ಕೃತಜ್ಞ(ಘ್ನ)ತೆಯೂ,ಮೈಮ(ಮೆ)ರೆಯುವಿಕೆಯೂ…

ಸರಕಾರದ ಮರ್ಜಿಯೂ, ತುರ್ತುಪರಿಸ್ಥಿತಿ ಹೋರಾಟಗಾರರ ತ್ಯಾಗವೂ...

Team Udayavani, Apr 2, 2022, 6:15 AM IST

ಕೃತಜ್ಞ(ಘ್ನ)ತೆಯೂ,ಮೈಮ(ಮೆ)ರೆಯುವಿಕೆಯೂ…

ಒಳಿತು-ಕೆಡುಕು, ಧರ್ಮ -ಅಧರ್ಮ, ನ್ಯಾಯ-ಅನ್ಯಾಯ, ಕೃತಜ್ಞತೆ-ಕೃತಘ್ನತೆ ಇತ್ಯಾದಿ ಪದಪುಂಜ ಗಳು ಆಗಾಗ್ಗೆ ಸಿಗುತ್ತಿರುತ್ತವೆ, ಒಂದು ಹೆಚ್ಚು ವಿಜೃಂಭಿಸುವುದು, ಇನ್ನೊಂದು ಸೋಲನುಭವಿಸು ವುದು ಕಂಡುಬರುತ್ತವೆ. ಇವುಗಳಲ್ಲಿ ಮಾಡಿದ ಉಪಕಾರವನ್ನು ಮರೆತು ಕೃತಘ್ನರಾಗುವುದು ಅಷ್ಟೂ ಆಪ್ಯಾಯಮಾನವೋ ಎಂಬುದು ಜನಸಾಮಾನ್ಯರ ನಿತ್ಯಜೀವನದಲ್ಲಿ ಎದ್ದು ಕಂಡುಬರುತ್ತದೆ. ದೇಶವು 1975-77ರ ಅವಧಿಯಲ್ಲಿ ಅನುಭವಿಸಿದ ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿದವರಲ್ಲಿ ಅಲ್ಲೋ ಇಲ್ಲೋ ಬದುಕಿ ಉಳಿದವರಿಗೆ ಮಾಸಾಶನ ಕೊಡುತ್ತೇವೆ ಎಂದು ಹೇಳಿದ ಹೋರಾಟದ ಫ‌ಲಾನುಭವಿ ಸರಕಾರ ಇನ್ನೂ ಕೊಡದೆ ಇದ್ದರೆ ಕೃತಜ್ಞತೆಯನ್ನು ಕೃತಘ್ನತೆ ಸೋಲಿಸುತ್ತದೆಯೋ ಎಂದಥೆìçಸಬಹುದು.

