ಲಕ್ಸುರಿ ರೋಲ್ಸ್‌ ರಾಯ್ಸ್  ಕಾರಿಗೆ ಸೆಗಣಿ ಬಳಿದ ದಿಟ್ಟೆ 


Team Udayavani, Aug 12, 2021, 7:20 AM IST

ಲಕ್ಸುರಿ ರೋಲ್ಸ್‌ ರಾಯ್ಸ್  ಕಾರಿಗೆ ಸೆಗಣಿ ಬಳಿದ ದಿಟ್ಟೆ 

ಕೋಟಿಗಟ್ಟಲೆ ಬೆಲೆಬಾಳುವ ರೋಲ್ಸ ರಾಯ್ಸ್ ಕಾರು ಹೊಂದುವುದು ಈ ದಿನಗಳಲ್ಲಿ ಸೆಲೆಬ್ರಿಟಿಗಳಿಗೆ ಪ್ರತಿಷ್ಠೆಯ ವಿಚಾರ. ಅಚ್ಚರಿ ಯೆಂದರೆ ಇಂಥ ಐಷಾರಾಮಿ ಕಾರನ್ನು ಸ್ವಾತಂತ್ರ್ಯ ಪೂರ್ವದಲ್ಲಿಯೇ ಬಿಜಾಪುರ ಜಿಲ್ಲೆಯ ಜೈನಾಪುರದ ಆಗರ್ಭ ಶ್ರೀಮಂತ ಕುಟುಂಬದ ಸೊಸೆ ಕಾಶಿಬಾಯಿ ಹೊಂದಿದ್ದರು. ಇಂಗ್ಲೆಂಡಿನಿಂದ ಆಮದು ಮಾಡಿಕೊಂಡಿದ್ದ ಈ ಕಾರನ್ನು ನೋಡುವುದೇ ಸುತ್ತಮುತ್ತ ಹಳ್ಳಿ ಮಂದಿಗೆ ಸಂಭ್ರಮದ ವಿಚಾರ ಆಗಿತ್ತು.

ಕಾಶಿಬಾಯಿ ಬಳಿ ರೋಲ್ಸ್ ರಾಯ್ಸ್ ಇರುವ ಸಂಗತಿ ಬಿಜಾಪುರದ ಡಿಸ್ಟ್ರಿಕ್‌ ಕಲೆಕ್ಟರ್‌ನ ಕಿವಿಗೆ ಬಿತ್ತು. ಅದೊಂದು ದಿನ ಕಲ್ಕತಾದ ಬ್ರಿಟಿಷ್‌ ಉನ್ನತಾಧಿಕಾರಿಯೊಬ್ಬ ಬಿಜಾಪುರಕ್ಕೆ ಬರುವನಿದ್ದ. ಅವರನ್ನು ಇಂಪ್ರಸ್‌ ಮಾಡುವ ಸಲುವಾಗಿ, ಬಿಜಾಪುರ ಡಿಸಿ ಕೆಲವು ದಿನಗಳ ಮಟ್ಟಿಗೆ ರೋಲ್ಸ್  ರಾಯ್ಸ್ ಕಾರನ್ನು ಕೊಡುವಂತೆ ಕಾಶಿಬಾಯಿಗೆ ಸೂಚಿಸಿದರು. ಆದರೆ ಈ “ದಿಟ್ಟೆ ಯಾವ ಕಾರಣಕ್ಕೂ ಬ್ರಿಟಿಷರಿಗೆ ಕಾರು ಕೊಡಲಾರೆ’ ಎಂದು ಖಡಾಖಂಡಿತವಾಗಿ ಹೇಳಿದಳು. ಡಿಸಿ ಬಾಡಿಗೆ ರೂಪದಲ್ಲಿ ಸಾಕಷ್ಟು ಹಣ ನೀಡು ವುದಾಗಿಯೂ ಆಮಿಷವೊಡ್ಡಿದ. ಊಹೂಂ, ಕಾಶಿಬಾಯಿ ಒಪ್ಪಲಿಲ್ಲ. ಡಿಸಿ ವಾಗ್ವಾದ ನಡೆಸಿದ. ಬೆದರಿಕೆ ಹಾಕಿದ. ಕಾಶಿಬಾಯಿ ಮಾತ್ರ ಜಗ್ಗಲಿಲ್ಲ.

