2022ರ ಹೊರಳು ನೋಟ; ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಮೋದಿ


Team Udayavani, Dec 20, 2022, 6:15 AM IST

ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಮೋದಿ

ಬೆಂಗಳೂರಿನ ಅರಮನೆ ಆವರಣದಲ್ಲಿ ಹಮ್ಮಿ ಕೊಂಡಿದ್ದ ಜಾಗತಿಕ ಹೂಡಿಕೆದಾರರ ಸಮಾವೇಶ ದಲ್ಲಿ ನ.2ರಂದು ಪ್ರಧಾನಿ ನರೇಂದ್ರ ಮೋದಿ ವರ್ಚುವಲ್‌ ಆಗಿ ಭಾಗವಹಿಸಿದರು. ರಾಜ್ಯದಲ್ಲಿ ಹೂಡಿಕೆಗೆ ಬಹಳಷ್ಟು ಅವಕಾಶಗಳಿದ್ದು ವಿವಿಧ ವಲಯಗಳಲ್ಲಿ ಬಂಡವಾಳ ಹೂಡುವಂತೆ ಕೈಗಾರಿಕಾ ದಿಗ್ಗಜರಿಗೆ ಮುಕ್ತ ಆಹ್ವಾನ ನೀಡಿದ್ದರು.

ಕಾನ್‌ಸ್ಟೆಬಲ್‌ ಹುದ್ದೆ:
ವಯೋಮಿತಿ 2 ವರ್ಷ ಹೆಚ್ಚಳ
ಪೊಲೀಸ್‌ ಕಾನ್‌ಸ್ಟೆಬಲ್‌ (ಸಿವಿಲ್‌) ಮತ್ತು ಪೊಲೀಸ್‌ ಕಾನ್‌ಸ್ಟೆಬಲ್‌(ಸಿಎಆರ್‌ ಮತ್ತು ಡಿಎಆರ್‌) ಹುದ್ದೆಗಳಿಗೆ ನಿಗದಿಪಡಿಸಿರುವ ಗರಿಷ್ಠ ವಯೋಮಿತಿ ಯನ್ನು ಒಂದು ಬಾರಿಗೆ ಮಾತ್ರ 2 ವರ್ಷಗಳ ಕಾಲ ಹೆಚ್ಚಳ ಮಾಡಿ ರಾಜ್ಯ ಸರಕಾರ ನ.3ರಂದು ಆದೇಶ ಹೊರಡಿಸಿತ್ತು. ಈ ಮೂಲಕ ಆಕಾಂಕ್ಷಿಗಳ ಹಲವು ತಿಂಗಳುಗಳ ಬೇಡಿಕೆ ಈಡೇರಿದಂತಾಗಿತ್ತು.

ರೇಣುಕಾಚಾರ್ಯ
ಸಹೋದರನ ಪುತ್ರ ನಿಗೂಢ ಸಾವು
ಅ. 30ರಂದು ಗೌರಿಗದ್ದೆಗೆ ತೆರಳಿದ್ದ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರ ಸಹೋದರನ ಪುತ್ರ ಎಂ.ಪಿ. ಚಂದ್ರಶೇಖರ್‌ (24) ನಾಪತ್ತೆಯಾಗಿ ದ್ದರು. ಆ ಬಳಿಕ ನ.3 ರಂದು ತುಂಗಾ ಮೇಲ್ದಂಡೆ ನಾಲೆಯಲ್ಲಿ ಕಾರಿನಲ್ಲಿ ಅವರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಕ್ರೇನ್‌ ಮೂಲಕ ಕಾರನ್ನು ಮೇಲೆತ್ತಿದಾಗ ಚಾಲಕನ ಸೀಟು, ಪಕ್ಕದ ಆಸನದ ಏರ್‌ಬ್ಯಾಗ್‌ ತೆರೆದಿರುವುದು ಹಾಗೂ ಮುಂದಿನ ಗಾಜು ಒಡೆದಿರುವುದು ಅನುಮಾನಕ್ಕೆ ಕಾರಣವಾಗಿದ್ದವು.