ನಿಸ್ವಾರ್ಥದ ಪರಿಮಾಣ: ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿದವರಲ್ಲಿ ಆರೆಸ್ಸೆಸ್‌, ಜನಸಂಘ (ಈಗಿನ ಬಿಜೆಪಿ), ಸಿಪಿಎಂ, ಸಮಾಜವಾದಿ, ಸಮತಾ ಪಾರ್ಟಿ ಹೀಗೆ ಅನೇಕ ಸಂಘಟನೆಗಳಿವೆ. ದಾಖಲೆಗಳು ಹೇಳುವ ಪ್ರಕಾರ ಆರೆಸ್ಸೆಸ್‌- ಜನಸಂಘದವರ ಪ್ರಮಾಣ ಹೋರಾಟಗಾರರಲ್ಲಿ ಹೆಚ್ಚು ಇದೆ. ಯಾವಾಗ ಬಿಡುಗಡೆಯಾಗಬಹುದು ಎಂಬ ಮುನ್ಸೂಚನೆ ಇರದೆ ಮನೆಮಠ ಬಿಟ್ಟು ಜೈಲುಬಂಧಿಗಳಾದವರು ಇವರು. ಇವರು ಉಸಿರು ಗಟ್ಟಿ ಹೋರಾಟ ಮಾಡಿದ್ದರಿಂದಲೇ ಪ್ರಜಾತಂತ್ರ ಮತ್ತೆ ಸ್ಥಾಪನೆಯಾಗಲು ಸಾಧ್ಯವಾಯಿತು. ಈಗಿನ ಅಧಿಕಾರಸ್ಥರ ಜಬರ್ದಸ್ತ್ಗಿರಿಗೆ ಆಗ ನಡೆಸಿದ ಹೋರಾಟವೇ ಪಂಚಾಂಗ. ಮುಖ್ಯವಾಗಿ ಬಿಜೆಪಿ ಆಡಳಿತಾರೂಢರು ಇಂತಹ ಹೋರಾಟಗಾರರಿಗೆ ಸದಾ ಕಾಲ ಕೃತಜ್ಞರಾಗಬೇಕಿತ್ತು. 47 ವರ್ಷಗಳ ಬಳಿಕ ಕೆಲವು ರಾಜ್ಯಗಳಲ್ಲಿ ತುರ್ತು ಪರಿಸ್ಥಿತಿ ಹೋರಾಟಗಾರರಿಗೆ ಮಾಸಾಶನ ಕೊಡುವ ವ್ಯವಸ್ಥೆ ಜಾರಿಯಲ್ಲಿದ್ದರೆ ಕರ್ನಾಟಕದಲ್ಲಿ ಮಾತ್ರ ಇನ್ನೂ ಜಾರಿಯಾಗಿಲ್ಲ. ತುರ್ತುಪರಿಸ್ಥಿತಿ ಹೋರಾಟಗಾರರಿಗೆ ಮೊದಲು ಮಾಸಾಶನ ಕೊಡಲು ಆರಂಭಿಸಿದ್ದೇ ಬಿಜೆಪಿಯ ಕಡುವಿರೋಧಿಯಾಗಿದ್ದ ಉತ್ತರ ಪ್ರದೇಶದ ಮುಲಾಯಂ ಸಿಂಗ್‌ ಸರಕಾರ, 2002ರಲ್ಲಿ.

ಪ್ರಣಾಳಿಕೆ ಭರವಸೆ: ಮಾಸಾಶನ ಯೋಜನೆ ಹೋರಾಟಗಾರರು ಮಾಡಿದ ಮನವಿ ಅಲ್ಲ. 2018ರ ಚುನಾವಣೆಯಲ್ಲಿ ಬಿಜೆಪಿಯ ಪ್ರಣಾಳಿಕೆಯೇ ಇದಕ್ಕೆ ಭರವಸೆ ನೀಡಿತ್ತು. ಈ ಬಾರಿಯ ಬಜೆಟ್‌ ಮಂಡನೆಯಲ್ಲಿ ಸೇರ್ಪಡೆಯಾಗುತ್ತದೆಂಬ ಎಲ್ಲ ಭರವಸೆ ಇತ್ತು. ಆದರೆ ಸೇರ್ಪಡೆಯಾಗಿಲ್ಲ.

