ಸೋಲು ಅಂತಿಮವಲ್ಲ; ಯಶಸ್ಸು ಶಾಶ್ವತವಲ್ಲ


Team Udayavani, Jul 5, 2022, 10:10 AM IST

ಸೋಲು ಅಂತಿಮವಲ್ಲ; ಯಶಸ್ಸು ಶಾಶ್ವತವಲ್ಲ

ಬದುಕು ಬಯಕೆಗಳ ಬಂಡಿ. ಈ ಬಯಕೆಗಳ ಬಂಡಿಯನ್ನು ಏರಿ ಸಾಗು ತ್ತಿರುವವರು ನಾವು. ಇಲ್ಲಿ ಏಳು- ಬೀಳು, ಸೋಲು-ಗೆಲುವು ಸರ್ವೇಸಾಮಾನ್ಯ. ಬದುಕಿನ ಪ್ರತೀ ಹಂತದಲ್ಲೂ ಗೆಲುವು ನಮ್ಮದಾಗಬೇಕು, ಸೋಲು ಜೀವನದ ಅಂತ್ಯ ಎಂದು ನಿರ್ಧರಿಸುವುದು ಎಷ್ಟರ ಮಟ್ಟಿಗೆ ಸರಿ?

ಸೋಲು ಹೇಗೆ ಅಂತಿಮವಲ್ಲವೋ ಹಾಗೆಯೇ ಗೆಲುವು ಶಾಶ್ವತವೂ ಅಲ್ಲ. “ಸೋಲೇ ಗೆಲುವಿನ ಸೋಪಾನ’. ಸೋಲು ಮತ್ತು ಗೆಲುವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಬದುಕಿನಲ್ಲಿ ಸೋತಾಗ ಮಾತ್ರ ನಾವು ಎಲ್ಲಿ ಎಡವಿದ್ದೇವೆ ಎನ್ನುವುದನ್ನು ತಿಳಿ ಯಲು ಸಾಧ್ಯ. ಹಾಗೆಯೇ ಯಶಸ್ಸಿನ ಶಿಖರವೇರಿದಾಗ ಅದರ ಹಿಂದಿನ ಪರಿ ಶ್ರಮದ ನೈಜ ಬೆಲೆಯನ್ನು ಅರಿಯಲು ಸಾಧ್ಯ. ಅಷ್ಟು ಮಾತ್ರವಲ್ಲದೆ ಶಿಖರ ಏರಿದ ಬಳಿಕ ಇಳಿಯಲೇಬೇಕು ಎಂಬುದು ಕೂಡ ಅಷ್ಟೇ ವಾಸ್ತವ.
.

“ಜ್ವರ ಬರುವುದು ರೋಗದ ಲಕ್ಷಣವೇ ಹೊರತು ಜ್ವರ ಬಂತೆಂದಾಕ್ಷಣ ಸಾವು ಖಚಿತ ಎಂದಲ್ಲ. ಹಾಗೆಯೇ ಸೋಲು ಅಂತಿಮ ಖಂಡಿತ ಅಲ್ಲ, ಅದು ಗೆಲುವಿನ ಪ್ರಾರಂಭ. ಆಶಾವಾದಿಗಳು ಯಾವಾಗಲೂ ಸೋಲನ್ನು ಸವಾಲಾಗಿ ಸ್ವೀಕರಿಸುತ್ತಾರೆ.

ನೆಲ್ಸನ್‌ ಮಂಡೇಲಾರಂತಹ ಆಶಾ ವಾದಿಗಳು ನಮಗೆ ಸ್ಫೂರ್ತಿಯ ಸೆಲೆ. 27 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಿದ ಅವರು ಹೆದರಲಿಲ್ಲ. ಬದಲಿಗೆ 1992ರಲ್ಲಿ ದಕ್ಷಿಣ ಆಫ್ರಿಕಾದ ಅಧ್ಯಕ್ಷರಾದರು.

ಸೋಲೇ ಅಂತಿಮ ಎನ್ನುವುದಾದರೆ ಸೋಲೇ ಗೆಲುವಿನ ಸೋಪಾನ ಎನ್ನುವ ವಾಕ್ಯ ತನ್ನ ಅರ್ಥವನ್ನು ಕಳೆದು ಕೊಳ್ಳುತ್ತದೆ. ಏಕೆಂದರೆ ಸೋಲನ್ನು ಗೆಲು ವನ್ನಾಗಿ ಬದಲಾಯಿಸಲು ಪ್ರಯತ್ನ ಅನಿವಾರ್ಯ. “success comes before work only in dictionary not in life’ -ಎನ್ನುವುದನ್ನು ನಾವು ತಿಳಿದುಕೊಂಡಿರಬೇಕು.

