ವಿಶೇಷ ಸ್ಥಾನಮಾನ ಕೊಟ್ಟವರಿಗೆ ಬೆಂಬಲ

Team Udayavani, Apr 9, 2019, 6:00 AM IST

ವೈ.ಎಸ್‌.ಆರ್‌.ಕಾಂಗ್ರೆಸ್‌ ಪಕ್ಷದ ಸಂಸ್ಥಾಪಕ ವೈ.ಎಸ್‌.ಜಗನ್ಮೋಹನ ರೆಡ್ಡಿ ಹತ್ತು ವರ್ಷಗಳಲ್ಲಿ ಆಂಧ್ರಪ್ರದೇಶ ರಾಜಕೀಯದಲ್ಲಿ ಪ್ರಬಲ ನಾಯಕನಾಗಿ ಹೊರ ಹೊಮ್ಮಿದ್ದಾರೆ. ಮುಂದಿನ ಚುನಾವಣೆಯಲ್ಲಿ ರಾಜ್ಯದ ಹಿತ ಕಾಪಾಡುವವರಿಗೆ ಬೆಂಬಲ ಎಂದಿದ್ದಾರೆ.

ಈ ಚುನಾವಣೆಯನ್ನು ಯಾವ ವಿಷಯ ದೊಂದಿಗೆ ಕಣಕ್ಕೆ ಇಳಿದಿದ್ದೀರಿ?
ಇದು ನಂಬಿಕೆ ಮತ್ತು ಮೋಸದ ನಡುವಿನ ಯುದ್ಧವಾಗಲಿದೆ. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆಂಧ್ರಕ್ಕೆ ಮೋಸ ಮಾಡಿದ್ದಾರೆ. 2014ರಲ್ಲಿ ಅವರು ವಾಗ್ಧಾನ ಮಾಡಿದ್ದಕ್ಕೂ, ಅನುಷ್ಠಾನಕ್ಕೂ ಹೋಲಿಕೆಯೇ ಇಲ್ಲ. ಕೆಲ ಸಮಯ ಎನ್‌ಡಿಎ ಜತೆಗಿದ್ದೂ ಏನು ಲಾಭವಾಗಲಿಲ್ಲ.

ಟಿಡಿಪಿ ಸರ್ಕಾರವನ್ನು ಈ ಬಾರಿ ಸೋಲಿಸುತ್ತೀರಾ?
ಹಿಂದಿನ ಚುನಾವಣೆಯಲ್ಲಿ ಸೋಲು ಮತ್ತು ಗೆಲುವಿನ ಅಂತರ ಕೇವಲ ಶೇ.1 ಆಗಿತ್ತು. ಈ ಬಾರಿ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿದೆ. ಹಿಂದಿನ ಬಾರಿ ಆಡಳಿತ ವಿರೋಧಿ ಅಲೆ ಇರಲಿಲ್ಲ. ಪ್ರತಿಪಕ್ಷದಲ್ಲಿದ್ದುದರಿಂದ ಸುಳ್ಳು ಹೇಳಿ ಗೆದ್ದರು. ಸ್ವಲ್ಪ ಮೋದಿ ಅಲೆ, ಪವನ್‌ ಕಲ್ಯಾಣ್‌ ಪ್ರಭಾವ ಅವರಿಗೆ ನೆರವಾಯಿತು.

