Udayavni Special

ರಾಜಾಹುಲಿ ದರ್ಬಾರ್‌, ಹೆಡ್‌ಮಾಸ್ಟ್ರೆ ಅಮಿತ್‌ ಸಾ ಕಂಟ್ರೋಲ್..


Team Udayavani, Sep 15, 2019, 5:47 AM IST

as-25

ಅಮಾಸೆ:ನಮ್‌ಸ್ಕಾರ ಸಾ…

ಚೇರ್ಮನ್ರು: ಏನ್ಲಾ ಅಮಾಸೆ ಸಮಾಚಾರ್‌

ಅಮಾಸೆ:ಕಮ್ಲ ಸರ್ಕಾರ್‌, ರಾಜಾಹುಲಿ ದರ್ಬಾರ್‌, ಮೋದಿ-ಅಮಿತ್‌ ಸಾ ಕಂಟ್ರೋಲ್ ಸರ್‌

ಚೇರ್ಮನ್ರು: ಏನ್ಲಾ ಅಂಗಂದ್ರೆ

ಅಮಾಸೆ: ಯಡ್ಯೂರಪ್ನೋರು ಸಿಎಂ ಅಷ್ಟೇಯಾ, ಏನ್‌ ಮಾಡ್‌ಬೇಕಾದ್ರೂ ಡೆಲ್ಲಿಸೆ ಸಿಗ್ನಲ್ ಬರ್ಬೇಕು

ಚೇರ್ಮನ್ರು:ಅಂಗಾರೆ ರಾಜಾಹುಲಿ ಸೈಲಂಟಾ

ಅಮಾಸೆ: ಒಂತರಾ ಅಂಗೇಯ ಅನ್ನಿ. ಹೇಳಂಗಿಲ್ಲ, ಅನುಭವಸಂಗಿಲ್ಲ. ಆದ್ರೂ ಸಿಎಂ

ಚೇರ್ಮನ್ರು: ಮುಂಬೈ ಬಾಯ್ಸ ಡಿಸ್‌ಕ್ವಾಲಿಫೈ ಎಂಎಲ್ಎಗ್ಳು ಏನಾಗವ್ರೆ ಕಣ್ಲಾ

ಅಮಾಸೆ:ಅಯ್ಯೋ ಅವ್ರ್ ಕತೆ ಯಾಕ್‌ ಕೇಳೀರಿ. ವತ್ತಾರೆ ಎದ್ರೆ ಯಡ್ಯೂರಪ್ನೋರು, ಇಲ್ಲಾಂದ್ರೆ ಡಿಸಿಎಂ ಆಸ್ವತ್ಥಣ್ಣೋರು ಹತ್ರ ಹೋಗಿ ಹಾಯ್‌ ಬಾಯ್‌, ಏನ್‌ ನಮ್‌ ಕತೆ ಅಂತ ಕೇಳ್ಳೋದೆ ಆಗೈತೆ

ಚೇರ್ಮನ್ರು: ಕುಮಾರಣ್ಣೋರು ಏನ್ಲಾ ಫೋರ್‌ ಮಂತ್ಸ್ ಅಷ್ಟೇ ಯಡ್ಯೂರಪ್ನೋರ್‌ ಗೌರ್ನ್ಮೆಂಟ್ ಅಂತಾ ಹೇಳವ್ರೆ

ಅಮಾಸೆ: ದೊಡ್‌ಗೌಡ್ರು ಅಂಗೇ ಹೇಳವ್ರೆ. ಸೆಂಟ್ರಲ್ ಬಿಜೆಪಿ ಲೀಡ್ರುಗ್ಳು ಪಸರ್‌ ಕೊಟ್ಟವ್ರಂತೆ. ಹಮ್‌ ಬೈ ಎಲೆಕ್ಸನ್‌ ನಹಿ ಜಾಯೇಂಗೆ, ಡೈರೆಕ್ಟ್ ಎಲೆಕ್ಸನ್‌ ಜಾಯೆಂಗೆ ಅಂತ ಹೇಳವ್ರಂತೆ. ಒಂದಪಾ, ಬೈ ಎಲೆಕ್ಸನ್‌ ಹೋದ್ರು ಮಿನಿಮಮ್‌ ಫಿಪ್ಟೀನ್‌ ಗೆಲ್ಬೇಕು, ಕಮ್ಲ ಪಕ್ಸ ಕೈಲಿ ಆಗಾಕಿಲ್ಲ, ಆಗ ಎಲೆಕ್ಸನ್‌ ಬತ್ತದೆ ಅನ್ನೋದು ತೆನೆ ಪಕ್ಸ ಪಿಲಾನು

