ದೇಶದ ದಿಕ್ಕನ್ನು ದೀರ್ಘ‌ಕಾಲ ನಿರ್ದೇಶಿಸಲಿದೆ ಲೋಕಸಭಾ ಚುನಾವಣೆ


Team Udayavani, Oct 11, 2018, 12:30 AM IST

q-9.jpg

ಭಾರತೀಯ ಜನತಾ ಪಾರ್ಟಿ ಮುಂದಿನ ಸಲ ಸಂಯುಕ್ತವಾಗಿಯಾದರೂ ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ ಎನ್ನುವುದನ್ನು ಕೆಲ ಸಮೀಕ್ಷೆಗಳು ಹೇಳಿವೆ. ಒಂದು ವೇಳೆ ಹೀಗೆಯೇ ಆದರೆ ಕಾಂಗ್ರೆಸ್‌ಗೆ ಗಂಡಾಂತರ. ಆಗ ಬಿಜೆಪಿಯು ಕಾಂಗ್ರೆಸ್‌ನಂತೆಯೇ ಭಾರತವನ್ನು ದೀರ್ಘ‌ಕಾಲ ಆಳಿಬಿಡಬಹುದು. 

ಲೋಕಸಭಾ ಚುನಾವಣಾ ಫ‌ಲಿತಾಂಶಗಳಿಗೆ ಕೆಲವು ಸ್ಪಷ್ಟ‌ ವಿನ್ಯಾಸಗಳಿವೆ. ಈ ರಾಜಕೀಯ ಆಕೃತಿಗಳನ್ನು ನಿರೂಪಿಸಿದ್ದು ನಮ್ಮ ಸಮಾಜದ ಸ್ವರೂಪ. ಒಂದು ದೇಶದ ಸಾಮಾಜಿಕ ಸ್ಥಿತಿ ಅದರ ರಾಜಕೀಯದ ಗೊತ್ತು ಗುರಿಗಳನ್ನು ನಿರ್ಧರಿಸುತ್ತದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಉದಾಹರಣೆಗೆ, 50ರ ದಶಕದಲ್ಲಿ ನಡೆದ ಪ್ರಥಮ ಮಹಾಚುನಾವಣೆಯಿಂದ ಹಿಡಿದು 1977ರವರೆಗೂ ದೇಶವನ್ನು ಕಾಂಗ್ರೆಸ್‌ ಪಕ್ಷ ಅವಿಚ್ಛಿನ್ನವಾಗಿ ಆಳಿತು. ಅದಕ್ಕೆ ಕಾರಣವಿತ್ತು. ಒಂದನೆಯದು ಕಾಂಗ್ರೆಸ್‌ ಪಕ್ಷ ದೇಶದ ಸ್ವಾತಂತ್ರ್ಯ ಹೋರಾಟದ ಹಾಗೂ ಐಕ್ಯತೆಯ ಪಕ್ಷವಾಗಿದ್ದುದು. ಎರಡನೆಯದು ಅಂತಹ ಐಕ್ಯತೆಯ ಭಾಗವಾಗಿ ಕಾಂಗ್ರೆಸ್‌ ಪಕ್ಷವೇ “ಪ್ರಗತಿಪರ’ ಹಾಗೂ “ಸಂಪ್ರದಾಯವಾದಿ’ ಎರಡೂ ತತ್ವಗಳನ್ನು ಪ್ರತಿನಿಧಿಸುತ್ತಿದ್ದುದು. ಮೂಲತಃ ಸಮಾಜವಾದಿ ತತ್ವಗಳ ತೀವ್ರ ಆಕರ್ಷಣೆಯಲ್ಲಿದ್ದರೂ ನೆಹರೂಗೆ ಪರಂಪರೆೆ   -ಸಂಸ್ಕೃತಿಗೆ ಸಂಬಂಧಿಸಿದ ವಿಷಯಗಳಲ್ಲಿ ಭಾರತೀಯತೆಯನ್ನೇ ಎತ್ತಿ ಹಿಡಿಯಬೇಕಾದ ಗೊಂದಲವಿತ್ತು. 

