ಬದುಕಿನ ಗದ್ಗದಿತ ಉಸಿರು ‘ಇದು ವಿದಾಯವಲ್ಲ’  

ಡಾ| ಧರ್ಮೇಂದ್ರ ಗುಪ್ತ ಅವರ ಹಿಂದಿಯ ಪ್ರಸಿದ್ಧ ಸಾಮಾಜಿಕ ಕಾದಂಬರಿ

ಶ್ರೀರಾಜ್ ವಕ್ವಾಡಿ, May 23, 2021, 6:45 PM IST

Idu Vidayavalla Book written by Parvathi G Aithal, Reviewed by Shreeraj Vakwady

ಈಗಿನ ದಿನಗಳಲ್ಲಿ ಯಾವುದನ್ನೂ ಕೂಡ ‘ದಂಧೆ’ ಅಲ್ಲ ಎಂದು ಹೇಳಲಿಕ್ಕಾಗದ ವಾತಾವರಣದಲ್ಲಿದ್ದೇವೆ.

ಪ್ರತಿಯೊಂದು ಕ್ಷೇತ್ರಗಳು ಕೂಡ ಈಗ ವ್ಯಾಪಾರ ಆಗಿ ಬಿಟ್ಟಿದೆ. ವ್ಯವಾರ ವಹಿವಾಟಿನ ನಡುವ ಒಬ್ಬನ ಬದುಕು ಭವಿಷ್ಯ ಕಾಣದಂತಾಗುವ ಕಾದಂಬರಿ ಇದು‌. ಅಂತಹುದರ ನಡುವೆ ಸಕ್ಕರೆಯೊಳಗೆ ಕಾಣದ ಸಿಹಿಯಂತಹ ಮಧುರ ಪ್ರೇಮ ಪ್ರಣಯದ ಎದೆಸ್ಪರ್ಶಿ ಭಾಗವನ್ನೂ ಕೂಡ ಈ ಕಾದಂಬರಿ ಓದುಗನಿಗೆ ನೀಡುತ್ತದೆ‌.

ಹಿಂದಿಯ ಖ್ಯಾತ ಬರಹಗಾರ ಡಾ. ಧರ್ಮೇಂದ್ರ ಗುಪ್ತ ಅವರ ಜನಪ್ರಿಯ ಕಾದಂಬರಿ ‘ಇಸೆ ವಿದಾ ಮತ್ ಕಹೊ’ ನ ಕನ್ನಡದ ಅನುವಾದ ಕೃತಿಯ ಭಾಷೆ ಮತ್ತು ಭಾವಾಂತರವಿದು.

ಕನ್ನಡದ ಅಗ್ರ ಪಂಕ್ತಿಯ ಅನುವಾದಕರಲ್ಲಿ ಓರ್ವರಾದ ಡಾ. ಪಾರ್ವತಿ ಜಿ. ಐತಾಳ್ ಅವರು ಹಿಂದಿಯಿಂದ ಕನ್ನಡಕ್ಕೆ ಇಳಿಸಿದ ಕೃತಿ ‘ಇದು ವಿದಾಯವಲ್ಲ’.

ಇದನ್ನೂ ಓದಿ : ಮಲೆಯಾಳಂ ನ ಪ್ರಯೋಗಾತ್ಮಕ ವಿಭಿನ್ನ ಸಿನೆಮಾ “ಸಿ ಯು ಸೂನ್”

ಕಾಲೇಜುಗಳಲ್ಲಿ ಹೊಸದಾಗಿ, ತಾತ್ಕಾಲಿಕ ಅವಧಿಗೆ ಪ್ರಾದ್ಯಾಪಕರಾಗಿ ವೃತ್ತಿ ಜೀವನಕ್ಕೆ ಸೇರ್ಪಡೆಗೊಳ್ಳುವ ಯುವ ಶಿಕ್ಷಕರ ಅಸಹನೀಯ ಹಾಗೂ ಅಸಹಾಯಕ ಸ್ಥಿತಿಯನ್ನು ಮಾರ್ಮಿಕವಾಗಿ ಕಟ್ಟಿಕೊಡುತ್ತದೆ ಈ ಕಾದಂಬರಿ.

