Udayavni Special

ಬಾನಂಗಳದಲ್ಲಿ ಇಂದು ಗೋಚರಿಸಲಿದೆ ವಿಶೇಷ ವಿದ್ಯಮಾನ “ಶರದ್ವಿಷುವ’

Team Udayavani, Sep 23, 2021, 6:30 AM IST

ಬಾನಂಗಳದಲ್ಲಿ ಇಂದು ಗೋಚರಿಸಲಿದೆ ವಿಶೇಷ ವಿದ್ಯಮಾನ “ಶರದ್ವಿಷುವ’

ಖಗೋಳ ವಿದ್ಯಮಾನಗಳು ಎಂದಾಕ್ಷಣ, ಅದು ರಾತ್ರಿ ಆಕಾಶಕ್ಕೆ ಮಾತ್ರ ಸೀಮಿತವಲ್ಲ, ಕೆಲವೊಂದು ವಿದ್ಯಮಾನಗಳನ್ನು ಹಗಲಿನ ಸಮಯ ದಲ್ಲಿಯೂ ನೋಡಿ ಆನಂದಿಸಬಹುದು. ಅಂತಹ ಒಂದು ವಿಶೇಷ ವಿದ್ಯ ಮಾನ ಶರದ್ವಿಷುವ. ಪ್ರತೀ ವರ್ಷ ನಡೆ ಯುವ ಭೂಮಿ- ಸೂರ್ಯನ ಬಂಧನ ದಿಂದ ಸಂಭವಿಸುವ ಈ ವಿದ್ಯಮಾನ ಈ ಬಾರಿ ಸೆ. 23ರಂದು ಸಂಭವಿಸಲಿದೆ.

ವಿಷುವತ್‌ ಸಂಕ್ರಾಂತಿ ಒಂದು ವಿಶೇಷ ಖಗೋಳ ವಿದ್ಯ ಮಾನವಾಗಿದ್ದು, ಈ ದಿನ ಭೂಮಿಯ ಮೇಲೆ ಹಗಲು ಹಾಗೂ ರಾತ್ರಿಯ ಅವಧಿ ಸಮನಾಗಿರುತ್ತದೆ. ವರ್ಷ ಕ್ಕೆರಡು ಬಾರಿ ಮಾರ್ಚ್‌ ಮತ್ತು ಸೆಪ್ಟಂಬರ್‌ನಲ್ಲಿ ಈ ವಿದ್ಯಮಾನ ಸಂಭ ವಿಸುತ್ತದೆ. ವಿಷುವತ್‌ ಸಂಕ್ರಾಂತಿಯಂದು ಸೂರ್ಯನು ನಿಖರವಾಗಿ ಪೂರ್ವ ದಿಕ್ಕಿನಲ್ಲಿ ಉದಯಿಸಿ, ಪಶ್ಚಿಮ ದಿಕ್ಕಿನಲ್ಲಿ ಅಸ್ತವಾಗುತ್ತಾನೆ. ಈ ದಿನ ಸೂರ್ಯನ ಬೆಳಕು ಭೂಮಿಯ ಸಮ ಭಾಜಕ ವೃತ್ತದ ಮೇಲೆ ನೇರವಾಗಿ ಬೀಳುತ್ತದೆ.