ರೇಣುಕಾಚಾರ್ಯ
ಸಹೋದರನ ಪುತ್ರ ನಿಗೂಢ ಸಾವು
ಅ. 30ರಂದು ಗೌರಿಗದ್ದೆಗೆ ತೆರಳಿದ್ದ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರ ಸಹೋದರನ ಪುತ್ರ ಎಂ.ಪಿ. ಚಂದ್ರಶೇಖರ್‌ (24) ನಾಪತ್ತೆಯಾಗಿ ದ್ದರು. ಆ ಬಳಿಕ ನ.3 ರಂದು ತುಂಗಾ ಮೇಲ್ದಂಡೆ ನಾಲೆಯಲ್ಲಿ ಕಾರಿನಲ್ಲಿ ಅವರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಕ್ರೇನ್‌ ಮೂಲಕ ಕಾರನ್ನು ಮೇಲೆತ್ತಿದಾಗ ಚಾಲಕನ ಸೀಟು, ಪಕ್ಕದ ಆಸನದ ಏರ್‌ಬ್ಯಾಗ್‌ ತೆರೆದಿರುವುದು ಹಾಗೂ ಮುಂದಿನ ಗಾಜು ಒಡೆದಿರುವುದು ಅನುಮಾನಕ್ಕೆ ಕಾರಣವಾಗಿದ್ದವು.

ಲೋಕಾಯುಕ್ತ:
3 ತಿಂಗಳಲ್ಲೇ 60 ಎಫ್ಐಆರ್‌!
ಹೈಕೋರ್ಟ್‌ ಆದೇಶದಂತೆ ಲೋಕಾಯುಕ್ತ ಪೊಲೀಸ್‌ ವಿಭಾಗಕ್ಕೆ ಅಧಿಕಾರ ಸಿಕ್ಕಿದ ಮೂರು ತಿಂಗಳಲ್ಲೇ ಬರೋಬ್ಬರಿ 60 ಎಫ್ಐಆರ್‌ ದಾಖಲಾಗಿದ್ದವು. ಬೆಂಗಳೂರಿನಲ್ಲಿ 12 ಎಫ್ಐಆರ್‌ ದಾಖಲಾದರೆ, ತುಮಕೂರು, ರಾಮನಗರ, ಬೆಳ ಗಾವಿ, ಮಡಿಕೇರಿ, ಚಿತ್ರದುರ್ಗದಲ್ಲಿ ಮೂರು ಎಫ್ಐಆರ್‌ ದಾಖಲಾಗಿತ್ತು. ನಾಲ್ಕು ಸ್ವಯಂಪ್ರೇರಿತ ದೂರು ದಾಖಲಿಸಿ ಕೊಂಡು ಉಪ ನೋಂದಣಾಧಿಕಾರಿ ಕಚೇರಿ, ರಾಜ್ಯದ 9 ಪ್ರಮುಖ ಚೆಕ್‌ಪೋಸ್ಟ್‌ಗಳ ಮೇಲೆ ದಾಳಿ ನಡೆಸಿ ಲಕ್ಷಾಂತರ ರೂ. ಅವ್ಯವಹಾರವನ್ನು ಲೋಕಾಯುಕ್ತ ಬಯಲಿಗೆಳೆದಿತ್ತು.

ತಂದೆಯನ್ನು ಕತ್ತರಿಸಿ
ಕೊಳವೆ ಬಾವಿಗೆ ತುರುಕಿದ !
ಬಾಗಲಕೋಟೆ ಜಿಲ್ಲೆ ಮುಧೋಳದಲ್ಲಿ ಮಗನೇ ತಂದೆಯನ್ನು ಕೊಂದು ಶವವನ್ನು 30ಕ್ಕೂ ಹೆಚ್ಚು ತುಂಡುಗಳಾಗಿ ಕತ್ತರಿಸಿ ಕೊಳವೆ ಬಾವಿಯಲ್ಲಿ ತುರುಕಿದ ಆಘಾತಕಾರಿ ಘಟನೆ ಡಿ.12ರ ರಾತ್ರಿ ನಡೆದಿತ್ತು. ಮುಧೋ ಳದ ವಿಟuಲ ಕುಳಲಿ (20) ಎಂಬಾತ ತನ್ನ ತಂದೆ ಪರಶುರಾಮ ಕುಳಲಿ (54)ಯನ್ನು ಕೊಂದು ಕತ್ತರಿಸಿ ಬೋರ್‌ವೆಲ್‌ನೊಳಕ್ಕೆ ಎಸೆ ದಿದ್ದು, ಆರೋಪಿ ಯನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದರು. ತಂದೆ ಪರಶುರಾಮ ಕುಳಲಿ ನಿತ್ಯವೂ ಮದ್ಯ ಸೇವಿಸಿ ಬಂದು ಜಗಳ ಮಾಡುತ್ತಿದ್ದನಲ್ಲದೆ ಹಲ್ಲೆ ಕೂಡ ನಡೆಸು ತ್ತಿದ್ದ. ಇದರಿಂದ ವಿಟuಲ ಕುಳಲಿ ರೋಸಿ ಹೋಗಿ ಈ ಕೃತ್ಯ ಎಸಗಿದ್ದನು.

