ರಾಮಕೃಷ್ಣರ ಮಾತುಗಳೇ ಯುವಜನತೆಗೆ ದಾರಿದೀಪ…


Team Udayavani, Jun 21, 2021, 9:34 AM IST

ರಾಮಕೃಷ್ಣರ ಮಾತುಗಳೇ ಯುವಜನತೆಗೆ ದಾರಿದೀಪ…

ರಾಮಕೃಷ್ಣ ಪರಮಹಂಸರು! ಹೀಗೊಂದು ಹೆಸರು ಕೇಳಿದರೆ ಯುವಕರ ಮೈಮನದಲ್ಲಿ ದಿವ್ಯ ಸಾನ್ನಿಧ್ಯವೊಂದರ ವಿದ್ಯುತ್‌ ಸಂಚಾರವಾಗುತ್ತದೆ. ಇಡೀ ಜಗತ್ತಿಗೆ ಸತ್ವಶಕ್ತಿಯ ಪ್ರವಾಹವನ್ನೇ ಹರಿಸಿದವರು. ಶಿಷ್ಯಗಣದ ಮಹತ್‌ ಶಕ್ತಿಯ ತೊರೆಯಲ್ಲಿ ಜಗತ್ತಿಗೆ ಬೆಳಕು ನೀಡಿದ ಮಹಾತ್ಮರವರು. ಭಾರತದ ಆತ್ಮಕ್ಕೆ ಹೊಸ ಉಡುಗೆಯುಡಿಸಿ ಸಿಂಗರಿಸಿ ಹೊಸ ಮನ್ವಂತರಕ್ಕೆ ಸಾಕ್ಷಿಯಾದ ಮಹಾಪುರುಷರು.

ಯುವಸಮೂಹಕ್ಕೆ ತಾನು ಹೇಳಿದ್ದೆ ಪರಮ ಸತ್ಯ ನೀವು ಅವುಗಳನ್ನ ಒಪ್ಪಿಕೊಳ್ಳಬೇಕು ಎಂದವರಲ್ಲ, ಬದಲಾಗಿ ಯಾವುದನ್ನೂ ಪ್ರಶ್ನೆ ಮಾಡದೆ ಒಪ್ಪಿಕೊಳ್ಳಬೇಡಿ ಎಂದವರವರು.

ಸ್ವತಃ ಶಿಷ್ಯ ನರೇಂದ್ರನಾಥನಿಗೆ ನೀನು ಸುಮ್ಮನೆ ನನ್ನನ್ನ ಗುರುವಾಗಿ ಒಪ್ಪಿಕೊಳ್ಳಬೇಡ, ಹೇಗೆ ಸಾಲ ಕೊಟ್ಟವರು ಒಂದೊಂದು ಕಾಸನ್ನೂ ಪೂರ್ಣವಾಗಿ ಪರಿಶೀಲಿಸಿ ತೆಗೆದುಕೊಳ್ಳುತ್ತಾರೋ ಅಷ್ಟೇ ಕೂಲಂಕುಷವಾಗಿ ಪರೀಕ್ಷೆ ಮಾಡು ಎನ್ನುತ್ತಾರೆ. ಹೀಗಿರುವಾಗ ಒಮ್ಮೆ ದಕ್ಷಿಣೇಶ್ವರಕ್ಕೆ ಭೇಟಿಗೆಂದು ಬಂದ ನರೇಂದ್ರನಾಥ ರಾಮಕೃಷ್ಣ ಪರಮಹಂಸರಿಗೆ ಬೆಳ್ಳಿಯ ನಾಣ್ಯಗಳೆಂದರೆ ಆಗಿ ಬರುವುದಿಲ್ಲ ಎಂದು ಕಂಡುಕೊಂಡು, ರಾಮಕೃಷ್ಣರಿಲ್ಲದಾಗ ಅವರ ಕೊಠಡಿಯ ಹಾಸಿಗೆಯಡಿ ಬೆಳ್ಳಿ ನಾಣ್ಯವೊಂದನ್ನಿರಿಸುತ್ತಾನೆ. ಎಲ್ಲ ಕೆಲಸಗಳ ತರುವಾಯ ವಿಶ್ರಾಂತಿಗೆಂದು ಬಂದ ಅವರು ಹಾಸಿಗೆಯ ಮೇಲೆ ಕೂತಾಗ ಮುಳ್ಳು ಚುಚ್ಚಿದವರಂತೆ ಕೆಳಗೆ ಹಾರುತ್ತಾರೆ. ಹೀಗೆ ನರೇಂದ್ರನಾಥನ ಪರೀಕ್ಷೆಗೂ ನಗುನಗುತ್ತಾ ತಮ್ಮನ್ನ ಒಡ್ಡಿಕೊಂಡವರು ಅವರು.

