ಕಾಶ್ಮೀರದಲ್ಲಿ 7 ದಶಕಗಳ ಬಳಿಕ ರಾರಾಜಿಸಲಿದೆ ರಾಷ್ಟ್ರ ಧ್ವಜ

Team Udayavani, Aug 15, 2019, 5:43 AM IST

73ನೇ ಸ್ವಾತಂತ್ರ್ಯೋತ್ಸವಕ್ಕೆ ಇಂದು ಇಡೀ ದೇಶ ಸಾಕ್ಷಿಯಾಗುತ್ತಿದೆ. ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ಹಲವು ಪ್ರಥಮಗಳಿಗೆ ಕಾರಣ ವಾಗುತ್ತಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ನೀಡ ಲಾಗಿದ್ದ ವಿಶೇಷ ಸ್ಥಾನ ಮಾನದ 370ನೇ ವಿಧಿ ಹಾಗೂ 35ಎ ರದ್ದುಗೊಂಡ ಬಳಿಕ ನಡೆಯುತ್ತಿರುವ ದೇಶದ ಅತೀ ದೊಡ್ಡ ಸರಕಾರಿ ಕಾರ್ಯಕ್ರಮ ಇದಾಗಿದೆ.ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ 150ನೇ ಜನ್ಮ ದಿನಾಚರಣೆಯೂ ಇದೇ ವರ್ಷ ನಡೆಯುತ್ತಿದೆ ಎಂಬು ದು ಮತ್ತಷ್ಟು ಮೆರುಗು ತಂದಿದೆ.

ಗಡಿ ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನದ 370ನೇ ವಿಧಿಯನ್ನು ಸಂವಿಧಾನದ ಅನುಸಾರವಾಗಿ ಹಿಂದಕ್ಕೆ ಪಡೆದ ಕಾರಣ, ಕಾಶ್ಮೀರದಲ್ಲಿ ಈ ಬಾರಿ ತ್ರಿವರ್ಣ ಧ್ವಜ ಮಾತ್ರ ಹಾರಾಡಲಿದೆ. ಇತರ ರಾಜ್ಯಗಳಂತೆ ಈ ಹಿಂದಿನ ಸ್ವಾತಂತ್ರ್ಯ ದಿನಾಚ ರಣೆಗಳಿಗೆ ಕಣಿವೆ ರಾಜ್ಯ ಸಾಕ್ಷಿಯಾಗುತ್ತಿತ್ತಾದರೂ ಎರಡು ಧ್ವಜಗಳ ಮೂಲಕ ಆಚರಿಸಲಾಗುತ್ತಿತ್ತು. 13 ಜುಲೈ 1952ರಲ್ಲಿ ಕಾಶ್ಮೀರ ತನ್ನದೇ ಆದ ಧ್ವಜವನ್ನು ಅಳವಡಿಸಿಕೊಂಡಿತ್ತು. ಇತಿಹಾಸದ ಪ್ರಕಾರ 1947-48ರಲ್ಲಿ ಕಾಶ್ಮೀರದಲ್ಲಿ ಏಕ ಧ್ವಜದ ಮೂಲಕ ಸ್ವಾತಂತ್ರ್ಯವನ್ನು ಆಚರಿಸಲಾಗಿತ್ತು. ಬಳಿಕ 1992ರ ಜನವರಿ 26ರಂದು ಆರ್‌ಎಸ್‌ಎಸ್‌ ವತಿಯಿಂದ ಕಣಿವೆ ರಾಜ್ಯದ ಲಾಲ್ ಚೌಕದಲ್ಲಿ ಧ್ವಜಾರೋಹಣ ನಡೆದಿತ್ತು. ಅಂದು ಇತರ ಕಡೆ ಕಾಶ್ಮೀರದ ಧ್ವಜಗಳು ತಲೆಯೆತ್ತಿತ್ತು.

