ಮನೆಯಂಗಳದಲ್ಲಿ ಹಲವು ತರಕಾರಿ

ಆರಂಭದಲ್ಲಿಯೇ ಮಣ್ಣಿನ, ನಾಟಿಗೆ ಬಳಸುವ ಗಿಡ, ಬೀಜದ ಗುಣಮಟ್ಟ ಖಾತರಿಪಡಿಸಿಕೊಳ್ಳಬೇಕು.

Team Udayavani, Jul 16, 2021, 8:35 AM IST

ಮನೆಯಂಗಳದಲ್ಲಿ ಹಲವು ತರಕಾರಿ

ಮಳೆಯಿಂದ ಹದವಾದ ಮಣ್ಣಿನಲ್ಲಿ ಕೊಂಚ ಶ್ರಮಪಟ್ಟರೆ ಕೈ ತುಂಬಾ ಫಸಲಿಗೆ ಕೊರತೆಬಾರದು. ನೀರಿಗೇನೂ ಸಮಸ್ಯೆ ಇಲ್ಲ. ರೋಗ ನಿಯಂತ್ರಣ, ಗುಣಮಟ್ಟದ ಬೀಜ, ಗಿಡ ನಾಟಿ ಕಡೆ ಗಮನ ಹರಿಸಿದರೆ ನಿರೀಕ್ಷಿತ ಫಲ ದೊರೆಯಬಹುದು. ಸೋರೆಕಾಯಿ, ಅಲಸಂಡೆ, ಮುಳ್ಳುಸೌತೆ, ತೊಂಡೆಕಾಯಿ, ಹರಿವೆ, ಹಾಗಲಕಾಯಿ, ಬದನೆ ಹೀಗೆ ಹಲವಾರು ಬಗೆಯ ತರಕಾರಿ ಬೆಳೆಯಲು ಅವಕಾಶವಿದೆ. ಅವೆಲ್ಲವೂ ಕೆಲ ತಿಂಗಳ ಕಾಲ ಮನೆ ಖರ್ಚು ಉಳಿತಾಯ ಮಾಡಬಹುದು. ಜತೆಗೆ ರಾಸಾಯನಿಕ ಮುಕ್ತ ತರಕಾರಿ ರುಚಿಯನ್ನು ಸವಿಯುವ ಭಾಗ್ಯ ನಮ್ಮದಾಗಬಹುದು.

ನಾಟಿ ಆರಂಭದಲ್ಲಿ ಮಣ್ಣಿನ ಗುಣಮಟ್ಟ ಗಮನಿಸಬೇಕು. ಅದಕ್ಕೆ ತಕ್ಕುದಾದ ಬೀಜ/ಗಿಡ ನಾಟಿ ಮಾಡಬೇಕು. ಮಣ್ಣು ಪೌಷ್ಟಿಕ ಅಂಶ ಹೊಂದಿರದೇ ಇದ್ದಲ್ಲಿ, ಅಲ್ಲಿ ಗಿಡ ಬಳಿತುಕೊಳ್ಳಲಾರದು. ಫಸಲು ಸಿಗದು. ಹಾಗಾಗಿ ಆರಂಭದಲ್ಲಿಯೇ ಮಣ್ಣಿನ, ನಾಟಿಗೆ ಬಳಸುವ ಗಿಡ, ಬೀಜದ ಗುಣಮಟ್ಟ ಖಾತರಿಪಡಿಸಿಕೊಳ್ಳಬೇಕು.

ಹಟ್ಟಿ ಗೊಬ್ಬರ ಸೂಕ್ತ
ನಾಟಿ ಮಾಡಿದ ಮೇಲೆ ಅದಕ್ಕೆ ತಕ್ಕಂತೆ ಗೊಬ್ಬರ, ನೀರು ಒದಗಿಸಬೇಕು. ತರಗೆಲೆ ಗೊಬ್ಬರ ಅಥವಾ ಹಟ್ಟಿ ಗೊಬ್ಬರ ಹೆಚ್ಚು ಸೂಕ್ತ. ಇದರಿಂದ ಮಣ್ಣಿನ ಗುಣಮಟ್ಟವೂ ಉಳಿದುಕೊಳ್ಳುತ್ತದೆ. ಗಿಡವೂ ಬೆಳೆಯುತ್ತದೆ. ಸಾವಯವ ತರಕಾರಿ ರುಚಿಯು ದೊರೆಯುತ್ತದೆ. ಈ ರೀತಿ ಹಟ್ಟಿ ಗೊಬ್ಬರ ಮೂರು ವಿಧದಲ್ಲಿಯೂ ಲಾಭವಿದೆ. ನೀರಿನ ಅತಿ ಉಪಯೋಗವು ಹಾಳು. ಹಾಗಾಗಿ ಜಡಿ ಮಳೆ ಕಡಿಮೆ ಆದ ಮೇಲೆ ನಾಟಿ ಪ್ರಕ್ರಿಯೆ ಆರಂಭಿಸಬೇಕು. ಮಳೆಗಾಲದ ನಡು ಹೊತ್ತಲ್ಲಿ, ಚಳಿಗಾಲದ ತನಕ ಫಸಲು ಕೊಯ್ದು ದಿನ ಬಳಕೆಗೆ ಬಳಸಬಹುದು. ಅದು ನಾವು ಬೆಳೆಯುವ ಬೆಳೆಗಳ ಮೇಲೆ ಆಧಾರಿತವಾಗಿದೆ.

