Udayavni Special

ಭಾರತದಲ್ಲಿ ಇಂಟರ್ನೆಟ್‌ 7.5 ಪಟ್ಟು ದುಬಾರಿ

Team Udayavani, Apr 23, 2021, 6:30 AM IST

ಭಾರತದಲ್ಲಿ ಇಂಟರ್ನೆಟ್‌ 7.5 ಪಟ್ಟು ದುಬಾರಿ

2016ರ ಸೆಪ್ಟಂಬರ್‌ 5ರಂದು ಮುಖೇಶ್‌ ಅಂಬಾನಿ 4ಜಿ ಡೇಟಾ ಮತ್ತು ವಾಯ್ಸ್  ಕಾಲಿಂಗ್‌ ಮೂಲಕ  ರಿಲಯನ್ಸ್‌ ಜಿಯೋವನ್ನು ಪ್ರಾರಂಭಿಸಿದರು. ಇದರೊಂದಿಗೆ ಟೆಲಿಕಾಂ ಮಾರುಕಟ್ಟೆಯಲ್ಲಿ ದರ ಸಮರ ಪ್ರಾರಂಭವಾಯಿತು. ಜಿಯೋ ಮಾರುಕಟ್ಟೆಗೆ  ಪ್ರವೇಶಿಸುವ ಮುನ್ನ ದೇಶದಲ್ಲಿ ಸರಾಸರಿ 1 ಜಿಬಿ 3ಜಿ ಡೇಟಾಗೆ ತಿಂಗಳಿಗೆ 250 ರೂಪಾಯಿ ಪಾವತಿಸಬೇಕಾಗಿತ್ತು. 1 ಜಿಬಿ 2 ಜಿ ಡೇಟಾಗೆ ಆ ಸಮಯದಲ್ಲಿ ಸುಮಾರು 100 ರೂಪಾಯಿಗಳನ್ನು ವಿಧಿಸಲಾಗುತ್ತಿತ್ತು. ಜಿಯೋ ಆಗಮನದ ಅನಂತರ ಇತರ ಕಂಪೆನಿಗಳು ಸಹ ಡೇಟಾದ ದರವನ್ನು ಕಡಿಮೆ ಮಾಡಬೇಕಾಯಿತು. ಹೀಗಾಗಿ ಆ ಸಮಯದಲ್ಲಿ ಭಾರತವು ವಿಶ್ವದಲ್ಲಿಯೇ ಅತ್ಯಂತ ಅಗ್ಗದ ಇಂಟರ್ನೆಟ್‌ ಡೇಟಾವನ್ನು ಹೊಂದಿದ್ದ ದೇಶವಾಗಿತ್ತು.

2021ರಲ್ಲಿ ಈ ಟ್ರೆಂಡ್‌ ಬದಲಾಗಿದೆ. ಸಂಶೋಧನ ಸಂಸ್ಥೆ Cable.co.uk ವರದಿಯ ಪ್ರಕಾರ ಭಾರತದಲ್ಲಿ ಡೇಟಾದ ಸರಾಸರಿ ಬೆಲೆ 7.5 ಪಟ್ಟು ಹೆಚ್ಚಾಗಿದೆ. ಇಂಟರ್‌ನೆಟ್‌ ಬಳಕೆಯನ್ನು ಹೊಂದಿರುವ ವಿಶ್ವದ 230 ದೇಶಗಳ ಪೈಕಿ ಭಾರತ 28ನೇ ಸ್ಥಾನದಲ್ಲಿದೆ ಎಂದು ವರದಿ ಹೇಳಿದೆ. ಈಗ ಭಾರತದಲ್ಲಿ 1 ಜಿಬಿ ಡೇಟಾದ ಸರಾಸರಿ ಬೆಲೆ 51 ರೂ. ಗಳನ್ನು ತಲುಪಿದೆ.

