Udayavni Special

ಕಾರ್ನಾಡರ ನಾಟಕಗಳು, ರಂಗಭೂಮಿಯ ಪುಣ್ಯ


Team Udayavani, Jun 11, 2019, 3:00 AM IST

karnadara

ಕಾರ್ನಾಡರ ನಾಟಕರಚನೆಯ ಮೂಲ- ನಮ್ಮ ಪರಂಪರೆಯಲ್ಲಿ ಹಾಸುಹೊಕ್ಕಾಗಿರುವ ಪುರಾಣದ, ಜಾನಪದದ, ಐತಿಹಾಸಿಕದ ಐತಿಹ್ಯಗಳಲ್ಲಿ ಯಾರಗಮನಕ್ಕೂ ಬಾರದ ಅಥವಾ ಹಿನ್ನೆಲೆಗೆ ತಳ್ಳಲ್ಪಟ್ಟ ಕಥಾನಕಗಳು!

ಗಿರೀಶ ಕಾರ್ನಾಡರು ನಿಸ್ಸಂಶಯವಾಗಿ ಕನ್ನಡದ ಶ್ರೇಷ್ಠ ನಾಟಕಕಾರ. ಅವರು ಹುಟ್ಟಿದ್ದು ಮಹಾರಾಷ್ಟ್ರದಲ್ಲಿ, ಮನೆಮಾತು ಕೊಂಕಣಿ, ಇಂಗ್ಲಿಷ್‌ ಭಾಷೆಯ ಮೇಲೆ ಅಖಂಡವಾದ ಪ್ರಭುತ್ವ. ಇಷ್ಟೆಲ್ಲ ಇದ್ದೂ ಅವರು ತಮ್ಮ ಅಭಿವ್ಯಕ್ತಿ ಭಾಷೆಯನ್ನಾಗಿ ಕನ್ನಡವನ್ನು ಆರಿಸಿಕೊಂಡದ್ದು ಅದು ಕನ್ನಡದ ಪುಣ್ಯ. ಆವರೆಗೂ ಸಾಹಿತ್ಯದ ಒಂದು ಪ್ರಕಾರವಾದ ನಾಟಕ ಸಾಹಿತ್ಯವನ್ನೇ, ಅದೊಂದನ್ನೇ ತಮ್ಮ ಮೂಲ ಅಭಿವ್ಯಕ್ತಿ ಮಾಧ್ಯಮವಾಗಿ ಮಾಡಿಕೊಂಡು ಬರೆದದ್ದು, ಅದಕ್ಕೆ ಜ್ಞಾನಪೀಠ ಪುರಸ್ಕಾರ ಲಭಿಸಿದ್ದು, ಅದು ಕನ್ನಡ ಸಾಹಿತ್ಯದ ಪುಣ್ಯ ಹಾಗೂ ರಂಗಭೂಮಿಯ ಪುಣ್ಯ.

ಕಾರ್ನಾಡರ ನಾಟಕರಚನೆಯ ಮೂಲ- ನಮ್ಮ ಪರಂಪರೆಯಲ್ಲಿ ಹಾಸುಹೊಕ್ಕಾಗಿರುವ ಪುರಾಣದ, ಜಾನಪದದ, ಐತಿಹಾಸಿಕದ ಐತಿಹ್ಯಗಳಲ್ಲಿ ಯಾರಗಮನಕ್ಕೂ ಬಾರದ ಅಥವಾ ಹಿನ್ನೆಲೆಗೆ ತಳ್ಳಲ್ಪಟ್ಟ ಕಥಾನಕಗಳು! ಹೀಗೆ ಆಯ್ದುಕೊಳ್ಳುವ ಕಥಾನಕಗಳನ್ನು ಸಮಕಾಲೀನಗೊಳಿಸುವ ಶಿಷ್ಟವಾದ ಪ್ರತಿಭೆ ಕಾರ್ನಾಡರಲ್ಲಿ ಅಂತರ್ಗತವಾಗಿತ್ತು. “ಯಯಾತಿ’ಯಿಂದ ಮೊದಲುಗೊಂಡು ಅವರ ಬಹುತೇಕ ನಾಟಕಕೃತಿಗಳು ಪುರಾಣ, ಇತಿಹಾಸ, ಜಾನಪದದ ಕಥಾನಕಗಳನ್ನೇ ಆಧರಿಸಿದ್ದಾಗಿದೆ.

