Udayavni Special

ಸಂಪೂರ್ಣ ಕೋವಿಡ್‌ ಲಸಿಕೆ ಪಡೆದ ಯಾತ್ರಿಕರು …ಕತಾರ್‌ನಲ್ಲಿ ವಿಶ್ವದ ಮೊದಲ ವಿಮಾನ ಹಾರಾಟ

Team Udayavani, Apr 21, 2021, 6:41 PM IST

Pilgrims who received the full covid vaccine

ಕತಾರ್‌ ಏರ್‌ವೇಸ್‌ ಅಂತಾರಾಷ್ಟ್ರೀಯ ವಿಮಾನ ಸಂಚಾರವನ್ನು  ಪ್ರಾರಂಭಿಸಲು ಮುಂದಾಗಿದೆ. ಈ ಪ್ರಯುಕ್ತ ಎ. 6ರಂದು ವಿಶ್ವದ ಮೊದಲ ಸಂಪೂರ್ಣ ಕೋವಿಡ್‌- 19 ಲಸಿಕೆ ಪಡೆದವರಿಗಾಗಿ ವಿಮಾನಯಾನ ಸೌಲಭ್ಯವನ್ನು ಕಲ್ಪಿಸಿತ್ತು.

ಪ್ರಾಯೋಗಿಕವಾಗಿ ಕ್ಕಿ6421 ವಿಮಾನವು ಬೆಳಗ್ಗೆ 11 ಗಂಟೆಗೆ ಹಮದ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಿರ್ಗಮಿಸಿದೆ. ಇದರಲ್ಲಿ ಕೇವಲ ಲಸಿಕೆ ಹಾಕಿದ ಸಿಬಂದಿ ಮತ್ತು ಪ್ರಯಾಣಿಕರನ್ನು ಮಾತ್ರ ವಿಮಾನದಲ್ಲಿ ಕರೆದೊಯ್ಯಲಾಯಿತು. ತಪಾಸಣೆ ವೇಳೆಯಲ್ಲೂ ಸಂಪೂರ್ಣ ಲಸಿಕೆ ಹಾಕಿದ ಸಿಬಂದಿಯಷ್ಟೇ ಸೇವೆ ಸಲ್ಲಿಸಿದರು. ಅಪರಾಹ್ನ 2 ಗಂಟೆಗೆ ದೋಹಾಕ್ಕೆ ಈ ವಿಮಾನ ಹಿಂತಿರುಗಿದೆ.

ಈ ವಿಶೇಷ ವಿಮಾನವು ವಿಮಾನಯಾನದಲ್ಲಿ ಸುರಕ್ಷೆ ಮತ್ತು ನೈರ್ಮಲ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದೆ. ಇದರಲ್ಲಿ ಇತ್ತೀಚಿನ ಸಂಶೋಧನೆಯಾದ “ದಿ ವರ್ಲ್ಡ್ ಫ‌ಸ್ಟ್‌ ಜೀರೋ ಟಚ್‌’ ವಿಮಾನದಲ್ಲಿ ಮನರಂಜನ ತಂತ್ರಜಾnನವೂ ಸೇರಿದೆ. ಈ ಏರ್‌ಲೈನ್ಸ್‌ನಲ್ಲಿ ಏರ್‌ಬಸ್‌ ಎ350- 1000ನಲ್ಲಿ ವಿಶೇಷ ಸೌಲಭ್ಯಗಳನ್ನು ನೂತನ ಸುಧಾರಿತ ತಂತ್ರಜಾnನವನ್ನು ಬಳಸಿ ಮಾಡಲಾಗುತ್ತಿದೆ. ಅಲ್ಲದೇ ವಿಮಾನ ನಿಲ್ದಾಣದ ಪರಿಸರವು ಇಂಗಾಲವನ್ನು ಸಂಪೂರ್ಣವಾಗಿ ತೊಡೆದುಹಾಕಿ ಪರಿಸರವನ್ನು ಶುದ್ಧೀಕರಿಸುವ ವ್ಯವಸ್ಥೆಯನ್ನು ಒಳಗೊಂಡಿದೆ.

