ಬಾಲ್ಯದಲ್ಲೇ ಓದುವ ತುಡಿತ

ಓದುಗರ ಭಾವನಾತ್ಮಕ ಸಂಬಂಧ ತಿಳಿಸುವ ಪತ್ರಗಳ ಸರಣಿ

Team Udayavani, Jan 17, 2020, 6:08 AM IST

ನನಗೆ ಪತ್ರಿಕೆ ಎಂದರೆ ನೆನಪಾಗುವುದೇ ಉದಯವಾಣಿ. ಶಾಲಾ ದಿನಗಳಲ್ಲಿ ಪತ್ರಿಕೆ ನೋಡಿದಿದ್ದರೆ ಅದು ಉದಯವಾಣಿ. ಆ ಸಮ ಯದಲ್ಲಿ ಕಾರ್ಕಳದ ನಮ್ಮ ಮನೆಯ ಅಕ್ಕಪಕ್ಕ ಯಾರೂ ದುಡ್ಡು ಕೊಟ್ಟು ಪ್ರತಿದಿನ ಪತ್ರಿಕೆ ತರಿಸು ವವರು ಯಾರೂ ಇರಲಿಲ್ಲ. ನಮ್ಮ ಮನೆ ಆರ್ಥಿಕ ಪರಿಸ್ಥಿತಿ ಕೂಡ ಇದಕ್ಕೆ ಹೊರತಾಗಿರಲಿಲ್ಲ. ನನಗೆ ಮಾತ್ರ ತುಂಬಾನೇ ಓದುವ ಹುಚ್ಚು.

ಆಂದೆಲ್ಲಾ ಶಾಲೆಗೆ ನಡೆದೇ ಹೋಗುವ ಅನಿವಾರ್ಯತೆ. ಹಾಗೆ ಹೋಗುವ ದಾರಿಯಲ್ಲಿ ಇದ್ದದ್ದೇ ಬಾಬಣ್ಣನ ಕುಚ್ಚಿ ತೆಗೆಯುವ ಅಂಗಡಿ. ಹೌದು, ಬಾಬಣ್ಣ ಕ್ಷೌರಿಕರು ಮತ್ತು ಆ ಕಾಲಕ್ಕೇ ಅವರೊಬ್ಬರದ್ದೇ ಅಂಗಡಿ ಇದ್ದದ್ದು. ಅವರು ಪ್ರತಿದಿನ ಉದಯವಾಣಿ ತರಿಸುತ್ತಿದ್ದರು. ನಾನು ಪ್ರತಿದಿನ ಓದಲು ಹೋಗತ್ತಿರಲ್ಲಿಲ್ಲ. ಆದರೆ ನನಗೆ ರವಿವಾರ ಮತ್ತು ಶುಕ್ರವಾರದ ಪುರವಣಿ ಓದುವ ವಿಶೇಷ ಅಕ್ಕರೆ ಇತ್ತು. ತಿಂಗಳಿಗೂಮ್ಮೆ ಅವರ ಅಂಗಡಿಗೆ ಹೋಗಿ ಶುಕ್ರವಾರ ಮತ್ತು ರವಿವಾ ರದ ಪತ್ರಿಕೆ ಆಯ್ದು ಮನೆಗೆ ತರುತ್ತಿದ್ದೆ. ಅವರೂ ಉದಾರ ಮನಸ್ಸಿನಿಂದ ನನಗೆ ಅದನ್ನು ಉಚಿತವಾಗಿ ಕೊಡುತ್ತಿದ್ದರು. ಅಂದೆಲ್ಲಾ ಪ್ಲಾಸ್ಟಿಕ್‌ ಚೀಲ ಇರಲಿಲ್ಲ. ಅಂಗಡಿಗಳಲ್ಲಿ ಸಾಮಗ್ರಿಗಳನ್ನು ಕಟ್ಟಿ ಕಟ್ಟಿ ಕೊಡುತ್ತಿದ್ದುದೇ ಕಾಗದದಲ್ಲಿ. ಅಂದು ರದ್ದಿ ಪತ್ರಿಕೆಗೂ ಬೇಡಿಕೆಯಿದ್ದ ಕಾಲ.