ದೇಶದ ಸಂಸ್ಕೃತಿ, ಪರಂಪರೆಗಳ ಕುರಿತು ಅವರಿಗೆ ಅಪಾರ ಗೌರವವಿತ್ತು. ಹೀಗಾಗಿ ನೆಹರೂ ಆಧುನಿಕ ಪ್ರಗತಿಪರ ಹಾಗೂ ಸಂಪ್ರದಾಯವಾದಿ ಎರಡೂ ತತ್ವಗಳ ಪ್ರತಿನಿಧಿಯೇ ಆಗಿ ಹೋಗಿದ್ದರು. ಅಂದರೆ ಸಮಾಜವಾದಿ ಕಣ್ಣಿನಿಂದ ದೇಶದ ವಿಮರ್ಶಕ ಮತ್ತು ದೇಸಿ ಕಣ್ಣಿನಿಂದ ನಮ್ಮ ಸಾಂಸ್ಕೃತಿಕ ಪರಂಪರೆಯ ಆರಾಧಕ ಎರಡೂ. ಬಹುಶಃ ನೆಹರೂ ಅವರ ಗೊಂದಲಗಳು ದೇಶದ ಸುಶಿಕ್ಷಿತ, ಸೂಕ್ಷ್ಮ ಮನಸ್ಸಿನ ವ್ಯಕ್ತಿಗಳ ಮನದೊಳಗಿನ ಗೊಂದಲಗಳೇ ಆಗಿದ್ದವು ಎಂದು ಗಾಂಧಿ ಭಾವಿಸಿದ್ದ ಹಾಗೆ ಕಾಣಿಸುತ್ತದೆ. ಬಹುಶಃ ಇಂತಹ ಚೈತನ್ಯಮಯ ಗೊಂದಲವೇ ದೇಶಕ್ಕೆ ಒಳ್ಳೆಯದು ಎಂದು ಗಾಂಧಿ ನೆಹರೂ ಅವರನ್ನು ಪ್ರಧಾನ ಮಂತ್ರಿಯ ಸ್ಥಾನಕ್ಕೆ ಸೂಚಿಸಿರಲೂ ಸಾಕು. ಬಲಪಂಥವನ್ನು ಬಲವಾಗಿ ಎತ್ತಿ ಹಿಡಿಯುತ್ತಿದ್ದ ಪಟೇಲ್‌ ಸಂಪುಟದಲ್ಲಿ ಎರಡನೆಯ ಸ್ಥಾನದಲ್ಲಿದ್ದರೂ ಅಂಬೇಡ್ಕರ್‌ ಅಂತಹ ಮಹಾನ್‌ ಮಾನವತಾವಾದಿ ಮತ್ತು ದೇಶದ ಸಮಾಜವಾದಿ ತತ್ವಗಳ ಪಿತಾಮಹ ಸಂಪುಟದಲ್ಲಿಯೇ ಇದ್ದರು. ಸ್ವತಃ ಗಾಂಧೀಜಿ ತಮ್ಮನ್ನು ಸನಾತನಿ ಹಿಂದು ಎಂದು ಕರೆದುಕೊಂಡರೂ ಅವರ ವ್ಯಕ್ತಿತ್ವ‌ ಪ್ರಗತಿಪರ ಧೋರಣೆಗಳಿಂದ, ತತ್ವಗಳಿಂದ ಪ್ರಭಾವಿತಗೊಂಡಿತ್ತು ಎನ್ನುವುದರಲ್ಲಿ ಅನುಮಾನವೇ ಇಲ್ಲ. ಗಾಂಧೀಜಿ ಭಾರತೀಯ ಸಮಾಜಕ್ಕೆ ಮತ್ತು ರಾಜಕೀಯಕ್ಕೆ ಸಂಸ್ಕೃತಿ ಸಾಂಪ್ರದಾಯಿಕತೆಯನ್ನು ಇಟ್ಟುಕೊಂಡೇ ಪ್ರಗತಿಪರವೂ ಆಗಬಲ್ಲ ಒಂದು ಕೇಂದ್ರವನ್ನು ಒದಗಿಸಿದ್ದರು. ಹೀಗಾಗಿ, ಕಾಂಗ್ರೆಸ್‌ ಎಡ ಬಲ ಅಥವಾ ಸಮಾಜವಾದಿ ಮತ್ತು ಸಂಪ್ರದಾಯವಾದಿ ಹೀಗೆ ಎರಡೂ ವರ್ಗಗಳ, ಎರಡೂ ಧೋರಣೆಗಳ ಪ್ರತಿನಿಧಿಯಾಗಿ ಹೋಗಿತ್ತು. ಪರಸ್ಪರ ವಿರುದ್ಧ ಧೋರಣೆಗಳ ವ್ಯಕ್ತಿತ್ವಗಳು ಮತ್ತು ತತ್ವಗಳು ಕಾಂಗ್ರೆಸ್‌ ಪಕ್ಷದ ವ್ಯಕ್ತಿತ್ವದೊಳಗೆ ಲೀನವಾಗಿ ಹೋಗುತ್ತಿದ್ದವು. 

