ಲೋಕದ ಕಾರುಬಾರು.. ಕವಿಯ ಗಾಂಧಿ ಬಜಾರು..

ಬುಡ್ಡಿದೀಪದ ಕೆಳಗೆ ಮೂಡಿಬಂದಿದ್ದೇ ಜನಪ್ರಿಯ ಕವಿತೆ "ಜೋಗದ ಸಿರಿ ಬೆಳಕಿನಲ್ಲಿ...

Team Udayavani, May 4, 2020, 1:11 PM IST

ಲೋಕದ ಕಾರುಬಾರು.. ಕವಿಯ ಗಾಂಧಿ ಬಜಾರು..

ಬೆಂಗಳೂರು: “ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ…’ ಕವಿ ನಿಸಾರ್‌ ಅಹಮದ್‌ ಅವರಿಗೆ ಅತಿ ಹೆಚ್ಚು ಜನಪ್ರಿಯತೆ ತಂದುಕೊಟ್ಟ ಪದ್ಯ. ಈ ಪದ್ಯ ಬರೆದ ನಂತರ ನಿಸಾರ್‌ “ನಿತ್ಯೋತ್ಸವ ಕವಿ’ಯಾದರು. ಆದರೆ, ಇದು ಹುಟ್ಟಿದ್ದು ಮಲೆನಾಡಿನ ಮಡಿಲಿನಲ್ಲಿ ಅಲ್ಲ. ಇದೇ ಕಾಂಕ್ರೀಟ್‌ ಕಾಡು (ಆಗ ನಗರ ಇಷ್ಟೊಂದು ಬೆಳೆದಿರಲಿಲ್ಲ) ಬೆಂಗಳೂರಿನ ಜಯನಗರದಲ್ಲಿ!

ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದ ನಿಸಾರ್‌ ಅಹಮದ್‌, 1978ರಲ್ಲಿ ಶಿವಮೊಗ್ಗದಿಂದ ರಜೆಗೆ ಜಯನಗರದಲ್ಲಿದ್ದ ತಮ್ಮ ಮನೆಗೆ ಬಂದಿದ್ದರು. ಆಕಾಶವಾಣಿ ಕಾರ್ಯಕ್ರಮವೊಂದಕ್ಕೆ ಹಾಡು ಬರೆಯಬೇಕಿತ್ತು. ಹಗಲು-ರಾತ್ರಿ ತಲೆಕೆಡಿಸಿಕೊಂಡಿದ್ದರು. ಆಗ ಥಟ್‌ ಅಂತ ಕಣ್ಮುಂದೆ ಬಂದಿದ್ದು ಜೋಗ ಜಲಪಾತದ ವೈಭೋಗ. ಆಗ ಬುಡ್ಡೀದೀಪದ ಕೆಳಗೆ ಮೂಡಿಬಂದಿದ್ದೇ “ಜೋಗದ ಸಿರಿಯ ಬೆಳಕು…’

ನಿಸಾರ್‌ ಅಹಮದ್‌ ಇಂತಹ ನೂರಾರು ಪದ್ಯಗಳನ್ನು ರಚಿಸಿರಬಹುದು. ಅವುಗಳಿಗಾಗಿ ಜಗತ್ತಿನ ಬೇರೆ ಬೇರೆ ಭಾಗದಲ್ಲಿನ ವಿಷಯ ವಸ್ತುಗಳನ್ನು ಅವರು ಆಯ್ಕೆ ಮಾಡಿಕೊಂಡಿರಲೂಬಹುದು. ಆದರೆ, ಅವುಗಳ ಹುಟ್ಟು ಲಾಲ್‌ಬಾಗ್‌ನ ಸಸ್ಯಕಾಶಿ ಮಧ್ಯೆ ಅಥವಾ ಜಯನಗರ ಅಥವಾ ಪದ್ಮನಾಭನಗರ ಮನೆಯ ತಾರಸಿ, ಗಾಂಧಿ ಬಜಾರಿನಂತಹ ಪೇಟೆ ಬೀದಿಗಳಲ್ಲಾಗಿದೆ.