ಚೇರ್ಮನ್ರು: ಕಮ್ಲ-ತೆನೆ ಪಕ್ಸ ಕೂಡ್ಕೆ ಮಾಡ್ಕಂಡು ಗೌರ್ನ್ಮೆಂಟ್ ಮಾಡ್‌ಬೋದಲ್ಲಾ

ಅಮಾಸೆ: ಈಗೆಲ್ಲಾ ಅದೆಲ್ಲಾ ಆಗಾಕಿಲ್ಲ. ಡಿ.ಕೆ.ಸಿವ್‌ಕುಮಾರಣ್ಣೋರ್‌ ಮ್ಯಾಗೆ ಕಮ್ಲ ಪಕ್ಸ್‌ದೋರು ಇಡಿ, ಸಿಬಿಐ ಅಸ್ತ್ರ ಬಿಟ್ಟಿರೋದ್ಕೆ ದೊಡ್‌ಗೌಡ್ರು ಶಾನೆ ಬೇಸ್ರ ಆಗವ್ರಂತೆ, ಕುಮಾರಣ್ಣೋರು, ಕಮ್ಲ ಪಕ್ಸ ಲೀಡ್ರುಗ್ಳ ಮ್ಯಾಗೆ ಅಲಿಗೇಸನ್‌ ಮಾಡವ್ರೆ.

ಚೇರ್ಮನ್ರು: ರಾಜ್‌ಕೀಯ್‌ದಾಗೆ ಯಾವಾಗ್‌ ಏನಾಯ್ತದೆ ಅಂತ ಯಾರ್‌ಗ್ಲಾ ಗೊತ್ತು ಅಮಾಸೆ. ಕೈ-ತೆನೆ ಒಂದಾಯ್ತದೆ ಅಂತ ನಿಂಗೊತ್ತಿತ್ತಾ

ಅಮಾಸೆ:ಅದೂ ಸರಿ ಅಂತೇಳಿ. ಆದ್ರೂ ಬೈ ಎಲೆಕ್ಸನ್‌ ಡೌಟ್, ಡೈರೆಕ್ಟ್ ಎಲೆಕ್ಸನ್‌ ನಿಕ್ಕಿ ಅಂತಾ ದೊಡ್‌ಗೌಡ್ರು ಹೇಳವ್ರೆ. ಯಾರ್‌ ಏನೇ ಹೇಳಿದ್ರು ನನ್‌ ಪಾರ್ಟಿ ಕಟ್ಟೋದು ನಂಗೊತ್ತದೆ ಅಂತ ಪಾಲ್ಟಿ ಆಪೀಸ್‌ನ್ಯಾಗೆ ಸೀರೀಯಸ್‌ ಮೀಟಿಂಗ್‌ ಮಾಡ್ತಾವ್ರೆ. ನಮ್‌ ಪಕ್ಸಾನಾ ಅಧಿಕಾರ ಹಿಡ್ಸಿ ನಿಮ್ಗೆಲ್ಲಾ ಹೋಳ್ಗೆ ಊಟ ಹಾಕ್ಸಿತೀನಿ ಅಂತಾನೂ ಹೇಳವ್ರೆ

ಚೇರ್ಮನ್ರು: ರೇವಣ್ಣೋರ್‌ ಏನಂತಾರ್ಲಾ

ಅಮಾಸೆ: ರೇವಣ್ಣೋರು ಪೂಜೆ ಮಾಡ್ಸ್‌ಕಂಡು ಇನ್ನೊಂದಪಾ ಕುಮಾರಣ್ಣೋರು ಸಿಎಂ ಆಯ್ತಾರೆ, ನೋಡ್ತಾ ಇರಿ ಆಂತ ಹೇಳಿದ್ರಂತೆ. ಎಲ್ರೂ ಬೇವುಷ್‌ ಆಗಿ, ಅದೆಂಗಾಯ್ತದೆ ಸಾ… ಅಂದ್ರೆ, ಅದೆಲ್ಲಾ ಟ್ರೇಡ್‌ ಸೀಕ್ರೆಟ್ ಹೇಳಕ್ಕಿಲ್ಲಾ, ಆದ್ರೆ ಹನ್ರೆಡ್‌ ಪರ್ಸೆಂಟ್ ಕುಮಾರಣ್ಣೋರು ಸಿಎಂ ಆಗೇ ಆಯ್ತಾರೆ ಅಂತ ಹೊಂಟೋದ್ರಂತೆ

