ಜರ್ಮನಿಯ ಕನ್ನಡಿಗರಿಂದ ನುಡಿ ನಮನ


Team Udayavani, Apr 6, 2021, 7:30 PM IST

ಜರ್ಮನಿಯ ಕನ್ನಡಿಗರಿಂದ ನುಡಿ ನಮನ

ಎಲ್ಲಿ ಜಾರಿತೋ ಮನವು.. ಎಂದು ಭಾವಗೀತೆಗಳಲ್ಲಿ ಎಲ್ಲರ ಮನಸ್ಸು ಜಾರಿಸಿದ ಭಾವ ಕವಿ ನೈಲಾಡಿ ಶಿವರಾಮ ಭಟ್ಟ ಲಕ್ಷೀನಾರಾಯಣ ಭಟ್ಟರಿಗಾಗಿ ಕಲೋನ್‌, ಸ್ಟುಟ್‌ಗಾರ್ಟ್‌, ಫ್ರಾಂಕ್‌ಫ‌ರ್ಟ್‌, ಮ್ಯೂನಿಕ್‌, ಬರ್ಲಿನ್‌, ಹ್ಯಾಂಬುರ್ಗ್‌, ಡ್ರೆಸ್ಡನ್‌ ಹೀಗೆ ಜರ್ಮನಿಯ ವಿವಿಧ ನಗರಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ಭಟ್ಟರ ಭಾವಧ್ಯಾನದಲ್ಲಿ ಒಂದು ಸುಂದರ ಸಂಜೆ ಕಾರ್ಯಕ್ರಮವನ್ನು ಏರ್ಪಡಿಸಿ ಅವರಿಗೆ ನುಡಿನಮನ ಸಲ್ಲಿಸಿದರು.

400ಕ್ಕೂ ಹೆಚ್ಚು ಭಾವಗೀತೆಗಳು, 100ಕ್ಕೂ ಹೆಚ್ಚು ಮಕ್ಕಳ ಪದ್ಯಗಳನ್ನು ನೀಡಿರುವ ಎನ್‌.ಎಸ್‌. ಲಕ್ಷ್ಮೀ ನಾರಾಯಣ ಭಟ್‌ ಅವರು ಬರೆದಿರುವ ಹಾಡು, ಅವರೊಂದಿಗಿನ ಒಡನಾಟದ ಕುರಿತು ಮೆಲುಕು ಹಾಕಲಾಯಿತು.

ಹತ್ತು ವರ್ಷಗಳ ಹಿಂದೆ ಭಟ್ಟರನ್ನು ನೇರವಾಗಿ ಭೇಟಿಯಾಗಿ ಅವರ ಸರಳತೆ, ಆತಿಥ್ಯ, ಹೃದಯ ವೈಶಾಲ್ಯತೆಗೆ ಮನಸೋತ ಸಂತೋಷ್‌ ಅವರು ಜರ್ಮನಿ ಕನ್ನಡಿಗರನ್ನು ಒಟ್ಟುಗೂಡಿಸಿ ಕಾರ್ಯಕ್ರಮದ ಮುಂದಾಳತ್ವ ವಹಿಸಿದರು. ಕಾರ್ಯಕ್ರಮದಲ್ಲಿ  “ತಾಯೆ ನಿನ್ನ ಮಡಿಲಲ್ಲಿ ಕಣ್ಣ ತೆರೆದ ಕ್ಷಣದಲ್ಲಿ’  ಎಂಬ ಭಾವಗೀತೆಯನ್ನು ಸುಶ್ರಾವ್ಯವಾಗಿ ಹಾಡಿ ಭಟ್ಟರನ್ನು ಭೇಟಿಯಾದ ಕ್ಷಣಗಳನ್ನು ಮೆಲುಕು ಹಾಕಿದರು.  ಮ್ಯೂನಿಕ್‌ ನಗರದಿಂದ ಸವಿತಾ ಅವರು ಕಾರ್ಯಕ್ರಮ ನಿರೂಪಿಸಿ, ಭಟ್ಟರ ಬಾಲ್ಯ, ವ್ಯಾಸಂಗ, ಕವನ, ವೃತ್ತಿ ಹೀಗೆ ಅವರ ಜೀವನದ ಮಜಲುಗಳನ್ನು ವಿವರಿಸುತ್ತಾ ಕಾರ್ಯಕ್ರಮದ ಚುಕ್ಕಾಣಿ ಹಿಡಿದು ಮುನ್ನಡಿಸಿದರು.

