ತಾಯ್ತನದ‌ ಅನುಭೂತಿ ಕಳೆದುಕೊಂಡ ಜಪಾನ್‌


Team Udayavani, Jan 5, 2020, 6:15 AM IST

25

ಹೊಸ ವರ್ಷದ ಮೊದಲ ದಿನ ಭಾರತ ಹೊಸದೊಂದು ದಾಖಲೆ ಬರೆದಿದೆ. ಆ ದಿನ ಭಾರತದಲ್ಲಿ 67,385 ಶಿಶುಗಳು ಜನಿಸಿದ್ದು, ಇದು, ವಿಶ್ವದಲ್ಲಿಯೇ ಅತ್ಯಧಿಕ. ಯುನಿಸೆಫ್ನ ಅಂಕಿ ಅಂಶಗಳ ಪ್ರಕಾರ, ಹೊಸ ವರ್ಷದ ಮೊದಲ ದಿನದಂದು ವಿಶ್ವದಾದ್ಯಂತ 3,92,078 ಶಿಶುಗಳು ಜನಿಸಿವೆ.

ಸದ್ಯಕ್ಕೆ ಜನಸಂಖ್ಯೆಯಲ್ಲಿ ದ್ವಿತೀಯ ಸ್ಥಾನದಲ್ಲಿರುವ ಭಾರತ, ಹೊಸ ವರ್ಷದಂದು ಶಿಶುಗಳ ಜನನ ಪಟ್ಟಿಯಲ್ಲಿ ಪ್ರಥಮ ಸ್ಥಾನದಲ್ಲಿದೆ. ಜನಸಂಖ್ಯೆಯಲ್ಲಿ ಪ್ರಥಮ ಸ್ಥಾನದಲ್ಲಿರುವ ಚೀನಾದಲ್ಲಿ ಆ ದಿನ 46,299 ಶಿಶುಗಳು ಜನಿಸಿವೆ ಎಂದು ಯುನಿಸೆಫ್ನ ಕಾರ್ಯ ನಿರ್ವಾಹಕ ನಿರ್ದೇಶಕ ಹೆನ್ರಿಟ್ಟಾ ಪೊರೆ ತಿಳಿಸಿದ್ದಾರೆ.

ಅತ್ಯಂತ ಅಚ್ಚರಿಯ ಸಂಗತಿಯೆಂದರೆ, ಜಪಾನ್‌ನಲ್ಲಿನ ಶಿಶು ಜನನ ಸಂಖ್ಯೆ ಶೂನ್ಯಕ್ಕೆ ಇಳಿಯತೊಡಗಿರುವುದು. ಆ ದೇಶದ ಆರೋಗ್ಯ ಇಲಾಖೆ ಹೊಸವರ್ಷದ ಮೊದಲು ದಿನ ಜನಿಸಿದ ಮಕ್ಕಳ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದೆ. ತನ್ಮೂಲಕ ತನ್ನ ಆತಂಕದ ಸ್ಥಿತಿ ಮುಚ್ಚಿಡಲು ಪ್ರಯತ್ನಿಸುತ್ತಿದೆ. ಜಪಾನ್‌ ದೇಶದಲ್ಲಿ ನಗೋರೊ ಹೆಸರಿನ ಒಂದು ಹಳ್ಳಿಯಲ್ಲಿ ಕಡೆಯ ಬಾರಿ ಮಗುವಿನ ಜನನವಾಗಿದ್ದು 18 ವರ್ಷಗಳ ಹಿಂದೆ! ಇಲ್ಲಿಯ ಪ್ರಾಥಮಿಕ ಶಾಲೆ 2012ರಲ್ಲಿ ಮಕ್ಕಳಿಲ್ಲದ್ದಕ್ಕೆ ಮುಚ್ಚಿದೆ. ಜಪಾನ್‌ ದೇಶದಲ್ಲಿ ಯುವಕರು ಮದುವೆಯಾಗುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಯುವತಿ ಯರಿಗೆ ತಾಯಿಯಾಗುವ ಉತ್ಸಾಹವಿಲ್ಲ. ಅಲ್ಲಿಯ ಸರಕಾರ ಮಕ್ಕಳ ಪಾಲನೆಗೆ ಸಬ್ಸಿಡಿ, ವೈದ್ಯಕೀಯ ವೆಚ್ಚ, ಮನೆ ಕಟ್ಟಲು ನೆರವು ಹೀಗೆ ಅನೇಕ ಪ್ರೋತ್ಸಾಹ ಯೋಜನೆಗಳನ್ನು ಪ್ರಕಟಿಸಿದರೂ ಪ್ರಯೋಜನವಾಗಿಲ್ಲ.