ಪಕ್ಷದೊಳಗೆ ವೈಮನಸ್ಸುಗಳು ಭಿನ್ನಾಭಿಪ್ರಾಯಗಳು ಇರಲಿಲ್ಲ ಎಂದೇನಲ್ಲ. ಆದರೆ ಈ ಭಿನ್ನಮತಗಳನ್ನು ಗೌರವಿಸುವ ಮತ್ತು ಅರಗಿಸಿಕೊಳ್ಳುವ ನಾಯಕತ್ವ ಕಾಂಗ್ರೆಸ್‌ಗೆ ಇತ್ತು. ಇಂತಹ ಆಲದ ಮರದಂತಹ ಕಾಂಗ್ರೆಸ್‌ ಪಕ್ಷ ಇರುವಾಗ ಸಹಜವಾಗಿಯೇ ದೇಶದಲ್ಲಿ ಬಲಪಂಥೀಯ ಮತ್ತು ಎಡಪಂಥೀಯ ವಿಚಾರಗಳಿಗೆ ಮತ್ತು ಶಕ್ತಿಗಳಿಗೆ ತಮ್ಮದೇ ಆದ ಸ್ವತಂತ್ರ ರಾಜಕೀಯ ಅಸ್ತಿತ್ವ ಪಡೆದುಕೊಂಡು ದೊಡ್ಡ ಉಸಿರೆತ್ತಲು ಸಾಧ್ಯವಾಗಲೇ ಇಲ್ಲ. ಈ ರೀತಿ ದೇಶ ಕೇವಲ ಏಕ ಪಕ್ಷದ ಚಕ್ರಾಧಿಪತ್ಯ ಹೊಂದಲು ಕಾರಣವೆಂದರೆ, ಆ ಪಕ್ಷ ಇಡೀ ದೇಶವನ್ನೇ ಅಂದು ಮಾನಸಿಕವಾಗಿ, ಸಾಮಾಜಿಕವಾಗಿ ಒಂದುಗೂಡಿಸಿದ್ದು. ಮುಖ್ಯವಾಗಿ ದೇಶದೊಳಗಿನ ಹಿಂದುಳಿದ ಹಾಗೂ ಮುಂದುವರಿದ ವರ್ಗಗಳ ಹಾಗೂ ತತ್ವಗಳ ವಿಭಿನ್ನತೆಯೊಳಗಿನ ಏಕತೆಯನ್ನು ತನ್ನೊಳಗೆಯೇ ಸಾಧಿಸಿಕೊಂಡಿದ್ದು. ಜತೆಗೇ ಕಾಂಗ್ರೆಸ್‌ ಪಕ್ಷ ಅಲ್ಪಸಂಖ್ಯಾತ ವರ್ಗಗಳ ಧ್ವನಿ ಕೂಡ ಆಗಿ ಹೋಗಿತ್ತು. ಹೀಗಾಗಿ ಕಾಂಗ್ರೆಸ್‌ ಪಕ್ಷ ನಿರಂತರವಾಗಿ ಚುನಾವಣೆಗಳಲ್ಲಿ ಗೆಲ್ಲುತ್ತಲೇ ಹೋಯಿತು.

