ಬಿರುಗಾಳಿ ನಂತರದ ಮೌನ ರಾಜ್ಯವ ಹಸನಾಗಿಸಲಿ


Team Udayavani, May 18, 2018, 12:30 AM IST

k-34.jpg

ಹೊಸ ಸರ್ಕಾರದ ಮುಂದಿರುವ ಈ ಸವಾಲು ಬಹಳ ಗಂಭೀರ ಸ್ವರೂಪದ್ದು. ಚುರು ಕಾಗಿರುವ ಹೊಸ ಪೀಳಿಗೆಯ ಜನಸಾಮಾನ್ಯರು ಮುಲಾಜಿಲ್ಲದೇ ತಪ್ಪುಗಳನ್ನು ಹುಡುಕಿ ಸಮಾಜದ ಮುಂದೆ ಬೆತ್ತಲಾಗಿಸುತ್ತಾರೆ ಅನ್ನುವ ಅಂಜಿಕೆ ರಾಜಕೀಯ ನಾಯಕರಿಗಿರಲಿ.

ಮತ ಚಲಾವಣೆ ಎಂಬುದು ಜನರ ಮನದ ತೀರ್ಪಾಗಿ ಹೊರಹೊಮ್ಮುತ್ತದೆ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಗ್ರಾಮೀಣ ಮತದಾರರೇ ಭೇಷ್‌ ಎನಿಸಿಕೊಂಡಿದ್ದಾರೆ. ಮತ್ತೂಮ್ಮೆ ನಗರದ ವಿದ್ಯಾವಂತ, ಶ್ರೀಮಂತ ಜನರು ಮತ ಚಲಾಯಿಸದೆ ಅಭಿವ್ಯಕ್ತಿ ಹೀನರಾಗಿ ಕಾಣಿಸಿಕೊಂಡಿದ್ದಾರೆ. “ಎಲೆಕ್ಷನ್ನಾ? ಇವರ ಪಾಲಿಟಿಕ್ಸ್‌ ನಮಗ್ಯಾಕೆ ಬೇಕು’ ಎನ್ನುತ್ತಾ ಮತದಾನಕ್ಕೆ ಹಿಂದೇಟು ಹಾಕಿ ಸೌಲಭ್ಯ ಮಾತ್ರ ಬೇಕು ಎನ್ನುವವರ ಸಂಖ್ಯೆ ಸಾಕಷ್ಟು ಪ್ರಮಾಣದಲ್ಲಿದೆ. ಚುನಾವಣಾ ಗಲಾಟೆ, ಗದ್ದಲಗಳು, ಆರೋಪ-ಪ್ರತ್ಯಾರೋಪಗಳು ಮುಗಿದಿವೆ. ಯಾವ ಪಕ್ಷವೂ ಜನರ ಸಂಪೂರ್ಣ ವಿಶ್ವಾಸ ಗಳಿಸಿದೆ ಎನ್ನುವಂತಿಲ್ಲ. ಆಡಳಿತ ನಡೆಸುತ್ತಿದ್ದ ಕಾಂಗ್ರೆಸ್‌ ಪಕ್ಷವನ್ನು ಮಾತ್ರ ಕೆಳಗೆ ಇಳಿಸುವ ದೃಢ ನಿರ್ಧಾರವನ್ನು ಮತದಾರರು ಮಾಡಿದ್ದಂತೂ ಸ್ಪಷ್ಟ. ಇರುವ ಮೂರೂ ಪ್ರಮುಖ ಪಕ್ಷಗಳಲ್ಲಿ ನೂರನಾಲ್ಕು ಸ್ಥಾನ ಪಡೆದ ಭಾರತೀಯ ಜನತಾ ಪಕ್ಷದ ಶಾಸಕಾಂಗ ಪಕ್ಷದ ನಾಯಕ ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಕೆಲಸ ಆರಂಭಿಸಿದ್ದಾರೆ. ವಿಧಾನಸೌಧದ ಮೆಟ್ಟಿಲಿಗೆ ನಮಸ್ಕರಿಸುತ್ತಾ ಮೋದಿ ನಡೆಯನ್ನು ಯಡಿಯೂರಪ್ಪ ನೆನಪಿಸಿದರೂ ಬಹುಮತ ಸಾಬೀತಿನ ಇನ್ನೊಂದು ಅಗ್ನಿಪರೀಕ್ಷೆಗೆ ಅಣಿಯಾಗಿದ್ದಾರೆ. ಕರ್ನಾಟಕವಲ್ಲದೆ, ಇಡೀ ದೇಶದ ಜನ ಕುತೂಹಲದಿಂದ ನೋಡುತ್ತಿದ್ದಾರೆ. ಸರ್ಕಾರದ ಅಳಿವು ಉಳಿವಿನ ಹೋರಾಟವಿದು. ಹೋರಾಟದ ಬದುಕಿಂದಲೇ ಬಂದಿರುವ ಯಡಿಯೂರಪ್ಪನವರಿಗೆ ಸರ್ಕಾರದ ಐದು ವರ್ಷದ ಆಯುಷ್ಯಕ್ಕಾಗಿ ಸತ್ವ ಪರೀಕ್ಷೆಯೂ ನಡೆಯುತ್ತಿದೆ. ಅತಂತ್ರ ಎನ್ನುವುದು ಕರ್ನಾಟಕದ ಸದ್ಯದ ಸ್ಥಿತಿ. ಒಂದೆರಡು ದಿನಗಳಲ್ಲಿ ಸ್ಪಷ್ಟ ಚಿತ್ರಣ ಗೋಚರಿಸಲು ಆರಂಭವಾಗುತ್ತದೆ. ಹದಿನೈದು ದಿನಗಳ ಕಾಲಾವಕಾಶ ಬೇಕಿತ್ತೇ, ಬೇಡವಾಗಿತ್ತೇ ಎಂಬ ವಿಶ್ಲೇಷಣೆ ಮಾಡುವವರು ರಾಜ್ಯಪಾಲರಿಗೆ ಸಿಕ್ಕ ಸಂವಿಧಾನದತ್ತವಾದ ಅಧಿಕಾರದ ಬಗ್ಗೆಯೂ ತಿಳಿದುಕೊಳ್ಳಬೇಕಾಗಿದೆ. ಅದೇನೇ ಇರಲಿ, ರಾಜ್ಯದ ಹೊಸ ಸರ್ಕಾರಕ್ಕೆ ಶುಭಾಶಯಗಳು. 

