ಜಪಾನ್‌ ಕೈಗಾರಿಕೆ ಗುಣಮಟ್ಟದ ಗುಟ್ಟು


Team Udayavani, Mar 25, 2018, 2:00 AM IST

34.jpg

ಜಪಾನಿನ ಗುಣಮಟ್ಟವನ್ನು ಇಂದು ಜಗತ್ತೇ ಕೊಂಡಾಡುತ್ತಿದೆ. ಸರಕೊಂದು ಜಪಾನಿಗರ ಕೈಗಾರಿಕೆಯಲ್ಲಿ ತಯಾರಾಗಿದೆ ಎಂದರೆ ಅದನ್ನು ಕಣ್ಣು ಮುಚ್ಚಿ ಕೊಳ್ಳಬಹುದು ಎನ್ನುವುದು ಜಗತ್ತಿನ ಹೆಚ್ಚಿನ ಜನರ ಅನುಭವ. ಜಪಾನ್‌ ಕೈಗಾರಿಕೆಗಳಿಗೆ ಇಂತಹ ಮೇರು ಮಟ್ಟದ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಹೇಗೆ ಸಾಧ್ಯವಾಗುತ್ತಿದೆ ಅನ್ನುವುದನ್ನು ತಿಳಿಯಲು, ಆ ಕೈಗಾರಿಕೆಗಳು ಅಳವಡಿಸಿಕೊಂಡಿರುವ ಅಡಿಪಾಯದ ಕೆಲವು ಮಾದರಿಗಳನ್ನು ನಾವು ತಿಳಿದುಕೊಳ್ಳಬೇಕಾಗುತ್ತದೆ. ಈ ಮಾದರಿಗಳ ಕುರಿತು ತಿಳಿಯುವ ಮುನ್ನ ಜಪಾನ್‌ ಕೈಗಾರಿಕೆಗಳಲ್ಲಿ ಇಂದು ಕಾಣಿಸುವ ಗುಣಮಟ್ಟದ ಹುಟ್ಟನ್ನು ಗಮನಿಸೋಣ. ಜಪಾನ್‌ ತನ್ನ ಕೈಗಾರಿಕೆಗಳಲ್ಲಿ ಗುಣಮಟ್ಟಕ್ಕೆ ಹೆಚ್ಚಿನ ಒತ್ತುಕೊಡಲು ಶುರುವಾಗಿದ್ದು  ಕ್ರಿ.ಶ 1950ರ ದಶಕದಲ್ಲಿ. ಆದರೆ ಅದರ ನಾಂದಿ ಕ್ರಿ.ಶ 1900ರ ಸುಮಾರಿಗೆ ಕೈಗಾರಿಕಾ ಕ್ರಾಂತಿಯಲ್ಲೇ ಹಾಕಲಾಗಿತ್ತು. ಕೈಗಾರಿಕೆಗಳಲ್ಲಿ ಆ ಹೊತ್ತಿಗೆ ಇಲೆಕ್ಟ್ರಿಕ್‌ ಮತ್ತು ಇಲೆಕ್ಟ್ರಾನಿಕ… ಬಳಕೆ ಶುರುವಾಗಿತ್ತು. 

