ನಿರುದ್ಯೋಗಿಗಳಿಗೆ ಶುಭ ಸುದ್ದಿ : ಸೆಂಬರ್‌ನಲ್ಲಿ ನೇಮಕಾತಿ ಶೇ. 14ರಷ್ಟು ಹೆಚ್ಚಳ


Team Udayavani, Jan 13, 2021, 7:02 AM IST

ನಿರುದ್ಯೋಗಿಗಳಿಗೆ ಶುಭ ಸುದ್ದಿ : ಸೆಂಬರ್‌ನಲ್ಲಿ ನೇಮಕಾತಿ ಶೇ. 14ರಷ್ಟು ಹೆಚ್ಚಳ

ಉದ್ಯೋಗ ಮಾರುಕಟ್ಟೆ ಯಲ್ಲಿ ಸುಧಾ ರಣೆಯ ಲಕ್ಷಣ ಗಳು ಗೋಚರಿ ಸುತ್ತಿವೆ. ಇದು ನಿರುದ್ಯೋಗಿಗಳಿಗೆ ಒಳ್ಳೆಯ ಸುದ್ದಿಯಾಗಿದೆ. ಕಳೆದ ವರ್ಷದ ನವೆಂಬರ್‌ಗೆ  ಹೋಲಿಸಿದರೆ  ಡಿಸೆಂಬರ್‌ ತಿಂಗಳಿನಲ್ಲಿ ಶೇ. 14ರಷ್ಟು ಹೆಚ್ಚು ಮಂದಿಗೆ ಉದ್ಯೋಗ ದೊರೆತಿದೆ. ಆದರೆ 2019ರ ಇದೇ ಅವಧಿಯ ಅಂಕಿ ಅಂಶಗಳಿಗೆ ಹೋಲಿಸಿದರೆ ಇದು ಕಡಿಮೆ ಎಂದು ನೌಕರಿ ಡಾಟ್‌ ಕಾಂನ ಜಾಬ್‌ಸ್ಪೀಕ್‌ ಇಂಡೆಕ್ಸ್‌ ಹೇಳಿದೆ.

ವಿಮಾ ಕ್ಷೇತ್ರದಲ್ಲಿ ಶೇ. 45ರಷ್ಟು ಹೆಚ್ಚಳ :

ವಿಮಾ ವಲಯದಲ್ಲಿ ನವೆಂಬರ್‌ಗೆ ಹೋಲಿಸಿದರೆ ಕಳೆದ ತಿಂಗಳು ಶೇ. 45ರಷ್ಟು ಹೆಚ್ಚು ನೇಮಕಾತಿ ನಡೆದಿದೆ. ಜನರಲ್ಲಿ ಆರೋಗ್ಯ ಮತ್ತು ವಿಮೆಯ ಬಗ್ಗೆ ಹೆಚ್ಚಿನ ಅರಿವು ಮೂಡಿರುವುದರ ಸಂಕೇತ ಇದಾಗಿದೆ. ಇದರಿಂದಾ ಗಿಯೇ ಈ ವಲಯದಲ್ಲಿ ಉದ್ಯೋಗಾವಕಾಶ ಹೆಚ್ಚಿತು.

ಇತರ ಕ್ಷೇತ್ರಗಳಾವುವು? :

ಹೆಚ್ಚಿನ ಪ್ರಮಾಣದ ನೇಮ ಕಾತಿಗಳು ನಡೆದ ಇತರ ಕ್ಷೇತ್ರಗಳ ಪೈಕಿ ಆಟೋ ಮತ್ತು ಪೂರಕ ವಲಯ (ಚncಜಿllಚry sಛಿcಠಿಟ್ಟ) ವು ಎರಡನೇ ಸ್ಥಾನದಲ್ಲಿದೆ. ಈ ವಲಯಗಳು ಶೇ. 33ರಷ್ಟು ಹೆಚ್ಚಿನ ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿವೆ. ಈ ಬೆಳವಣಿಗೆಗೆ ವಾಹನಗಳ ಖರೀದಿ ಮತ್ತು ವರ್ಷದ ಕೊನೆಯಲ್ಲಿ  ಸರಕು ಸಾಗಣೆ ಪ್ರಮಾಣ ಏರಿಕೆಯಾದುದೇ ಕಾರಣವಾಗಿವೆ. ನವೆಂಬರ್‌ಗೆ ಹೋಲಿಸಿದರೆ ಫಾರ್ಮಾ ಮತ್ತು ಬಯೋಟೆಕ್‌ನಲ್ಲಿ ಶೇ. 28ರಷ್ಟು, ಎಫ್ಎಂಸಿಜಿ ವಲಯದಲ್ಲಿ ಶೇ. 21ರಷ್ಟು ಮತ್ತು ಐಟಿ ಸಾಫ್ಟ್ವೇರ್‌ನಲ್ಲಿ ಶೇ. 11ರಷ್ಟು ಹೆಚ್ಚಿನ ಪ್ರಮಾಣದಲ್ಲಿ  ನೇಮಕಾತಿಗಳು ನಡೆದಿವೆ.