ಸಾಮಾನ್ಯವಾಗಿ ಕವಿಗಳು ಮತ್ತು ಲೇಖಕರಿಗೆ ಮಲೆನಾಡಿನ ಮಡಿಲು, ಗ್ರಾಮೀಣ ಸೊಗಡು ಸ್ಫೂರ್ತಿಯ ಸೆಲೆ. ಆದರೆ, ನಿಸಾರ್‌ ಅಹಮದ್‌ ಅವರಿಗೆ ಉದ್ಯಾನ ನಗರಿ ಪ್ರೇರಣೆಯಾಗಿತ್ತು. ಇದೇ ಕಾರಣಕ್ಕೆ ಅವರ ಪದ್ಯಗಳಲ್ಲೆಲ್ಲಾ ಗಾಂಧಿ ಬಜಾರಿನ ಬೀದಿಗಳು, ಅಲ್ಲಿ ಸಿಗುವ ಮಸಾಲೆ ದೋಸೆ ಮತ್ತು ಕಾಫಿ, ಪಕ್ಕದಲ್ಲೇ ಇರುವ ಸಸ್ಯಕಾಶಿಯಂತಹ ತಾಣಗಳು ಬಂದುಹೋಗುತ್ತವೆ. ಅಷ್ಟೇ ಅಲ್ಲ, ಚೀನಿಯರ ಆಕ್ರಮಣದ ವಿರುದ್ಧ ಬರೆದ “ಕುರಿಗಳು ಸಾರ್‌ ಕುರಿಗಳು’, “ನಿಮ್ಮೊಳಗಿದ್ದು ನಿಮ್ಮಂತಾಗದೆ’ ಸೇರಿದಂತೆ ಹಲವು ನವ್ಯದಲ್ಲಿ ಬರೆದ ಪದ್ಯಗಳಿಗೂ ಬೆಂಗಳೂರು ಸ್ಫೂರ್ತಿಯ ಚಿಲುಮೆಯಾಗಿತ್ತು. ಈ ಹಿನ್ನೆಲೆಯಲ್ಲಿ ನಿಸಾರ್‌ ಅಪ್ಪಟ ನಗರ ಪ್ರಜ್ಞೆಯ ಕವಿ ಎಂದು ವಿಶ್ಲೇಷಿಸಲಾಗುತ್ತದೆ.

“ಒಂದರ್ಥದಲ್ಲಿ ಲಾಲ್‌ಬಾಗ್‌ ನನ್ನ ಒಂದು ಶ್ವಾಸಕೋಶವಿದ್ದಂತೆ. ಇನ್ನೊಂದು ಶ್ವಾಸಕೋಶ ಗಾಂಧಿಬಜಾರ್‌. ಲಾಲ್‌ಬಾಗ್‌ ಏಕಾಂತಕ್ಕೆ ಹಾಗೂ ಗಾಂಧಿಬಜಾರ್‌ ಲೋಕಾಂತಕ್ಕೆ’ ಎಂದು ಸ್ವತಃ ನಿಸಾರ್‌ ಅಹಮದ್‌ ಕೂಡ ಹಲವು ಸಂದರ್ಭಗಳಲ್ಲಿ ಹೇಳಿಕೊಂಡಿದ್ದಾರೆ. ಕುವೆಂಪು ಅವರಿಗೆ ಮಲೆನಾಡು ಸಿಕ್ಕಂತೆ, ವರ್ಡ್ಸ್‌ವರ್ತ್‌ಗೆ ಲಂಡನ್ನಿನ ಲೇಕ್‌ ಡಿಸ್ಟ್ರಿಕr… ಸಿಕ್ಕಂತೆ ನನಗೆ ಈ ಲಾಲ್‌ಬಾಗ್‌ ಸಿಕ್ಕಿತು. ನನ್ನ ಕಾವ್ಯದ ಜನ್ಮಸ್ಥಳ ಈ ಸಸ್ಯಕಾಶಿ. ನನ್ನ ಓದುವ ಹಸಿವನ್ನು ತಣಿಸಲೂ ಇದು ಆಸರೆಯಾಯಿತು ಎಂದೂ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಇದೇ ಲಾಲ್‌ಬಾಗ್‌ನ ಕಟ್ಟೆ ಮೇಲೆ ನೆತ್ತಿಸುಡುವ ಬಿಸಿಲಿನಲ್ಲಿ ವಿದ್ಯಾರ್ಥಿಯಾಗಿದ್ದಾಗ ತಮ್ಮ ಸ್ನೇಹಿತನೊಂದಿಗೆ ಕಡಲೇಕಾಯಿ ತಿಂದಿದ್ದಾರೆ. ಉದ್ಯಾನದ ಕೆರೆಯಲ್ಲಿ ಈಜಾಡಿದ್ದಾರೆ. ಕಾಲೇಜು ಲೆಕ್ಚರ್‌ ಆದಾಗಲೂ ಮನೆಯಲ್ಲಿ ಮಕ್ಕಳು ಗಲಾಟೆ ಮಾಡುತ್ತಾರೆ ಅಂತ ಇದೇ ಲಾಲ್‌ಬಾಗ್‌ಗೆ ಬಂದು ಕುವೆಂಪು ಅವರ “ಮಲೆಗಳಲ್ಲಿ ಮದುಮಗಳು’, “ಕಾನೂರು ಹೆಗ್ಗಡತಿ’ಯನ್ನು ಲೆಕ್ಕವಿಲ್ಲದಷ್ಟು ಸಲ ತಿರುವಿಹಾಕಿದ್ದನ್ನು ಅವರೊಂದಿಗೆ ಇದೇ ಲಾಲ್‌ಬಾಗ್‌ನಲ್ಲಿ ಹರಟಿದ್ದ ಸಹಪಾಠಿಗಳು ಮೆಲುಕುಹಾಕುತ್ತಾರೆ.