ಅಲ್ಲಿಗೆ ಎಲ್ಲ ಪಕ್ಷಗಳ ಕಾರ್ಯಕರ್ತರ ಜೊತೆಯಲ್ಲೇ ರಾಷ್ಟ್ರೀಯ ಪಕ್ಷಗಳ ಊಳಿಗದವರು, ಪೋಷಕರು, ಮಾತಿನ ಪೋಷಕರೂ ಸೇರಿದಂತೆ ಮಾಡಿದ ಗದ್ದಲಗಳೆಲ್ಲ ಒಂದು ಹಂತಕ್ಕೆ ಸ್ತಬ್ಧವಾಗುತ್ತದೆ. ಬಿರುಗಾಳಿ ಬಂದು ಹೋದ ನಂತರದ ಮೌನವೂ ಇರಬಹುದು, ಏಕೆಂದರೆ ಎಲ್ಲರ ದುಡ್ಡಿನ ಕೋಟೆಗಳು ಮುರಿದುಬಿದ್ದಿವೆ. ಹಂಚಿ ಹೋಗಿವೆ. ದುಡ್ಡು ಕಳೆದುಕೊಂಡು, ಸೀಟೂ ಪಡೆಯದವರ ಸ್ಥಿತಿ ಒಂದು ರೀತಿಯಾದರೆ ಸೀಟು ಗೆದ್ದು ಸಚಿವ ಸ್ಥಾನ ಪಡೆದವರ ಮತ್ತು ಪಡೆಯದವರ ಸ್ಥಿತಿ ಇನ್ನೊಂದು ರೀತಿ. ಈ ಎಲ್ಲ ಬೆಳವಣಿಗೆಗಳ ನಡುವೆಯೂ ಹೊಸ ಸರ್ಕಾರದಿಂದ ನಿರೀಕ್ಷೆಗ‌ಳಂತೂ ಭರಪೂರ ಇವೆ. 

