Udayavni Special

ಮನುಜ ಕುಲವನ್ನು ನರಕಯಾತನೆಯಿಂದ ರಕ್ಷಿಸಿದ ಆ ಮಗು


Team Udayavani, Dec 25, 2019, 7:30 AM IST

sz-38

ಬಹುಶಃ ದೇವರ ರೂಪ ಧರಿಸಿ ಭೂಮಿಗೆ ಇಳಿದರೆ ಸಾಮಾನ್ಯ ಜನರು ನಂಬಲಾರರು, ನಂಬಿದರೂ ದೇವರಿಂದ ದೂರವೇ ಉಳಿಯುವರು ಎನ್ನುವ ಕಾರಣದಿಂದಾಗಿ ಮನುಷ್ಯ ರೂಪದಲ್ಲಿ ಹುಟ್ಟಿ, ಮನುಷ್ಯರ ಹಾಗೆ ಬಾಳಿ, ಅವರೊಂದಿಗೆ ಬೆರೆತು, ಅವರು ಪಡುವಂತಹ ಕಷ್ಟಗಳಲ್ಲಿ ಭಾಗಿಯಾಗಿ, ಅವರು ಉಣ್ಣುವುದನ್ನು ಉಂಡು, ಅವರು ಉಡುವುದನ್ನು ಉಟ್ಟು ಸನ್ಮಾರ್ಗದೆಡೆಗೆ ಅವರ ಮನ ಪರಿವರ್ತನೆ ಮಾಡಿ ಸ್ವರ್ಗದ ದಾರಿಯನ್ನು ತೋರಿಸುವುದು ದೇವರ ನಿರ್ಧಾರವಾಗಿತ್ತು.

ಮಗು ಸಾಕ್ಷಾತ್‌ ದೇವರ ಸ್ವರೂಪವೆಂದು ನಂಬಿಕೊಂಡು ಬಂದವರು ನಾವು. ಮಗುವಿನ ಹೃದಯ ನಿರ್ಮಲ, ಮನಸ್ಸು ನಿಷ್ಕಳಂಕ, ಆಲೋಚನೆ ಶುದ್ಧ. ಮಗುವಿಗಿಲ್ಲ ಅಹಂಕಾರ. ಮಗುವಿನ ಮಾತು ಅಷ್ಟೇ ಪರಿಶುದ್ಧ. ಮಗುವಿನೊಡನೆ ಪ್ರತಿಯೊಬ್ಬರ ಸಂಬಂಧ ಅದು ದೈವದರ್ಶನವೇ ಸರಿ. ಮಗುವಿನೊಡನೆ ಒಡನಾಟ ಅದು ಸ್ವರ್ಗಿಯ ಅನುಭವ. ಮಗುವಿನ ಮಮತೆ, ಪ್ರೀತಿಗಿಲ್ಲ ಕೀಳು ಮೇಲೆಂಬ ಭಾವನೆ. ಅದರ ನಿಷ್ಕಳಂಕ ಮನಸ್ಸಿಗಿಲ್ಲ ಶ್ರೀಮಂತ ಬಡವನೆಂಬ ಧೋರಣೆ. ಅದರ ನೋಟಕ್ಕೆ ಎಲ್ಲವೂ ಸಮಾನ ಹಾಗೂ ಎಲ್ಲವೂ ಸ್ವಚ್ಛಂದ.