ದಿಲ್ಲಿಯಲ್ಲಿ ಶೇ. 16ರಷ್ಟು ನೇಮಕಾತಿ ಹೆಚ್ಚಳ :

ಮೆಟ್ರೊ ಉದ್ಯೋಗ ಮಾರುಕಟ್ಟೆಯಲ್ಲಿ ಡಿಸೆಂಬರ್‌ನಲ್ಲಿ ಅತೀ ಹೆಚ್ಚು ಚೇತರಿಕೆ ಕಂಡುಬಂದಿದೆ. ನವೆಂಬರ್‌ ಬಳಿಕ ಪುಣೆ ಶೇ. 18ರಷ್ಟು ಮತ್ತು ದಿಲ್ಲಿಯಲ್ಲಿ ಶೇ. 16ರಷ್ಟು ಹೆಚ್ಚಿನ ಪ್ರಮಾಣದ ನೇಮಕಾತಿಗಳು ನಡೆದಿವೆ. 2ನೇ ಹಂತದ ನಗರಗಳ ಪೈಕಿ ಕೊಯಮತ್ತೂರಿನಲ್ಲಿ ಸುಮಾರು ಶೇ. 30ರಷ್ಟು, ಅಹ್ಮದಾಬಾದ್‌ನಲ್ಲಿ ಶೇ. 20ರಷ್ಟು ಮತ್ತು ಜೈಪುರದಲ್ಲಿ ಶೇ. 15ರಷ್ಟು ಹೆಚ್ಚಳ ದಾಖಲಾಗಿದೆ.

ಹೊಟೇಲ್‌ ಉದ್ಯಮದಲ್ಲಿ ಶೇ. 13 ಚೇತರಿಕೆ :

ಟಿಕೆಟಿಂಗ್‌ ಮತ್ತು ಪ್ರವಾಸೋದ್ಯಮ ಕ್ಷೇತ್ರಕ್ಕೆ ಸಂಬಂಧಿಸಿದ ಉದ್ಯೋಗಗಳು ಡಿಸೆಂಬರ್‌ನಲ್ಲಿ ಶೇ. 46ರಷ್ಟು ಏರಿಕೆ ಕಂಡಿದೆ. ಕೋವಿಡ್‌-19 ಕಾರಣದಿಂದಾಗಿ ಹೆಚ್ಚು ನಷ್ಟ ಅನುಭವಿಸಿದ ಹೊಟೇಲ್‌/ ರೆಸ್ಟೋರೆಂಟ್‌ ಉದ್ಯಮದಲ್ಲಿ ನವೆಂಬರ್‌ನಲ್ಲಿ ಶೇ. 13ರಷ್ಟು ಹೆಚ್ಚಿನ ನೇಮಕಾತಿಗಳು ನಡೆದಿವೆ.

ಯಾರಿಗೆ ಬೇಡಿಕೆ? :

ಬೋಧನೆ, ಶಿಕ್ಷಣಕ್ಕೆ ಪೂರಕವಾದ ವಲಯಗಳಲ್ಲಿ ಶೇ. 27 ರಷ್ಟು, ಮಾನವ ಸಂಪನ್ಮೂಲ/ಆಡಳಿತ ಕೇಂದ್ರಗಳಲ್ಲಿ ಶೇ. 22ರಷ್ಟು  ಹೆಚ್ಚಿನ ಬೇಡಿಕೆ ಕಂಡುಬಂದಿದೆ. ಕಳೆದ ತಿಂಗಳು ಉದ್ಯೋಗ‌ ಕ್ಷೇತ್ರದಲ್ಲಿ ಶೇ. 18ರಷ್ಟು ಬೇಡಿಕೆ ಹೆಚ್ಚಾಗಿದೆ.