ಮಾನವನ ಬದುಕಿನ ವಿಕಾಸಕ್ಕೆ ಒಂದು ಮೈಲಿಗಲ್ಲು ನೀಡುವುದು ಶಿಕ್ಷಣ. ಅಂತಹ ಶಿಕ್ಷಣ ಸಂಸ್ಥೆಗಳ ಆಡಳಿತ ವರ್ಗದವರಲ್ಲಿ ನಡೆಯುವ ವಹಿವಾಟು, ಶಿಕ್ಷಣವನ್ನು ವ್ಯಾಪಾರೀಕರಣಕ್ಕೆ ತಿರುಗಿಸುವ ಭ್ರಷ್ಟಾಚಾರ, ಈಗಷ್ಟೇ ಹೊಸದಾಗಿ ವೃತ್ತಿ ಜೀವನಕ್ಕೆ ಕಾಲಿಟ್ಟ ಯುವ ಶಿಕ್ಷಕರನ್ನು ಮೆಷಿನ್ ಹಾಗೆ ದುಡಿಸಿಕೊಳ್ಳುವ ‘ಮ್ಯಾನೆಜ್‌ ಮೆಂಟ್‌ ಧೋರಣೆ’, ಶಿಕ್ಷಣ ಸಂಸ್ಥೆಗಳ ಅವ್ಯವಸ್ಥೆ, ಒಟ್ಟಾರೆಯಾಗಿ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುವ ಮೇಲಾಟ, ಒಳ ಆಟ ಎಲ್ಲವನ್ನೂ ತೋರಿಸಿದ ರೀತಿ ಪ್ರಸ್ತುತಕ್ಕೆ ರಾಚುವಂತೆ ಈ ಕೃತಿ ಇದೆ ಎನ್ನುವುದಕ್ಕೆ ಹಿಂದೆ ಮುಂದೆ ನೋಡಬೇಕಾಗಿಲ್ಲ.

ಶಿಕ್ಷಣ ಅದೊಂದು ಮನುಷ್ಯ ಬದುಕಿನ ತಳಹದಿ.  ಸಮಾಜದಲ್ಲಿ, ಶಿಕ್ಷಣ ಸಾಮಾಜಿಕ ಒಳಿತಿನ ಬಹು ಮುಖ್ಯ ಅಂಗ. ಸಮಾನತೆ, ಸಾಮಾಜಿಕ ನ್ಯಾಯ ಮತ್ತು ತಾರತಮ್ಯತೆಗಳನ್ನು ತೊಡೆದು ಹಾಕಿ ಮಾನವೀಯತೆಯ ನೆಲೆಗಟ್ಟಿನಲ್ಲಿ ಸಮಗ್ರ ಸಮಾಜವನ್ನು ಹೆಣೆದುಕೊಳ್ಳುವ ಒಟ್ಟು ಪ್ರಕ್ರಿಯೆಯಲ್ಲಿ ಶಿಕ್ಷಣದ ಪಾಲು ಮಹತ್ತರವಾದದ್ದು.

ದುರಂತದ ಸಂಗತಿಯೆಂದರೆ, ಸಾಮಾಜಿಕವಾಗಿ ಬೆಳಕಾಗಬೇಕಿದ್ದ ಹಾಗೂ ಒಳಿತಿಗಾಗಬೇಕಿದ್ದ ಶಿಕ್ಷಣ ಇಂದು ವ್ಯಾಪರೀಕರಣಗೊಂಡು ಕಾರ್ಪೋರೇಟ್ ಚಿಂತನೆಯತ್ತ ಭೀಮ ಹೆಜ್ಜೆಯನ್ನಿಟ್ಟಿರುವುದು. ಇಂದು ಶಿಕ್ಷಣ ಎನ್ನುವುದು ಮಾರಾಟವಾದ ವಸ್ತುವಾಗಿದೆ. ನವ ವಸಾಹತುಶಾಹಿಯ ವ್ಯಾಪಾರದ ಮನಸ್ಥಿತಿಗೆ ಇಂದು ನಾವೆಲ್ಲರೂ ವೈಯಕ್ತಿಕವಾಗಿ ಮತ್ತು ಸಾಮುದಾಯಿಕವಾಗಿ ಬಲಿಯಾಗಿದ್ದೇವೆ ಎನ್ನುವುದರಲ್ಲಿ ಅನುಮಾನವಿಲ್ಲ.