ಇದು ಬದಲಾದದ್ದು ಎಂಬತ್ತರ ದಶಕದ‌ ಎರಡನೆಯ ಭಾಗದಲ್ಲಿ, 77ರ ಚುನಾವಣೆಗಳಲ್ಲಿ ಕಾಂಗ್ರೆಸ್‌ ಪಕ್ಷ ಸೋತರೂ ಅದು ಕೇವಲ ತುರ್ತು ಸ್ಥಿತಿಗೆ ದೇಶದ ತಕ್ಷಣದ ಪ್ರತಿಕ್ರಿಯೆಯೇ ಆಗಿತ್ತು. ಅದಕ್ಕಿಂತ ಹೆಚ್ಚಿನ ಪಾಠಗಳು ಆ ಚುನಾವಣೆಯಲ್ಲಿ ಇರಲಿಲ್ಲ. ಆದರೆ ನಿಜವಾಗಿಯೂ ದೇಶದ ಚುನಾವಣೆಗಳ ಇತಿಹಾಸ ಬದಲಾದದ್ದು ಎಂಬತ್ತರ ದಶಕದ ಕೊನೆಯ ಭಾಗದಲ್ಲಿ. ಈ ಸಂದರ್ಭದಲ್ಲಿ ದೇಶದಲ್ಲಿ ಕಾಂಗ್ರೆಸ್‌ ಮತ್ತು ಸಂಯುಕ್ತ ವಿರೋಧ ಪಕ್ಷಗಳ ನಡುವೆ ತೀವ್ರ ಚಕಮಕಿ ಇತ್ತು. ಕಾಂಗ್ರೆಸ್‌ ಅನ್ನು ಸೋಲಿಸುವುದು ಸುಲಭವೇನೂ ಆಗಿರಲಿಲ್ಲ. ಆ ಪಕ್ಷವನ್ನು ಒಡೆಯಬೇಕಾದರೆ ದೇಶದ ಸಮಾಜವನ್ನು ಒಡೆಯಬೇಕು ಮತ್ತು ಭಿನ್ನಾಭಿಪ್ರಾಯ ಹೊಂದಿರುವ ದೇಶದ ಪ್ರಮುಖ ಮೂರು ಸಾಮಾಜಿಕ ವರ್ಗಗಳಾದ ಹಿಂದೂ ಮೇಲ್ವರ್ಗ ಮತ್ತು ಮಧ್ಯಮ ವರ್ಗ, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರು ಇವರ ನಡುವೆ ದೊಡ್ಡ ಕಂದಕವನ್ನು ಸೃಷ್ಟಿಸಬೇಕು ಎಂಬ ಚಾಣಕ್ಯತೆ ಹೊಳೆದಿದ್ದು ಮಾಜಿ ಪ್ರಧಾನಿ ವಿ.ಪಿ.ಸಿಂಗ್‌ಗೆ. ಅವರು ಮಂಡಲ ಅಸ್ತ್ರವನ್ನು ದೇಶದ ಮೇಲೆ ಪ್ರಯೋಗಿಸಿದ್ದು ಕಾಂಗ್ರೆಸ್‌ ಪಕ್ಷವನ್ನು ಒಡೆಯಲು ಮತ್ತು ಹಿಂದೂ ಐಕ್ಯತೆಯ ಮಂತ್ರದ ಮೇಲೆ ಪಕ್ಷಕಟ್ಟಲು ನಿಂತಿದ್ದ ಬಿಜೆಪಿಗೆ ಬ್ರೇಕ್‌ ಹಾಕಲು ಎಂದೇ ಭಾವನೆ. ವಿ.ಪಿ.ಸಿಂಗ್‌ ಹಿಂದೂ ಸಮಾಜದಲ್ಲಿ ಬಿರುಕು ಸೃಷಿಸಿ, ಒಂದು ಭಾಗವನ್ನು ಮಂಡಲ ಅಸ್ತ್ರದ ಮೂಲಕ ಒಡೆದು ಹಾಕಿ, ಹಿಂದುಳಿದ ವರ್ಗಗಳನ್ನು ಮೈನಾರಿಟಿಗಳೊಂದಿಗೆ ರಾಜಕೀಯವಾಗಿ ಜೋಡಿಸಿದರು. ಇದರ ಪರಿಣಾಮವೇ ಉತ್ತರ ಭಾರತದಲ್ಲಿ ಮಾಯ್‌ ಅಂದರೆ ಮುಸ್ಲಿಂ, ಯಾದವ್‌ ಕಾಂಬಿನೇಶನ್‌ನ ರಾಜಕೀಯ ಹುಟ್ಟಿಕೊಂಡಿದ್ದು ಮತ್ತು ಮುಲಾಯಂ, ಲಾಲು ಮತ್ತಿತರರು ಅಧಿಕಾರಕ್ಕೆ ಬಂದಿದ್ದು. ವಿ.ಪಿ.ಸಿಂಗ್‌ರ ಈ ಪ್ರಯೋಗದಿಂದಾಗಿ ಕಾಂಗ್ರೆಸ್‌ ತನ್ನ ಜತೆಗಿದ್ದ ಹಿಂದುಳಿದ ವರ್ಗಗಳನ್ನು ಕಳೆದುಕೊಂಡಿತು. ಇನ್ನೊಂದೆಡೆ ವಿ.ಪಿ.ಸಿಂಗ್‌ರ ಮಂಡಲ ಅಸ್ತ್ರಕ್ಕೆ ವಿರುದ್ಧವಾಗಿ ಸೃಷ್ಟಿಯಾದ ರಾಜಕೀಯ ಶಕ್ತಿಗಳನ್ನು ಆಡ್ವಾನಿ, ವಾಜಪೇಯಿ ಕಮಂಡಲವನ್ನು ಬಳಸಿ ಭಾರತೀಯ ಜನತಾ ಪಕ್ಷವನ್ನು ಸಂಘಟಿಸಿಬಿಟ್ಟರು. ಅಂದರೆ ಅವರು ವಿ.ಪಿ.ಸಿಂಗ್‌ ರಾಜಕೀಯಕ್ಕೆ ವಿರುದ್ಧವಾಗಿದ್ದ ಹಿಂದೂ ಮೇಲ್ವರ್ಗವನ್ನು ಮತ್ತು ಶಹರಿಗರನ್ನು ಒಂದು ರಾಜಕೀಯ ಶಕ್ತಿಯನ್ನಾಗಿ ನಿರೂಪಿಸಿಬಿಟ್ಟರು.

