ಸರ್ವಧರ್ಮೀಯರ ಗುರು ಪೇಜಾವರ


Team Udayavani, Dec 30, 2019, 4:02 AM IST

sarvadharmi

ಪೇಜಾವರ ಮಠದ ಪೂಜ್ಯ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ ಪರಂಧಾಮ ಸಂದರ್ಭದಲ್ಲಿ ನಾವು ಅವರನ್ನು ಕಳೆದುಕೊಂಡು ಬಡವಾಗಿದ್ದೇವೆ. ಸರ್ವಧರ್ಮೀಯರಿಗೂ ಗುರುಗಳಾಗಿ, ಆಚಾರ್ಯರಾಗಿ, ಮಾರ್ಗದರ್ಶಕರಾಗಿ, ಪ್ರೇರಕರಾಗಿ, ಆತ್ಮೀಯರಾಗಿ ಅವರು ಸತತ ಮಾರ್ಗದರ್ಶನ ನೀಡಿದ್ದಾರೆ.

ಪೂಜ್ಯರು ಭಾರತದಾದ್ಯಂತ ವಿಶ್ವಸಂಚಾರಿಯಾಗಿ ತಮ್ಮ ದೇಹವನ್ನು ಶ್ರೇಷ್ಠ ರೀತಿಯಲ್ಲಿ ಬಳಸಿಕೊಂಡಿದ್ದಾರೆ. ಅಂದರೆ, ಅವರ ಬದುಕಿನ ಸಂದೇಶವೇ ಮಾನವದೇಹ ಅನ್ನುವುದು ಒಂದು ಯಂತ್ರ, ಉಪಕರಣ ಮತ್ತು ಇಹ-ಪರಗಳ ಸಾಧನೆಗೆ ಒಂದು ಮಾಧ್ಯಮ. ಈ ದೇಹದ ಪೋಷಣೆಗಾಗಿ, ಸುಖಕ್ಕಾಗಿ, ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಎಲ್ಲಾ ಸಮಯವನ್ನು, ಸಂಪತ್ತನ್ನು ಮತ್ತು ಸಹವಾಸವನ್ನು ಉಪಯೋಗಿಸುತ್ತಾನೆ. ಅದಕ್ಕಾಗಿ ದೇಹಕ್ಕೆ ಸಾಕಷ್ಟು ವಿಶ್ರಾಂತಿ ಕೊಟ್ಟು, ದೀರ್ಘಾಯುಷಿಯಾಗುವ ಬಯಕೆ ವ್ಯಕ್ತಪಡಿಸುತ್ತಾನೆ.

ಆದರೆ, ಪೂಜ್ಯ ಪೇಜಾವರ ಶ್ರೀಗಳ ಸಂದೇಶವೆಂದರೆ, ಬದುಕು ಅಮೂಲ್ಯವಾದದ್ದು, ಅದನ್ನು ಹಾಳು ಮಾಡಬೇಡಿರೊ ಹುಚ್ಚಪ್ಪಗಳಿರಾ ಎನ್ನುತ್ತಾ ಆಯುಷ್ಯದ ಪ್ರತಿಯೊಂದು ಕ್ಷಣವನ್ನೂ ಸದುಪಯೋಗಪಡಿಸಿಕೊಂಡು ತಮ್ಮ ದೇಹವನ್ನು ಬಳಸಿದರು. ಅವರು ವಿಷ್ಣುವಿನಂತೆ ದಶಾವತಾರ ತಳೆದರು. ಮಠಾಧಿಪತಿಗಳಾಗಿ ಮಠದ ಕೈಂಕರ್ಯಗಳು, ಶ್ರೀಕೃಷ್ಣ ದೇವರ ಮತ್ತು ಮಠದ ಆರಾಧ್ಯ ದೇವರ ಪೂಜೆ-ಪುನಸ್ಕಾರಗಳು, ಶಿಕ್ಷಣ ಕ್ಷೇತ್ರ, ವೈದ್ಯಕೀಯ ಹಾಗೂ ಸಾಮಾಜಿಕ ರಂಗಗಳಲ್ಲಿ ತಮ್ಮ ಸಮಯವನ್ನು ವಿನಿಯೋಗಿಸಿದರು.