ನವ ವಸಾಹತುಶಾಹಿಯ ಒಂದು ಮುಖ್ಯ ಲಕ್ಷಣವೆಂದರೆ ಜೀವನದ ಪ್ರತಿಯೊಂದು ಮೂಲಭೂತ ಅಗತ್ಯತೆಗಳನ್ನು ಮಾರಾಟಮಾಡಬಲ್ಲ ಸರಕುಗಳನ್ನಾಗಿ ಮಾರ್ಪಡಿಸುವುದರ ಮೂಲಕ ಅದರಿಂದ ಗರಿಷ್ಠ ಲಾಭಗಳಿಸುವ ತಳಹದಿಯನ್ನು ನಿರ್ಮಾಣ ಮಾಡಿಕೊಂಡು ಮೆರೆಯುವುದು.

ನವ ವಸಾಹತುಶಾಹಿಯ ಯುಗಧರ್ಮವೆಂದರೇ ಹಾಗೆ, ಎಲ್ಲಾ ಮಾನವ ಸಂಬಂಧಗಳನ್ನು ಹಣಕ್ಕೆ ಕೊಂಡು ಬಳಸಿಕೊಳ್ಳುವುದು. ಹಣದ ಸಂಬಂಧಗಳನ್ನಾಗಿ ಬದಲಾಯಿಸಿ ಮಾನವೀಯತೆಯ ಜಾಗದಲ್ಲಿ ಲಾಭ ನುಂಗುವ ಸಂಸ್ಕತಿಯನ್ನು, ಪದ್ಧತಿಯನ್ನು ಜೀವನಕ್ರಮವನ್ನಾಗಿಸಿ ಆಟ ನೋಡುವುದಾಗಿದೆ. ಇಂತಹ ವ್ಯವಸ್ಥೆಯೊಲಗೆ ಸಿಲುಕಿದ ಒಬ್ಬ ಯುವ ಪ್ರಾಧ್ಯಾಪಕನ್ನು ಕೇಂದ್ರವಾಗಿಟ್ಟುಕೊಂಡು ಈ ಕಾದಂಬರಿ ಹೆಣೆದುಕೊಂಡಿದೆ.

ನಸುಕು ಹರಿದು ನಾಲ್ಕೂ ದಿಕ್ಕುಗಳಿಗೆ ಬೆಳಕು ಹಬ್ಬಲಾರಂಭಿಸಿದ ಹೊತ್ತಿಗೆ ರೈಲಿನ ಪ್ರಯಾಣದೊಂದಿಗೆ ಆರಂಭ ಪಡೆಯುವ ಕಾದಂಬರಿ, ಯಾವುದೋ ಅಲೆಮಾರಿ ಬದುಕನ್ನು ತೋರಿಸುವ ಕಥೆ, ವ್ಯಥೆ ಎಂಬ ಹಾಗೆ ಮೊದಲ ಕೆಲ ಹೊತ್ತು ಅನ್ನಿಸುತ್ತದೆ. ಹಳ್ಳಿಯ ತೀರದ ಬದುಕನ್ನು ರೈಲಿನ ಕಿಟಕಿಯಾಚೆಗಿನ ನೋಟದಲ್ಲಿ ಕಾಣಿಸುವ ಚಿತ್ರಣ ರಾಜಸ್ಥಾನದ ಹಳ್ಳಿ ಬದುಕನ್ನು ದಾಟಿ ಹೋದ ಮೇಲೆ ಕಥೆ ಬೇರೇನೆ ಇದೆ. ಕಾದಂಬರಿಯ ಆರಂಭವೇ ಓದುಗನನ್ನು ಬಿಡಿಸಲಾರದ ನಂಟೊಂದನ್ನು ಕಟ್ಟಿಕೊಡುತ್ತಾ ಸಾಗುತ್ತದೆ.