ಚೇರ್ಮನ್ರು: ರೇವಣ್ಣೋರು ಹೇಳಿದ್‌ ಮ್ಯಾಕೆ ಏನಾದ್ರು ಪಸರ್‌ ಇತ್ತದೆ ಬುಡ್ಲಾ. ರೇವಣ್ಣೋರು ಅಂಗೆಲ್ಲಾ ಸುಮ್ಕೆ ಸುಮ್ಕೆ ಹೇಳಾಕಿಲ್ಲ, ದೊಡ್‌ಗೌಡ್ರು ಪಿಲಾನು, ಡೆಲ್ಲಿ ಕಮ್ಲ ಪಕ್ಸ ಗೇಮು ಎಲ್ಲಾನೂ ಅಂಜನ ಹಾಕಿ ಹೇಳಿರ್‌ತಾರೆ

ಅಮಾಸೆ: ಹೌದೇಳಿ, ರೇವಣ್ಣೋರ್‌ ಭವಿಸ್ಯ ಹೇಳಿದ್‌ಮ್ಯಾಕೆ ಏನಾರಾ ಒಂದಾಯ್ತದೆ

ಚೇರ್ಮನ್ರು: ಸನ್‌ ಆಫ್ ರಾಜಾಹುಲಿ ವಿಜಯೇಂದ್ರ ಅವ್ರು ನಾನ್‌ ಎಲ್ಲೂ ಮೂಗ್‌ ತೂರ್ಸಾಕಿಲ್ಲಾ ಅಂತಾ ಯಾಕ್ಲಾ ಹೇಳವ್ರೆ

ಅಮಾಸೆ: ರಾಜಾಹುಲಿ ವಿರೋಧಿ ಗ್ಯಾಂಗ್‌ ಅಮಿತ್‌ ಸಾ ಹೆಡ್‌ಮಾಸ್ಟ್ರಿಗೆ ರಿಪೋರ್ಟ್‌ ಕೊಟ್ಟವ್ರಂತೆ, ಟ್ರಾನ್ಸ್‌ಪರ್‌ ಎಲ್ಲಾ ಹೋಲ್ಸೇಲ್ ಹೋಗಯಾ ಹೈ ಅಂತ. ಅದ್ಕೆ ಅಲ್ಲಿಂದ, ಯೇ ಕ್ಯಾ ಚಲ್ ರಹಾ ಹೈ, ಕ್ಯೂಂ ಫ್ಯಾಮಿಲಿ ಎಂಟ್ರಿಫೇರ್‌ ಅಂತ ಅಮಿತ್‌ ಸಾ ಹೆಡ್‌ಮಾಸ್ಟ್ರೆ ಆವಾಜ್‌ ಹಾಕಿದ್ರಂತೆ. ಅದ್ಕೆ, ವಿಜಯೇಂದ್ರ ಅಣ್ಣೋರು ನಾನಾಯ್ತು, ಮೈಸೂರಾಯ್ರು ಸಿವಾ, ಸುಮ್ಕೆ ಸುಮ್ಕೆ ನನ್‌ ಮ್ಯಾಗೆ ಕಂಪ್ಲೇಂಟ್ ಕೊಟ್ಟವ್ರೆ ಅಂತ ಹೇಳಿದ್ರಂತೆ

ಚೇರ್ಮನ್ರು: ಜಿ.ಟಿ.ದ್ಯಾವೇಗೌಡ್ರು, ಗುಬ್ಬಿ ಸೀನಣ್ಣೋರು ಯಾಕ್ಲಾ ಕುಮಾರಣ್ಣೋರ್‌ ಮ್ಯಾಲೆ ಅಲಿಗೇಸನ್‌ ಮಾಡವ್ರೆ