ಶಿಷ್ಯರಿಗೆ ಧಾರ್ಮಿಕ ಪಾಠ-ಪ್ರವಚನಗಳನ್ನು ನೀಡುವುದರಲ್ಲಿ ಪೂಜ್ಯರಂತೆ ಯಾರೂ ಉದಾರಿಗಳಿಲ್ಲ. ನಿಷ್ಕಲ್ಮಶ ಹೃದಯದಿಂದ ಪೂರ್ತಿ ವಿದ್ಯಾದಾನ ಮಾಡಿದವರು ಇನ್ನೊಬ್ಬರಿಲ್ಲ. ಮಠದಲ್ಲಿ ಮಾತ್ರವಲ್ಲದೆ, ಬೆಂಗಳೂರಿನ ವಿದ್ಯಾಪೀಠದಲ್ಲಿಯೂ ಶಿಷ್ಯರಿಗೆ ಪಾಠ ಬೋಧಿಸುವುದರ ಜತೆಗೆ ವಾಹನದಲ್ಲಿ ಸಂಚಾರ ಸಮಯದಲ್ಲಿಯೂ ಅವರು ನಿರಂತರ ಪಾಠ-ಪ್ರವಚನ ನಡೆಸುತ್ತಿದ್ದರು.

ಅವರ ಆಪ್ತರು ಹೇಳುವಂತೆ ದೀರ್ಘ‌ ವಾಹನ ಸಂಚಾರ ಸಮಯದಲ್ಲಿ ಅಥವಾ ಅಲ್ಪ ವಾಹನ ಸಂಚಾರ ಸಮಯದಲ್ಲಿ ಕೇವಲ ಕೆಲವು ನಿಮಿಷಗಳಷ್ಟು ನಿಮ್ಮೊಂದಿಗೆ ಮಾತನಾಡುತ್ತೇನೆ, ಉಳಿದ ಸಮಯ ಶಿಷ್ಯರಿಗೆ ಪಾಠ ಹೇಳಿ ಕೊಡುತ್ತೇನೆ. ಮಧ್ಯೆ ಯಾರೂ ನನ್ನ ಗಮನ ಸೆಳೆಯ ಬೇಡಿ ಎನ್ನುತ್ತಿದ್ದರಂತೆ.ಸಮಾಜದ ಕಟ್ಟಕಡೆಯ ವ್ಯಕ್ತಿಯ ಪತಿತೋದ್ಧಾರದ ಬಗೆಗಿನ ಅವರ ಕಾಳಜಿ ವಿಶ್ವಕ್ಕೆ ಮಾದರಿಯಾಗಿದೆ. ರಾಮಜನ್ಮಭೂಮಿ ಬಗ್ಗೆ ಸುಪ್ರೀಂ ಕೋರ್ಟುತೀರ್ಪು ಪ್ರಕಟವಾದಾಗ ಅವರ ಅನೇಕ ವರ್ಷಗಳ ಪ್ರಾರ್ಥನೆ ಮತ್ತು ಆ ವಿಷಯದಲ್ಲಿ ಅವರು ನೀಡಿದ ಸಲಹೆ-ಸೂಚನೆಗಳು ಕಾರ್ಯಗತವಾದ ವಿಚಾರದಲ್ಲಿ ಪೂಜ್ಯರು ಸಂತೋಷಪಟ್ಟರು.

