ವ್ಯಕ್ತಿ ನಿಂದನೆ, ಜಾತೀವಾದ ಸರಿಯಲ್ಲ


Team Udayavani, May 31, 2022, 6:05 AM IST

ವ್ಯಕ್ತಿ ನಿಂದನೆ, ಜಾತೀವಾದ ಸರಿಯಲ್ಲ

ಬಿಜೆಪಿ ಸರಕಾರ ಈ ಹಿಂದೆ ಕನ್ನಡ ಭಾಷಾ ಪಠ್ಯಗಳ ರಚನೆಗೆ ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ| ಸಿ.ಎಸ್‌.ರಾಮಚಂದ್ರ ಅವರ ಅಧ್ಯಕ್ಷತೆಯಲ್ಲಿ ಪಠ್ಯಪುಸ್ತಕ ರಚನಾ ಸಮಿತಿ ರಚಿಸಿತ್ತು. ಪರಿಶೀಲಕರು ಸಂಪಾದಕೀಯ ಮಂಡಳಿ ಸದಸ್ಯರಾಗಿ ಹಿರಿಯ ಸಾಹಿತಿ ಪ್ರೊ| ಸಾ. ಶಿ.ಮರುಳಯ್ಯನವರಿದ್ದರು. ಜತೆಗೆ ಸಂಪಾದಕ ಮಂಡಳಿಯಲ್ಲಿ ಹಿರಿಯ ಸಾಹಿತಿಗಳಾದ ಪ್ರೊ| ಅ.ರಾ.ಮಿತ್ರ ಹಾಗೂ ಡಾ| ವಿಷ್ಣು ಎಂ. ಶಿಂದೆಯವರಿದ್ದರು. ಮುಖ್ಯ ಸಂಯೋಜಕರಾಗಿ ಪ್ರೊ| ಜಿ.ಎಸ್‌.ಮುಡಂ  ಬತ್ತಾಯ ಅವರಿದ್ದರು. ಇವರು ಹಲವರ ನೆರವಿನೊಂದಿಗೆ ಸಮಿತಿಗಳ ಮೂಲಕ ಸಿದ್ಧಪಡಿಸಿದ ಪಠ್ಯಪುಸ್ತಕಗಳನ್ನು ಅನಂತರ ಬಂದ ಕಾಂಗ್ರೆಸ್‌ ಸರಕಾರ ಪರಿಷ್ಕರಣೆ ಮಾಡಲು ಡಾ| ಬರಗೂರು ರಾಮಚಂದ್ರಪ್ಪ ಅವರ ಸರ್ವಾಧ್ಯಕ್ಷತೆಯಲ್ಲಿ ಪಠ್ಯಪುಸ್ತಕ ಪರಿಷ್ಕರಣ ಸಮಿತಿಯನ್ನು ರಚಿಸಿತ್ತು. ಮೊದಲ ಮುನ್ನುಡಿಯಲ್ಲಿ ಪಠ್ಯಪುಸ್ತಕಗಳಲ್ಲಿರುವ ವಿಷಯ ಹಾಗೂ ಅಭ್ಯಾಸಗಳು ವಿದ್ಯಾರ್ಥಿಗಳನ್ನು ಯೋಚನೆ ಮಾಡುವಂತೆ ಮಾಡಿ, ಚಟುವಟಿಕೆಗಳ ಮೂಲಕ ಜ್ಞಾನ ಹಾಗೂ ಸಾಮರ್ಥ್ಯಗಳನ್ನು ಪಡೆಯುವಂತೆ ಮಾಡುವ ಪ್ರಯತ್ನ ಮಾಡ ಲಾಗಿದೆ. ಪಠ್ಯಪುಸ್ತಕಗಳೊಂದಿಗೆ ಅತ್ಯಂತ ಅವಶ್ಯಕ ಭಾರತೀಯ ಜೀವನಮೌಲ್ಯಗಳನ್ನು ಅಂತರ್ಗತವಾಗಿ ಬಳಸಲಾಗಿದೆ. ಈ ನೂತನ ಪಠ್ಯಪುಸ್ತಕಗಳು