 ಹೀಗಾಗಿದ್ದರಿಂದ ವಿಶೇಷವಾಗಿ ದೇಶದ ಉತ್ತರ ಭಾಗವಾದ ಗೋ ಪ್ರದೇಶ (ಕೌಬೆಲ್ಟ್) ಎರಡು ಮಾನಸಿಕ, ರಾಜಕೀಯ ಬಣಗಳ‌ಲ್ಲಿ ಸ್ಥೂಲವಾಗಿ ಎಡ ಬಲಗಳಲ್ಲಿ ಒಡೆದು ಹೋಯಿತು. ಕಾಂಗ್ರೆಸ್‌ನ ದುರದೃಷ್ಟವೆಂದರೆ ಎರಡೂ ಭಾಗಗಳೂ ಅದರಿಂದ ಮೈಲುಗಟ್ಟಲೆ ದೂರ ನಡೆದುಬಿಟ್ಟವು. ಹೀಗಾಗಿ ಪಕ್ಷ ಉತ್ತರ ಭಾರತದಲ್ಲಿ ತನ್ನ ನೆಲೆ ಕಳೆದುಕೊಂಡಿತು.

 ಈ ಬಿರುಗಾಳಿ ಮತ್ತು ಸಮಾಜದ ಸೀಳಿನ ಪರಿಣಾಮ ಪ್ರಾದೇಶಿಕವಾಗಿ ಬೇರೆಯೇ ಅಜೆಂಡಾಗಳನ್ನು ಹೊಂದಿದ್ದ ತಮಿಳುನಾಡು, ಕೇರಳ, ಓರಿಸ್ಸಾ , ಕರ್ನಾಟಕ, ಪಶ್ಚಿಮ ಬಂಗಾಳಗಳ ಮೇಲೆ ಅಷ್ಟೇನೂ ಬೀಳಲಿಲ್ಲ. ಹೀಗಾಗಿ ಅಲ್ಲಿ ಪ್ರಾದೇಶಿಕ ಪಕ್ಷಗಳು ಹುಟ್ಟಿಕೊಂಡವು. ಅವು ತಮ್ಮ ರಾಜ್ಯಗಳಲ್ಲಿ ರಾಜಕೀಯ ವಿರೋಧಿಯ ಜತೆ ಸಹಜವಾಗಿ ಗೆಳೆತನ ಮಾಡಿಕೊಂಡವು. ಪರಿಣಾಮ ಕೇಂದ್ರದಲ್ಲಿ ಸಮ್ಮಿಶ್ರ ಸರ್ಕಾರಗಳು ರಚನೆಯಾದವು. ಕ್ರಮೇಣ ರಾಜಕೀಯ ಅನಿವಾರ್ಯತೆಗಳಿಂದಾಗಿ ಎರಡು ಕೋಯಲಿಶನ್‌ಗಳು, ಬಲ ಮತ್ತು ಎಡ ಎಂಬ ದೊಡ್ಡ ಕೊಡೆಗಳು ಮಾತ್ರ ಉಳಿದುಕೊಂಡವು. ಎನ್‌ಡಿಎ ಅಂದರೆ ಬಲ. ಯುಪಿಎ ಅಂದರೆ ಹೆಚ್ಚು ಕಡಿಮೆ ಎಡ. ಈ ರೀತಿಯ ಹೊಂದಾಣಿಕೆಯ ರಾಜಕೀಯದಲ್ಲಿ ಕಾಂಗ್ರೆಸ್‌ ಪಕ್ಷ ನಂತರ ಅಧಿಕಾರದ ಗದ್ದುಗೆ ಹಿಡಿದರೂ ಕೂಡ ಅದು ಎಂಬತ್ತರ ಮೊದಲಿನ ಸ್ವರೂಪವನ್ನು ಕಳೆದುಕೊಂಡೇ ಬಿಟ್ಟಿತು. 

