ದುಡ್ಡಿನ ಮರಗಳು !


Team Udayavani, May 19, 2021, 2:17 PM IST

money tree

“ಅವರಿಗೇನಪ್ಪ, ಫಾರಿನಾದಾಗ ಬೇಕಾದಷ್ಟು ದುಡ್ಡು ಇರುತ್ತದೆ!

ಇಂಥ ಮಾತು ಇತ್ತೀಚೆಗೆ ಕೇಳಿ ಬರುತ್ತಿದೆಯೋ ಏನೊ ಗೊತ್ತಿಲ್ಲ.”ದುಡ್ಡೇನು, ಮರದಾಗ ಬೆಳಿತದ ಏನು?’ ಅನ್ನುವ ಮಾತಂತೂ ಸುಳ್ಳೇ ಆದರೂ ನಾನಿರುವ ಯು.ಕೆ. ಯ ಹತ್ತಾರು ಕಡೆ ನಿಜವಾಗಿಯೂ ದುಡ್ಡಿರುವ ಮರಗಳು ಇವೆ ಅಂದರೆ ಆಶ್ಚರ್ಯವಾಗಬಹುದು.

ಇಂಥ ಒಂದು ಮರವನ್ನು ಕಳೆದ ವಾರವಷ್ಟೇ ಯಾರ್ಕ್‌ ಶೈರ್‌ ಹತ್ತಿರದ ಪೀಕ್‌ ಡಿಸ್ಟ್ರಿಕ್ಟ್ ನ್ಯಾಷನಲ್‌ ಪಾರ್ಕ್‌ನ ಪಾಡ್ಲಿ ಕಣಿವೆಯಲ್ಲಿ ನೋಡಿದೆ. ಜುಳು ಜುಳು ಹರಿಯುವ, ಕಂದರಗಳಲ್ಲಿ ಧುಮುಕುವ ಬರ್ಬೇಜ್‌ ತೊರೆಯ ಅಂಚಿನಗುಂಟ ಸಾಗುವ Padley Gorge ಒಂದು ರಮಣೀಯ ಸ್ಥಳ. ಇಲ್ಲಿ ಪ್ರಕೃತಿ ಪ್ರತಿಯೊಂದು ಋತುವಿನಲ್ಲಿಯೂ ನವನ್ಮೆàಷಶಾಲಿಯಾಗಿ ರಂಗು ರಂಗಿನ ಉಡುಗೆಯನ್ನುಟ್ಟು ಶಿಶಿರದಲ್ಲಿ ಬಿಚ್ಚಿ ಕಂಗೊಳಿಸುತ್ತಾಳೆ.

ಹಳೆಯ ಕಾಲದಲ್ಲಿ ನಮ್ಮ ದೇಶದಲ್ಲಿದ್ದ ತಾಮ್ರದ ದುಡ್ಡಿನಂತೆ  ಕಾಣುವ ನಾಣ್ಯಗಳು ತುಂಬಿ ಮರಗಳು ಇಂಗ್ಲೆಂಡ್‌, ಸ್ಕಾಟ್ಲಂಡ್‌ ಮತ್ತು ವೇಲ್ಸ್  ಪ್ರದೇಶಗಳಲ್ಲಿ ನೋಡಲು ಸಿಗುತ್ತವೆ. ಮರದ ಬೊಡ್ಡೆಯಲ್ಲಿ ಜನರು ಸುತ್ತಿಗೆಯಿಂದಲೋ ಕಲ್ಲಿನಿಂದಲೋ ಬಡಿದು ಹೂತ ನಾಣ್ಯಗಳಿವು. ಕೆಲವೆಡೆ ಹತ್ತೂಂಬತ್ತನೆಯ ಶತಮಾನದ ಫ್ಲೋರಿನ್‌ ಎನ್ನುವ ನಾಣ್ಯಗಳನ್ನೂ ಗುರುತಿಸಿದ್ದಾರೆ ಎಂದ ಮೇಲೆ ಇದೊಂದು ಬಹಳ ಹಳೆಯ ಪದ್ಧತಿಯಿರಬೇಕು. ಕೆಲವರು ಇದನ್ನು ಅಧಾರ್ಮಿಕ  ಸಂಸ್ಕಾರ ಅನ್ನುವುದುಂಟು ಅಥವಾ ಮೂಢ ನಂಬಿಕೆಯೂ ಇರಬಹುದು.