ಎರಡು ಸಾವಿರ ವರ್ಷಗಳ ಹಿಂದೆ ಮಾತೆ ಕನ್ಯಾ ಮರಿಯಮ್ಮ ಹಾಗೂ ಜೋಸೆಫ್ರಿಗೆ ಹುಟ್ಟಿದ ಮಗು ಯೇಸು ಕೂಡ ಇಂತದ್ದೇ ಸ್ವಭಾವವನ್ನು ಹೊತ್ತುಕೊಂಡು ತಾಯಿಯ ಗರ್ಭದಿಂದ ಭೂಮಿಗೆ ಬಂದವನು. ಆದರೆ ಈ ಮಗು ಇನ್ನೂ ಹೆಚ್ಚಿನ ವಿಶೇಷತೆಯನ್ನು ಹುಟ್ಟಿನಿಂದಲೇ ಹೊಂದಿತ್ತು. ಆ ಮಗು ದೈವಶಕ್ತಿಯಿಂದ ಕೂಡಿತ್ತು. ಇದಕ್ಕೆ ಕಾರಣ ದೇವರಿಗೆ ಮನುಷ್ಯರ ಮೇಲಿದ್ದ ಪ್ರೀತಿ. ತಾನು ಸೃಷ್ಟಿಸಿದ ಮಾನವರು ಭೂಲೋಕದಲ್ಲಿ ಅನಾಚಾರ, ಸ್ವೇಚ್ಛಾಚಾರ, ಭೋಗ, ಪಾಪ ಹಾಗೂ ಇನ್ನಿತರ ಚಟುವಟಿಕೆಗಳಿಂದ ನರಕದ ಹಾದಿಯನ್ನು ಹಿಡಿಯುತ್ತಿರುವುದು ಅವನಿಗೆ ಸಹಿಸಲ ಸಾಧ್ಯವಾಯಿತು. ದೈವಶಕ್ತಿಯೊಂದೇ ಅವರನ್ನು ಪಾಪದ ಕೂಪದಿಂದ ರಕ್ಷಿಸಲು ಸಾಧ್ಯ ಎಂಬುದರ ಅರಿವು ಅವನಿಗಿತ್ತು. ಆದುದರಿಂದ ತಾನೇ ಸ್ವತಃ ಭೂಮಿಗಿಳಿದು ಮನುಜ ಕುಲವನ್ನು ನರಕ ಯಾತನೆಯಿಂದ ರಕ್ಷಿಸುವ ಕೆಲಸವನ್ನು ಆರಂಭಿಸಿದ. ಬಹುಶಃ ದೇವರ ರೂಪ ಧರಿಸಿ ಭೂಮಿಗೆ ಇಳಿದರೆ ಸಾಮಾನ್ಯ ಜನರು ನಂಬಲಾರರು, ನಂಬಿದರೂ ದೇವರಿಂದ ದೂರವೇ ಉಳಿಯುವರು ಎನ್ನುವ ಕಾರಣದಿಂದಾಗಿ ಮನುಷ್ಯ ರೂಪದಲ್ಲಿ ಹುಟ್ಟಿ, ಮನುಷ್ಯರ ಹಾಗೆ ಬಾಳಿ, ಅವರೊಂದಿಗೆ ಬೆರೆತು, ಅವರು ಪಡುವಂತಹ ಕಷ್ಟಗಳಲ್ಲಿ ಭಾಗಿಯಾಗಿ, ಅವರು ಉಣ್ಣುವುದನ್ನು ಉಂಡು, ಅವರು ಉಡುವುದನ್ನು ಉಟ್ಟು ಸನ್ಮಾರ್ಗದೆಡೆಗೆ ಅವರ ಮನ ಪರಿವರ್ತನೆ ಮಾಡಿ ಸ್ವರ್ಗದ ದಾರಿಯನ್ನು ತೋರಿಸುವುದು ದೇವರ ನಿರ್ಧಾರವಾಗಿತ್ತು.

ಅಂತೆಯೇ ಆಯಿತು. ಇದೊಂದು ಪವಾಡ. ಪವಾಡ ಪವಾಡವಾಗಿಯೇ ಉಳಿಯುತ್ತದೆ. ಏಕೆಂದರೆ ಅದು ಕಲ್ಪನಾತೀತ. ಹಲವಾರು ವ್ಯಕ್ತಿಗಳು ಹಲವಾರು ಪ್ರಶ್ನೆಗಳನ್ನು ಕೇಳುತ್ತಾರೆ. “ಅದು ಹೇಗೆ ಸಾಧ್ಯ. ಗಂಡ ಹೆಂಡತಿ ಸಂಧಿಸದೆ ಮಗು ಹುಟ್ಟಲು ಸಾಧ್ಯವೇ?’ ಇನ್ನೊಂದು ಕಡೆ ದೇವರಿಗೆ ಅಸಾಧ್ಯವಾದುದು ಏನೂ ಇಲ್ಲ ಎಂಬುದನ್ನ ನಂಬಿಕೊಂಡು ಬಂದವರು ನಾವು. ಆದುದರಿಂದ ಪವಿತ್ರಾತ್ಮನ ಶಕ್ತಿಯಿಂದ ಮಾತೆ ಮೇರಿಯಮ್ಮ ಗರ್ಭಿಣಿಯಾದಳು. ಗೋದಲಿಯಲ್ಲಿ ಪ್ರಸವ ವೇದನೆಯನ್ನು ಅನುಭವಿಸಿ ಗಂಡು ಮಗುವಿಗೆ ಜನ್ಮ ನೀಡಿದಳು ಹಾಗೂ ಆ ಮಗುವಿಗೆ ಏಸು ಎಂದು ಹೆಸರಿಟ್ಟರು. ಆ ಜನನದಿಂದ ದೇವರಿಗೆ ಮನುಕುಲದ ಮೇಲಿರುವ ಪ್ರೀತಿ ರುಜುವಾಯಿತು. ಜಗತ್ತಿನಾದ್ಯಂತ ಈ ಪವಾಡದ ಜನನವನ್ನು ಕ್ರಿಸ್ಮಸ್‌ ಹಬ್ಬವಾಗಿ ಆಚರಿಸಿ ಏಸು ಕ್ರಿಸ್ತನ ಜನನವನ್ನು ಸಂಭ್ರಮಿಸುತ್ತೇವೆ.