ಸಂಭಾಷಣೆ, ವೃತ್ತಿ ಜೀವನದ ಆರಂಭ. ಶಿಕ್ಷಣ ಸಂಸ್ಥೆಗಳು ಯುವ ಶಿಕ್ಷಕರನ್ನು ನೋಡಿಕೊಳ್ಳವ ರೀತಿ, ಕಡಿಮೆ ಸಂಬಳ, ಹೆಚ್ಚು ದುಡಿಮೆ, ಬದುಕು, ಜಂಜಾಟ, ‘ನೀವಲ್ಲವಾದ್ರೆ ನೂರಾರ್ ಮಂದಿ ಇದ್ದಾರೆ ರೀ’ ಎನ್ನುವ ವ್ಯಾಪಾರದ ಅಹಂಕಾರ, ವೃತ್ತಿ ಬದುಕಿನ ಅನುಭವದ ಸಮಾಧಾನ, ಎಲ್ಲವೂ.. ಪ್ರಾಧ್ಯಾಪಕನೋರ್ವನ ಏಕತ್ರ ವಲಸೆ ಬದುಕು, ಒದ್ದಾಟ ಎಲ್ಲವೂ ಪ್ರಸ್ತುತ ದಿನಗಳಿಗೆ ಕನ್ನಡಿ ಹಿಡಿಯುತ್ತವೆ.

ಥಿಸೀಸ್ ನಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಪ್ರಾಧ್ಯಾಪಕ ಸುಭಾಷ್ ಆರ್ಯ, ಒಂದೊಂದಾಗಿ ವೃತ್ತಿ ಬದುಕನ್ನು ಅನುಭವಿಸುವುದರೊಂದಿಗೆ ಆತನ ಖಾಸಗಿ ಬದುಕಿನ ಮುಖ ಇಲ್ಲಿ ಸೊಗಸಾದ ಚಿತ್ರಣವನ್ನು ನೀಡುತ್ತದೆ.

ರಾಜಸ್ಥಾನದ ಹಳ್ಳಿಯೊಂದಕ್ಕೆ ಇಂಗ್ಲಿಷ್ ಪ್ರಾಧ್ಯಾಪಕನಾಗಿ ಸುಭಾಷ್ ಆರ್ಯ ಹೋಗುವುದರಿಂದ ‘ಇದು ವಿದಾಯವಲ್ಲ’ ಕಾದಂಬರಿ ವೇಗ ಪಡೆಯುತ್ತದೆ.  ಆ ಹಳ್ಳಿಯಲ್ಲಿನ ಅನಾಗರಿಕರ ನಡುವೆ ಏಕಾಂಗಿ ಅಸಾಯಕ ನಾಗರಿಕನಾಗಿ ಅನುಭವಿಸಬಹುದಾದ ಕಷ್ಟಗಳು, ಕಾಲೇಜಿನ ಭ್ರಷ್ಟಾಚಾರ, ಇವೆಲ್ಲ ಅಸಹನೀಯ ಬದುಕಿನ ಜಂಜಾಟದ ನಡುವೆ ಪ್ರೀತಿಯೆನ್ನುವ ಹೇಳಿ ವರ್ಣಿಸಲಾಗದ ಒಂದು ಮಜಬೂತಾದ ಭಾವವೊಂದನ್ನು ಹೆಣೆದುಕೊಡುವ ಸೊಗಸಾದ ಕಾದಂಬರಿಯಿದು.

ರಾಜಸ್ಥಾನದ ಹಳ್ಳಿ ಬದುಕಿನ ಸುಂದರ ಚಿತ್ರಣವು ಈ ಕಾದಂಬರಿಯ ಜೊತೆ ತನ್ನನ್ನು ತಾನು ತೆರೆದುಕೊಳ್ಳುತ್ತದೆ. ಅಲ್ಲಿನ ಬದುಕಿನೊಂದಿಗೆ ವೃತ್ತಿ ಜೀವನದ ಸಂಕಷ್ಟಗಳನ್ನು ದಾಟುವ ಸುಭಾಷ್ ಆರ್ಯನಿಗೆ ಕೃತಿಯ ಲೇಖಕರು ಯುವ ಪ್ರಾಧ್ಯಾಪಕರ ಬದುಕನ್ನು ಪ್ರತಿನಿಧಿಸುವ ಪಾತ್ರವನ್ನು ಕಟ್ಟಿಕೊಟ್ಟಿದ್ದಾರೆ.