ಇಂಥ ಮರಗಳಿಗೆ “ಇಚ್ಛಾ ವೃಕ್ಷ’ಗಳೆಂದೂ ಕರೆಯುತ್ತಾರೆ. ಕಲ್ಪತರುವಿನಂತೆ ತಮ್ಮ ಇಚ್ಛೆಯನ್ನು ಪೂರ್ತಿ ಮಾಡಲು ರೋಗಗ್ರಸ್ತರು ಅಡವಿಯಲ್ಲಿ ಹೋಗಿ ಬೇಡಿಕೊಂಡು ಮರದಲ್ಲಿ ನಾಣ್ಯ ಬಿಟ್ಟು ಬಂದರೆ ಅವರು ಗುಣಮುಖರಾಗುತ್ತರೆಂತಲೂ, ಅಕಸ್ಮಾತ್ತಾಗಿ ಯಾರಾದರೂ ಆ ನಾಣ್ಯವನ್ನು ಕಿತ್ತುಕೊಂಡು ಒಯ್ದರೆ ಅವರಿಗೆ ಆ ರೋಗ ಬಡಿಯುತ್ತದೆ ಎನ್ನುವ ಮೂಢ ನಂಬಿಕೆ ಅಥವಾ ವಿಶ್ವಾಸ ಈ ದೇಶದಲ್ಲೂ ಇತ್ತು ಎನ್ನಲು ಪುರಾವೆಗಳಿವೆ.

ಭಾರತದಲ್ಲಿಯೂ ನದಿ, ಬಾವಿಗಳಲ್ಲಿ ಕೆರೆಗಳಲ್ಲಿ ದುಡ್ಡನ್ನು ಹಾಕುವ ಸಂಪ್ರದಾಯ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ಇದು ಮೂಢನಂಬಿಕೆ ಅನ್ನುವುದಕ್ಕಿಂತ ಸಂಪ್ರದಾಯ ಎನ್ನ ಬಹುದು. ಮೊದಲಿನಿಂದಲೂ ತಾಮ್ರದ ಪಾತ್ರೆಯಲ್ಲಿಯ ನೀರನ್ನು ಕುಡಿದರೆ ಆರೋಗ್ಯಕರವೆನ್ನುವ ಮಾತು ಕೇಳಿದ್ದೇವೆ. ಅದೇ ರೀತಿಯಲ್ಲಿ ಹಿಂದೆ ತಾಮ್ರದ ನಾಣ್ಯಗಳೇ ಹೆಚ್ಚು ಇದ್ದ ಕಾಲದಲ್ಲಿ ಅವನ್ನು ತಂದೆ ಅಥವಾ ತಾಯಿಯಿಂದ ಇಸಿದುಕೊಂಡ ದುಡ್ಡುಗಳನ್ನು  ರೇಲ್ವೆ ಗಾಡಿಯ ಕಿಟಕಿಯಿಂದ  ಎಸೆಯುವ ಮಕ್ಕಳಂತೆ ನಾನು ಸಹ ಕೃಷ್ಣಾ, ಮಲಪ್ರಭಾ, ತುಂಗಭದ್ರಾ ನದಿಗಳಲ್ಲಿ ಒಗೆದದ್ದು ನೆನಪಿದೆ. ಆದರೆ ಈಗಿನ ಕಾಲದ ದುಡ್ಡಿನ ಬಿಲ್ಲೆಗಳಲ್ಲಿ ಒಂದೆರಡನ್ನು ಬಿಟ್ಟರೆ ತಾಮ್ರದ ಅಂಶ ಇಲ್ಲವೇ ಇಲ್ಲ ಎನ್ನಬಹುದು.

ನಾನು ನೋಡಿದ ಒಂದು ದಾಖಲೆಯ ಪ್ರಕಾರ ಕಡಿಮೆ ಮೊತ್ತದ ಬಿಳಿ ನಾಣ್ಯಗಳಲ್ಲಿ 83 ಶತಾಂಶ ಕಬ್ಬಿಣ  ಮತ್ತು ಬಾಕಿ 17ರಷ್ಟು ಕ್ರೋಮಿಯಂ ಇರುವುದರಿಂದ ಅದರಿಂದ ಆರೋಗ್ಯವರ್ಧನೆಗಿಂತ ಹಾನಿಯೇ ಆಗುತ್ತಿರಬೇಕು. ಇನ್ನುಳಿದವುಗಳಲ್ಲಿ ಸತು ಮತ್ತು ಅಲ್ಯುಮಿನಿಯಂ ಸೇರಿರುತ್ತದೆ. ಆದುದರಿಂದ ಇಂಥ ಪದ್ಧತಿಯನ್ನು ಕೈಬಿಡುವುದೇ ಒಳ್ಳೆಯದೇನೋ.