ದೇವರು ಕನ್ಯಾ ಮರಿಯಮ್ಮಳನ್ನು ಏಸುವಿನ ತಾಯಿಯಾಗಿ ಆಯ್ಕೆ ಮಾಡಿದ ರೀತಿಯೇ ಒಂದು ಅದ್ಭುತ ಸನ್ನಿವೇಶ. ತನ್ನ ಸ್ಥಾನದಲ್ಲಿ ತನ್ನ ಮಗನನ್ನು ಭೂಮಿಗೆ ಕಳುಹಿಸುವ ಸಂದೇಶವನ್ನು ಕನ್ಯಾ ಮರಿಯಮ್ಮಳಿಗೆ ನೀಡುವ ಸಲುವಾಗಿ ದೇವರು ಅವನ ದೂತನನ್ನು ನಿಯೋಜಿಸಿದರು. ಆ ದೂತ ಕನ್ಯಾ ಮರಿಯಮ್ಮಳಿಗೆ ಪ್ರತ್ಯಕ್ಷವಾಗಿ ದೇವರ ಸಂದೇಶವನ್ನು ಸಾರುತ್ತಾನೆ. “ನೀನು ಭಾಗ್ಯವಂತಳು. ಪವಿತ್ರಾತ್ಮನ ಶಕ್ತಿಯಿಂದ ನೀನು ಒಂದು ಗಂಡು ಮಗುವಿಗೆ ಜನ್ಮ ನೀಡುವಿ. ಆತನಿಗೆ ಏಸು ಎಂದು ನಾಮಕರಣ ಮಾಡುವಿಯಂತೆ’. ಈ ಸಂದೇಶದಿಂದ ಒಮ್ಮೆ ವಿಚಲಿತಳಾದ ಕನ್ಯಾ ಮರಿಯಮ್ಮ ತನ್ನನ್ನೇ ದೇವರ ಅಪೇಕ್ಷೆಗೆ ಅರ್ಪಿಸಿ ಅವನ ಇಷ್ಟದಂತೆ ಆಗಲಿ ಎಂದು ಮನುಕುಲವನ್ನು ರಕ್ಷಿಸಲು ಹುಟ್ಟುವ ಮಗುವಿನ ತಾಯಿಯಾಗಲು ಒಪ್ಪುತ್ತಾಳೆ.