ಕಾರ್ನಾಡರು ಅತ್ಯಂತ ಗೌರಸುತ್ತಿದ್ದ ಜಿ.ಬಿ. ಜೋಷಿಯವರು ಒಮ್ಮೆ “ಸಮಕಾಲೀನ ಜಗತ್ತಿನ ಕುರಿತು ಯಾವಾಗ ಬರೀತಿಯೋ ಆಗ ನೀನು ದೊಡ್ಡ ಲೇಖಕ ಅನಿಸಿಕೊಳತೀ’ ಎಂದು ಹೇಳಿದ್ದ ಮಾತಿನಿಂದ ಒಳಗಿನಿಂದಲೇ ಸಂಕಲ್ಪಗೊಂಡ ಕಾರ್ನಾಡರು “ಮದುವೆ ಆಲ್ಬಮ್‌’ ಹಾಗೂ “ಬೆಂದಕಾಳು ಆನ್‌ಟೋಸ್ಟ್‌’ ಎಂಬ ನಾಟಕಗಳನ್ನು ಬರೆದರು. ಈ ನಾಟಕಗಳಲ್ಲಿ ಅವರ ಪಾತ್ರಗಳು ಯಾವುದೋ ಪುರಾಣೇತಿಹಾಸ ಕಥಾನಕದ ಪಾತ್ರಗಳಾಗಿರದೆ, ನಾವು ಬದುಕುತ್ತಿರುವ, ನಮ್ಮ ಸುತ್ತಲೇ ಬದುಕುತ್ತಿರುವ ಪಾತ್ರ ಹಾಗೂ ಸನ್ನಿವೇಶಗಳ ಸುತ್ತಕಟ್ಟಿದ್ದಾಗಿದ್ದವು.

ಬೆಂಗಳೂರು ನಗರದ ಜೀವನದ ಬಗ್ಗೆ 2012ರಲ್ಲಿ ಬಂದ ಅವರ “ಬೆಂದಕಾಳು ಆನ್‌ಟೋಸ್ಟ್‌’ ನಾಟಕ ಅದರ ಭಾಷೆಯ ದೃಷ್ಟಿಯಿಂದ ಆಗಿರಬಹುದು, ಅದರ ಬಂಧದ ದೃಷ್ಟಿಯಿಂದಲೇ ಆಗಿರಬಹುದು, ಅವರ ಹಿಂದಿನ ನಾಟಕಗಳ ತೂಕದ ದೃಷ್ಟಿಯಿಂದ ಆಗಿರಬಹುದು, ಅಷ್ಟೇನೂ ಮಹತ್ವದ ನಾಟಕ ಅಂತನ್ನಿಸುವುದಿಲ್ಲ. ಹೀಗೆ ನೇರ ಸಮಕಾಲೀನ ವಸ್ತು, ಪಾತ್ರ, ಸನ್ನಿವೇಶಗಳನ್ನು ಆಧರಿಸಿದ ಅವರ ನಾಟಕಗಳಿಗಿಂತ ಪುರಾಣೇತಿಹಾಸ, ಜಾನಪದಗಳಿಂದ ಆಯ್ದು ಸಮಕಾಲೀನಗೊಳಿಸಿದ ಅವರ ನಾಟಕಗಳೇ ವೈಯಕ್ತಿಕವಾಗಿ ನನಗೆ ಹೆಚ್ಚು ಮೆಚ್ಚುಗೆಯಾಗುವಂಥವು ಮತ್ತು ಅಂಥದರಲ್ಲೇ ಕಾರ್ನಾಡರು ಸಂಪೂರ್ಣವಾಗಿ ತಮ್ಮನ್ನು ತಾವು ತೆರೆದುಕೊಳ್ಳಬಲ್ಲರು ಹಾಗೂ ನಮ್ಮನ್ನು ತಲುಪಬಲ್ಲರು ಎನಿಸುತ್ತದೆ.

