ಈಡೇರಲಿ ಮಹಿಳಾ ದಿನದ ಆಶಯ


Team Udayavani, Mar 8, 2018, 5:15 AM IST

mahila-dina.jpg

ನಮ್ಮ ಸಮಾಜ ಹಾಗೂ ಸ್ನೇಹಿತ, ಬಂಧುಗಳು ಪ್ರತಿಯೊಬ್ಬ ಮಹಿಳೆಯು ಮಾದರಿ ಮಗಳು, ಮಾದರಿ ಪತ್ನಿ ಹಾಗೂ ಮಾದರಿ ಸೊಸೆಯಾಗಬೇಕೆಂದು ಬಯಸುತ್ತದೆ. ಇದನ್ನು ಸಮರ್ಥವಾಗಿ ನಿಭಾಯಿಸಲು/ಸಾಬೀತು ಪಡಿಸಲು ಪ್ರತಿ ಮಹಿಳೆಯು ಜೀವನ ಪರ್ಯಂತ ಹೋರಾಟ ಮಾಡಬೇಕಾಗುತ್ತದೆ.

ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಃ
ಸ್ತ್ರೀಯನ್ನು ಎಲ್ಲಿ ಪೂಜಿಸಲಾಗುತ್ತದೋ, ಗೌರ ವಿಸಲಾಗುವುದೋ ಅಲ್ಲೇ ದೇವಾನು ದೇವತೆಗಳು ನೆಲೆಸುತ್ತಾರೆ ಎಂದು ಸಾರಿದ ದೇಶ ನಮ್ಮದು. ಮಹಿಳೆಯರಿಗೆ ದೇವರ ಸ್ಥಾನವನ್ನು ನೀಡಿ ಗೌರವಿಸಿ , ಪೂಜಿಸುತ್ತಿರುವ ನಾಡಿನಲ್ಲಿ ಇನ್ನೊಂದೆಡೆ ಆಕೆಯನ್ನು ನಿರಂತರ ದೌರ್ಜನ್ಯಕ್ಕೆ ಒಳಪಡಿಸಲಾಗುತ್ತಿದೆ. ಹೀಗಾಗಿ ನಮ್ಮ ದೇಶದಲ್ಲಿ ಮಹಿಳೆಯರು ಸುರಕ್ಷಿತವಾಗಿ, ಸ್ವತಂತ್ರವಾಗಿ ಇದ್ದಾರೆಯೇ? ದೇಶ ಏಕೆ, ನಮ್ಮ ಸುತ್ತ ಮುತ್ತ, ಬಂಧುಗಳು, ಸ್ನೇಹಿತರ ನಡುವೆ, ನಮ್ಮ ಮನೆಯಲ್ಲೇ ಸುರಕ್ಷಿತವಾಗಿದ್ದಾರೆಯೇ ಎಂದು ಪ್ರಶ್ನಿಸಿಕೊಳ್ಳಬೇಕಾದ ಕಾಲವಿದು.

ಇಂದು (ಮಾ.8) ಮಹಿಳೆಯರ ಹಕ್ಕುಗಳಿಗಾಗಿ ಹೋರಾಡಿದ ದಿನ. ಆದರೆ ಎಷ್ಟೋ ಭಾರತೀಯ ಮಹಿಳೆಯರು ತಮ್ಮ ಹಕ್ಕು, ಸ್ವಾತಂತ್ರ್ಯವನ್ನು ಪ್ರೀತಿಯಿಂದ, ಒತ್ತಾಯದಿಂದ ಅಥವಾ ಬದುಕಿನ ಅನಿವಾರ್ಯ ಪರಿಸ್ಥಿತಿಗೆ ಸಿಲುಕಿ ಕಳೆದು ಕೊಳ್ಳುತ್ತಿದ್ದಾರೆ. ಮಹಿಳೆ ಮೇಲಿನ ಸಾಮಾಜಿಕ ಪಿಡುಗುಗಳ ವಿರುದ್ಧ ಅದೆಷ್ಟೋ ಹೋರಾಟಗಳು ನಡೆದಿವೆ. ಆದರೆ ಈಗಲೂ ಹುಟ್ಟಿದ ತತ್‌ ಕ್ಷಣ ಹೆಣ್ಣು ಮಗುವನ್ನು ಕೊಲ್ಲುವುದು, ಲಿಂಗ ತಾರತಮ್ಯ, ಹಿಂಸೆ, ತಿರಸ್ಕಾರ, ಅತ್ಯಾಚಾರ, ಪೂರ್ವಗ್ರಹ ಪೀಡಿತ ವಿಚಾರಗಳಿಂದಾಗುತ್ತಿರುವ ದೌರ್ಜನ್ಯವನ್ನು ಸಂಪೂರ್ಣ ತಡೆಗಟ್ಟಲು ಸಾಧ್ಯವಾಗದೇ ಇರುವುದು ವಿಷಾದನೀಯ.

