ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅವೈಜ್ಞಾನಿಕ, ಅತಾರ್ಕಿಕ ಹುಕುಂ


Team Udayavani, Sep 10, 2021, 6:10 AM IST

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅವೈಜ್ಞಾನಿಕ, ಅತಾರ್ಕಿಕ ಹುಕುಂ

ಪ್ರತೀ ವರ್ಷ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಕಾಳಜಿ ಹೆಸರಿನಲ್ಲಿ ಪಿಒಪಿ ವಿಗ್ರಹ ಮಾಡಬಾರದು, ರಾಸಾಯನಿಕ ಬಣ್ಣಗಳನ್ನು ಕೊಡಬಾರದು ಎಂಬ ಆದೇಶ ಹೊರಡಿಸುತ್ತದೆ. ನೈಸರ್ಗಿಕ ಬಣ್ಣ ಎನ್ನುತ್ತಾರೆ ವಿನಾ ಪೂರೈಕೆ ಇರುವುದಿಲ್ಲ. ಇಂತಹ ಸಂದರ್ಭ ಕಾನೂನುರೀತಿ ಕ್ರಮ ಕೈಗೊಳ್ಳ ಲಾಗುವುದು, ಸೂಕ್ತ ಕ್ರಮ ಕೈಗೊಳ್ಳಲಾಗು ವುದು, ಕ್ರಿಮಿನಲ್‌ ಮೊಕದ್ದಮೆ ಹೂಡ ಲಾಗುವುದು, ಮಾಡತಕ್ಕದ್ದು ಎಂಬಿ ತ್ಯಾದಿ ಪದಪುಂಜಗಳನ್ನು ಶಿಷ್ಟಾಚಾರ ದಂತೆ ನೀಡುವುದಿದೆ. ಇವೆಲ್ಲ ಬ್ರಿಟಿಷ್‌ ಅಧಿಕಾರಿಶಾಹಿ ಕಾಲದ ಭಾಷಾ ಪಳೆಯುಳಿಕೆಗಳು.

ಗಣೇಶ ವಿಗ್ರಹಗಳಿಗೆ ಮಣ್ಣು ಬಳಸುವುದರಿಂದ ಪರಿಸರಕ್ಕೆ ಅಪಾರ ಹಾನಿಯಾಗುತ್ತದೆ. ನೈಸರ್ಗಿಕವಾಗಿ ಒಂದು ಇಂಚು ಮಣ್ಣು ರೂಪುಗೊಳ್ಳಲು  ಸಾವಿರ ವರ್ಷ ಅವಶ್ಯ. ಜೇಡಿ ಮಣ್ಣು ಜೀವರಾಶಿಯ ಉಳಿವಿಗೆ ಮತ್ತು ಕೃಷಿಗೆ ಅತೀ ಮುಖ್ಯ. ವಿಗ್ರಹ ತಯಾರಿಸಲು ಫ‌ಲವತ್ತಾದ ಮಣ್ಣನ್ನು ವ್ಯರ್ಥ ಮಾಡಬಾರದು. ಕೋವಿಡ್‌ ನಿರೋಧಕ ಪ್ರತಿಮೆಗಳನ್ನು ತಯಾರಿಸಿ ಪರಿಸರಕ್ಕೆ ಕೊಡುಗೆ ನೀಡಬೇಕಾಗಿದೆ. ರೋಗನಿರೋಧಕ ಶಕ್ತಿಯುಳ್ಳ ಅರಿಶಿನ ಬಳಕೆಯಿಂದ ವಿಗ್ರಹವನ್ನು ತಯಾರಿಸಿ ಪೂಜಿಸಿ ವಿಸರ್ಜನೆ ಮಾಡುವುದರಿಂದ ಪರಿಸರಕ್ಕೆ ಕೊಡುಗೆ ನೀಡಬಹುದು ಎಂದು ಮಂಡಳಿ ಹೋದ ವರ್ಷ ಕರೆ ನೀಡಿತ್ತು. ಈ ಬಾರಿ ರೋಗನಿರೋಧಕ ಶಕ್ತಿಯುಳ್ಳ ಅರಿಶಿನ ಮಿಶ್ರಿತ ಗೋಧಿ/ಮೈದಾ/ಅಕ್ಕಿ/ ರಾಗಿಹಿಟ್ಟಿನಿಂದ ಗಣೇಶನ ವಿಗ್ರಹ ಮಾಡಿ ಪೂಜಿಸಬಹುದು. ಈ ವಿಗ್ರಹವನ್ನು ಜಲಸ್ತಂಭನ ಮಾಡಿದರೆ ಮಾಲಿನ್ಯ ತಪ್ಪಿಸಬಹುದು ಎಂದು ಹೇಳಿದೆ. ಮಂಡಳಿ ರಾಜ್ಯದಲ್ಲಿ 10 ಲಕ್ಷ ಅರಿಶಿನ ಗಣಪತಿ ಅಭಿಯಾನ ಹಮ್ಮಿಕೊಂಡಿದೆ. ಇಂತಹ ವಿಗ್ರಹ ಪೂಜಿಸಿ ಸೆಲ್ಫಿಯನ್ನು ಮಂಡಳಿ ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡಿ ಬಂಪರ್‌ ಬಹುಮಾನ ಗೆಲ್ಲಲು ತಿಳಿಸಿದೆ.