ಬೊಂಬೆಗಳೇ ಒಡನಾಡಿ! 
ಬೊಂಬೆಗಳೇ ಜಪಾನಿಯರ ಒಡನಾಡಿಗಳಾಗಿವೆ. ಮನೆಗಳಲ್ಲಿ ಶಾಲೆಗಳಲ್ಲಿ ಬೊಂಬೆಗಳನ್ನು ಸಂಗ್ರಹಿಸಿ ಇಡುವ ಸಂಪ್ರದಾಯ ಬೆಳೆದಿದೆ. ಬಸ್‌ ನಿಲ್ದಾಣಗಳಲ್ಲಿ, ಪಾರ್ಕ್‌ಗಳಲ್ಲಿ ಮನುಷ್ಯರನ್ನು ಹೋಲುವ ದೊಡ್ಡ ಬೊಂಬೆಗಳನ್ನು ಇಡಲಾಗುತ್ತದೆ. ಅವಿವಾಹಿತರು ಸಾಂಗತ್ಯಕ್ಕಾಗಿ ಬೊಂಬೆಗಳನ್ನು ಖರೀದಿಸಲಾರಂಭಿಸಿದ್ದಾರೆ!

ಜಪಾನಿಯರ ಬದುಕಿನ ಅವಧಿಯ ಸರಾಸರಿ ಬಹಳ ಹೆಚ್ಚಿಗಿದೆ. ಪುರುಷರ ಸರಾಸರಿ ವಯೋಮಾನ 83.4 ವರ್ಷ ಹಾಗೂ ಸ್ತ್ರೀಯರ ಸರಾಸರಿ ವಯೋಮಾನ 82 ವರ್ಷ. ವೃದ್ಧರ ಸಂಖ್ಯೆ ವಿಪರೀತವಾಗಿ ಬೆಳೆದುನಿಂತಿದೆ. ಇದರಿಂದ ಕೈಗಾರಿಕೆಗಳಲ್ಲಿ ಕೆಲಸ ಮಾಡುವವರ ಕೊರತೆ ಉಂಟಾಗಿದೆ. ವಿದೇಶದಿಂದ ಉದ್ಯೋಗ ಹುಡುಕಿಕೊಂಡು ಬರುವವರಿಗೆ ಇಲ್ಲಿ ಭವ್ಯ ಸ್ವಾಗತವಿದೆ. ಕೈಗಾರಿಕೆಗಳಲ್ಲಿ ದುಡಿಯಲು ಬರುವ ಜನರ ಪ್ರಮಾಣ 2015 ರಲ್ಲಿ 1.7% ಇದ್ದರೆ ಅದು ಈಗ 12% ಏರಿದೆ. ಈ ವಿವರ ಆ ದೇಶದ ದುಡಿಯುವ ಕೈಗಳ ಕೊರತೆಯ ಭಯಾನಕ ಚಿತ್ರ ಕಟ್ಟಿಕೊಡುತ್ತವೆ. ಮಕ್ಕಳಿಲ್ಲದ್ದಕ್ಕೆ ಜಪಾನಿನ ಶಾಲೆಗಳು ಮುಚ್ಚತೊಡಗಿವೆ. 4/5 ಶಾಲೆಗಳನ್ನು ಸೇರಿಸಿ ಒಂದೇ ಶಾಲೆಯಾಗಿ ಬದಲಿಸಲಾಗುತ್ತಿದೆ. ಟೋಕಿಯೋದ ಎರಡು ವಿಶ್ವವಿದ್ಯಾಲಯದ ಹಾಸ್ಟೇಲುಗಳು ವಿದ್ಯಾರ್ಥಿಗಳಿಲ್ಲದೆ ಬಿಕೋ ಎನ್ನತೊಡಗಿವೆ.

