ಜೀವನದಲ್ಲಿ ನಗುನಗುತ್ತಾ ಬಾಳ್ಳೋಣ…

Team Udayavani, Oct 18, 2022, 6:20 AM IST

ಜೀವನದಲ್ಲಿ ನಗುನಗುತ್ತಾ ಬಾಳ್ಳೋಣ…

ನಗಲು ಯಾವಾಗಲೂ ಏನಾದ ರೊಂದು ಕಾರಣ ಇದ್ದೇ ಇರುತ್ತದೆ. ನೀವದನ್ನು ಕಂಡು ಹಿಡಿದರಷ್ಟೇ ಸಾಕು-  ಆಂಗ್ಲ ನುಡಿಮುತ್ತೂಂದರ ಸಾರವಿದು. ಕೆಲವು ಜನರಿಗೆ ನಗು ಎಂಬು ದೊಂದು ಅಮೂಲ್ಯ ವಸ್ತುವೆಂಬ ಭಾವನೆಯಿದೆಯೋ ಏನೋ?. ಅದನ್ನು ಬಹಳ ವಿರಳವಾಗಿ ಬಳಸುತ್ತಾರೆ. ನಗುವುದರಲ್ಲಿ ಜಿಪುಣತನ ತೋರಿಸಿ, ಯಾವಾಗಲೂ ಮುಖ ಗಂಟಿಕ್ಕಿಕೊಂಡು ಇರುತ್ತಾರೆ. ಇದರಿಂದ ಅವರಿಗೆ ನಷ್ಟವೇ ವಿನಾ ಪರರಿಗಲ್ಲ.

ಅತ್ತಾಗ, ಕೋಪಗೊಂಡಾಗ ಮುಖದ ಸ್ನಾಯುಗಳು ಬಿಗಿದುಕೊಳ್ಳುತ್ತವೆ ಹಾಗೂ ಮುಖ ಕಪ್ಪಾಗಿ ಬಿಡುತ್ತದೆ, ಕಳಾ ಹೀನ ವಾಗು ತ್ತದೆ. ಆದರೆ ನಕ್ಕಾಗ ಸ್ನಾಯುಗಳು ಸಡಿಲಗೊಳ್ಳುತ್ತವೆ ಹಾಗೂ ಮುಖ ಅರಳುತ್ತದೆ. ಕಣ್ಣುಗಳು ಕಾಂತಿಯುತ ವಾಗುತ್ತವೆ. ಕೋಪಗೊಂಡ ಮುಖ, ಗಂಟಿಕ್ಕಿಕ ೊಂಡ ಮುಖ ಕತ್ತಲೆಯಂತೆ ಅನಿಸಿದರೆ ನಗುವ ಮುಖ ಬೆಳಕಿನಂತೆ ಕಾಣುತ್ತದೆ. ಮುಖಕ್ಕೆ ಸೌಂದರ್ಯವನ್ನೂ, ಆಕರ್ಷಣೀಯತೆಯನ್ನೂ ನೀಡಲು ಕೇವಲ ನಗುವಿಗಷ್ಟೇ ಸಾಧ್ಯ. ನಗುವ ಮುಖವೊಂದನ್ನು ಕಂಡಾಗ ನಮಗೆ ನಿರಾ ಳತೆ ಅನಿಸಿದರೆ ಗಂಟಿಕ್ಕಿದ ಮುಖ ಕಂಡಾಗ ಉಸಿರುಗಟ್ಟಿದ ಅನುಭವವಾಗುತ್ತದೆ.

ನಗು ಮುಖದವರ ಬಗ್ಗೆ ನಮಗೆ ಆತ್ಮೀಯ ಭಾವ ಮೂಡಿದರೆ ಬಿಗು ಮುಖದವರು ಪರಿಚಿತರೋ ಆಪ್ತರೋ ಆಗಿದ್ದರೂ ಅಪರಿಚಿತರೆಂಬಂತೆ ಭಾಸವಾಗುತ್ತದೆ. ನಗುವು ಎಲ್ಲವನ್ನೂ ನೇರಗೊಳಿಸುವ
ವಕ್ರ ರೇಖೆ.