ಹೆಚ್ಚುತ್ತಿರುವ ದೌರ್ಜನ್ಯ
ರಾಷ್ಟ್ರಪತಿ ಹುದ್ದೆ ಸಹಿತ ಅನೇಕ ಅತ್ಯುನ್ನತ ಹುದ್ದೆಗಳನ್ನು ಮಹಿಳೆಯರು ಅಲಂಕರಿಸಿದ್ದಾರೆ. ಬೃಹತ್‌ ಸಂಖ್ಯೆಯಲ್ಲಿ ಮಹಿಳೆಯರು ಸ್ವಾವಲಂಬಿಗಳಾಗಿದ್ದಾರೆ. ವೃತ್ತಿ ಮತ್ತು ಖಾಸಗಿ ಬದುಕನ್ನು ಸದೃಢಗೊಳಿಸಬಲ್ಲ ಅನೇಕ ಅವಕಾಶಗಳು ಮಹಿಳೆಯರ ಪಾಲಿಗೆ ಸಿಗುತ್ತಿವೆ. ಆದರೆ, ಇದೇ ಪ್ರಮಾಣದಲ್ಲಿ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯವೂ ಹೆಚ್ಚಾಗುತ್ತಿರುವುದು ವಿಪರ್ಯಾಸ.

ಕಳೆದ ಒಂದು ವರ್ಷದಲ್ಲಿ ಅಪರಾಧ ಪ್ರಕರಣಗಳಲ್ಲಿ ಶೇ.9.2ರಷ್ಟು ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ದೇಶದ ರಾಜ್ಯಧಾನಿ ದಿಲ್ಲಿಯಲ್ಲೇ ಶೇ.17ರಷ್ಟು ಅತ್ಯಾಚಾರ ಪ್ರಕರಣಗಳಾಗಿವೆ. ಅದರಲ್ಲಿ 10-30 ವರ್ಷದೊಳಗಿನವರೇ ಹೆಚ್ಚಿನವರು ಶೋಷಣೆಗೆ ಒಳಗಾಗಿದ್ದು, ಹೆಚ್ಚಿನ ಈ ಪ್ರಕರಣಗಳಲ್ಲಿ ನೆರೆಹೊರೆಯವರು, ಪೋಷಕರು, ಸಂಬಂಧಿಗಳು ಕಾರಣವಾಗಿದ್ದಾರೆ. ಇಷ್ಟೇ ಅಲ್ಲ ಶೇ.19.4ರಷ್ಟು ಅಪಹರಣ, ಶೇ.2.7ರಷ್ಟು ವರದಕ್ಷಿಣೆಗಾಗಿ ಕೊಲೆ,ಶೇ.5.4ರಷ್ಟು ಚಿತ್ರಹಿಂಸೆ, ಶೇ.5.8ರಷ್ಟು ತೊಂದರೆ, ಶೇ.12.2ರಷ್ಟು ಹೆಣ್ಣು ಮಕ್ಕಳ ಕಳ್ಳ ಸಾಗಾಣಿಕೆ ನಡೆದಿದೆ ಎಂಬುದನ್ನು ಅಂಕಿಅಂಶಗಳು ತಿಳಿಸುತ್ತವೆ.

ಹೊಸ ಸಂಶೋಧನೆಯ ಪ್ರಕಾರ ಪ್ರಸ್ತುತ ಶೇ. 25ರಷ್ಟು ಹೆಣ್ಣು ಮಕ್ಕಳು ಬಾಲ್ಯದಲ್ಲೇ ಸಾವನ್ನಪ್ಪುತ್ತಿದ್ದಾರೆ, ಶೇ.12ರಷ್ಟು ಮಂದಿ ಹುಟ್ಟುವಾಗಲೇ ನಾಪತ್ತೆಯಾಗುತ್ತಿದ್ದಾರೆ, ಶೇ.18ರಷ್ಟು ಸಂತಾನೋತ್ಪತ್ತಿಯ ವಯಸ್ಸಿನವರಾಗಿದ್ದು, ಶೇ.45 ರಷ್ಟು ಮಂದಿ ವೃದ್ಧರಾಗಿದ್ದಾರೆ.

