Udayavni Special

ಬುಧವಾರ ಸಂಜೆ ಜ್ಯೋತಿ ದರ್ಶನ: ಶಬರಿಮಲೆಯಲ್ಲಿ ಮಕರ ಸಂಕ್ರಮಣಕ್ಕೆ ಸಕಲ ಸಿದ್ಧತೆ


Team Udayavani, Jan 14, 2020, 11:12 AM IST

shabari

ಶಬರಿಮಲೆ: ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಸ್ಥಳ ಕೇರಳದ ಪತ್ತನಂತಿಟ್ಟ ಜಿಲ್ಲೆಯ ಶಬರಿಮಲೆ ಅಯ್ಯಪ್ಪ ಸ್ವಾಮೀ ಸನ್ನಿಧಾನದಲ್ಲಿ ಮಕರ ಸಂಕ್ರಮಣ ದಿಪೋತ್ಸವ ಹಾಗೂ ಮಕರ ಜ್ಯೋತಿ ದರ್ಶನ ಬುಧವಾರ ನಡೆಯಲಿದೆ.

ಸೋಮವಾರ ಭಾರಿ ಪೊಲೀಸ್‌ ಭದ್ರತೆಯೊಂದಿಗೆ ಪಂದಳ ಅರಮನೆಯಿಂದ ಶೋಭಾಯಾತ್ರೆಯ ಮೂಲಕ ಹೊರಟ ಅಯ್ಯಪ್ಪ ಸ್ವಾಮಿಯ ತಿರುವಾಭರಣಂ ಮೆರವಣಿಗೆ ಆರಂಭಗೊಂಡಿದ್ದು, ಮಕರ ಉತ್ಸವ ಪೂಜೆಯಂದು ಯೋಗಮುದ್ರೆಯಲ್ಲಿರುವ ಅಯ್ಯಪ್ಪ ಸ್ವಾಮಿಯ ವಿಗ್ರಹಕ್ಕೆ ತಿರುವಾಭರಣಗಳನ್ನು ತೊಡಿಸಿ ಪೂಜೆ ಮಾಡಲಾಗುತ್ತದೆ.

ಜ.12ವರೆಗೆ ಪಂದಳ ಅರಮನೆಯಲ್ಲಿ ಅಯ್ಯಪ್ಪ ಸ್ವಾಮಿಯ ತಿರುವಾಭರಣವನ್ನು ಭಕ್ತರ ದರ್ಶನಕ್ಕಾಗಿ ಇಡಲಾಗಿತ್ತು. ಬಳಿಕ ಸೋಮವಾರ ಪೂಜೆ, ವೈಧಿಕ ಕಾರ್ಯಕ್ರಮ ಮುಗಿದ ಬಳಿಕ ಮೆರವಣಿಗೆಯ ಮೂಲಕ ಶಬರಿಮಲೆ ಸನ್ನಿಧಾನಕ್ಕೆ ತರಲಾಗುತ್ತಿದೆ. ಸನ್ನಿಧಾನದಲ್ಲಿ ಅಯ್ಯಪ್ಪ ಸ್ವಾಮಿಯ ತಿರುವಾಭರಣಂವನ್ನು ವಿಗ್ರಹಕ್ಕೆ ತೊಡಿಸಿ ದೀಪಾರಾಧನೆ ಹಾಗೂ ಪೂಜೆ, ಪುನಸ್ಕಾರ ಮತ್ತಿತರ ವೈಧಿಕ ಕ್ರಿಯೆಗಳು ನಡೆಯಲಿದೆ.

ಬುಧವಾರ ಜ್ಯೋತಿ ದರ್ಶನ
ಜ.15ರಂದು ಮುಂಜಾನೆ ಸೂರ್ಯ ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಪಾದಾರ್ಪಣೆ ಮಾಡಿ ಧನುರಾಶಿಯಿಂದ ಮಕರ ರಾಶಿಗೆ ಬದಲಾಗುವ ಮಕರ ಜ್ಯೋತಿ ಶುಭದಿನವಾದ ಬುಧವಾರ ಮಕರ ಸಂಕ್ರಮಣ ಪೂಜೆ ನಡೆಯಲಿದೆ. ಸಂಜೆಯ ವೇಳೆ ಪೊನ್ನಂಬಲ ಮೇಡುವಿನಲ್ಲಿ ಮಕರ ಜ್ಯೋತಿ ದರ್ಶನವಾಗುತ್ತದೆ.

ಹೆಚ್ಚಿದ ಭಕ್ತಾದಿಗಳ ಸಂಖ್ಯೆ
ಈ ಬಾರಿ ಶಬರಿಮಲೆ ಸನ್ನಿಧಾನದಲ್ಲಿ ಅಯ್ಯಪ್ಪ ಭಕ್ತ ಸಂದಣಿಯು ಹೆಚ್ಚಿದ್ದು, ಕಳೆದ ವರ್ಷ ಈ ಅವಧಿಯಲ್ಲಿ ಭಕ್ತರ ದಟ್ಟನೆ ಕಡಿಮೆಯಾಗಿತ್ತು. ಕಳೆದ ವರ್ಷ ಮಹಿಳೆಯರ ಪ್ರವೇಶ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು.