ಬಿಜೆಪಿ ಬೆಳವಣೆಗೆಯಿಂದಾಗಿ ಮಧ್ಯಮ ವರ್ಗದ ಹಾಗೂ ಸಂಪ್ರದಾಯವಾದಿ ವರ್ಗದ ಬೆಂಬಲ ಅದು ಕಳೆದುಕೊಂಡರೆ ಎಡ ಪಂಥದ ವಿಚಾರವಾದದ ಸ್ಪರ್ಧೆಯಲ್ಲಿ ಪ್ರಾದೇಶಿಕ ಪಕ್ಷಗಳಿಗಿಂತ ಹಿಂದೆ ಬಿದ್ದ ಕಾಂಗ್ರೆಸ್‌ ತನ್ನ ಆ ಬೆಂಬಲಿಗ ವರ್ಗವನ್ನು ಕಳೆದುಕೊಂಡಿತು. ಎಡದವರಿಗೆ ಕಾಂಗ್ರೆಸ್‌ ಬಲದಂತೆ ಕಂಡರೆ, ಬಲದವರಿಗೆ ಕಾಂಗ್ರೆಸ್‌ ಎಡದಂತೆ ಕಂಡಿತು. ಪರಿಣಾಮವೇ ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಕೇವಲ 44 ಸೀಟುಗಳನ್ನು ಪಡೆದದ್ದು.

ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಇಂತಹ ಸೋಲು ಹಾಗೂ ಭಾರತೀಯ ಜನತಾ ಪಕ್ಷದ ಪ್ರಚಂಡ ಗೆಲುವು ದೇಶದಲ್ಲಿ ಬೇರೊಂದು ರೀತಿಯ ರಾಜಕೀಯ ಮರುಧ್ರುವೀಕರಣದ ಕಥೆ ಹೇಳಿದೆ. ಅದೇನೆಂದರೆ ಬಹುಶಃ ಬಿಜೆಪಿ ನಿಧಾನವಾಗಿ ಈಗ ಹಳೆಯ ಕಾಂಗ್ರೆಸ್‌ನ ಸ್ಥಾನ ತುಂಬುತ್ತಿದೆ. ಈ ರೀತಿಯ ತೀರ್ಮಾನಕ್ಕೆ ಬರಲು ಕಾರಣವೆಂದರೆ ಇಲ್ಲವಾದಲ್ಲಿ ಹಿಂದುಳಿದ ವರ್ಗಗಳನ್ನು ಮತ್ತು ಮೈನಾರಿಟಿಗಳನ್ನು ಹೆಚ್ಚು ಸಂಖ್ಯೆಯಲ್ಲಿ ಹೊಂದಿದ್ದ ಸ್ಥಾನಗಳೂ ಬಿಜೆಪಿಗೆ ಸಿಗಲು ಸಾಧ್ಯವಿರಲಿಲ್ಲ. ಆದರೆ ಒಮ್ಮೆಲೇ ಒಂದು ಅಂತಿಮ ನಿರ್ಣಯಕ್ಕೆ ಬರಲು ಸಾಧ್ಯವಾಗುವುದಿಲ್ಲ. ಭಾರತೀಯ ಜನತಾ ಪಕ್ಷಕ್ಕೆ ಇರುವ ನಿಜವಾದ ಪರೀಕ್ಷೆ ಈ ಸಲದ ಲೋಕಸಭಾ ಚುನಾವಣೆ. ಏಕೆಂದರೆ ದೇಶದ ಜನತೆಯ ಜತೆ ಬಿಜೆಪಿಯ ಹನಿಮೂನ್‌ ಪೀರಿಯಡ್‌ ಮುಗಿಯುತ್ತಾ ಬಂದಂತೆ ಅನಿಸುತ್ತಿದೆ. ಮೋದಿಯವರ ವೈಯಕ್ತಿಕ ವರ್ಚಸ್ಸು ತುಸು ಮೊಂಡಾಗಿದ್ದಿರಲೂ ಸಾಕು. ಎಡ ರಾಜಕೀಯ ಶಕ್ತಿಗಳು ನಿರಂತರವಾಗಿ, ಕರ್ಕಶವಾಗಿ ಮೋದಿ ವಿರುದ್ಧ ತೀವ್ರ ವಾಗ್ಧಾಳಿ ನಡೆಸುತ್ತಲೇ ಇವೆ. ಹೀಗಾಗಿ ಎಡಪಂಥೀಯ ಕ್ಷೇತ್ರಗಳಲ್ಲಿ ಕೆಲವೊಂದನ್ನು ಬಿಜೆಪಿ ಕಳೆದುಕೊಳ್ಳಲೂಬಹುದು. ಆಡಳಿತ ವಿರೋಧಿ ಅಲೆ ಬಿಜೆಪಿಯ ವಿರುದ್ಧ ಬೀಸಿದರೂ ಬೀಸೀತು.