ಹಲವು ಅವಕಾಶ
ಅಡಿಕೆ ಒಣಗಲು ಹಾಕಿದ ಅಂಗಳದಲ್ಲಿ ಕೃಷಿ ಮಾಡುವುದು ಹೇಗಪ್ಪಾ ಎಂಬ ಚಿಂತೆ ಮಾಡುವ ಆವಶ್ಯಕತೆ ಇಲ್ಲ. ಗೋಣಿ ಚೀಲ, ಇತರೆ ಪರಿಕರ ಬಳಸಿ, ಹದವಾದ ಮಣ್ಣು, ಗೊಬ್ಬರ ತುಂಬಿ ಬಗೆ-ಬಗೆಯ ತರಕಾರಿ ಕೃಷಿ ಬೆಳೆಯಬಹುದು. ಅಂತಹ ಕೃಷಿಯಲ್ಲಿ ಭರಪೂರ ಫಸಲು, ಆದಾಯ ಪಡೆದವರು ಇದ್ದಾರೆ.

ಅದಕ್ಕೇನೂ ಹೆಚ್ಚು ಖರ್ಚು ತಗಲದು. ಮಣ್ಣು ತುಂಬಿಸುವ, ಜೋಡಿಸುವ ಒಂದಷ್ಟು ಪೂರಕ ಕೆಲಸಗಳಿಗೆ ಶ್ರಮ ವಹಿಸಿದರೆ ಸಾಕು. ಮನೆ ಜಾಗ ಮಾತ್ರ ಇದ್ದು ತರಕಾರಿ ಮಾಡುವುದು ಹೇಗೆ ಅನ್ನುವವರಿಗೂ ಕೆಲ ಅವಕಾಶಗಳು ಇವೆ. ಆರ್‌ಸಿಸಿ ಮನೆಯಾದರೆ, ಅದರ ಮೇಲಿನ ಖಾಲಿ ಜಾಗದಲ್ಲಿ ಗೋಣಿ ಚೀಲ ಆಧಾರಿತ ಕೃಷಿಗೆ ಮನಸ್ಸು ಮಾಡಬಹುದು. ನಗರದಲ್ಲಿ ಅಂತಹ ಪ್ರಯೋಗ ಅನಿವಾರ್ಯವೂ ಹೌದು.ಈಗಾಗಲೇ ಹಲವರಿಗೆ ಪ್ರಯೋಗದಲ್ಲಿ ಯಶಸ್ಸು ಸಿಕ್ಕಿದೆ.

ಇಂತಹ ಹಲವು ಪ್ರಯತ್ನಗಳು ಮಳೆಗಾಲದಲ್ಲಿ ದಿನ ನಿತ್ಯದ ಖರ್ಚು ಕಡಿಮೆ ಮಾಡಲು, ಅದರೊಂದಿಗೆ ಒಂದಷ್ಟು ಆದಾಯ ಗಳಿಸಲು ಇರುವ ಅವಕಾಶ ಕೂಡ ಆಗಿದೆ. ಬೇಸಗೆ ಕಾಲದಲ್ಲಿ ಸುಡು ಮಣ್ಣು ತಯಾರಿಸಿದ ಸ್ಥಳದಲ್ಲಿಯೂ ತರಕಾರಿ ನಾಟಿ ಉತ್ತಮ. ಮಣ್ಣು ಫಲವತ್ತಾಗಿ, ಹೆಚ್ಚಿನ ಇಳುವರಿ ಸಿಗಬಹುದು. ಕೆಲವರು ಮಳೆಗಾಲದ ಕೃಷಿಗೆಂದೇ ಅಂತಹ ಗೊಬ್ಬರ ತಯಾರಿ ಮಾಡುತ್ತಾರೆ. ಜತೆಗೆ ರೋಗ ಬಾರದಂತೆ ನಿಗಾ ವಹಿಸಬೇಕು. ಸೂಕ್ತ ಔಷಧ ಸಿಂಪಡಿಸಬೇಕು.