ವಿಶೇಷ ಸ್ಥಾನ ಮಾನ ಕೊಟ್ಟವರಿಗೆ ಕೇಂದ್ರದಲ್ಲಿ ಬೆಂಬಲ ಎಂದಿದ್ದೀರಿ?
ಕಾಂಗ್ರೆಸ್‌, ಬಿಜೆಪಿ ಬಗ್ಗೆ ನಮಗೆ ನಂಬಿಕೆ ಇಲ್ಲ. ರಾಜ್ಯ ವಿಭಜನೆ ವೇಳೆ ಕಾಂಗ್ರೆಸ್‌ ಸಂಸತ್‌ನಲ್ಲಿ ವಿಶೇಷ ಸ್ಥಾನಮಾನದ ಭರವಸೆ ನೀಡಿತ್ತು. ಬಿಜೆಪಿ ಅದನ್ನು ಬೆಂಬಲಿಸಿದ್ದು ಮಾತ್ರವಲ್ಲದೆ, ಹತ್ತು ವರ್ಷಗಳ ಅವಧಿಯ ಸ್ಥಾನಮಾನದ ವಾಗ್ಧಾನ ಮಾಡಿತ್ತು. 2 ಪಕ್ಷಗಳು ತಮ್ಮ ಮಾತುಗಳನ್ನು ನಡೆಸಲಿಲ್ಲ. ಕೆಸಿಆರ್‌ ಕೂಡ ನಮಗೆ ಬೆಂಬಲ ನೀಡಲಿದ್ದಾರೆ. ಆಂಧ್ರದಲ್ಲಿ 25, ತೆಲಂಗಾಣದಲ್ಲಿ 17; ಹೀಗೆ ನಮ್ಮಲ್ಲಿ ಉತ್ತಮ ಫ‌ಲಿತಾಂಶ ಅನುಕೂಲವಾಗಲಿದೆ.

ಬಿಜೆಪಿ ರಾಷ್ಟ್ರೀಯತೆಯ ಬಗ್ಗೆ ಮತ್ತು ಕಾಂಗ್ರೆಸ್‌ ಉದ್ಯೋಗ ಸೃಷ್ಟಿಯ ಬಗ್ಗೆ ಮಾತನಾಡುತ್ತಿದೆ. ಈ ಬಗ್ಗೆ ಏನು ಹೇಳುತ್ತೀರಿ?
ಪ್ರಧಾನಿ ನರೇಂದ್ರ ಮೋದಿಯವರು ಏನು ಮಾಡಲು ಸಾಧ್ಯವಿದೆಯೋ ಅದಕ್ಕೆ ಬೇಕಾದ ಪ್ರಯತ್ನ ನಡೆಸಿದ್ದಾರೆ. ನಾಯಕತ್ವ ಹೇಗೆ ಇರಬೇಕು ಎನ್ನುವುದನ್ನು ಅವರು ಸಮರ್ಥವಾಗಿಯೇ ಪ್ರದರ್ಶಿಸಿದ್ದಾರೆ. ದೇಶದ ಇತರ ಭಾಗದಲ್ಲಿ ಅವರಿಗೆ ಅದು ಧನಾತ್ಮಕವಾಗಿ ಪ್ರಯೋಜನವಾಗಬಹುದು. ಆದರೆ ಆಂಧ್ರಪ್ರದೇಶಕ್ಕೆ ಸಂಬಂಧಿಸಿದಂತೆ ಯಾವುದೇ ರಾಷ್ಟ್ರೀಯ ಪಕ್ಷಗಳು ಉತ್ತಮ ಸಾಧನೆ ಮಾಡಲಾರವು.

ನೀವು ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ ರಾವ್‌ ಜತೆಗೆ ಕೈ ಜೋಡಿಸಿದ್ದೀರಿ ಎನ್ನುವುದು ಚಂದ್ರಬಾಬು ನಾಯ್ಡು ಆರೋಪಿಸುತ್ತಾರೆ.
ತೆಲಂಗಾಣ ಸಿಎಂ, ನಮ್ಮ ಪಕ್ಷದ ಜತೆಗೆ ಚುನಾವಣಾ ಮೈತ್ರಿ ಇಲ್ಲ. ಆದರೆ ಒಬ್ಬರನ್ನೊಬ್ಬರು ಬೆಂಬಲಿಸುತ್ತಿದ್ದೇವೆ.

ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಹೇಳಿಕೊಂಡಿರುವಂತೆ ಅತ್ಯಂತ ಬಡತನದಲ್ಲಿರುವ ಕುಟುಂಬಗಳಿಗೆ ಕನಿಷ್ಠ ಆದಾಯ ಒದಗಿಸುವ ಯೋಜನೆ ಕಾರ್ಯ ಸಾಧ್ಯವಾದೀತೆ?
ರಾಹುಲ್‌ ಗಾಂಧಿಯವರ ಭರವಸೆಯೇ ಒಂದು ಅವಮಾನ. ಪ್ರತಿ ತಿಂಗಳು 12 ಸಾವಿರ ರೂ.ಗಳಿಗಿಂತ ಕಡಿಮೆ ಇರುವ ಎಲ್ಲರಿಗೆ ಯೋಜನೆ ಅನ್ವಯ ಎಂದು ಹೇಳಿದ್ದಾರೆ. ಯೋಜನೆ ಏನೋ ಒಳ್ಳೆಯದೆ. ಆದರೆ ಅನುಷ್ಠಾನ ಹೇಗಾಗುತ್ತದೆ ಎನ್ನು ವುದು ಮುಖ್ಯ. ರಾಹುಲ್‌ ಪ್ರಕಾರ ಜನಸಂಖ್ಯೆಯ ಶೇ.20ರಷ್ಟು ಮಂದಿ ಬಡವರು ಅಥವಾ 5 ಕೋಟಿ ಕುಟುಂಬಗಳಿಗೆ ಅನುಕೂಲವಾಗುತ್ತದೆ ಎಂದು ಹೇಳುತ್ತಾರೆ. ಅವರು ನೀಡಿದ ಸಾಂಖೀಕ ಮಾಹಿತಿ ತಪ್ಪಾಗಿರುವ ಸಾಧ್ಯತೆ ಇದೆ.

(ಸಂದರ್ಶನ ಕೃಪೆ: ದ ಹಿಂದುಸ್ತಾನ್‌ ಟೈಮ್ಸ್‌)


ಈ ವಿಭಾಗದಿಂದ ಇನ್ನಷ್ಟು

 • ಮಧ್ಯಪ್ರದೇಶ ರಾಜಧಾನಿ ಭೋಪಾಲ್‌ನಿಂದ ಸಾಧ್ವಿ ಪ್ರಜ್ಞಾ ಸಿಂಗ್‌ ಠಾಕೂರ್‌ ಬಿಜೆಪಿ ಅಭ್ಯರ್ಥಿಯಾಗಿ ಕಾಂಗ್ರೆಸ್‌ನ ಹಿರಿಯ ನಾಯಕ ದಿಗ್ವಿಜಯ ಸಿಂಗ್‌ ವಿರುದ್ಧ...

 • ದೂರದರ್ಶನಕ್ಕೆ ಪ್ರಧಾನಿ ನರೇಂದ್ರ ಮೋದಿ ನೀಡಿದ ಸಂದರ್ಶನದಲ್ಲಿ ಐದು ವರ್ಷಗಳಲ್ಲಿ ತಮ್ಮ ನೇತೃತ್ವದ ಸರ್ಕಾರ ಮಾಡಿದ ಸಾಧನೆಗಳನ್ನು ವಿವರಿಸಿದ್ದಾರೆ. ಜತೆಗೆ...

 • ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌, ಐದನೇ ಬಾರಿ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಈ ಬಾರಿ ಬಿಜೆಪಿಯೇ ತಮ್ಮ ಪಕ್ಷದ‌ ಪ್ರಮುಖ ಎದುರಾಳಿ ಎನ್ನುತ್ತಿರುವ...

 • ನಾಲ್ವರು ಹಿರಿಯ ಐಪಿಎಸ್‌ ಅಧಿಕಾರಿಗಳನ್ನು ಕೆಲ ದಿನಗಳ ಹಿಂದೆ ಚುನಾವಣಾ ಆಯೋಗ ವರ್ಗಾವಣೆ ಮಾಡಿತ್ತು. ಈ ಕ್ರಮ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮತ್ತು ಚುನಾವಣಾ...