ಅಮಾಸೆ: ಇಬ್ರೂ ಒಂದ್‌ ರೌಂಡ್‌ ಹಳ್ಳಿಹಕ್ಕಿ ಜತ್ಗೆ ರಾಜಾಹುಲಿ ತಾವಾ ಹೋಗಿ ಮಾತಾಡವ್ರಂತೆ. ಅದ್ಕೆ ಗ್ರೌಂಡ್‌ ಪ್ರಿಪೇರ್‌ ಮಾಡ್ತಾವ್ರಂತೆ. ಇನ್ನೂ ಐದಾರ್‌ ಎಂಎಲ್ಎಗ್ಳು ನಾವು ಬತ್ತೀವಿ ಅಂತಾ ಹೇಳವ್ರಂತೆ. ಡೆಲ್ಲಿ ಕಮ್ಲ ಪಕ್ಸ್‌ದೋರು ಚುಪ್ಕೆ ಬೈಟೋ ಆಬ್‌ ನಹಿ ಚಾಹಿಯೇ ಅಂತ ಹೇಳವ್ರಂತೆ.

ಚೇರ್ಮನ್ರು: ಅದೂ ಸರೀನೆ ಹೇಳಿ, ಈಗ್‌ ಬಂದೋರೆ ಬೆಂಗ್ಳೂರ್‌ ಟು ಡೆಲ್ಲಿ ಟ್ರಾವೆಲ್ ಮಾಡ್ಕಂಡ್‌ ಕುಂತವ್ರೆ, ಇರೋ ಬರೋರ್ನೆಲ್ಲಾ ಕರ್ಕಂಡು ಅವ್ರ್ ತಾನೆ ಏನ್‌ ಮಾಡ್ತಾರೆ

ಅಮಾಸೆ: ಹೌದೇಳಿ. ಇರೋಗಂಟ ಕುಮಾರಣ್ಣೋರ್ಗೆ ಜೈ, ಗೌಡ್ರೆ ನಮ್‌ ದ್ಯಾವ್ರು ಅಂತೇಳಿ, ಈಗ ಫ್ಯಾಮಿಲಿ ಪಾಲಿಟಿಕ್ಸ್‌ ಅಂತ ಜೈ ಹೇಳ್ತಾವ್ರೆ ನೋಡುಮಾ ಏನೇನಾಯ್ತದೆ ಅಂತ. ನನ್‌ ಹೆಂಡ್ರು ಕುರಿ ಬೋಟಿ ತತ್ತಾ ಅಂತ ಹೇಳವ್ಲೆ ಬತ್ತೀನಾ ಸಾ…

ಡಿಸ್‌ಕ್ವಾಲಿಫೈ ಎಂಎಲ್ಎಗ್ಳು ಡಿಸಿಎಂ ಅಸ್ವತ್ಥಣ್ಣೋರ್‌ ಹತ್ರ ಹೋಗಿದ್ರಂತೆ. ನಿಮ್ದು ಕ್ಲಿಯರ್‌ ಆದೇಟ್ಗೆ ಮಿನಿಸ್ಟರ್‌ ಪಕ್ಕಾ ಅಂದ್ರಂತೆ ಅಸ್ವತ್ಥಣ್ಣೋರು, ಅದ್ಕೆ ಕೌರವ ಬಿ.ಸಿ.ಪಾಟೀಲ್ರು, ಅಂಗೇ ಹೇಳ್ಕಂಡ್‌ ನಮ್ಗೆ ದೇವ್ರು ಹೂ ಕೊಟ್ಟಂಗ್‌ ಕೊಡ್ತಿದ್ರಿ. ನಾವ್‌ ರಿಸೈನ್‌ ಮಾಡಿದ್ಮೇಕೆ ನೀವ್‌ ಡಿಸಿಎಂ ಆದ್ರಿ. ನಮ್ಗೆ ಪವರ್ರು ಇಲ್ಲ, ಬ್ಯಾಲೆನ್ಸೂ ಇಲ್ಲ. ಎಂಎಲ್ಎ ಶಿಪ್‌ ಕಳ್ಕಂಡು ವತ್ತಾರೆ ಎದ್ರೆ ಸುಪ್ರೀಂಕೋರ್ಟ್‌ ಕಡೆ ಮುಖ ಮಾಡಿ ಚುರ್‌ಮುರಿ ತಿನ್ನೋಂಗಾಗದೆ ಅಂತ ವರಾತಾ ತೆಗೆದ್ರಂತೆ. ಅತ್ಲಾಗೆ ಹಳ್ಳಿಹಕ್ಕಿನೂ ಇಷ್ಟ್ ಲೇಟಾಗೋಯ್ತಲಾ ಅಂತ ಗುಯ್‌ಗಾಟ್ತದಂತೆ. ಪ್ರತಾಪ್‌ಗೌಡ ಪಾಟೀಲ್ರು, ಕೋರ್ಟ್‌ನ್ಯಾಗೆ ಬೇಗಾ ಫೈಸ್ಲ್ ಆಯ್ತದೆ ಅಂದ್‌ಕಂಡಿದ್ವು ಇನ್ನೂ ಆಗಿಲ್ಲ, ಆದ್ಕೆ ವಸಿ ಟೆನ್ಸನ್‌ ಆಗದೆ ಅಂತ ಹೇಳಿದ್ರಂತೆ. ಒಟ್ನಾಗೆ ರೇಣುಕಣ್ಣೋರು ಹೇಳ್ದಂತೆ ಅವ್ರೆಲ್ಲಾ ಸ್ವಾತಂತ್ರಕ್ಕೋಸ್ಕರ ತ್ಯಾಗ ಮಾಡ್‌ದೋರಾಗವ್ರೆ. ರಮೇಶ್‌ ಸಾವ್‌ಕಾರ್ರು, ಬೇರೆ ಕ್ಯಾಲುಕ್ಲೇಸನ್‌ ಮಾಡ್ತಾವ್ರಂತೆ.