ಹೋರಾಟದ ಅಧಿಕೃತತೆ: 47 ವರ್ಷಗಳ ಹಿಂದೆ ನಡೆದ ಹೋರಾಟದಲ್ಲಿ ಪಾಲ್ಗೊಂಡವರಲ್ಲಿ ಬದುಕಿ ಉಳಿದವರಿಗೆ ಈಗ 70-80 ವರ್ಷ ದಾಟಿದೆ. ಬಹುತೇಕರು ಇಹಲೋಕ ತ್ಯಜಿಸಿ ದ್ದಾರೆ. ಬದುಕುಳಿದ ಸುಮಾರು 2,200 ಜನರ ಹೆಸರುಗಳನ್ನು ಲೋಕತಂತ್ರ ಸೇನಾನಿ ಸಂಘ ಟನೆಯು ಕರ್ನಾಟಕ ಘಟಕವು ಸರಕಾರಕೆೆR ಕೊಟ್ಟಿತ್ತು. ಸರಕಾರದಿಂದ ಜಿಲ್ಲಾಧಿಕಾರಿಯವರಿಗೆ ಹೋದ ಸುತ್ತೋಲೆ ಪ್ರಕಾರವೇ ಈ ಪ್ರಕ್ರಿಯೆಗೆ ಚಾಲನೆ ದೊರಕಿತ್ತು. ಗ್ರಾಮಕರಣಿಕರಿಂದ ಹಿಡಿದು ಜಿಲ್ಲಾಧಿಕಾರಿಯವರೆಗೆ ವಿವಿಧ ಸ್ತರಗಳಲ್ಲಿ ಕಂದಾಯ ಇಲಾಖೆ ಪರಿಶೀಲನೆ ನಡೆಸಿದ ಒಂದು ಮಾರ್ಗವಾದರೆ, ಸಂಘಟನೆಯು ಜೈಲಿನಿಂದ ಸಂಗ್ರಹಿಸಿದ ಮಾಹಿತಿ ಇನ್ನೊಂದು ವಿಧವಾದದ್ದು. ಮೊದಲ ಮಾರ್ಗವು ದ.ಕ., ಉಡುಪಿ ಮೊದಲಾದ ಜಿಲ್ಲೆಗಳಲ್ಲಿ ನಡೆದಿದ್ದರೆ, ಮೈಸೂರು, ಕೊಡಗು, ಮಂಡ್ಯ, ಹಾಸನ, ವಿಜಯಪುರ, ಬಾಗಲಕೋಟೆ ಮೊದಲಾದ ಜಿಲ್ಲೆ ಯಲ್ಲಿ ಜೈಲು ದಾಖಲೆಗಳಿಂದ ಮಾಹಿತಿಗಳನ್ನು ಸಂಗ್ರಹಿಸಲಾಗಿತ್ತು.

ಸ್ವಾಭಿಮಾನಿಗಳಿವರು: ಆಗ ಹೋರಾಟ ಮಾಡಿ ದವರಲ್ಲಿ ಬಹುತೇಕರು ಇಂದು ಆರ್ಥಿಕವಾಗಿ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಕೆಲವರಿಗೆ ಮಾಸಾಶನದ ಅಗತ್ಯವಿಲ್ಲ. ಆದರೆ ಕೆಲವು ಹಿರಿಯ ಜೀವಗಳಂತೂ ಒಂದು ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿಯಲ್ಲಿ ಇದ್ದಾರೆ. ಈ ನಡುವೆ “ನಾವು ಹೇಗೋ ಬದುಕುತ್ತೇವೆ. ನಮಗೇನಾದರೂ ಮಾಸಾಶನ ಬಂದರೆ ಅಗತ್ಯವಿದ್ದವರಿಗೆ ಕೊಟ್ಟು ಧನ್ಯತೆ ಕಾಣುತ್ತೇವೆ’ ಎಂದು ಹೇಳುವ ವಿಟ್ಲದ ಸೈಕಲ್‌ ರಿಪೇರಿ ಮಾಡುವ ವಿ.ಕರಿಯಪ್ಪನವರಂತಹ ಅನೇಕ ಸ್ವಾಭಿಮಾನಿಗಳು ಇದ್ದಾರೆ.

ಕೇರಳದ ಮಾದರಿ: ಕೇರಳದಲ್ಲಿ ಎಲ್‌ಡಿಎಫ್- ಯುಡಿಎಫ್ ಭರಾಟೆಯಲ್ಲಿ ತುರ್ತು ಪರಿಸ್ಥಿತಿ ಹೋರಾಟಗಾರರನ್ನು ಕೇಳುವವರಿಲ್ಲ. ಅಲ್ಲಿನ ಆರೆಸ್ಸೆಸ್‌ ಪರಿವಾರ ಸಂಘಟನೆಯವರು ತಮ್ಮದೇ ಜಾಲದಿಂದ ಸಂಗ್ರಹಿಸಿ ತಿಂಗಳಿಗೆ ನಿರ್ದಿಷ್ಟ ಮೊತ್ತವನ್ನು ಕೊಡುತ್ತಿರುವುದು ಸರಕಾರ ಮತ್ತು ಸಮಾಜಸೇವಕರಿಗೆ ಒಂದು ಮಾದರಿ.