ಅಂತಾರಾಷ್ಟ್ರೀಯ ವಿಮಾನ ಸಂಚಾರ ಸೌಲಭ್ಯದಲ್ಲಿ ಚೇತರಿಕೆ ಉಂಟು ಮಾಡಲು ವಿಶೇಷ ವಿಮಾನ ಇಂದಿನ ಅಗತ್ಯವಾಗಿದೆ.

ಸಂಪೂರ್ಣ ಲಸಿಕೆ ಹಾಕಿದ ಸಿಬಂದಿ ಮತ್ತು ಪ್ರಯಾಣಿಕರೊಂದಿಗೆ ಮೊದಲ ವಿಮಾನ ಸಂಚಾರವನ್ನು ಆರಂಭಿಸುವ ಮೂಲಕ ಅಂತಾರಾಷ್ಟ್ರೀಯ ವಾಯುಯಾನ ಭವಿಷ್ಯಕ್ಕೆ ಭರವಸೆ ಸಿಕ್ಕಿದಂತಾಗಿದೆ. ಜಾಗತಿಕವಾಗಿ ಮತ್ತು ಕತಾರ್‌ ರಾಜ್ಯದಲ್ಲಿ ವಾಯುಯಾನವು ದೇಶದ ಆರ್ಥಿಕತೆಯಲ್ಲಿ ನಿರ್ಣಾಯಕ ಪಾತ್ರವಹಿಸುವುದರಿಂದ ಸಿಬಂದಿಗೆ ಲಸಿಕೆ ನೀಡಲು ಸರಕಾರ ಮತ್ತು ಸ್ಥಳೀಯ ಆರೋಗ್ಯ ಪ್ರಾಧಿಕಾರಗಳಿಂದ ಸಿಕ್ಕಿದ ಬೆಂಬಲದಿಂದ ಇದು ಸಾಧ್ಯವಾಯಿತು. ದಿನಕ್ಕೆ ಸಾವಿರಕ್ಕೂ ಹೆಚ್ಚು ಕೋವಿಡ್‌ ವಾಕ್ಸೀನ್‌ಗಳನ್ನು ನೀಡಲಾಗುತ್ತಿದೆ ಎಂದು ಕತಾರ್‌ ಏರ್‌ವೇಸ್‌  ಗ್ರೂಪ್‌ನ ಮುಖ್ಯ ಕಾರ್ಯನಿರ್ವಾಹಕ ಅಕºರ್‌ ಅಲ್‌ ಬೇಕರ್‌ ತಿಳಿಸಿದ್ದಾರೆ.

ಸುರಕ್ಷತೆ, ಗ್ರಾಹಕ ಸೇವೆಯ ಗುಣಮಟ್ಟದಲ್ಲಿ  ಕತಾರ್‌ ಏರ್‌ವೇಸ್‌ ಮುಂಚೂಣಿಯಲ್ಲಿದೆ. ಕೋವಿಡ್‌ ಸಾಂಕ್ರಾಮಿಕ ಹರಡುವ ಮೊದಲು ಕತಾರ್‌ ಏರ್‌ವೇಸ್‌ ಐದು ಬಾರಿ ವರ್ಷದ ಸ್ಕೈಟ್ರಾಕ್ಸ್‌ ವಿಮಾನಯಾನವನ್ನು ಪಡೆದ ಮೊದಲ ಮತ್ತು ಏಕೈಕ ವಿಮಾನಯಾನ ಸಂಸ್ಥೆಯಾಗಿದೆ.

