ಮತ್ತೆ ಹಫೀಜ್‌ ಬಂಧನ!

ಇದು 9ನೇ ಬಾರಿ

Team Udayavani, Jul 19, 2019, 5:00 AM IST

t-44

ಮಣಿಪಾಲ: ಭಯೋತ್ಪಾದನೆಯ ಮಾಸ್ಟರ್‌ ಮೈಂಡ್‌, 26/11 ಮುಂಬಯಿ ದಾಳಿಯ ರೂವಾರಿ ಹಫೀಜ್‌ ಸಯೀದ್‌ನನ್ನು ಪಾಕಿಸ್ಥಾನ ಸರಕಾರ ಬುಧವಾರ ಹಠಾತ್ತನೆ ಬಂಧಿಸಿದೆ. ಈತ ಅಮೆರಿಕ ಮತ್ತು ಭಾರತಕ್ಕೆ ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ. ಭಾರತ ಅತನ ಹಸ್ತಾಂತರಕ್ಕೆ ಆಗ್ರಹಿಸುತ್ತಲೇ ಬಂದಿತ್ತು. ಹಾಗಂತ ಪಾಕಿಸ್ಥಾನ ಭಾರತದ ಕೋರಿಗೆ ಮನ್ನಣೆ ನೀಡುವ ಸಲುವಾಗಿ ಈ ಬಂಧನ ನಡೆದಿಲ್ಲ. ಪಾಕ್‌ ಈಗಾಗಲೇ 8 ಬಾರಿ ಈ ಉಗ್ರನನ್ನು ಬಂಧಿಸಿ, ಬಿಡುಗಡೆ ಮಾಡಿತ್ತು. ಹಫೀಜ್‌ಗೆ ಜೈಲು ಎಂದರೆ ಕೇವಲ ನಾಲ್ಕು ಗೋಡೆಯ ಕೊಠಡಿ.

2001
ಮುಂಬಯಿ ದಾಳಿಯ 7 ವರ್ಷ ಮೊದಲು ಭಾರತದ ಸಂಸತ್ತಿನ ಮೇಲೆ ಹಫೀಜ್‌ ದಾಳಿ ಮಾಡಿದ್ದ. ಅವನ ಬಂಧನಕ್ಕೆ ಭಾರತ ಪಾಕ್‌ ಅನ್ನು ಆಗ್ರಹಿಸುತ್ತಲೇ ಬಂದಿತ್ತು. ಅಂತೂ 2001ರ ಡಿಸೆಂಬರ್‌ 21ರಂದು ಪಾಕ್‌ ಸರಕಾರ ಬಂಧಿಸಿತ್ತು. ಆದರೆ 31 ಮಾರ್ಚ್‌ 2002ರಲ್ಲಿ ಅಲ್ಲಿನ ಹೈಕೋರ್ಟ್‌ ಆದೇಶದ ಮೇರೆಗೆ ಬಿಡುಗಡೆಗೊಳಿಸಲಾಗಿತ್ತು. ಮತ್ತೆ ಅದೇ ವರ್ಷ ಮೇ 15ರಂದು ಬಂಧಿಸಿ, ಅಕ್ಟೋಬರ್‌ 31ರಂದು ಜೈಲಿನ ಹೊರಗಿದ್ದ.

2006
200 ಜನರ ಸಾವಿಗೆ 11 ಜುಲೈ 2006ರ ಮುಂಬಯಿಯ ರೈಲುಗಳಲ್ಲಿ ಸರಣಿ ನ್ಪೋಟ ಕಾರಣ ವಾಗಿತ್ತು. ಇದರಲ್ಲಿ ಹಫೀಜ್‌ ಪಾತ್ರ ನಿರ್ಣಾಯಕವಾಗಿತ್ತು. ಈ ಭೀಕರ ಕೃತ್ಯದಲ್ಲಿ ನೇರ ಭಾಗಿಯಾದ ಹಫೀಜ್‌ ಸಯೀದ್‌ನ ಬಂಧನಕ್ಕಾಗಿ ಭಾರತ ಅಂದಿನ ಪಾಕ್‌ ಪ್ರಧಾನಿ ಪರ್ವೇಜ್‌ ಮುಶ್ರಫ್ ಬಳಿ ವಿನಂತಿಸಲಾಗಿತ್ತು. ಆದರೆ ಆರಂಭದಲ್ಲಿ ಅದು ಪ್ರಯೋಜನವಾಗಿರಲಿಲ್ಲ. ಅಂತೂ 9 ಅಗಸ್ಟ್‌ 2006ರಲ್ಲಿ ಜೈಲು ಪಾಲಾಗಿದ್ದ. ಆದರೆ ಮತ್ತೆ ಹೈಕೋರ್ಟ್‌ ಆದೇಶದನ್ವಯ ವಾರದ ಬಳಿಕ ಹೊರ ಬಂದಿದ್ದ. ವಿಚಿತ್ರ ಎಂದರೆ ಅದೇ ದಿನ ಪುನಃ ಬಂಧನಕ್ಕೆ ಒಳಗಾಗಿದ್ದ ಹಫೀಜ್‌ ಅಕ್ಟೋಬರ್‌ 17ರಂದು ಹೊರಬಂದಿದ್ದ.