ಆರೈಕೆಗೆ ಬೇಕು ಆದ್ಯತೆ
ಮನೆ ಅಂಗಳದ ತರಕಾರಿಗೆ ಎಕರೆಗಟ್ಟಲೆ ಜಾಗ ಬೇಕಿಲ್ಲ. ಗದ್ದೆಯೇ ಆಗಬೇಕು ಎಂದಿಲ್ಲ. ಕಣ್ಣಾಡಿಸುವಷ್ಟು ಖಾಲಿ ಜಾಗ ಇದ್ದರೆ ಸಾಕು. ವೈಜ್ಞಾನಿಕ ಪದ್ಧತಿ, ನಾಟಿ ವಿಧಾನ ನಿಯಮ ಅನುಸರಿಸಿಯೇ ತರಕಾರಿ ಮಾಡಬೇಕಿಲ್ಲ. ಒಂದಿಷ್ಟು ಜಾಗ ಕಂಡಲ್ಲಿ, ಬೀಜ ಬಿತ್ತಿದರೆ ಅದು
ಸೊಂಪಾಗಿ ಮೊಳಕೆಯೊಡೆಯುತ್ತದೆ. ಅಲ್ಲಿಂದ ಅನಂತರ ಆರೈಕೆ ಕಡೆ ಗಮನ ಹರಿಸಬೇಕು.

ಟಾಪ್ ನ್ಯೂಸ್

Victoria Gowri takes oath as Madras HC judge

ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶರಾಗಿ ವಿಕ್ಟೋರಿಯಾ ಗೌರಿ ಪ್ರಮಾಣ ವಚನ ಸ್ವೀಕಾರ

tdy-5

ಕ್ಲಚ್‌ ಬದಲು ಆಕ್ಸಿಲೇಟರ್‌ ಒತ್ತಿ 2 ಜೀವ ಕಳೆದ

tdy-4

ಭೀಕರ ಭೂಕಂಪ: ತಾಯಿ, ಅಣ್ಣ, ಅಕ್ಕನನ್ನು ಕಳೆದುಕೊಂಡ 18 ತಿಂಗಳ ಪುಟ್ಟ ಬಾಲೆಯ ಆರ್ತನಾದ…

Bengaluru shuttler Tanya Hemanth asked to wear headscarf in Iran event

ಪ್ರಶಸ್ತಿ ಸೀಕರಿಸಲು ಹಿಜಾಬ್‌ ಧರಿಸಿ: ಬೆಂಗಳೂರಿನ ಆಟಗಾರ್ತಿಗೆ ಇರಾನ್ ಸಂಘಟಕರ ಸೂಚನೆ

ಒಕ್ಕೂಟ ಸರ್ಕಾರವು ಕರ್ನಾಟಕವನ್ನು ಕಾಲು ಒರೆಸುವ ಮ್ಯಾಟ್ ನಂತೆ ಬಳಸುತ್ತಿದೆ: ಜೆಡಿಎಸ್

ಒಕ್ಕೂಟ ಸರ್ಕಾರವು ಕರ್ನಾಟಕವನ್ನು ಕಾಲು ಒರೆಸುವ ಮ್ಯಾಟ್ ನಂತೆ ಬಳಸುತ್ತಿದೆ: ಜೆಡಿಎಸ್

tdy-3

ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಹೇಳಿದ ಆಸ್ಟ್ರೇಲಿಯದ ಆರೋನ್‌ ಫಿಂಚ್‌

TDY-1

ಬೆಳ್ತಂಗಡಿ: ಉಜಿರೆ ಲಾಡ್ಜ್ ಗಳ ಮೇಲೆ ಏಕಕಾಲದಲ್ಲಿ ಎಸ್.ಪಿ. ನೇತೃತ್ವದಲ್ಲಿ ದಾಳಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿನಾಶಕಾರಿ ಭೂಕಂಪಗಳು; ಇಲ್ಲಿದೆ ಜಗತ್ತಿನಲ್ಲಿ ಈವರೆಗೆ ದಾಖಲಾದ ಭೂಕಂಪಗಳ ವಿವರ