ಕಳೆದ ವರ್ಷ ಎಪ್ರಿಲ್‌ ಆರಂಭದಲ್ಲಿ ಸಾಂಕ್ರಾಮಿಕ ರೋಗವು ಹೆಚ್ಚಳವಾದಾಗ ಲಕ್ಷಾಂತರ ಪ್ರಯಾಣಿಕರನ್ನು ವಾಪಸಾಗಿಸಲು ಮತ್ತು ಅಗತ್ಯ ವೈದ್ಯಕೀಯ ಸಾಮಗ್ರಿಗಳನ್ನು ಸಾಗಿಸಲು ವಿಮಾನ ಹಾರಾಟವನ್ನು ಮಾಡಿತ್ತು. ಅಲ್ಲದೇ ಸುರಕ್ಷತೆ ಮತ್ತು ನೈರ್ಮಲ್ಯದ ಇತ್ತೀಚಿನ ಆವಿಷ್ಕಾರಗಳನ್ನೂ ಕಾರ್ಯಗತಗೊಳಿಸಿದೆ. ಲಸಿಕೆ ಹಂಚಿಕೆ ವಿಶ್ವದಾದ್ಯಂತ ವೇಗ ಪಡೆದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಕತಾರ್‌ ಏರ್‌ವೇಸ್‌ ಪ್ರಯಾಣಿಕರು, ಪ್ರಯಾಣ ಪಾಲುದಾರರು, ಕುಟುಂಬ ಮತ್ತು ಸ್ನೇಹಿತರನ್ನು ಒಂದುಗೂಡಿಸಿ ಅಗತ್ಯ ಸಂಪರ್ಕ ಒದಗಿಸಲು ಅತಿದೊಡ್ಡ ಜಾಗತಿಕ ನೆಟ್‌ವರ್ಕ್‌ ಆಗಿ ಕಾರ್ಯ ನಿರ್ವಹಿಸುತ್ತಿದೆ.

ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ಕತಾರ್‌ ಏರ್‌ವೇಸ್‌ 5 ಲಕ್ಷಕ್ಕಿಂತಲೂ ಹೆಚ್ಚಿನ ವೈದ್ಯಕೀಯ ಸಾಮಗ್ರಿಗಳ ಸರಬರಾಜು, 20 ದೇಶಗಳಿಗೆ 2 ಕೋಟಿ ಡೋಸ್‌ ಕೋವಿಡ್‌- 19 ಲಸಿಕೆಗಳನ್ನು ತಲುಪಿಸಿದೆ ಎಂದರು.

ಸಂಪೂರ್ಣ ಸುರಕ್ಷೆ

ಕತಾರ್‌ ಏರ್‌ವೇಸ್‌ನಿಂದ ಸಂಪೂರ್ಣ ಲಸಿಕೆ ಹಾಕಿದ ಪ್ರಯಾಣಿಕರು ಮತ್ತು ಸಿಬಂದಿ ವಿಶ್ವದ ಮೊದಲ ಹಾರಾಟದ ಭಾಗವಾಗಿರುವುದು ಸಂತೋಷ ಹಾಗೂ ಗೌರವದ ವಿಷಯ. ಅಲ್ಲಿ ಸಂಪೂರ್ಣ ಲಸಿಕೆ ಹಾಕಿದ ಸಿಬಂದಿಯೊಂದಿಗೆ ಚೆಕ್‌ ಇನ್‌ ನಲ್ಲಿ ಸ್ವಾಗತ ದೊರೆಯಿತು. ಕೋವಿಡ್‌ ಪ್ರೋಟೋಕಾಲ್‌ ಅನ್ನು ಸಂಪೂರ್ಣ ಸುರಕ್ಷೆ ಯೊಂದಿಗೆ ಅಂತಾರಾಷ್ಟ್ರೀಯ ವಿಮಾನಯಾನದಲ್ಲಿ ನಿರ್ವಹಿಸಬಹುದು ಎಂಬುದನ್ನು ಕತಾರ್‌ ಏರ್‌ವೇಸ್‌ ಜಗತ್ತಿಗೆ ತೋರಿಸಿಕೊಟ್ಟಿದೆ. ಇದು ಮುಂದಿನ ಪ್ರಯಾಣ ಯಾವ ರೀತಿ ಇರುತ್ತದೆ ಎನ್ನುವುದಕ್ಕೆ ಮಾದರಿಯಾಗಿದೆ.