ಬೆಂಕಿ ಆಕಸ್ಮಿಕದಿಂದ ದೇಶದಲ್ಲಿ ಪ್ರತಿ ವರ್ಷ ಸುಮಾರು 1ಲಕ್ಷ ಮಹಿಳೆಯರು ಸಾವಿಗೀಡಾಗುತ್ತಿದ್ದಾರೆ. ಹೆಚ್ಚಿನ ಸಾವುಗಳ ಹಿಂದಿರುವ ಪ್ರಮುಖ ಕಾರಣ ವರದಕ್ಷಿಣೆ ಕಿರುಕುಳ ಹಾಗೂ ಹೃದಯಾಘಾತ. ಇದರೊಂದಿಗೆ ಹೆಚ್ಚಿನ ಮಹಿಳೆಯರು ಸಾಂಕ್ರಾಮಿಕ ರೋಗಗಳಿಂದ ಸಾವನ್ನಪ್ಪುತ್ತಿದ್ದಾರೆ. ಅದೂ ಕೂಡ ದೈಹಿಕ, ಮಾನಸಿಕ ಹಿಂಸೆಗೆ ಒಳಗಾಗಿ ಉಂಟಾದ ಗಾಯಗಳಿಂದ ಎಂಬುದು ಮತ್ತೂಂದು ಆಘಾತಕಾರಿ ವಿಷಯ. ದೇಶದಲ್ಲಿರುವ ಪ್ರತಿಯೊಬ್ಬ ಮಹಿಳೆಗೂ ಪುರುಷರಷ್ಟೇ ಅಲ್ಲ, ಅವರಿಗಿಂತಲೂ ಹೆಚ್ಚಾಗಿ ಆರೋಗ್ಯ ಕಾಳಜಿ, ಔಷಧ ಮತ್ತು ಪೋಷಕಾಂಶಗಳ ಅಗತ್ಯವಿದೆ. ಆದರೆ ಅದೆಲ್ಲ ಸರಿಯಾದ ಪ್ರಮಾಣದಲ್ಲಿ ದಕ್ಕುತ್ತಿಲ್ಲ. ಇವೆಲ್ಲ ದಾಖಲೆಯಲ್ಲಿ ಇರುವ ವಿಚಾರಗಳು. ಆದರೆ ದಾಖಲೆಗೆ ಸಿಗದ ಇನ್ನೆಷ್ಟು ಪ್ರಕರಣಗಳು ಇವೆಯೋ ಯಾರಿಗೆ ಗೊತ್ತಿದೆ? ಈ ಎಲ್ಲ ಅಂಕಿ ಅಂಶಗಳನ್ನು ಗಮನಿಸಿದ ಮೇಲೆ ಪ್ರತಿಯೊಬ್ಬ ಹೆಣ್ಣಿನಲ್ಲೂ “ನಾವು ಸುರಕ್ಷಿತವಾಗಿ ಇರುವುದೆಲ್ಲಿ?’ ಎಂಬ ಪ್ರಶ್ನೆ ಕಾಡದೇ ಇರಲಾರದು.

ನಮ್ಮ ದೇಶದಲ್ಲಿ ಹೆಚ್ಚಿನ ಮಹಿಳೆಯರು ಜೀವನ ಪರ್ಯಂತ ಹಿಂಸೆ, ಅನಾರೋಗ್ಯ, ಅಸಮಾನತೆ, ಕೆಟ್ಟ ಆಹಾರ, ವೈಯಕ್ತಿಕ ಆರೋಗ್ಯ ಮತ್ತು ಯೋಗಕ್ಷೇಮದ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದ್ದಾರೆ ಎಂಬುದನ್ನು ಈ ಅಂಕಿ ಅಂಶಗಳು ಸಾಬೀತುಪಡಿಸಿವೆ.

ಹೆಚ್ಚುತ್ತಿರುವ ಮಾನಸಿಕ ಒತ್ತಡ
ಪ್ರಸ್ತುತ ಕಾಲ ಬದಲಾಗಿದೆ. ಪುರುಷರಷ್ಟೇ ಸ್ವಾತಂತ್ರ್ಯವನ್ನು ನಾವು ಹೆಣ್ಣು ಮಕ್ಕಳಿಗೆ ನಿಧಾನವಾಗಿಯಾದರೂ ನೀಡುತ್ತಿದ್ದೇವೆ. ಆದರೆ ಇದರಿಂದ ಅವರು ನೆಮ್ಮದಿಯಾಗಿ, ಸಂತೋಷವಾಗಿ ಬದುಕುತ್ತಿದ್ದಾರೆಯೇ? ಖಂಡಿತಾ ಇಲ್ಲ. ಇದಕ್ಕೆ ಕಾರಣ ಸಾಂಪ್ರದಾಯಿಕ ಕಟ್ಟುಪಾಡುಗಳಿಂದ ಅವರನ್ನು ಮುಕ್ತಗೊಳಿಸದೇ ಇರುವುದು ಎನ್ನುತ್ತದೆ ಮತ್ತೂಂದು ಅಧ್ಯಯನ.