ಜಪಾನಿಗೆ ನಿಜ ಅರ್ಥದಲ್ಲಿ ಸ್ಫೂರ್ತಿ ಕೊಟ್ಟಿದ್ದು ಅಮೆರಿಕದಲ್ಲಿ ನಡೆದ ಕೆಲಸಗಳು. ಅಮೆರಿಕೆಯಲ್ಲಿ ಫ್ರೆಡ್‌ ಟೇಲರ್‌ ಎನ್ನುವವರು ಉತ್ಪಾದನೆಯ ಮೊದಲನೆ ಹಂತದ ಸುಧಾರಣೆ ತಂದವರಲ್ಲಿ ಒಬ್ಬರು. ಕ್ರಿ.ಶ.1900ರ ಹೊತ್ತಿಗೆ ಫ್ರೆಡ್‌ ಟೇಲರ್‌ ಅವರು ತಮ್ಮ ಹರವಿನಂಗಳದಲ್ಲಿ ಇದ್ದ ಯಂತ್ರಗಳನ್ನು ತಕ್ಕಮಟ್ಟಿಗೆ ಉಪಯೋಗಿಸಿ ಬೇಕಾದ ಉತ್ಪಾದನೆ ಮಾಡುತ್ತಿದ್ದರು. ಇವರು ಮಾಡುತ್ತಿದ್ದ ಸರಕುಗಳ ಉತ್ಪಾದನೆ ಉಳಿದವರ ಉತ್ಪಾದನೆಗಿಂತ ತುಂಬಾ ಹೆಚ್ಚಾಗಿತ್ತು. ಇದಕ್ಕೆ ಕಾರಣ ಅವರ ಏರ್ಪಾಡಿನಲ್ಲಿ ಅವರೇ ಅಳವಡಿಸಿಕೊಂಡಿದ್ದ ಎರಡು ಮುಖ್ಯ ಅಂಶಗಳು. ಒಂದು ಸುತ್ತುಹೊತ್ತು (cycle time) ಇನ್ನೊಂದು ಕೆಲಸದೊಂತನ (standardized work). ಯಾವುದೇ ಸರಕನ್ನು ತಯಾರಿಸಲು ಬಹಳಷ್ಟು ಹಂತಗಳಿರುತ್ತವೆ ಮತ್ತು ಆ ಹಂತಗಳು ಕೆಲವು ಕ್ರಮಾನುಗತಿಯಲ್ಲಿ ಇರಬೇಕಾಗುತ್ತದೆ ಮತ್ತು ಉಳಿದವು ಜೊತೆಯಾಗಿ ಸಾಗಬೇಕಾಗುತ್ತದೆ. ಪ್ರತಿಯೊಂದು ಹಂತದಲ್ಲೂ ಸರಕಿಗೆ ಏನಾದರೂ ಸೇರಿಸುವ ಇಲ್ಲವೇ ಅದರಿಂದ ಏನಾದರೂ ತೆಗೆಯುವ ಇಲ್ಲವೇ ಅದನ್ನು ಮಾರ್ಪಾಡಿಸುವುದರ ಮೂಲಕ ಅದಕ್ಕೆ ಅದರ ಮೂಲ ರೂಪಕ್ಕಿಂತ ಹೆಚ್ಚಿನ ಬೆಲೆ ದೊರೆಯುವಂತೆ ಮಾಡಲಾಗುತ್ತದೆ. ಉದಾಹರಣೆಗೆ, ಕಬ್ಬಿಣದ ಸರಳೊಂದು ಕಚ್ಚಾ ವಸ್ತುವಾಗಿ ಕೈಗಾರಿಕೆಯೊಳಗೆ ಹೊಕ್ಕಾಗ ಅದನ್ನು ಕುಟ್ಟುವ, ಎಳೆಯುವ, ಕಾವಿಗೆ ಒಡ್ಡುವಂತಹ ಉತ್ಪಾದನೆಯ ಹಲವು ಹಂತಗಳಿಗೆ ಒಳಪಡಿಸಿ ಅದರ ಬೆಲೆಯನ್ನು ಹೆಚ್ಚಿಸಲಾಗುತ್ತದೆ. ಸರಕಿನ ಬೆಲೆ ಹೆಚ್ಚಳದ ಕೆಲಸ ಹಲವು ನೆಲೆಗಳಲ್ಲಿ ನಡೆಯುತ್ತದೆ. ಇಂತಹ ಪ್ರತಿ ನೆಲೆಯನ್ನು ನಿಲ್ದಾಣ (station) ಎಂದು ಕರೆಯಬಹುದು. ಕೈಗಾರಿಕೆಯೊಂದರ ಪ್ರತಿ ನಿಲ್ದಾಣ ಎಷ್ಟು ಸರಿಯಾಗಿ ಕೆಲಸ ಮಾಡುತ್ತದೆಯೋ ಆ ಕೈಗಾರಿಕೆ ಅಷ್ಟು ಗುಣಮಟ್ಟವನ್ನು ಹೊಂದಿರುತ್ತದೆ. ನಿಲ್ದಾಣದಲ್ಲಿ ಸರಕು ಬಂದು ಅದರ ಬೆಲೆ ಹೆಚ್ಚಳ ಮುಗಿದ ಮೇಲೆ ಇನ್ನೊಂದು ಸರಕು ಆ ನಿಲ್ದಾಣಕ್ಕೆ ಬರುವ ಒಟ್ಟಾರೆ ಹೊತ್ತನ್ನು ಸುತ್ತುಹೊತ್ತು (cycle time)) ಅನ್ನುತ್ತಾರೆ. 