ನಮ್ಮ ಧರ್ಮಸ್ಥಳ ಕ್ಷೇತ್ರದ ಚಟುವಟಿಕೆಗಳಲ್ಲಿ, ವಿಶೇಷವಾಗಿ ಶಿಕ್ಷಣ ಕ್ಷೇತ್ರದ ಬೆಳವಣಿಗೆಯಲ್ಲಿ ನಾವು ಅವರಿಂದ ಪ್ರೇರಣೆ ಪಡೆದಿದ್ದೇವೆ. ಧಾರವಾಡದ ಜನತಾ ಶಿಕ್ಷಣ ಸಮಿತಿಯಂತೆ ನಮ್ಮ ರಾಜ್ಯದ ಮತ್ತು ರಾಷ್ಟ್ರದ ಅನೇಕ ಸಮಸ್ಯಾತ್ಮಕ, ಸಂಘಟನಾತ್ಮಕ ಮತ್ತು ಆರ್ಥಿಕ ಸಂಕಷ್ಟಕ್ಕೊಳಗಾದ ಸಂಸ್ಥೆಗಳಿಗೆ ಪೂಜ್ಯರು ಮಾರ್ಗದರ್ಶನ ನೀಡಿ ಕಾಯಕಲ್ಪಕೊಟ್ಟು ಪುನರುಜ್ಜೀವನಗೊಳಿಸಿದ್ದಾರೆ. ನನ್ನ ವೈಯಕ್ತಿಕ ಅಭಿಪ್ರಾಯದಂತೆ ಪೂಜ್ಯ ಶ್ರೀಗಳು ನನ್ನ ಜೊತೆ ಮತ್ತು ನಮ್ಮ ಜೊತೆ ಎಂದೂ ಇರುತ್ತಾರೆ. ಅವರ ಭೌತಿಕ ದೇಹ ನಮ್ಮ ಮುಂದೆ ಇರದಿದ್ದರೂ, ಅವರೊಂದಿಗೆ ಕಳೆದ ಪ್ರತಿ ಒಂದು ಕ್ಷಣವೂ ಅಮೂಲ್ಯವಾದದ್ದು ಮತ್ತು ಸ್ಮರಣೀಯವಾದದ್ದು ಎಂದು ಪೂಜ್ಯರಿಗೆ ನನ್ನ ನುಡಿನಮನಗಳನ್ನು ಹಾಗೂ ನಮ್ಮ ಕುಟುಂಬದ ಪರವಾಗಿ ಭಕ್ತಿಪೂರ್ವಕ ಪ್ರಣಾಮಗಳೊಂದಿಗೆ ಗೌರವವನ್ನು ಅರ್ಪಿಸುತ್ತೇನೆ.
-ಡಾ| ಡಿ. ವೀರೇಂದ್ರ ಹೆಗ್ಗಡೆ, ಧರ್ಮಸ್ಥಳದ ಧರ್ಮಾಧಿಕಾರಿ