ಸುಬ್ರಹ್ಮಣ್ಯ ಹೆಬ್ಟಾಗಿಲು, ಉಪಾಧ್ಯಕ್ಷರು, ಐಸಿಸಿ

ಟಾಪ್ ನ್ಯೂಸ್

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಪ್ರತಿ ವ್ಯಕ್ತಿಯ ಮಾಹಿತಿ ನೀಡಲು ಗೌರವ್‌ ಗುಪ್ತ ಸೂಚನೆ

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಪ್ರತಿ ವ್ಯಕ್ತಿಯ ಮಾಹಿತಿ ನೀಡಲು ಗೌರವ್‌ ಗುಪ್ತ ಸೂಚನೆ

serum institute ceo adar poonawalla to invest over usd 300 million in uk may make inoculations

ಬ್ರಿಟನ್ ನಲ್ಲಿ 300 ಮಿಲಿಯನ್ ಡಾಲರ್ ಹೂಡಿಕೆ ಮಾಡಲಿದೆ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ!

ಉಡುಪಿ: ಮೆಡಿಕಲ್ ಶಾಪ್ ಬಂದ್ ಮಾಡುವ ವೇಳೆಯಲ್ಲಿ ಬಂದ ಗ್ರಾಹಕರಿಂದ ಮಾಲಕನ ಮೇಲೆ ಹಲ್ಲೆ

ಉಡುಪಿ: ಮೆಡಿಕಲ್ ಶಾಪ್ ಬಂದ್ ಮಾಡುವ ವೇಳೆಯಲ್ಲಿ ಬಂದ ಗ್ರಾಹಕರಿಂದ ಮಾಲಕನ ಮೇಲೆ ಹಲ್ಲೆ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 341 ಅಂಕ ಕುಸಿತ, 14,900ರ ಗಡಿ ತಲುಪಿದ ನಿಫ್ಟಿ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 341 ಅಂಕ ಕುಸಿತ, 14,900ರ ಗಡಿ ತಲುಪಿದ ನಿಫ್ಟಿ

2 ಕೋಟಿ ಕೋವಿಡ್ ಲಸಿಕೆಗೆ ಜಾಗತಿಕ ಟೆಂಡರ್: ಡಿಸಿಎಂ ಅಶ್ವತ್ಥನಾರಾಯಣ

2 ಕೋಟಿ ಕೋವಿಡ್ ಲಸಿಕೆಗೆ ಜಾಗತಿಕ ಟೆಂಡರ್: ಡಿಸಿಎಂ ಅಶ್ವತ್ಥನಾರಾಯಣ

Three Ganja Suppliers arrested by police in Hubballi

ಗಾಂಜಾ ಸಾಗಾಟದಲ್ಲಿ ತೊಡಗಿದ್ದ ಮೂವರ ಬಂಧನ

ಕೋವಿಡ್ ರಣಕೇಕೆ: ಬಿಹಾರ ಆಯ್ತು…ಇಂದು ಉತ್ತರಪ್ರದೇಶದ ಗಂಗಾನದಿ ತೀರದಲ್ಲಿ ಶವಗಳು ಪತ್ತೆ

ಕೋವಿಡ್ ರಣಕೇಕೆ: ಬಿಹಾರ ಆಯ್ತು…ಇಂದು ಉತ್ತರಪ್ರದೇಶದ ಗಂಗಾನದಿ ತೀರದಲ್ಲಿ ಶವಗಳು ಪತ್ತೆ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Watch: Varanasi Cop Helping Thirsty Dog Drink Water Wins Hearts On Internet

ಕರ್ತವ್ಯ ನಿರತ ಪೊಲೀಸ್ ಪೇದೆಯೊಬ್ಬರ ಪ್ರಾಣಿ ಪ್ರೀತಿಗೆ ಭಾರಿ ಮೆಚ್ಚುಗೆ..!

