನ್‌ನಲ್ಲಿ ಬಿಸಿ ನೀರಿನ ಬುಗ್ಗೆಗಳು ಅಥವಾ ಹಾಟ್‌ಸ್ಪ್ರಿಂಗ್‌ಗಳು ಹೇರಳವಾಗಿವೆ. ಸುಮಾರು 25 ಸಾವಿರಕ್ಕೂ ಅಧಿಕ ಬಿಸಿ ನೀರಿನ ಬುಗ್ಗೆಗಳಿವೆ. ಇದು ಜಪಾನ್‌ ಪ್ರವಾಸೋದ್ಯಮದ ಬಹುಮುಖ್ಯ ಆಕರ್ಷಣೆ. ಶೇ. 80ಕ್ಕೂ ಅಧಿಕ ಪ್ರವಾಸೋದ್ಯಮವೇ ನಿಂತಿರುವುದೇ ಇವುಗಳ ಮೇಲೆ. ಬಿಸಿ ನೀರಿನ ಬುಗ್ಗೆಗಳಿರುವ ಜಾಗಗಳಲ್ಲಿ ರೆಸಾರ್ಟ್‌ಗಳನ್ನು ಕಟ್ಟಲಾಗಿದ್ದು, ಅಲ್ಲಿ ತಂಗುವ ಪ್ರವಾಸಿಗರು ಇದರ ಪ್ರಯೋಜನವನ್ನು ಪಡೆಯುತ್ತಾರೆ. ಇದು ರೆಸಾರ್ಟ್‌ ಮಾಲಕರ ಲಾಭದ ಗಣಿ. ಜಪಾನ್‌ ಬಹುತೇಕ ಸ್ಥಳೀಯರು ಈ ಬಿಸಿ ನೀರಿನ ಬುಗ್ಗೆಗಳ ಮೇಲೆ ಮಾಲಕತ್ವವನ್ನು ಹೊಂದಿದ್ದಾರೆ. ಒಂದು ವೇಳೆ ವಿದ್ಯುತ್‌ ಶಕ್ತಿ ಉತ್ಪಾದನೆಯಲ್ಲಿ ಇದನ್ನು ಉಪಯೋಗಿಸಿಕೊಂಡು ಜಿಯೋ ಥರ್ಮಲ್‌ ಎನರ್ಜಿ ಪ್ಲಾಂಟ್‌ಗಳನ್ನು ಸ್ಥಾಪಿಸಿದರೆ ಪ್ರವಾಸೋದ್ಯಮದಲ್ಲಿ ತೊಡಗಿಕೊಂಡಿರುವವರಿಗೆ ಇದು ಹೊಡೆತ ಬೀಳಲಿದೆ ಎಂಬುದಾಗಿ ಅಲ್ಲಿನ ಸ್ಥಳೀಯರು ಇದನ್ನು ವಿರೋಧಿಸುತ್ತಿದ್ದಾರೆ.

ಏನು ಪ್ರಯತ್ನ ?
ಅಲ್ಲಿನ ಸ್ಥಳೀಯರ ವಿರೋಧದ ನಡುವೆಯೂ ಜಪಾನ್‌ ಸ್ಥಗಿತವಾಗಿದ್ದ ಜಿಯೋ ಥರ್ಮಲ್‌ ಚಟುವಟಿಕೆಗಳನ್ನು ಮತ್ತೆ ಆರಂಭಿಸಲು ಚಿಂತನೆ ನಡೆಸಿದೆ. ವಿದ್ಯುತ್‌ ಶಕ್ತಿ ಹಾಗೂ ಪಳಯುಳಿಕೆ ಇಂಧನಗಳ ಪೂರೈಕೆಗಾಗಿ ಇತರ ದೇಶಗಳ ಮೇಲೆ ಅವಲಂಬಿತವಾಗಿರುವ ಜಪಾನ್‌ಗೆ ಈ ಕ್ಷೇತ್ರದಲ್ಲಿ ಸ್ವತಂತ್ರವಾಗಬೇಕಾದ ಅನಿವಾರ್ಯವಿದೆ. 2050ರ ವೇಳೆಗೆ ಕಾರ್ಬನ್‌ ನ್ಯೂಟ್ರಾಲಿಟಿಯನ್ನು ಸ್ಥಾಪಿಸುತ್ತೇವೆ ಎಂಬ ಪಣವನ್ನು ಜಪಾನ್‌ ತೊಟ್ಟಿದೆ. ಹೀಗಾಗಿ ಜಿಯೋ ಥರ್ಮಲ್‌ ಸಂಪನ್ಮೂಲಗಳಲ್ಲಿ ಸಂಪದ್ಭರಿತವಾಗಿರುವ ಜಪಾನ್‌ಗೆ ಇದರ ಸರಿಯಾದ ವಿನಿಯೋಗ ಮಾಡಿಕೊಳ್ಳುವ ಅವಕಾಶವೂ ಇದೆ. ಒಂದು ವೇಳೆ ಜಿಯೋ ಥರ್ಮಲ್‌ ಪ್ರಕ್ರಿಯೆಯನ್ನು ಪುನಃ ಆರಂಭಿಸಿದರೆ ಜಪಾನ್‌ ಶೇ.10 ರಷ್ಟು ವಿದ್ಯತ್‌ ಅನ್ನು ಜಿಯೋ ಥರ್ಮಲ್‌ನಿಂದ ಉತ್ಪಾದಿಸಬಹುದಾಗಿದೆ. ದೇಶದ ಶಕ್ತಿ ಉತ್ಪಾದನೆಯಲ್ಲಿ ಇದು ಬಹುಮುಖ್ಯ ಪಾತ್ರವನ್ನು ವಹಿಸಲಿದೆ. ಶಕ್ತಿ, ಇಂಧನ ಉತ್ಪಾದನೆಯಲ್ಲಿ ಎದುರಾಗಿರುವ ಸಮಸ್ಯೆಗಳಿಗೂ ಇದು ಪರಿಹಾರವಾಗಲಿದೆ.