ಈ ಬಾರಿ ಮಂಡಲ ಉತ್ಸವ ಸಮಯದಲ್ಲಿಯೇ ಭಕ್ತರ ಸಂಖ್ಯೆ ಹೆಚ್ಚಳವಾಗಿತ್ತು. ಅದೇ ಪ್ರಮಾಣದಲ್ಲಿ ಈಗಲೂ ಕ್ಷೇತ್ರದತ್ತ ಅಯ್ಯಪ್ಪ ಭಕ್ತರು ಆಗಮಿಸುತ್ತಿದ್ದು, ಹದಿನೆಂಟು ಮೆಟ್ಟಲು ಎದುರುಗಡೆ ಭಾರೀ ಸರದಿ ಸಾಲು ಇದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಭಕ್ತರ ಜನ ಸಂದಣಿ‌ ಹತ್ತುಪಟ್ಟು ಹೆಚ್ಚಳವಾಗಿದೆ ಎನ್ನಲಾಗಿದೆ.

21ರವರೆಗೆ ದರ್ಶನ ಅವಕಾಶ
ಮಕರ ವಿಳಕ್ಕು ಉತ್ಸವದ ಅಂಗವಾಗಿ ಜ.21ರ ತನಕ ಭಕ್ತರಿಗೆ ಅಯ್ಯಪ್ಪ ದರ್ಶನಕ್ಕೆ ಅವಕಾಶವಿದೆ. ಅಂದು ಸಂಜೆ 5 ಗಂಟೆಗೆ ಪಂಪಾ ಗಣಪತಿ ಕ್ಷೇತ್ರದ ಬಳಿ ತಲುಪುವರಿಗೆ ದರ್ಶನ ಲಭಿಸುವುದು. ರಾತ್ರಿ 9.30ಕ್ಕೆ ಅತ್ತಾಳ ಪೂಜಾ ನಡೆದ ಬಳಿಕ ಗುಡಿ ಮುಚ್ಚಲಾಗುತ್ತದೆ.

* ಪ್ರವೀಣ್ ಚೆನ್ನಾವರ

ಟಾಪ್ ನ್ಯೂಸ್

3ಡಿಯಲ್ಲಿ “ಬೆಲ್‌ ಬಾಟಂ’ ನೋಡಿ

3ಡಿಯಲ್ಲಿ “ಬೆಲ್‌ ಬಾಟಂ’ ನೋಡಿ

ನಗರದಲ್ಲಿ ಲಸಿಕೆ ಅಭಾವ ಹೆಚ್ಚಿದೆ: ಗೌರವ್‌ ಗುಪ್ತ

ನಗರದಲ್ಲಿ ಲಸಿಕೆ ಅಭಾವ ಹೆಚ್ಚಿದೆ: ಗೌರವ್‌ ಗುಪ್ತ

ಕಡಿಮೆ ಸೀಟು ಬಂದರೂ ನಿತೀಶ್‌ಗೆ ಸಿಎಂ ಸ್ಥಾನ: ಚೌಧರಿ

ಕಡಿಮೆ ಸೀಟು ಬಂದರೂ ನಿತೀಶ್‌ಗೆ ಸಿಎಂ ಸ್ಥಾನ: ಚೌಧರಿ

ಅಭಿಷೇಕ್‌ ಬ್ಯಾನರ್ಜಿ ಬೆಂಗಾವಲು ಪಡೆ ಮೇಲೆ ದಾಳಿ: ಬಿಜೆಪಿ ವಿರುದ್ಧ ಆರೋಪ

ಅಭಿಷೇಕ್‌ ಬ್ಯಾನರ್ಜಿ ಬೆಂಗಾವಲು ಪಡೆ ಮೇಲೆ ದಾಳಿ: ಬಿಜೆಪಿ ವಿರುದ್ಧ ಆರೋಪ

gdgresr

ಪುನೀತ್ ರಾಜಕುಮಾರ್ ಅವರ ‘ದ್ವಿತ್ವ’ ಚಿತ್ರಕ್ಕೆ ನಾಯಕಿ ಸಿಕ್ಕಳು…

rgsfaew

ಮೂರ್ತಿ ತಯಾರಕರಿಗೆ 3ನೇ ಅಲೆ ಭೀತಿ

fhgdfghtrytr

ಬೇಬಿ ಬೆಟ್ಟದಲ್ಲಿ ಗಣಿಗಾರಿಕೆ : ಅಕ್ರಮವಾಗಿ ಸಂಗ್ರಹಿಸಿಟ್ಟದ್ದ ಸ್ಫೋಟಕಗಳು ವಶಕ್ಕೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನವಜಾತ ಶಿಶುವಿಗೆ ಸಿಗಲಿದೆ ವಿಶಿಷ್ಟ  ಗುರುತಿನ ಚೀಟಿ