ಅದಕ್ಕೆ ಉದಾಹರಣೆ ಎಂಬಂತೆ ಇತ್ತೀಚೆಗೆ ಬಂದ “ರಾಕ್ಷಸತಂಗಡಿ’ ಎಂಬ ನಾಟಕದ ಮೂಲಕ ಕಾರ್ನಾಡರು ವಿಜಯನಗರ ಸಾಮ್ರಾಜ್ಯದ ಪಥನದ ಕಾಲವನ್ನು, ಅಲ್ಲಿನ ಒಳರಾಜಕೀಯವನ್ನು ಬರೆಯುವ ಮೂಲಕ “ನೋಯುವ ಹಲ್ಲಿಗೆ ನಾಲಗೆ ಮತ್ತೆ ಮತ್ತೆ ಮರಳುವಂತೆ’ ತಮ್ಮ ಸಹಜ ನಾಟಕರಚನಾ ಲಹರಿಗೆ ಮರಳಿದ್ದರು. ಇನ್ನೂ ಅದೆಷ್ಟು ಹೊಳಹುಗಳು ಅವರಲ್ಲಿ ನಾಟಕವಾಗಲು ಸರದಿಯಲ್ಲಿ ಕಾಯುತ್ತ ನಿಂತಿದ್ದವೋ ಗೊತ್ತಿಲ್ಲ. ಕನ್ನಡ ಸಾಹಿತ್ಯದಲ್ಲಿ ಬಹುತೇಕ ಬರಹಗಾರರು ಕಥೆ, ಕಾದಂಬರಿ, ಪ್ರಬಂಧ, ನಾಟಕ, ಕಾವ್ಯ- ಹೀಗೆ ಎಲ್ಲ ಪ್ರಾಕಾರಗಳಲ್ಲೂ ಅಭಿವ್ಯಕ್ತಗೊಳಿಸಲು ಪ್ರಯತ್ನಿಸುತ್ತಾರೆ; ಆದರೆ, ಕಾರ್ನಾಡರು ಮಾತ್ರ ಆ ಯಾವ ಗೋಜಿಗೂ ಹೋಗದೆ ನಿಷ್ಠೆಯಿಂದ ನಾಟಕ ಪ್ರಕಾರವೊಂದರಲ್ಲೇ ತಮ್ಮ ಎಲ್ಲ ಒಳತೋಟಿಗಳನ್ನು ಅಭಿವ್ಯಕ್ತಗೊಳಿಸಿದ್ದಾರೆ.

ಒಬ್ಬ ಸೃಜನಶೀಲ ಕಲಾವಿದನೋ, ಬರಹಗಾರನೋ ಸಮಕಾಲೀನ ತಲ್ಲಣಗಳಿಗೆ ರಸ್ತೆಗೆ ಇಳಿದು ಪ್ಲಕಾರ್ಡ್‌ ಹಿಡಿದು ಹೋರಾಟ ಮಾಡುವ ಮೂಲಕವೇ ತನ್ನಅಸಹಕಾರವನ್ನು ದಾಖಲಿಸಬೇಕು ಎಂದೇನಿಲ್ಲ; ಅವನು ತನ್ನ ಕೃತಿಗಳ ಮೂಲಕ ಹಾಗೂ ತನ್ನ ಬದುಕಿನ ಮೂಲಕ ಅಂಥ ಕೆಲಸವನ್ನು ಯಾವಾಗಲೂ ಮಾಡುತ್ತಲೇ ಇರಬಲ್ಲ ಎಂದು ನಾವು ಕಾರ್ನಾಡರ ಸಾವಿನಲ್ಲೂ ಕಾಣಬಹುದು-ಯಾವ ಮೆರವಣಿಗೆ, ಹಾಹಾಕಾರ, ಜಯಘೋಷ, ಮಂತ್ರಘೋಷ- ಹೀಗೆ ಯಾವ ಆಷಾಡಭೂತಿತನಗಳಿಲ್ಲದೆ ಧೀಮಂತರಾಗಿ ನಿರ್ಗಮಿಸಿದ ಕಾರ್ನಾಡರ ಕುರಿತು ಗೌರವ ಹೆಚ್ಚದೇ ಇರದು. ಅವರಿಗೆ ಒಂದು ಧೀಮಂತ ವಿದಾಯ.