ನಿಲ್ದಾಣವೊಂದರಲ್ಲಿ ಬೇಕಾಗಿರುವ ಕಚ್ಚಾವಸ್ತುಗಳನ್ನು, ಉಪಕರಣ ಮತ್ತು ಸಲಕರಣೆಗಳನ್ನು ಓರಣಿಸಿ ಇಟ್ಟು, ಕಿರುಕೆಲಸಗಳನ್ನು ಪ್ರತಿಸಲವೂ ಒಂದೇ ರೀತಿ ನಡೆಸುತ್ತಾ ಹೋದರೆ, ಕಣ್ಣು ಮುಚ್ಚಿದರೂ ಕೆಲಸ ನಡೆಸುವ ಸಾಮರ್ಥ್ಯ ನಡೆಸುಗನಿಗೆ (operator) ಲಭಿಸುತ್ತದೆ. ಈ ತೆರನಾಗಿ ನಿಲ್ದಾಣದ ಸಜ್ಜುಗೊಳಿಸುವಿಕೆಯನ್ನು ಕೆಲಸದೊಂತನ (standardized work) ಅನ್ನುತ್ತಾರೆ. ಮೇಲೆ ತಿಳಿಸಿದಂತೆ ಫ್ರೆಡ್‌ ಟೇಲರ್‌ ಮಾಡಿದ್ದೇನೆಂದರೆ ತಮ್ಮ  ಪುಟ್ಟ ಕೈಗಾರಿಕೆಯಲ್ಲಿ ಸುತ್ತುಹೊತ್ತು ಮತ್ತು ಕೆಲಸದೊಂತನವನ್ನು ವೈಜ್ಞಾನಿಕವಾಗಿ ಅಳವಡಿಸಿಕೊಂಡಿದ್ದು ಮತ್ತು ಅದರ ಆಳವಾದ ಅಧ್ಯಯನವನ್ನು ಮಾಡಿ ಉಳಿದವರಿಗೆ ತಿಳಿಸಿಕೊಟ್ಟಿದ್ದು. ಫ್ರಾಂಕ್‌ ಗಿಲ್ಬರ್ತ್‌ ಎನ್ನುವ ಇನ್ನೊರ್ವರು ಕೆಲಸದ ನಿಲ್ದಾಣದಲ್ಲಿ ನಡೆಯಬಹುದಾದ ಕೈಯ್ನಾಡಿಕೆ ಅಥವಾ ಕಣ್ಣಾಡಿಕೆಗಳಿಗೆ 18 ಗುರುತುಗಳನ್ನು ಕಂಡುಹಿಡಿದಿದ್ದರು. ಈ ಗುರುತುಗಳನ್ನು ಉಪಯೋಗಿಸಿ ಕೆಲಸದತುಣುಕುಗಳ ವರಸೆಯನ್ನು ಬರೆದು ಅದರ ಸುತ್ತುಹೊತ್ತನ್ನು ಕಂಡುಹಿಡಿಯುತ್ತಿದ್ದರು. ಗಿಲ್ಬರ್ತ್‌ ಅವರು ನಡೆಸುಗನ ಬಗೆಯರಿಮೆಯ (psychology)ಬಗ್ಗೆಯೂ ಗಮನಹರಿಸಿದರು. ಉದಾ ಹರಣೆಗೆ, ಒಂದು ನಿಲ್ದಾಣದಲ್ಲಿ ಬೆಳಕನ್ನು ಹೆಚ್ಚುಕಡಿಮೆ ಮಾಡಿದರೆ ಉತ್ಪಾದನೆಯೂ ಕೂಡ ಹೆಚ್ಚುಕಡಿಮೆ ಆಗುತ್ತಿತ್ತು ಎನ್ನುವುದನ್ನು ಗಿಲ್ಬರ್ತ್‌ ಪ್ರಯೋಗದ ಮೂಲಕ ಕಂಡು ಕೊಂಡರು. ನಿಲ್ದಾಣದ ನಡೆಸುಗನ ದೇಹಕ್ಕೆ ಹೆಚ್ಚಿನ ಒತ್ತಡ ಬಾರದಂತೆ ನೋಡಿಕೊಳ್ಳುವುದು ಗಿಲ್ಬರ್ತ್‌ ಅವರ ಉದ್ದೇಶವಾಗಿತ್ತು. ಉತ್ಪಾದನೆಯ ಚಳಕಗಳಲ್ಲಿ ಮುಂದಿನ ಮೈಲಿಗಲ್ಲೆಂದರೆ ಹೆನ್ರಿ ಫೋರ್ಡ್‌ ಅವರದ್ದು. ಫೋರ್ಡ್‌ ಅವರು ತಮ್ಮ ಕೈಗಾರಿಕೆಯಲ್ಲಿ ನಡೆಸುಗನೆಡೆಗೇ ಸಾಗುವ ಪಟ್ಟಿ-ನಿಲ್ದಾಣಗಳನ್ನು ಅಳವಡಿಸಿಕೊಂಡಿದ್ದರು. ಅಲ್ಲಿಯವರೆಗೆ ಹೆಚ್ಚಾಗಿ ನಡೆಸುಗ ಓಡಾಡಿ ಕೆಲಸ ಮಾಡುತ್ತಿದ್ದರೆ, ಫೋರ್ಡ್‌ ಅವರ ಏರ್ಪಾಡಿನಲ್ಲಿ ನಿಲ್ದಾಣವೇ ನಡೆಸುಗನೆಡೆಗೆ ಬರುತ್ತಿತ್ತು. ಇದರಿಂದಾಗಿ ನಡೆಸುಗರಿಗೆ ಆಯಾಸಾಗದೇ ಕೈಗಾರಿಕೆಯ ಉತ್ಪಾದನೆ ಹೆಚ್ಚಳಕ್ಕೆ ಕಾರಣವಾಯಿತು. ಅಮೆರಿಕದಲ್ಲಿ ನಡೆದ ಇಂತಹ ಕೆಲವು ಬೆಳವಣಿಗೆಗಳನ್ನು ಜಪಾನಿಗರು ಕಲಿತುಕೊಂಡು, ತಮ್ಮ ಮುಂದಿನ ಕೈಗಾರಿಕಾ ಗುಣಮಟ್ಟದ ಹೆದ್ದಾರಿಗೆ ಅಡಿಪಾಯವಾಗಿಸಿಕೊಂಡರು. ಜಪಾನಿನ ಮುಂಚೂಣಿ ಕೈಗಾರಿಕೆಯಾದ ಟೊಯೋಟಾದ ಮಾಲೀಕ ಈಜಿ ಟೊಯೋಡಾ ಅವರು ಫೋರ್ಡ್‌ಗೆ ಹೋಗಿ ಅಲ್ಲಿನ ಪ್ರತಿಯೊಂದು ವ್ಯವಸ್ಥೆಯನ್ನು ಕೂಲಂಕಷವಾಗಿ ತಿಳಿದುಕೊಂಡು ಬಂದರು. ಅದನ್ನು ತಮ್ಮ ಕಂಪನಿಯ ಟಾಯಿಚಿ ಓನ್ಹೊ ಅವರಿಗೆ ಹೇಳಿದರು. ಅಲ್ಲಿಂದ ಓನ್ಹೊ ಅವರು ಫೋರ್ಡ್‌ ಏರ್ಪಾಡಿನ ಜೊತೆಗೆ ತಮ್ಮ ಜಾಣ್ಮೆ ಮತ್ತು ಕಲಿಕೆ ಸೇರಿಸಿ ಟೊಯೋಟಾ ಏರ್ಪಾಡನ್ನು ಹುಟ್ಟುಹಾಕಿದರು. ಇದೆಲ್ಲಾ ನಡೆದದ್ದು ಎರಡನೇ ಮಹಾಯುದ್ಧ ನಡೆದ ಆಸುಪಾಸಿನಲ್ಲಿ ಅಂದರೆ ಅಚ್ಚರಿಯಾಗಬಹುದು. ಜಪಾನ್‌ ಮತ್ತು ಅಮೆರಿಕದಂತಹ ಆಗಿನ ಕಡುವೈರಿಗಳು ಕೂಡ ಹೇಗೆ ಕೈಗಾರಿಕೆಯ ಗುಣಮಟ್ಟ ಹೆಚ್ಚಿಸಲು ಒಂದಾದರು ಅನ್ನುವುದು ಬೆರಗು ಹುಟ್ಟಿಸುವಂತದು.