ಹೇಗೆ ನದಿಯೊಂದರ ಪಾತ್ರ ಬೇರೆಯಾದರೂ ಅದು ಕೊನೆಗೆ ಹೋಗಿ ಸಮುದ್ರವನ್ನೇ ಸೇರುತ್ತದೋ ಹಾಗೇ ನಾವುಗಳು ಆಚರಿಸುವ ಮತ ಪಂಥಗಳು ಒಬ್ಬನೇ ಭಗವಂತನನ್ನ ಸೇರುತ್ತವೆ ಎನ್ನುತ್ತಾ ಅನೇಕ ಆಧ್ಯಾತ್ಮಿಕ ಪ್ರಯೋಗಗಳಿಗೆ ತಮ್ಮನ್ನ ತಾವು ಒಡ್ಡಿಕೊಂಡವರು. ಹೇಗೆ ಕುಂಬಾರ ಒಂದೇ ಮಣ್ಣಿನಿಂದ ಮಡಕೆ, ಲೋಟ, ತಟ್ಟೆ ಹೀಗೆ ಅನೇಕ ವಸ್ತುಗಳನ್ನ ಮಾಡಿದರೂ ಅದೆಲ್ಲವನ್ನ ಒಂದೇ ಮಣ್ಣಿನಿಂದ ಮಾಡುತ್ತಾನೋ ಹಾಗೆಯೇ ಹೆಸರು, ಪೂಜೆ, ವ್ಯಕ್ತಗೊಳಿಸುವ ರೀತಿ ಬೇರೆಯಾದರೂ ಭಗವಂತ ಎನ್ನುವವನು ಒಬ್ಬನೇ ಎಂದು ಪ್ರತಿಪಾದಿಸುತ್ತಾ ಎಲ್ಲ ಮತ ಪಂಥಗಳ ಸಾಧನೆಯ ಹಾದಿಯನ್ನೂ ಅನುಭವಿಸಿ ಯುವಜನತೆಗೆ ತಮ್ಮೊಳಗಿನ ಹುಡುಕಾಟಕ್ಕೆ, ಅನ್ವೇಷಣೆಗೆ ಪ್ರೇರಣೆ ನೀಡುತ್ತಾ ಭಾರತದ ಚೈತನ್ಯಕ್ಕೆ ಹೊಸ ಸ್ಫೂರ್ತಿಯನ್ನ ತಂದವರು.

ಸೇವೆಯೇ ಶಿವನನ್ನ ಸೇರುವ ಮಾರ್ಗ :

ಯುವಸನ್ಯಾಸಿ ಶಿಷ್ಯರ ಬಳಗದಿಂದ ಸುತ್ತುವರೆದಿರುತ್ತಿದ್ದ ಅವರು ಯಾವತ್ತಿಗೂ ಸ್ವಾರ್ಥವನ್ನು ತೊರೆದು ಸೇವೆ ಮಾಡುವ ಮಾರ್ಗವನ್ನೇ ತೋರಿದವರು. ಜೀವೇ ದಯಾ ನೋಯ…, ಶಿವ್‌ ಗ್ಯಾನೇ, ಜೀವ್‌ ಸೇಬಾ ನಾವು ಇತರರಿಗೆ ದಯೆ ತೋರುವುದಲ್ಲ, ಇತರರನ್ನೂ ಶಿವನೆಂದೇ ಭಾವಿಸಿ ಸೇವಿಸಬೇಕು ಎಂದು ಸೇವೆಯೇ ಶಿವನನ್ನ ಸೇರುವ ಮಾರ್ಗವೆಂದು ತೋರುತ್ತಾರೆ.

