ಆಧ್ಯಾತ್ಮ ಮತ್ತು ಪ್ರಕೃತಿಪ್ರಿಯರನ್ನು ಕೈ ಬೀಸಿ ಕರೆಯುತ್ತಿದೆ ಶೀರೂರು ಮಠ !


Team Udayavani, Sep 27, 2020, 1:51 PM IST

shirooru-1

ಉಡುಪಿ: ಈ ವರ್ಷದ ಪ್ರವಾಸೋದ್ಯಮ ದಿನದ ಪ್ರಯುಕ್ತ ಸ್ಥಳೀಯ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಿರುವುದು ವಿಶೇಷ. ಉಡುಪಿ  ಜಿಲ್ಲೆಯು ವಿಶೇಷವಾಗಿ ದೇವಾಲಯಗಳಿಗೆ ಹೆಸರುವಾಸಿ.  ಅದರಲ್ಲಿ ಒಂದು ನಮ್ಮೂರಿನ 41 ನೇ ಶೀರೂರಿನ ಮೂಲ ಮಠ.

ಇಲ್ಲಿನ ಶ್ರೀ ವೀರ ವಿಠ್ಠಲ ಹಾಗೂ ಉತ್ಸವ ಮೂರ್ತಿ ಮುಖ್ಯಪ್ರಾಣ ದೇವರು ಬಹಳ ವಿಶೇಷ. ಅದರಲ್ಲೂ ಈ ಎರಡು ಮೂರ್ತಿಗಳು ಎದುರು ಬದುರು ನಿಂತಿರುವುದು ನೋಡುವುದೇ ಕಣ್ಣಿಗೆ ಖುಷಿ. ಉಡುಪಿ ಶ್ರೀ ಕೃಷ್ಣ ನ ಅಷ್ಟಮಠಗಳಲ್ಲಿ ಒಂದಾದ ಶೀರೂರು ಮಠ ಉಡುಪಿಯಿಂದ 22 ಕಿಲೋಮೀಟರ್ ದೂರದಲ್ಲಿದೆ.  ಉಡುಪಿ ಪಟ್ಟಣದಿಂದ  ಮಠಕ್ಕೆ ಸಾರಿಗೆ ಸಂಪರ್ಕ ತುಂಬಾ ವಿರಳ. ತಮ್ಮ ತಮ್ಮ ವಾಹನಗಳಲ್ಲಿ ಭೇಟಿ ನೀಡಬಹುದು.

ಸ್ವರ್ಣಾ ನದಿಯ ತಟದಲ್ಲಿ ನೆಲೆಯಾಗಿರುವ ಈ ಮಠವು  ಪಾರಂಪರಿಕವಾಗಿ 32 ಮಠಾಧೀಶರು ಪ್ರಸನ್ನ ಚಿತ್ತರಾಗಿ ಪೂಜಾ ಕೈಂಕರ್ಯಗಳನ್ನು ನಡೆಸಿಕೊಂಡು ಬಂದಿದ್ದಾರೆ.    ಸ್ವರ್ಣಾ ನದಿಯು ಮೈದುಂಬಿ ಸದಾ ಕಾಲ ಹರಿಯುತ್ತಾಳೆ. ಈ ನದಿಗೆ ಅಡ್ಡಲಾಗಿ ಸಣ್ಣ ಅಣೆಕಟ್ಟನ್ನು ಕಟ್ಟಲಾಗಿದೆ. ಮಳೆಗಾಲದಲ್ಲಿ ಸ್ವರ್ಣೆಯು 11 ಮೆಟ್ಟಿಲವರೆಗೂ ತಲುಪುತ್ತಾಳೆ. ಮಠದ ವಾಸ್ತುಶಿಲ್ಪದ ಶೈಲಿಯು ಬಹು ಸುಂದರವಾಗಿದೆ. ಕೃಷ್ಣ ಕಾಮಧೇನು ಪ್ರಿಯ. ಅಂತೆಯೇ ಇಲ್ಲಿಯೂ ಸಹ ಗೋವುಗಳನ್ನು ಸಾಕುತ್ತಾರೆ. ಅಂತೆಯೇ ಇಲ್ಲಿ ಮಂಗಗಳು ಅತಿಯಾಗಿ ಕಾಣಸಿಗುತ್ತವೆ.