ಪ್ರಾಧ್ಯಾಪಕರ ಬೇಕು ಬೇಡಗಳ ಕುರಿತು, ಅವರ ಕಷ್ಟ ಭವಣೆಗಳ ಕುರಿತು ಅಗಾಧವಾದ ನೋಟ ಪುಟಪುಟಗಳಲ್ಲಿಯೂ ಕಾಣಸಿಗುತ್ತವೆ.

ಶಿಕ್ಷಕರ ಮೇಲಾಗುವ ಶೋಷಣೆ, ಶೈಕ್ಷಣಿಕ ಕ್ಷೇತ್ರದ ದುರವಸ್ಥೆಗಳಿಗೆ ಹಿಡಿದ ಕನ್ನಡಿಯಾಗಿ ಈ ಪುಸ್ತಕ ನಿರೂಪಿಸಲ್ಪಟ್ಟಿದೆ. ನಿರುದ್ಯೋಗದ ಸಮಸ್ಯೆಯಿಂದ ಬಳಲಿ, ಕೊನೆಗೆ ಖಾಸಗೀ ಸಂಸ್ಥೆಗಳಲ್ಲಿ ಹೊಸದಾಗಿ ಸೇರಿಕೊಳ್ಳುವ ಯುವ ಶಿಕ್ಷಕರು ಯಾವ ರೀತಿ ತಮ್ಮ ಮೇಲಾಗುವ ಶೋಷಣೆಯನ್ನು ಅಸಹಾಯಕವಾಗಿ, ಬೇಸತ್ತು ಸಹಿಸುವಿಕೆಯ ಮಿತಿಯನ್ನೂ ಕೂಡ ಮೀರಿ ಬದುಕುಳಿದು ಕೊನೆಗೆ ಎಲ್ಲೋ ಹೇಗೋ ಹೊಟ್ಟೆ ಪಾಡಿಗೆ ಬದುಕು ದೂಡುವುದಕ್ಕೆ ಮುಂದಾಗುವ ವಿಷಾದವನ್ನು ಯಾವುದೇ ಫಿಲ್ಟರ್ ಹಾಕದೇ  ಚಿತ್ರಿಸಿದ್ದು ವಿಶೇಷ.

ಇನ್ನು, ಹಳ್ಳಿಯ ಬದುಕಿನ ಮುಗ್ಧೆ ಲಕ್ಷ್ಮಿಯೊಂದಿಗಿನ ಅಪ್ಯಾಯಮಾನವಾದ ಒಲವು, ಹಳ್ಳಿ ಮತ್ತು ಮತ್ತು ಅಲ್ಲಿನ ನಂಟು, ಈ ಪ್ರೀತಿಯ ಪ್ರತಿಗಳಿಗೆಯ ಬೇಕು ಬೇಡಗಳ ನಡುವೆ ಉಳಿಯುವ ನಿಷ್ಕಲ್ಮಶ ಎದೆಯ ಭಾವ ಓದುಗನಿಗೆ ಮತ್ತಷ್ಟು ಹಿತ ನೀಡುತ್ತದೆ.

ಶಿಕ್ಷಣ ವ್ಯವಸ್ಥೆಯ ಎಲ್ಲಾ ಕಷ್ಟ, ದುಃಖ ದುಮ್ಮಾನಗಳೊಂದಿಗೆ… ಲಕ್ಷ್ಮಿಯಿಂದ ಭೌತಿಕವಾಗಿ ದೂರವಾಗುವ ಸುಭಾಷ್ ನ ಗದ್ಗದಿತ ಒಳ ಉಸಿರು ‘ಇದು ವಿದಾಯವಲ್ಲ’ ಎನ್ನುತ್ತದೆ.

ಓದು ನಿಮ್ಮದಾಗಲಿ

-ಶ್ರೀರಾಜ್ ವಕ್ವಾಡಿ

ಇದನ್ನೂ ಓದಿ : ಬ್ಲ್ಯಾಕ್ ಫಂಗಸ್ 7000 ಕೋವಿಡ್ ಸೋಂಕಿತರನ್ನು ಬಲಿ ತೆಗೆದುಕೊಂಡಿದೆ : ಡಾ. ರಣದೀಪ್ ಗುಲೇರಿಯಾ