ಅ ಮಗು ಏಸು ತನ್ನ ದೈವಾತ್ಮವನ್ನು ಹುಟ್ಟಿನಿಂದಲೇ ತೋರಿಸಿ ಕೊಡುತ್ತಾನೆ. ಅವನು ಹುಟ್ಟುವಾಗ ಮೂವರು ಶ್ರೀಮಂತ ರಾಜರು ಅವನನ್ನು ನೋಡಲು ಹೋಗುವಾಗ ಅವರಿಗೆ ದಾರಿ ತೋರಿಸಿದ್ದು ಆಕಾಶದಲ್ಲಿ ಹೊಳೆಯುತ್ತಿದ್ದ ಒಂದು ನಕ್ಷತ್ರ. ಬಾಲಕ ಏಸುವನ್ನು ದೇವಾಲಯಕ್ಕೆ ಅರ್ಪಣೆ ಮಾಡಿದಂತಹ ಸಂದರ್ಭದಲ್ಲಿ ಬಾಲ ಏಸು ತನ್ನ ಹೆತ್ತವರಿಂದ ದೂರವಾಗುತ್ತಾನೆ. ಹೆತ್ತವರು ಆತಂಕಗೊಂಡು ಬಾಲಕನನ್ನು ಅರಸಿ ದೇವಾಲಯಕ್ಕೆ ಹಿಂತಿರುಗಿದಾಗ ಬಾಲಕ ಏಸು ಆ ದೇವಾಲಯದಲ್ಲಿ ಹಿರಿಯರೊಡನೆ ದೇವರ ರಾಜ್ಯದ ಬಗ್ಗೆ ಗಹನ ಚರ್ಚೆಯಲ್ಲಿ ತೊಡಗಿದ್ದ. ಅನಂತರ ಆತನಿಗೆ ಮೂವತೂರು ವರ್ಷಗಳು ತುಂಬುವ ತನಕ ಕುಟುಂಬದೊಂದಿಗೆ ಖಾಸಗಿ ಬದುಕು. ಮೂವತೂ¾ರು ವರ್ಷ ತುಂಬುತ್ತಲೇ ಸಾರ್ವಜನಿಕ ಬದುಕು ಆರಂಭಿಸಿ ದೇವರು ಅವನಿಗೋಸ್ಕರ ನಿರ್ಧರಿಸಿದ ಕೆಲಸವನ್ನು ನಿಷ್ಠೆಯಿಂದ ಮಾಡತೊಡಗಿದ. ಮನುಷ್ಯರಿಗೆ ಸ್ವರ್ಗದ ದಾರಿಯನ್ನು ತೋರಿಸುವ ಕೆಲಸವನ್ನು ಕೈಗೆತ್ತಿಕೊಂಡು ತನ್ನವರಿಂದಲೇ ದ್ವೇಷಕ್ಕೊಳಗಾದ. ಶಿಲುಬೆಯ ಮರಣದೊಂದಿಗೆ ಅವನ ಜೀವನ ಅಂತ್ಯಗೊಂಡಿತು. ಆದರೆ ಅವನ ಸಾವು ಮನುಕುಲಕ್ಕೆ ಹೊಸ ಹುರುಪು ನೀಡಿತು. ಇದಕ್ಕಿಂತಲೂ ಮಿಗಿಲಾಗಿ ಅವನ ಹುಟ್ಟು ಮನುಕುಲಕ್ಕೆ ಹೊಸ ಆಶಾಕಿರಣ ನೀಡಿತು. ಇನ್ನೇನೊ ಕತ್ತಲಲ್ಲಿ ನಾವು ಮುಳುಗುತ್ತೇವೆ ಎನ್ನುವಾಗ ಅ ಮಗುವಿನ ಕೂಗು ನಮಗೆಲ್ಲರಿಗೆ ಪುನರ್ಜನ್ಮವನ್ನು ನೀಡಿತು. ಆ ಮಗು ಕ್ರೆçಸ್ತರು ಆರಾಧಿಸುವಂತಹ ಏಸು ಕ್ರಿಸ್ತ.

ಕ್ರಿಸ್ಮಸ್‌ ಹಬ್ಬವು ಪ್ರೀತಿ, ಮಮತೆ, ಸಂತೋಷ ಹಾಗೂ ಸಹೋದರತ್ವ ಸಾರುವ ಹಬ್ಬವಾಗಿದೆ. ಇಡೀ ವಿಶ್ವವೇ ಈ ಹಬ್ಬವನ್ನು ಆಚರಿಸುವ ಸಂದರ್ಭದಲ್ಲಿ ಏಸು ಸಾರಿದ ಪ್ರೀತಿಯ ಸಂದೇಶ ನೆಲೆಮಾಡಲಿ ಎಂಬ ಹಾರೈಕೆ.