ಸೋತು ಗೆದ್ದ ವ್ಯಕ್ತಿಗಳೆಲ್ಲರೂ ಪ್ರತಿಯೊಂದು ಸೋಲಿನಲ್ಲಿಯೂ ಹೊಸ ಹೊಸ ಅವಕಾಶಗಳನ್ನು ಕಂಡುಕೊಂಡ ವರು. “ಆಗುವುದೆಲ್ಲ ಒಳ್ಳೆಯದಕ್ಕೆ’ ಎನ್ನುವುದನ್ನು ಸದಾ ಸ್ಮರಿಸುತ್ತಿರಬೇಕು. ಎ.ಪಿ.ಜೆ. ಅಬ್ದುಲ್‌ ಕಲಾಂ ಪೈಲಟ್‌ ಪರೀಕ್ಷೆಯಲ್ಲಿ ಅನುತ್ತೀರ್ಣರಾಗದೇ ಇದ್ದಿದ್ದರೆ ನಮ್ಮ ದೇಶಕ್ಕೆ ಪ್ರಸಿದ್ಧ ವಿಜ್ಞಾನಿಯೊಬ್ಬರು ದೊರಕುತ್ತಿರಲಿಲ್ಲ. ಹೆಸರಾಂತ ಕವಿ ಡಿ.ವಿ. ಗುಂಡಪ್ಪನವರು ಎಸೆಸೆಲ್ಸಿ ಪರೀಕ್ಷೆಯಲ್ಲಿ ಪಾಸಾಗಲಿಲ್ಲ. ಆದರೂ ಅವರು ಸೋಲೊಪ್ಪಿಕೊಳ್ಳದೆ “ಮಂಕುತಿಮ್ಮನ ಕಗ್ಗ’ ಎನ್ನುವ ಕೃತಿ ಯನ್ನು ಕನ್ನಡ ಸಾಹಿತ್ಯಕ್ಕೆ ನೀಡಿದರು. ಪ್ರಸಿದ್ಧ ಸಿತಾರ್‌ ವಾದಕ ರವಿಶಂಕರ್‌ ನಾಟ್ಯ ಕ್ಷೇತ್ರದಲ್ಲಿ ಸೋಲನ್ನು ಅನುಭವಿಸಿ ಸಿತಾರ್‌ ಕಲಿತರು. ಈಗ “ಸಿತಾರ್‌ ಎಂದರೆ ರವಿಶಂಕರ್‌, ರವಿಶಂಕರ್‌ ಎಂದರೆ ಸಿತಾರ್‌’ ಎನ್ನುವಷ್ಟರಮಟ್ಟಿಗೆ ಅವರು ಬೆಳೆದು ನಿಂತಿ¨ªಾರೆ. ಅಪ್ಪನಿಂದ ಅನಿಷ್ಟ ಎಂದು ಕರೆಸಿಕೊಂಡರೂ 2009ರಲ್ಲಿ ಮಿಸ್‌ ಇಂಡಿಯಾ ಆಗಿ ಆಯ್ಕೆಯಾದ ಪೂಜಾ ಚೋಪ್ರಾ, ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡರು ನಾಟ್ಯರಾಣಿ ಎಂದು ಗುರುತಿಸಿಕೊಂಡಿರುವ ಸುಧಾ ಚಂದ್ರನ್‌ ಇವರಂತೆಯೇ ಬದುಕಿನಲ್ಲಿ ಯಶಸ್ವಿ ವ್ಯಕ್ತಿಗಳಾದಂತಹ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಸೋಲನ್ನು ಅನುಭವಿಸಿದವರೇ.

लहरों से डरकर नौका पार नहीं होती,
कोशिश करने वालों की कभी हार नहीं होती

ಎನ್ನುವ ಸಾಲುಗಳು ಪ್ರಯತ್ನದ ಪ್ರಾಮುಖ್ಯತೆಯನ್ನು ತಿಳಿಸುತ್ತದೆ.