ಟೊಯೋಟಾದ ಕೆಲಸ ಮುಂದಿನ ದಿನಗಳಲ್ಲಿ ಜಪಾನಿನ ಬೇರೆ ಕೈಗಾರಿಕೆಗಳಲ್ಲಿ ಗುಣಮಟ್ಟ ಹೆಚ್ಚಿಸಲು ನಾಂದಿಯಾಯಿತು. ಟೊಯೋಟಾ ಏರ್ಪಾಡಿನ ಗುರಿ ಸರಿಯಾದ ವಸ್ತು, ಸರಿಯಾಗಿರುವ ಅಳತೆಯಲ್ಲಿ, ಸರಿಯಾದ ಸಮಯಕ್ಕೆ, ಸರಿಯಾದ ಗುಣಮಟ್ಟದಲ್ಲಿ, ಸರಿಯಾದ ಜಾಗಕ್ಕೆ ತಲುಪಿಸುವುದು. ಕೈಗಾರಿಕೆಯ ಗುಣಮಟ್ಟಕ್ಕೆ ಎಲ್ಲಕ್ಕಿಂತ ದೊಡ್ಡ ತೊಡಕೆಂದರೆ ಮೀರಿದ ಉತ್ಪಾದನೆ (overproduction). ಹೌದು, ಉತ್ಪಾದನೆ ಮಿತಿಮೀರಿ ಹೆಚ್ಚಿಸದರೆ ಅದು ದೊಡ್ಡ ತೊಂದರೆಯೇ ಸರಿ. ಬೇಡಿಕೆಗೆ ತಕ್ಕಂತೆ ಉತ್ಪಾದನೆಯಾಗಬೇಕು ಇಲ್ಲವಾದರೆ ಹೆಚ್ಚಿದ ಉತ್ಪಾದನೆ ಮಾರಾಟವಾಗದೆ ಅದನ್ನು ನಿರ್ವಹಿಸಲು ಹೆಚ್ಚಿನ ಖರ್ಚಾಗುತ್ತದೆ. ಮೀರಿದ ಉತ್ಪಾದ®ಠೆಯಂತೆ ಇನ್ನೂ ಕೆಲವು ತರಸುಗಳನ್ನು(waste) ಟೊಯೋಟಾ ಕಂಡುಕೊಂಡಿತು. ಅವುಗಳೆಂದರೆ ಮಾಡಿದ ಸರಕುಗಳಿಗಾಗಿ ಬೇಕಾದ ಇಡುದಾಣ (inventory), ಸರಕು ಸಾಗಣೆ, ನಿಲ್ದಾಣವೊಂದರಲ್ಲಿ ಸರಕು ಕಾಯುವ ಹೊತ್ತು, ಅಲ್ಲಿ ಉಂಟಾಗಬಹುದಾದ ಕುಂದುಗಳು, ಬೇಕಿಲ್ಲದ ಕೆಲಸಗಳು, ನಡೆಸುಗನ ದೇಹಕ್ಕೆ ಹೆಚ್ಚಿನ ಕೆಲಸ, ನಡೆಸುಗನ ಚಳಕವನ್ನು ಸರಿಯಾಗಿ ಬಳಸದಿರುವುದು ಮತ್ತು ನಡೆಸುಗನ ಸುರಕ್ಷತೆ. ಈ ಎಲ್ಲ ತರಸುಗಳನ್ನು ಹಿಡಿತದಲ್ಲಿಟ್ಟುಕೊಂಡರೆ ಕೈಗಾರಿಕೆಯ ಗುಣಮಟ್ಟವನ್ನು ಹೆಚ್ಚಿಸಬಹುದೆಂದು ಟೊಯೋಟಾಗೆ ಮನದಟ್ಟಾಯಿತು. 