ಜಗತ್ತಿಗೆ ನಾವು ಸೇವೆ ಮಾಡುವುದೆ? ಬೇರೆಯವರಿಗೆ ಸಹಾಯ ಮಾಡಲು ನಾವಾದರೂ ಯಾರು? ಜಗತ್ತನ್ನ ಉದ್ಧಾರ ಮಾಡಲು ನಾವು ಎಷ್ಟರವರು? ನಾವು ಮಾಡುವ ಕೆಲಸ ಅದು ದೇವರ ಕೆಲಸ, ಜಗತ್ತಿಗೆ ನೀನು ಮಾಡುವ ಸಹಾಯ, ಅದು ನಿನಗೆ ನೀನು ಮಾಡುವ ಸಹಾಯ ಮಾತ್ರ, ಎಲ್ಲರಲ್ಲೂ ಶಿವನನ್ನೇ ಕಾಣು, ಎಲ್ಲವನ್ನೂ ಶಿವನ ಸೇವೆಯೆಂದೇ ಮಾಡು ಎನ್ನುವ ರಾಮಕೃಷ್ಣ ಪರಮಹಂಸರ ಈ ಬೋಧನೆಯೇ ಅನೇಕ ಯುವಜನತೆ ಪ್ರೇರಣೆಯಾಗಿದೆ. ಅದು ಬರಗಾಲ, ಪ್ರವಾಹ ಅಥವಾ ಕೊರೊನಾದಂತಹ ಕಷ್ಟ ಕಾಲದಲ್ಲೂ ಜೀವವೇ ಶಿವನೆಂದು ಭಾವಿಸಿ ನಿಸ್ವಾರ್ಥ ಸೇವೆ ಮಾಡುವ ದೊಡ್ಡ ಯುವಸಮೂಹವನ್ನೇ ನಾವು ಕಾಣಬಹುದಾಗಿದೆ.

ವಿದ್ಯುತ್ಸಮ ಪ್ರಭೆ :

ಅನೇಕ ಬಾರಿ ಭಾರತ ತನ್ನ ಮೈಮರೆವಿನಲ್ಲಿ ಮಲಗಿದ್ದಾಗೆಲ್ಲ ಋಷಿ ಪರಂಪರೆಯೊಂದು ತನ್ನ ಆಧ್ಯಾತ್ಮಿಕ ಮೂಲಬೇರುಗಳ ತಳಹದಿಯ ಮೇಲೆ ಸ್ವಾರ್ಥರಹಿತವಾದ ಸಮಾಜದ ನಿರ್ಮಾಣ ಕಾರ್ಯವನ್ನು ಮಾಡಿಕೊಂಡು ಬಂದಿದೆ. ಅದಕ್ಕೆ ರಾಮಕೃಷ್ಣ ಪರಮಹಂಸರ ಜನ್ಮವೂ ಒಂದು ನಿದರ್ಶನ. ಜಗತ್ತನ್ನೇ ತಮ್ಮ ಆಧ್ಯಾತ್ಮಿಕ ಶಕ್ತಿ ಮತ್ತು ಸತ್ವದ ಮೂಲಕ ಎಚ್ಚರಿಸುವ ಆ ವಿದ್ಯುತ್ಸಮ ಪ್ರಭೆಯನ್ನ ಇಂಬುಗೊಳಿಸಿದ ರಾಮಕೃಷ್ಣ ಪರಮಹಂಸರು ಭಾರತದ ಯುವಜನತೆಗೊಂದು ದಾರಿದೀಪವೇ ಸರಿ.