ಇಸ್ರೇಲ್‌ನಲ್ಲಿ ಕಡಿಮೆ ಯಾಕೆ? :

ಟೆಲಿಕಾಂ ಸಂಶೋಧನೆಯ ಸಂಘಟನೆ Budde.com  ಪ್ರಕಾರ ಇಸ್ರೇಲ್‌ನಲ್ಲಿ ಎಲ್‌ಟಿಇ ಸೇವೆಗಳ ವ್ಯಾಪ್ತಿ ಉತ್ತಮವಾಗಿದೆ. ಮಲ್ಟಿ-ಸ್ಪೆಕ್ಟ್ರಮ್‌ ಹರಾಜನ್ನು ನಡೆಸಿ, 5ಜಿಗೆ ದಾರಿ ಮಾಡಿಕೊಟ್ಟಿದೆ. ಅಲ್ಲಿ ಟೆಲಿಕಾಂ ಕಂಪೆನಿಗಳು ಲಾಭದಾಯಕವಾಗಿವೆ. ಆದ್ದರಿಂದ ಇಂಟರ್‌ನೆಟ್‌ ಡೇಟಾದ ಬೆಲೆಗಳು ಅಲ್ಲಿ ನಿರಂತರವಾಗಿ ಕಡಿಮೆ ಇವೆ.

ವರ್ಲ್ಡ್ ಮೊಬೈಲ್‌ ಡಾಟಾ  :

ಪ್ರೈಸಿಂಗ್‌ 2021ರ ಇತ್ತೀಚಿನ ವರದಿಯ ಪ್ರಕಾರ ಈಗ ಇಸ್ರೇಲ್‌ ವಿಶ್ವದ ಅಗ್ಗದ ಇಂಟರ್ನೆಟ್‌ ಯೋಜನೆಯನ್ನು ನೀಡುತ್ತಿದೆ. ಅಲ್ಲಿ 1 ಜಿಬಿ ಡೇಟಾ ದರ 4 ರೂ.ಗಳಿಗಿಂತ ಕಡಿಮೆ ಇದೆ. ಅಲ್ಲಿ ಒಂದು ಜಿಬಿ ಡೇಟಾದ ಬೆಲೆ 3.75 ರೂ. ಇದೆ. ಬಳಿಕದ ಸ್ಥಾನದಲ್ಲಿ ಕಿರ್ಗಿಸ್ಥಾನ್‌, ಫಿಜಿ, ಇಟಲಿ, ಸುಡಾನ್‌ ಮತ್ತು ರಷ್ಯಾ ಇದೆ.

ಈಕ್ವಟೋರಿಯಲ್‌ ಗಿನಿಯಾ ಅತೀ ದುಬಾರಿ :

ವರದಿಯ ಪ್ರಕಾರ ವಿಶ್ವದ ಅತ್ಯಂತ ದುಬಾರಿ ಇಂಟರ್‌ನೆಟ್‌ ಡೇಟಾ ಈಕ್ವಟೋರಿಯಲ್‌ ಗಿನಿಯಾದಲ್ಲಿದೆ. ಇಲ್ಲಿ 1 ಜಿಬಿ ಇಂಟರ್‌ನೆಟ್‌ಗೆ 3,724 ರೂ. ಪಾವತಿಸಬೇಕಾಗಿದೆ. ಫಾಕ್‌ ಲ್ಯಾಂಡ್‌, ಐಲ್ಯಾಂಡ್‌, ಸೇಂಟ್‌ ಹೆಲೆನಾ, ಸಾವೊಟೋಮೆ ಪ್ರಿನ್ಸಿಪಿ ಮತ್ತು ಮಲಾವಿ ಬಳಿಕದ ಸ್ಥಾನ ಗಳಲ್ಲಿವೆ.