ಈ ದಶಕದಲ್ಲಿ ರಾಷ್ಟ್ರಮಟ್ಟದಿಂದ ಹಿಡಿದು ರಾಜ್ಯಗಳಲ್ಲಿಯೂ ಅನೇಕ ಬದಲಾವಣೆಗಳಿಗೆ ಸಾಕ್ಷಿಯಾಗಿದೆ. ರಾಷ್ಟ್ರದಲ್ಲಿ ಹಲವು ವರ್ಷಗಳ ಕಾಲ ನಡೆಸಿದ ಆಡಳಿತದ ವೈಖರಿಯಿಂದ ಜನ ರೋಸಿ ಹೋಗಿ ಕಾಂಗ್ರೆಸ್‌ ಪಕ್ಷವನ್ನು ಸೋಲಿಸಿದ್ದಾರೆ. ಹೊಸ ಕನಸನ್ನು ಬಿತ್ತಿದ ಮತ್ತೂಂದು ಪಕ್ಷಕ್ಕೆ ಜನ ದೇಶದ ಅಧಿಕಾರ ಕೊಟ್ಟಿದ್ದಾರೆ. ಈ ಎಲ್ಲ ಭಿನ್ನತೆಗಳ ನಡುವೆಯೂ ಎಲ್ಲ ಪಕ್ಷಗಳ ಒಂದು ಸಾಮಾನ್ಯ ಮುಖವೆಂದರೆ ನೈತಿಕತೆಯ ಕುಸಿತ. ಪಕ್ಷಭೇದ ಮರೆತು, ಚುನಾವಣೆಗೆ ಮೊದಲು ಅತ್ಯಂತ ಕೀಳುಮಟ್ಟದ ಹೇಳಿಕೆಗಳನ್ನು ಕೊಡುತ್ತಿದ್ದ ಪಕ್ಷಗಳು ಹೆಗಲಿಗೆ ಕೈ ಹಾಕಿಕೊಂಡು ಆಜನ್ಮ ಸ್ನೇಹಿತರಂತೆ ಕಾಣಿಸಿಕೊಂಡು ಜನರಿಗೆ, ಕಾರ್ಯಕರ್ತರಿಗೆ ದ್ರೋಹ ಮಾಡುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಅದನ್ನು ರಾಜಕೀಯ ತಂತ್ರವೆಂದು ಬಣ್ಣಿಸುತ್ತಾ, ರಾಜಕೀಯವೆಂದರೆ ಹೊಲಸು ಎಂದು ಅವರೇ ಜಗಜ್ಜಾಹೀರು ಮಾಡಿದ್ದಾರೆ. ಅವರವರ ಅನುಕೂಲಕ್ಕೆ ತಕ್ಕಂತೆ ಅಲ್ಲಲ್ಲಿ ಹೊಂದಾಣಿಕೆ ಮಾಡಿಕೊಳ್ಳುತ್ತಿರುವುದು ರಾಜಕೀಯ ವ್ಯವಸ್ಥೆಯ ಬಣ್ಣ ತೆರೆದಿಟ್ಟಿದೆ. ನಿಜಜೀವನ ದಲ್ಲೂ ನೀವೂ ಇದನ್ನೇ ಮಾಡಿ ಎಂದು ಜನರನ್ನೇ ಹುರಿದುಂಬಿ ಸುವಂತಹ ವರ್ತನೆ ರಾಜಕಾರಣಿಗಳಲ್ಲಿ ಕಾಣುತ್ತಿದೆ. 