ನವಜಾತ ಶಿಶುವಿಗೆ ಸಿಗಲಿದೆ ವಿಶಿಷ್ಟ  ಗುರುತಿನ ಚೀಟಿ

ಫೋನ್‌ ಲಿಂಕ್‌ಗೆ ಅಂಚೆಯಣ್ಣನ ನೆರವು

ಫೋನ್‌ ಲಿಂಕ್‌ಗೆ ಅಂಚೆಯಣ್ಣನ ನೆರವು

Sanathan Dharma Bhojan Vidhi Also has scientific reason

ತೊರೆದು ಜೀವಿಸಬಹುದೇ, ನಮ್ಮ ಮೂಲ ಸಂಸ್ಕೃತಿಯ..?!

SURAGANGE A Survery Of the Total Literary Works Of Parvathi G Aithal, Reviewd By Shreeraj Vakwady

‘ಸುರಗಂಗೆ’ ಪಾರ್ವತಿ ಜಿ. ಐತಾಳರ ಕೃತಿಗಳ ಒಳಸೂಚಿ

ಬಂಡೀಪುರ ಹುಲಿ ಸಂರಕ್ಷಣೆಗೆ ಮೆಚ್ಚುಗೆ

ಬಂಡೀಪುರ ಹುಲಿ ಸಂರಕ್ಷಣೆಗೆ ಮೆಚ್ಚುಗೆ

MUST WATCH

udayavani youtube

ಕೇರಳದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣ :ತಲಪಾಡಿಯಲ್ಲಿ ಬಿಗು ಬಂದೋಬಸ್ತ್

udayavani youtube

273 ದಿನಗಳು 8300 ಕಿ.ಮೀ ಪಾದಯಾತ್ರೆ !

udayavani youtube

ಅಪರೂಪದಲ್ಲಿ ಅಪರೂಪ ಈ ಬಿಳಿ ಹೆಬ್ಬಾವು!

udayavani youtube

ಎಲ್ಲಾ ಶಾಸಕರನ್ನು ಸಚಿವರನ್ನಾಗಿಸಲು ಸಾಧ್ಯವಿಲ್ಲ : ಬೊಮ್ಮಾಯಿ

udayavani youtube

ಮಸ್ಕಿಯಲ್ಲೊಬ್ಬ ವಾನರ ಪ್ರೇಮಿ : ಮಸ್ಕಿ‌ ಪಟ್ಟಣದಲ್ಲಿ‌ ನಿತ್ಯವೂ ನಡೆಯುತ್ತಿರುವ ದೃಶ್ಯವಿದು

ಹೊಸ ಸೇರ್ಪಡೆ

3ಡಿಯಲ್ಲಿ “ಬೆಲ್‌ ಬಾಟಂ’ ನೋಡಿ

3ಡಿಯಲ್ಲಿ “ಬೆಲ್‌ ಬಾಟಂ’ ನೋಡಿ

ನಗರದಲ್ಲಿ ಲಸಿಕೆ ಅಭಾವ ಹೆಚ್ಚಿದೆ: ಗೌರವ್‌ ಗುಪ್ತ

ನಗರದಲ್ಲಿ ಲಸಿಕೆ ಅಭಾವ ಹೆಚ್ಚಿದೆ: ಗೌರವ್‌ ಗುಪ್ತ

ಕಡಿಮೆ ಸೀಟು ಬಂದರೂ ನಿತೀಶ್‌ಗೆ ಸಿಎಂ ಸ್ಥಾನ: ಚೌಧರಿ

ಕಡಿಮೆ ಸೀಟು ಬಂದರೂ ನಿತೀಶ್‌ಗೆ ಸಿಎಂ ಸ್ಥಾನ: ಚೌಧರಿ

ಅಭಿಷೇಕ್‌ ಬ್ಯಾನರ್ಜಿ ಬೆಂಗಾವಲು ಪಡೆ ಮೇಲೆ ದಾಳಿ: ಬಿಜೆಪಿ ವಿರುದ್ಧ ಆರೋಪ

ಅಭಿಷೇಕ್‌ ಬ್ಯಾನರ್ಜಿ ಬೆಂಗಾವಲು ಪಡೆ ಮೇಲೆ ದಾಳಿ: ಬಿಜೆಪಿ ವಿರುದ್ಧ ಆರೋಪ

gdgresr

ಪುನೀತ್ ರಾಜಕುಮಾರ್ ಅವರ ‘ದ್ವಿತ್ವ’ ಚಿತ್ರಕ್ಕೆ ನಾಯಕಿ ಸಿಕ್ಕಳು…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.