Udayavni Special

ಕ್ರಿಯಾಯೋಗವೆಂಬ ಆಧ್ಯಾತ್ಮಿಕ ರಹದಾರಿ


Team Udayavani, Jun 21, 2019, 9:28 AM IST

saghur

ಮೈಸೂರಿನಲ್ಲಿ ಜನಿಸಿ ಬಾಲ್ಯದಿಂದಲೇ ಯೋಗದತ್ತ ಆಕರ್ಷಿತರಾಗಿ ಮಲ್ಲಾಡಿ ಹಳ್ಳಿಯಲ್ಲಿ ರಾಘವೇಂದ್ರ ಸ್ವಾಮಿಗಳ ಬಳಿ ಯೋಗ ಕಲಿತು ಕೊಯಮತ್ತೂರಿನಲ್ಲಿ ಈಶ ಫೌಂಡೇಶನ್‌ ಸ್ಥಾಪಿಸಿ ಜಾಗತಿಕ ಯೋಗ ಗುರುವಾಗಿ ಬೆಳೆದು ಬೆಳಗುತ್ತಿರುವವರು ಜಗ್ಗಿ ವಾಸುದೇವ್‌. “ಸದ್ಗುರು’ ಎಂದೇ ಹೆಚ್ಚು ಪರಿಚಿತರಾಗಿರುವ ಜಗ್ಗಿಯವರು ಉದಯವಾಣಿ ಯೋಗೋತ್ಸವಕ್ಕಾಗಿ ಬರೆದ ಲೇಖನ ಇದು.

ಸದ್ಗುರು, ಈಶ ಫೌಂಡೇಶನ್‌

ಮೂಲಭೂತವಾಗಿ, ಕ್ರಿಯಾ (ಕ್ರಿಯೆ) ಎಂದರೆ ಆಂತರಿಕ ಕಾರ್ಯ. ನೀವು ಆಂತರಿಕ ಕಾರ್ಯವನ್ನೆಸಗಿದಾಗ, ಅದು ಶರೀರ ಮತ್ತು ಮನಸ್ಸನ್ನು ಒಳಗೊಂಡಿರುವುದಿಲ್ಲ, ಏಕೆಂದರೆ ಶರೀರ ಮನಸ್ಸುಗಳೆರಡೂ ನಿಮಗೆ ಹೊರಗಿನವುಗಳೇ. ನಿಮಗೆ ನಿಮ್ಮ ಜೀವಶಕ್ತಿಗಳೊಂದಿಗೆ ಕಾರ್ಯಗೈಯ ಬಲ್ಲಂತಹ ಒಂದು ಪ್ರಭುತ್ವವಿದ್ದಾಗ, ಅದನ್ನು ಕ್ರಿಯಾ ಎನ್ನುತ್ತೇವೆ. ಬಾಹ್ಯ ಕಾರ್ಯ ಕರ್ಮ; ಆಂತರಿಕ ಕಾರ್ಯ ಕ್ರಿಯಾ. ಸಾಂಪ್ರದಾಯಿಕವಾಗಿ ಅಥವಾ ಸಾಮಾನ್ಯ ಅರ್ಥದಲ್ಲಿ ಕರ್ಮಗಳು ಬಂಧಿಸುವಂಥವು, ಕ್ರಿಯೆಗಳು ಮುಕ್ತಗೊಳಿಸುವಂಥವು.

