ಸ್ವಿಜರ್ಲೆಂಡ್‌ನಲ್ಲಿ”ಇವಿ’ ವಾಹನಗಳ ನಿಷೇಧ? ಇದರ ಹಿಂದಿರುವ ಗುಟ್ಟೇನು? ಇಲ್ಲಿದೆ ಮಾಹಿತಿ..
Team Udayavani, Dec 6, 2022, 6:15 AM IST
ತಾಪಮಾನ ಏರಿಕೆಯಿಂದ ನಲುಗಿರುವ ಜಗತ್ತಿನಲ್ಲಿ ಈಗ ಪರಿಸರ ಸ್ನೇಹಿ ಕ್ರಮಗಳಿಗೆ ಒತ್ತು ನೀಡಲಾಗುತ್ತಿದೆ. ಆದರೆ ಸ್ವಿಜರ್ಲೆಂಡ್‌ನಲ್ಲಿ ಎಲೆಕ್ಟ್ರಾನಿಕ್ ವಾಹನಗಳ ಬ್ಯಾನ್‌ಗೆ ಚಿಂತನೆ ನಡೆಸಲಾಗಿದೆ. ಸ್ವಿಸ್ ಸರಕಾರದಿಂದ ಏಕೆ ಈ ಕ್ರಮ? ಇದರ ಹಿಂದಿರುವ ಗುಟ್ಟೇನು? ಈ ಬಗ್ಗೆ ಸಂಕ್ಷಿಪ್ತ ವಿವರ ಇಲ್ಲಿದೆ.
ಕರೆಂಟ್‌ನ ಅಭಾವ
ಸದ್ಯ ಸ್ವಿಜರ್ಲೆಂಡ್‌ನಲ್ಲಿ ಕರೆಂಟ್‌ನ ಅಭಾವವಿದೆ. ಅಲ್ಲದೆ ತನಗೆ ಬೇಕಾದ ವಿದ್ಯುತ್‌ನ ಶೇ.60ರಷ್ಟು ಹೈಡ್ರೋಪವರ್‌ನ ಕಡೆಯಿಂದಲೇ ಬರಲಿದೆ. ಹೀಗಾಗಿ ಚಳಿಗಾಲದಲ್ಲಿ ವಿದ್ಯುತ್ ಉತ್ಪಾದನೆ ಕಡಿಮೆಯಾಗಲಿದೆ. ಆಗ ನೆರೆಯ ಫ್ರಾನ್ಸ್ ಮತ್ತು ಜರ್ಮನಿಯಿಂದ ಕರೆಂಟ್ ಆಮದು ಮಾಡಿಕೊಳ್ಳಬೇಕು. ಉಕ್ರೇನ್ ಯುದ್ಧದಿಂದಾಗಿ ಈ ಎರಡೂ ದೇಶಗಳೂ ಪವರ್ ಕ್ರೈಸಿಸ್‌ನಲ್ಲಿವೆ.
ಅಂಗಡಿಗಳಿಗೂ ಬೀಗ
ವಿದ್ಯುತ್ ಕೊರತೆ ನೀಗಿಸಲು ಶಾಪ್‌ಗಳಿಗೆ 2 ಗಂಟೆ ಮುಂಚಿತವಾಗಿಯೇ ಬೀಗ ಹಾಕುವಂತೆ ಸೂಚನೆ ನೀಡಬೇಕು ಎಂದು ಅಲ್ಲಿನ ಸರಕಾರದ ಕರಡು ಹೇಳಿದೆ.
ಇವಿಗಳ ಮೇಲೇಕೆ ಕಣ್ಣು?
ಚಳಿಗಾಲದಲ್ಲಿ ವಿದ್ಯುತ್ ಉತ್ಪಾದನೆಯಷ್ಟೇ ಕಡಿಮೆಯಾಗುವುದಿಲ್ಲ. ಬದಲಿಗೆ ಕಡಿಮೆ ಉಷ್ಣಾಂಶದ ಕಾರಣದಿಂದಾಗಿ ವಿದ್ಯುತ್ ಬೇಡಿಕೆಯೂ ಹೆಚ್ಚುತ್ತದೆ. ಹೀಗಾಗಿ ಅಲ್ಲಿನ ಸರಕಾರ ಒಂದು ಕರಡನ್ನು ರೂಪಿಸಿದ್ದು, ಹೆಚ್ಚು ವಿದ್ಯುತ್ ಬೇಡುವಂಥವುಗಳನ್ನು ನಿಷೇಧಿಸಬೇಕು ಎಂಬ ಶಿಫಾರಸು ಮಾಡಿದೆ. ಇದರಂತೆ ಸಂಗೀತ ಕಾರ್ಯಕ್ರಮಗಳು, ನಾಟಕಗಳು, ಕ್ರೀಡಾ ಸಮಾರಂಭಗಳು, ಕಟ್ಟಡಗಳಲ್ಲಿನ ವಿದ್ಯುತ್ ಬಳಕೆಗೆ ಕಡಿವಾಣ ಹಾಕುವ ಬಗ್ಗೆ ಶಿಫಾರಸು ನೀಡಲಾಗಿದೆ. ಒಂದು ವೇಳೆ ಪರಿಸ್ಥಿತಿ ಇನ್ನೂ ಹದಗೆಟ್ಟರೆ ಎಲೆಕ್ಟ್ರಾನಿಕ್ ವಾಹನಗಳ ಬಳಕೆಗೆ ಕಡಿವಾಣ ಹಾಕಲು ಚಿಂತಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕ್ಷೇತ್ರ ಇಲ್ಲದಿದ್ದರೆ 25 ಕ್ಷೇತ್ರಗಳಿಂದ ಆಫರ್ ಬರುತ್ತಿತ್ತಾ?: ಸಿದ್ದರಾಮಯ್ಯ
ಹೆಚ್ಚಿನ ಮಾದಕ ದ್ರವ್ಯಗಳು ಪಾಕ್ ನಿಂದ ರವಾನೆ; ಸಾಗರದಲ್ಲಿ ಭದ್ರತೆ ಬಲಪಡಿಸಬೇಕು: ಶಾ
ರಾಹುಲ್ ಗಾಂಧಿಯನ್ನು’ಮೀರ್ ಜಾಫರ್’ ಎಂದರು ; ಪ್ರಧಾನಿ ವಿರುದ್ಧ ಪ್ರಿಯಾಂಕಾ ಕಿಡಿ
ಜಿಲ್ಲೆಯಲ್ಲಿ 60 ಚೆಕ್‌ಪೋಸ್ಟ್ ಆರಂಭ; 25 ಲಕ್ಷ ರೂ. ನಗದು, 16 ಲಕ್ಷ ರೂ. ಸೀರೆ ವಶಕ್ಕೆ
ತಾಯಿ – ಮಗ ಸಂಚರಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಖಾಸಗಿ ಬಸ್ ಡಿಕ್ಕಿ : ಬಾಲಕ ಮೃತ್ಯು