ಬೆಂಗಳೂರಿನಲ್ಲಿ 3 ದಿನ ಜಿ20 ಸಭೆ
ಜಿ20 ಶೃಂಗಸಭೆಯ ಎರಡನೇ ಹಂತದ ಸಭೆ ಉದ್ಯಾನ ನಗರಿ ಬೆಂಗಳೂರಿನಲ್ಲಿ ನಡೆಯಿತು. ಡಿ. 13ರಿಂದ 15ರ ವರೆಗೆ ಜಿ20 ದೇಶಗಳ ಹಣಕಾಸು ಮತ್ತು ಕೇಂದ್ರ ಬ್ಯಾಂಕ್‌ ಗಳ ಪ್ರತಿನಿಧಿಗಳ ಸಭೆ ನಡೆದಿತ್ತು. ಡಿ. 16 ಮತ್ತು 17ರಂದು ಜಿ-20 ಚೌಕಟ್ಟು ನಿರೂಪಣೆಗೆ ಸಂಬಂಧಿಸಿದ ತಂಡದ ಸಭೆ ನಡೆಯಿತು. ಸಭೆಯಲ್ಲಿ ಪಾಲ್ಗೊಂಡ ಜಿ 20 ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳನ್ನು ಬೆಂಗಳೂರಿನ ಐತಿಹಾಸಿಕ ಮತ್ತು ಸಾಂಸ್ಕೃತಿಕ ತಾಣಗಳಿಗೆ ಕರೆದೊಯ್ದು ಅವುಗಳನ್ನು ಪರಿಚಯಿಸಿಕೊಡಲಾಯಿತು.

ರಾಜ್ಯದಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ
ಗುಜರಾತ್‌, ಹಿಮಾಚಲ ಪ್ರದೇಶ ಚುನಾವಣೆಯ ಫ‌ಲಿತಾಂಶದ ಬೆನ್ನಲ್ಲೇ ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಪಕ್ಷಗಳು ಪೂರ್ವತಯಾರಿಯನ್ನು ಆರಂಭಿಸಿದವು. ಈ ಫ‌ಲಿತಾಂಶದ ಬಳಿಕ ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ತಮ್ಮದೇ ಆದ ಕಾರ್ಯತಂತ್ರವನ್ನು ಹೆಣೆಯಲು ಮುಂದಾಗಿವೆ.