ಡಾ| ವಿನ್ಸೆಂಟ್‌ ಆಳ್ವ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕೋವಿಡ್-19 ಹಿನ್ನೆಲೆ ಆನ್ ಲೈನ್ ಮೂಲಕ ಎಸ್ ಎಸ್ ಎಲ್ ಸಿ ಮಕ್ಕಳಿಗೆ ಪಾಠ ಪ್ರವಚನ

ಕೋವಿಡ್-19 ಹಿನ್ನೆಲೆ ಆನ್ ಲೈನ್ ಮೂಲಕ ಎಸ್ ಎಸ್ ಎಲ್ ಸಿ ಮಕ್ಕಳಿಗೆ ಪಾಠ ಪ್ರವಚನ

ಜಮ್ಮು-ಕಾಶ್ಮೀರ ಗಡಿಯಲ್ಲಿ ಭಾರೀ ಗುಂಡಿನ ಕಾಳಗ; ಐವರು ಉಗ್ರರ ಸಾವು, 3 ಯೋಧರು ಹುತಾತ್ಮ

ಜಮ್ಮು-ಕಾಶ್ಮೀರ ಗಡಿಯಲ್ಲಿ ಭಾರೀ ಗುಂಡಿನ ಕಾಳಗ; ಐವರು ಉಗ್ರರ ಸಾವು, 3 ಯೋಧರು ಹುತಾತ್ಮ

ಕೋವಿಡ್-19 ಗೆದ್ದ 104 ವರ್ಷದ ಸೈನಿಕ

ಕೋವಿಡ್-19 ಗೆದ್ದ 104 ವರ್ಷದ ಸೈನಿಕ

ಆಸ್ಪತ್ರೆಯ ಐಸಿಯು ಬೀಗದ ಕೈ ಹುಡುಕಲು ಸಿಬ್ಬಂದಿಗಳ ಪರದಾಟ: 55 ವರ್ಷದ ಮಹಿಳೆ ಸಾವು

ಆಸ್ಪತ್ರೆಯ ಐಸಿಯು ಬೀಗದ ಕೈ ಹುಡುಕಲು ಸಿಬ್ಬಂದಿಗಳ ಪರದಾಟ: 55 ವರ್ಷದ ಮಹಿಳೆ ಸಾವು

ಕೋವಿಡ್-19: ಸ್ವಚ್ಛತೆಯೇ ಅಸ್ತ್ರ ಎಂದ ಜಪಾನ್‌

ಕೋವಿಡ್-19: ಸ್ವಚ್ಛತೆಯೇ ಅಸ್ತ್ರ ಎಂದ ಜಪಾನ್‌

ಈ ದೇಶಗಳು ಆರಂಭದಲ್ಲೇ ಏನು ಮಾಡಿದ್ದವು?

ಈ ದೇಶಗಳು ಆರಂಭದಲ್ಲೇ ಏನು ಮಾಡಿದ್ದವು?

ಸೋಂಕು ಪ್ರಕರಣ ಹೆಚ್ಚಳ: ಲಾಕ್ ಡೌನ್ ಕಟ್ಟುನಿಟ್ಟಾಗಿ ಪಾಲಿಸಲು ಬಿಎಸ್ ವೈ ಮನವಿ

ಸೋಂಕು ಪ್ರಕರಣ ಹೆಚ್ಚಳ: ಲಾಕ್ ಡೌನ್ ಕಟ್ಟುನಿಟ್ಟಾಗಿ ಪಾಲಿಸಲು ಬಿಎಸ್ ವೈ ಮನವಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಾವಿನ ಕುಣಿಕೆಗೆ ಕೊರಳೊಡ್ಡುವ ಮುನ್ನ ಊಟ, ಸ್ನಾನ ನಿರಾಕರಿಸಿದ್ದ ನಿರ್ಭಯಾ ದೋಷಿಗಳು

ಸಾವಿನ ಕುಣಿಕೆಗೆ ಕೊರಳೊಡ್ಡುವ ಮುನ್ನ ಊಟ, ಸ್ನಾನ ನಿರಾಕರಿಸಿದ್ದ ನಿರ್ಭಯಾ ದೋಷಿಗಳು!

nirbhaya-mother-apeal-court

ನ್ಯಾಯ ದೊರೆತರೂ ಮತ್ತೆ ಸುಪ್ರೀಂಕೋರ್ಟ್ ಕದತಟ್ಟಿದ ನಿರ್ಭಯಾ ತಾಯಿ: ಕಾರಣವೇನು ಗೊತ್ತಾ ?