ಜಪಾನ್‌ನ ಯುವತಿಯರು ವಿವಾಹಕ್ಕೂ ಮೊದಲೇ ಗರ್ಭಕೋಶ ತೆಗೆಸಿಕೊಳ್ಳುತ್ತಿದ್ದಾರೆ…
ಮಕ್ಕಳ ಲಾಲನೆ ಪಾಲನೆ ಬೇಡ ಎಂದು ವಿವಾಹ ಪೂರ್ವದಲ್ಲಿಯೇ ಯುವತಿಯರು ಶಸ್ತ್ರ ಚಿಕಿತ್ಸೆ ಮೂಲಕ ತಮ್ಮ ಗರ್ಭಕೋಶವನ್ನೇ ಕಳೆದುಕೊಳ್ಳುತ್ತಿದ್ದಾರಂತೆ. ಸರಕಾರಕ್ಕೆ ಈ ಬಗ್ಗೆ ಪೂರ್ಣ ಅರಿವಿದ್ದರೂ ಏನು ಮಾಡಲಾಗುತ್ತಿಲ್ಲ ಎಂದು ಹಿರಿಯ ಜಪಾನಿಗರು ನೋವಿನಿಂದ ಹೇಳುತ್ತಾರೆ.

ಮಕ್ಕಳಿಲ್ಲದೆ ಅಲ್ಲಿಯ ಜನರ ಬದುಕು ನಿರಾಶಾದಾಯಕ ವಾಗತೊಡಗಿದೆ. ಲವಲವಿಕೆ – ಸಾಧನೆಗಳು ಕಣ್ಣಿಗೆ ಕಾಣುತ್ತಿಲ್ಲ. ಜಪಾನಿಯರ ಬದುಕು ಅಕ್ಷರಶಃ ಜಡವಾಗತೊಡಗಿದೆ. ಮಕ್ಕಳ ನಲಿದಾಟ ಕಡಿಮೆಯಾದಂತೆ ಕವಿಗಳು ಹಾಡು ಕಟ್ಟುವುದು ಕಡಿಮೆಯಾಗಿದೆ. ಹಾಗೆಯೇ ಕಲಾವಿದರು ಹಾಡು ನಿಲ್ಲಿಸಿದ್ದಾರೆ. ಇಡೀ ದೇಶ ಸಾಂಸ್ಕೃತಿಕ ಬಡತನಕ್ಕೆ ತುತ್ತಾಗುತ್ತಿರುವುದು ನಿಜಕ್ಕೂ ಭಯಾನಕ ಸಂಗತಿ. ಒಂದು ದೇಶದ ಆಸ್ಮಿತೆ ಅಲ್ಲಿಯ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಪ್ರತಿಕವಾಗಿರುತ್ತದೆ.