ಸ್ವಾತಂತ್ರ್ಯ ದಿನಾಚರಣೆಗೆ ರಾಜ್ಯದ ಕೆಲವು ಪ್ರದೇಶ ಗಳಲ್ಲಿ ‘ನಾಮ್‌ಕೇ ವಾಸ್ತೆ’ ಮಾತ್ರ ಕಾರ್ಯಕ್ರಮಗಳು ನಡೆ ಯುತ್ತಿದ್ದವು. ಅದೂ ಎರಡು ಧ್ವಜಗಳ ಅಡಿಯಲ್ಲಿ. ಅದರಲ್ಲಿ ಕೆಲವೇ ಮಂದಿಗಳು ಮಾತ್ರ ಭಾಗಿಯಾ ಗುತ್ತಿದ್ದರು. ಅಲ್ಲಿನ ಜನರಿಗೆ ಪ್ರತ್ಯೇಕವಾದಿಗಳು ಭಾರತ ಧ್ವಜದಡಿಯಲ್ಲಿ ಇರುವುದನ್ನು ಇಷ್ಟ ಪಡು ತ್ತಿರಲಿಲ್ಲ. ಈ ತನಕ ಕಾಶ್ಮೀರದ ಸ್ವಾಯತ್ತತೆಯನ್ನು ಪ್ರತಿಪಾದಿಸುತ್ತಿದ್ದ ಪ್ರಾದೇಶಿಕ ಧ್ವಜ ಈ ಬಾರಿಯ ಸ್ವಾತಂತ್ರ್ಯೋತ್ಸವದಲ್ಲಿ ಕಾಣಸಿಗದು. ಏಕ ಭಾರತದ ಜತೆಗೆ ಏಕ ರಾಷ್ಟ್ರ ಧ್ವಜ ಇತರವ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಂತೆ ಅಲ್ಲೂ ಮುಗಿಲೆತ್ತರದಲ್ಲಿ ರಾರಾಜಿಸಲಿದೆ.

ಐತಿಹಾಸಿಕ ಕ್ಷಣಕ್ಕೆ ಕಾಶ್ಮೀರ ಸನ್ನದ್ಧ
ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿ ರದ್ದಾದ ಬಳಿಕ ಮೊದಲ ಸ್ವಾತಂತ್ರ್ಯ ದಿನಚರಣೆ ನಡೆ ಯುತ್ತಿದೆ. ಇದಕ್ಕಾಗಿ ಸಕಲ ಸಿದ್ಧತೆಗಳು ಪೂರ್ಣ ಗೊಂಡಿವೆೆ. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ರಾಜ್ಯದಲ್ಲಿ ಕೈಗೊಂಡಿದ್ದ ಕಟ್ಟು ನಿಟ್ಟಿನ ಕಾನೂನು ಕ್ರಮವನ್ನು ತುಸು ಸಡಿಲಗೊಳಿಸಲಾಗಿದೆ. ಆದರೆ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಗೆ ಎಲ್ಲೂ ಭಯ ಆತಂಕಗಳು ಎದುರಾಗದಂತೆ ಸೇನೆ ನಿಗಾ ವಹಿಸಿದೆ.

ಈ ಹಿಂದೆ ಕಣಿವೆಯಲ್ಲಿ ಸರಕಾರಿ ನೌಕರರು ಸೇರಿ ದಂತೆ ಸಾರ್ವಜನಿಕರು ಸ್ವಾತಂತ್ರ್ಯೋತ್ಸವಕ್ಕೆ ಗೈರಾಗುತ್ತಿ ದ್ದರು. ಗೈರಿಗೆ ಕಾರಣ ಅಲ್ಲಿ ನೆಲೆಸಿರುವ ಪ್ರತ್ಯೇಕತವಾ ದಿಗಳ ಭಯ. ಕೇಂದ್ರ- ರಾಜ್ಯ ಸರಕಾರ ಜನರ ಸುರಕ್ಷ ತೆಗೆಗಾಗಿ ಬಿಗಿ ಬಂದೋಬಸ್ತ್ ನೀಡಲಾಗುತ್ತಿದ್ದರೂ, ಜನರು ಮನೆಯಿಂದ ಹೊರ ಬರುತ್ತಿರಲಿಲ್ಲ. ಈ ಹಿಂದೆ ಸ್ವಾತಂತ್ರ್ಯ ದಿನಾಚರಣೆಯಂದು ಬಲವಂತದ ಬಂದ್‌ ಜಾರಿಗೊಳಿಸಲಾಗುತ್ತಿತ್ತು. ಇಂದು ಅದು ನಡೆಯಲ್ಲ.