 ಹೊಸ ದಿಸೆ ತೀರುವ ಮಾತುಗಳವರದ್ದು :

ಸನಾತನ ಪರಂಪರೆಯ ಮೌಲ್ಯ, ಸಂಸ್ಕೃತಿಗಳು, ಜ್ಞಾನ, ಆಚರಣೆಗಳು ಮತ್ತು ಹೊಸ ಯುಗದ ವಿಜ್ಞಾನದ ಆವಿಷ್ಕಾರಗಳು, ಪಶ್ಚಿಮದ ಹೊಸ ಚಿಂತನೆಗಳು, ಭಾರತದಲ್ಲಿನ ವಿವಿಧ ಮತ ಪಂಥಗಳು ಹೀಗೇ ಅನೇಕ ಬಗೆಯ ಪ್ರಭಾವಕ್ಕೆ ಒಳಗಾಗಿ ಗೊಂದಲದಲ್ಲಿದ್ದ ಯುವ ಸಮೂಹಕ್ಕೆ ರಾಮಕೃಷ್ಣ ಪರಮಹಂಸರು ದಾರಿ ತೋರಿದವರು. ಇಂದಿಗೂ ಗೋಜಲುಗಳ ಮಧ್ಯೆ ಸಿಲುಕಿದ ಎಲ್ಲ ಯುವಕ ಯುವತಿಯರಿಗೆ ರಾಮಕೃಷ್ಣ ಪರಮಹಂಸರ ವಾಕ್ಯಗಳು ಹೊಸ ದಿಸೆಯನ್ನು ತೋರುತ್ತವೆ.

ವೇದ ತೋರದು ಶಾಸ್ತ್ರ ತೋರದು, ಮತವು ಮುಕ್ತಿಯ ತೋರದು, ನಿನ್ನ ಕೈಲಿದೆ ನಿನ್ನ ಬಿಗಿದಿಹ ಕಬ್ಬಿಣದ ಯಮ ಪಾಶವು! ಎನ್ನುವ ವಿವೇಕಾನಂದರ ನುಡಿಗಳು ರಾಮಕೃಷ್ಣ ಪರಮಹಂಸರ ಬೋಧವೇ. ಎಲ್ಲ ಶಾಸ್ತ್ರಗಳನ್ನೋದಿಯೂ ಸುಮ್ಮನೆ ಕೂತರೆ ಓದಿಯಾದರೂ ಏನುಪಯೋಗ ಎನ್ನುತ್ತಾ ಯುವ ಜನತೆಗೆ, ಧರ್ಮದ ರಹಸ್ಯವಿರುವುದು ಸಿದ್ಧಾಂತಗಳಲ್ಲಲ್ಲ, ಆಚರಣೆಯಲ್ಲಿ ಎಂದು ತೋರಿಸಿಕೊಟ್ಟವರು ರಾಮಕೃಷ್ಣರು.

ವಿಶಿಷ್ಟ ಜಗತ್ತಿನ ವಿಸ್ಮಯ :