 • ಬಿಹಾರದಲ್ಲಿ ಎನ್‌ಡಿಎ ಎದುರಿಸಲು ಆರ್‌ಜೆಡಿ-ಕಾಂಗ್ರೆಸ್‌ ಮತ್ತು ಇತರ ಸಣ್ಣ ಪಕ್ಷಗಳ ನೇತೃತ್ವದಲ್ಲಿ ಮಹಾಮೈತ್ರಿ ಕೂಟ ರಚನೆಯಾಗಿದೆ. ಆದರೆ ಜೆಡಿಯು ನಾಯಕ, ಬಿಹಾರ...

ಹೊಸ ಸೇರ್ಪಡೆ

 • ಹೊಸದಿಲ್ಲಿ : ಭಾರತದ ವರಿಷ್ಠ ನ್ಯಾಯಮೂರ್ತಿ (ಸಿಜೆಐ) ರಂಜನ್‌ ಗೊಗೊಯ್‌ ಅವರಿಂದು ಶನಿವಾರ ಸುಪ್ರೀಂ ಕೋರ್ಟಿನ ವಿಶೇಷ ಪೀಠದಲ್ಲಿದ್ದುಕೊಂಡು ತನ್ನ ವಿರುದ್ಧ...

 • ಇಂದು ನಿತ್ಯ ಹರಿದ್ವರ್ಣ ಕಾಡುಗಳಲ್ಲಷ್ಟೇ ಬೃಹತ್‌ ಗಾತ್ರದ ದೇವದಾರು, ತೇಗ, ಬೀಟೆ ಮೊದಲಾದ ಮರಗಳನ್ನು ಕಾಣಬಹುದು. ಆದರೆ ಸವಣೂರಿನ ಕಲ್ಮಠದಲ್ಲಿ ಸಾವಿರಾರು ವರ್ಷಗಳ...

 • Gadwall (Anas strepera) M -Duck + ಗದ್ವಾಲ್‌ ಬಾತನ್ನು ಚರ್ಲೆ ಅಥವಾ ಸರಳೆ ಬಾತು ಎಂದು ಕರೆಯಲಾಗುತ್ತದೆ. ಈ ಹಕ್ಕಿ, ನೀರಿನಲ್ಲಿ ಮುಳುಗಿ ಅಲ್ಲಿರುವ ಕ್ರಿಮಿ ಕೀಟಗಳನ್ನು ಬೇಟೆಯಾಡುತ್ತದೆ....

 • ವೃತ್ತಿಯಲ್ಲಿ ಶಿಕ್ಷಕರಾದ ಕಲ್ಯಾಣ್‌ ಕುಮಾರ್‌ ಅವರಿಗೆ ಪತ್ರಿಕೆ ಸಂಗ್ರಹಿಸುವ ಹವ್ಯಾಸ. ಇದು ಹುಟ್ಟಿದ್ದು ಪರ ಊರಿಗೆ ಪ್ರಯಾಣಿಸುವಾಗ . ಬೇಜಾರು ಕಳೆಯಲಿಕ್ಕೆ...

 • ಉದ್ದಾನ ವೀರಭದ್ರಸ್ವಾಮಿಗಳು ಈ ಆಂಜನೇಯನಿಗೆ ಲಿಂಗಧಾರಣೆ ಮಾಡಿದ್ದು, ಕೊರಳಿನಲ್ಲಿ ರುದ್ರಾಕ್ಷಿ ಮಾಲೆ ಇರುವುದು ಒಂದು ವಿಶೇಷ. ಸೊಂಟದಲ್ಲಿ ಕತ್ತಿ ಇರುವುದು...

 • ಅರಳಿಮರದ ಬುಡದಲ್ಲಿ ಕುಳಿತು ಸರ್ವಾಂತರ್ಯಾಮಿಯಾದ ಭಗವಂತನ ಸ್ವರೂಪವನ್ನು ಯೋಗಿಗಳಿಂದ ಕೇಳಿ ತಿಳಿದ ರೀತಿಯಲ್ಲೇ ಧ್ಯಾನ ಮಾಡತೊಡಗಿದ್ದರು. ಏಕಾಗ್ರಚಿತ್ತದಿಂದ...