ದುಬಾರಿ  ಆಗಲು ಕಾರಣ :

ಭಾರತದ ಟೆಲಿಕಾಂ ಕಂಪೆನಿಗಳ ಡೇಟಾ ದರ ಏರಿಕೆಗೆ ಎಜಿಆರ್‌ ಪ್ರಮುಖ ಕಾರಣ ವಾಗಿದೆ. ಇದರನ್ವಯ ಟೆಲಿಕಾಂ ಕಂಪೆನಿಗಳು ತಮ್ಮ ಒಟ್ಟು ಆದಾಯದ ಒಂದು ಭಾಗವನ್ನು ಸರಕಾರ ದೊಂದಿಗೆ ಹಂಚಿಕೊಳ್ಳಬೇಕಾಗಿದೆ. ಮಾರ್ಚ್‌ 2020ರಲ್ಲಿ ಏರ್‌ಟೆಲ್‌ ಸುಮಾರು 26 ಸಾವಿರ ಕೋಟಿ ರೂ.ಗಳನ್ನು ಬಾಕಿ ಉಳಿಸಿಕೊಂಡಿತ್ತು. ವೊಡಾಫೋನ್‌-ಐಡಿಯಾದಿಂದ 55,000 ಕೋಟಿ ರೂ. ಮತ್ತು ಟಾಟಾ ಟೆಲಿ ಸರ್ವಿಸಸ್‌ನಿಂದ ಸುಮಾರು 13,000 ಕೋಟಿ ರೂ. ಜಿಯೋದಿಂದ 195 ಕೋಟಿ ರೂ. ವಸೂಲಿ ಮಾಡಲಾಗಿದೆ. ಈಗ ಏನೂ ಬಾಕಿ ಉಳಿದಿಲ್ಲ. ಎಜಿಆರ್‌ನಿಂದ ಉಂಟಾಗುವ ನಷ್ಟವನ್ನು ಕಂಪೆನಿ ಗಳು ಇಂಟರ್‌ನೆಟ್‌ ದರ ಹೆಚ್ಚಿಸಿ ತುಂಬಿಕೊಳ್ಳುತ್ತವೆ.

ಬಳಕೆದಾರರು :

ಟ್ರಾಯ್ ಪ್ರಕಾರ ಮಾರ್ಚ್‌ನಲ್ಲಿ ರಿಲಯನ್ಸ್‌ ಜಿಯೋ ಶೇ. 35.30 ಬಳಕೆದಾರರೊಂದಿಗೆ ಮುನ್ನಡೆ ಸಾಧಿಸಿದೆ. ಏರ್‌ಟೆಲ್‌ ಶೇ. 29.62 ಬಳಕೆದಾರರನ್ನು ಹೊಂದಿದೆ. ವೊಡಾಫೋನ್‌ ಐಡಿಯಾ ಶೇ. 24.58ರಷ್ಟು ಬಳಕೆದಾರರನ್ನು ಹೊಂದಿದೆ.

ನೆರೆ ರಾಷ್ಟ್ರಗಳಲ್ಲಿ ಹೇಗಿದೆ? :

ಚೀನ 18ನೇ ಸ್ಥಾನಕ್ಕೆ ಇಳಿದಿದೆ. ಇಲ್ಲಿ 2021ರ ಮಾರ್ಚ್‌ನಲ್ಲಿ ಒಂದು ಜಿಬಿ ಡೇಟಾದ ಬೆಲೆ 43 ರೂಪಾಯಿಗಳಾಗಿತ್ತು. ಇದಲ್ಲದೆ ಪಾಕಿಸ್ಥಾನ 19ನೇ ಸ್ಥಾನ, ನೇಪಾಲ 24ನೇ ಸ್ಥಾನದಲ್ಲಿದೆ. ಬಾಂಗ್ಲಾದೇಶ ಮತ್ತು ಶ್ರೀಲಂಕಾ ಕೂಡ ಭಾರತಕ್ಕಿಂತ ಮೇಲಿವೆ.