ಅದೇನೆ ಇದ್ದರೂ ಹೊಸ ಸರ್ಕಾರದ ಮೇಲೆ ಈಗ ಒಂದಷ್ಟು ನಿರೀಕ್ಷೆ ಇಟ್ಟುಕೊಳ್ಳಲು ತೊಂದರೆಯೇನಿಲ್ಲ. ಕೃಷಿ, ನಮ್ಮ ಬೆನ್ನೆಲುಬು ಎನ್ನುತ್ತಾ ರೈತನ ಕಣ್ಣಿಗೆ ಮಣ್ಣೆರಚುವ ಕೆಲಸ ಎಲ್ಲ ಪಕ್ಷಗಳೂ ಚೆನ್ನಾಗಿ ಮಾಡಿಕೊಂಡೇ ಬಂದಿವೆ. ಪ್ರತೀ ಸರ್ಕಾರದ ಮುಂದಿದ್ದ ದೊಡ್ಡ ಸವಾಲು ರೈತರ ಆತ್ಮಹತ್ಯೆ. ರೈತರ ಆತ್ಮಹತ್ಯೆಗೆ ಸಾಮಾನ್ಯವಾಗಿ ಹಣಕಾಸಿನ ತೊಂದರೆಗಳೇ ದೊಡ್ಡ ಕಾರಣ ವಾದರೂ ಆ ಹಣಕಾಸಿನ ತೊಂದರೆಯ ಹಿಂದೆ ಅವನಿಗಿರುವ ಸಮಸ್ಯೆಯ ಆರ್ಥಿಕ, ಸಾಮಾಜಿಕ, ರಾಜಕೀಯ ನೆಲೆಗಳನ್ನೂ ಅರಿ  ಯಬೇಕಿದೆ. ಬ್ಯಾಂಕಿನ ಸಾಲದ ಶೂಲಕ್ಕಿಂತಲೂ ಅವನನ್ನು ತಿವಿ  ಯುವುದು ಖಾಸಗಿ ವಲಯಗಳಿಂದ ಪಡೆದುಕೊಳ್ಳುವ ಸಾಲ ಮತ್ತು ನೂರಡಿಯಾಗುವ ಬಡ್ಡಿ. ಈ ಸಮಸ್ಯೆಗೆ ಗಂಭೀರ ಪರಿಹಾರ ದೊರೆಯದಿದ್ದರೆ ಇಂಥ ಸಾವುಗಳು ಮತ್ತೆ ಕಾಣಬೇಕಾಗುತ್ತದೆ. 

 ರೈತರ ಸಾಲಮನ್ನಾ ಸಬ್ಸಿಡಿ ನೀಡುವುದು ಇಂತಹ ಪರಿಹಾರಗಳು ತಾತ್ಕಾಲಿಕ ಉಪಶಮನ ನೀಡಿದರೂ ಶಾಶ್ವತ ಪರಿಹಾರಕ್ಕಾಗಿ ರೈತನನ್ನೂ ಸಬಲಗೊಳಿಸಲು ಹೊಸ ಸರ್ಕಾರ ಗಂಭೀರ ಚಿಂತನೆ ಮಾಡಲೇಬೇಕು. ಕೇವಲ ಸಾಲಮನ್ನಾ ಮಾಡುವ ಘೋಷಣೆ ಮಾತ್ರ ಪರಿಹಾರ ಆಗದು.
ಕೃಷಿಗಿರುವ ಇನ್ನೊಂದು ಮುಖ್ಯ ಸಮಸ್ಯೆಯೆಂದರೆ ನೀರಿನ ಸಮರ್ಪಕ ವ್ಯವಸ್ಥೆ. ಪ್ರಾಯಶಃ ನಮ್ಮ ರಾಜ್ಯ ಎದುರಿಸುವಷ್ಟು ನೀರಾವರಿ ತಗಾದೆಗಳನ್ನು ಯಾವ ರಾಜ್ಯವೂ ಎದುರಿಸುತ್ತಿಲ್ಲ ವೇನೋ? ಎಲ್ಲ ಪಕ್ಕದ ರಾಜ್ಯಗಳೊಂದಿಗೆ ನಿರಂತರ ಸಂಘರ್ಷವನ್ನೇ ಮಾಡಿಕೊಂಡು ಬರುತ್ತಿರುವ ನಮ್ಮ ರಾಜ್ಯಕ್ಕೆ ಇದರ ಇತ್ಯರ್ಥವೂ ರಾಜಕೀಯ ಮೇಲಾಟದ ವಸ್ತುವಾಗಿ ಪರಿಣಮಿಸಿ ರುವುದು ವಿಷಾದನೀಯ. ಮಳೆಕೊಯ್ಲು ಇಂತಹ ಪರಿಹಾರಗಳನ್ನು ಸೂಚಿಸಿದರೂ ಇದಕ್ಕೆಲ್ಲ ಸರ್ಕಾರದ ನೆರವೂ ಅತೀ ಅಗತ್ಯವೆನ್ನುವುದೂ ಸತ್ಯ. ರೈತನಿಂದ ಆರಂಭವಾಗಿ ಸರ್ಕಾರ ಬಡವರ, ದುರ್ಬಲರ ಪರವಾಗಿದೆ ಎಂದು ಘೋಷಣೆಗಳಿಂದ ಕೂಗಿ ಹೇಳಿದರಷ್ಟೇ ಸಾಲದು. ಪೂರಕವಾಗಿ ಪ್ರಾಮಾಣಿಕ ನಡೆಗಳೂ ಅವಶ್ಯಕ. ಹತ್ತಾರು ಭಾಗ್ಯಗಳನ್ನು ಕೊಟ್ಟಂತೆ ಮಾಡುವುದಕ್ಕಿಂತ ರೈತರನ್ನು, ಬಡವರನ್ನು ಮತ್ತು ದುರ್ಬಲರನ್ನು ಸಬಲರಾಗಿಸುವ ತಳಮಟ್ಟದ ಯೋಜನೆಗಳು ರಾಜ್ಯಕ್ಕೆ ಈಗ ಬೇಕಾಗಿದೆ.