ಯಾವ ಮಣ್ಣು ಉತ್ತಮ? :

ಮಣ್ಣು ವಿಜ್ಞಾನದ ಪ್ರಕಾರ ಸುಮಾರು ಒಂದು ಅಡಿ ಮೇಲ್ಪದರದ (30ರಿಂದ 40 ಸೆಂ.ಮೀ.) ಮಣ್ಣು ಫ‌ಲ ವತ್ತಾಗಿರುತ್ತದೆ. ಮೇಲ್ಪದರದಲ್ಲಿ ಗಿಡಗಂಟಿ ಕೊಳೆಯುವುದೇ ಇದಕ್ಕೆ ಕಾರಣ. ಒಂದು ಇಂಚು ಫ‌ಲವತ್ತಾದ ಮಣ್ಣು ನಿರ್ಮಾಣಗೊಳ್ಳಲು ಸುಮಾರು 2,000 ವರ್ಷ ಗಳು ಬೇಕು. ಕರಾವಳಿಯಲ್ಲಿ ಏಳೆಂಟು ಅಡಿ ಆಳದಲ್ಲಿ, ಘಟ್ಟದ ಮೇಲೆ ಮೇಲ್ಭಾಗ ಅಥವಾ ಕೆಳಭಾಗದಲ್ಲಿ ಆವೆ ಮಣ್ಣು ಸಿಗುತ್ತದೆ. ಶೇ.60ರಷ್ಟು ಜೇಡಿಮಣ್ಣು ಅಂಶಗಳಿದ್ದರೆ ಅದನ್ನು ಜೇಡಿ ಮಣ್ಣು ಎಂದು ಕರೆಯಲಾಗುತ್ತದೆ ಎಂದು ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿ ಡಾ|ಜಯಪ್ರಕಾಶ್‌ ಹೇಳುತ್ತಾರೆ.

ಆಳದಲ್ಲಿ ಆವೆಮಣ್ಣು:

ಕರಾವಳಿ ಭಾಗದಲ್ಲಿ ಗಣೇಶನ ವಿಗ್ರಹ ಮಾಡು ವುದು ಹೆಂಚಿನ ಕಾರ್ಖಾನೆಗಳ ಜೇಡಿ/ಆವೆ ಮಣ್ಣಿ ನಿಂದ. ಹತ್ತು ಅಡಿ ಆಳದಲ್ಲಿ ಸಿಗುವ ಇದನ್ನು ಸಂಸ್ಕರಿಸಿ ಅಂಟು ಮಣ್ಣು ಮಾಡಲಾಗುತ್ತದೆ ಎನ್ನುತ್ತಾರೆ ಉಡು ಪಿಯ ವಿಗ್ರಹ ಕಲಾವಿದ ರಮೇಶ್‌ ಕಿದಿಯೂರು.

6 ರೂ., 350 ರೂ. ಅಂತರ! :

ಒಂದು ಬ್ಲಾಕ್‌ ಆವೆಮಣ್ಣಿಗೆ 100 ರೂ. ಇದೆ. ಶ್ರೇಷ್ಠ ಗುಣಮಟ್ಟದ ನೂರು ಗ್ರಾಮ್‌ ಅರಿಶಿನದ ಬೆಲೆ 35 ರೂ. ಒಂದು ಕೆ.ಜಿ. ಅರಿಶಿನದ ಬೆಲೆ 350 ರೂ. ಒಂದು ಕೆ.ಜಿ. ಆವೆಮಣ್ಣಿನ ಬೆಲೆ 6 ರೂ.

ಜೇಡಿಮಣ್ಣು ಮೇಲ್ಭಾಗದ ಮಣ್ಣಲ್ಲವಾದ್ದರಿಂದ ಫ‌ಲಭರಿತ ಮಣ್ಣು ಪೋಲಾಗುತ್ತದೆ ಎನ್ನುವುದು ಅರ್ಥವಿಲ್ಲದ ವಾದ. ಆವೆಮಣ್ಣಿನ ಕೊರತೆ ಇದೆ ಎಂದಾದರೆ ಮಣ್ಣಿನ ಬೆಲೆ ದುಬಾರಿಯಾಗಬೇಕಿತ್ತು. ಘಟ್ಟದ ಮೇಲೆ ಕಪ್ಪು ಮಣ್ಣು, ಕರಾವಳಿಯಲ್ಲಿ ಕೆಂಪು ಮಣ್ಣು ಗುಣಮಟ್ಟದಲ್ಲಿ ಸಿಗುತ್ತದೆ. ಆಕಾರದಲ್ಲಿ ಹೇಳುವುದಾದರೆ ಮಣ್ಣಿನ ವಿಗ್ರಹವನ್ನು ಚಿಕ್ಕ ಆಕಾರದಲ್ಲಿ ಮಾಡಬಾರದೆಂದೇನಿಲ್ಲ.