ಜಪಾನಿನ ಸುಕುಮಿ ಅಯನೋ ಎಂಬ ಖ್ಯಾತ ಕಲಾವಿದೆ ವಿದ್ಯಾರ್ಥಿಗಳನ್ನು ಹೋಲುವ ಉತ್ತಮ ಗೊಂಬೆಗಳನ್ನು ನಿರ್ಮಿಸುತ್ತಾರೆ. ಅವರು ಮಕ್ಕಳಿಲ್ಲದ ಶಾಲೆಗಳಲ್ಲಿ ಗೊಂಬೆಗಳನ್ನೆ ಮಕ್ಕಳಂತೆ ಕೂಡ್ರಿಸಿ ಪಾಠ ಮಾಡುತ್ತಾರೆ. ಮಕ್ಕಳ ಶಾಲಾ ವಾರ್ಷಿಕೋತ್ಸವವನ್ನು ಉಂಡೊಕಾಯ್‌ ಎಂದು ಕರೆಯುತ್ತಾರೆ; ಗೊಂಬೆಗಳ ಮೂಲಕವೇ ಸುಕುಮಿ ಅಯನೋ ಉಂಡೋಕಾಯ ಕಾರ್ಯಕ್ರಮ ನಡೆಸಿ ಜಪಾನ್‌ನ ಇಂದಿನ ಸ್ಥಿತಿ ಕಣ್ಣಿಗೆ ರಾಚುವಂತೆ ಪ್ರದರ್ಶಿಸಿ ಅಲ್ಲಿಯ ಜನರಲ್ಲಿ ತಾಯ್ತನದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಜಪಾನ್‌ ಧರ್ಮರಹಿತ ದೇಶ. ಅಲ್ಲಿ ಧರ್ಮದ ಗೊಂದಲಗಳಿಲ್ಲ. ಹೊರದೇಶಗಳಿಂದ ಬಂದವರಿಗೆ ಅಲ್ಲಿ ಮುಕ್ತವಾಗಿ ತಮ್ಮ ಧರ್ಮ ಆಚರಿಸಿಕೊಳ್ಳುವ ಅವಕಾಶವಿದೆ. ವಿದೇಶಗಳಿಂದ ಬಂದ ಕ್ರೆಸ್ತರು ಸ್ವಲ್ಪ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.

ಜನಸಂಖ್ಯೆ ಪ್ರತಿ ವರ್ಷ ಕುಸಿಯುತ್ತಿರುವುದರ ಬಗ್ಗೆ ಜಪಾನ್‌ಪ್ರಧಾನಿ ಸಿಂಜೋ ಅಬೆ ಬಹಳ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿ ಐದು ವರ್ಷಕ್ಕೆ ಒಮ್ಮೆ ಜನಗಣತಿ ಇಲ್ಲಿ ನಡೆಸಲಾಗುತ್ತಿತ್ತು. ಈಗ ಪ್ರತಿ 2 ವರ್ಷಕ್ಕೆ ಒಮ್ಮೆ ಗಣತಿ ಮಾಡಿ ವಿವರಗಳನ್ನು ಬಿಡುಗಡೆ ಮಾಡಲಾಗುತ್ತದೆ. ಜಪಾನದ ರಾಜಧಾನಿ ಟೋಕಿಯೋದಲ್ಲಿ ತಾಯ್ತನದ ಅನುಭೂತಿಯ ಕತೆಗಳನ್ನು ಹೇಳುವ ಕಾರ್ಯಕ್ರಮಗಳನ್ನು ಸರಕಾರ ಸಂಘಟಿಸತೊಡಗಿದೆ.

ಭಾರತದಲ್ಲಿ ನಡೆದ ಸಂತಾನಹರಣ ಚಿಕಿತ್ಸೆಯ ಕ್ರೂರ ಕತೆ ಇಲ್ಲಿ ಉದಾಹರಿಸಬಹುದಾಗಿದೆ. 1975-1977ರ ಅವಧಿಯಲ್ಲಿ ಪ್ರಧಾನಿ ಯಾಗಿದ್ದ ಇಂದಿರಾಗಾಂಧಿ ಅವರ ಮಗ ಸಂಜಯಗಾಂಧಿ ಭಾರತದ ತುಂಬ ಕುಟುಂಬ ಯೋಜನೆಯ ಅಭಿಯಾನ ಆರಂಭಿಸಿದ್ದರು. ಜನಸಂಖ್ಯೆ ನಿಯಂತ್ರಣದ ಉದ್ದೇಶ ಒಳ್ಳೆಯದೇ ಆಗಿದ್ದರೂ ಅದು ತೀರ ಅತಿ ಎನ್ನುವಂತೆ ಜಾರಿಗೆ ತರಲಾಗಿತ್ತು. ಅವಿವಾಹಿತರಿಗೂ ಕೂಡ ಬಲವಂತವಾಗಿ ಸಂತಾನಹರಣ ಶಸ್ತ್ರ ಚಿಕಿತ್ಸೆಯ ಹಿಂಸೆ ದೇಶದ ತುಂಬ ಕೊಡಲಾಯಿತು. ಮುಂದೆ ನಡೆದ ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ- ಸಂಜಯಗಾಂಧಿ ಸೋಲು ಅನುಭವಿಸಿದರು. ಮಾತ್ರವಲ್ಲ ಕಾಂಗ್ರೆಸ್‌ ಪಕ್ಷ ಹೀನಾಯ ಸೋಲು ಅನುಭವಿಸಿ ಕೇಂದ್ರದಲ್ಲಿ ಅಧಿಕಾರ ಕಳೆದುಕೊಂಡಿದ್ದು ಈಗ ಇತಿಹಾಸ.