-ವಿಧಾತ್ರಿ ಭಟ್‌ ಉಪ್ಪುಂದ

 

ಟಾಪ್ ನ್ಯೂಸ್

ಅಡಿಕೆ, ಹಿಂಗಾರ ಕಳವು ಮಾಡುತ್ತಿದ್ದ ವ್ಯಕ್ತಿಯ ಸೆರೆ

Kinnigoli ಅಡಿಕೆ, ಹಿಂಗಾರ ಕಳವು ಮಾಡುತ್ತಿದ್ದ ವ್ಯಕ್ತಿಯ ಸೆರೆ

Perla, Kasaragod; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Perla; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

raKundapura ರೈಲಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ

Kundapura ರೈಲಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Dharmasthala; ಕೆಎಸ್ಸಾರ್ಟಿಸಿ ಬಸ್‌ನಡಿ ಸಿಲುಕಿ ಮಹಿಳೆ ಸಾವು

Dharmasthala; ಕೆಎಸ್ಸಾರ್ಟಿಸಿ ಬಸ್‌ನಡಿ ಸಿಲುಕಿ ಮಹಿಳೆ ಸಾವು

ಮಾದಕವಸ್ತು ಕಳ್ಳಸಾಗಣೆ: ಸುಳ್ಯದ ಇಬ್ಬರು ಕೇರಳ ಪೋಲಿಸ್‌ ವಶಕ್ಕೆ

ಮಾದಕವಸ್ತು ಕಳ್ಳಸಾಗಣೆ: ಸುಳ್ಯದ ಇಬ್ಬರು ಕೇರಳ ಪೋಲಿಸ್‌ ವಶಕ್ಕೆ

Aranthodu ಕಾಂಗ್ರೆಸ್‌ ಕಾರ್ಯಕರ್ತನ ಮೇಲೆ ಹಲ್ಲೆ

Aranthodu ಕಾಂಗ್ರೆಸ್‌ ಕಾರ್ಯಕರ್ತನ ಮೇಲೆ ಹಲ್ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Ram Ayodhya

Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಅಡಿಕೆ, ಹಿಂಗಾರ ಕಳವು ಮಾಡುತ್ತಿದ್ದ ವ್ಯಕ್ತಿಯ ಸೆರೆ

Kinnigoli ಅಡಿಕೆ, ಹಿಂಗಾರ ಕಳವು ಮಾಡುತ್ತಿದ್ದ ವ್ಯಕ್ತಿಯ ಸೆರೆ

Perla, Kasaragod; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Perla; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

raKundapura ರೈಲಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ

Kundapura ರೈಲಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Dharmasthala; ಕೆಎಸ್ಸಾರ್ಟಿಸಿ ಬಸ್‌ನಡಿ ಸಿಲುಕಿ ಮಹಿಳೆ ಸಾವು

Dharmasthala; ಕೆಎಸ್ಸಾರ್ಟಿಸಿ ಬಸ್‌ನಡಿ ಸಿಲುಕಿ ಮಹಿಳೆ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.