ಇನ್ನು ಹಿಂಸೆಗೆ ಆಸ್ಪದ ಇಲ್ಲ
ಸೈಯದ್‌ ಆಲಿ ಶಾ ಗಿಲಾನಿ, ಮಿರ್‌ವಾಹಿಜ್‌ ಉಮರ್‌ ಫಾರೂಕ್‌ ಹಾಗೂ ಯಾಸಿನ್‌ ಮಲ್ಲಿಖ್‌ ಮೊದಲಾದವರು ಸ್ವಾತಂತ್ರ್ಯ ದಿನವನ್ನು ಧಿಕ್ಕರಿಸಿ ಬಂದ್‌ಗೆ ಕರೆ ನೀಡುತ್ತಿದ್ದ ಪ್ರಮುಖರು. ಇವರಿಂದಾಗಿ ಉಳಿದ ರಾಜ್ಯಗಳಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ದಿನಾಚರಣೆ ಅಲ್ಲಿ ಕರಾಳ ದಿನವಾಗಿ ಮಾಪಾ‌ರ್ಡುಗೊಳ್ಳುತ್ತಿತ್ತು. ಪ್ರತಿ ವರ್ಷ ಅಲ್ಲಿನ ಶೇರ್‌-ಈ-ಕಾಶ್ಮೀರ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನಡೆಯುತ್ತಿತ್ತು. ಬೇರೆ ಕಡೆಗಳಲ್ಲಿ ಪ್ರತಿರೋಧಗಳು, ಬಂದ್‌ಗಳು ನಡೆಯುತ್ತಿದ್ದವು.

ಇನ್ನು ಇಂತಹ ಘಟನೆಗಳು ಇತಿಹಾಸವಾಗಿದ್ದು, ಅವುಗಳಿಗೆ ಅವಕಾಶವೂ ಇಲ್ಲ. ಇತರ ರಾಜ್ಯ, ಕೇಂದ್ರಾ ಡಳಿತ ಪ್ರದೇಶಗಳಂತೆ ಕಾಶ್ಮೀರದಲ್ಲಿ ಈ ದಿನ ಸರಕಾರಿ ಕಾರ್ಯಕ್ರಮವಾಗಿ ಬದಲಾಗಿದೆ. ಈ ಹಿಂದೆ ಇದ್ದ ಆಯ್ಕೆಗಳು, ವಿಶೇಷ ಸ್ಥಾನಮಾನ ಎಂಬ ಸ್ವೇಚ್ಛಾಚಾರ ವಾಗಿದ್ದ ಸ್ವಾತಂತ್ರ್ಯಇಂದು ಇಲ್ಲ. ಹೊಸ ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ, ಲಡಾಕ್‌ ನಿಜಾರ್ಥದ ಸ್ವಾತಂತ್ರ್ಯ ದಿನಾಚರಣೆ ನಡೆಯಲಿದೆ.

ಜಮ್ಮು ಮತ್ತು ಕಾಶ್ಮೀರ ಅಲ್ಲಿನ ಪ್ರತ್ಯೇಕತಾವಾದಿಗ ಳಿಗೆ ಮಾತ್ರ ಪ್ರತ್ಯೇಕ ರಾಷ್ಟ್ರ/ರಾಜ್ಯವಾಗಿರಬಹುದು. ಆದರೆ ಅದು ಭಾರತಿಯರಿಗೆ ದೇಶದ ಅಮೂಲ್ಯವಾದ ಭೂ ಭಾಗ. ಕಣಿವೆ ರಾಜ್ಯದಲ್ಲಿ ಸಂಭವಿಸುತ್ತಿದ್ದ ಸಾವು ನೋವುಗಳಿಗೆ ಅಲ್ಲಿನ ಮೂಲಭೂತವಾದಿಗಳು ಎಷ್ಟು ಖೇದ ವ್ಯಕ್ತಪಡಿಸಿದ್ದರೋ ಗೊತ್ತಿಲ್ಲ. ಆದರೆ ಕಾಶ್ಮೀರ ದಿಂದ ಕನ್ಯಾಕುಮಾರಿ ವರೆಗೆ, ಪಶ್ಚಿಮ ಬಂಗಾಲದಿಂದ ಗುಜರಾತ್‌ನ ವರೆಗೆ ಜನರ ಮನಸ್ಸು ಮಿಡಿಯುತ್ತಿತ್ತು.