ಪ್ರಮುಖ ಘಟನೆಗಳು
ನವೆಂಬರ್‌
ನ. 1: ಪುನೀತ್‌ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ
ನ. 4: ಡಿ.ಕೆ. ಶಿವಕುಮಾರ್‌ ಅವರಿಗೆ ಮತ್ತೂಮ್ಮೆ ಇ.ಡಿ.ಯಿಂದ ನೋಟಿಸ್‌ ಜಾರಿ
“ಬಾಹುಬಲಿ 2′ ದಾಖಲೆ ಮುರಿದ ಕನ್ನಡದ “ಕಾಂತಾರ’ ಸಿನೆಮಾ
ನ. 6: ಬೆಂಗಳೂರಲ್ಲಿ ಮಲ್ಲಿಕಾರ್ಜುನ ಖರ್ಗೆಗೆ ಅಭಿನಂದನ ಸಮಾರಂಭ
ನ. 9: ಎಂಎಸ್‌/ಎಂಡಿ ಸೇರಲು ಎಕ್ಸಿಟ್‌ ಪರೀಕ್ಷೆ; ಅಂಕ ಗಳ ಆಧಾರದಲ್ಲಿ ಸ್ನಾತಕೋತ್ತರಕ್ಕೆ ಪ್ರವೇ ಶ
ನ. 10: 1,500 ಪಿಡಿಒಗಳಿಗೆ ಹಿರಿಯ ಪಂ.ಅಭಿವೃದ್ಧಿ ಅಧಿಕಾರಿಗಳಾಗಿ ಭಡ್ತಿ
ನ. 12: 1,052 ಜನೌಷಧ ಮಳಿಗೆ: ರಾಜ್ಯಕ್ಕೆ 2ನೇ ಸ್ಥಾನ
ನ. 13: ಡಿಕೆಶಿಗೆ ಸರಣಿ ನೋಟಿಸ್‌ ಸಂಕಷ್ಟ; ಒಂದೇ ತಿಂಗಳಿನಲ್ಲಿ 5 ಬಾರಿ ಸಮನ್ಸ್‌
ನ. 17: ಆರು ಹೈಟೆಕ್‌ ನಗರಗಳ ನಿರ್ಮಾಣ: ಟೆಕ್‌ ಸಮಿಟ್‌ನಲ್ಲಿ ಸಿಎಂ ಘೋಷಣೆ
“ಕಾಶ್ಮೀರಿ ಫೈಲ್ಸ್‌’ನ ಗಳಿಕೆ ದಾಖಲೆ ಮುರಿದ “ಕಾಂತಾರ’
ನ. 20: ಮತದಾರರ ಮಾಹಿತಿ ಕಳವು: ಪ್ರಮುಖ ಆರೋಪಿ ಲೋಕೇಶ್‌ ಬಂಧನ
ನ. 23: ಹಾಲಿನ ದರ ಲೀ.ಗೆ 2 ರೂ. ಹೆಚ್ಚಳ
ನ. 25: ಮತದಾರರ ಮಾಹಿತಿ ಕಳವು ಪ್ರಕರಣ: ಇಬ್ಬರು ಅಧಿ ಕಾರಿ ಗಳ ಅಮಾನತು
ನ. 27: ಕಾಡಾನೆ ದಾಳಿಯಿಂದ ಸಾವು: ದುಪ್ಪಟ್ಟು ಪರಿಹಾರ ನೀಡಲು ಸರಕಾರ ತೀರ್ಮಾನ
ನ. 30: ಪಿಎಫ್ಐ ನಿಷೇಧ; ಕೇಂದ್ರದ ಅಧಿಸೂಚನೆ ಯಲ್ಲಿ ಮಧ್ಯಪ್ರವೇಶವಿಲ್ಲ ಎಂದ ಹೈಕೋರ್ಟ್‌

ಡಿಸೆಂಬರ್‌
ಡಿ. 3: ಅಂಗವಿಕಲರಿಗಾಗಿ ವಿಶೇಷ ವಿಮಾ ಯೋಜನೆ; ಸಿಎಂ ಘೋಷಣೆ
ಡಿ. 4: ನಗರ ಪ್ರದೇಶಗಳಲ್ಲಿ ಚಿರತೆಗಳ ಓಡಾಟ; ಮೈಸೂರು, ಬೆಂಗಳೂರಿನಲ್ಲಿ ವ್ಯಾಪಕ ಕಾರ್ಯಾಚರಣೆ
ಡಿ. 5: ಮಹಾರಾಷ್ಟ್ರ ಸಚಿವರ ಬೆಳಗಾವಿ ಭೇಟಿ ರದ್ದು; ರಾಜ್ಯ ಸರಕಾರದ ತಾಕೀತಿಗೆ ಫ‌ಲ
ಡಿ. 6: ಗ್ರಾಮ ಲೆಕ್ಕಿಗರನ್ನು ಗ್ರಾಮ ಆಡಳಿತ ಅಧಿಕಾರಿ ಮರು ಪದನಾಮಗೊಳಿಸಿ ಸರಕಾರ ಆದೇಶ
ಡಿ. 7: ಮಹಾರಾಷ್ಟ್ರ-ಕರ್ನಾಟಕ ನಡುವೆ ಬಸ್‌ ಸಂಚಾರ ಸ್ಥಗಿತದಿಂದ ಜನರಿಗೆ ತೀವ್ರ ಸಂಕಷ್ಟ, ಸಂಸತ್‌ ನಲ್ಲೂ ಗಡಿ ವಿವಾದದ ಬಗ್ಗೆ ಗದ್ದಲ
ಡಿ. 8: ಎತ್ತಿನಹೊಳೆ ಪರಿಷ್ಕೃತ ಯೋಜನೆಗೆ ಸಂಪುಟ ಒಪ್ಪಿಗೆ
ಡಿ. 12: ಶಬರಿಮಲೆಗೆ ಪ್ರತೀ ದಿನ 90 ಸಾವಿರ ಭಕ್ತರ ಮಿತಿ ರಾಜ್ಯದಲ್ಲಿ ಮೊದಲ ಝಿಕಾ ವೈರಸ್‌ ಸೋಂಕು ಪ್ರಕರಣ ರಾಯಚೂರಿನ ಬಾಲಕಿಯಲ್ಲಿ ಪತ್ತೆ
ಡಿ. 13: 5, 8ನೇ ತರಗತಿಗೆ ವಾರ್ಷಿಕ ಪರೀಕ್ಷೆ ನಡೆಸಲು ನಿರ್ಧಾರ