ಸಂಕಷ್ಟಗಳಿಗೆ ಎದೆಕೊಡುವ ವೀರಸೈನಿಕ ಇನ್ನೆಲ್ಲಿ?
ಉಡುಪಿ ಶ್ರೀಕೃಷ್ಣಮಠ, ಅಯೋಧ್ಯೆ ರಾಮಮಂದಿರ, ಹಿಂದೂ ಧರ್ಮ, ದೇಶವಿರೋಧಿ ಕೃತ್ಯಕ್ಕೆ ಸಂಬಂಧಿಸಿ ಏನೇ ವಿವಾದಗಳು ಬಂದರೂ ಅದನ್ನು ಎದುರಿಸುವ ಎಂಟೆದೆಯ ವೀರಸೈನಿಕನನ್ನು ಇನ್ನು ಹುಡುಕಬೇಕಾಗಿದೆ. ಇದು ಅಷ್ಟಮಠಗಳಿಗೂ ಅನ್ವಯ. ಶ್ರೀಕೃಷ್ಣ ಮಠವೆಂದರೆ ಅಷ್ಟಮಠಗಳ ಒಕ್ಕೂಟದ ವ್ಯವಸ್ಥೆ ಇದ್ದಂತೆ. ಒಬ್ಬೊಬ್ಬರದು ಒಂದು ರೀತಿಯ ಮನೋಭಾವ ಸಹಜ ವಾಗಿರುತ್ತದೆ. ಒಂದು ಒಮ್ಮತದ ತೀರ್ಮಾನ ತೆಗೆದುಕೊಳ್ಳುವಾಗ ಭೀಷ್ಮನಂತಿದ್ದ ಪೇಜಾವರ ಶ್ರೀಗಳು ಎಲ್ಲರನ್ನೂ ಕುಳ್ಳಿರಿಸಿ ಮಾತನಾಡಿಸಿ ಎಲ್ಲರ ನಿಲುವನ್ನು ತಾಳ್ಮೆಯಿಂದ ಕೇಳಿ ತಮ್ಮ ನಿಲುವನ್ನು ಹೇಳುತ್ತಿದ್ದರು. ಪೇಜಾವರ ಶ್ರೀಗಳು ಇತರರ ಮೇಲೆ ಒತ್ತಡ ತರುತ್ತಿರಲಿಲ್ಲ. ಕೊನೆಗೆ ತಮ್ಮ ನಿಲುವು ಹೀಗೆ ಎಂದು ಹೇಳುತ್ತಿದ್ದರು. ಅವರ ನಿಲುವಿಗೆ ಬದ್ಧರಾಗುತ್ತಿದ್ದರು.
“ಸಾಮಾನ್ಯವಾಗಿ ಪರ್ಯಾಯದ ಅವಧಿಯಲ್ಲಿ ಕೆಲವು ಸಮಸ್ಯೆಗಳು ಏಳುತ್ತಿದ್ದವು. ಉದಾಹರಣೆಗೆ ಪರ್ಯಾಯ ಮೆರವಣಿಗೆಯಲ್ಲಿ ಹಿಂದೆ ಮೇನೆ ಮೇಲೆ ಬರುವ ಕ್ರಮವಿತ್ತು. ಪೇಜಾವರ ಶ್ರೀಗಳು ಮೇನೆಯಲ್ಲಿ ಮಾನವರು ಹೊತ್ತುಕೊಂಡು ಬರುವುದು ಬೇಡ. ಅಲಂಕೃತ ವಾಹನದಲ್ಲಿ ಹೋಗಬಹುದು ಎಂದರು. ತಮ್ಮ ನಿರ್ಣಯವನ್ನು ತಿಳಿಸಿ ಅಂತಿಮ ನಿರ್ಣಯ ಅವರವರಿಗೆ ಬಿಡುತ್ತಿದ್ದರು
-ಪರ್ಯಾಯ ಪೀಠಸ್ಥರಾದ ಶ್ರೀಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು

ದೃಢ ಸಂಕಲ್ಪದ ಗುರುವರ್ಯ
1986ರಲ್ಲಿ ಬೆಂಗಳೂರು ಕಾಚರಕನಹಳ್ಳಿ ಕಸಾಯಿಖಾನೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಲು ನಾವೂ ಹೋಗಿದ್ದೆವು. ನಾನು ಆತ್ಮಾಹುತಿ ಘೋಷಣೆ ಮಾಡಿದ್ದೆ. 50,000 ಜನರು ಧರಣಿ ನಡೆಸುತ್ತಿದ್ದೆವು. ಬೇಡಿಕೆ ಈಡೇರುವವರೆಗೆ ಕದಲಬಾರದು ಎಂದು ಪೇಜಾವರ ಶ್ರೀಗಳು ಸೂಚನೆ ನೀಡಿದರು. ಅನಂತರ ಸಮಸ್ಯೆ ಬಗೆಹರಿಯಿತು. ಹೀಗೆ ಸಮಸ್ಯೆಗಳನ್ನು ಪರಿಹರಿಸಲು ಸಲಹೆಗಳನ್ನು ನೀಡುತ್ತಿದ್ದರು. ಆಯಾಸವಿಲ್ಲದೆ ಕೆಲಸ ಹೇಗೆ ಮಾಡಬೇಕು? ಮಾನಸಿಕ ಆಯಾಸವೇ ದೊಡ್ಡ ಆಯಾಸ. ಉಳಿದೆಲ್ಲ ಆಯಾಸಗಳು ಪರಿಗಣನೆಗೆ ಬರುವುದಿಲ್ಲ ಎಂದು ಸಲಹೆ ನೀಡಿ ಕೆಲಸ ಮಾಡಲು ಉತ್ತೇಜನ ನೀಡುತ್ತಿದ್ದರು. ಎರಡು ವೈಚಾರಿಕತೆಗಳು ಬಂದಾಗ ಒಂದು ಕಡೆ ವಾಲದೆ ಮಧ್ಯಮ ಮಾರ್ಗದಲ್ಲಿ ತೆರಳುತ್ತಿದ್ದರು. ಅವರ ಐದನೆಯ ಪರ್ಯಾಯದಲ್ಲಿ ನಮಗೆ “ವಿಶ್ವಮಾನ್ಯ’ ಪ್ರಶಸ್ತಿ ನೀಡಿ ನಮಗೆ ಪ್ರೇರಣೆ ನೀಡಿದ್ದರು.
-ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು

ಅಭಿವೃದ್ಧಿಯ ಹರಿಕಾರ
ಅಷ್ಟಮಠಗಳಿಗೆ ಸಂಬಂಧಿಸಿದ ಯಾವುದೇ ಕೆಲಸ ಕಾರ್ಯವಿದ್ದರೂ ಪೇಜಾವರ ಶ್ರೀಗಳ ದೊಡ್ಡ ಪಾಲು ಮೊದಲಾಗಿ ಬರುತ್ತಿತ್ತು. ಉದಾಹರಣೆಗೆ ರಾಜಾಂಗಣ ಪಾರ್ಕಿಂಗ್‌ ಪ್ರದೇಶದ ಅಭಿವೃದ್ಧಿಯಲ್ಲಿ ಅವರ ಕೊಡುಗೆ ದೊಡ್ಡದು. ಇತ್ತೀಚೆಗೆ ಸಂಸ್ಕೃತ ಕಾಲೇಜಿನ ಕಟ್ಟಡ ನಿರ್ಮಾಣವಾಗುವಾಗ ತಮ್ಮ ಕೊಡುಗೆ 50 ಲ.ರೂ. ಮೊತ್ತವನ್ನು ನೀಡಿದ್ದರು. ತಮ್ಮ ದೊಡ್ಡ ಪಾಲು ಕೊಟ್ಟು ಅವರು ಮಾದರಿಯಾಗುತ್ತಿದ್ದರು. ಅವರು ಬೇರೆ ಬೇರೆ ಸಂಸ್ಥೆಗಳಿಂದ ಸಂಗ್ರಹಿಸಿ ಇಂಥ ಮಹತ್ಕಾರ್ಯಗಳಿಗೆ ನೀಡುತ್ತಿದ್ದರು.
-ರತ್ನಕುಮಾರ್‌, ಶ್ರೀಕೃಷ್ಣ ಮಠದ ಪರಿಸರ ಪ್ರತಿಷ್ಠಾನ ಮತ್ತು ಸಂಸ್ಕೃತ ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿಗಳು

ಟಾಪ್ ನ್ಯೂಸ್

AIMIM leader arrested for derogatory comment on Shivling

ಶಿವಲಿಂಗದ ಕುರಿತು ಅವಹೇಳನಕಾರಿ ಹೇಳಿಕೆ: ಎಐಎಂಐಎಂ ನಾಯಕನ ಬಂಧನ

ಎಸೆಸೆಲ್ಸಿ ಪರೀಕ್ಷಾ ಫ‌ಲಿತಾಂಶ ಇಂದು ಪ್ರಕಟ

ಎಸೆಸೆಲ್ಸಿ ಪರೀಕ್ಷಾ ಫ‌ಲಿತಾಂಶ ಇಂದು ಪ್ರಕಟ

ಪ್ರತಿಷ್ಠೆಗೆ ರಚನೆಯಾದ ತಾಲೂಕುಗಳು ಅನಾಥ; ತಹಶೀಲ್ದಾರ್‌ ನೇಮಕವಾಗಿಲ್ಲ ,ಆಡಳಿತ ಸೌಧವಿಲ್ಲ

ಪ್ರತಿಷ್ಠೆಗೆ ರಚನೆಯಾದ ತಾಲೂಕುಗಳು ಅನಾಥ; ತಹಶೀಲ್ದಾರ್‌ ನೇಮಕವಾಗಿಲ್ಲ ,ಆಡಳಿತ ಸೌಧವಿಲ್ಲ

ಚಳ್ಳಕೆರೆಯಲ್ಲಿ ಹನ್ಸ-ಎನ್‌ಜಿ ಯಶಸ್ವಿ ಪ್ರಯೋಗ; ಸಿಎಸ್‌ಐಆರ್‌, ಎನ್‌ಎಎಲ್‌ನಿಂದ ವಿಮಾನ ಸಿದ್ಧ

ಚಳ್ಳಕೆರೆಯಲ್ಲಿ ಹನ್ಸ-ಎನ್‌ಜಿ ಯಶಸ್ವಿ ಪ್ರಯೋಗ; ಸಿಎಸ್‌ಐಆರ್‌, ಎನ್‌ಎಎಲ್‌ನಿಂದ ವಿಮಾನ ಸಿದ್ಧ

ಸ್ಥ.ಸಂಸ್ಥೆ ಚುನಾವಣೆ: ಒಬಿಸಿ ಮೀಸಲಾತಿಗೆ ಅಸ್ತು; ಮಧ್ಯಪ್ರದೇಶದ ಅರ್ಜಿಗೆ ಸು.ಕೋ.ಒಪ್ಪಿಗೆ

ಸ್ಥ.ಸಂಸ್ಥೆ ಚುನಾವಣೆ: ಒಬಿಸಿ ಮೀಸಲಾತಿಗೆ ಅಸ್ತು; ಮಧ್ಯಪ್ರದೇಶದ ಅರ್ಜಿಗೆ ಸು.ಕೋ.ಒಪ್ಪಿಗೆ

astro

ಗುರುವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ

ಮುಚ್ಚಿದ ಬಾಗಿಲಿನ ಹಿಂದೆ ಆರ್‌ಸಿಬಿ: ಗುಜರಾತ್‌ ಟೈಟಾನ್ಸ್‌ ವಿರುದ್ಧ ಇಂದು ಅಂತಿಮ ಪಂದ್ಯ

ಮುಚ್ಚಿದ ಬಾಗಿಲಿನ ಹಿಂದೆ ಆರ್‌ಸಿಬಿ: ಗುಜರಾತ್‌ ಟೈಟಾನ್ಸ್‌ ವಿರುದ್ಧ ಇಂದು ಅಂತಿಮ ಪಂದ್ಯಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸ ತಾಲೂಕುಗಳಲ್ಲಿ ಸೌಲಭ್ಯಗಳೇ ಮರೀಚಿಕೆ

ಹೊಸ ತಾಲೂಕುಗಳಲ್ಲಿ ಸೌಲಭ್ಯಗಳೇ ಮರೀಚಿಕೆ

ಗ್ರಾಹಕನಲ್ಲ, ಉದ್ಯಮಿಯೇ ರಾಜ!

ಗ್ರಾಹಕನಲ್ಲ, ಉದ್ಯಮಿಯೇ ರಾಜ!

ಕಲಿಕಾ ಚೇತರಿಕೆ ವರ್ಷ-ಕಲಿಕೆಗೆ ಹೊಸ ಸ್ಪರ್ಶ

ಕಲಿಕಾ ಚೇತರಿಕೆ ವರ್ಷ-ಕಲಿಕೆಗೆ ಹೊಸ ಸ್ಪರ್ಶ

ಇಂದು ಮೇ 16 ಬುದ್ಧ ಜಯಂತಿ: ಬುದ್ಧನು ಅರುಹಿದ ಚತುರಾರ್ಯ ಸತ್ಯ

ಇಂದು ಮೇ 16 ಬುದ್ಧ ಜಯಂತಿ: ಬುದ್ಧನು ಅರುಹಿದ ಚತುರಾರ್ಯ ಸತ್ಯ

ವಿಶ್ವಪ್ರಜ್ವಲನೆಯ ತಾಣ ನಮ್ಮ ಮನೆ

ವಿಶ್ವಪ್ರಜ್ವಲನೆಯ ತಾಣ ನಮ್ಮ ಮನೆ

MUST WATCH

udayavani youtube

ಕಾರ್ಖಾನೆಯ ಗೋಡೆ ಕುಸಿದು 12 ಮಂದಿ ಕಾರ್ಮಿಕರ ಸಾವು

udayavani youtube

ಬೆಂಗಳೂರಿನಲ್ಲಿ ಹೈಸ್ಕೂಲ್ ವಿದ್ಯಾರ್ಥಿನಿಯರ ಮಾರಾಮಾರಿ ! ವಿಡಿಯೋ ವೈರಲ್ ..