ಈಗಿನ ಇಂಗ್ಲೆಂಡಿನ “ತಾಮ್ರದ’ ಪೆನ್ನಿಗಳಲ್ಲಿ ನೂರರಲ್ಲಿ ಬರೀ 6 ರಷ್ಟು ಅಂಶ ಮಾತ್ರ ತಾಮ್ರವಾಗಿದ್ದು, ಉಳಿದದ್ದು “ಕೋಟೆಡ್‌ ಸ್ಟೀಲ್” ಇರುವುದರಿಂದ ಈ ದುಡ್ಡಿನ ಮರಗಳ ಫೋಟೋಗಳನ್ನು ನೋಡಿದರೆ ಅವೆಲ್ಲ ವಿವಿಧ ಲೋಹಗಳ ನಂಜಿನಿದ್ದ ಸತ್ತು ಕೊರಡಾಗಿರುವುದನ್ನು ಕಾಣುತ್ತೇವೆ. ನಾನು ಮೊನ್ನೆ ನೋಡಿದ ಮರವೂ ಹಾಗೆಯೇ ಇದೆ! ದುಡ್ಡು ದೊಡ್ಡಪ್ಪ ಆಗಿರದಿದ್ದರೂ ಮರಗಳಿಗೆ ವಿಷವಪ್ಪ!

 

ಡಾ| ಶ್ರೀವತ್ಸ ದೇಸಾಯಿ,

ಡೋಂಕಾಸ್ಟರ್‌

ಟಾಪ್ ನ್ಯೂಸ್

Chamarajanagar ಸೇನಾ ತರಬೇತಿ ವಿಮಾನ ಪತನ: ಪ್ಯಾರಾಚೂಟ್ ಸಹಾಯದಿಂದ ಜಿಗಿದ ಪೈಲಟ್ ಗಳು!