ನಿನ್ನೆ ಮಾಡಿದುಪಕಾರ?: ಸಮಾಜದ ಒಂದು ಲಕ್ಷಣವೆಂದರೆ ವರ್ತಮಾನ ಕಾಲದಲ್ಲಿ ಪ್ರಯೋಜನವಿಲ್ಲ ಎಂದು ಕಂಡುಬಂದರೆ ಹಿಂದೆ ಆ ವ್ಯಕ್ತಿ ಮಾಡಿದ ಯಾವ ಉಪಕಾರವೂ ಸ್ಮರಣೆಗೆ ಬರುವುದಿಲ್ಲ. ಈ ಹೋರಾಟಗಾರರ ಕಥೆಯೂ ಹೀಗೆಯೇ ಆಗಿದೆ. ಇವರಿಗೆ ಲಾಬಿ ಮಾಡುವ ತಾಕತ್ತು ಇಲ್ಲದಿರಬಹುದು ಅಥವಾ ದೈಹಿಕ ಕಸುವು ಈಗ ಇಲ್ಲದಿರಬಹುದು. ಇಂತಹ ಹೋರಾಟಗಾರ ರಿಂದಲೇ ತಮಗೆ ಅಧಿಕಾರ ಸಿಕ್ಕಿದೆ ಎಂಬ ಎಚ್ಚರ ಮಾತ್ರ ಅಧಿಕಾರಾರೂಢರಿಗೆ ಇರಲೇಬೇಕಾದದ್ದು.

ಕುಂತಿ ನೀತಿ: ಕುಂತಿ ಶ್ರೀಕೃಷ್ಣನಲ್ಲಿ ಪ್ರಾರ್ಥನೆ ಸಲ್ಲಿಸುವಾಗ “ನನಗೆ ಸದಾ ಕಾಲ ಕಷ್ಟವನ್ನೇ ಕೊಡು’ ಎನ್ನುವ ಒಂದು ಸನ್ನಿವೇಶ ಮಹಾಭಾರತದಲ್ಲಿ ಬರುತ್ತದೆ. ಇದೇಕೆಂದರೆ “ಕಷ್ಟದಲ್ಲಿದ್ದರೆ ಮಾತ್ರ ನಿನ್ನ ನೆನಪು ಬರುತ್ತದೆ. ನಿನ್ನ ವಿಸ್ಮರಣೆ ಸರ್ವಥಾ ಸಲ್ಲ. ನಿನ್ನ ಸ್ಮರಣೆಗಾಗಿ ಕಷ್ಟವೇ ಬೇಕು’. ಇನ್ನೂ ಒಂದು ಅಪಾಯವಿದೆ. ಕಷ್ಟದಲ್ಲಿದ್ದಾಗ ಇರುವ ಜಿದ್ದು, ಶಪಥ, ಬೆಳೆಯುವ ಧೈರ್ಯ, ಸ್ಥೈರ್ಯ ಸುಖದಲ್ಲಿರುವಾಗ ಇರುವುದಿಲ್ಲ. ಸುಖದಲ್ಲಿರುವಾಗ ಮೈಮರೆಯುವಿಕೆ ಒಳಗೆ ನುಸುಳಿಕೊಳ್ಳುತ್ತದೆ. ಪ್ರಪಂಚ ಕಂಡ ಎಲ್ಲ ಯುದ್ಧಗಳಲ್ಲಿ ಸೋಲು, ಗೆಲುವು ಕಾಣುವುದು ಇದೇ ನೀತಿಯಂತೆ. ಯಾವುದೇ ಪಕ್ಷಗಳು ಈಗಿನ ಪ್ರಜಾಪ್ರಭುತ್ವ ಎಂಬ ಯುದ್ಧದಲ್ಲಿ ಗೆಲ್ಲುವುದು, ಸೋಲುವುದು ಇದೇ ಕಾರಣಕ್ಕಾಗಿಯಲ್ಲವೆ?