ಪರೀಕ್ಷಾಪೂರಕ ದೃಷ್ಟಿಯಿಂದ ರಚಿತವಾಗಿಲ್ಲ. ಬದಲಾಗಿ ಅವುಗಳು ವಿದ್ಯಾರ್ಥಿಗಳ ಸರ್ವಾಂಗೀಣ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿವೆ. ತನ್ಮೂಲಕ ಅವರನ್ನು ಸ್ವತಂತ್ರ ಭಾರತದ ಸ್ವಸ್ಥ ಸಮಾಜದ ಉತ್ತಮ ಪ್ರಜೆಗಳನ್ನಾಗಿ ಮಾಡುವ ಪ್ರಯತ್ನ ನಡೆದಿದೆ ಎಂದಿದ್ದಾರೆ ಪ್ರೊ| ಜಿ.ಎಸ್‌.ಮುಡಂಬಡಿತ್ತಾಯ ಹಾಗೂ ನಾಗೇಂದ್ರ ಕುಮಾರ್‌. ಇದರಲ್ಲಿ ಕಾಂಗ್ರೆಸ್‌ ಸರಕಾರ ಯಾವ ತಪ್ಪನ್ನು ಕಂಡಿತೋ ತಿಳಿಯದು. ಆದರೆ ಬಿಜೆಪಿ ಸರಕಾರದ ಪಠ್ಯಪುಸ್ತಕಗಳನ್ನು ಪರಿಷ್ಕರಣೆ ಮಾಡಲು ಮುಂದಾಗಿದೆ. ಅದನ್ನು ಡಾ| ಬರಗೂರು ರಾಮಚಂದ್ರಪ್ಪ ಹಾಗೂ ಗೋಪಾಲ ಕೃಷ್ಣ ಎಚ್‌.ಎನ್‌. ಅವರು “ಪರಿಷ್ಕರಣೆ ಕುರಿತು’ ಎಂಬಲ್ಲಿ ಬರೆಯುತ್ತಾ “ಮಾನ್ಯ ಮುಖ್ಯಮಂತ್ರಿಯವರೂ ಅರ್ಥಸಚಿವರೂ ಆಗಿರುವ ಸಿದ್ದರಾಮ ಯ್ಯನವರು 2014-15ರರ ಬಜೆಟ್‌ನಲ್ಲಿ “ಪಠ್ಯಪುಸ್ತಕಗಳನ್ನು ಸಾಮಾಜಿಕ ಸಾಮರಸ್ಯ, ನೈತಿಕ ಮೌಲ್ಯಗಳು, ವ್ಯಕ್ತಿತ್ವವಿಕಸನ, ವೈಜ್ಞಾನಿಕ, ವೈಚಾರಿಕ ಮನೋಭಾವ, ಜಾತ್ಯಾತೀತತೆ ಮತ್ತು ರಾಷ್ಟ್ರೀಯ ಬದ್ಧತೆಗಳಿಗೆ ಅನುವಾಗುವಂತೆ ತಜ್ಞರ ಸಮಿತಿಯನ್ನು ಪುನರ್‌ ರಚಿಸಲಾಗುವುದು ಎಂದಿರುವುದನ್ನು ದಾಖಲಿಸಿದ್ದಾರೆ. ಹಾಗಾದರೆ ಹಿಂದಿನ ಸಮಿತಿ ಹಾಗೂ ಪಠ್ಯಗಳು ಈ ಆಶಯಕ್ಕೆ ಅನುಗುಣವಾಗಿ ಇರಲಿಲ್ಲವೇ? ಮುಖ್ಯಮಂತ್ರಿ ಸ್ಥಾನದಲ್ಲಿ ಇದ್ದ ಸಿದ್ದರಾಮಯ್ಯ ಅವರಿಗೆ ಎಲ್ಲ ಪಠ್ಯಪುಸ್ತಕಗಳನ್ನು ಓದಲು ಸಾಧ್ಯವಿಲ್ಲ. “ಸಾರ್ವಜನಿಕ ಅಭಿಪ್ರಾಯ’ ಗಮನಿಸಿ ನಿರ್ಧಾರ ಕೈಗೊಂಡಿದ್ದಾರೆ. ಈ “ಸಾರ್ವಜನಿಕರು ಯಾರು?’ ಪಠ್ಯಪುಸ್ತಕ ಗಳನ್ನು ಓದಿ ಸಾರ್ವಜನಿಕರ ಅಭಿಪ್ರಾಯಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಿದ ಬಳಿಕ ತೀರ್ಮಾನಿಸುವುದು ಸಾಂವಿಧಾನಿಕ ಕ್ರಮ ಎಂದು ಭಾವಿಸಿದ್ದೇನೆ. ಆದರೆ ಇಲ್ಲಿ ಹಾಗೆ ಆದಂತೆ ಕಾಣುತ್ತಿಲ್ಲ. ಈ ನಿರ್ಧಾರ ರಾಜಕೀಯ ನಿರ್ಧಾರವೇ ವಿನಃ ಶೈಕ್ಷಣಿಕ ನಿರ್ಧಾರವಲ್ಲ ಎಂಬುದನ್ನು ಮುಖ್ಯಮಂತ್ರಿ ಅವರಿಗೆ ಡಾ| ಬರಗೂರರು ಅಂದೇ ಪಠ್ಯಪುಸ್ತಕ ಎಂದರೆ ಪಕ್ಷದ ಪುಸ್ತಕವಲ್ಲ ಎಂದಿರುವುದು ಸಾಕ್ಷಿಯಾಗಿದೆ. ಅಂದರೆ ಸಿದ್ದರಾಮಯ್ಯ ಅವರಿಗೆ ಇದನ್ನು ಪಕ್ಷದ ಪುಸ್ತಕ ಮಾಡುವ ಆಲೋಚನೆಯಿತ್ತು. ಆದರೆ ಡಾ| ಬರಗೂರರು ಅದನ್ನು ಪಾಲಿಸಿಲ್ಲ ಎಂಬುದು ಸ್ಪಷ್ಟವಾಗುತ್ತದೆ.

ಅದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ. ಆದರೆ ಅವರು ಈ ಹಿಂದಿನ ಪಠ್ಯಪುಸ್ತಕಗಳು ಕಾಂಗ್ರೆಸ್‌ ಸರಕಾರ ಬಜೆಟ್‌ನಲ್ಲಿ ಘೋಷಿಸಿದ ಆಶಯಗಳಿಗೆ ವಿರುದ್ಧವಾಗಿದ್ದವೇ? ಹಾಗಿದ್ದರೆ ಆ ಸಂಗತಿಗಳು ಯಾವುವು ಎಂಬುದನ್ನು ಈಗಲಾದರೂ ಬರೆದು ಸ್ಪಷ್ಟಪಡಿಸಬೇಕು ಅಥವಾ ಆ ಆಶಯಗಳು ಈಗಾಗಲೇ ಪಠ್ಯಪುಸ್ತಕಗಳಲ್ಲಿದ್ದವು. ಹೆಚ್ಚಿನ ಬದಲಾವಣೆ ಅಗತ್ಯವಿರಲಿಲ್ಲ ಎನ್ನುವುದು ಸತ್ಯವಾದರೆ ಸರ್ವಾಧ್ಯಕ್ಷರಾಗಿ ಒಪ್ಪಿಕೊಂಡದ್ದು ಹೇಗೆ ಪಕ್ಷಾತೀತವಾಗುತ್ತದೆ? ಶೈಕ್ಷಣಿಕವಾಗಿ ನೈತಿಕವಾಗುತ್ತದೆ ಎಂಬ ಪ್ರಶ್ನೆಯೂ ನನ್ನನ್ನು ಕಾಡುತ್ತಿದೆ. ಅದಕ್ಕೂ ಅವರೇ ಉತ್ತರಿಸಬೇಕು.