ನೀವು ನಿಮ್ಮ ಶರೀರದೊಂದಿಗೆ, ಮನಃಸ್ಥಿತಿಯೊಂದಿಗೆ, ಯೋಚನೆ ಗಳೊಂದಿಗೆ ಏನೇ ಮಾಡಿದರೂ ಅವನ್ನು ನಂಬಲಾಗುವುದಿಲ್ಲ. ಇವತ್ತು ನಿಮ್ಮ ಯೋಚನೆಗಳು ಒಂದು ದಿಕ್ಕಿನಲ್ಲಿ ಹರಿಯುತ್ತಿರ ಬಹುದು. ನಾಳೆ ಯಾರೋ ಬಂದು ನಿಮ್ಮನ್ನು ಪ್ರಭಾವಿಸಿದರೆ, ಅವು ಇನ್ನೊಂದು ದಿಕ್ಕಿನಲ್ಲಿ ಹೋಗುತ್ತವೆ. ಹಾಗೆಯೇ ದೇಹ ಕೂಡ. ಇವತ್ತು ದೇಹ ಚೆನ್ನಾಗಿದೆ, ಆದ್ದರಿಂದ ಅದಕ್ಕೆ ಆಸನ ಮಾಡಲು ಇಷ್ಟ. ನಾಳೆ ದೇಹ ಸ್ವಲ್ಪ ಸೆಟೆದುಕೊಂಡಿದ್ದರೆ, ನಿಮಗೆ ಆಸನಗಳ ಮೇಲೆ ಕೋಪ ಬರುತ್ತದೆ. ಭಾವನೆಗಳನ್ನಂತೂ ಸ್ವಲ್ಪವೂ ನೆಚ್ಚಿಕೊಳ್ಳಲಾಗದು. ಆದರೆ ಜೀವಶಕ್ತಿ ಹಾಗಿಲ್ಲ. ಒಮ್ಮೆ ಜೀವಶಕ್ತಿಯ ಮೇಲೆ ಒಂದು ನಿರ್ದಿಷ್ಟ ರೀತಿಯಲ್ಲಿ ಕಾರ್ಯಗೈಯಲು ಆರಂಭಿಸಿ ದಿರೆಂದರೆ, ಅದು ಜೀವನಕ್ಕೆ ಬೇರೆಯೇ ತರದ ಆಳ-ಗಹನತೆ ತರುತ್ತದೆ. ನಿಮ್ಮ ಜೀವನದ ಪ್ರತಿ ಅಂಶಕ್ಕೂ ಒಂದು ಹೊಸ ಆಯಾಮ ಇರುತ್ತದೆ. ಏಕೆಂದರೆ ನಿಮ್ಮ ಜೀವಶಕ್ತಿಗಳು ಸ್ಪರ್ಶಿಸಲ್ಪಟ್ಟು ಸಂಪೂರ್ಣವಾಗಿ ಬೇರೆ ರೀತಿಯಲ್ಲಿ ಸಕ್ರಿಯವಾಗಿವೆ.
ಆಧ್ಯಾತ್ಮದ ದಾರಿಯಲ್ಲಿ ಸಾಗಲು ಕ್ರಿಯಾಯೋಗವು ಬಹಳ ಶಕ್ತಿಯುತವಾದ ವಿಧಾನ. ಆದರೆ ಅದು ನಿಮ್ಮಿಂದ ಬಹಳ ವಿಷಯಗಳನ್ನು ಕೋರುತ್ತದೆ. ಅದು ಶಿಸ್ತು ಮತ್ತು ಎಲ್ಲ ವಿಷಯಗಳಲ್ಲಿ ನಿಖರತೆಯನ್ನು ಬೇಡುತ್ತದೆ. ಈಗ ಹೆಚ್ಚಿನ ವರಿಗೆ ಕ್ರಿಯಾಯೋಗದ ಮಾರ್ಗಕ್ಕೆ ಆವಶ್ಯಕವಾದ ದೇಹವಾಗಲಿ, ಮನಸ್ಸಾಗಲಿ ಅಥವಾ ಭಾವನೆಗಳ ಸ್ಥಿರತೆಯಾಗಲಿ ಇಲ್ಲ. ಏಕೆಂದರೆ ಬಾಲ್ಯದಿಂದಲೇ ಜನರು ಬಹಳ ಸುಖಸೌಕರ್ಯಗಳ ಆರಾಮದಲ್ಲಿದ್ದಾರೆ. ಆರಾಮ ಎಂದರೆ ಭೌತಿಕ ಆರಾಮವಲ್ಲ. ನಿಮ್ಮ ಇಡೀ ಜೀವ ಸದಾ ಆರಾಮವನ್ನು ಬಯಸುತ್ತಿದೆ. ಇದೊಂದು ದೊಡ್ಡ ತಡೆ. ಈ ಆರಾಮದ ಮನಸ್ಸು-ಭಾವನೆಗಳು ಕ್ರಿಯಾಯೋಗದ ಮಾರ್ಗಕ್ಕೆ ಸೂಕ್ತವಲ್ಲ.