ಪ್ರಕೃತಿಯ ಗುಟ್ಟು: ಹಲವು ಸ್ಥಾನಪಲ್ಲಟಗಳನ್ನು ಕಂಡ ಮೇಲೂ ಜನರು ಮತೆೆ¤ ಮತೆೆ¤ ಮೈಮರೆ ಯುವುದು ಮಾತ್ರ ಪ್ರಕೃತಿ ತನ್ನೊಳಗಿರಿಸಿಕೊಂಡ “ಗುಟ್ಟು’, ಇದನ್ನೇ ಪ್ರಾಚೀನರು “ಮಾಯೆ’ ಎಂದು ಕರೆದಿರಬಹುದೆ ಎಂದು ಜಿಜ್ಞಾಸೆ ಮೂಡುತ್ತದೆ.

ಋಣಸಂದಾಯ ಅಗತ್ಯ: ಭಾರತದ ಧರ್ಮಶಾಸ್ತ್ರಕಾರರು ದೇವ-ಋಷಿ-ಪಿತೃ ಎಂದು ಋಣತ್ರಯ ವಿಭಾಗವನ್ನು ಮಾಡಿದ್ದಾರೆ. ಋಣಗಳನ್ನು ತೀರಿಸಬೇಕೆಂಬ ನೀತಿಯೂ ಭಾರತೀಯ ಧರ್ಮದಲ್ಲಿ ಹಾಸುಹೊಕ್ಕಾಗಿದೆ. ಪಿತೃ ಋಣ ವಿಭಾಗದಲ್ಲಿ ತಂದೆ, ತಾಯಿ, ಪೂರ್ವಜರೆಲ್ಲ ಸೇರುತ್ತಾರೆ. ಜೀವ ಉದ್ಧಾರಕ ಶಕ್ತಿಗಳು ಋಷಿಗಳು. ದೇವರು ಅಂದರೆ ಈಗಿನ ಸಮಾಜವೇ ಎಂದೂ ಅರ್ಥ ಮಾಡಬಹುದು. ಏಕೆಂದರೆ ನಾವೇ ದೇವರೆನ್ನುವವರೂ ದೇವರ ಸೇವಕರೆನ್ನುವವರೂ ಇರುವುದರಿಂದ ದೇವರಿಗೆ ನಾವು (ಸಮಾಜ) ಬಹಳ ಹತ್ತಿರ. ತುರ್ತು ಪರಿಸ್ಥಿತಿ ಹೋರಾಟಗಾರರ ಋಣ ಅಧಿಕಾರಾರೂಢರ ಮೇಲೆ ಬಹಳಷ್ಟಿದೆ. ಇರುವ ಅವಕಾಶದಲ್ಲಿ ಋಣಸಂದಾಯ ಮಾಡುವುದು ಅಧಿಕಾರಸ್ಥರ ಪ್ರಥಮ ಕರ್ತವ್ಯ. “ಕೃತಜ್ಞತೆ ಮನುಷ್ಯನಿಗೆ ಇರಬೇಕಾದ ಮುಖ್ಯ ಗುಣ’ ಎನ್ನುವುದನ್ನು ಹೆಸರಾಂತ ವೈದ್ಯ ಡಾ| ಬಿ.ಎಂ.ಹೆಗ್ಡೆ ಬೆಟ್ಟು ಮಾಡುತ್ತಾರೆ. ಇದು ಸರಕಾರಕ್ಕೆ ಮಾತ್ರವಲ್ಲ, ಎಲ್ಲರ ಒಳಿತಿಗೂ ಮುಖ್ಯ.

-ಮಟಪಾಡಿ ಕುಮಾರಸ್ವಾಮಿ

ಟಾಪ್ ನ್ಯೂಸ್

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Ram Ayodhya

Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

19-sagara

LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

18-uv-fusion

Clay Pot: ಬಡವರ ಫ್ರಿಡ್ಜ್ ಮಣ್ಣಿನ ಮಡಕೆ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

17-uv-fusion

UV Fusion: ನಿನ್ನೊಳಗೆ ನೀ ಇರುವಾಗ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.