ಟಾಪ್ ನ್ಯೂಸ್

ಕುಷ್ಟಗಿಯಲ್ಲಿ ಸೇವೆ ಸಲ್ಲಿಸಿದ್ದ ತಹಸೀಲ್ದಾರ ಕೋವಿಡ್ ಗೆ ಬಲಿ

ಕುಷ್ಟಗಿಯಲ್ಲಿ ಸೇವೆ ಸಲ್ಲಿಸಿದ್ದ ತಹಸೀಲ್ದಾರ ಕೋವಿಡ್ ಗೆ ಬಲಿ

THoukthe Cyclone Effect in Goa, High allert announced by CM

ತೌಖ್ತೇ ಚಂಡಮಾರುತ : ಗೋವಾ ಕಡಲ ತೀರದಲ್ಲಿ ಅವಾಂತರ

ಕೆಸರಿನಲ್ಲಿ ಸಿಲುಕಿ ಮರಿಯಾನೆ ಒದ್ದಾಟ: ಜೆಸಿಬಿ‌ ಸಹಾಯದಿಂದ ರಕ್ಷಣೆ

ಕೆಸರಿನಲ್ಲಿ ಸಿಲುಕಿ ಮರಿಯಾನೆ ಒದ್ದಾಟ: ಜೆಸಿಬಿ‌ ಸಹಾಯದಿಂದ ರಕ್ಷಣೆ

Amazon launches minitvamazon minitv free video ostreaming service launched in India

ಅಮೇಜಾನ್ ಆರಂಭಿಸಿದೆ ಮಿನಿಟಿವಿ.! ಏನಿದೆ ವಿಶೇಷ..?

ಬೌರಿಂಗ್ ಆಸ್ಪತ್ರೆಯಲ್ಲಿ ಬ್ಲ್ಯಾಕ್ ಫಂಗಸ್ ಚಿಕಿತ್ಸೆ ವ್ಯವಸ್ಥೆ: ಸಚಿವ ಡಾ.ಕೆ.ಸುಧಾಕರ್

ಬೌರಿಂಗ್ ಆಸ್ಪತ್ರೆಯಲ್ಲಿ ಬ್ಲ್ಯಾಕ್ ಫಂಗಸ್ ಚಿಕಿತ್ಸೆ ವ್ಯವಸ್ಥೆ: ಸಚಿವ ಡಾ.ಕೆ.ಸುಧಾಕರ್

ಪ್ರತಿಕೂಲ ಹವಾಮಾನ: ಹೈದರಾಬಾದ್ , ತಿರುಪತಿ  ವಿಮಾನ ಸಂಚಾರ ರದ್ದು

ಪ್ರತಿಕೂಲ ಹವಾಮಾನ: ಹೈದರಾಬಾದ್ , ತಿರುಪತಿ  ವಿಮಾನ ಸಂಚಾರ ರದ್ದು

cats

ಬಾದಾಮಿ ಕ್ಷೇತ್ರಕ್ಕೆ ಮೂರು ಆಂಬುಲೆನ್ಸ್ ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮನಸ್ಸು ಎಲ್ಲವನ್ನೂ ಒಪ್ಪಬಹುದು ; ದೇಹವಲ್ಲ !

ಮನಸ್ಸು ಎಲ್ಲವನ್ನೂ ಒಪ್ಪಬಹುದು ; ದೇಹವಲ್ಲ !