udayavani youtube

ಕೊಪ್ಪಲಂಗಡಿ : ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಪಿಕಪ್

udayavani youtube

ಹೊರಟ್ಟಿ ಸೇರ್ಪಡೆಯಿಂದ ಪಕ್ಷಕ್ಕೆ ಬಲ : ಸಿಎಂ

udayavani youtube

ಹುಣಸೂರಿನಲ್ಲಿ ಭಾರೀ ಮಳೆಗೆ ಮನೆಗಳು ಜಲಾವೃತ

ಹೊಸ ಸೇರ್ಪಡೆ

AIMIM leader arrested for derogatory comment on Shivling

ಶಿವಲಿಂಗದ ಕುರಿತು ಅವಹೇಳನಕಾರಿ ಹೇಳಿಕೆ: ಎಐಎಂಐಎಂ ನಾಯಕನ ಬಂಧನ

ಎಸೆಸೆಲ್ಸಿ ಪರೀಕ್ಷಾ ಫ‌ಲಿತಾಂಶ ಇಂದು ಪ್ರಕಟ

ಎಸೆಸೆಲ್ಸಿ ಪರೀಕ್ಷಾ ಫ‌ಲಿತಾಂಶ ಇಂದು ಪ್ರಕಟ

ಪ್ರತಿಷ್ಠೆಗೆ ರಚನೆಯಾದ ತಾಲೂಕುಗಳು ಅನಾಥ; ತಹಶೀಲ್ದಾರ್‌ ನೇಮಕವಾಗಿಲ್ಲ ,ಆಡಳಿತ ಸೌಧವಿಲ್ಲ

ಪ್ರತಿಷ್ಠೆಗೆ ರಚನೆಯಾದ ತಾಲೂಕುಗಳು ಅನಾಥ; ತಹಶೀಲ್ದಾರ್‌ ನೇಮಕವಾಗಿಲ್ಲ ,ಆಡಳಿತ ಸೌಧವಿಲ್ಲ

ಚಳ್ಳಕೆರೆಯಲ್ಲಿ ಹನ್ಸ-ಎನ್‌ಜಿ ಯಶಸ್ವಿ ಪ್ರಯೋಗ; ಸಿಎಸ್‌ಐಆರ್‌, ಎನ್‌ಎಎಲ್‌ನಿಂದ ವಿಮಾನ ಸಿದ್ಧ

ಚಳ್ಳಕೆರೆಯಲ್ಲಿ ಹನ್ಸ-ಎನ್‌ಜಿ ಯಶಸ್ವಿ ಪ್ರಯೋಗ; ಸಿಎಸ್‌ಐಆರ್‌, ಎನ್‌ಎಎಲ್‌ನಿಂದ ವಿಮಾನ ಸಿದ್ಧ

ಸ್ಥ.ಸಂಸ್ಥೆ ಚುನಾವಣೆ: ಒಬಿಸಿ ಮೀಸಲಾತಿಗೆ ಅಸ್ತು; ಮಧ್ಯಪ್ರದೇಶದ ಅರ್ಜಿಗೆ ಸು.ಕೋ.ಒಪ್ಪಿಗೆ

ಸ್ಥ.ಸಂಸ್ಥೆ ಚುನಾವಣೆ: ಒಬಿಸಿ ಮೀಸಲಾತಿಗೆ ಅಸ್ತು; ಮಧ್ಯಪ್ರದೇಶದ ಅರ್ಜಿಗೆ ಸು.ಕೋ.ಒಪ್ಪಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.