ಕಾಲು ಒದ್ದೆ ಮಾಡದೆ ಸಮುದ್ರವನ್ನು ದಾಟಬಹುದು ಆದರೆ ಕಣ್ಣು ಒದ್ದೆ ಮಾಡದೆ ಜೀವನವೆಂಬ ಸಮುದ್ರವನ್ನು ದಾಟಲು ಸಾಧ್ಯವಿಲ್ಲ. ಜೀವನದಲ್ಲಿ ಕಷ್ಟಗಳಿರುವುದು ಸರ್ವೇಸಾಮಾನ್ಯ ಪ್ರತಿಯೊಬ್ಬ ಯಶಸ್ವೀ ವ್ಯಕ್ತಿಯೂ ಕೂಡ ಸಮಾಜ ಅವರ ಮೇಲೆ ಎಸೆದ ಕಲ್ಲುಗಳಿಂದಲೇ ಬದುಕಿನ ತಳಪಾಯ ವನ್ನು ಕಟ್ಟಿಕೊಂಡವರು. ಅದರ ಮೇಲೆ ಭವ್ಯವಾದ ಕಟ್ಟಡ ನಿರ್ಮಿಸಿಕೊಂಡವರು. ತಮಗೆ ಎದುರಾದ ಎಲ್ಲ ಋಣಾತ್ಮಕ ಸನ್ನಿವೇಶಗಳನ್ನು ಧನಾತ್ಮಕವಾಗಿ ಬದ ಲಾಯಿಸಿಕೊಂಡವರು. ಆದ್ದರಿಂದ ಸೋಲಿಗೆ ಹೆದರದೆ ಬದುಕಿನ ಭವ್ಯವಾದ ಕಟ್ಟಡವನ್ನು ಸೋಲು-ಗೆಲುವು ಎನ್ನುವ ಇಟ್ಟಿಗೆಗಳಿಂದ ಸುಂದರವಾಗಿ ಕಟ್ಟಿ ಯಶಸ್ವಿ ವ್ಯಕ್ತಿಗಳು ನಾವಾಗೋಣ.

- ವಾಣಿಶ್ರೀ, ಕಾರ್ಕಳ

ಟಾಪ್ ನ್ಯೂಸ್

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ

ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು

ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು

4-dandeli

Dandeli: ಯಂತ್ರದಡಿ ಸಿಲುಕಿದ ಕಾರ್ಮಿಕ: ಕಾಲುಗಳಿಗೆ ಗಂಭೀರ ಗಾಯ

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ್ರೊ| ಕು.ಶಿ.: ಜ್ಞಾನಕಾಶಿಯಲ್ಲೊಬ್ಬ ಫ‌ಕೀರ

ಪ್ರೊ| ಕು.ಶಿ.: ಜ್ಞಾನಕಾಶಿಯಲ್ಲೊಬ್ಬ ಫ‌ಕೀರ

4-manohar-prasad

ನುಡಿನಮನ- ಪತ್ರಿಕಾರಂಗದ ಮನೋಹರ ಪ್ರಸಾದ್‌ ಕರಾವಳಿಯ ರಾಯಭಾರಿ

1-dasdsad

Yakshagana; ಮಾತಿನ ಜರಡಿ: ಹಿರಿಯ ಕಲಾವಿದ ಐರೋಡಿ ಗೋವಿಂದಪ್ಪ

Women’s Day Special: ನಮ್ಮೊಡನಿದ್ದೂ ನಮ್ಮಂತಾಗದ ನಾರಿಯರು…!

Women’s Day Special: ನಮ್ಮೊಡನಿದ್ದೂ ನಮ್ಮಂತಾಗದ ನಾರಿಯರು…!

Shivratri 2024; ದಕ್ಷಿಣ ಕಾಶಿ, ಸಂಗಮ ಕ್ಷೇತ್ರ ಎನಿಸಿಕೊಂಡ ಶ್ರೀ ಸಹಸ್ತ್ರಲಿಂಗೇಶ್ವರನ ಆಲಯ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

6-mng

Nandini Brand: 50 ಐಸ್‌ ಕ್ರೀಂ ಮಾರುಕಟ್ಟೆಗೆ

Bangalore: ರಾಜಧಾನಿ 14 ಕೆರೆಗಳಿಗೆ ಕೆ.ಸಿ.ವ್ಯಾಲಿ ನೀರು

Bangalore: ರಾಜಧಾನಿ 14 ಕೆರೆಗಳಿಗೆ ಕೆ.ಸಿ.ವ್ಯಾಲಿ ನೀರು

5-mng

Mangaluru: ರೋಗಿಗಳಲ್ಲಿ ಭರವಸೆ ತುಂಬುವ ಕೆಲಸವಾಗಲಿ: ರೈ| ರೆ| ಡಾ| ಸಲ್ಡಾನ್ಹಾ

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.