“ನಮ್ಮ ದೇಶದಿಂದ ಇಂಪೋರ್ಟ್‌ ಮಾಡ್ಕೊಂಡ ಕಾರನ್ನು ನಮಗೆ ಕೊಡೋದಿಲ್ಲವೆಂದರೆ ಏನರ್ಥ? ಇನ್ನೆಂದೂ ನೀನು ಕಾರು ಓಡಿಸ್ಬಾರ್ದು, ಹಾಗೆ ಮಾಡ್ತೀನಿ’ ಎಂದವನೇ ಕಾರಿನ ನೋಂದಣಿ ಸಂಖ್ಯೆಯನ್ನೇ ಡಿಸಿ ರದ್ದುಮಾಡಿಬಿಟ್ಟ. ಆದರೂ ತಲೆ ಕೆಡಿಸಿಕೊಳ್ಳದ ಕಾಶಿಬಾಯಿ, ಡಿಸಿಗೆ ಹೀಗೆ ಉತ್ತರಿಸಿದಳು: “ನಿಮ್ಮ ಆದೇಶಕ್ಕೆ ನನ್ನ ತಕರಾರಿಲ್ಲ. ನೀವು ರಿಜಿಸ್ಟ್ರೇಶನ್‌ ನಂಬರ್‌ ರದ್ದು ಮಾಡಿದರೇನಂತೆ… ನಾನು ಇದರ ಮೇಲೆ ದನದ ಸೆಗಣಿ ಬಳಿದು ಬೆರಣಿ ತಟ್ಟುವೆ’ ಎಂದು ಲಕ್ಷುರಿ ಕಾರನ್ನು ಸ್ವಾತಂತ್ರ್ಯ ಸಿಗುವ ತನಕವೂ ಬೆರಣಿ ತಟ್ಟಲು ಬಳಸಿದಳು.

ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ಮರುದಿನವೇ ಈ ಕಾರನ್ನು ಸಂಚಾರಕ್ಕೆ ಬಳಸಿಕೊಂಡರು.

 

-ಜಿ.ಎಸ್‌. ಕಮತರ, ವಿಜಯಪುರ

ಟಾಪ್ ನ್ಯೂಸ್

ಕಡಲ ತೀರಕ್ಕೆ ದೌಡಾಯಿಸಿದ ಚುಂಗ್ರಿ! ಸಾಂಪ್ರದಾಯಿಕ ಮೀನುಗಾರರಿಗೆ ಕಂಟಕ

ಕಡಲ ತೀರಕ್ಕೆ ದೌಡಾಯಿಸಿದ ಚುಂಗ್ರಿ! ಸಾಂಪ್ರದಾಯಿಕ ಮೀನುಗಾರರಿಗೆ ಕಂಟಕ

ಇಮೇಲ್‌ ಮೂಲಕ ಮಹಿಳೆಗೆ 50 ಸಾವಿರ ರೂ. ವಂಚನೆ

ಇಮೇಲ್‌ ಮೂಲಕ ಮಹಿಳೆಗೆ 50 ಸಾವಿರ ರೂ. ವಂಚನೆ

ಕುಖ್ಯಾತ ನಕ್ಸಲ್‌ ನಾಯಕನ ಶವ ಪತ್ತೆ

ಕುಖ್ಯಾತ ನಕ್ಸಲ್‌ ನಾಯಕನ ಶವ ಪತ್ತೆ

ಏಕಾಂಗಿ ಪ್ರವಾಸ: ಭಾರತೀಯ ಕಾಣೆ

ಏಕಾಂಗಿ ಪ್ರವಾಸ: ಭಾರತೀಯ ಕಾಣೆ

ಉಳ್ಳಾಲದಲ್ಲಿ ಅಪಹರಿಸಿ ಚಾರ್ಮಾಡಿಯಲ್ಲಿ ಯುವಕನ ಕೊಲೆಗೆ ಯತ್ನ :ಅದೃಷ್ಟ ಚೆನ್ನಾಗಿತ್ತು ನೋಡಿ..

ಉಳ್ಳಾಲದಿಂದ ಅಪಹರಿಸಿ ಚಾರ್ಮಾಡಿಯಲ್ಲಿ ಯುವಕನ ಕೊಲೆಗೆ ಯತ್ನ: ಅದೃಷ್ಟ ಚೆನ್ನಾಗಿತ್ತು ನೋಡಿ..

ಚೆಕ್‌ ಬೌನ್ಸ್‌ ಪ್ರಕರಣ : 88 ಲ.ರೂ. ಪಾವತಿಸಲು ಆದೇಶ, ತಪ್ಪಿದರೆ 6 ತಿಂಗಳ ಸಜೆ 

ಮಂಗಳೂರು : ಚೆಕ್‌ ಬೌನ್ಸ್‌ ಪ್ರಕರಣ ; 88 ಲ.ರೂ. ಪಾವತಿಸಲು ಆದೇಶ, ತಪ್ಪಿದರೆ 6 ತಿಂಗಳ ಸಜೆ 

ಗಂಗಾ ಕಲ್ಯಾಣ ಅವ್ಯವಹಾರ ತನಿಖೆಯಲ್ಲಿ ಸಾಬೀತು- ಪ್ರಿಯಾಂಕ್‌ ಖರ್ಗೆ

ಗಂಗಾ ಕಲ್ಯಾಣ ಅವ್ಯವಹಾರ ತನಿಖೆಯಲ್ಲಿ ಸಾಬೀತು- ಪ್ರಿಯಾಂಕ್‌ ಖರ್ಗೆ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜೋತಿಷ ಶಾಸ್ತ್ರದಲ್ಲಿ ಶೀಘ್ರ ಫ‌ಲಾಫ‌ಲ ನಿರ್ದೇಶಿಸುವ ತಾಂಬೂಲ ಪ್ರಶ್ನೆ

ಜೋತಿಷ ಶಾಸ್ತ್ರದಲ್ಲಿ ಶೀಘ್ರ ಫ‌ಲಾಫ‌ಲ ನಿರ್ದೇಶಿಸುವ ತಾಂಬೂಲ ಪ್ರಶ್ನೆ

ಬೆಂಗಳೂರು- ಚೆನ್ನೈ ಸಾರಿಗೆಯ ಹೊಸ ಭಾಷ್ಯ ಎಕ್ಸ್‌ಪ್ರೆಸ್‌ ವೇ!