ಭಗವಂತ ನಮ್ಮೆಲ್ಲರಲ್ಲೂ ಇದ್ದಾನೆ. ಅವನನ್ನ ಹುಡುಕಬೇಕು, ಪರಮ ನಿಷ್ಠೆಯಿಂದ ಹುಡುಕ ಬೇಕು.ನಾಚಿಕೆ, ದ್ವೇಷಾಸೂಯೆ ಮತ್ತು ಭಯಗಳ ಹಂಗು ತೊರೆದು ಹುಡುಕಬೇಕು. ಆಗ ಮಾತ್ರ ಭಗವಂತ ದೊರೆಯುತ್ತಾನೆ ಎನ್ನುತ್ತಿದ್ದ ಪರಮಹಂಸರು ತಾವೂ ಕೃಷ್ಣನನ್ನ ಪೂಜಿಸುವಾಗ ರಾಧೆಯಂತಾಗಿ ಬಿಡುತ್ತಿದ್ದರು. ಥೇಟ್‌ ರಾಧೆಯಂತೆಯೇ ಭಕ್ತಿ,ಭಾವ ಮರೆತು ಹಾಡುತ್ತಿದ್ದ ಭಜನೆ, ರಾಧೆಯೇ ಆವರಿಸಿಕೊಂಡಂತೆ ಕುಣಿಯುತ್ತಿದ್ದ ರಾಸಲೀಲೆ… ಆಧ್ಯಾತ್ಮಿಕ ಜೀವನದ ಅತ್ಯುನ್ನತ ಸ್ಥಿತಿಯಾದ ಸಮಾಧಿ ಸ್ಥಿತಿಯಲ್ಲಿ ಮೆರೆದವರು ಪರಮಹಂಸರು.

ಸ್ತ್ರೀಯರನ್ನ ಅತ್ಯಂತ ಕೆಳಗಿನ ಸ್ಥಾನದಲ್ಲಿಟ್ಟು ನೋಡುತ್ತಿದ್ದ ಕಾಲದಲ್ಲಿ, ತನ್ನ ಪತ್ನಿಯವರಾದ ಶ್ರೀಮಾತೆ ಶಾರದಾ ದೇವಿಯವರನ್ನೇ ಕಾಳಿಯಾಗಿ ಕೂರಿಸಿ ಪೂಜೆ ಮಾಡುತ್ತಾ ಸಮಾಧಿ ಸ್ಥಿತಿಗೇರುತ್ತಾರೆ, ಸ್ವತಃ ಕೈಹಿಡಿದ ಪತ್ನಿಯನ್ನ ಮಾತೃ ಸ್ವರೂಪಳಾಗಿ ಕಂಡು, ಪೂಜಿಸುವ ಆ ವಿಶಿಷ್ಟ ಈ ಜಗತ್ತಿನ ವಿಸ್ಮಯ! ಸಂಸಾರದಲ್ಲಿದ್ದೂ ಸಂಸಾರ ಬಂಧನದಿಂದ ಪಾರಾಗುವ ಅವರ ಬೋಧನೆಗಳು ಅನೇಕ ಗೃಹಸ್ಥ ಭಕ್ತರಿಗೂ ಮಾರ್ಗದರ್ಶಕವೇ ಆಗಿತ್ತು.

ಪ್ರಾರ್ಥನೆ ಮಾಡು, ಶುದ್ಧ ಅಂತಃಕರಣದಿಂದ ಭಗವಂತನ ಬಳಿ ಅಂಗಲಾಚು, ಅವನು ದಾರಿ ತೋರುತ್ತಾನೆ, ನೀನು ಮಾಡುವ ಪ್ರಾರ್ಥನೆಯಲ್ಲಿ ಶ್ರದ್ಧೆಯಿದ್ದರೆ ಭಗವಂತ ಖಂಡಿತ ನಿನ್ನೆಡೆಗೆ ಕೃಪೆ ಮಾಡುತ್ತಾನೆ, ವಿಭೂತಿ ಪುರುಷರ ಸಂಗ ನೀಡುತ್ತಾ ಉದ್ಧಾರವಾಗುವ ಹಾದಿ ತೋರಿಸುತ್ತಾನೆ, ಸಜ್ಜನರ ಸಹವಾಸ ಮಾಡಿಸಿ ನಿನ್ನ ದುಃಖ ದೂರ ಮಾಡುತ್ತಾನೆ ಎನ್ನುತ್ತಾ ಹುಡುಕಾಟಕ್ಕೆ ಹೊರಟವರಿಗೆ ಮಾರ್ಗದರ್ಶನ ನೀಡುತ್ತಾರೆ, ಭಗವಂತನಿಗೆ ಶ್ರದ್ಧೆಯಿಂದ ಪ್ರಾರ್ಥಿಸುವಂತೆ ಹೇಳುತ್ತಾ… ಸಜ್ಜನರ ಸಹವಾಸದ ಪ್ರಾಮುಖ್ಯವನ್ನು ಹೇಳುತ್ತಾರೆ, ಹೀಗೇ ಅನೇಕ ಯುವಜನರ ಆಧ್ಯಾತ್ಮಿಕ ಪಥಕ್ಕೆ ಗುರುವಾಗಿ ನಿಂತು ಕೈಹಿಡಿದು ನಡೆಸಿದವರು ರಾಮಕೃಷ್ಣ ಪರಮಹಂಸರು.