ಸೋಂಕಿತರಲ್ಲಿ ಶೇ.95 ಜನರಿಗೆ ಆಸ್ಪತ್ರೆ ಅಗತ್ಯವಿಲ್ಲ

ಸೋಂಕಿತರಲ್ಲಿ ಶೇ.95 ಜನರಿಗೆ ಆಸ್ಪತ್ರೆ ಅಗತ್ಯವಿಲ್ಲ

ಅಪ್ಪನಿಗೆ ಮಗನಾದರೂ ಊರಿಗೆ ವೈದ್ಯ

ಅಪ್ಪನಿಗೆ ಮಗನಾದರೂ ಊರಿಗೆ ವೈದ್ಯ

ಕೋವಿಡ್ ಗೆಲ್ಲಲು ಸಿದ್ಧತೆ : ಉಳ್ಳಾಲ, ಮೂಡುಬಿದಿರೆಯಲ್ಲಿ ಸರ್ವ ಪ್ರಯತ್ನ ನಡೆದಿದೆ

ಕೋವಿಡ್ ಗೆಲ್ಲಲು ಸಿದ್ಧತೆ : ಉಳ್ಳಾಲ, ಮೂಡುಬಿದಿರೆಯಲ್ಲಿ ಸರ್ವ ಪ್ರಯತ್ನ ನಡೆದಿದೆ

ಏನಿದು ತೌಕ್ತೆ ಚಂಡಮಾರುತ

ಏನಿದು ತೌಕ್ತೆ ಚಂಡಮಾರುತ

MUST WATCH

udayavani youtube

ಪುತ್ತೂರು ಮಹಾಲಿಂಗೇಶ್ವರ ದೇಗುಲದ ಸಭಾಂಗಣ ಸದ್ಯಕ್ಕೆ COVID CARE CENTRE

udayavani youtube

ಕನ್ನಡ ಶಾಲೆಯ ವಿಭಿನ್ನ ಇಂಗ್ಲೀಷ್ ಕ್ಲಾಸ್

udayavani youtube

ದೆಹಲಿಯಲ್ಲಿ ಕೋವಿಡ್ 19 ಲಾಕ್ ಡೌನ್ ಮತ್ತೆ ವಿಸ್ತರಿಸಬೇಡಿ

udayavani youtube

ರಾಯಚೂರು ; ಫುಲ್ ಲಾಕ್ ಡೌನ್ ಹಿನ್ನೆಲೆ ಎಣ್ಣೆ ಖರೀದಿಗೆ ಮುಗಿಬಿದ್ದ ಮದ್ಯಪ್ರಿಯರು

udayavani youtube

Oxygen ನಮಗೆ ಬೇಕಿರುವುದಕ್ಕಿಂತ ಜಾಸ್ತಿನೇ ಇದೆ

ಹೊಸ ಸೇರ್ಪಡೆ

ಕುಷ್ಟಗಿಯಲ್ಲಿ ಸೇವೆ ಸಲ್ಲಿಸಿದ್ದ ತಹಸೀಲ್ದಾರ ಕೋವಿಡ್ ಗೆ ಬಲಿ

ಕುಷ್ಟಗಿಯಲ್ಲಿ ಸೇವೆ ಸಲ್ಲಿಸಿದ್ದ ತಹಸೀಲ್ದಾರ ಕೋವಿಡ್ ಗೆ ಬಲಿ

THoukthe Cyclone Effect in Goa, High allert announced by CM

ತೌಖ್ತೇ ಚಂಡಮಾರುತ : ಗೋವಾ ಕಡಲ ತೀರದಲ್ಲಿ ಅವಾಂತರ

Start covid Care Center

ಬಿಡದಿಯಲ್ಲಿ ಕೋವಿಡ್‌ ಕೇರ್‌ ಸೆಂಟರ್‌ ಆರಂಭಿಸಿ

ಕೆಸರಿನಲ್ಲಿ ಸಿಲುಕಿ ಮರಿಯಾನೆ ಒದ್ದಾಟ: ಜೆಸಿಬಿ‌ ಸಹಾಯದಿಂದ ರಕ್ಷಣೆ

ಕೆಸರಿನಲ್ಲಿ ಸಿಲುಕಿ ಮರಿಯಾನೆ ಒದ್ದಾಟ: ಜೆಸಿಬಿ‌ ಸಹಾಯದಿಂದ ರಕ್ಷಣೆ

Amazon launches minitvamazon minitv free video ostreaming service launched in India

ಅಮೇಜಾನ್ ಆರಂಭಿಸಿದೆ ಮಿನಿಟಿವಿ.! ಏನಿದೆ ವಿಶೇಷ..?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.