ಪ್ರತಿಯೊಬ್ಬ ಉದ್ಯೋಗಸ್ಥ ಮಹಿಳೆಯೂ ಮನೆ ಮತ್ತು ಕಚೇರಿ ಕೆಲಸದ ನಡುವೆ ಸಮತೋಲನ ಸಾಧಿಸಲು ಹರಸಾಹಸವನ್ನೇ ಪಡ ಬೇಕಾಗುತ್ತದೆ. ಹೀಗಾಗಿ ದೇಶದ ಶೇ.87ರಷ್ಟು ಮಹಿಳೆಯರು ಮಾನಸಿಕ ಒತ್ತಡಕ್ಕೆ ಸಿಲುಕಿದ್ದಾರೆ. ಅದರಲ್ಲಿ ಶೇ.82ರಷ್ಟು ಮಹಿಳೆಯರಿಗೆ ವಿಶ್ರಾಂತಿ ಪಡೆಯಲು ಸಮಯವೇ ಇಲ್ಲ ಎನ್ನಲಾಗುತ್ತದೆ. ಅದೇ ಮುಂದುವರಿದ ದೇಶವಾದ ಅಮೆರಿಕದಲ್ಲಿ ಶೇ.53ರಷ್ಟು ಮಹಿಳೆಯರು ಮಾನಸಿಕ ಒತ್ತಡಕ್ಕೆ ಸಿಲುಕಿದ್ದಾರೆ ಎನ್ನಲಾಗಿದೆ.

ನಮ್ಮ ದೇಶದಲ್ಲಿ ಇಂದು ಮಹಿಳೆಯರಿಗೆ ಉದ್ಯೋಗ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳು ತೆರೆದುಕೊಂಡಿವೆ. ಇದನ್ನು ಸಮರ್ಥವಾಗಿ ಬಳಸಿಕೊಳ್ಳಲು ಅವರು ಬಯಸುತ್ತಿದ್ದಾರೆ. ಆದರೆ ಕುಟುಂಬದ ನಿರೀಕ್ಷೆ, ಸಾಮಾಜಿಕ ಹೊಣೆಗಾರಿಕೆ, ಸಾಂಪ್ರದಾಯಿಕ ವಿಚಾರಗಳು ಅವರ ಮನೋಬಲವನ್ನು ಕುಗ್ಗಿಸಲು ಕಾರಣವಾಗುತ್ತಿವೆ.

25ರಿಂದ 55 ವರ್ಷದೊಳಗಿನ ಹೆಚ್ಚಿನ ಮಹಿಳೆಯರೇ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾರೆ. ಅದರಲ್ಲೂ ಮುಖ್ಯವಾಗಿ ಮನೆಯ ಹೊಣೆಗಾರಿಕೆಯೊಂದಿಗೆ ವೃತ್ತಿ ಬದುಕಿನ ನಡುವೆ ಸಮತೋಲನವನ್ನು ತರಲೆತ್ನಿಸುವವರೇ ಹೆಚ್ಚಾಗಿ ಮಾನಸಿಕ ಒತ್ತಡಕ್ಕೆ ಸಿಲುಕುತ್ತಾರೆ.

ಸಾಂಪ್ರದಾಯಿಕ ಕುಟುಂಬ ವ್ಯವಸ್ಥೆಯು ಮಹಿಳೆಯರ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನೇ ಬೀರುತ್ತಿದೆ. ಉನ್ನತ ಶಿಕ್ಷಣ ಪಡೆದ ವೃತ್ತಿಪರರು ಅದರಲ್ಲೂ ಮುಖ್ಯವಾಗಿ ವೃತ್ತಿ ಬದುಕಿನಲ್ಲಿ ಅಪಾರ ಅವಕಾಶಗಳು ಹೊಂದಿರುವವರೆಲ್ಲರ ಮೇಲೂ ಸಾಂಪ್ರದಾಯಿಕ ಕುಟುಂಬ ಪದ್ಧತಿ ತೀವ್ರ ಪರಿಣಾಮವನ್ನು ಬೀರುತ್ತಿದೆ.