Chamarajanagar ಸೇನಾ ತರಬೇತಿ ವಿಮಾನ ಪತನ: ಪ್ಯಾರಾಚೂಟ್ ಸಹಾಯದಿಂದ ಜಿಗಿದ ಪೈಲಟ್ ಗಳು

2-

ಕಡಬ: ವಿದ್ಯುತ್ ಕಂಬವೇರಿದ್ದ ಲೈನ್ ಮ್ಯಾನ್ ಗೆ ವಿದ್ಯುತ್ ಆಘಾತ; ಮೃತ್ಯು

ಕಳಸ: ಕಂಠಪೂರ್ತಿ ಕುಡಿದು ಬಂದು ಆಪರೇಷನ್ ಥಿಯೇಟರ್ ನಲ್ಲಿ ಮಲಗಿದ ಸರ್ಕಾರಿ ವೈದ್ಯ

ಕಳಸ: ಕಂಠಪೂರ್ತಿ ಕುಡಿದು ಬಂದು ಆಪರೇಷನ್ ಥಿಯೇಟರ್ ನಲ್ಲಿ ಮಲಗಿದ ಸರ್ಕಾರಿ ವೈದ್ಯ

ಕಬ್ಬನ್‌ಪಾರ್ಕ್‌ನಲ್ಲಿ ಹೆಚ್ಚಿದ ಭಿಕ್ಷುಕರ ಕಾಟ

ಕಬ್ಬನ್‌ಪಾರ್ಕ್‌ನಲ್ಲಿ ಹೆಚ್ಚಿದ ಭಿಕ್ಷುಕರ ಕಾಟ

WTC Final: ಆಸೀಸ್ ತಂಡ ಈ ಇಬ್ಬರು ಆಟಗಾರರ ಬಗ್ಗೆ ತಲೆಕೆಡೆಸಿಕೊಂಡಿದೆ ಎಂದ ಪಾಂಟಿಂಗ್

WTC Final: ಆಸೀಸ್ ತಂಡ ಈ ಇಬ್ಬರು ಆಟಗಾರರ ಬಗ್ಗೆ ತಲೆಕೆಡೆಸಿಕೊಂಡಿದೆ ಎಂದ ಪಾಂಟಿಂಗ್

ಚಾಮರಾಜನಗರ ತಾಲೂಕಿನಲ್ಲಿ ಸಣ್ಣ ವಿಮಾನ ಪತನ; ತಪ್ಪಿದ ಅನಾಹುತ; ಪೈಲಟ್ ಗಳು ಪಾರು

ಚಾಮರಾಜನಗರ ತಾಲೂಕಿನಲ್ಲಿ ಸಣ್ಣ ವಿಮಾನ ಪತನ; ತಪ್ಪಿದ ಅನಾಹುತ; ಪೈಲಟ್ ಗಳು ಪಾರು

Uttarakhand: ಭಾರೀ ಭೂಕುಸಿತಕ್ಕೆ ರಸ್ತೆ ಸಂಪರ್ಕ ಕಡಿತ, 300 ಯಾತ್ರಾರ್ಥಿಗಳ ಪರದಾಟ

Uttarakhand: ಭಾರೀ ಭೂಕುಸಿತಕ್ಕೆ ರಸ್ತೆ ಸಂಪರ್ಕ ಕಡಿತ, 300 ಯಾತ್ರಾರ್ಥಿಗಳ ಪರದಾಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

DAIRY FARMING

ಸರಕಾರದ ನೆರವಿನ ನಿರೀಕ್ಷೆಯಲ್ಲಿ ಹೈನುಗಾರರು

AKHAND BHARATH

ಮಸ್ಕಿ ರಾಯಚೂರಿನದ್ದು; ನಾವುಂದದ್ದಲ್ಲ!

ONDC

ONDC ಡಿಜಿಟಲ್‌ ಸರ್ಕಾರಿ ಕಾಮರ್ಸ್‌ ವ್ಯವಸ್ಥೆ: ಏನಿದು ವ್ಯವಸ್ಥೆ? ಯಾರಿಗೆ ತರಲಿದೆ ಲಾಭ?

CIGERATTE

ತಂಬಾಕು ಸೇವನೆಯ ದುಶ್ಚಟದಿಂದ ದೂರ ಉಳಿಯೋಣ

ipl 2023

16ನೇ IPL ನೊಳಗೊಂದು ಸುತ್ತು

MUST WATCH

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

udayavani youtube

ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ನಾಮಪತ್ರ ಸಲ್ಲಿಕೆ

ಹೊಸ ಸೇರ್ಪಡೆ

Chamarajanagar ಸೇನಾ ತರಬೇತಿ ವಿಮಾನ ಪತನ: ಪ್ಯಾರಾಚೂಟ್ ಸಹಾಯದಿಂದ ಜಿಗಿದ ಪೈಲಟ್ ಗಳು!

Chamarajanagar ಸೇನಾ ತರಬೇತಿ ವಿಮಾನ ಪತನ: ಪ್ಯಾರಾಚೂಟ್ ಸಹಾಯದಿಂದ ಜಿಗಿದ ಪೈಲಟ್ ಗಳು

ಕಿಕ್ಕೇರಿಯಲ್ಲಿ ನಾಯಿಗಳ ಉಪಟಳಕ್ಕೆ ಜನರು ಕಂಗಾಲು

ಕಿಕ್ಕೇರಿಯಲ್ಲಿ ನಾಯಿಗಳ ಉಪಟಳಕ್ಕೆ ಜನರು ಕಂಗಾಲು

ರಾತ್ರೋರಾತ್ರಿ ಜಮೀನಾದ ರಾಜವಂಶಸ್ಥರ ಕಾಲದ ಕೆರೆ

ರಾತ್ರೋರಾತ್ರಿ ಜಮೀನಾದ ರಾಜವಂಶಸ್ಥರ ಕಾಲದ ಕೆರೆ

ತಂಬಾಕು ವಿರುದ್ಧ ಆದಿವಾಸಿ ಮಕ್ಕಳ ಜಾಗೃತಿ ಕೂಗು

ತಂಬಾಕು ವಿರುದ್ಧ ಆದಿವಾಸಿ ಮಕ್ಕಳ ಜಾಗೃತಿ ಕೂಗು

2-

ಕಡಬ: ವಿದ್ಯುತ್ ಕಂಬವೇರಿದ್ದ ಲೈನ್ ಮ್ಯಾನ್ ಗೆ ವಿದ್ಯುತ್ ಆಘಾತ; ಮೃತ್ಯು