ಆದರೆ ಇವೆಲ್ಲವನ್ನೂ ಎದುರಿಸಿ ಬಿಜೆಪಿ ಈ ಸಲ ಸಂಯುಕ್ತವಾಗಿ ಯಾದರೂ ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ ಎನ್ನುವುದನ್ನು ಕೆಲ ಸಮೀಕ್ಷೆಗಳು ಹೇಳಿವೆ. ಹಾಗಾದಲ್ಲಿ ಕಾಂಗ್ರೆಸ್‌ಗೆ ಗಂಡಾಂತರ. ಆಗ ಬಿಜೆಪಿಯು ಕಾಂಗ್ರೆಸ್‌ ಪಕ್ಷಕ್ಕೆ ಮೊದಲು ಇದ್ದ ಸ್ವರೂಪವನ್ನು ತಾಳಿ ದೇಶವನ್ನು ಕಾಂಗ್ರೆಸ್‌ ಮೊದಲು ಆಳಿದ ಹಾಗೆಯೇ ದೀರ್ಘ‌ಕಾಲ ಆಳಿಬಿಡಬಹುದು. ಅಮಿತ್‌ ಶಾ “ನಮ್ಮ ಪಕ್ಷ ಮುಂದಿನ ಐವತ್ತು ವರ್ಷ ದೇಶವನ್ನು ಆಳಲಿದೆ’ ಎಂದು ಇತ್ತೀಚೆಗೆ  ಹೇಳಿದ್ದು ಈ ಹಿನ್ನೆಲೆಯಲ್ಲಿಯೇ ಇರಬಹುದು. ವಿಷಯ ಅರಿತಿರುವ ಬಿಜೆಪಿ ತನ್ನ ತಂತ್ರಗಾರಿಕೆಯಲ್ಲಿ ಸಮಾಜವನ್ನು ಒಂದುಗೂಡಿಸುವುದನ್ನೇ ಪ್ರಮುಖ ರಾಜಕೀಯ ಗುರಿಯನ್ನಾಗಿ ಇಟ್ಟುಕೊಂಡಂತೆಯೂ ತೋರಿ ಬರುತ್ತಿದೆ. 

ಆರ್‌ಎಸ್‌ಎಸ್‌ನ ಪ್ರಮುಖ ನಾಯಕ ಮೋಹನ್‌ ಭಾಗವತ್‌ ಇತ್ತೀಚೆಗೆ “”ದೇಶದಲ್ಲಿರುವವರೆಲ್ಲರೂ ಹಿಂದೂಗಳೇ” ಮತ್ತು “”ಆರ್‌ಎಸ್‌ಎಸ್‌ ಮುಸ್ಲಿಂ ವಿರೋಧಿ ಅಲ್ಲ” ಎಂದು ನೀಡಿರುವ ಹೇಳಿಕೆಗಳು ಈ ರೀತಿಯ ಸಮಾಜವನ್ನು ಕೂಡಿಸುವ ದಿಶೆಯಲ್ಲಿನ ಪ್ರಯತ್ನಗಳೇ ಎಂದು ಅನಿಸುತ್ತದೆ. 
ಒಟ್ಟಾರೆಯಾಗಿ ಬಿಜೆಪಿ ಹಳೆಯ ಕಾಂಗ್ರೆಸ್‌ ಸ್ಥಾನವನ್ನು ಗ್ರಹಿಸಲು ಪ್ರಯತ್ನಿಸುತ್ತಿದೆ. ಇಂತಹ ಪ್ರಯತ್ನ ಸುಲಭದಲ್ಲಿ ಅಂತಹ ದೊಡ್ಡ ಯಶಸ್ಸನ್ನು ತಂದಿಡುತ್ತದೆಯೇ ಎನ್ನುವುದು ಕಾದು ನೋಡಬೇಕಾದ ವಿಷಯ. ಒಮ್ಮೆ ಯಶಸ್ವಿಯಾದರೆ ಭಾರತೀಯ ಜನತಾ ಪಕ್ಷ ಸುದೀರ್ಘ‌ಕಾಲ ದೇಶವನ್ನು ಆಳಿಬಿಡಬಹುದಾಗಿದೆ. ಪ್ರಶ್ನೆಯೆಂದರೆ ವಿ.ಪಿ.ಸಿಂಗ್‌ ಎಬ್ಬಿಸಿದ ಉಳಿದೆರಡು ರಾಜಕೀಯ ಶಕ್ತಿಗಳನ್ನು ಬಿಜೆಪಿ ತನ್ನೊಳಗೆ ಹೇಗೆ ಸ್ವೀಕರಿಸುತ್ತದೆ ಮತ್ತು ಹೇಗೆ ವಿಲೀನಗೊಳಿಸಿಕೊಳ್ಳುತ್ತದೆ ಎನ್ನುವುದು. ಹಳೆಯ ಕಾಂಗ್ರೆಸ್‌ನ ಸ್ವರೂಪ ಪಡೆದುಕೊಳ್ಳಬೇಕಾಗಿರುವುದು ಈಗ ಬಿಜೆಪಿಯ ಮುಂದಿರುವ ದೊಡ್ಡ ಸವಾಲು. ಒಮ್ಮೆ ಬಿಜೆಪಿ ಅಥವಾ ಅದರ ನೇತೃತ್ವದ ಬಣಕ್ಕೆ ಬಹುಮತ ಬರದೇ ಹೋದರೆ ರಾಜಕೀಯ ಅಸ್ಥಿರತೆ ದೀರ್ಘ‌ಕಾಲ ಮುಂದುವರಿಯಲಿದೆ.