ಶರದ್ವಿಷುವ ಸಂಕ್ರಾಂತಿ ದಿನದಂದು, ಸೂರ್ಯನು ಉತ್ತರ ದಿಕ್ಕಿನಿಂದ ದಕ್ಷಿಣ ದಿಕ್ಕಿನೆಡೆಗೆ ಚಲಿಸಲು ಪ್ರಾರಂಭಿಸುವುದರಿಂದ, ಉತ್ತರ ಗೋಳಾರ್ಧದಲ್ಲಿ ಶರತ್‌ಋತು ಆರಂಭವಾಗುತ್ತದೆ. ಅಲ್ಲದೆ ಈ ದಿನ ಸೂರ್ಯನ ಕೇಂದ್ರ ಬಿಂದುವು ದಿಗಂತದ ಮೇಲೆ 12 ಗಂಟೆ, ದಿಗಂತದ ಕೆಳಗೆ 12 ಗಂಟೆಗಳ ಕಾಲ ಇರುತ್ತದೆ. ಆದರೆ ವಿಷುವತ್‌ ಸಂಕ್ರಾತಿಯ ದಿನದಂದು ಸಮಭಾಜಕ ವೃತ್ತದಲ್ಲಿ ಹಗಲು ಹಾಗೂ ರಾತ್ರಿ ಸಮಯವು ಸಮಾನವಾಗಿ ಇರುವುದಿಲ್ಲ. ಹಗಲಿನ ಅವಧಿಯು ರಾತ್ರಿಯ ಸಮಯಕ್ಕಿಂತ ಸ್ವಲ್ಪ ದೀರ್ಘ‌ವಾಗಿರುತ್ತದೆ. ಯಾಕೆಂದರೆ ದಿನದ ಅವಧಿಯು ಸೂರ್ಯನ ವೃತ್ತದ ಮೇಲು¤ದಿಯ ಉದಯ ಹಾಗೂ ಅಸ್ತದ ನಡುವಿನ ಅವಧಿಯಾಗಿರುತ್ತದೆ.

ಖಗೋಳ ಸಮಭಾಜಕ ವೃತ್ತವನ್ನು (ವಿಷುವದ್ವೃತ್ತ) ಕ್ರಾಂತಿವೃತ್ತವು ಎರಡು ಬಿಂದುಗಳಲ್ಲಿ ಛೇದಿಸುತ್ತದೆ. ಈ ಬಿಂದುಗಳೇ ವಿಷುವದ್ಬಿಂದು ಗಳು. ಈ ಬಿಂದುವನ್ನು ಈಶಾದಿ ಬಿಂದು ಎಂದು ಕರೆಯುತ್ತಾರೆ. ಭೂಮಿಯ ಅಕ್ಷದ ಅಪ್ರದಕ್ಷಿಣೆ ಯಿಂದಾಗಿ, ಈಗ ಈ ಬಿಂದುವು ಕನ್ಯಾ ನಕ್ಷತ್ರ ಪುಂಜವನ್ನು ತಲುಪಿದೆ. ಸೂರ್ಯನು ಈಶಾದಿ ಬಿಂದುವನ್ನು  ಸಂಕ್ರಮಿಸಿ, ಪ್ರತಿದಿನ ಆಕಾಶದಲ್ಲಿ ದಕ್ಷಿಣದ ಕಡೆ ಚಲಿಸುವುದನ್ನು ನೋಡಬಹುದು. ವಿಶ್ವದಾದ್ಯಂತ ವಿಷುವತ್‌ ಸಂಕ್ರಾಂತಿಯನ್ನು ಸೆಪ್ಟಂಬರ್‌ ಈಕ್ವಿನಾಕ್ಸ್‌ ಎಂದು ಕರೆಯುತ್ತಾರೆ. ಭೂಗೋಳಾರ್ಧದ ಮೇಲ್ಭಾಗದವರು ಈ ದಿನವನ್ನು ಆಟಂನಲ್‌ ಈಕ್ವಿನಾಕ್ಸ್‌ ಎಂದೂ ಕರೆಯುತ್ತಾರೆ.