ವಿನಾಶಕಾರಿ ಭೂಕಂಪಗಳು; ಇಲ್ಲಿದೆ ಜಗತ್ತಿನಲ್ಲಿ ಈವರೆಗೆ ದಾಖಲಾದ ಭೂಕಂಪಗಳ ವಿವರ

bಡಚ್ಚರ ನಗರಗಳೂ, ಬೈಸಿಕಲ್‌ಗ‌ಳೂ…

ಡಚ್ಚರ ನಗರಗಳೂ, ಬೈಸಿಕಲ್‌ಗ‌ಳೂ…

ಹಾಡಿನ ತಾರೆ ಆಗಸ  ಸೇರಿತು…ಸವಿನೆನಪುಗಳನ್ನು ಬಿಟ್ಟು ಸಾಗಿದ ವಾಣಿ ಜಯರಾಂ

ಹಾಡಿನ ತಾರೆ ಆಗಸ  ಸೇರಿತು…ಸವಿನೆನಪುಗಳನ್ನು ಬಿಟ್ಟು ಸಾಗಿದ ವಾಣಿ ಜಯರಾಂ

ಕಡಲು- ಮಲೆನಾಡ ನಡುವಣ ಆಡುಂಬೊಲ

ಕಡಲು- ಮಲೆನಾಡ ನಡುವಣ ಆಡುಂಬೊಲ

ಇಂದಿನಿಂದ ಏನೇನು? ಬದಲಾವಣೆ? ಇಲ್ಲಿದೆ ಕೆಲವೊಂದು ಮಾಹಿತಿ

ಇಂದಿನಿಂದ ಏನೇನು? ಬದಲಾವಣೆ? ಇಲ್ಲಿದೆ ಕೆಲವೊಂದು ಮಾಹಿತಿ

MUST WATCH

udayavani youtube

ಪಾಂಗಳ: ಕೋಲದಲ್ಲಿ ಭಾಗಿಯಾಗಿದ್ದ ಯುವಕನನ್ನು ಕರೆಸಿ ಹತ್ಯೆಗೈದರೇ ಪರಿಚಿತರು?

udayavani youtube

ಮೀನುಗಾರಿಕಾ ಬೋಟ್ ನ ಒಳಗೆ ಹೇಗಿರುತ್ತೆ ನೋಡಿ|

udayavani youtube

ಸುಮೋ ತಳಿಯ ಕಲ್ಲಂಗಡಿ ಬೆಳೆದು ಯಶಸ್ವಿಯಾದ ಕರಾವಳಿ ರೈತ

udayavani youtube

ತುಳು ,ಕೊಂಕಣಿ ಭಾಷೆ ಕನ್ನಡದ ಸಹೋದರ ಭಾಷೆಗಳು | ಉದಯವಾಣಿ ಜತೆ ಡಾ| ಮಹೇಶ್‌ ಜೋಷಿ ಸಂವಾ

udayavani youtube

ಮಿಸ್ಟರ್ ಬೀನ್ ಈಗ ಎಲ್ಲಿದ್ದಾರೆ? ಹೇಗಿದ್ದಾರೆ |ಯಾರು ಈ ಮಿಸ್ಟರ್ ಬೀನ್ ?

ಹೊಸ ಸೇರ್ಪಡೆ

ಬೀದಿನಾಯಿ ಕಡಿತ: ಏಳು ಜನರು ವಿಮ್ಸ್ ಗೆ ದಾಖಲು

ಬೀದಿನಾಯಿ ಕಡಿತ: ಏಳು ಜನರು ವಿಮ್ಸ್ ಗೆ ದಾಖಲು

Victoria Gowri takes oath as Madras HC judge

ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶರಾಗಿ ವಿಕ್ಟೋರಿಯಾ ಗೌರಿ ಪ್ರಮಾಣ ವಚನ ಸ್ವೀಕಾರ

tdy-5

ಕ್ಲಚ್‌ ಬದಲು ಆಕ್ಸಿಲೇಟರ್‌ ಒತ್ತಿ 2 ಜೀವ ಕಳೆದ

tdy-4

ಭೀಕರ ಭೂಕಂಪ: ತಾಯಿ, ಅಣ್ಣ, ಅಕ್ಕನನ್ನು ಕಳೆದುಕೊಂಡ 18 ತಿಂಗಳ ಪುಟ್ಟ ಬಾಲೆಯ ಆರ್ತನಾದ…

Bengaluru shuttler Tanya Hemanth asked to wear headscarf in Iran event

ಪ್ರಶಸ್ತಿ ಸೀಕರಿಸಲು ಹಿಜಾಬ್‌ ಧರಿಸಿ: ಬೆಂಗಳೂರಿನ ಆಟಗಾರ್ತಿಗೆ ಇರಾನ್ ಸಂಘಟಕರ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.