“ಹೆಣ್ಣಾರು ಗಂಡೊಂದು’ ಎಂಬಂತೆ ಹೆಣ್ಣು  ಸಂಸಾರದಲ್ಲಿ ಅದೆಷ್ಟೇ ನೋವು ಅಪಮಾನವಿದ್ದರೂ  ಸಹಿಸಿ ಗಂಡನ ದುಂದುವೆಚ್ಚಕ್ಕೆ ಕತ್ತರಿ ಹಾಕಿ ಸಂಸಾರದ ದೋಣಿ ಸುಗಮವಾಗಿ ಸಾಗಲು ಹೆಂಡತಿಯೇ ಕಾರಣೀಭೂತಳು ಎಂದು ಸೊಗಸಾಗಿ ಮೂಡಿದ  “ಹೆಂಡತಿಯೆಂದರೆ ಖಂಡಿತಾ ಅಲ್ಲ ದಿನವೂ ಕೊರೆಯುವ ಬೈರಿಗೆ ಭಂಡರು ಯಾರೋ ಆಡಿದ ಮಾತಿಗೆ ಬೈದವರುಂಟೆ ದೇವಿಗೆ’  ಎಂಬ ಕವನವನ್ನು ಫ್ರಾಂಕ್‌ಫ‌ರ್ಟ್‌ ನಿಂದ ಶೋಭಾ ಲೋಕೇಶ್‌ ಅವರು ವಾಚಿಸಿದರೆ,  ಪ್ರಕೃತಿಯ ವಿಸ್ಮಯದೊಂದಿಗೆ ಅಧ್ಯಾತ್ಮದೆಡೆಗೆ ಕರೆದೊಯ್ಯುವ ಈ ಬಾನು, ಈ ಚುಕ್ಕಿ, ಈ ಹೂವು, ಈ ಹಕ್ಕಿ ಹಾಡನ್ನು ಡ್ರೆಸ್ಡನ್‌ನಿಂದ  ಲಕ್ಷ್ಮೀ ಅವರು ಮಧುರವಾಗಿ ಎಲ್ಲರ ಮನ ಮುಟ್ಟಿಸಿದರು.

ಬರ್ಲಿನ್‌ನಿಂದ ಶ್ವೇತಾ, “ನಿನ್ನ ನೀತಿ ಅದಾವ ದೇವರಿಗೆ ಪ್ರೀತಿಯೋ’ ಹಾಗೂ “ಯಾರು ಜೀವವೇ ಯಾರು ಬಂದವರು ಭಾವನೆಗಳನೇರಿ’ ಎಂಬ ಕವನಗಳನ್ನು ವಾಚಿಸಿದರು. ಸ್ಟುಟ್‌ಗಾರ್ಟ್‌ನಿಂದ ಚಿರಂತ್‌ ಅವರು ಭಟ್ಟರು ಭಾವಾನುವಾದ ಮಾಡಿರುವ “ಸಾರೆ ಜಾಹಾನ್‌ ಸೇ ಅಚ್ಚಾ ದ’ “ಈ ನಮ್ಮ ತಾಯ್ನಾಡು ನಿರುಪಮ ಲಾವಣ್ಯದ ಬೀಡು’ ಎಂಬ ಕನ್ನಡದ ಸಾಲುಗಳನ್ನು ಹೇಳಿದರು.

ಹ್ಯಾಂಬರ್ಗ್‌ನಿಂದ ಕಮಲಾಕ್ಷ ಅವರು “ಎಲ್ಲಿ ಅರಿವಿಗೆ ಇರದೋ ಬೇಲಿ’ ಹಾಗೂ ಷೇಕ್ಸ್ ಪಿಯರ್‌ ಅವರ shall I compare thee to a sommer’s day ? ಎಂಬ ಕವನದ ಭಾವಾನುವಾದ “ಎದೆಯ ಬಯಲಲ್ಲಿ ಭಾವಗಳ ಭಿತ್ತಿ ಬೆಳೆದ ಮಾಂತ್ರಿಕ’ ಎಂಬ ಕವನಗಳನ್ನು ಭಾವ ಪೂರ್ಣವಾಗಿ ಸಾದರ ಪಡಿಸಿದರು.

ಪುಟಾಣಿಗಳಾದ ಸ್ನಿಗ್ಧ ಹಾಗೂ ಅದ್ವೈತ್‌  ಮಕ್ಕಳ ಹಾಡುಗಳನ್ನು ಹಾಡಿ ಭಟ್ಟರಿಗೆ ಭಾವನಮನ ಕಾರ್ಯಕ್ರಮವನ್ನು ಪರಿಪೂರ್ಣಗೊಳಿಸಿದರು.

 

– ಶೋಬಾ ಚೌಹಾನ್‌,  ಫಾಂಕ್‌ಫ‌ರ್ಟ್‌

ಟಾಪ್ ನ್ಯೂಸ್

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು

ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

1-C-brijesh

Dakshina Kannada; ಕ್ಯಾಪ್ಟನ್‌ ಬ್ರಿಜೇಶ್‌ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

1-JP-H

Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.