ಧರ್ಮ ಆಧಾರವಾಗಿಟ್ಟು ರಾಜಕೀಯ
ಈ ದಶಕದ ಇನ್ನೊಂದು ಮಾರಕ ರೋಗವೆಂದರೆ ಧರ್ಮಗಳನ್ನು ಆಧಾರವಾಗಿಟ್ಟುಕೊಂಡು ರಾಜಕೀಯ ಮಾಡುವ ಯೋಜನೆ ರೂಪಿಸಿದ್ದು. ಭಾರತ, ಅನೇಕ ಮತಭೇದಗಳನ್ನು ಪೋಷಿಸಿಕೊಂಡೇ ವಿಕಾಸದ ಹಾದಿ ಹಿಡಿದ ದೇಶವಾಗಿದೆ. ಆದರೆ ಪ್ರಸ್ತುತ ಹೊಗೆಯಾಡುತ್ತಿರುವ ಅಸಹನೆಯ ಜಾಡು ಅದು ಖಂಡಿತವಾಗಿ ರಾಜಕೀಯ ಪ್ರೇರಿತವಾಗಿದೆ. ಇಂತಹ ಅನಾರೋಗ್ಯ ಕರ ಚರ್ಚೆಗಳನ್ನು ಕೈಬಿಟ್ಟು, ಅಂತಹ ಪುಂಗಿಯೂದುವ ವಿದ್ವಾಂಸ ರನ್ನೂ ದೂರವಿಟ್ಟು ಸರ್ಕಾರ ಅತ್ಯಂತ ಶುಭ್ರವಾದ ಸಾಂಸ್ಕೃತಿಕ ವಾತಾವರಣವನ್ನು ಮೂಡಿಸಬೇಕಿದೆ. ಕಲೆ ಮತ್ತು ಕಲಾವಿದರ ತವರು ನಮ್ಮ ನಾಡು. ಇಲ್ಲಿ ಕರ್ನಾಟಕ ಸಂಗೀತ ಮತ್ತು ಹಿಂದೂ ಸ್ತಾನಿ ಸಂಗೀತ ಅಲ್ಲದೇ ಅನೇಕ ಜನಪದ ಪ್ರಕಾರದ ಸಂಗೀತ, ನೃತ್ಯ ಪ್ರಕಾರಗಳೂ ನೆಲೆ ನಿಂತು ಸಾಂಸ್ಕೃತಿಕ ಸಮೃದ್ಧಿಯನ್ನು ತರುತ್ತಿವೆ. ಇವುಗಳ ಬೆಳವಣಿಗೆ, ಅಧ್ಯಯನ, ಪೋಷಣೆಗೆ ಅಗತ್ಯವಿರುವ ವಿಶ್ವವಿದ್ಯಾನಿಲಯಗಳ ಮೂಲಭೂತ ಅಗತ್ಯಗಳನ್ನು ಸರ್ಕಾರ ಅತ್ಯಂತ ಅಗತ್ಯವಾಗಿ ನೀಡಬೇಕಾಗಿದೆ. ಉತ್ಸವ ಗಳನ್ನಷ್ಟೇ ಅದ್ದೂರಿಯಾಗಿ ಆಚರಿಸುವುದನ್ನು ಮಾಡದೇ ಕಲೆಯ ಪೋಷಣೆಗೆ ಅನಿವಾರ್ಯವಿರುವ ಸೌಲಭ್ಯಗಳನ್ನು ನೀಡಬೇಕು. 