‘ಒಂದು ಬಾಗಿಲು ಮತ್ತು ಮೂರು ಚಿಲ್ಲರೆ ವರ್ಷಗಳು’ ಹೆಣ್ಣೆದೆಯ ಅಂತರಂಗ

9-3-1

 ಪುಸ್ತಕ ವಿಮರ್ಶೆ :  ‘ಇಜಯಾ’ಎಂಬ ಹೊಸ ಧ್ವನಿ

Pilgrim Yates dreams

ಯಾತ್ರಿಕನ  ಯೇಟ್ಸ್‌  ಕನಸುಗಳು

“ಅಧ್ಯಯನ ವಿಶಾರದ’ ಡಾ|ಗುಂಡ್ಮಿ ಭಾಸ್ಕರ ಮಯ್ಯ

“ಅಧ್ಯಯನ ವಿಶಾರದ’ ಡಾ|ಗುಂಡ್ಮಿ ಭಾಸ್ಕರ ಮಯ್ಯ

MUST WATCH

udayavani youtube

ರಸ್ತೆ ಮಧ್ಯ ಉರುಳಿ ಬಿದ್ದ ಪಿಕ್ಅಪ್ ವಾಹನವನ್ನು ಎಳೆದು ನಿಲ್ಲಿಸಿದ ಸ್ಥಳೀಯ ಆಫ್ ರೋಡರ್ ಟೀಮ್

udayavani youtube

Vaccine ಆಗ ಯಾರಿಗೂ ಬೇಡವಾಗಿತ್ತು

udayavani youtube

ಸರ್ಕಾರ ಪ್ರತಿ ಬಡ ಕುಟುಂಬಕ್ಕೆ 10 ಸಾವಿರ ನೀಡಬೇಕು : ಡಿಕೆಶಿ

udayavani youtube

ಬೆಂಗಳೂರಿಗೆ ಬಂತು 120 ಟನ್ ಪ್ರಾಣವಾಯು

udayavani youtube

ನವಮಂಗಳೂರು ಬಂದರಿಗೆ ಆಗಮಿಸಿದ ಮೆಡಿಕಲ್ ಆಕ್ಸಿಜನ್ ಹೊತ್ತ ಕುವೈತ್ ಹಡಗು

ಹೊಸ ಸೇರ್ಪಡೆ

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಪ್ರತಿ ವ್ಯಕ್ತಿಯ ಮಾಹಿತಿ ನೀಡಲು ಗೌರವ್‌ ಗುಪ್ತ ಸೂಚನೆ

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಪ್ರತಿ ವ್ಯಕ್ತಿಯ ಮಾಹಿತಿ ನೀಡಲು ಗೌರವ್‌ ಗುಪ್ತ ಸೂಚನೆ

serum institute ceo adar poonawalla to invest over usd 300 million in uk may make inoculations

ಬ್ರಿಟನ್ ನಲ್ಲಿ 300 ಮಿಲಿಯನ್ ಡಾಲರ್ ಹೂಡಿಕೆ ಮಾಡಲಿದೆ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ!

ಉಡುಪಿ: ಮೆಡಿಕಲ್ ಶಾಪ್ ಬಂದ್ ಮಾಡುವ ವೇಳೆಯಲ್ಲಿ ಬಂದ ಗ್ರಾಹಕರಿಂದ ಮಾಲಕನ ಮೇಲೆ ಹಲ್ಲೆ

ಉಡುಪಿ: ಮೆಡಿಕಲ್ ಶಾಪ್ ಬಂದ್ ಮಾಡುವ ವೇಳೆಯಲ್ಲಿ ಬಂದ ಗ್ರಾಹಕರಿಂದ ಮಾಲಕನ ಮೇಲೆ ಹಲ್ಲೆ

11-4

ಆಯಸ್ಕಾಂತೀಯ ವಲಯಗಳಲ್ಲಿ ಸಂಚರಿಸುತ್ತವೆ ಶಾರ್ಕ್ ಮೀನುಗಳು..!

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 341 ಅಂಕ ಕುಸಿತ, 14,900ರ ಗಡಿ ತಲುಪಿದ ನಿಫ್ಟಿ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 341 ಅಂಕ ಕುಸಿತ, 14,900ರ ಗಡಿ ತಲುಪಿದ ನಿಫ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.