ನಮ್ಮ ಸಮಾಜ ಹಾಗೂ ಸ್ನೇಹಿತ, ಬಂಧುಗಳು ಪ್ರತಿಯೊಬ್ಬ ಮಹಿಳೆಯು ಮಾದರಿ ಮಗಳು, ಮಾದರಿ ಪತ್ನಿ ಹಾಗೂ ಮಾದರಿ ಸೊಸೆಯಾಗಬೇಕೆಂದು ಬಯಸುತ್ತದೆ. ಇದನ್ನು ಸಮರ್ಥವಾಗಿ ನಿಭಾಯಿಸಲು ಅಥವಾ ಸಾಬೀತುಪಡಿಸಲು ಪ್ರತಿ ಮಹಿಳೆಯು ಜೀವನ ಪರ್ಯಂತ ಹೋರಾಟವನ್ನೇ ಮಾಡಬೇಕಾಗುತ್ತದೆ.

ಸಾಕಷ್ಟು ಸಂದರ್ಶನ, ಅಧ್ಯಯನ ವರದಿಗಳಲ್ಲಿ ಉಲ್ಲೇಖೀಸಿರುವಂತೆ ವೃತ್ತಿ ಬದುಕಿನ ಸಾಧಕ ಮಹಿಳೆಯರಲ್ಲಿ ಹೆಚ್ಚಿನವರು ನಿತ್ಯ ಬೆಳಗ್ಗೆ 4.30ಕ್ಕೆ ಎದ್ದು ಮಕ್ಕಳು, ಮನೆಯವರಿಗಾಗಿ ಉಪಾಹಾರ, ಮಧ್ಯಾಹ್ನದ ಊಟವನ್ನು ರೆಡಿ ಮಾಡುತ್ತಾರೆ. ಅನಂತರ ದಿನ ಪೂರ್ತಿ ಕಚೇರಿ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಾರೆ. ಮತ್ತೆ ಮನೆಗೆ ಬಂದು ಎಲ್ಲವನ್ನೂ ಶುಚಿಗೊಳಿಸಿ, ಕುಟುಂಬದ ನಿರೀಕ್ಷೆಯಂತೆ ರಾತ್ರಿಯ ಅಡುಗೆಯನ್ನು ಸಿದ್ಧಪಡಿಸುತ್ತಾರೆ. ಹೀಗೆ ಮಹಿಳೆ ದಿನವಿಡೀ ಒಂದಲ  ಒಂದು ಕೆಲಸದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುತ್ತಾಳೆ.

ಪ್ರತಿಯೊಬ್ಬ ಮಹಿಳೆ ತಮ್ಮ ಬದುಕಿನ ಬಗ್ಗೆ ಸಾಕಷ್ಟು ಕನಸು ಕಟ್ಟಿಕೊಂಡಿರುತ್ತಾರೆ. ಆದರೆ ಮಹಿಳೆಯ ಬದುಕಿನಲ್ಲಿ ಅವಕಾಶವಿದ್ದರೂ ಕನಸುಗಳು ನನಸಾಗುವುದು ಬಹಳ ಕಡಿಮೆ. ತನ್ನ ವೃತ್ತಿ ಬದುಕಿಗಿಂತ ಕುಟುಂಬಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದು ನಮ್ಮ ಸಮಾಜ ಬಯಸುವುದು ಇದಕ್ಕೆ ಕಾರಣವಾಗುತ್ತದೆ.

ಬದುಕಿನಲ್ಲಿ ಮಹತ್ವಾಕಾಂಕ್ಷೆಯನ್ನು ಹೊಂದಿರುವ ಮಹಿಳೆಯರು ತಮ್ಮ ಬದ್ಧತೆ ಅಥವಾ ಸಾಮರ್ಥ್ಯವನ್ನು ತೋರ್ಪಡಿಸಲು ಹೆಚ್ಚು ಕೆಲಸದಲ್ಲಿ ತೊಡಗಿಸಿಕೊಳ್ಳಲು ಬಯಸುತ್ತಾರೆ. ಆದರೆ ಎಲ್ಲ ಸಂದರ್ಭದಲ್ಲೂ ಇದು ಸಾಧ್ಯವಾಗುವುದಿಲ್ಲ. ಒಬ್ಬ ಹೆಣ್ಣು ಮದುವೆಯಾಗುವ ತನಕ ಉದ್ಯೋಗ ಮಾಡುತ್ತಿದ್ದರೆ ದೇಶದ ಕೊಡುಗೆಗೆ ಅವಳು ದೀರ್ಘ‌ ಕಾಲದ ಸಂಪನ್ಮೂಲವಾಗುವುದಿಲ್ಲ ಎನ್ನುತ್ತಾರೆ ಹಿರಿಯ ಹಣಕಾಸು ತಜ್ಞರು.