ನಿಮಗೆ ಕ್ರಿಯಾ ಒಂದು ಜೀವಂತ ಪ್ರಕ್ರಿಯೆಯಾಗಬೇಕೆಂದಿದ್ದರೆ, ಅದು ನಿಮ್ಮ ಜೀವವ್ಯವಸ್ಥೆಯಲ್ಲಿ ನಿರ್ದಿಷ್ಟ ರೀತಿ ಯಲ್ಲಿ ಅಚ್ಚೊತ್ತಬೇಕಿದ್ದರೆ, ಅದಕ್ಕೊಂದು ರೀತಿಯ ಶಿಸ್ತು ಮತ್ತು ಶ್ರದ್ಧೆಯ ಅಗತ್ಯ ವಿದೆ. ಆರಂಭದಲ್ಲಿ, ಇವರು ಇದೇನು ಮಾಡುತ್ತಿದ್ದಾರೆ ನನ್ನ ಜತೆ ಎಂದು ನಿಮಗೆ ಅಚ್ಚರಿಯಾಗಬಹುದು, ಏಕೆಂದರೆ ಕ್ರಿಯಾ ಗಳ ಆರಂಭಿಕ ಹಂತಗಳು ಹಾಗಿರುತ್ತವೆ. ಅಂಥ ಕಾಯುವಿಕೆಯನ್ನು ತಾಳಿಕೊಳ್ಳುವಷ್ಟು ವಿಶ್ವಾಸವಿರಬೇಕು. ಇಲ್ಲದಿದ್ದರೆ ಕ್ರಿಯಾ ಕಷ್ಟಕರವಾಗುತ್ತದೆ.

ಜ್ಞಾನೋದಯವನ್ನು ಮೀರಿ ನಿಮಗೇನಾದರೂ ಮಾಡಬೇಕೆಂದಿದ್ದರೆ ಮಾತ್ರ ಕ್ರಿಯಾ ಯೋಗ ಮುಖ್ಯ. ನೀವು ಕ್ರಿಯಾಯೋಗದ ಮಾರ್ಗವನ್ನು ತೀವ್ರವಾಗಿ ಅನುಸರಿಸಿದರೆ, ಮಾರ್ಗದರ್ಶನವಿಲ್ಲದೆ ಇದು ಪಕ್ವವಾಗಲು ಕೆಲವು ಜೀವಿತಾವಧಿಗಳೇ ಬೇಕಾಗ ಬಹುದು. ಮಾರ್ಗದರ್ಶನ ಮಾಡುವವರು ಬದುಕಿದ್ದರೆ, ಅದು ಈ ಜನ್ಮ ದ ಸಂಭವಿಸಬಹುದು. ಇಲ್ಲದಿದ್ದರೆ, ಕ್ರಿಯಾ ಯೋಗ  ಸುತ್ತು ಬಳಸಿನ ಮಾರ್ಗ. ಆದರಿಲ್ಲಿ ನೀವು ಜ್ಞಾನೋದಯವನ್ನು ಮಾತ್ರ ಅರಸುತ್ತಿಲ್ಲ, ನೀವು ಜೀವನಿರ್ಮಾಣದ ಕಾರ್ಯ ವೈಖರಿಯನ್ನೂ ಅರಿಯಲು ಆಶಿಸುತ್ತೀರಿ. ಜೀವವು ರಚಿಸಲ್ಪಟ್ಟಿರುವ ಹಿಂದಿನ ವಿಜ್ಞಾನವನ್ನೂ ಅರ್ಥೈಸಿಕೊಳ್ಳಲು ಆಶಿಸುತ್ತೀರಿ. ಅದಕ್ಕಾ ಗಿಯೇ ಅದು ದೀರ್ಘಾವಧಿ ಪ್ರಕ್ರಿಯೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ASIAN-CUP-TROPHY