ಪ್ರವಾಸಿಗರು ಈ ತಾಣಕ್ಕೆ ವರ್ಷದ ಯಾವುದೇ ದಿನದಂದು ಭೇಟಿ ನೀಡಬಹುದು. ವಿಶೇಷವಾಗಿ ಪ್ರತಿ ಶನಿವಾರ ರಂಗ ಪೂಜೆಯನ್ನು ದೇವರಿಗೆ ಸಲ್ಲಿಸಲಾಗುತ್ತದೆ. ಅಂತೆಯೇ ರಾಮ ನವಮಿಯಂದು ಭೇಟಿ ನೀಡುವುದು ತುಂಬಾ ಒಳ್ಳೆಯದು. ಇಲ್ಲಿನ ಮತ್ತೊಂದು ವಿಶೇಷವೆಂದರೆ ಉಡುಪಿ ಶ್ರೀ ಕೃಷ್ಣನಿಗೆ ಕನಕ ಕಿಂಡಿ ಇರುವಂತೆ ಇಲ್ಲಿಯೂ ಸಹ ಪಶ್ಚಿಮಾಭಿಮುಖವಾಗಿ  ಇರುವ ಒಂದು ಪುಟ್ಟ ಕಿಂಡಿಯಿಂದ ಶ್ರೀ ವೀರ ವಿಠ್ಠಲನ ದರ್ಶನ ಪಡೆಯುವುದೇ ಸೊಗಸು. 32ನೇ  ಶ್ರೀ ಶ್ರಿ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮಿಯವರ ಬೃಂದಾವನವು ಇಲ್ಲಿ ನೋಡಬಹುದು.

ಅಂತೆಯೇ ಈ ಮಠದ ಅಣತಿ ದೂರದಲ್ಲಿ ಹಲವಾರು ದೇವಳಗಳು ಕಾಣಸಿಗುತ್ತವೆ. ಸುತ್ತಲೂ ಹಚ್ಚ ಹಸುರಿನ ಹೊದಿಕೆ, ಬಳಕುತಾ ಶಾಂತ ಚಿತ್ತೆಯಾಗಿ ಹರಿಯುವ ಸ್ವರ್ಣೆ, ಕಾಮಧೇನು, ಕಪಿ ಗುಂಪು, ಶ್ರಿ ವೀರ ವಿಠ್ಠಲ, ಮುಖ್ಯಪ್ರಾಣ ದೇವರು ಎಂತಹ ಚಂಚಲ ಮನಸ್ಸನ್ನು ಶಾಂತವಾಗಿ ಇರಿಸುತ್ತದೆ ಹಾಗೂ ಮನಸ್ಸನ್ನು ಆಧ್ಯಾತ್ಮದ ಕಡೆಗೆ ಒಯ್ಯುತ್ತದೆ.  ನೀವು ಆಧ್ಯಾತ್ಮ ಪ್ರಿಯರಾದರೆ, ಪ್ರಕೃತಿಪ್ರಿಯರಾದರೆ ಖಂಡಿತಾಗಿಯೂ  ನಮ್ಮ 41ನೇ ಶೀರೂರು ನಿಮಗೆ ಸೂಕ್ತವಾದ ಪ್ರವಾಸಿ ತಾಣವೆಂಬುದರಲ್ಲಿ ಸಂಶಯವಿಲ್ಲ.

 

  • ಅಂಕಿತಾ ಉಡುಪಿ

ಟಾಪ್ ನ್ಯೂಸ್

weapon used to attack Salman’s house was seized in the river!

Tapi River; ಸಲ್ಮಾನ್‌ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!

ಕಾಂಗ್ರೆಸ್‌ ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

Congress ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

14-mng

Ullala: ಮಲಗಿದ್ದಲ್ಲೇ ಹೃದಯಾಘಾತದಿಂದ ಸಾವು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

11-udyavara

Sand Mining; ಉದ್ಯಾವರ: ಚುನಾವಣ ಚೆಕ್‌ಪೋಸ್ಟ್‌ ಬಳಿ ಅಕ್ರಮ ಮರಳು ಸಾಗಾಟ ಪತ್ತೆ

MDH-Everest ban: India seeks details from Singapore, Hong Kong

MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್‌ ನಿಂದ ವಿವರ ಕೇಳಿದ ಭಾರತ

ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ: ಪ್ರಿಯಾಂಕಾ ಕಿಡಿ

Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Ram Ayodhya

Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

weapon used to attack Salman’s house was seized in the river!

Tapi River; ಸಲ್ಮಾನ್‌ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!

ಕಾಂಗ್ರೆಸ್‌ ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

Congress ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

14-mng

Ullala: ಮಲಗಿದ್ದಲ್ಲೇ ಹೃದಯಾಘಾತದಿಂದ ಸಾವು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

12

Theft; ಕೊಲ್ಲೂರು: ಮಹಿಳೆಯ ಚಿನ್ನ, ನಗದು ಕಳವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.