ಮಹಿಳೆಯರ ಬದುಕಿನ ಮೇಲೆ ಕಚೇರಿ, ಮನೆ ಕೆಲಸದ ಒತ್ತಡಗಳು ದೇಶದ ಆರ್ಥಿಕ ಬೆಳವಣಿಗೆಯ ಮೇಲೂ ಗಂಭೀರ ಪರಿಣಾಮವನ್ನೇ ಬೀರುತ್ತದೆ. ಭಾರತೀಯ ಮಹಿಳೆಯರ ಪೈಕಿ ಅರ್ಧಕ್ಕಿಂತಲೂ ಹೆಚ್ಚು ಮಂದಿ ವೃತ್ತಿ ಜೀವನವನ್ನು ಅರ್ಧದಲ್ಲೇ ತ್ಯಜಿಸುತ್ತಾರೆ. ಇನ್ನು ಕೆಲವರು ತಮಗಿರುವ ಅವಕಾಶಗಳ ಬಗ್ಗೆ ಯೋಚಿಸದೆ ತಮ್ಮ ಮಹತ್ವಾಕಾಂಕ್ಷೆಗಳನ್ನು ಕಡಿಮೆ ಮಾಡಲು ಯತ್ನಿಸುತ್ತಾರೆ. ಅಲ್ಲದೇ ಕೆಲಸದ ಸ್ಥಳದಲ್ಲಿ ಪಕ್ಷಪಾತವನ್ನು ಎದುರಿಸುತ್ತಾರೆ.

ಕೆಲವೊಂದು ಕಂಪೆನಿಗಳು ಉದ್ಯೋಗಸ್ಥ ಮಹಿಳೆಯರ ಮಾನಸಿಕ ಒತ್ತಡವನ್ನು ಕಡಿಮೆಗೊಳಿಸುವ ಯೋಜನೆಗಳನ್ನು ಹಮ್ಮಿಕೊಳ್ಳುತ್ತವೆ. ಉದಾಹರಣೆಗೆ ಇನ್ಫೋಸಿಸ್‌. ಬೆಂಗಳೂರಿನಲ್ಲಿರುವ ಇನ್ಫೋಟೆಕ್‌ ಪವರ್‌ ಹೌಸ್‌ ಮೂಲಕ ಇನ್ಫೋಸಿಸ್‌ ವುಮೆನ್ಸ್‌ ಇನ್‌ಕ್ಲೂಸಿವಿಟಿ ನೆಟ್‌ವಕ್‌ ì (ಐಡ ಬ್ಲೂé ಐಎನ್‌) ಅನ್ನು ಸ್ಥಾಪಿಸಿದೆ. ಇದರಲ್ಲಿ ಕೆಲಸವನ್ನು ಅರ್ಧದಲ್ಲೇ ತ್ಯಜಿಸುವ ಹಾಗೂ ಕೆಲಸದ ಒತ್ತಡದಲ್ಲಿರುವ ಮಹಿಳೆಯರನ್ನು ಗುರುತಿಸಿ ಅವರಿಗೆ ಮನೋಸ್ಥೈರ್ಯ ತುಂಬುವ ಕಾರ್ಯವನ್ನು ಮಾಡುವ ಮೂಲಕ ಹೆಣ್ಣು ಮಕ್ಕಳ ಸ್ನೇಹಿ ವಾತಾವರಣವನ್ನು ಸೃಷ್ಟಿಸಲಾಗುತ್ತಿದೆ.