ಎಎಫ್ ಸಿ ಏಶ್ಯನ್‌ ಕಪ್‌ ಆತಿಥ್ಯಕ್ಕೆ ಭಾರತ ಬಿಡ್‌

ಅಬ್ಬಾ ಬಚಾವ್ !: ಕೋವಿಡ್ 19 ವೈರಸ್‌ ಗಾಳಿಯಿಂದ ಹರಡಲ್ಲ

ಅಬ್ಬಾ ಬಚಾವ್ !: ಕೋವಿಡ್ 19 ವೈರಸ್‌ ಗಾಳಿಯಿಂದ ಹರಡಲ್ಲ

ಜೀವ ವಿಮಾ ಪಾಲಿಸಿದಾರರಿಗೆ ಪ್ರೀಮಿಯಂ ಹಣ ಪಾವತಿಸಲು ಹೆಚ್ಚುವರಿ ಕಾಲಾವಕಾಶ

ಜೀವ ವಿಮಾ ಪಾಲಿಸಿದಾರರಿಗೆ ಪ್ರೀಮಿಯಂ ಹಣ ಪಾವತಿಸಲು ಹೆಚ್ಚುವರಿ ಕಾಲಾವಕಾಶ

ಕೋವಿಡ್ ವೈರಸ್ ಗಿಲ್ಲ ತಡೆ ; ಸೌದಿಯಲ್ಲಿ ಕರ್ಫ್ಯೂ ವಿಸ್ತರಣೆ

ಕೋವಿಡ್ ವೈರಸ್ ಗಿಲ್ಲ ತಡೆ ; ಸೌದಿಯಲ್ಲಿ ಕರ್ಫ್ಯೂ ವಿಸ್ತರಣೆ

ಭಾರತದಿಂದ ಔಷಧ ಕೋರಿದ ಅಮೆರಿಕ

ಭಾರತದಿಂದ ಔಷಧ ಕೋರಿದ ಅಮೆರಿಕ

ಪ್ರಧಾನಿ ನಮೋ ‘ದೀಪ ಬೆಳಗಿಸೋಣ’ ಕರೆಗೆ ದೇಶವಾಸಿಗಳ ಅಭೂತಪೂರ್ವ ಸ್ಪಂದನೆ

ಪ್ರಧಾನಿ ನಮೋ ‘ದೀಪ ಬೆಳಗಿಸೋಣ’ ಕರೆಗೆ ದೇಶವಾಸಿಗಳ ಅಭೂತಪೂರ್ವ ಸ್ಪಂದನೆ

ಮೋದಿ ಕರೆಯಂತೆ ಕೋವಿಡ್ 19 ವೈರಸ್ ಅಂಧಕಾರ ಹೊಡೆದೋಡಿಸಲು ದೇಶಾದ್ಯಂತ ಬೆಳಗಿದ ದೀಪ

ಮೋದಿ ಕರೆಯಂತೆ ಕೋವಿಡ್ 19 ವೈರಸ್ ಅಂಧಕಾರ ಹೊಡೆದೋಡಿಸಲು ದೇಶಾದ್ಯಂತ ಬೆಳಗಿದ ದೀಪ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಾವಿನ ಕುಣಿಕೆಗೆ ಕೊರಳೊಡ್ಡುವ ಮುನ್ನ ಊಟ, ಸ್ನಾನ ನಿರಾಕರಿಸಿದ್ದ ನಿರ್ಭಯಾ ದೋಷಿಗಳು