ಪ್ರಯೋಗಕ್ಕೆ  ಅವಕಾಶ :

ವಿಷುವತ್‌ ದಿನವನ್ನು ಉಪಯೋಗಿಸಿಕೊಂಡು ನಾವಿರುವ ಸ್ಥಳದ ಅಕ್ಷಾಂಶವನ್ನು ಕಂಡು ಹಿಡಿಯಬಹುದು. ಈ ಪ್ರಯೋಗವನ್ನು ವಿದ್ಯಾರ್ಥಿಗಳು ಸುಲಭವಾಗಿ ಮಾಡಬಹುದು. ಮೇಲಿನಿಂದ ಕೆಳಕ್ಕೆ ಸಮಾನ ಗಾತ್ರ ಹೊಂದಿರುವ ವಸ್ತುವನ್ನು ನೆಲದ ಮೇಲೆ ನೇರವಾಗಿ ಇರಿಸಿ ಆ ವಸ್ತುವಿನ (ಉದಾ: ಮೇಣದ ಬತ್ತಿ) ಅತೀ ಸಣ್ಣ ನೆರಳಿನ ಉದ್ದವನ್ನು ಅಳೆಯುವ ಮೂಲಕ ನಮ್ಮ ನೆರಳನ್ನೂ ಅಳೆಯಬಹುದು. ವಸ್ತು ಹಾಗೂ ಅದರ ನೆರಳಿನಿಂದ ಉಂಟಾಗುವ ಲಂಬಕೋನ ತ್ರಿಭುಜದಲ್ಲಿ ವಸ್ತುವು ತ್ರಿಭುಜದ ಅಡಿಪಾಯವೆಂದು ಪರಿಗಣಿಸಿದರೆ, ಅದರ ನೆರಳು ತ್ರಿಭುಜದ ಅಭಿಮುಖ ಬಾಹು ಆಗಿರುತ್ತದೆ. ಈ ಎರಡು ಬಾಹುಗಳಿಂದಾದ ಕೋನವು ಸ್ಥಳದ ಅಕ್ಷಾಂಶವನ್ನು ನೀಡುತ್ತದೆ.

- ಅತುಲ್‌ ಭಟ್‌, ಉಡುಪಿ

ಟಾಪ್ ನ್ಯೂಸ್

2022ರ ಆಸ್ಕರ್‌ ಅರ್ಹತಾ ಪಟ್ಟಿಯಲ್ಲಿ “ಮಂಡೇಲಾ’, “ನಯತ್ತು’ ಚಿತ್ರ

2022ರ ಆಸ್ಕರ್‌ ಅರ್ಹತಾ ಪಟ್ಟಿಯಲ್ಲಿ “ಮಂಡೇಲಾ’, “ನಯತ್ತು’ ಚಿತ್ರ

ಟ್ರಂಪ್‌ರಿಂದ “ಟ್ರಾತ್‌ ಸೋಷಿಯಲ್‌’ ಎಂಬ ಹೆಸರಿನಲ್ಲಿ ಪ್ರತ್ಯೇಕ ಸಾಮಾಜಿಕ ಜಾಲತಾಣ

ಟ್ರಂಪ್‌ರಿಂದ “ಟ್ರಾತ್‌ ಸೋಷಿಯಲ್‌’ ಎಂಬ ಹೆಸರಿನಲ್ಲಿ ಪ್ರತ್ಯೇಕ ಸಾಮಾಜಿಕ ಜಾಲತಾಣ

ಗತಿಶಕ್ತಿ ಯೋಜನೆಗೆ ಕೇಂದ್ರ ಸಂಪುಟ ಅಸ್ತು: ಕೇಂದ್ರ ಆರ್ಥಿಕ ವ್ಯವಹಾರಗಳ ಸಭೆಯಲ್ಲಿ ಒಪ್ಪಿಗೆ

ಗತಿಶಕ್ತಿ ಯೋಜನೆಗೆ ಕೇಂದ್ರ ಸಂಪುಟ ಅಸ್ತು: ಕೇಂದ್ರ ಆರ್ಥಿಕ ವ್ಯವಹಾರಗಳ ಸಭೆಯಲ್ಲಿ ಒಪ್ಪಿಗೆ

ಪ್ರಾಥಮಿಕ ತರಗತಿ ಆರಂಭಕ್ಕೆ ಮಾರ್ಗಸೂಚಿ

ಪ್ರಾಥಮಿಕ ತರಗತಿ ಆರಂಭಕ್ಕೆ ಮಾರ್ಗಸೂಚಿ

ಉ.ಪ್ರ.ದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ವಿದ್ಯಾರ್ಥಿನಿಯರಿಗೆ ಸ್ಮಾರ್ಟ್‌ಫೋನ್‌, ಸ್ಕೂಟಿ