ಜೂನ್‌ ತ್ತೈಮಾಸಿಕದಲ್ಲಿ ಶೇ. 56ರಷ್ಟು ಕುಸಿತ :

ಕೋವಿಡ್ ಸಾಂಕ್ರಾಮಿಕದಿಂದಾಗಿ ತೀವ್ರ ಹಿನ್ನಡೆ ಕಂಡಿದ್ದ ಆತಿಥ್ಯ, ಪ್ರಯಾಣ, ಆಟೋ ಮತ್ತು ಚಿಲ್ಲರೆ ಕ್ಷೇತ್ರಗಳು ಹಳಿಗೆ ಮರಳುತ್ತಿವೆ. ಡಿಸೆಂಬರ್‌ನಲ್ಲಿನ ನೇಮಕಾತಿ ಅಂಕಿ ಅಂಶಗಳು 2021ರಲ್ಲಿ ಬಲವಾದ ಚೇತರಿಕೆ ಕಾಣುವ ಸಾಧ್ಯತೆಯನ್ನು ಸೂಚಿಸುತ್ತವೆ. ಪ್ರಸಕ್ತ ಹಣಕಾಸು ವರ್ಷದ ಜೂನ್‌ ತ್ತೈಮಾಸಿಕದಲ್ಲಿ ನೇಮಕಾತಿಗಳು ಹಿಂದಿನ ಹಣಕಾಸು ವರ್ಷಕ್ಕಿಂತ ಶೇ. 56ರಷ್ಟು ಕಡಿಮೆಯಾಗಿತ್ತು. ಆದರೆ ಅನಂತರದ ತ್ತೈಮಾಸಿಕಗಳಲ್ಲಿ ಸುಧಾರಣೆ ಕಂಡಿದೆ.

ವರ್ಷಾಂತ್ಯದಲ್ಲಿ ಹೇಗಿತ್ತು? :

2020ರ ಡಿಸೆಂಬರ್‌ಗೆ ಅಂತ್ಯಗೊಂಡ ತ್ತೈಮಾಸಿಕದಲ್ಲಿ ನೇಮಕಾತಿಯು 2019ರ ಡಿಸೆಂಬರ್‌ ತ್ತೈಮಾಸಿಕಕ್ಕಿಂತ ಕೇವಲ ಶೇ. 18ರಷ್ಟು ಕಡಿಮೆಯಾಗಿದೆ. ಐಟಿ ಮತ್ತು ಬಿಪಿಒ ಜತೆಗೆ, ವೈದ್ಯಕೀಯ ಮತ್ತು ಔಷಧ ಕ್ಷೇತ್ರದಲ್ಲಿ ನೇಮಕಾತಿಗಳು ಹೆಚ್ಚಾಗಿವೆ.

ಟಾಪ್ ನ್ಯೂಸ್

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-good-friday

ಶುಭ ಶುಕ್ರವಾರ: ಸಾಮಾಜಿಕ ನ್ಯಾಯದ ಪ್ರತೀಕ ಯೇಸು ಕ್ರಿಸ್ತ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

World Theatre Day 2024: ರಂಗಭೂಮಿ ಕಲೆ-ಯುದ್ಧ ಮತ್ತು ಶಾಂತಿ ಪರಸ್ಪರ ವಿರುದ್ಧ ಧ್ರುವ

World Theatre Day 2024: ರಂಗಭೂಮಿ ಕಲೆ-ಯುದ್ಧ ಮತ್ತು ಶಾಂತಿ ಪರಸ್ಪರ ವಿರುದ್ಧ ಧ್ರುವ

ಡೌಟೇ ಬೇಡ, ಜೋಡೆತ್ತುಗಳ ಹಾಗೆ ನಾನು, ಅನಂತ ಹೆಗಡೆ ಇಬ್ಬರೂ ಕೆಲಸ ಮಾಡುತ್ತೇವೆ…

ಡೌಟೇ ಬೇಡ, ಜೋಡೆತ್ತುಗಳ ಹಾಗೆ ನಾನು, ಅನಂತ ಹೆಗಡೆ ಇಬ್ಬರೂ ಕೆಲಸ ಮಾಡುತ್ತೇವೆ…

Book Review;ವಿಶಿಷ್ಟ ರೂಪಕ ಶೈಲಿಯಿಂದ ಚಿತ್ರ ರಸಿಕರ ಮನಗೆದ್ದ ಕಾಸರವಳ್ಳಿಯ “ಬಿಂಬ ಬಿಂಬನ”

Book Review;ವಿಶಿಷ್ಟ ರೂಪಕ ಶೈಲಿಯಿಂದ ಚಿತ್ರ ರಸಿಕರ ಮನಗೆದ್ದ ಕಾಸರವಳ್ಳಿಯ “ಬಿಂಬ ಬಿಂಬನ”

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

partner kannada movie

Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್‌’: ಟ್ರೇಲರ್‌, ಆಡಿಯೋದಲ್ಲಿ ಹೊಸಬರ ಚಿತ್ರ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.