ಡಾ. ಆರ್‌.ಜಿ. ಹೆಗಡೆ

ಟಾಪ್ ನ್ಯೂಸ್

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

Bus Falls From Bridge In Odisha’s Jajpur

Jajpur; ಸೇತುವೆಯಿಂದ ಬಿದ್ದ ಬಸ್; ಐವರು ಸಾವು, ಹಲವರಿಗೆ ಗಾಯ

‘Please sell the RCB team to someone else’; Tennis star appeal

IPL 2024; ‘ದಯವಿಟ್ಟು ಆರ್ ಸಿಬಿ ತಂಡವನ್ನು ಬೇರೆಯವರಿಗೆ ಮಾರಿ ಬಿಡಿ’; ಟೆನ್ನಿಸ್ ತಾರೆ ಮನವಿ

Lok Sabha Elections ಈಶ್ವರಪ್ಪ ಸ್ಪರ್ಧೆಯಿಂದ ಬಿಜೆಪಿಗೆ ಲಾಭ: ಆರ್‌. ಅಶೋಕ್‌

Lok Sabha Elections ಈಶ್ವರಪ್ಪ ಸ್ಪರ್ಧೆಯಿಂದ ಬಿಜೆಪಿಗೆ ಲಾಭ: ಆರ್‌. ಅಶೋಕ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aasasas

ಸೌರ ಯುಗಾದಿ; ಜೀವನೋತ್ಸಾಹ, ನವಚೈತನ್ಯ ತುಂಬುವ ಹಬ್ಬ ವಿಷು

PAK: ವಾಣಿಜ್ಯ ಕಟ್ಟಡ ನಿರ್ಮಾಣಕ್ಕಾಗಿ ಐತಿಹಾಸಿಕ ಹಿಂದೂ ದೇವಸ್ಥಾನ ಧ್ವಂಸಗೊಳಿಸಿದ ಪಾಕ್!

PAK: ವಾಣಿಜ್ಯ ಕಟ್ಟಡ ನಿರ್ಮಾಣಕ್ಕಾಗಿ ಐತಿಹಾಸಿಕ ಹಿಂದೂ ದೇವಸ್ಥಾನ ಧ್ವಂಸಗೊಳಿಸಿದ ಪಾಕ್!

Union Territory: 6 ಕೇಂದ್ರಾಡಳಿತ ಪ್ರದೇಶದಲ್ಲಿ 6 ಸೀಟು ಯಾರಿಗೆ?

Union Territory: 6 ಕೇಂದ್ರಾಡಳಿತ ಪ್ರದೇಶದಲ್ಲಿ 6 ಸೀಟು ಯಾರಿಗೆ?

Lok Sabha Election: ಜೆಡಿಎಸ್‌ ಭದ್ರಕೋಟೆ ಹಾಸನದಲ್ಲಿ ಜಿದ್ದಾಜಿದ್ದಿನ ಸ್ಪರ್ಧೆ

Lok Sabha Election: ಜೆಡಿಎಸ್‌ ಭದ್ರಕೋಟೆ ಹಾಸನದಲ್ಲಿ ಜಿದ್ದಾಜಿದ್ದಿನ ಸ್ಪರ್ಧೆ

1-qwewqew

ಮರಳಿ ಬಂದಿದೆ ಯುಗಾದಿ: ಹೊಸ ಸಂವತ್ಸರದ ಹುರುಪು, ನವ ಬೆಳಕಿನ ಆಶಯ

MUST WATCH

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

udayavani youtube

ಶ್ರೀ ವೈಷ್ಣವಿ ದುರ್ಗಾ ದೇವಾಲಯ

udayavani youtube

ಟೈಟನ್ ಕಂಪೆನಿಯ Xylys ವಾಚ್ ವಿಶೇಷತೆಗಳೇನು ?

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

ಹೊಸ ಸೇರ್ಪಡೆ

ನಾಮಪತ್ರ ಸಲ್ಲಿಸಿದ ದಾವಣಗೆರೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ

ನಾಮಪತ್ರ ಸಲ್ಲಿಸಿದ ದಾವಣಗೆರೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.