nirbhaya-case

ಕೊನೆಗೂ ನ್ಯಾಯ ದೊರಕಿದೆ,ಈ ದಿನ ದೇಶದ ಹೆಣ್ಣು ಮಕ್ಕಳಿಗೆ ಅರ್ಪಣೆ:ನಿರ್ಭಯಾ ತಾಯಿ ಪ್ರತಿಕ್ರಿಯೆ

ಕೊನೆಗೂ ನೇಣಿಗೆ ಕೊರಳೊಡ್ಡಿದ ಅತ್ಯಾಚಾರಿ ಹಂತಕರು ; ನಿರ್ಭಯಾ ಆತ್ಮಕ್ಕೆ ಶಾಂತಿ

ಕೊನೆಗೂ ನೇಣಿಗೆ ಕೊರಳೊಡ್ಡಿದ ಅತ್ಯಾಚಾರಿ ಹಂತಕರು ; ನಿರ್ಭಯಾ ಆತ್ಮಕ್ಕೆ ಶಾಂತಿ

ನಿರ್ಭಯಾ ಹಂತಕ ಅಕ್ಷಯ್ ಕುಮಾರ್ ಕುಟುಂಬಕ್ಕೆ ಅಂತಿಮ ಕ್ಷಣದ ಭೇಟಿ ನಿರಾಕರಣೆ

ನಿರ್ಭಯಾ ಹಂತಕ ಅಕ್ಷಯ್ ಸಿಂಗ್ ಕುಟುಂಬಕ್ಕೆ ಅಂತಿಮ ಕ್ಷಣದ ಭೇಟಿ ನಿರಾಕರಣೆ

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ

ಕೋವಿಡ್-19 ಹಿನ್ನೆಲೆ ಆನ್ ಲೈನ್ ಮೂಲಕ ಎಸ್ ಎಸ್ ಎಲ್ ಸಿ ಮಕ್ಕಳಿಗೆ ಪಾಠ ಪ್ರವಚನ

ಕೋವಿಡ್-19 ಹಿನ್ನೆಲೆ ಆನ್ ಲೈನ್ ಮೂಲಕ ಎಸ್ ಎಸ್ ಎಲ್ ಸಿ ಮಕ್ಕಳಿಗೆ ಪಾಠ ಪ್ರವಚನ

ಲಾಕ್ ಡೌನ್ ‍ಪ್ರಭಾವ : ವಿಡಿಯೋ ಕಾಲ್ ಮೂಲಕವೇ ನಡೆದ ಮದುವೆ

ಲಾಕ್ ಡೌನ್ ‍ಪ್ರಭಾವ : ವಿಡಿಯೋ ಕಾಲ್ ಮೂಲಕವೇ ನಡೆದ ಮದುವೆ

ತರಕಾರಿ-ಕಲ್ಲಂಗಡಿ ಬೆಳೆದ ರೈತನಿಗೆ ಆರ್ಥಿಕ ಸಂಕಷ್ಟ

ತರಕಾರಿ-ಕಲ್ಲಂಗಡಿ ಬೆಳೆದ ರೈತನಿಗೆ ಆರ್ಥಿಕ ಸಂಕಷ್ಟ

ಆ ಒಂದು ಶತಕದವರೆಗೆ ಧೋನಿ ಮೇಲೆ ನಂಬಿಕೆಯಿರಲಿಲ್ಲ; ಮಾಜಿ ನಾಯಕನ ಬಗ್ಗೆ ನೆಹ್ರಾ ಮಾತು

ಆ ಒಂದು ಶತಕದವರೆಗೆ ಧೋನಿ ಮೇಲೆ ನಂಬಿಕೆಯಿರಲಿಲ್ಲ; ಮಾಜಿ ನಾಯಕನ ಬಗ್ಗೆ ನೆಹ್ರಾ ಮಾತು

ಜಮ್ಮು-ಕಾಶ್ಮೀರ ಗಡಿಯಲ್ಲಿ ಭಾರೀ ಗುಂಡಿನ ಕಾಳಗ; ಐವರು ಉಗ್ರರ ಸಾವು, 3 ಯೋಧರು ಹುತಾತ್ಮ

ಜಮ್ಮು-ಕಾಶ್ಮೀರ ಗಡಿಯಲ್ಲಿ ಭಾರೀ ಗುಂಡಿನ ಕಾಳಗ; ಐವರು ಉಗ್ರರ ಸಾವು, 3 ಯೋಧರು ಹುತಾತ್ಮ