ಪಠ್ಯಪುಸ್ತಕ ರಚನೆ ಎಂಬುದು ಒಬ್ಬರಿಂದ ಒಂದು ಸಭೆಯಲ್ಲಿ ಕೈಗೊಳ್ಳುವ ನಿರ್ಧಾರವಲ್ಲ. ಅದಕ್ಕೆ ವಿಸ್ತಾರವಾದ ಓದು, ಆಯ್ಕೆ, ಚರ್ಚೆ, ಅಂತಿಮ ನಿರ್ಧಾರ, ಟಿಪ್ಪಣಿ ರಚನೆ, ಬೆರಳಚ್ಚು ತಿದ್ದುಪಡಿ ನೋಡುವುದು, ಹೀಗೆ ಹಲವಾರು ತಿಂಗಳು ನಡೆಯುವ ಮಹತ್ವದ ಶೈಕ್ಷಣಿಕ ಕ್ರಿಯೆ. ಅದರ ಮುಖ್ಯವಾದ ಉದ್ದೇಶವೇ ಮಕ್ಕಳ ವ್ಯಕ್ತಿತ್ವದ ನಿರ್ಮಾಣ. ಈ ಮೂಲಕ ರಾಷ್ಟ್ರದ ನಿರ್ಮಾಣ. ಈ ಪಠ್ಯಪುಸ್ತಕ ರಚನೆಯ ಹಿಂದೆ ರಾಜಕೀಯ ಪಕ್ಷಗಳ ಪಾತ್ರ ನೆಹರೂ ಅವರ ಕಾಲದಿಂದಲೇ ಆರಂಭವಾಗಿದೆ. ಅದರ ರೂವಾರಿಗಳು ಭಾರತೀಯ ಕಮ್ಯುನಿಸ್ಟರು. ಅದಕ್ಕೆ ಕಾರಣ ರಷ್ಯಾದಲ್ಲಿ ಕಮ್ಯುನಿಸ್ಟ್‌ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಶಿಕ್ಷಣ, ಸಾಹಿತ್ಯ, ಸಂಸ್ಕೃತಿ, ವಿಜ್ಞಾನ, ಪತ್ರಿಕೆ ಎಲ್ಲವನ್ನೂ ತನ್ನ ಸರ್ವಾಧಿಕಾರಿ ವರ್ಗ ಸಂಘರ್ಷದ ಮಾದರಿಯಲ್ಲಿ ಬದಲಾವಣೆ ತಂದಿರುವುದು ಕಾರಣ ಮತ್ತು ಪ್ರೇರಣೆ. ಕಾಂಗ್ರೆಸ್‌ “ರಾಜಕೀಯ ಅಧಿಕಾರ’ ಹಿಡಿದರೆ ಅವರ ಸಂಗಾತಿಗಳಾದ ಕಮ್ಯುನಿಸ್ಟರು “ಶಿಕ್ಷಣದ ಮೇಲೆ ಅಧಿಕಾರ’ ಸ್ಥಾಪಿಸಿದರು. ಈ ಧೋರಣೆಯನ್ನು ಮುಂದೆ ಬಂದ ಬಿಜೆಪಿ ಸರಕಾರಗಳು ಸರಿಪಡಿಸಲು ಪ್ರಯತ್ನಿಸಿದರೆ, ಅದಕ್ಕೆ ಕೇಸರೀಕರಣ, ಕೋಮುವಾದಿ ಎಂಬ ಬಣ್ಣ ಬಳಿದಿರುವುದನ್ನು ದೇಶ ನೋಡಿದೆ. ಅಟಲ್‌ ಬಿಹಾರಿ ವಾಜಪೇಯಿ ಅವರ ಕಾಲದಲ್ಲಿ ಎಲ್ಲÉ ರಾಜ್ಯದ ಶಿಕ್ಷಣ ಸಚಿವರ ಒಂದು ಸಭೆಯಲ್ಲಿ ಕಾಂಗ್ರೆಸ್‌ ಸಚಿವರು ಸರಸ್ವತಿಯ ಪ್ರಾರ್ಥನೆ ಯನ್ನೂ ಕೇಸರೀಕರಣ, ಕೋಮುವಾದ ಎಂದು ಬಹಿಷ್ಕರಿಸಿ ಹೊರಹೊಗಿರುವುದೂ ಇತಿಹಾಸದಲ್ಲಿ ಸೇರಿದೆ. ಅದರ ಮುಂದು ವರೆದ ರೂಪಗಳೇ ಡಾ| ಬರಗೂರು ರಾಮಚಂದ್ರಪ್ಪ ಹಾಗೂ ರೋಹಿತ್‌ ಚಕ್ರತೀರ್ಥ ಅವರ ಪರಿಷ್ಕರಣಾ ಸಮಿತಿಗಳ ರಚನೆ. ಆದರೆ ಇಬ್ಬರೂ ಇದು ಪಕ್ಷದ ಪಠ್ಯವಲ್ಲ ಎನ್ನುತ್ತಿರುವುದೂ ಸತ್ಯ.