ಟಾಪ್ ನ್ಯೂಸ್

ಬೇಗ ಬಂದ್ ಆದ ಹೊಟೇಲು: ಊಟ ಸಿಕ್ಕಿಲ್ಲವೆಂದು ರೈತರಿಂದ ರಾತ್ರೋರಾತ್ರಿ ಪ್ರತಿಭಟನೆ

ಬೇಗ ಬಂದ್ ಆದ ಹೊಟೇಲು: ಊಟ ಸಿಕ್ಕಿಲ್ಲವೆಂದು ರೈತರಿಂದ ರಾತ್ರೋರಾತ್ರಿ ಪ್ರತಿಭಟನೆ

ದೆಹಲಿ ಗಲಭೆ ಅಪರಾಧಿಗೆ 5 ವರ್ಷ ಜೈಲು: ಪ್ರಕರಣದಲ್ಲಿ ಮೊದಲ ಶಿಕ್ಷೆ ಪ್ರಕಟ

ದೆಹಲಿ ಗಲಭೆ ಅಪರಾಧಿಗೆ 5 ವರ್ಷ ಜೈಲು: ಪ್ರಕರಣದಲ್ಲಿ ಮೊದಲ ಶಿಕ್ಷೆ ಪ್ರಕಟ

ಮಹಾತ್ಮಾ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ: ಧಾರ್ಮಿಕ ಮುಖಂಡ ಕಾಳಿಚರಣ್‌ ಬಂಧನ

ಮಹಾತ್ಮಾ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ: ಧಾರ್ಮಿಕ ಮುಖಂಡ ಕಾಳಿಚರಣ್‌ ಬಂಧನ

ಬಾಲಕನ ಮಾತಿಗೆ ಫಿದಾ ಆದ ಮಹಿಂದ್ರಾ

ಬಾಲಕನ ಮಾತಿಗೆ ಫಿದಾ ಆದ ಮಹಿಂದ್ರಾ

ಇಂಡೋನೇಷ್ಯಾಕ್ಕೆ ಹೊಸ ರಾಜಧಾನಿ

ಇಂಡೋನೇಷ್ಯಾಕ್ಕೆ ಹೊಸ ರಾಜಧಾನಿ

ರಾಜ್ಯಕ್ಕೆ ಶುಭ ಸುದ್ದಿ : 1200ಕೋ.ರೂ. ವೆಚ್ಚದಲ್ಲಿ ಶಿರಾಡಿ ಘಾಟ್ ರಸ್ತೆ ಮೇಲ್ದರ್ಜೆಗೆ

ರಾಜ್ಯಕ್ಕೆ ಶುಭ ಸುದ್ದಿ : 1200ಕೋ.ರೂ. ವೆಚ್ಚದಲ್ಲಿ ಶಿರಾಡಿ ಘಾಟ್ ರಸ್ತೆ ಮೇಲ್ದರ್ಜೆಗೆ

ಪ್ರವಾದಿ ಮೊಹಮ್ಮದ್‌ ಬಗ್ಗೆ ನಿಂದನೆ : ಪಾಕ್‌ ಮಹಿಳೆಗೆ ಗಲ್ಲು

ಪ್ರವಾದಿ ಮೊಹಮ್ಮದ್‌ ಬಗ್ಗೆ ನಿಂದನೆ : ಪಾಕ್‌ ಮಹಿಳೆಗೆ ಗಲ್ಲುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಾರತದ ಹೈ ಟ್ಯಾರಿಫ್ ನೀತಿ ವರವೋ? ಶಾಪವೋ?

ಭಾರತದ ಹೈ ಟ್ಯಾರಿಫ್ ನೀತಿ ವರವೋ? ಶಾಪವೋ?

ವಿಮಾನ ಸೇವೆ ಸ್ಥಗಿತಗೊಳಿಸಿದ “5ಜಿ’

5ಜಿ ತರಂಗಗಳ ಎಫೆಕ್ಟ್: ಅಮೆರಿಕದಲ್ಲಿ ನೂರಾರು ವಿಮಾನಗಳ ಸಂಚಾರ ರದ್ದು

ಜ್ವರವಾಗಿ ಬದಲಾಗುತ್ತಿದೆಯೇ ಕೋವಿಡ್‌?