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ವಿದ್ಯಾರ್ಥಿನಿಯರಿಗೆ ಸ್ಮಾರ್ಟ್‌ಫೋನ್‌, ಸ್ಕೂಟಿ

ಡೆನ್ಮಾರ್ಕ್‌ ಓಪನ್‌ ಬ್ಯಾಡ್ಮಿಂಟನ್‌ : ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ಸಿಂಧು

ಡೆನ್ಮಾರ್ಕ್‌ ಓಪನ್‌ ಬ್ಯಾಡ್ಮಿಂಟನ್‌ : ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ಸಿಂಧು

ಧರ್ಮಗಳನ್ನು ಒಡೆಯುವುದೇ ಕಾಂಗ್ರೆಸ್ ಪಕ್ಷದವರ ಕೆಲಸ ಸಿಎಂ ಬೊಮಾಯಿ ಆರೋಪ

ಧರ್ಮಗಳನ್ನು ಒಡೆಯುವುದೇ ಕಾಂಗ್ರೆಸ್ ಪಕ್ಷದವರ ಕೆಲಸ ಸಿಎಂ ಬೊಮ್ಮಾಯಿ ಆರೋಪ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬರಿದಾಗುತ್ತಿವೆ ಕಲ್ಲಿದ್ದಲು ಗಣಿಗಳು! ಮಿತವಾಗಿ ಬಳಸಿ ವಿದ್ಯುತ್‌; ಕಗ್ಗತ್ತಲಿನಿಂದ ಪಾರಾಗಿ

ಬರಿದಾಗುತ್ತಿವೆ ಕಲ್ಲಿದ್ದಲು ಗಣಿಗಳು! ಮಿತವಾಗಿ ಬಳಸಿ ವಿದ್ಯುತ್‌; ಕಗ್ಗತ್ತಲಿನಿಂದ ಪಾರಾಗಿ

ಶಿಕ್ಷಣದ ಮೂಲ ಆಶಯಕ್ಕೆ ವ್ಯವಸ್ಥೆ ಮರಳಬೇಕು

ಶಿಕ್ಷಣದ ಮೂಲ ಆಶಯಕ್ಕೆ ವ್ಯವಸ್ಥೆ ಮರಳಬೇಕು

ಜಮ್ಮು-ಕಾಶ್ಮೀರದಲ್ಲೀಗ ಟಾರ್ಗೆಟ್‌ ಕಿಲ್ಲಿಂಗ್‌

ಜಮ್ಮು-ಕಾಶ್ಮೀರದಲ್ಲೀಗ ಟಾರ್ಗೆಟ್‌ ಕಿಲ್ಲಿಂಗ್‌

ಬದಲಾವಣೆಯನ್ನೇ ಭರವಸೆಯಾಗಿಸಿದ ಶಿಕ್ಷಣ

ಬದಲಾವಣೆಯನ್ನೇ ಭರವಸೆಯಾಗಿಸಿದ ಶಿಕ್ಷಣ

ಬಾಂಗ್ಲಾ: ಹಿಂದೂಗಳ ಮೇಲೆ ದಾಳಿ; ಇತಿಹಾಸದ ಕಹಿನೆನಪು

ಬಾಂಗ್ಲಾ: ಹಿಂದೂಗಳ ಮೇಲೆ ದಾಳಿ; ಇತಿಹಾಸದ ಕಹಿನೆನಪು

MUST WATCH

udayavani youtube

Video Viral : ಜಾನಪದ ಶೈಲಿಯ ಹಾಡಿನ ಮೂಲಕ ಒಡ್ಡೋಲಗದ ಆಮಂತ್ರಣ

udayavani youtube

ದುಬಾರಿ ಗಿಫ್ಟ್ ಗಳನ್ನು ಮಾರಿ ತಿಂದರೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ?