ತಾಯ್ತನ ಹಿರಿಮೆಯ ಒಂದು ಘಟನೆ ಈಗ ಥಟ್ಟನೆ ನೆನಪಾಗುತ್ತಿದೆ. ನಾರ್ವೆ ದೇಶದ ಖ್ಯಾತ ಕವಯಿತ್ರಿ ಸಿಗ್ರಿಡ್‌ ಆನ್‌ಸೆಟ್‌ ಅವರಿಗೆ ನೋಬೆಲ್‌ ಪ್ರಶಸ್ತಿ ಪ್ರಕಟವಾಗುತ್ತಲೇ ಸ್ಥಳೀಯ ಪತ್ರಕರ್ತರು ಸಂದರ್ಶನಕ್ಕೆ ಆಕೆಯ ಮನೆಗೆ ತೆರಳಿದರು. ಅವರನ್ನು ಕಂಡು ಸಿಗ್ರಿಡ್‌ ಹೇಳಿದರು. “”ಕ್ಷಮಿಸಿ ನನಗೆ ನಿಮ್ಮೊಡನೆ ಮಾಡನಾಡಲು ಸಮಯವಿಲ್ಲ. ಏಕೆಂದರೆ ನಾನೀಗ ನನ್ನ ಪುಟ್ಟ ಮಗುವನ್ನು ಮಲಗಿಸುತ್ತಿದ್ದೇನೆ. ನಾನು ಲಾಲಿ ಹಾಡಿದಾಗಲೇ ಈ ಮಗು ಮಲಗುತ್ತದೆ. ನೋಬೆಲ್‌ ಪ್ರಶಸ್ತಿ ಪಡೆದ ಸಂತೋಷ ನನಗಿದೆ. ಆದರೆ ಅದಕ್ಕಿಂತ ಹೆಚ್ಚಿನ ಸಂತೋಷ ನನಗೆ ನನ್ನ ಮಗುವಿನ ಪಾಲನೆ ಪೋಷಣೆಯಲ್ಲಿ ಸಿಗುತ್ತದೆ.”

ಈ ತಾಯಿಯ ವಾತ್ಸಲ್ಯ ಕಂಡು ನಿಬ್ಬೆರಗಾದ ಪತ್ರಕರ್ತರು ತುಟಿಪಿಟಿಕೆನ್ನದೆ ಅಲ್ಲಿಂದ ತೆರಳಿದರು. ಅವ್ವ, ತಾಯಿ, ಜನನಿ, ಅಮ್ಮ, ಮದರ್‌ ಮಾತೆ ಹೀಗೆ ಹೆಸರು ನೂರಿರಬಹುದು: ಭಾಷೆಯೂ ಬೇರೆ ಇರಬಹುದು. ಆದರೆ ಆಕೆಯ ಉಸಿರಿನಲ್ಲಿರುವುದು ಅದೇ ಮಮತೆ, ಅದೇ..ಕಕ್ಕುಲತೆ. ಜಪಾನಿನ ಮಹಿಳೆಯರು ತಾಯ್ತನ ಮತ್ತು ಪುರುಷರು ಅಪ್ಪನಾಗುವ ಅನುಭೂತಿ ಕಳೆದು ಕೊಳ್ಳುತ್ತಿರುವುದರಿಂದ ಆ ದೇಶ ಬಡವಾಗತೊಡಗಿದೆ.

-ಮಲ್ಲಿಕಾರ್ಜುನ ಹೆಗ್ಗಳಗಿ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Ram Ayodhya

Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.