ಹರಟೆ, ದೋಸೆ, ಕಾಫಿ: “ಗಾಂಧಿ ಬಜಾರು ಮಾತ್ರವಲ್ಲ; ಲಾಲ್‌ಬಾಗ್‌ನಲ್ಲಿಯ ಹರಟೆ, ಸಜ್ಜನ್‌ರಾವ್‌ ವೃತ್ತದ ಹಿಂದಿರುವ ಹೋಟೆಲ್‌ ಅಥವಾ ಎಂಟಿಆರ್‌ ಹೋಟೆಲ್‌ನ ಮಸಾಲೆ ದೋಸೆ ಮತ್ತು ಕಾಫಿ ಹೀರಿದ್ದು ಹೀಗೆ ನಗರದ ಹಲವೆಡೆ ನಾನು, ಕವಿಗಳಾದ ಡಾ.ಎಚ್‌.ಎಸ್‌. ವೆಂಕಟೇಶಮೂರ್ತಿ, ಬಿ.ಆರ್‌. ಲಕ್ಷ್ಮಣ ರಾವ್‌ ಅವರು ಓಡಾಡಿದ್ದೇವೆ. ಅವರೊಂದು ರೀತಿ ಜೀವನೋತ್ಸಾಹದ ವ್ಯಕ್ತಿ. ಎಂತಹ ಹುಷಾರಿಲ್ಲದ ಸಂದರ್ಭದಲ್ಲೂ ಸೂಟು ಹಾಕಿಕೊಂಡಿರುತ್ತಿದ್ದರು’ ಎಂದು ವಿಮರ್ಶಕ ಪ್ರೊ. ನರಹಳ್ಳಿ ಬಾಲಸುಬ್ರಹ್ಮಣ್ಯ ಮೆಲುಕುಹಾಕಿದರು.