* ಮೌನೇಶ್‌ ಬಡಿಗೇರ್‌, ರಂಗಕರ್ಮಿ- ನಿರ್ದೇಶಕ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

nternet-slow-2

ನಿಮ್ಮ ಇಂಟರ್ನೆಟ್ ಸ್ಲೋನಾ..? ಹಾಗಾದ್ರೆ ಹೀಗೆ ಮಾಡಿ

ಗುಲ್ವಾಡಿ; ಬಾರಿ ಮಳೆಗೆ ಗುಡ್ಡ ಕುಸಿದು ಮನೆಗೆ ಹಾನಿ

ಗುಲ್ವಾಡಿ; ಭಾರಿ ಮಳೆಗೆ ಗುಡ್ಡ ಕುಸಿದು ಮನೆಗೆ ಹಾನಿ

ಸಾಮಾಜಿಕ ಅಂತರ ಮರೆತು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಬರ್ತ್ ಡೇ ಪಾರ್ಟಿ!

ಸಾಮಾಜಿಕ ಅಂತರ ಮರೆತು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಬರ್ತ್ ಡೇ ಪಾರ್ಟಿ!

ಮಲ್ಲಾರು : ಅಕ್ರಮ ಗೋವಧಾ ಕೇಂದ್ರಕ್ಕೆ ದಾಳಿ ; ಹತ್ತು ಜಾನುವಾರುಗಳ ರಕ್ಷಣೆ

ಮಲ್ಲಾರು : ಅಕ್ರಮ ಗೋವಧಾ ಕೇಂದ್ರಕ್ಕೆ ದಾಳಿ ; ಹತ್ತು ಜಾನುವಾರುಗಳ ರಕ್ಷಣೆ

ಕುರ್ಕಾಲು : ಗಿರಿನಗರದ ಒಂದೇ ಕುಟುಂಬದ ಐದು ಮಂದಿಯಲ್ಲಿ ಸೋಂಕು ದೃಢ‌ ; 12 ಮನೆ ಸೀಲ್‌ ಡೌನ್‌

ಕುರ್ಕಾಲು :ಗಿರಿನಗರದ ಒಂದೇ ಕುಟುಂಬದ ಐದು ಮಂದಿಯಲ್ಲಿ ಸೋಂಕು ದೃಢ‌ ; 12 ಮನೆ ಸೀಲ್‌ಡೌನ್‌

ನೂರ್ತಾಡಿ ಯುವಕರಿಂದ ಸಾಂಪ್ರಾದಾಯಿಕ ಪದ್ಧತಿ ಬೇಸಾಯ

ನೂರ್ತಾಡಿ ಯುವಕರಿಂದ ಸಾಂಪ್ರಾದಾಯಿಕ ಪದ್ಧತಿ ಬೇಸಾಯ

Vikram-Bathra-2

ಕಾರ್ಗಿಲ್ ನಲ್ಲಿ ವೈರಿಗಳನ್ನು ಮಣಿಸಿ ‘ಯೇ ದಿಲ್ ಮಾಂಗೇ ಮೋರ್’ ಎಂದಿದ್ದ ಬ್ರೇವ್ ಕ್ಯಾಪ್ಟನ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗುಣಮಟ್ಟದ ಚಿಕಿತ್ಸೆಗಾಗಿ ಯುನಿಟಿ ಆಸ್ಪತ್ರೆ ಮಂಗಳೂರು

ಗುಣಮಟ್ಟದ ಚಿಕಿತ್ಸೆಗಾಗಿ ಯುನಿಟಿ ಆಸ್ಪತ್ರೆ ಮಂಗಳೂರು

ಗೋವಿಂದ ಭಟ್ಟರು, ಶಿಶುನಾಳ ಶರೀಫ‌ರೆಂಬ ಸಮಾನತೆಯ ಹರಿಕಾರರು 

ಗೋವಿಂದ ಭಟ್ಟರು, ಶಿಶುನಾಳ ಶರೀಫ‌ರೆಂಬ ಸಮಾನತೆಯ ಹರಿಕಾರರು 

ಮಕ್ಕಳಲ್ಲಿ ಅಸ್ತಮಾ ಬರುವುದೇಕೆ?