• ಎಸ್‌.ಲಕ್ಷ್ಮಿನಾರಾಯಣ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಶಿವಮೊಗ್ಗ: ಕೋವಿಡ್ ನಿಂದ ಗುಣಮುಖರಾದ ನಾಲ್ವರು ಮೆಗ್ಗಾನ್ ಆಸ್ಪತ್ರೆಯಿಂದ ಬಿಡುಗಡೆ

ಶಿವಮೊಗ್ಗ: ಕೋವಿಡ್ ನಿಂದ ಗುಣಮುಖರಾದ ನಾಲ್ವರು ಮೆಗ್ಗಾನ್ ಆಸ್ಪತ್ರೆಯಿಂದ ಬಿಡುಗಡೆ

ವಾಕಿಂಗ್ ಹೋದವರಿಗೆ ಕಾರು ಡಿಕ್ಕಿ: ಇಬ್ಬರು ಮಹಿಳೆಯರು ಸಾವು, ಓರ್ವ ಮಹಿಳೆ ಗಂಭೀರ

ವಾಕಿಂಗ್ ಹೋದವರಿಗೆ ಕಾರು ಡಿಕ್ಕಿ: ಇಬ್ಬರು ಮಹಿಳೆಯರು ಸಾವು, ಓರ್ವ ಮಹಿಳೆ ಗಂಭೀರ

ಇಂದು ಬೆಂಗಳೂರು ಮಂಗಳೂರು ಮಾತ್ರ ವಿಮಾನ ಸಂಚಾರ! ಮುಂಬೈ, ಚೆನ್ನೈ ಸಂಚಾರ ರದ್ದು

ಇಂದು ಮಂಗಳೂರಿನಿಂದ ಬೆಂಗಳೂರಿಗೆ ಮಾತ್ರ ವಿಮಾನ ಸಂಚಾರ! ಮುಂಬೈ, ಚೆನ್ನೈ ಸಂಚಾರ ರದ್ದು

ಉಡುಪಿ.ಉಚಿತ ಸಿಟಿ ಬಸ್ ಸೇವೆಗೆ ಸಂಸದ ನಳಿನ್ ಕುಮಾರ್ ಕಟೀಲು ಚಾಲನೆ

ಉಡುಪಿ.ಉಚಿತ ಸಿಟಿ ಬಸ್ ಸೇವೆಗೆ ಸಂಸದ ನಳಿನ್ ಕುಮಾರ್ ಕಟೀಲು ಚಾಲನೆ

ಹಾಕಿ ಲೆಜೆಂಡ್, ತ್ರಿವಳಿ ಒಲಿಂಪಿಕ್ ಚಿನ್ನದ ಪದಕವೀರ ಬಲ್ಬೀರ್ ಸಿಂಗ್ ನಿಧನ

ಹಾಕಿ ಲೆಜೆಂಡ್, ತ್ರಿವಳಿ ಒಲಿಂಪಿಕ್ ಚಿನ್ನದ ಪದಕವೀರ ಬಲ್ಬೀರ್ ಸಿಂಗ್ ನಿಧನ

ವಿಜಯಪುರ: ಬೆಂಗಳೂರು ಬಸ್ ಗಳು ಫುಲ್, ಇತರೆ ಕಡೆಗೆ ಡಲ್

ವಿಜಯಪುರ: ಬೆಂಗಳೂರು ಬಸ್ ಗಳು ಫುಲ್, ಇತರೆ ಕಡೆಗೆ ಡಲ್

ಕಲ್ಪತರು ನಾಡು ತುಮಕೂರಿನಲ್ಲಿ ಕೋವಿಡ್ 19 ಗೆ ಮತ್ತೊಂದು ಬಲಿ

ಕಲ್ಪತರು ನಾಡು ತುಮಕೂರಿನಲ್ಲಿ ಕೋವಿಡ್ 19 ಗೆ ಮತ್ತೊಂದು ಬಲಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭ್ರಾತೃತ್ವದ ಸಂದೇಶ ಸಾರುವ ಈದ್‌-ಉಲ್‌-ಫಿತರ್‌