ಸಾವಿನ ಕುಣಿಕೆಗೆ ಕೊರಳೊಡ್ಡುವ ಮುನ್ನ ಊಟ, ಸ್ನಾನ ನಿರಾಕರಿಸಿದ್ದ ನಿರ್ಭಯಾ ದೋಷಿಗಳು!

nirbhaya-mother-apeal-court

ನ್ಯಾಯ ದೊರೆತರೂ ಮತ್ತೆ ಸುಪ್ರೀಂಕೋರ್ಟ್ ಕದತಟ್ಟಿದ ನಿರ್ಭಯಾ ತಾಯಿ: ಕಾರಣವೇನು ಗೊತ್ತಾ ?

nirbhaya-case

ಕೊನೆಗೂ ನ್ಯಾಯ ದೊರಕಿದೆ,ಈ ದಿನ ದೇಶದ ಹೆಣ್ಣು ಮಕ್ಕಳಿಗೆ ಅರ್ಪಣೆ:ನಿರ್ಭಯಾ ತಾಯಿ ಪ್ರತಿಕ್ರಿಯೆ

ಕೊನೆಗೂ ನೇಣಿಗೆ ಕೊರಳೊಡ್ಡಿದ ಅತ್ಯಾಚಾರಿ ಹಂತಕರು ; ನಿರ್ಭಯಾ ಆತ್ಮಕ್ಕೆ ಶಾಂತಿ

ಕೊನೆಗೂ ನೇಣಿಗೆ ಕೊರಳೊಡ್ಡಿದ ಅತ್ಯಾಚಾರಿ ಹಂತಕರು ; ನಿರ್ಭಯಾ ಆತ್ಮಕ್ಕೆ ಶಾಂತಿ

ನಿರ್ಭಯಾ ಹಂತಕ ಅಕ್ಷಯ್ ಕುಮಾರ್ ಕುಟುಂಬಕ್ಕೆ ಅಂತಿಮ ಕ್ಷಣದ ಭೇಟಿ ನಿರಾಕರಣೆ

ನಿರ್ಭಯಾ ಹಂತಕ ಅಕ್ಷಯ್ ಸಿಂಗ್ ಕುಟುಂಬಕ್ಕೆ ಅಂತಿಮ ಕ್ಷಣದ ಭೇಟಿ ನಿರಾಕರಣೆ

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ

ಯಾವುದೇ ಭಿನ್ನಾಭಿಪ್ರಾಯ ಇಲ್ಲ: ಸ್ಪಷ್ಟನೆ

ಯಾವುದೇ ಭಿನ್ನಾಭಿಪ್ರಾಯ ಇಲ್ಲ: ಸ್ಪಷ್ಟನೆ

ಕಾರ್ಮಿಕರ ಶಿಬಿರಗಳ ಸ್ಥಿತಿಗತಿ: ಹೈಕೋರ್ಟ್‌ ನಿರ್ದೇಶ

ಕಾರ್ಮಿಕರ ಶಿಬಿರಗಳ ಸ್ಥಿತಿಗತಿ: ಹೈಕೋರ್ಟ್‌ ನಿರ್ದೇಶ

ASIAN-CUP-TROPHY

ಎಎಫ್ ಸಿ ಏಶ್ಯನ್‌ ಕಪ್‌ ಆತಿಥ್ಯಕ್ಕೆ ಭಾರತ ಬಿಡ್‌

ದೇವೇಗೌಡರ ಜತೆ ಮೋದಿ “ಫೋನ್‌ ಪೆ ಚರ್ಚಾ’

ದೇವೇಗೌಡರ ಜತೆ ಮೋದಿ “ಫೋನ್‌ ಪೆ ಚರ್ಚಾ’

ಎಸ್‌ಡಿಆರ್‌ಎಫ್‌ ಕೇಂದ್ರದಿಂದ 395 ಕೋ. ರೂ.

ಎಸ್‌ಡಿಆರ್‌ಎಫ್‌ ಕೇಂದ್ರದಿಂದ 395 ಕೋ. ರೂ.