ಈ ನಿಟ್ಟಿನಲ್ಲಿ ಗ್ರಾಹಕರಿಂದ ಪೂರೈಕೆದಾರರ  ತನಕದ ಇಡಿ ಏರ್ಪಾಡನ್ನು ಅಧ್ಯಯನ ಮಾಡಿ ಕುಂದುಕೊರತೆಗಳನ್ನು ಸರಿಪಡಿಸಲಾಯಿತು. ಕೈಗಾರಿಕೆಯಲ್ಲಿ ಕೆಲಸದ ಹಮ್ಮುಗೆ ತಯಾರಿಸಲು ಹೆಚ್ಚಿನ ಒತ್ತುಕೊಡಲಾಯಿತು. ಮುಂದೆ ಸಾಗುತ್ತಾ ಕೈಗಾರಿಕೆಯಲ್ಲಿ ಕ್ರಾಂತಿಕಾರಿಯೆನ್ನಬಹುದಾದ 5ಖ, ಪೋಕಾಯೋಕೆ, ಜಿಡೋಕಾ, ಕೈಜಿನ್‌ ಮುಂತಾದ ಮಾದರಿಗಳನ್ನು ಜಪಾನ್‌ ಕೈಗಾರಿಕೆಗಳು ಅಳವಡಿಸಿಕೊಂಡವು. ಈ ಮಾದರಿಗಳ ಮೂಲ ಗುರಿಯೆಂದರೆ ಇಡೀ ಕೈಗಾರಿಕೆಯಲ್ಲಿ ಎಲ್ಲೆಲ್ಲಿ ಕೊರತೆಗಳು ಇವೆಯೋ ಅವನ್ನು ಹೋಗಲಾಡಿಸಿ, ಉತ್ಪಾದನೆಯ ಒಟ್ಟಾರೆ ಗುಣಮಟ್ಟವನ್ನು ಹೆಚ್ಚಿಸುವುದು. ಅಮೆರಿಕದಿಂದ ಬಂದ ಕೈಗಾರಿಕೆಯ ತಿಳಿ ಅರಿವನ್ನು ಜಪಾನಿಗರು ತಮ್ಮ ಕೈಗಾರಿಕೆಗಳಲ್ಲಿ ಅಳವಡಿಸಿ, ಅವುಗಳನ್ನು ಬೆಳಸಿ, ಕಾಪಾಡಿಕೊಂಡು ಬಂದಿರುವುದರಿಂದ ಅಲ್ಲಿನ ಉತ್ಪಾದನೆಯ ಗುಣಮಟ್ಟ ಮೇರು ಮಟ್ಟದ್ದಾಗಿದೆ. (ಬೆಂಗಳೂರಿನ ಬಸವನಗುಡಿಯಲ್ಲಿರುವ ಮುನ್ನೋಟ ಪುಸ್ತಕ ಮಳಿಗೆಯು ಪ್ರತಿ ತಿಂಗಳು ತಿಳಿಗನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಮಾತುಕತೆಯನ್ನು ಏರ್ಪಡಿಸುತ್ತಿದೆ. ಈ ಬಾರಿಯ ಮಾತುಕತೆಯಿಂದ ಆಯ್ದ ಬರಹವಿದು)

ಪ್ರವೀಣ್‌ ಧ್ರುವಕುಮಾರ್‌

ಟಾಪ್ ನ್ಯೂಸ್

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು

mamata

EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ

Kasaragod ವಿವಿಪ್ಯಾಟ್‌ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ

Kasaragod ವಿವಿಪ್ಯಾಟ್‌ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

kejriwal 2

ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್‌ಗೆ ಕೇಜ್ರಿವಾಲ್‌ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Ram Ayodhya

Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Narayan Murthy INFOSYS

Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್‌

1-weweqwe

Globant; ಮನೆಯಿಂದಲೇ 30,000 ಮಂದಿ ಕೆಲಸ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು

mamata

EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.