ಯಾವುದೇ ವ್ಯಕ್ತಿ ಹಚ್ಚಿಟ್ಟ ಹಣತೆಯ ಬೆಳಕಲ್ಲಿ ಕೂತು ಭಗವದ್ಗೀತೆಯನ್ನು ಓದಿ, ಇತರರ ಮತ್ತು ಆತ್ಮೊನ್ನತಿಯ ದಾರಿ ಹಿಡಿಯಬಹುದು. ಆದರೆ ಅದೇ ಹಣತೆಯ ಬೆಳಕಿನಲ್ಲಿ ಮತ್ತೂಬ್ಬ ಯಾವುದೋ ಕಾಗದಕ್ಕೆ ಸುಳ್ಳು ಸಹಿ ಹಾಕಿ ಮೋಸದ ಸಂಚು ರೂಪಿಸಬಹುದು. ಹೀಗೇ ಎರಡೂ ಕೆಲಸಗಳಿಂದ ದೀಪಕ್ಕೆ ಏನೂ ಬದಲಾವಣೆಯಾಗದು, ದೀಪವೇನಿದ್ದರೂ ತಾನುರಿದು ಬೆಳಕನ್ನ ನೀಡುವ ಕಾಯಕವನ್ನಷ್ಟೇ ಮಾಡುತ್ತದೆ, ಅಂತೆಯೇ ಸೂರ್ಯನ ಬೆಳಕು ಅದು ಎಲ್ಲರಿಗೂ ಒಂದೇ ಆಗಿದೆ, ಸೂರ್ಯನ ಬೆಳಕು ಯಾರಿಗಾದರೂ ಭೇದ ಮಾಡಿದ್ದು ಕಂಡಿಲ್ಲ, ಅದು ಎಲ್ಲ ಕಡೆಯೂ ಸಮನಾಗಿಯೇ ಹರಡುತ್ತದೆ. ಹಾಗಿರುವಾಗ ನಾವು ಅಂತೆಯೇ ನಮ್ಮ ಕರ್ತವ್ಯಗಳ ಕುರಿತು ಕಾಯಕದ ಕುರಿತು ಗಮನವಿರಿಸಿ, ಉಳಿದೆಲ್ಲಕ್ಕೂ ಸಮನಾದ ಭಾವದಲ್ಲಿ ಸೇವಿಸಿದಾಗ ಮಾತ್ರವೇ ನಮ್ಮ ಆತೊ¾àನ್ನತಿ ಸಾಧ್ಯ ಎಂಬುದು ಶ್ರೀ ರಾಮಕೃಷ್ಣ ಪರಮಹಂಸರು ಅವರನ್ನ ಭೇಟಿಯಾಗಲು ಬಂದ ತರುಣರಿಗೆಲ್ಲ ಬೋದಿಸುತ್ತಿದ್ದುದು.