“ನಿಸಾರ್‌ ಅಪ್ಪಟ ನಗರ ಪ್ರಜ್ಞೆಯ ಕವಿ. ಆದರೆ, ಈಗಿನ ನಗರ ಪ್ರಜ್ಞೆಯ ಕವಿ ಅಲ್ಲ. ಯಾಕೆಂದರೆ, ಪ್ರಸ್ತುತ ನಮ್ಮ ಮುಂದಿರುವುದು ಸಂಬಂಧಗಳು ಛಿದ್ರವಾಗಿರುವ ಬೆಂಗಳೂರು. ಆದರೆ, 70ರ ದಶಕದಲ್ಲಿ ಬೆಂಗಳೂರು ಇಷ್ಟೊಂದು ನಗರೀಕರಣಗೊಂಡಿರಲಿಲ್ಲ. ದೇಶೀಯ ಸೊಗಡನ್ನೂ ಹೊಂದಿತ್ತು. ಹಾಗಾಗಿ, ಇಲ್ಲಿಯೇ ಹುಟ್ಟಿಬೆಳೆದ ನಿಸಾರ್‌ ಅವರಿಗೆ ಈ ನಗರವು ಸಂಬಂಧಗಳ ಗಾಢತೆಯನ್ನು ಕಟ್ಟಿಕೊಟ್ಟಿತು. ನನಗೆ ಈಗಲೂ ಚೆನ್ನಾಗಿ ನೆನಪಿದೆ, ನಿತ್ಯ ಅವರು ಗಾಂಧಿ ಬಜಾರಿಗೆ ಬರುತ್ತಿದ್ದರು. ಅಲ್ಲಿ ಕುಳಿತು ಹರಟುತ್ತಿದ್ದರು. ಇನ್ನು ಗಾಂಧಿ ಬಜಾರೇ ಯಾಕೆ ಎಂದು ನೀವು ಕೇಳಬಹುದು. ಅದಕ್ಕೆ ಹಲವು ಕಾರಣಗಳಿವೆ. ಎಂ.ಜಿ. ರಸ್ತೆ, ಬ್ರಿಗೇಡ್‌ ರಸ್ತೆಗಳು ಆಧುನಿಕತೆಯ ಸಂಕೇತಗಳು ಹೇಗೋ, ಅದೇ ರೀತಿ ಗಾಂಧಿ ಬಜಾರು ಪರಂಪರೆಯ ಸಂಕೇತ. ಅಲ್ಲದೆ, ಮಾಸ್ತಿ ವೆಂಕಟೇಶ್‌ ಅಯ್ಯಂಗಾರ್‌, ಗೋಪಾಲಕೃಷ್ಣ ಅಡಿಗ, ವೈಎನ್‌ಕೆ, ಸುಮತೀಂದ್ರ ನಾಡಿಗರಂತಹವರು ಇದ್ದ ಪ್ರದೇಶ. ಜತೆಗೆ ಅಪ್ಪಟ ಗೃಹಸ್ಥರು ಓಡಾಡುವ ಪ್ರದೇಶವೂ ಹೌದು’ ಎಂದು ವಿಮರ್ಶಕ ಪ್ರೊ.ನರಹಳ್ಳಿ ಬಾಲಸುಬ್ರಮಣ್ಯ ತಿಳಿಸುತ್ತಾರೆ.

ಸ್ಫೂರ್ತಿಗೆ ಕಾರಣ ಲಾಲ್‌ಬಾಗ್‌: “ನಿಸಾರ್‌ ಅಹಮದ್‌ ಅವರು ದೇವನಹಳ್ಳಿಯಲ್ಲಿ ಹುಟ್ಟಿದರೂ ಬೆಳೆದಿದ್ದು ಬೆಂಗಳೂರಿನಲ್ಲಿ. ಲಾಲ್‌ಬಾಗ್‌ ಪಕ್ಕದಲ್ಲೇ ಅವರ ಮನೆ ಇತ್ತು. ಪ್ರಾಥಮಿಕ ಶಿಕ್ಷಣ ಹಾಗೂ ಇಂಟರ್‌ಮೀಡಿಯಟ್‌ ಇಲ್ಲಿಯೇ ಪೂರೈಸಿದರು. ಅವರು ಕವಿಯಾಗಿ ರೂಪುಗೊಳ್ಳಲಿಕ್ಕೂ ನಗರ ಸ್ಫೂರ್ತಿಯಾಯಿತು. ರಾಮಚಂದ್ರ ಶರ್ಮ ಅವರಂತೆಯೇ ನಿಸಾರ್‌ ಕೂಡ ನಗರ ಕವಿ’ ಎಂದು ಕವಿ ಡಾ.ಎಚ್‌.ಎಸ್‌. ವೆಂಕಟೇಶಮೂರ್ತಿ ವಿಶ್ಲೇಷಿಸುತ್ತಾರೆ. 70-80ರ ದಶಕದ ಬೆಂಗಳೂರು ನಿತ್ಯೋತ್ಸವ ಕವಿಗೆ ಸ್ಫೂರ್ತಿಯ ನೆಲೆಯಾಗಿತ್ತು. ಆ ಕಾಲಘಟ್ಟವನ್ನೇ ನೆನಪಿಸುವಂತಹ ಗಜಿಬಿಜಿಯಿಂದ ದೂರವಾದ ಬೆಂಗಳೂರಿನಲ್ಲೇ ಅವರು ನಿರ್ಗಮಿಸಿದ್ದು ಕಾಕತಾಳೀಯ.