ಒಂದು ಅಂಕಿ ಅಂಶದ ಪ್ರಕಾರ ಇನ್ಫೋಸಿಸ್‌ನ ಹೆಚ್ಚಿನ ಮಹಿಳೆಯರು ಮದುವೆಯ ಅನಂತರ ಕೆಲಸವನ್ನು ತೊರೆಯುತ್ತಿದ್ದಾರೆ. ಇನ್ನು ಕೆಲವರು ತಮ್ಮ ಮೊದಲ ಅಥವಾ ಎರಡನೇ ಮಗುವಿನ ಜನನವಾದ ಅನಂತರ ಕೆಲಸವನ್ನು ತೊರೆಯುತ್ತಾರೆ. ಈ ಹಿನ್ನೆಲೆಯಲ್ಲಿ ಇನ್ಫೋಸಿಸ್‌ ಒಂದು ವರ್ಷ ಮಗುವಿನ ಆರೈಕೆಯ ವಿಶ್ರಾಂತಿ ಹಾಗೂ ಅನಂತರದ ಎರಡು ವರ್ಷ ಪಾಟ್‌ ì ಟೈಮ್‌ ಉದ್ಯೋಗ ಮಾಡುವ ಅವಕಾಶವನ್ನು ಕಲ್ಪಿಸಿತು. ಇದರಿಂದ ಮಹಿಳೆಯರಿಗೆ ಕೆಲಸ ಮತ್ತು ಬದುಕಿನ ನಡುವೆ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಾಯಿತು. ಅಲ್ಲದೇ ಪ್ರತಿ ವರ್ಷವೂ ಮಹಿಳೆಯರನ್ನು ಕರೆಸಿ ಯಾವ ಮೂರು ವಿಷಯಗಳನ್ನು ನೀವು ಕಂಪೆನಿಗಾಗಿ ಮಾಡಲು ಬಯಸುತ್ತೀರಿ ಎಂಬ ಪ್ರಶ್ನೆಯನ್ನು ಕೇಳಲಾಗುತ್ತದೆ. ಇದು ಹೆಚ್ಚಿನ ಮಹಿಳೆಯರಿಗೆ ಕೆಲಸ ಮಾಡಲು ಪ್ರೋತ್ಸಾಹ ನೀಡಿದಂತಾಯಿತು. ಮಾತ್ರವಲ್ಲದೇ ತಮ್ಮ ಕಚೇರಿ ಕೆಲಸಗಳನ್ನು ಅವರು ಸುಲಭವಾಗಿ ಮಾಡಿ ಮುಗಿಸುವ ಅವಕಾಶವನ್ನು ಕಲ್ಪಿಸಿದಂತಾಯಿತು ಎನ್ನುತ್ತಾರೆ ಹಿರಿಯ ಉಪಾಧ್ಯಕ್ಷ ಮತ್ತು ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥೆ ನಂದಿತಾ ಗುರ್ಜರ್‌.

ಉದ್ಯೋಗಸ್ಥ ಸ್ಥಳದಲ್ಲಿ ಪ್ರತಿಯೊಬ್ಬ ಮಹಿಳೆಯ ಮಾನಸಿಕ ಭಾವನೆಗಳನ್ನು ಅರಿತುಕೊಳ್ಳುವ, ಅವರ ಒತ್ತಡವನ್ನು ಕಡಿಮೆ ಮಾಡಬಲ್ಲ ವಾತಾವರಣ ಸೃಷ್ಟಿಯಾದರೆ ಅದು ಅವರ ಸಾಮರ್ಥ್ಯ ಇನ್ನಷ್ಟು ಹೆಚ್ಚಿಸಬಹುದು ಎಂಬುದು ಇದರಿಂದ ಸಾಬೀತಾಗಿದೆ. ಹೀಗಾಗಿ ಮಹಿಳಾ ದಿನದ ಈ ಸುಸಂದರ್ಭದಲ್ಲಿ ಇನ್ಫೋಸಿಸ್‌ ಕೈಗೊಂಡತಹ ಮಾದರಿಯ ಕ್ರಮಕ್ಕೆ ಆಡಳಿತ ವರ್ಗದಿಂದ ಹಿಡಿದು ಖಾಸಗಿ ವಲಯವೂ ಮುಂದಾಗಬೇಕಿದೆ. ತಾಯಿ,ಪತ್ನಿ,ಸಹೋದರಿ, ಸ್ನೇಹಿತೆಯಾಗಿ ನೆರವಾಗುವ ಅನೇಕ ಮಹಿಳೆಯರು ನಮ್ಮ ಸುತ್ತ ಮುತ್ತಲೂ ಇದ್ದಾರೆ. ಅವರ ಹಕ್ಕುಗಳಿಗಾಗಿ, ಅವರ ಮಾನಸಿಕ ಒತ್ತಡವನ್ನು ಕಡಿಮೆ ಮಾಡುವ ಸಲುವಾಗಿ ಹಾಗೂ ಅವರ ಮೇಲಾಗುತ್ತಿರುವ ದೌರ್ಜನ್ಯವನ್ನು ತಡೆಗಟ್ಟಲು
ಪ್ರತಿಯೊಬ್ಬ ವ್ಯಕ್ತಿಯೂ ದಿನದಲ್ಲಿ ಸಣ್ಣ ಸೇವೆಯನ್ನು ಸಲ್ಲಿಸಿದರೂ ಸಾಕು: ಮಹಿಳಾ ದಿನದ ಆಶಯ ಕೊಂಚವಾದರೂ
ಈಡೇರಬಲ್ಲದು.