ಭ್ರಷ್ಟಾಚಾರವೆಂಬ ಪಿಡುಗು
ಭ್ರಷ್ಟಾಚಾರ, ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವ ಸಾಮಾ ಜಿಕ ಪಿಡುಗು. ಶಿಕ್ಷಣ ರಂಗದಿಂದ ಹಿಡಿದು ನ್ಯಾಯಾಂಗ ವ್ಯವಸ್ಥೆ ಯವರೆಗೂ ಹರಡಿಕೊಂಡಿರುವ ಇದರ ಪೋಷಕರು ರಾಜಕೀಯ ಧುರೀಣರು ಮತ್ತು ಶ್ರೀಮಂತ ವರ್ಗದವರು. ಸಣ್ಣಪುಟ್ಟ ಕೈಚಾಚುವಿಕೆಯಿಂದ ಹಿಡಿದು ಕೋಟಿಗಟ್ಟಲೆ ವ್ಯವಹಾರದ ಭ್ರಷ್ಟಾಚಾರ ಇಂದು ಸಾಮಾನ್ಯವಾದ ವಿಷಯವಾಗಿ ಸ್ವೀಕರಿಸಿದ್ದೂ ದೊಡ್ಡ ದುರಂತ. ಭ್ರಷ್ಟಾಚಾರ ನಿಯಮಿತವಾಗಿ ನಡೆಯುತ್ತಿದ್ದಂತೆ ಅದು ರಾಜಕೀಯ ಅಪರಾಧಗಳಿಗೂ ಕಾರಣವಾಗುತ್ತದೆ. ಮಂತ್ರಿ, ಶಾಸಕರು ಮತ್ತವರ ಕುಟುಂಬವೂ ಇಂತಹ ಅಪರಾಧ ಗಳಲ್ಲಿ ಭಾಗಿಯಾಗಿ ಕಾನೂನಿಗೂ ಸವಾಲು ಹಾಕುತ್ತಿರುತ್ತಾರೆ.

