
ನಭಕ್ಕೆ ಇಂದು ವಿಕ್ರಂ-ಎಸ್
Team Udayavani, Nov 18, 2022, 6:35 AM IST

ಬಾಹ್ಯಾಕಾಶ ಕ್ಷೇತ್ರದಲ್ಲಿ ಈಗಾಗಲೇ ಹಲವು ಮಹತ್ವದ ದಾಖಲೆಗಳನ್ನು ಸಾಧಿಸಿರುವ ದೇಶ ಶುಕ್ರವಾರ ಇನ್ನೊಂದು ಇತಿಹಾಸ ನಿರ್ಮಿಸಲು ಮುಂದಾಗಿದೆ. ಶ್ರೀಹರಿಕೋಟಾದಲ್ಲಿ ಇರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಹೈದರಾಬಾದ್‌ನ ಖಾಸಗಿ ಕಂಪನಿ ಸ್ಕೈರೂಟ್ ಏರೋಸ್ಪೇಸ್ ನಿರ್ಮಾಣ ಮಾಡಿದ “ವಿಕ್ರಂ- ಎಸ್’ ಎಂಬ ಹೆಸರಿನ ರಾಕೆಟ್ ಅನ್ನು ಉಡಾಯಿಸಲಾಗುತ್ತದೆ.
ರಾಕೆಟ್ ವಿಶೇಷತೆ :
- ಅದು ಆರು ಮೀಟರ್ ಎತ್ತರ ಹೊಂದಿದೆ.
- ಭಾರತದ ಎರಡು ಮತ್ತು ವಿದೇಶದ ಒಂದು ಪೇಲೋಡ್‌ಗಳನ್ನು ಹೊಂದಿದೆ.
- ದೇಶದ ಬಾಹ್ಯಾಕಾಶ ಕ್ಷೇತ್ರಕ್ಕೆ ಆಧುನಿಕತೆಯ ಸ್ಪರ್ಶ ನೀಡಿದ ವಿಜ್ಞಾನಿ ಡಾ.ವಿಕ್ರಂ ಸಾರಾಭಾಯ್ ಹೆಸರಿನಲ್ಲಿ ಹೆಸರು ಇರಿಸಲಾಗಿದೆ.
- ಅದು ಸಿಂಗಲ್ ಎಂಜಿನ್ ಹೊಂದಿದ್ದು, 815 ಕೆಜಿ ವರೆಗೆ ಇರುವ ಉಪಗ್ರಹಗಳನ್ನು ಹೊತ್ತೂಯ್ಯಲಿದೆ.
ಉದ್ದೇಶವೇನು?:
- ದೇಶದಲ್ಲಿ ಖಾಸಗಿ ಕಂಪನಿಗಳಿಗೆ ರಾಕೆಟ್ ಉಡಾವಣೆ ಮಾಡಲು ಹೆಚ್ಚಿನ ಅವಕಾಶ ನೀಡುವ ನಿಟ್ಟಿನಲ್ಲಿ ಇದು ಮೊದಲ ಹೆಜ್ಜೆ.
- ಈ ಉಡಾವಣೆ ಯಶಸ್ವಿಯಾದರೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಅವಕಾಶವನ್ನು ಇತರರಿಗೆ ಸೃಷ್ಟಿ ಮಾಡಲಿದೆ.
- ಇಂಡಿಯನ್ ನ್ಯಾಷನಲ್ ಸ್ಪೇಸ್ ಪ್ರೊಮೇಷನ್ ಆ್ಯಂಡ್ ಅಥೋರೈಸೇಷನ್ ಸೆಂಟರ್ (ಇನ್-ಸ್ಪೇಸ್) ನೇತೃತ್ವದಲ್ಲಿ ಹೊಸ ಸಂಶೋಧನೆಗಳಿಗೆ ಮತ್ತಷ್ಟು ಪ್ರೋತ್ಸಾಹ ನೀಡಲು.
ಎಲ್ಲಿಂದ? :
ಆಂಧ್ರಪ್ರದೇಶದ ಶ್ರೀಹರಿ ಕೋಟಾದಲ್ಲಿ ಇರುವ ಸತೀಶ್ ಧವನ್ ಬಾಹ್ಯಾಕೇಶ ಕೇಂದ್ರದಿಂದ
3 ರಾಕೆಟ್‌ಗಳು :
ಸ್ಕೈರೂಟ್ ಏರೋಸ್ಪೇಸ್ ಎಂಬ ಬಾಹ್ಯಾಕಾಶ ಕ್ಷೇತ್ರದ ಸ್ಟಾರ್ಟ್‌ಅಪ್ ವಿಕ್ರಂ-1 480 ಕೆಜಿ ಸಾಮರ್ಥ್ಯ, ವಿಕ್ರಂ-2 595 ಕೆಜಿ ಸಾಮರ್ಥ್ಯ ವಿಕ್ರಂ-3 595 ಕೆಜಿ ಸಾಮರ್ಥ್ಯ ಇರುವ ರಾಕೆಟ್‌ಗಳನ್ನು ಅಭಿವೃದ್ಧಿಪಡಿಸಿತ್ತು.
“ಪ್ರಾರಂಭ’ ಹೆಸರಿನ ಮಿಷನ್:
“ಪ್ರಾರಂಭ’ ಎಂಬ ಹೆಸರಿನ ಧ್ಯೇಯವನ್ನು ಇರಿಸಿಕೊಂಡು ಸ್ಕೈರೂಟ್ ಏರೋಸ್ಪೇಸ್ ಮೂರು ಪೇಲೋಡ್‌ಗಳನ್ನು ಉಡಾಯಿಸಲಿದೆ. ಅದರಲ್ಲಿ ಚೆನ್ನೈನ ಸ್ಪೇಸ್ ಕಿಡ್ಜ್ (Spacekidz) ಎಂಬ ಸಂಸ್ಥೆ ನಿರ್ಮಿಸಿದ “ಫನ್-ಸ್ಯಾಟ್’ ಎಂಬ ಉಪಗ್ರಹವೂ ನಭಕ್ಕೆ ಉಡಾವಣೆಗೊಳ್ಳಲಿದೆ. ಅದು 2.5 ಕೆಜಿ ತೂಕ ಹೊಂದಿದೆ. ಅಮೆರಿಕ, ಭಾರತ, ಸಿಂಗಾಪುರ ಮತ್ತು ಇಂಡೋನೇಷ್ಯಾದ ಮಕ್ಕಳು ಅದನ್ನು ನಿರ್ಮಿಸಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಚೇರಿಯಲ್ಲಿ ಕುರ್ಚಿ ವಿಚಾರಕ್ಕೆ ವಾಗ್ವಾದ ; ಸಹೋದ್ಯೋಗಿಯ ಮೇಲೆ ಗುಂಡು!