ಬಂಧನವೆಂಬುದೂ ಮನಸ್ಸಿನ ಸ್ಥಿತಿ, ಸ್ವಾತಂತ್ರ್ಯವೆಂಬುದೂ ಮನಸ್ಸಿನ ಒಂದು ಸ್ಥಿತಿ, ನಾನೊಬ್ಬ ಮುಕ್ತ ಆತ್ಮ, ನಾನು ಪರಮೇಶ್ವರನ ಪುತ್ರ ಎಂದು ನೀವು ಅಂದುಕೊಂಡಲ್ಲಿ ನೀವು ಅದೇ ಆಗುವಿರಿ. ಕೇವಲ ಪರಮೇಶ್ವರ ಮಾತ್ರವೇ ನನ್ನನ್ನ ಬಂಧಿಸಲು ಸಾಧ್ಯ, ನಾನು ಸರ್ವತಂತ್ರ ಸ್ವತಂತ್ರ ಎಂದುಕೊಂಡಾಗಲಷ್ಟೇ ನೀವು ಹಾಗಾಗಲು ಸಾಧ್ಯ ಎಂಬುದು ಅವತ್ತಿನ ಯುವಕರಿಗೆ ರಾಮಕೃಷ್ಣ ಪರಮಹಂಸರ ನುಡಿಗಳು.

ಇದು ಆಧ್ಯಾತ್ಮಿಕ ಸಾಧಕರಿಗಷ್ಟೇ ಅಲ್ಲ, ಭಾರತದ ಸ್ವಾತಂತ್ರ್ಯ ಹೋರಾಟದ ಅನೇಕ ಮಹನೀಯರುಗಳ ಸ್ಫೂರ್ತಿಯಾಗಿದ್ದುದು. ರಾಮಕೃಷ್ಣ ಪರಮಹಂಸರ ಇಂತಹ ಬೋಧನೆಗಳೇ ಆಂತರ್ಯದ ಮತ್ತು ಬಾಹ್ಯ ಸ್ವಾತಂತ್ರ್ಯದ ಹಸಿವಿಗೆ ಇಂಬು ಕೊಟ್ಟದ್ದು. ರಾಮಕೃಷ್ಣ ಪರಮಹಂಸರು ನಮ್ಮೊಂದಿಗೆ ಭೌತಿಕವಾಗಿ ಇಲ್ಲದಿದ್ದರೂ ಅವರ ಆಧ್ಯಾತ್ಮಿಕ ಶಕ್ತಿ ಚೈತನ್ಯ ರೂಪಿಯಾಗಿ ನಮ್ಮೊಳಗೆ ಪ್ರವಹಿಸುತ್ತಿದೆ. ಹೊಸಯುಗದ ಸವಾಲುಗಳು ಕಾಡುತ್ತಿರುವ ಈ ಹೊತ್ತಿಗೆ ಅವರ ಬೋಧನೆಗಳು, ಚಿಂತನೆಗಳು, ಆಧ್ಯಾತ್ಮಿಕ ಹಾದಿಯೊಂದೇ ಬೆಳಕನೀವ ಲಾಂದ್ರ. ಜಡವಾಗುತ್ತಿರುವ ಯುವಜನತೆಯ ಶಕ್ತಿಯನ್ನ ಏಕಮುಖೀಯಾಗಿಸಿ, ಚೈತನ್ಯವಾಗಿಸುತ್ತಿರುವುದು ಅವರ ಬೋಧನೆಗಳೇ.

ಉತ್ತಮರು ಆತ್ಮವಿಮರ್ಶೆ ಮಾಡಿಕೊಂಡು ತಮ್ಮನ್ನು ತಾವು ತಿದ್ದಿಕೊಳ್ಳುತ್ತಾರೆ. ಅಧಮರು ಮಾತ್ರವೇ ಪರರ ನಿಂದನೆ ಮಾಡುತ್ತಾ ಕೆಳಗಿಳಿಯುತ್ತಾರೆ.ರಾಮಕೃಷ್ಣ ಪರಮಹಂಸ

 

ತನ್ಮಯಿ ಪ್ರೇಮ್‌ ಕುಮಾರ್‌ 

ಚಿಕ್ಕಮಗಳೂರು

ಟಾಪ್ ನ್ಯೂಸ್

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Ram Ayodhya

Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.