ಹೊಸ ಸರ್ಕಾರದ ಮುಂದಿರುವ ಈ ಸವಾಲು ಬಹಳ ಗಂಭೀರ ಸ್ವರೂಪದ್ದು. ತನ್ನ ಮಂತ್ರಿಗಳಿಗೆ ಮತ್ತು ಶಾಸಕರಿಗೆ ಶಿಸ್ತು ಸಂಹಿತೆಯನ್ನು ಮೊದಲೇ ತಿಳಿಸುವುದೊಳ್ಳೆಯದು. ಚುರು ಕಾಗಿರುವ ಹೊಸ ಪೀಳಿಗೆಯ ಜನಸಾಮಾನ್ಯರು ಮುಲಾಜಿಲ್ಲದೇ ತಪ್ಪುಗಳನ್ನು ಹುಡುಕಿ ಸಮಾಜದ ಮುಂದೆ ಬೆತ್ತಲಾಗಿಸುತ್ತಾರೆ ಅನ್ನುವ ಅಂಜಿಕೆ ರಾಜಕೀಯ ಪುಢಾರಿಗಳಿಗಿರಲಿ. ಹಾಗೆಯೇ ತಮ್ಮ ಕಾರ್ಯಕರ್ತರನ್ನೂ ಹದ್ದು ಬಸ್ತಿನಲ್ಲಿಟ್ಟುಕೊಂಡರೆ ಸರ್ಕಾರಕ್ಕೆ ಮುಜುಗರವಾಗುವ ಸನ್ನಿವೇಶಗಳನ್ನು ತಪ್ಪಿಸಬಹುದು. ಪತ್ರಿಕೆಗಳಿಗೂ ಸರ್ಕಾರ ಮಾಡುವ ಯೋಜನೆ ಗಳನ್ನು ಕುರಿತು ವರದಿ ಮಾಡುವುದರಲ್ಲಿಯೇ ಹೆಚ್ಚು  ಸಂತೋಷ. ಹೊಸ ಯೋಜನೆಗಳನ್ನು, ಶೈಕ್ಷಣಿಕ, ಕೃಷಿರಂಗದ, ವಿಜಾnನ ರಂಗದ, ಸಾಹಿತ್ಯದ ಕುರಿತಾದ ಸಕಾರಾತ್ಮಕ ವರದಿ ನೀಡುವುದೇ ಪತ್ರಿಕೆಗಳಿಗೆ ಹೆಚ್ಚು ಇಷ್ಟವಾದರೂ ಜನಪ್ರತಿನಿಧಿಗಳು ಅವರ ವೈಯಕ್ತಿಕ ಅನೈತಿಕ ಮುಖಗಳನ್ನು ತೋರಿಸುವುದರಿಂದ ಇಂತಹ ವರದಿಗಳನ್ನು ಪ್ರಕಟಿಸಲು ಅನಿವಾರ್ಯವಾಗಿ ಕಾರಣರಾಗುತ್ತಾರೆ. ಎಲ್ಲ ಸರ್ಕಾರಗಳಿಗೆ ನಿಜವಾಗಿಯೂ ಪ್ರಾಮಾಣಿಕ ವಾಗಿ ಸಮಾಜಕ್ಕೆ ಕೊಡುಗೆ ಏನಾದರೂ ನೀಡ ಬೇಕೆಂದಿದ್ದರೆ ಮೊದಲು ನೈತಿಕತೆಯನ್ನು ಮೈಗೂಡಿಸಿಕೊಳ್ಳಬೇಕು. ಆಗ ಎಲ್ಲ ಯೋಜನೆಗಳೂ ಕ್ರಮಪ್ರಕಾರವಾಗಿ ಅನುಷ್ಠಾನ ಗೊಳ್ಳುತ್ತಾ ಮೂಲಭೂತವಾದ ಎಲ್ಲ ಅಗತ್ಯಗಳು ಸಲೀಸಾಗಿ ನಡೆದು ಹೋಗುತ್ತವೆ. ಅಹಂಕಾರ, ಎಲ್ಲ ರಂಗದಲ್ಲಿದ್ದರೂ ಅ ಧಿಕಾರದಲ್ಲಿದ್ದಾಗ ರಾಜಕಾರಣಿಗಳನ್ನು ಮಾತಾಡಿಸುವುದೇ ಕಷ್ಟವೆನ್ನುವಂತಹ ಸ್ಥಿತಿ. ಸುತ್ತಮುತ್ತಲಿನ ಭಟ್ಟಂಗಿಗಳು ಈ ರೀತಿ ಇವರನ್ನು ಮಾರ್ಪಾಡಿಸುತ್ತಾರೋ ಅಥವಾ ಅಧಿಕಾರದ ಆವೇಶವೇ ಅಂಥಧ್ದೋ ತಿಳಿಯದು. ಆದರೆ ಸಜ್ಜನಿಕೆಯನ್ನೂ ಸರಳತೆಯನ್ನೂ ಅನುಸರಿಸಿದರೆ ಕೊನೆಪಕ್ಷ ಅ ಧಿಕಾರ ಹೋದ ಮೇಲೂ ಇವರನ್ನು ನೆನಪಿಸಿಕೊಳ್ಳುವಂತೆ ಮಾಡುತ್ತದೆ. ನಜೀರ್‌ಸಾಬ್‌, ದೇವರಾಜ ಅರಸು ಅವರನ್ನು ನಾವೆಲ್ಲ ಇನ್ನೂ ನೆನಪಿಸಿಕೊಳ್ಳುತ್ತಿಲ್ಲವೇ? ಪ್ರಜಾಪ್ರಭುತ್ವ, ಯಾವತ್ತಿಗೂ ಒತ್ತಾಯದ, ಒಳತಂತ್ರಗಳ ಫಲಿತ ರೂಪವಲ್ಲ. ಜನರಿಂದ ನಿರ್ಧರಿತವಾದ ಸತ್ಯವದು. ಎಲ್ಲ ಪಕ್ಷಗಳು ಕೂಗುಮಾರಿಯಂತೆ ತಾವು ಮಾತ್ರ ಪ್ರಜಾಪ್ರಭುತ್ವದ ಹರಿಕಾರರು ಎನ್ನುವಂತೆ ಬೊಬ್ಬೆ ಹೊಡೆದುಕೊಂಡು ಎಷ್ಟು ಸಾಧ್ಯವೋ ಅಷ್ಟು ಅದನ್ನು ದುರ್ಬಳಕೆ ಮಾಡಿಕೊಂಡು ಜನರಲ್ಲಿ ಹೇವರಿಕೆ ಹುಟ್ಟಿಸುತ್ತಿದ್ದಾರೆ. 