ಮಕ್ಕಳಲ್ಲಿ ಅಸ್ತಮಾ ಬರುವುದೇಕೆ?

ಯೋಗ ಮತ್ತು ಪ್ರಕೃತಿ ಚಿಕಿತ್ಸೆ

ಯೋಗ ಮತ್ತು ಪ್ರಕೃತಿ ಚಿಕಿತ್ಸೆ ; ಜೀವನ ಪದ್ಧತಿ ಕ್ರಮ ಇಂತಿರಲಿ

ಸಸ್ಯ ಲೋಕದಲ್ಲಿ ಸ್ಯಾನಿಟೈಸರ್

ಸಸ್ಯ ಲೋಕದಲ್ಲಿ ಸ್ಯಾನಿಟೈಸರ್

MUST WATCH

udayavani youtube

ಗಾಲ್ವಾನ್ ಕಣಿವೆ: ಚೀನಾದ ಉದ್ಧಟತನಕ್ಕೆ ಏನು ಕಾರಣ? | Udayavani Straight Talk

udayavani youtube

ಮಡಹಾಗಲ ಕಾಯಿ – Spiny gourd ಬೆಳೆದು ಯಶಸ್ವಿಯಾದ ರೈತ | Successful Farmer Vegetable

udayavani youtube

ಮಧ್ಯಕರ್ನಾಟಕದ ಆಶಾಕಿರಣ | SS Hospital Davangere

udayavani youtube

ಮಡಹಾಗಲ ಕಾಯಿ ಬೆಳೆಯುವ ಸೂಕ್ತ ವಿಧಾನ | How to grow Spiny gourd in your Home

udayavani youtube

Uday Innaje : Success story of Sugarcane Farmer | Udayavani


ಹೊಸ ಸೇರ್ಪಡೆ

nternet-slow-2

ನಿಮ್ಮ ಇಂಟರ್ನೆಟ್ ಸ್ಲೋನಾ..? ಹಾಗಾದ್ರೆ ಹೀಗೆ ಮಾಡಿ

ಗುಲ್ವಾಡಿ; ಬಾರಿ ಮಳೆಗೆ ಗುಡ್ಡ ಕುಸಿದು ಮನೆಗೆ ಹಾನಿ

ಗುಲ್ವಾಡಿ; ಭಾರಿ ಮಳೆಗೆ ಗುಡ್ಡ ಕುಸಿದು ಮನೆಗೆ ಹಾನಿ

ಸಾಮಾಜಿಕ ಅಂತರ ಮರೆತು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಬರ್ತ್ ಡೇ ಪಾರ್ಟಿ!

ಸಾಮಾಜಿಕ ಅಂತರ ಮರೆತು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಬರ್ತ್ ಡೇ ಪಾರ್ಟಿ!

ಮಲ್ಲಾರು : ಅಕ್ರಮ ಗೋವಧಾ ಕೇಂದ್ರಕ್ಕೆ ದಾಳಿ ; ಹತ್ತು ಜಾನುವಾರುಗಳ ರಕ್ಷಣೆ

ಮಲ್ಲಾರು : ಅಕ್ರಮ ಗೋವಧಾ ಕೇಂದ್ರಕ್ಕೆ ದಾಳಿ ; ಹತ್ತು ಜಾನುವಾರುಗಳ ರಕ್ಷಣೆ

ಗುಂಡ್ಮಿ; ಹೋಮ್ ಕ್ವಾರೆಂಟೈನ್‌ನಿಂದ ಬೇಸರಗೊಂಡು ಬಾಲಕ ಆತ್ಮಹತ್ಯೆ

ಗುಂಡ್ಮಿ; ಹೋಮ್ ಕ್ವಾರೆಂಟೈನ್‌ನಿಂದ ಬೇಸರಗೊಂಡು ಬಾಲಕ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.