
ರಾಜಧಾನಿಯನ್ನು ಬದಲಾಯಿಸಲಿರುವ ಇಂಡೋನೇಷ್ಯಾ
Team Udayavani, Aug 30, 2019, 5:31 AM IST

ಮಣಿಪಾಲ: ಇಂಡೋನೇಷ್ಯಾ ತನ್ನ ರಾಜಧಾನಿಯನ್ನು ಬದಲಾಯಿಸಲಿದೆ. ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರ ವೊಂದು ತನ್ನ ನೈಸರ್ಗಿಕ ಕಾರಣಕ್ಕೆ ರಾಜಧಾನಿ ಯನ್ನು ಬದಲಾಯಿಸುತ್ತಿರುವುದು ಇದೇ ಮೊದಲು. ಹಾಗಾದರೆ ಏನಿದಕ್ಕೆ ಕಾರಣ? ಇಲ್ಲಿದೆ ಮಾಹಿತಿ.
ಬದಲಾವಣೆ ಏಕೆ?
ಜಕಾರ್ತಾ ಇಂಡೋನೇಷ್ಯಾದ ಸದ್ಯದ ರಾಜಧಾನಿ. ಈ ನಗರದತ್ತ ಸಮುದ್ರ ವಿಸ್ತರಿಸುತ್ತಿದೆ. ಹೀಗಾಗಿ ಮುಳುಗುತ್ತಿರುವ ರಾಜಧಾನಿ ಯಾಗಿದ್ದು ಸ್ಥಳಾಂತರಗೊಳ್ಳಲಿದೆ.
2007
2007ರಲ್ಲಿ ಈ ನಗರ ಮುಳುಗು ತ್ತಿದೆ ಎಂದು ಮೊದಲ ಮುನ್ಸೂಚನೆ ಯನ್ನು ನೀಡಲಾಗಿತ್ತು. ಅತೀ ವೇಗ ವಾಗಿ ಮುಳುಗುತ್ತಿರುವ ನಗರಗಳ ಪೈಕಿ ಇದು ಅಗ್ರಸ್ಥಾನದಲ್ಲಿದೆ.
2.3 ಕೋಟಿ
ಜನಸಂಖ್ಯೆಯನ್ನು ಜಕಾರ್ತಾ ಹೊಂದಿದೆ.
580
ಪ್ರತಿನಿತ್ಯ ಓಡಾಡುವ ರೈಲುಗಳು.
ಶೇ. 20 ಮಂದಿ ಸುರಕ್ಷಿತ
ಶೇ. 80 ಮಂದಿ ಈ ಸಮುದ್ರದ ದಡದಲ್ಲಿ ವಾಸಿಸುತ್ತಿದ್ದಾರೆ. ಕೇವಲ 20 ಶೇ. ಮಂದಿ ಮಾತ್ರ ಸುರಕ್ಷಿತರು.
ಕೊಳಚೆ ಪ್ರದೇಶ
ಈ ಪ್ರದೇಶ ಜಗತ್ತಿನ 3ನೇ ಕೊಳಚೆ ಪ್ರದೇಶವಾಗಿದೆ.
2050
ಈಗಿರುವ ರಾಜಧಾನಿ 2050ರ ಸುಮಾ ರಿಗೆ ಬಹುತೇಕ ಮುಳುಗಡೆ ಯಾಗಲಿದೆ.
ರಾಜಧಾನಿಯನ್ನು ಬದಲಾಯಿಸಲಿರುವ ಇಂಡೋನೇಷ್ಯಾ
ಭಾರತದ ರಾಜಧಾನಿ ಹೊಸ ದಿಲ್ಲಿಯೂ ಸಮಸ್ಯೆಯನ್ನು ಎದುರಿಸುತ್ತಿದೆ. ತೀವ್ರ ವಾಹನ ದಟ್ಟನೆ ಎದುರಿಸುತ್ತಿರುವ ಈ ನಗರ ಭಾರಿ ಧೂಳು ಹೊಂದಿದೆ.
150 ಸೆ.ಮೀ.
ಕಳೆದ 10 ವರ್ಷದಲ್ಲಿ ಜಕಾರ್ತಾ ಮುಳುಗಿದ ಪ್ರಮಾಣ.
ಶೇ. 95
ಈಗಾಗಲೇ ವಿಜ್ಞಾನಿಗಳು ನಿಗದಿಪಡಿಸಿರುವಂತೆ 2050ರ ವೇಳೆಗೆ ಜಕಾರ್ತಾದ ಶೇ. 95ರಷ್ಟು ಭಾಗ ಜಲಾವೃತಗೊಳ್ಳಲಿದೆ.
ಅಭಿವೃದ್ಧಿಗೆ ಅಡ್ಡಿ
ಈ ಪ್ರದೇಶ ಅತೀ ಹೆಚ್ಚು ಪ್ರಾಕೃತಿಕ ವಿಕೋಪಗಳನ್ನು ಕಂಡಿದೆ. ಇದು ಭೂಕಂಪದ ವಲಯವೂ ಹೌದು. ಈ ಒಂದು ಕಾರಣಕ್ಕೆ ಅಭಿವೃದ್ಧಿ ಯಿಂದ ಹಿಂದುಳಿದಿದೆ.
ಟಾಪ್ ನ್ಯೂಸ್