ಕೆ.ಎಸ್‌.ನಿಸಾರ್‌ ಅಹಮದ್‌ ಅವರ ಸಾಹಿತ್ಯದಲ್ಲಿ ವಿಡಂಬನೆ ಇರುತ್ತಿತ್ತು. ತಾವು ಏನು ಹೇಳಬೇಕೂ ಅದನ್ನು ತಮ್ಮ ಕವಿತೆಗಳ ಮೂಲಕ ಹೇಳುತ್ತಿದ್ದರು. ಅವರ ಹಲವು ಕವಿತೆಗಳು ಕನ್ನಡಿಗರ ಮನಮನೆ ತಲುಪಿವೆ. ನಿಜವಾಗಿಯೂ ಕೆ.ಎಸ್‌.ನಿಸಾರ್‌ ಅಹಮದ್‌ ಅವರ ಸಾವು ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ. ಸಿದ್ದಲಿಂಗಯ್ಯ, ಹಿರಿಯ ಕವಿ

ನಿತ್ಯೋತ್ಸವ ಕವಿ ಪ್ರೊ.ನಿಸಾರ್‌ ಅಹಮದ್‌ ಅವರು ಕಾವ್ಯ ಮತ್ತು ಪದ್ಯಾನುವಾದದಲ್ಲಿ ಮಹತ್ವದ ಕೆಲಸ ಮಾಡಿದ್ದಾರೆ. ಅವರ ಕಾವ್ಯ ಎಲ್ಲಾ ಕಾವ್ಯಾಸಕ್ತರಿಗೂ ಇಷ್ಟವಾಗುತ್ತಿತ್ತು.ಅಷ್ಟೇ ಅಲ್ಲ ವಿಮರ್ಶಕರಿಗೂ ಕವಿತೆಗಳು ಪ್ರಿಯವಾಗಿದ್ದವು.  ಡಾ.ಎಚ್‌.ಎಸ್‌.ವೆಂಕಟೇಶಮೂರ್ತಿ,ಹಿರಿಯ ಕವಿ

ಮೂವತ್ತು ವರ್ಷಗಳಿಂದ ನನಗೆ ನಿಸಾರ್‌ ಅಹಮದ್‌ ಪರಿಚಯ. ಅವರ ಕವಿತೆಗಳು ನನಗೆ ಹಲವು ರೀತಿಯಲ್ಲಿ ಪ್ರೇರಣೆ ನೀಡಿವೆ. ಹೀಗಾಗಿಯೇ ಅವರ ಕವಿತೆಗಳ ಪ್ರಭಾವಕ್ಕೆ ಒಳಗಾಗಿದ್ದೆ. ಬಂಡಾಯದ ವಸ್ತು ಅವರ ಸಾಹಿತ್ಯದಲ್ಲಿ ಇರುತ್ತಿತ್ತು. -ಕುಂ.ವೀರಭದ್ರಪ್ಪ, ಕಾದಂಬರಿಕಾರ.

ನಿಸಾರ್‌ ಅಹಮದ್‌ ಅವರು ಶ್ರೇಷ್ಠ ಕವಿಯಲ್ಲದೆ ವಿಮರ್ಶಕರು, ಅನುವಾದಕರು ಕೂಡ ಆಗಿದ್ದರು. ಅಲ್ಲದೆ ಮಕ್ಕಳ ಸಾಹಿತ್ಯಕ್ಕೂ ವಿಶೇಷವಾದ ಕೊಡುಗೆಯನ್ನು ನೀಡಿದ್ದಾರೆ. 60ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದಾರೆ. ಇಂತಹ ಶ್ರೇಷ್ಠ ಕವಿಯ ನಿಧನ ಸಾಹಿತ್ಯ ಮತ್ತು ಸಂಗೀತ ಕ್ಷೇತ್ರಕ್ಕೆ ತುಂಬಲಾದರ ನಷ್ಟ.  ಡಾ.ಮನು ಬಳಿಗಾರ್‌, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ

ನನಗೆ ಗುರುಗಳ ರೀತಿಯಲ್ಲಿದ್ದರು, ಸಿನಿಮಾ ಕ್ಷೇತ್ರದ ಬಗ್ಗೆಯೂ ಅವರಿಗೆ ಆಸಕ್ತಿ ಇತ್ತು.ಹೀಗಾಗಿ ನನ್ನ ಸಿನಿಮಾಗಳ ಬಗ್ಗೆಯು ಆಗಾಗ ವಿಚಾರಿಸುತ್ತಿದ್ದರು. ನವ್ಯ ಮತ್ತು ನವೋದಯ ಸಾಹಿತ್ಯವಲ್ಲದೆ ಕಲೆಯ ಬಗ್ಗೆಯು ಅವರು ಅಪಾರ ಒಲವು ಹೊಂದಿದ್ದರು.ಟಿ.ಎಸ್‌.ನಾಗಾಭರಣ,ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು.

ಪ್ರೊ.ಕೆ.ಎಸ್‌.ನಿಸಾರ್‌ ಅಹಮದ್‌ ಅವರು ಉತ್ತಮ ಕವಿ ಅಷ್ಟೇ ಅಲ್ಲ, ವಾಗ್ಮಿಗಳು ಕೂಡ ಆಗಿದ್ದರು.ಅವರ ಸಾಹಿತ್ಯದಲ್ಲಿ ಹಲವು ವಿಚಾರಗಳು ತುಂಬಿರುತ್ತಿದ್ದವು.ಅವು ಓದುಗರಿಗೂ ಮೆಚ್ಚುಗೆಯಾಗುತ್ತಿದ್ದವು. ಸಿದ್ದಲಿಂಗ ಪಟ್ಟಣ ಶೆಟ್ಟಿ, ಸಾಹಿತಿ

ನವ್ಯ ಸಾಹಿತ್ಯವನ್ನು ಜನರಿಗೆ ತಲುಪಿಸಿದ ಶ್ರೇಯಸ್ಸು ಪ್ರೊ.ಕೆ.ಎಸ್‌.ನಿಸಾರ್‌ ಅಹಮದ್‌ ಅವರಿಗೆ ಸಲ್ಲುತ್ತದೆ. ಬಡವರ ಬಗ್ಗೆ ಕಾಳಜಿ ಅವರ ಕವಿತೆಯಲ್ಲಿ ಅಡಗಿತ್ತು. ಕೆಲವು ವಿಚಾರಗಳಲ್ಲಿ ನಿಸಾರ್‌ ಅಹಮದ್‌ ಹಾಗೂ ನನ್ನ ನಡುವೆ ಸಾಮ್ಯತೆ ಇತ್ತು.  ಪ್ರೊ.ಬರಗೂರು ರಾಮಚಂದ್ರಪ್ಪ, ಹಿರಿಯ ಸಾಹಿತಿ

 

 

-ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

11-srrest

Bengaluru: ಅತಿಕ್ರಮಿಸಿ ಏರ್‌ಪೋರ್ಟ್‌ನಲ್ಲಿ ವಿಡಿಯೋ: ಯುಟ್ಯೂಬರ್‌ ಬಂಧನ

10-bengaluru’

Bengaluru: ಮಕ್ಕಳ ಅಶ್ಲೀಲ ಫೋಟೋ, ವಿಡಿಯೋ ವೀಕ್ಷಿಸುತ್ತಿದ್ದ ಸೆಕ್ಯೂರಿಟಿ ಗಾರ್ಡ್‌ ಸೆರೆ

9-bng

Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ

ಗ್ಯಾರಂಟಿ ಯೋಜನೆಗಳ ಟೀಕೆಗೆ ತಾಯಂದಿರೇ ಉತ್ತರ ನೀಡುತ್ತಾರೆ: ಡಿಕೆ ಶಿವಕುಮಾರ್

ಗ್ಯಾರಂಟಿ ಯೋಜನೆಗಳ ಟೀಕೆಗೆ ತಾಯಂದಿರೇ ಉತ್ತರ ನೀಡುತ್ತಾರೆ: ಡಿಕೆ ಶಿವಕುಮಾರ್

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.