ಪ್ರೊ| ಜಿ.ಎಸ್‌.ಮುಡಂಬಡಿತ್ತಾಯ ಅವರ ಸಮಿತಿಯ ಯಾವ ಪಠ್ಯಗಳನ್ನು ಡಾ| ಬರಗೂರು ರಾಮಚಂದ್ರಪ್ಪ ಸಮಿತಿ ಯಾವ ಕಾರಣಕ್ಕಾಗಿ ಕೈಬಿಟ್ಟಿ ತು? ಯಾವ ಕಾರಣಕ್ಕಾಗಿ ಯಾವ ಪಠ್ಯಗಳನ್ನು ಉಳಿಸಿಕೊಂಡಿ ತು? ಮಕ್ಕಳ ದೃಷ್ಟಿಯಿಂದ ಅದರ ಸಾಧಕ ಬಾಧಕ ಗಳೇನು? ಎಂಬ ಬಗ್ಗೆ ತೌಲನಿಕವಾದ ಅಧ್ಯಯನ ನಡೆಯಲಿ, ಉದಾಹರಣೆಗಳೊಂದಿಗೆ ಚರ್ಚೆಯಾಗಲಿ. ಅದೇ ರೀತಿ ಡಾ| ರಾಮಚಂದ್ರಪ್ಪ ಅವರ ಸಮಿತಿಯ ಪಠ್ಯಪುಸ್ತಕಗಳಲ್ಲಿ ರೋಹಿತ್‌ ಚಕ್ರತೀರ್ಥ ಅವರ ಸಮಿತಿ ಯಾವ ಪಠ್ಯಗಳನ್ನು ಯಾವ ಕಾರಣಕ್ಕಾಗಿ ಕೈಬಿಟ್ಟಿದೆ? ಯಾವ ಕಾರಣಕ್ಕಾಗಿ ಯಾವ ಪಠ್ಯಗಳನ್ನು ಉಳಿಸಿ ಕೊಂಡಿದೆ? ಮಕ್ಕಳ ದೃಷ್ಟಿಯಿಂದ ಅದರ ಸಾಧಕಬಾಧಕಗಳೇನು? ಎಂಬ ಬಗ್ಗೆ ತೌಲನಿಕವಾದ ಅಧ್ಯಯನ ನಡೆಯಲಿ. ಉದಾಹರಣೆ ಗಳೊಂದಿಗೆ ಚರ್ಚೆಯಾಗಲಿ.