ಭ್ರಾತೃತ್ವದ ಸಂದೇಶ ಸಾರುವ ಈದ್‌-ಉಲ್‌-ಫಿತರ್‌

1981: ಬಜ್ಪೆಯಲ್ಲಿ ತಪ್ಪಿದ್ದ ದುರಂತ

ಮಂಗಳೂರು ವಿಮಾನ ದುರಂತಕ್ಕೆ ಹತ್ತು ವರ್ಷ; 1981ರಲ್ಲಿ ಬಜ್ಪೆಯಲ್ಲಿ ತಪ್ಪಿದ್ದ ದುರಂತ

ಅರ್ಧ ಗಂಟೆ ಮೊದಲು ಮಾತಾಡಿದ್ದರು…

ಮಂಗಳೂರು ವಿಮಾನ ದುರಂತಕ್ಕೆ ಹತ್ತು ವರ್ಷ: ಅರ್ಧ ಗಂಟೆ ಮೊದಲು ಮಾತಾಡಿದ್ದರು…

ಬದುಕುಳಿದ ಎಂಟು ಮಹಾ ಅದೃಷ್ಟಶಾಲಿಗಳು

ಮಂಗಳೂರು ವಿಮಾನ ದುರಂತ@10: ಬದುಕುಳಿದ ಎಂಟು ಮಹಾ ಅದೃಷ್ಟಶಾಲಿಗಳು

ಭಟ್ಕಳದ 8 ಮಂದಿ ನತದೃಷ್ಟರು..

ಮಂಗಳೂರು ವಿಮಾನ ದುರಂತಕ್ಕೆ ಹತ್ತು ವರ್ಷ: ಭಟ್ಕಳದ 8 ಮಂದಿ ನತದೃಷ್ಟರು..

MUST WATCH

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

udayavani youtube

Karnataka : A Farmer who quits Private Job & became Successful in Agriculture

udayavani youtube

MOTHERSDAY ಪ್ರಯುಕ್ತ ನಾಡಿನ ಎಲ್ಲಾ ಅಮ್ಮಂದಿರಿಗೆ ಶುಭಾಶಯವನ್ನು ಕೋರಿದ SHINE SHETTY

ಹೊಸ ಸೇರ್ಪಡೆ

25-May-5

ಲಾಕ್‌ ಡೌನ್‌: ಜಿಲ್ಲೆ ಸಂಪೂರ್ಣ ಸ್ತಬ್ಧ

ಜಿಲ್ಲೆಯಲ್ಲಿ ದೇಶಿ ವಿಮಾನ ಸೇವೆಗೆ ಸಿದ್ಧತೆ

ಜಿಲ್ಲೆಯಲ್ಲಿ ದೇಶಿ ವಿಮಾನ ಸೇವೆಗೆ ಸಿದ್ಧತೆ

25-May-4

ಕ್ವಾರಂಟೈನ್‌ಗೆ ಜನರ ವಿರೋಧ

25-May-3

ನಾಲ್ವರಿಗೆ ಕೋವಿಡ್ -18 ಮಂದಿ ಡಿಸ್ಚಾರ್ಜ್‌

ಮಹಾರಾಷ್ಟ್ರ ರಾಜ್ಯದಲ್ಲಿರುವವರು ನಮ್ಮ ಸಹೋದರರೆ ; ಕಟೀಲ್ 

ಮಹಾರಾಷ್ಟ್ರ ರಾಜ್ಯದಲ್ಲಿರುವವರು ನಮ್ಮ ಸಹೋದರರೆ ; ಕಟೀಲ್ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.