ಜನಪ್ರತಿನಿಧಿಗಳಿಗೂ ಜನಸಾಮಾನ್ಯರಿಗೂ ಒಂದೇ ನಿಯಮ; ಸುಪ್ರೀಂ ಕೋರ್ಟ್

“ಆಡಿದ್ದು ಸಾಕು ಓದು” ಎಂದ ಅಪ್ಪನ ಮಾತಿಗೆ ಮನನೊಂದು ಆತ್ಮಹತ್ಯೆಗೆ ಶರಣಾದ 9 ವರ್ಷದ ಮಗಳು

ಮಹಾರಾಷ್ಟ್ರ: ರಾಮಮಂದಿರದ ಹೊರಗಡೆ ಗುಂಪು ಘರ್ಷಣೆ; ಪೊಲೀಸ್ ವಾಹನಗಳಿಗೆ ಬೆಂಕಿ, ಕಲ್ಲು ತೂರಾಟ

ಭಾರತದಲ್ಲಿ ಪಾಕ್ ಸರ್ಕಾರದ ಟ್ವಿಟರ್ ಖಾತೆಗೆ ಮತ್ತೆ ತಡೆ
MUST WATCH
ಹೊಸ ಸೇರ್ಪಡೆ

ಐಪಿಎಲ್ 2023: ಆರ್ ಸಿಬಿಯ ಮೊದಲ ಪಂದ್ಯಕ್ಕೆ ಲಭ್ಯವಿಲ್ಲ ಹೇಜಲ್ವುಡ್, ಮ್ಯಾಕ್ಸವೆಲ್

ರಾಮನ ಅವತಾರ ತಾಳಿದ ರಿಷಿ; ಫಸ್ಟ್ ಲುಕ್ ಪೋಸ್ಟರ್ ಬಂತು

ಟ್ಯೂಷನ್ ಗೆ ತೆರಳಿ ನಾಪತ್ತೆಯಾಗಿದ್ದ ಬಾಲಕನ ಮೃತದೇಹ ಕುಮಾರಧಾರ ನದಿಯಲ್ಲಿ ಪತ್ತೆ

ಬಳ್ಳಾರಿ: ತವರು ಮನೆ ಸೇರಿದ್ದ ಪತ್ನಿಯ ಕೊಲೆಗೆ ಯತ್ನಿಸಿದ ಕುಡುಕ ಗಂಡ

ನಟ ನವಾಜುದ್ದೀನ್,ಮಾಜಿ ಪತ್ನಿಗೆ ಮಕ್ಕಳ ಸಲುವಾಗಿ ಹಾಜರಾಗಲು ಹೇಳಿದ ಹೈಕೋರ್ಟ್