ಮಾಧ್ಯಮಗಳು ಕೂಡಾ ಸಾಮಾಜಿಕ ಜವಾಬ್ದಾರಿಯಿಂದ ವರದಿ ಮಾಡುವುದನ್ನು ಬಿಟ್ಟು ಕೆಲವು ಪಕ್ಷಕ್ಕೆ ಪೂರಕವಾಗಿ ಕೆಲಸ ಮಾಡುತ್ತಿರುವುದೂ ಕಾಣುವ ಸತ್ಯವೇ. ಈ ಎಲ್ಲ ಬೆಳವಣಿಗೆಗಳ ನಡುವೆಯೂ ಮಾಧ್ಯಮವೂ ಸೇರಿದಂತೆ ಎಲ್ಲರೂ ಅವರವರ ಕರ್ತವ್ಯ ಪಾಲನೆಯನ್ನು ಪ್ರಾಮಾಣಿಕವಾಗಿ ಮಾಡಿದರೆ ಸಾಕು. ಆಗ ತನ್ನಿಂತಾನೇ ಪ್ರಗತಿ ಸಾಧ್ಯವಾಗುತ್ತದೆ. ಧರ್ಮ, ಜಾತಿ ವೈಷಮ್ಯ ಬಿತ್ತುವ ರಾಜಕೀಯ, ಸ್ವಜನ ಪಕ್ಷಪಾತದ ರಾಜಕೀಯ, ಅಭಿವೃದ್ಧಿಯ ಗುರಿ ಬಿಟ್ಟು ದುಡ್ಡು ಮಾಡುವ ರಾಜಕೀಯಕ್ಕೆ ಇತಿ ಶ್ರೀ ಹಾಡುವ ವಾತಾವರಣ ಕರ್ನಾಟಕದಲ್ಲಿ ಈಗಿಂದೀಗಲೇ ಆರಂಭವಾಗಲಿ. ಹೊಸ ಸರ್ಕಾರ ಉಳಿಯುವುದೇ, ಬೀಳುವುದೇ ಎಂಬ ಪ್ರಶ್ನೆಯೇ ಇರುವಾಗ ಈ ವಿಷಯವನ್ನು ಪ್ರಸ್ತಾಪಿಸಿದ್ದೇನೆ. ಕರ್ನಾಟಕಕ್ಕೆ ಸರ್ಕಾರವಂತೂ ಇರುತ್ತದೆ. ಯಾರೇ ಅಧಿಕಾರ ನಡೆಸಲಿ. ಅವರೇ ಈ ನಿಟ್ಟಿನಲ್ಲಿ ಹೆಜ್ಜೆ ಹಾಕಲಿ.

ಶಿವಸುಬ್ರಹ್ಮಣ್ಯ ಕೆ.

ಟಾಪ್ ನ್ಯೂಸ್

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

11

ಕ್ರಿಕೆಟ್‌ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್‌11ನಲ್ಲಿ ಒಲಿಯಿತು 1.5 ಕೋಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Ram Ayodhya

Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.