ಅಲ್ಲಿಗೆ ನೀಡಲಾದ ವಿಶೇಷ ಸ್ಥಾನಮಾನ ಈ ತನಕ ಇತರ ರಾಜ್ಯದವರಿಗೂ ಅಸಮಾನತೆಯಾಗಿ ಕಂಡಿಲ್ಲ. ಆದರೆ ಸಂವಿಧಾನಾತ್ಮಕವಾಗಿ ನೀಡಲಾದ ಅವಕಾ ಶವನ್ನು ಸದುಪಯೋಗಪಡಿಸಿ, ಒಕ್ಕೂಟ ವ್ಯವಸ್ಥೆಯ ಪಾಲುದಾರರಾಗಿ ಅವರು ಎಂದೂ ಕಂಡು ಬಂದಿಲ್ಲ. ಈ ಮಾನ್ಯತೆಯನ್ನು ದುರ್ಬಳಕೆ ಮಾಡಿಕೊಂಡು ದೇಶದ ಭದ್ರತೆಗೆ, ಏಕತೆಗೆ ಅಪಚಾರವನ್ನು ಎಸೆ ಯುವುದು ಕಂಡು ಬಂದಾಗ 370ನೇ ವಿಧಿಯ ರದ್ಧತಿ ಅನಿವಾರ್ಯವಾಗಿತ್ತು. ಇದೀಗ ಕಾಶ್ಮೀರ ಪೂರ್ಣವಾಗಿ ನಮ್ಮ ರಾಜ್ಯವಾಗಿದ್ದು, ಅದು ಕೇವಲ ಒಂದು ಕೇಂದ್ರಾ ಡಳಿತ ಪ್ರದೇಶವಾಗಿ ಉಳಿದಿಲ್ಲ, ಅದು ಭಾವನಾತ್ಮಕ ಸಂಗತಿಯಾಗಿ ಬದಲಾಗಿದೆ.

ಇಂದು ಕಣಿವೆ ರಾಜ್ಯದಲ್ಲಿ 7ದಶಕಗಳ ಬಳಿಕ ತ್ರಿವರ್ಣ ಪತಾಕೆ ಮುಗಿಲೆತ್ತರದಲ್ಲಿ ಹಾರಲಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಸಿಂಡಿಕೇಟ್‌ ಬ್ಯಾಂಕ್‌ ಅಪಾರವಾದ ಜನ ಬೆಂಬಲವನ್ನು ಸಂಪಾದಿಸಿತ್ತು. ನಮ್ಮ ಬ್ಯಾಂಕ್‌ ಎಂಬ "ಫೀಲಿಂಗ್‌' ಅನ್ನು ಜನ ಹೊಂದಿದ್ದರು. ಆದರೆ ಈಗ ಬ್ಯಾಂಕ್‌ ತನ್ನ ಅಸ್ತಿತ್ವ...

  • ಕರುನಾಡಿನವರ ಅಸ್ಮಿತೆಯ, ಅಭಿಮಾನದ ಪ್ರತೀಕವಾಗಿರುವ ಸಿಂಡಿಕೇಟ್‌ ಬ್ಯಾಂಕನ್ನು ವಿಲೀನಗೊಳಿಸುವ ನಿರ್ಧಾರದ ವಿರುದ್ಧದ ಧ್ವನಿ ಬಲವಾಗುತ್ತಿದೆ. ವಿವಿಧ ಕ್ಷೇತ್ರಗಳ...

  • ಕರಾವಳಿಯಲ್ಲಿ ಹುಟ್ಟಿ ರಾಷ್ಟ್ರಮಟ್ಟಕ್ಕೆ ಬೆಳೆದ ಬ್ಯಾಂಕ್‌ಗಳ ಬಗ್ಗೆ ಇಲ್ಲಿನ ಜನರಿಗೆ ಅಪಾರ ಅಭಿಮಾನವಿದೆ. ಇವುಗಳನ್ನು ಬರೀ ಹಣಕಾಸು ಸಂಸ್ಥೆಗಳಾಗಿರದೆ ಬದುಕಿನ...

  • ಮಣಿಪಾಲ: ಶಬರಿಮಲೆಯ ಅಯ್ಯಪ್ಪ ಸ್ವಾಮಿ ಮಂದಿರದ ಬಾಗಿಲು ಮತ್ತೆ ತೆರೆಯಲಾಗಿದೆ. ಮಂಡಲ ಪೂಜೆಗಾಗಿ ಬೆಟ್ಟ ಹತ್ತಿ ಬಂದ ಭಕ್ತರಿಗೆ ಇನ್ನೆರಡು ತಿಂಗಳ ಕಾಲ ಶಬರಿ ಗಿರಿ...

  • ಕರಾವಳಿಯಲ್ಲಿ ಹುಟ್ಟಿ ರಾಷ್ಟ್ರಮಟ್ಟಕ್ಕೆ ಬೆಳೆದ ಬ್ಯಾಂಕ್‌ಗಳ ಬಗ್ಗೆ ಇಲ್ಲಿನ ಜನರಿಗೆ ಅಪಾರ ಅಭಿಮಾನವಿದೆ. ಇವುಗಳನ್ನು ಬರೀ ಹಣಕಾಸು ವ್ಯವಹಾರಗಳನ್ನು ಮಾಡುವ...

ಹೊಸ ಸೇರ್ಪಡೆ