ಈ ಮೂರೂ ಸಮಿತಿಗಳ ಅಧ್ಯಕ್ಷರು, ಸಮಿತಿ ಮತ್ತು ಅವುಗಳನ್ನು ಒಪ್ಪಿಕೊಂಡ ಸರಕಾರಗಳು, ಸಮಿತಿಗಳು ಉಳಿಸಿಕೊಂಡ ಪಠ್ಯ ವಿಷಯಗಳಲ್ಲಿ ಪರಸ್ಪರ ಸಹಮತ ಹೊಂದಿರುವ ಉತ್ತಮ ಗುಣ ವನ್ನು ಸಮಾಜಕ್ಕೆ ತಲುಪಿಸೋಣ. ಕೈಬಿಟ್ಟಿರುವ ಪಠ್ಯಗಳ ವಿಷಯ ದಲ್ಲಿ ಪರಸ್ಪರ ವಿಭಿನ್ನ ಕಾರಣಗಳಿಗಾಗಿ ಭಿನ್ನಾಭಿಪ್ರಾಯ ಹೊಂದಿ ರುವುದನ್ನು ಗುರುತಿಸಿ ಯಾವ ಯಾವ ಪಠ್ಯಗಳನ್ನು ಬಿಟ್ಟಿರುವುದು ತಪ್ಪು ಅಥವಾ ಸರಿ ಎಂಬ ಬಗ್ಗೆ ಪಕ್ಷಾತೀತವಾದ, ಸಿದ್ಧಾಂತಾತೀತ ವಾದ, ಸತ್ಯಪಕ್ಷಪಾತಿಯಾದ ಸಂವಾದ ನಡೆಯಲಿ. ಈ ಮೂರೂ ಪಠ್ಯಗಳ ತೌಲನಿಕ ಅಧ್ಯಯನ, ಚರ್ಚೆ, ಸಂವಾದ ಸಾಧ್ಯವಾದರೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಮೂಲಕವೇ ಮುಂದಿನ ದಿನಗಳಲ್ಲಿ ಮಾಡಬೇಕೆಂಬ ಆಲೋಚನೆ ಇದೆ. ಕ್ರಿಯೆಗೆ ಪ್ರತಿಕ್ರಿಯೆ ಸಹಜ. ಈ ಕ್ರಿಯೆ ಪ್ರತಿಕ್ರಿಯೆಗಳು ವ್ಯಕ್ತಿ ನಿಂದನೆಗೆ ಜಾತಿ ನಿಂದನೆಗೆ ಪಕ್ಷ ರಾಜಕಾರಣಕ್ಕೆ ಸೀಮಿತವಾಗದಿರಲಿ. ಮೊಸರನ್ನು ಕಡೆಯೋಣ, ಮಡಿಕೆಯನ್ನು ಒಡೆಯದಿರೋಣ. ಸಶಕ್ತ ಸ್ವಸ್ಥ ಸುಸಂಸ್ಕೃತ ಮಕ್ಕಳು ಸಶಕ್ತ ಸ್ವಸ್ಥ ಸುಸಂಸ್ಕೃತ ಮನೆಗೆ, ಸಮಾಜಕ್ಕೆ, ಪಕ್ಷಕ್ಕೆ, ಸಿದ್ಧಾಂತಕ್ಕೆ, ದೇಶಕ್ಕೆ, ವಿಶ್ವಕ್ಕೆ ಕಾರಣರಾಗುತ್ತಾರೆ ಎಂಬುದನ್ನು ಮರೆಯ ದಿರೋಣ.”ಜಗತ್ತಿನ ಎಲ್ಲ ಒಳ್ಳೆಯದು ನನ್ನೆಡೆಗೆ ಬರಲಿ” ಇದು ಭಾರತೀಯ ಶಿಕ್ಷಣದ ಮೂಲ ಆಶಯ. ಈ ಮೂರೂ ಸಮಿತಿಗಳು ಒಂದೊಂದು ಪಠ್ಯಗಳಲ್ಲಿ ಒಂದೆರಡು ಪಾಠಗಳನ್ನು ಬದಲಿಸಿರ ಬಹುದು. ಶೇ.90 ಪಠ್ಯಗಳನ್ನು ಉಳಿಸಿಕೊಂಡಿರುವುದನ್ನು ಮರೆತು ಮಾತಾಡುತ್ತಿರುವುದನ್ನು ಯಾರೂ ವಿವೇಕಯುತವಾದುದೆನ್ನ ಲಾರರು. ಶಿಕ್ಷಣ ಪ್ರೀತಿ ನಮ್ಮ ಎದೆಯನ್ನು ತಿಳಿಯಾಗಿಸಲಿ.

– ಡಾ. ಬಿ.ವಿ. ವಸಂತಕುಮಾರ್‌, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ

ಟಾಪ್ ನ್ಯೂಸ್

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.