2008
170 ಜನರ ಮೃತ್ಯುವಿಗೆ ಕಾರಣವಾಗಿದ್ದ 26/11 ರ ಮುಂಬಯಿ ದಾಳಿಯಲ್ಲಿ ಹಫೀಜ್‌ನ ನೇರ ಪಾತ್ರ ಇತ್ತು. ಡಿಸೆಂಬರ್‌ 10ರಂದು ವಿಶ್ವಸಂಸ್ಥೆ ಆತನಿಗೆ ನಿರ್ಬಂಧ ವಿಧಿಸಿತ್ತು. ಮರುದಿನ ಪಾಕ್‌ ಸರಕಾರ ಉಗ್ರನನ್ನು ಬಂಧಿಸಿತ್ತು. ಆದರೆ ಭಾರತ ಎಷ್ಟೇ ಸಾಕ್ಷ್ಯಒದಗಿಸಿದ್ದರೂ 2009ರ ಜೂನ್‌ 2ರಂದು ಬಿಡುಗಡೆಗೊಂಡಿದ್ದ.

2009
ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ಹಫೀಜ್‌ನನ್ನು ಹಸ್ತಾಂತರಿಸುವಂತೆ, ಭಾರತದ ಹಲವು ಬಾರಿ ಕೋರಿಕೊಂಡಿತ್ತು. ಆದರೆ ಪಾಕ್‌ ಕಡೆಯಿಂದ ಯಾವುದೇ ಸ್ಪಂದನೆ ವ್ಯಕ್ತವಾಗಿ ರಲಿಲ್ಲ. ರೆಡ್‌ ಕಾರ್ನರ್‌ ನೋಟಿಸ್‌ ಕಳುಹಿಸಿದ ಬಳಿಕ ಬಂಧನ ವಾಗಿತ್ತು. ಆದರೆ ಲಾಹೋರ್‌ ಹೈಕೋರ್ಟ್‌ ಉಗ್ರನ ವಿರುದ್ಧ‌ ಸಾಕ್ಷ್ಯ ಕೊರತೆ ಇದೆ ಎಂದು ಹೇಳಿ ಬಿಡುಗಡೆಗೆ ಆಜ್ಞಾಪಿಸಿತ್ತು.

2017
ಸ್ವತಃ ಪಾಕಿಸ್ಥಾನವೇ ಹಫೀಜ್‌ ವಿರುದ್ಧ ಕಾನೂನು ಸಮರದ ನಾಟಕ ವಾಡಿತ್ತು. ಇವನಿಂದ ದೇಶದೊಳಗೆ ಕಾನೂನು ಸುವ್ಯವಸ್ಥೆಗೆ ಅಡ್ಡಿಯಾಗುತ್ತದೆ ಎಂದು ಕೋರ್ಟ್‌ ಮೊರೆ ಹೋಗಿತ್ತು. ಇದರನ್ವಯ 24 ನವೆಂಬರ್‌ನಲ್ಲಿ ಬಂಧನ ಕ್ಕೊಳಗಾಗಿದ್ದ ಹಫೀಜ್‌ ಬಳಿಕ ಬಿಡುಗಡೆಗೊಂಡಿದ್ದ. ಇದೀಗ ಮತ್ತೆ ಪಾಕ್‌ ಉಗ್ರನನ್ನು ಜೈಲಿಗಟ್ಟಿದೆ.

ಈ ಬಂಧನಕ್ಕೆ ಏನು ಕಾರಣ?
ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಅಮೆರಿಕ ಭೇಟಿ ಸಂದರ್ಭ ಟ್ರಂಪ್‌ ಅವರನ್ನು ಭೇಟಿಯಾಗಿದ್ದರು. ಈ ವೇಳೆ ಹಫೀಜ್‌ ವಿಷಯ ಚರ್ಚೆಗೆ ಬಂದಿದ್ದು, ಈ ಸಲುವಾಗಿ ಈ ಬಂಧನ ನಡೆದಿದೆ ಎಂಬ ವಿಶ್ಲೇಷಣೆ ನಡೆಯುತ್ತಿದೆ.

ಉದಯವಾಣಿ ಸ್ಪೆಷಲ್‌ ಡೆಸ್ಕ್

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.