ಅದರಲ್ಲಿನ ಕತೆ, ಲೇಖನ ಎರಡೆರಡು ಬಾರಿ ಓದಿ, ಅದರಲ್ಲಿದ್ದ ಸುಂದರ ಚಿತ್ರಗಳು ಕತ್ತರಿಸ ಲ್ಪಟ್ಟು ನನ್ನ ಚಿತ್ರ ಸಂಗ್ರಹಕ್ಕೆ ಹೋಗುತ್ತಿತ್ತು. ಮತ್ತೆ ಉಳಿದ ಪತ್ರಿಕೆ ಶಾಲಾ ಪುಸ್ತಕಕ್ಕೆ ಬೈಂಡ್‌ ಆಗತ್ತಿತ್ತು. ನನ್ನ ಓದುವ ಹವ್ಯಾಸಈ ರೀತಿ ಪರೋಕ್ಷವಾಗಿ ನೆರವಾದ ಬಾಬಣ್ಣನ್ನಿಗೆ ನನ್ನ ಹೃದಯಪೂರ್ವಕ ಧನ್ಯವಾದ. ಮುಂದೆ ದುಡಿಯಲು ತೊಡಗಿ ಪತ್ರಿಕೆ ಕೊಳ್ಳುವ ಸಾಮರ್ಥ್ಯವಿದ್ದಾಗಲೂ ನಾನಿದ್ದ ಪ್ರದೇಶದಲ್ಲಿ ಕನ್ನಡ ಪತ್ರಿಕೆಗಳೇ ಸಿಗುತ್ತಿರಲಿಲ್ಲ. ತುಂಬಾ ಮರು ಕಪಟ್ಟಿದ್ದೆ. ಅಲ್ಲಿ ಆಂಗ್ಲ ಪತ್ರಿಕೆ ಓದುತ್ತಿದ್ದರೂ ನಮ್ಮ ಕನ್ನಡ ಪತ್ರಿಕೆ ಓದಿದಂತೆ ಆಗುತ್ತಿರಲಿಲ್ಲ. ಈಗ ಪುನಃ ಕೆಲವು ವರ್ಷಗಳಿಂದ ಕಾರ್ಕಳದ ಲ್ಲಿದ್ದೇನೆ. ಈಗ ಪ್ರತಿದಿನ ಓದುತ್ತೇನೆ. ಈಗಲೂ ನನಗೆ ಶುಕ್ರ ವಾರ ಮತ್ತು ರವಿವಾರದ ವಿಶೇಷ ಪುರವಣಿ ಗಳೆಂದರೆ ಅಚ್ಚುಮೆಚ್ಚು. ಜತೆಗೆ ಉದಯವಾಣಿ ಓದಿದಂತೆ ಬೇರೆ ಪತ್ರಿಕೆ ಓದಿದರೂ ಆಗುವುದಿಲ್ಲ.

1970ರ ಸಂಚಿಕೆ ಈಗಲೂ ಇದೆ
1970ರ ದಶಕದಲ್ಲಿ ಪ್ರಾರಂಭಗೊಂಡ “ಉದಯವಾಣಿ’ಯನ್ನು ಮೀರಿಸುವ ಕನ್ನಡ ದಿನಪತ್ರಿಕೆ ಮತ್ತೂಂದಿಲ್ಲ. ಆಗ ನಾವು ಸುಳ್ಯದ ಲ್ಲಿದ್ದೆವು, 1970ರ ಜನವರಿ 1ರಂದು ನಮ್ಮ ಕೈಗೆ ಮೊದಲ ಸಂಚಿಕೆ ಸೇರಿತ್ತು. ಅದೂ 10 ಪೈಸೆಗೆ. ಆಗಿನ ಪತ್ರಿಕೆ ಈಗಲೂ ನನ್ನ ಬಳಿ ಇದೆ. ಮೊನ್ನೆ 50ರ ಸಂಭ್ರಮಾಚರಣೆ ವೇಳೆ ಹಳೆಯ ಪತ್ರಿಕೆ ಯನ್ನು ನೋಡಿ ಖುಷಿಯಾಯಿತು. ಅಂದಿ ನಿಂದ ಇಂದಿನ ವರೆಗೆ ಉದಯ ವಾಣಿಯೇ ನಮ್ಮ ನೆಚ್ಚಿನ ಪತ್ರಿಕೆಯಾಗಿದೆ. ಯಾಕೆಂದರೆ ಉದಯವಾಣಿಯ ಮುದ್ರಣವೇ ಸೂಪರ್‌.

ಸುದ್ದಿಗಳನ್ನು ಆಧರಿಸಿ ಅದಕ್ಕೆ ಪುಟ ನೀಡಲಾಗುತ್ತಿದ್ದು, ನಾನು ಮೆಚ್ಚಿಕೊಂಡ ಹಲವು ಅಂಶಗಳಲ್ಲಿ ಒಂದು. ಕ್ರೀಡೆ, ರಾಜ್ಯ, ಸಂಪಾದಕೀಯ, ದೇಶ-ವಿದೇಶ, ಅಪರಾಧ, ಕರಾವಳಿ ಹೀಗೆ ಪ್ರತಿ ಸುದ್ದಿಗಳಿಗೂ ಸರಿಯಾದ ನ್ಯಾಯವನ್ನು ಒದಗಿಸಿದ್ದೀರಿ. ಇಷ್ಟೊಂದು ಸುಲಭವಾಗಿ ಸುದ್ದಿಯನ್ನು ವಿಭಾಗಿಸಿದ್ದು ಉದಯವಾಣಿಯಲ್ಲಿ ಮಾತ್ರ. ಕಲಾವಿಹಾರ, ಸಾಪ್ತಾಹಿಕ, ಸುದಿನ ಎಲ್ಲವೂ ಚೆನ್ನಾಗಿ ಮೂಡಿ ಬರುತ್ತಿದೆ. ಬೆಳಗ್ಗಿನ ಜಾವ ಉದಯವಾಣಿ ಯನ್ನು ಓದುವುದು ಒಂದು ಖುಷಿಯ ವಿಚಾ ರವಾಗಿದೆ. ಪ್ರತಿದಿನ ಬೆಳಗ್ಗೆ ಎದ್ದ ಕೂಡಲೇ ನಾನು ಉದಯವಾಣಿ ಬರುವಿಕೆಗಾಗಿ ಕಾಯು ತ್ತಿರುತ್ತೇನೆ. ಸುವರ್ಣ ಸಂಭ್ರಮಾಚರಣೆಯಲ್ಲಿ ರುವ ನೆಚ್ಚಿನ ಪತ್ರಿಕೆಗೆ ನನ್ನ ಅಭಿನಂದ‌ನೆಗಳು.

ಕೆ. ಹರೀಶ್‌ ಕುಮಾರ್‌, ಪುತ್ತೂರು

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