– ವಿದ್ಯಾ ಕೆ. ಇರ್ವತ್ತೂರು

ಟಾಪ್ ನ್ಯೂಸ್

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World Theatre Day 2024: ರಂಗಭೂಮಿ ಕಲೆ-ಯುದ್ಧ ಮತ್ತು ಶಾಂತಿ ಪರಸ್ಪರ ವಿರುದ್ಧ ಧ್ರುವ

World Theatre Day 2024: ರಂಗಭೂಮಿ ಕಲೆ-ಯುದ್ಧ ಮತ್ತು ಶಾಂತಿ ಪರಸ್ಪರ ವಿರುದ್ಧ ಧ್ರುವ

ಡೌಟೇ ಬೇಡ, ಜೋಡೆತ್ತುಗಳ ಹಾಗೆ ನಾನು, ಅನಂತ ಹೆಗಡೆ ಇಬ್ಬರೂ ಕೆಲಸ ಮಾಡುತ್ತೇವೆ…

ಡೌಟೇ ಬೇಡ, ಜೋಡೆತ್ತುಗಳ ಹಾಗೆ ನಾನು, ಅನಂತ ಹೆಗಡೆ ಇಬ್ಬರೂ ಕೆಲಸ ಮಾಡುತ್ತೇವೆ…

Book Review;ವಿಶಿಷ್ಟ ರೂಪಕ ಶೈಲಿಯಿಂದ ಚಿತ್ರ ರಸಿಕರ ಮನಗೆದ್ದ ಕಾಸರವಳ್ಳಿಯ “ಬಿಂಬ ಬಿಂಬನ”

Book Review;ವಿಶಿಷ್ಟ ರೂಪಕ ಶೈಲಿಯಿಂದ ಚಿತ್ರ ರಸಿಕರ ಮನಗೆದ್ದ ಕಾಸರವಳ್ಳಿಯ “ಬಿಂಬ ಬಿಂಬನ”

World Water Day: ಜುಳು ಜುಳು ಸದ್ದೇಕೆ ಉರಿ ಮೌನ

World Water Day: ಜುಳು ಜುಳು ಸದ್ದೇಕೆ ಉರಿ ಮೌನ

ಪ್ರೊ| ಕು.ಶಿ.: ಜ್ಞಾನಕಾಶಿಯಲ್ಲೊಬ್ಬ ಫ‌ಕೀರ

ಪ್ರೊ| ಕು.ಶಿ.: ಜ್ಞಾನಕಾಶಿಯಲ್ಲೊಬ್ಬ ಫ‌ಕೀರ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್‌

Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್‌

Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್‌’ ಎಂದ ಬಿಜೆಪಿಗರು!

Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್‌’ ಎಂದ ಬಿಜೆಪಿಗರು!

Narayan Gowda: ಹೆಚ್ಚಿನ ಮತಗಳಿಂದ ಎಚ್‌ಡಿಕೆ ಗೆಲ್ಲಿಸುತ್ತೇವೆ: ನಾರಾಯಣ ಗೌಡ

Narayan Gowda: ಹೆಚ್ಚಿನ ಮತಗಳಿಂದ ಎಚ್‌ಡಿಕೆ ಗೆಲ್ಲಿಸುತ್ತೇವೆ: ನಾರಾಯಣ ಗೌಡ

1-qweqwew

Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ

Raksha Ramaiah: ಯಾರಿಗೆ ಟಿಕೆಟ್‌ ಕೊಟ್ಟರೂ ಅಭ್ಯರ್ಥಿ ಪರ ಕೆಲಸ ಮಾಡ್ತೇವೆ: ರಕ್ಷಾ ರಾಮಯ್ಯ

Raksha Ramaiah: ಯಾರಿಗೆ ಟಿಕೆಟ್‌ ಕೊಟ್ಟರೂ ಅಭ್ಯರ್ಥಿ ಪರ ಕೆಲಸ ಮಾಡ್ತೇವೆ; ರಕ್ಷಾ ರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.