 ಹುಳುಕು ಹುಡುಕುವವರಿಗೆ ಆಹಾರ:

ಹಾಲು, ತುಪ್ಪ ಇತ್ಯಾದಿಗಳನ್ನು ಅಭಿಷೇಕ ಮಾಡಿ ವೇಸ್ಟ್‌ ಮಾಡುತ್ತಿದ್ದಾರೆಂದು (ಭಕ್ತರಿಗೆ ವಿತರಿಸಿಯೂ) ಟೀಕೆ ಕೇಳಿಬರುತ್ತಿರುವ ನಡುವೆ  ಮುಂದೊಂದು ದಿನ ದುಬಾರಿಯಾದ ಅರಿಶಿನವನ್ನು ಗಣೇಶನ ವಿಗ್ರಹ ತಯಾರಿಸಲು ಮುಂದಾದ ಕಾರಣ ಸಮಾಜದಲ್ಲಿ ಅರಿಶಿನದ “ಹಾಹಾಕಾರ’ ಉಂಟಾಯಿತು ಎನ್ನಲೂ ಬಹುದು. ಇದನ್ನೇ  ಭಾಷಣಕಾರರು ಬಳಸಿಕೊಳ್ಳಬಹುದು. ಇನ್ನು ಕೆಲವು ವರ್ಷಗಳ ಬಳಿಕ, “ಮಣ್ಣಿನ ಬೆಲೆ ಬಹಳ ಕಡಿಮೆ. ಮನುಷ್ಯರು ತಿನ್ನುವ ಆಹಾರವಸ್ತುಗಳಿಂದ ವಿಗ್ರಹ ತಯಾರಿಸಿ ವ್ಯರ್ಥ ಮಾಡುವ ಬದಲು ನೈಸರ್ಗಿಕವಾಗಿ ಪುಕ್ಕಟೆಯಾಗಿ ಸಿಗುವ ಮಣ್ಣಿನ ವಿಗ್ರಹವನ್ನೇ ತಯಾರಿಸಿ’ ಎಂದು ಮಂಡಳಿ ಮರು ಆದೇಶ ಹೊರಡಿಸಬಹುದು. ಆಯಾ ಕಾಲಘಟ್ಟದ ಅಧಿಕಾರಸ್ಥರು, ಜನರಿಗೆ ಇದೆಲ್ಲ ಹೊಸ ಸುದ್ದಿ. ಬುದ್ಧಿವಂತರೆನಿಸಿದ ಅಧಿಕಾರಿಗಳು ವರ್ಷವರ್ಷ ಏನಾದರೂ ಒಂದು ಮಾಡಲು ಸುತ್ತೋಲೆ ಹೊರಡಿಸುತ್ತಾರೆ. ಜನರ ತೆರಿಗೆ ಹಣ ಅಧಿಕಾರಸ್ಥರನ್ನು ಪೋಷಿಸುವುದಲ್ಲದೆ ಅರ್ಥವಿಲ್ಲದ ಯೋಜನೆಗಳ ಅನುಷ್ಠಾನಕ್ಕಾಗಿಯೂ ಪೋಲಾಗುತ್ತಿದೆ, ಜನರಿಂದಲೂ ಪೋಲು ಮಾಡಿಸುತ್ತಿದೆ ಎಂಬುದು ಸಾಬೀತಾಗುತ್ತದೆ. ಮೇಲಾಗಿ ಮೈದಾ ಆರೋಗ್ಯಕ್ಕೆ ಹಾನಿ ಎಂದು ಗೊತ್ತಿಲ್ಲವೆ? 10 ಲಕ್ಷ ಅರಿಶಿನದ ವಿಗ್ರಹಕ್ಕೆ ಎಷ್ಟು ಪೋಲು ಮಾಡಿದಂತಾಗುವುದಿಲ್ಲ? ಇವು ಜಲಮೂಲಕ್ಕೆ ಸೇರಿ ಪರಿಸರವನ್ನು ಶುದ್ಧಿ ಮಾಡುತ್ತವೆ ಎಂದು ವಾದಿಸಿದರೂ ಲಾಗಾಯ್ತಿನ ನಾಗರಪಂಚಮಿ ತಂತ್ರ ಇದುವೇ ಅಲ್ಲವೆ?

ನಿಮಗೆ ಕೈಗೆಟಕುವ ಉತ್ತಮ ಮಣ್ಣಿನಿಂದ ನೀವೇ ಸಾಮಾನ್ಯ ವಿಗ್ರಹಗಳನ್ನು ತಯಾರಿಸಿ ಪೂಜಿಸಿ ಸೆಲ್ಫಿ ಕಳುಹಿಸಿ ಎಂದು ಮಂಡಳಿ ಕರೆ ಕೊಟ್ಟಿದ್ದರೆ ಎಷ್ಟು ಅರ್ಥಪೂರ್ಣವಾಗಿರುತ್ತಿತ್ತು.

 

-ಮಟಪಾಡಿ ಕುಮಾರಸ್ವಾಮಿ

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.