ಜ್ವರವಾಗಿ ಬದಲಾಗುತ್ತಿದೆಯೇ ಕೋವಿಡ್‌?

thumb 5

ಹಸಿದವನಿಗೆ ಮಾತ್ರ ಗೊತ್ತು ಅಗುಳಿನ ಮಹತ್ವ

ಲಸಿಕೆ ಕಡ್ಡಾಯ; ಜಾರಿ ಸಾಧ್ಯವೇ?

ಕೋವಿಡ್‌ ಲಸಿಕೆ ಕಡ್ಡಾಯ; ಜಾರಿ ಸಾಧ್ಯವೇ?

MUST WATCH

udayavani youtube

ನಿಯಮ ಉಲ್ಲಂಘಿಸಿದ ಬಿಜೆಪಿ ವಿರುದ್ಧವೂ ಪ್ರಕರಣ ದಾಖಲಾಗಬೇಕು: ಡಿಕೆಶಿ ಎಚ್ಚರಿಕೆ

udayavani youtube

ಆಕರ್ಷಕ ಕುರ್ತಿ(1000 – 1500 Rs. Only!!)| Umbrella Kurthis

udayavani youtube

ದಾಂಡೇಲಿಯ ಬೈಲುಪಾರಿನಲ್ಲಿ ವಿದ್ಯುತ್ ತಂತಿಯ ಮೇಲಿಂದ ಬಿದ್ದು ಗಾಯ ಮಾಡಿಕೊಂಡ ಕೋತಿ

udayavani youtube

ವಾಕಿಂಗ್‌ ವಿಚಾರಕ್ಕೆ ಪ್ರಾಂಶುಪಾಲ-ಪ್ರಾಧ್ಯಾಪಕ ಫೈಟಿಂಗ್‌-ವಿಡಿಯೋ ವೈರಲ್‌

udayavani youtube

ನಾಳೆ ರಾಜ್ಯದ ಕರ್ಫ್ಯೂ ಭವಿಷ್ಯ ನಿರ್ಧಾರ : ಇಕ್ಕಟ್ಟಿಗೆ ಸಿಲುಕಿದ ಸಿಎಂ

ಹೊಸ ಸೇರ್ಪಡೆ

ಬೇಗ ಬಂದ್ ಆದ ಹೊಟೇಲು: ಊಟ ಸಿಕ್ಕಿಲ್ಲವೆಂದು ರೈತರಿಂದ ರಾತ್ರೋರಾತ್ರಿ ಪ್ರತಿಭಟನೆ

ಬೇಗ ಬಂದ್ ಆದ ಹೊಟೇಲು: ಊಟ ಸಿಕ್ಕಿಲ್ಲವೆಂದು ರೈತರಿಂದ ರಾತ್ರೋರಾತ್ರಿ ಪ್ರತಿಭಟನೆ

ದೆಹಲಿ ಗಲಭೆ ಅಪರಾಧಿಗೆ 5 ವರ್ಷ ಜೈಲು: ಪ್ರಕರಣದಲ್ಲಿ ಮೊದಲ ಶಿಕ್ಷೆ ಪ್ರಕಟ

ದೆಹಲಿ ಗಲಭೆ ಅಪರಾಧಿಗೆ 5 ವರ್ಷ ಜೈಲು: ಪ್ರಕರಣದಲ್ಲಿ ಮೊದಲ ಶಿಕ್ಷೆ ಪ್ರಕಟ

ಮಹಾತ್ಮಾ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ: ಧಾರ್ಮಿಕ ಮುಖಂಡ ಕಾಳಿಚರಣ್‌ ಬಂಧನ

ಮಹಾತ್ಮಾ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ: ಧಾರ್ಮಿಕ ಮುಖಂಡ ಕಾಳಿಚರಣ್‌ ಬಂಧನ

ಬಾಲಕನ ಮಾತಿಗೆ ಫಿದಾ ಆದ ಮಹಿಂದ್ರಾ

ಬಾಲಕನ ಮಾತಿಗೆ ಫಿದಾ ಆದ ಮಹಿಂದ್ರಾ

ಇಂಡೋನೇಷ್ಯಾಕ್ಕೆ ಹೊಸ ರಾಜಧಾನಿ

ಇಂಡೋನೇಷ್ಯಾಕ್ಕೆ ಹೊಸ ರಾಜಧಾನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.