ಸೌಮ್ಯ ಸ್ವಭಾವ ಇದ್ದರಷ್ಟೇ ಮನಬಿಚ್ಚಿ ನಗಲು ಸಾಧ್ಯ. ಸಣ್ಣಸಣ್ಣ ವಿಷಯಗಳನ್ನೂ ಆಸ್ವಾದಿಸುವ ಸರಳ ಮನಸ್ಸಿನವರಷ್ಟೇ ಸುಲಭವಾಗಿ ನಗಬಲ್ಲರು. ಸ್ವಭಾವದಲ್ಲಿ ಒರಟರಾದವರು, ಅಹಂಕಾರ ತುಂಬಿ ದವರು, ಒಣ ಪ್ರತಿಷ್ಠೆಯ ಜನರು, ಕ್ರೌರ್ಯ ತುಂಬಿದವರು ಮುಂತಾದ ಜನರು ನಗುವುದು ಕಡಿಮೆ. ನಗು ಮುಖ ತೋರಿದರೆ ತಮಗಿರುವ ಗೌರವ, ತಮ್ಮ ಕುರಿತಾದ ಗೌರವ ಹೊರಟು ಹೋಗು ತ್ತದೆಂದು ಅವರು ಭಾವಿಸುತ್ತಾರೆ.
ನಗು ಉತ್ತಮವಾದುದೆಂದು ಯಾವಾ ಗಲೂ ನಗುತ್ತಿದ್ದರೆ ಜನರು ನಮ್ಮನ್ನು ಕ್ಷುಲ್ಲಕವಾಗಿ ಪರಿಗಣಿಸುತ್ತಾರೆ. ನಮ್ಮನ್ನು ಅಪ್ರಬುದ್ಧರು, ಶುದ್ಧ ಹೃದಯದವರು, ಜವಾಬ್ದಾರಿ ರಹಿತರು ಎಂದೆಲ್ಲ ಭಾವಿಸಿ ನಮ್ಮ ಒಳ್ಳೆಯತನವನ್ನು ದುರುಪಯೋಗಿಸಿಕೊಳ್ಳಲು ಹವಣಿ ಸು ತ್ತಾರೆ. ಆದುದರಿಂದ ಅಗತ್ಯ ಬಂದಾಗ ತಕ್ಕಮಟ್ಟಿನ ಬಿಗುತನವೂ ನಮಗಿರಬೇಕು. ಆದರೆ ನಗುವನ್ನು ಸ್ಥಾಯೀ ಭಾವವಾಗಿ ಇಟ್ಟುಕೊಳ್ಳಬೇಕು. ನಿರಂತರವಾದ ಅನಗತ್ಯ ಬಿಗುತನದಿಂದ ಸ್ನಾಯುಗಳಿಗೆ ಒತ್ತಡ ನೀಡಿದರೆ ಆ ಬಿಗುತನ ಕ್ರಮೇಣ ಮನಸ್ಸು ಹಾಗೂ ಶರೀರವನ್ನು ವ್ಯಾಪಿಸುತ್ತದೆ. ಆದುದರಿಂದ ಪ್ರಸನ್ನಭಾವವನ್ನು ಬಿಡದೇ, ಅತೀ ಚಿಂತೆ ಮಾಡದೇ ಹಸನ್ಮುಖರಾಗಿ ಬದುಕಬೇಕು.
ಕೆಲವೊಮ್ಮೆ ನಗು ನಮ್ಮನ್ನು ಮೋಸಗೊಳಿಸಲೂಬಹುದು. ಇದಾಗದಿರಲು ನಮಗೆ ಕೃತಕ ನಗು ಮತ್ತು ಸಹಜ ನಡುವಿನ ವ್ಯತ್ಯಾಸ ತಿಳಿದಿರಬೇಕು. ಕೃತಕ ನಗು ಕೇವಲ ತುಟಿ ಹಾಗೂ ಹಲ್ಲುಗಳ ಸಮೀಪ ಮಾತ್ರ ಹರಡಿರುತ್ತದೆ. ಆದರೆ ಸಹಜ ಹಾಗೂ ಪ್ರಾಮಾಣಿಕವಾದ ನಗು ಇಡೀ ಮುಖದಲ್ಲಿ ವ್ಯಾಪಿಸಿರುತ್ತದೆ. ಕಣ್ಣುಗಳು ಹೊಳೆಯುತ್ತವೆ ಹಾಗೂ ಕಿರಿದಾಗುತ್ತವೆ. ಗಲ್ಲಗಳು ಹಿಂದಕ್ಕೆ ಎಳೆಯಲ್ಪಟ್ಟು ಹೊಳೆಯುತ್ತವೆ. ನಗು ನಿಂತರೂ ನಗುವಿನ ಛಾಯೆ ಮುಖದಿಂದ ಮಾಯವಾಗುವುದಿಲ್ಲ. ಅಸಭ್ಯವಾಗಿ ನಗುವವರು ಯಾರು, ಕೃತಕ ನಗು ಯಾರದ್ದು, ವ್ಯಂಗ್ಯ ನಗು ಯಾರದ್ದು ಎಂಬುದೆಲ್ಲ ನಮಗೆ ಆಳವಾದ ವೀಕ್ಷಣೆಯಿಂದ ಅರಿವಾಗುತ್ತದೆ. ಆದುದರಿಂದ ನಮ್ಮ ಮುಂದಿರುವವರ ನಗು ಯಾವ ರೀತಿಯ¨ªೆಂದು ಅಳೆಯುವ ವಿವೇಕ ನಮ್ಮದಾಗಿಸೋಣ. ಪ್ರಾಮಾಣಿಕತೆಯಿಂದ, ನಿರ್ಮಲವಾಗಿ ನಗೋಣ. ಈ ಸಣ್ಣ ಬದುಕಲ್ಲಿ ಖುಷಿಯಿಂದ ಬಾಳ್ಳೋಣ.
ನಗುವು ಸಹಜದ ಧರ್ಮ, ನಗಿಸುವುದು ಪರಧರ್ಮ
ನಗುವ ಕೇಳುತ ನಗುವುದತಿಶಯದ ಧರ್ಮ||
ನಗುವ ನಗಿಸುವ ನಗಿಸಿ ನಗುತ ಬಾಳುವ ವರವ
ಮಿಗೆ ನೀನು ಬೇಡಿಕೊಳೊ – ಮಂಕುತಿಮ್ಮ

-ಜೆಸ್ಸಿ ಪಿ.ವಿ., ಪುತ್ತೂರು

ಟಾಪ್ ನ್ಯೂಸ್

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Ram Ayodhya

Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

11-

Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ  

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.