ಕೃಷ್ಣಾ ಮತ್ತು ಕಾವೇರಿ ನದಿ ಕಣಿವೆ, ಮಹಾನದಿ ಮತ್ತು ಗೋದಾವರಿ ನದಿ ಜೋಡಣೆಗೆ ಕರ್ನಾ ಟಕದಿಂದ ಆಕ್ಷೇಪ
ಡಿ. 14: ಧಾರವಾಡದಲ್ಲಿ ಸಿಎಂ ಬೊಮ್ಮಾಯಿ ಅವರಿಂದ “ನಮ್ಮ ಕ್ಲಿನಿಕ್‌’ಗೆ ಚಾಲನೆ ಜಿ.ಪಂ., ತಾ.ಪಂ. ಚುನಾವಣೆ ನಡೆಸದ್ದಕ್ಕೆ ಸರ ಕಾರಕ್ಕೆ ಹೈಕೋರ್ಟ್‌ನಿಂದ 5 ಲಕ್ಷ ರೂ. ದಂಡ ಪದವಿ, ಸ್ನಾತಕೋತ್ತರ ಪದವಿ: ಕನ್ನಡ, ಇಂಗ್ಲಿಷ್‌ನಲ್ಲೂ ಉತ್ತರಿಸಲು ಅವಕಾಶ ನೀಡಲು ನಿರ್ಧಾರ

ಟಾಪ್ ನ್ಯೂಸ್

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World Theatre Day 2024: ರಂಗಭೂಮಿ ಕಲೆ-ಯುದ್ಧ ಮತ್ತು ಶಾಂತಿ ಪರಸ್ಪರ ವಿರುದ್ಧ ಧ್ರುವ

World Theatre Day 2024: ರಂಗಭೂಮಿ ಕಲೆ-ಯುದ್ಧ ಮತ್ತು ಶಾಂತಿ ಪರಸ್ಪರ ವಿರುದ್ಧ ಧ್ರುವ

ಡೌಟೇ ಬೇಡ, ಜೋಡೆತ್ತುಗಳ ಹಾಗೆ ನಾನು, ಅನಂತ ಹೆಗಡೆ ಇಬ್ಬರೂ ಕೆಲಸ ಮಾಡುತ್ತೇವೆ…

ಡೌಟೇ ಬೇಡ, ಜೋಡೆತ್ತುಗಳ ಹಾಗೆ ನಾನು, ಅನಂತ ಹೆಗಡೆ ಇಬ್ಬರೂ ಕೆಲಸ ಮಾಡುತ್ತೇವೆ…

Book Review;ವಿಶಿಷ್ಟ ರೂಪಕ ಶೈಲಿಯಿಂದ ಚಿತ್ರ ರಸಿಕರ ಮನಗೆದ್ದ ಕಾಸರವಳ್ಳಿಯ “ಬಿಂಬ ಬಿಂಬನ”

Book Review;ವಿಶಿಷ್ಟ ರೂಪಕ ಶೈಲಿಯಿಂದ ಚಿತ್ರ ರಸಿಕರ ಮನಗೆದ್ದ ಕಾಸರವಳ್ಳಿಯ “ಬಿಂಬ ಬಿಂಬನ”

World Water Day: ಜುಳು ಜುಳು ಸದ್ದೇಕೆ ಉರಿ ಮೌನ

World Water Day: ಜುಳು ಜುಳು ಸದ್ದೇಕೆ ಉರಿ ಮೌನ

ಪ್ರೊ| ಕು.ಶಿ.: ಜ್ಞಾನಕಾಶಿಯಲ್ಲೊಬ್ಬ ಫ‌ಕೀರ

ಪ್ರೊ| ಕು.ಶಿ.: ಜ್ಞಾನಕಾಶಿಯಲ್ಲೊಬ್ಬ ಫ‌ಕೀರ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

10-editorial

Editorial: ಐಟಿ ಕಂಪೆನಿಗಳಿಗೆ ಆಹ್ವಾನ: ಕೇರಳದ ಬಾಲಿಶ ನಡೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

8-pernankila

Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.