udayavani youtube

Brazilian Golden Spoon Cherry ಸುಲಭವಾಗಿ ಬೆಳೆಸಿ ಕೈತುಂಬಾ ಸಂಪಾದಿಸಿ

udayavani youtube

ಶ್ರೀರಂಗಪಟ್ಟಣ ಬಾರಿ ಮಳೆಗೆ ಕೊಚ್ಚಿ ಹೋದ ರೈತರ ಬದುಕು

udayavani youtube

ಅಬ್ಬಾ ಬದುಕಿದೆ ಬಡ ಜೀವ ! ಚಿರತೆ ಬಾಯಿಯಿಂದ ತಪ್ಪಿಸಿಕೊಂಡ ಶ್ವಾನದ ಕಥೆ

ಹೊಸ ಸೇರ್ಪಡೆ

2022ರ ಆಸ್ಕರ್‌ ಅರ್ಹತಾ ಪಟ್ಟಿಯಲ್ಲಿ “ಮಂಡೇಲಾ’, “ನಯತ್ತು’ ಚಿತ್ರ

2022ರ ಆಸ್ಕರ್‌ ಅರ್ಹತಾ ಪಟ್ಟಿಯಲ್ಲಿ “ಮಂಡೇಲಾ’, “ನಯತ್ತು’ ಚಿತ್ರ

ಟ್ರಂಪ್‌ರಿಂದ “ಟ್ರಾತ್‌ ಸೋಷಿಯಲ್‌’ ಎಂಬ ಹೆಸರಿನಲ್ಲಿ ಪ್ರತ್ಯೇಕ ಸಾಮಾಜಿಕ ಜಾಲತಾಣ

ಟ್ರಂಪ್‌ರಿಂದ “ಟ್ರಾತ್‌ ಸೋಷಿಯಲ್‌’ ಎಂಬ ಹೆಸರಿನಲ್ಲಿ ಪ್ರತ್ಯೇಕ ಸಾಮಾಜಿಕ ಜಾಲತಾಣ

ಗತಿಶಕ್ತಿ ಯೋಜನೆಗೆ ಕೇಂದ್ರ ಸಂಪುಟ ಅಸ್ತು: ಕೇಂದ್ರ ಆರ್ಥಿಕ ವ್ಯವಹಾರಗಳ ಸಭೆಯಲ್ಲಿ ಒಪ್ಪಿಗೆ

ಗತಿಶಕ್ತಿ ಯೋಜನೆಗೆ ಕೇಂದ್ರ ಸಂಪುಟ ಅಸ್ತು: ಕೇಂದ್ರ ಆರ್ಥಿಕ ವ್ಯವಹಾರಗಳ ಸಭೆಯಲ್ಲಿ ಒಪ್ಪಿಗೆ

ಪ್ರಾಥಮಿಕ ತರಗತಿ ಆರಂಭಕ್ಕೆ ಮಾರ್ಗಸೂಚಿ

ಪ್ರಾಥಮಿಕ ತರಗತಿ ಆರಂಭಕ್ಕೆ ಮಾರ್ಗಸೂಚಿ

ಉ.ಪ್ರ.ದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ವಿದ್ಯಾರ್ಥಿನಿಯರಿಗೆ ಸ್ಮಾರ್ಟ್‌ಫೋನ್‌, ಸ್ಕೂಟಿ

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ವಿದ್ಯಾರ್ಥಿನಿಯರಿಗೆ ಸ್ಮಾರ್ಟ್‌ಫೋನ್‌, ಸ್ಕೂಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.