ಬೆಂಗಳೂರು- ಚೆನ್ನೈ ಸಾರಿಗೆಯ ಹೊಸ ಭಾಷ್ಯ ಎಕ್ಸ್‌ಪ್ರೆಸ್‌ ವೇ!

ಪಠ್ಯ ಪುಸ್ತಕದ ಮೇಲೆ ಎಡ-ಬಲ ಸಿದ್ಧಾಂತ ಸಂಘರ್ಷ

ಪಠ್ಯ ಪುಸ್ತಕದ ಮೇಲೆ ಎಡ-ಬಲ ಸಿದ್ಧಾಂತ ಸಂಘರ್ಷ

news

ಐನ್‌ ಸ್ಟೈನ್ ಇನ್ನೊಮ್ಮೆ ವಿಜಯಿಯಾದರೆ?

ತುಳುನಾಡಿನ ವಿಶಿಷ್ಟ ಪರ್ವದಿನ ಪತ್ತನಾಜೆ

ತುಳುನಾಡಿನ ವಿಶಿಷ್ಟ ಪರ್ವದಿನ ಪತ್ತನಾಜೆ

MUST WATCH

udayavani youtube

ಮಣಿಪಾಲ : ಡಿವೈಡರ್ ಗೆ ಬೈಕ್ ಢಿಕ್ಕಿ, ವಿದ್ಯಾರ್ಥಿ ಸಾವು… ಇನ್ನೋರ್ವ ಗಂಭೀರ

udayavani youtube

IPL ಬೆಟ್ಟಿಂಗ್ ಗಾಗಿ ಠೇವಣಿದಾರರ ಹಣವನ್ನೇ ಬಳಸಿಕೊಂಡ ಪೋಸ್ಟ್ ಮಾಸ್ಟರ್

udayavani youtube

Wheel Chair Romeo actor exclusive interview | RELEASING ON MAY 27TH

udayavani youtube

ಶಿರಸಿ : ಬಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ನಾಗರ ಹಾವಿನ ರಕ್ಷಣೆ

udayavani youtube

ಪುತ್ರನಿಗೆ ತಪ್ಪಿದ ಪರಿಷತ್ ಟಿಕೆಟ್ : ಬಿಎಸ್ ವೈ ಹೇಳಿದ್ದೇನು?

ಹೊಸ ಸೇರ್ಪಡೆ

ಕಡಲ ತೀರಕ್ಕೆ ದೌಡಾಯಿಸಿದ ಚುಂಗ್ರಿ! ಸಾಂಪ್ರದಾಯಿಕ ಮೀನುಗಾರರಿಗೆ ಕಂಟಕ

ಕಡಲ ತೀರಕ್ಕೆ ದೌಡಾಯಿಸಿದ ಚುಂಗ್ರಿ! ಸಾಂಪ್ರದಾಯಿಕ ಮೀನುಗಾರರಿಗೆ ಕಂಟಕ

ಇಮೇಲ್‌ ಮೂಲಕ ಮಹಿಳೆಗೆ 50 ಸಾವಿರ ರೂ. ವಂಚನೆ

ಇಮೇಲ್‌ ಮೂಲಕ ಮಹಿಳೆಗೆ 50 ಸಾವಿರ ರೂ. ವಂಚನೆ

ಕುಖ್ಯಾತ ನಕ್ಸಲ್‌ ನಾಯಕನ ಶವ ಪತ್ತೆ

ಕುಖ್ಯಾತ ನಕ್ಸಲ್‌ ನಾಯಕನ ಶವ ಪತ್ತೆ

ಏಕಾಂಗಿ ಪ್ರವಾಸ: ಭಾರತೀಯ ಕಾಣೆ

ಏಕಾಂಗಿ ಪ್ರವಾಸ: ಭಾರತೀಯ ಕಾಣೆ

ಉಳ್ಳಾಲದಲ್ಲಿ ಅಪಹರಿಸಿ ಚಾರ್ಮಾಡಿಯಲ್ಲಿ ಯುವಕನ ಕೊಲೆಗೆ ಯತ್ನ :ಅದೃಷ್ಟ ಚೆನ್ನಾಗಿತ್ತು ನೋಡಿ..

ಉಳ್ಳಾಲದಿಂದ ಅಪಹರಿಸಿ ಚಾರ್ಮಾಡಿಯಲ್ಲಿ ಯುವಕನ ಕೊಲೆಗೆ ಯತ್ನ: ಅದೃಷ್ಟ ಚೆನ್ನಾಗಿತ್ತು ನೋಡಿ..

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.