ಅಯ್ಯಪ್ಪ ಮಾಲಾಧಾರಿಗಳ ಕಠಿಣ ವ್ರತ ಹೇಗಿರುತ್ತೆ ಗೊತ್ತಾ?

Team Udayavani, Nov 16, 2019, 6:12 PM IST

ಮಣಿಪಾಲ: ಶಬರಿಮಲೆಯ ಅಯ್ಯಪ್ಪ ಸ್ವಾಮಿ ಮಂದಿರದ ಬಾಗಿಲು ಮತ್ತೆ ತೆರೆಯಲಾಗಿದೆ. ಮಂಡಲ ಪೂಜೆಗಾಗಿ ಬೆಟ್ಟ ಹತ್ತಿ ಬಂದ ಭಕ್ತರಿಗೆ ಇನ್ನೆರಡು ತಿಂಗಳ ಕಾಲ ಶಬರಿ ಗಿರಿ ವಾಸ ದರ್ಶನ ನೀಡುತ್ತಾರೆ.

ಕೇರಳ, ಕರ್ನಾಟಕ,ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ದೇಶದಾದ್ಯಂತ ಲಕ್ಷಾಂತರ ಭಕ್ತರು ಅಯ್ಯಪ್ಪ ಸ್ವಾಮಿ ಆಲಯಕ್ಕೆ ಭೇಟಿ ನೀಡುತ್ತಾರೆ.  ಮಕರ ಸಂಕ್ರಾಂತಿಯ ಮಕರ ಜ್ಯೋತಿ ಸಮಯದಲ್ಲಂತೂ ಭಕ್ತರ ದಂಡೇ ಹರಿದು ಬರಲಿದೆ.

ಕಪ್ಪು ವಸ್ತ್ರ, ಹಣೆಯಲ್ಲಿ ವಿಭೂತಿ, ಕೊರಳಲ್ಲಿ ಮಾಲೆ, ಬರಿಗಾಲ ನಡಿಗೆ.ಇಂತಹ ವ್ರತಧಾರಿಗಳನ್ನು ನೀವು ನೋಡಿರುತ್ತೀರ. ಹಾಗಾದರೆ ಅಯ್ಯಪ್ಪ ಮಾಲಾಧರಿಗಳ ವ್ರತ ಹೇಗಿರುತ್ತದೆ. ಅದು ಎಷ್ಟು ಕಠಿಣ? ಮುಂದೆ ಓದಿ.

* ಅಯ್ಯಪ್ಪ ಸನ್ನಿಧಿಯ ಪವಿತ್ರ 18 ಮೆಟ್ಟಿಲು ಏರಬೇಕಾದರೆ ಭಕ್ತರು ಕಠಿಣ ವ್ರತಾಚರಣೆ ಮಾಡಿ ಇರುಮುಡಿಯನ್ನು ಹೊತ್ತು ಬಂದಿರಬೇಕು. ಇರುಮುಡಿ ಇರದೆ 18 ಮೆಟ್ಟಿಲು ಹತ್ತಲು ಅವಕಾಶವಿಲ್ಲ.

* ಶಬರಿ ಮಲೆಗೆ ಹೋಗುವ ಮೊದಲು ಒಟ್ಟು 48 ದಿನಗಳ ಕಾಲ ವ್ರತ ಮಾಡಬೇಕು. ಇಷ್ಟು ದಿನಗಳಲ್ಲಿ ಅಯ್ಯಪ್ಪ ಧ್ಯಾನವೇ ಮೂಲ ಮಂತ್ರವಾಗಬೇಕು.

*ಬೆಳಿಗ್ಗೆ ಬೇಗ ಎದ್ದು ತಣ್ಣೀರಲ್ಲಿ ಸ್ನಾನ ಮಾಡಬೇಕು. ನಂತರ ಮಡಿ ಬಟ್ಟೆಯನ್ನುಟ್ಚು, ಮೈಗೆಲ್ಲಾ ವಿಭೂತಿ ಬಳಿದು ದೇವರರನ್ನು ಪೂಜಿಸಬೇಕು. ಇಷ್ಟೆಲ್ಲಾ ಸೂರ್ಯೋದಯಕ್ಕೆ ಮೊದಲು ಮುಗಿಯಬೇಕು.

*ಈ ಸಮಯದಲ್ಲಿ ಸಸ್ಯಾಹಾರವನ್ನಷ್ಟೇ ಸೇವಿಸಬೇಕು. ಮಾಂಸ, ಮದ್ಯ ಇತರ ದುಷ್ಚಟಗಳು ನಿಷಿದ್ದ. ಒಂದು ಹೊತ್ತು ಮಾತ್ರ ಊಟ ಮಾಡಿ ಉಳಿದ ಸಮಯ ಉಪವಾಸ ಆಚರಿಸಬೇಕು.

*ಕಪ್ಪು ಅಥವಾ ನೀಲಿ ವಸ್ತ್ರ ತೊಡಬೇಕು. ಕಾಲಿಗೆ ಚಪ್ಪಲಿ ತೊಡುವಂತಿಲ್ಲ. ಹಗಲು ಸಮಯದಲ್ಲಿ ನಿದ್ದೆ ಮಾಡುವಂತಿಲ್ಲ. ಮಾಡಿದರೆ ಸ್ನಾನ ಮಾಡದೇ ಏನನ್ನೂ ಸೇವಿಸುವಂತಿಲ್ಲ.

*ಈ ಸಮಯದಲ್ಲಿ ಯಾವುದೇ ಪ್ರಲೋಭೆಗೆ ಒಳಗಾಗುವಂತಿಲ್ಲ. ಮನಸ್ಸನ್ನು ಹತೋಟಿಯಲ್ಲಿಟ್ಟು ದೇವತ್ವದ ಕಡೆಗೆ ಮಾತ್ರ ಒಲವಿರಬೇಕು.

*ವ್ರತದ ಸಮಯದಲ್ಲಿ ಬ್ರಹ್ಮಚರ್ಯವನ್ನು ಕಠಿಣವಾಗಿ ಪಾಲಿಸಬೇಕು. ಶಿಬಿರದಲ್ಲೇ ಇದ್ದು ಸ್ವಾಮಿ ಧ್ಯಾನದಲ್ಲೇ ತೊಡಗಿರಬೇಕು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